Showing posts with label ಲೇಖನಗಳು. Show all posts
Showing posts with label ಲೇಖನಗಳು. Show all posts

Tuesday, October 18, 2011

ಸನ್ಯಾಸಿ ಮತ್ತು ನಾಗರಹಾವಿನ ಕಥೆ

(ಚಿತ್ರ ಕೃಪೆ : ಅಂತರಜಾಲ ಸರಕು ಮಿಶ್ರಣ )

ಜನಪದ
ಮೂಲದ ನಿರ್ವಹಣೆ ಪಾಠದ ಕಥೆ

(FOLK STORY OF MANAGEMENT LESSONS)


ಒಂದಾನೊಂದು ಊರು...
ಊರಬದಿಯಲ್ಲೊಂದು ಕೆರೆ....
ಕೆರೆಬದಿಗೊಂದು ಪೊದೆ......
ಪೊದೆಯಲ್ಲೊಂದು ಕಾರ್ಕೋಟಕ ನಾಗರನ ವಾಸ....
ಹತ್ತು ಹಲವರನ್ನು ಕಚ್ಚಿ...ಕೊಂದಿತ್ತು....
ಅಲ್ಲಿ ಜನರು ತಿರುಗಲು ಹೆದರುತ್ತಿದ್ದರು.....ಆ ಪೊದೆಯ ಬದಿಯ ರಸ್ತೆ ನಿರ್ಜನವಾಗಿತ್ತು....
ಕೊಳಕ್ಕೆ ಸುತ್ತು ಬಳಸಿನ ರಸ್ತೆಯ ಕಂಡುಕೊಂಡಿದ್ದರು ಊರಜನ.
ಆದರೂ ಕೆರೆಬದಿಯಲ್ಲೂ ಕಾಣಿಸಿಕೊಂಡು ಅಪಾಯ ಒಡ್ಡುತ್ತಿದ್ದ ನಾಗರಾಜ.
ಜನ ನಾಗಣ್ಣನ ಉಪಟಳದಿಂದ ಬೇಸತ್ತಿದ್ದರು.....

ಊರಿಗೊಮ್ಮೆ ಸನ್ಯಾಸಿಯೊಬ್ಬರ ಆಗಮನವಾಯಿತು....
ಕೆರೆಬದಿಗೆ ದೈನಂದಿನ ಕಾರ್ಯಕ್ಕೆ ಹೊರಟ ಅವರಿಗೆ ಊರಜನ ನಾಗಣ್ಣನ ಉಪಟಳದ ಬಗ್ಗೆ ಹೇಳಿ ಎಚ್ಚರಿಸಿದರು....
ಆದರೂ ಸನ್ಯಾಸಿಗಳು ಅದೇ ದಾರಿಯಲ್ಲಿ ಹೊರಟರು...
ನಾಗಣ್ಣನಿಗೆ...ತನ್ನ ವಾಸಸ್ಥಳದ ಹತ್ತಿರ ಧೈರ್ಯದಲ್ಲಿ ಬರುತ್ತಿದ್ದ ಸನ್ಯಾಸಿಯ ಕಂಡು ಕೋಪ ಬಂದು... ಭುಸುಗುಡುತ್ತಾ ಕಚ್ಚಲು ಬಂದ .....
ತಪಶಕ್ತಿಯ ಸನ್ಯಾಸಿಗಳು, ಕಚ್ಚಲು ಬಂದ ಹಾವನ್ನು ಕ್ಷಣ ಮಂತ್ರದಿ ದಿಗ್ಬ್ರಮೆ ಗೊಳಿಸಿ, ನಿಲ್ಲಿಸಿ.. ಅದನ್ನು ಕೇಳಿದರು...
"ಅಯ್ಯಾ ನಾಗರಾಜ ನಿನಗೆ ಜನರನ್ನು ಕಚ್ಚಿ ಸಾಯಿಸುವದರಿಂದ ಸಿಗುವುದೇನು? -ಕಾಡು ಮೃಗಗಳು ಹಸಿವೆಯಾಗದ ಹೊರತು ಬೇಟೆಯಾಡಿ ಕೊಂದು ತಿನ್ನುವದಿಲ್ಲ...ಜನರನ್ನು ಕೊಂದು ನೀನೇನು ಅವರನ್ನು ತಿನ್ನುವೆಯಾ...ಇದರಿಂದ ನಿನಗೇನೂ ಸಿಗುತ್ತೆ? " ಎಂದು ಪ್ರಶ್ನಿಸಲಾಗಿ....ನಾಗಣ್ಣನಿಗೆ ಜ್ಞಾನೋದಯವಾಯಿತು... ಅನ್ಯಾಯವಾಗಿ ತಾನು ಜನರನ್ನು ಸುಮ್ಮನೆ ಕೊಲ್ಲುತ್ತಿದ್ದೆನಲ್ಲಾ ... ಹಸಿವೆಗಲ್ಲ... ಮತ್ತಾವ ಸುಖಕ್ಕೂ ಅಲ್ಲ.... ತಾನು ಅಮಾಯಕರನ್ನು ಕೊಂದೆನಲ್ಲಾ.. ಎಂದು ಪಶ್ಚಾತಾಪಗೊಂಡಿತು....

ಸನ್ಯಾಸಿ ಸತ್ಯದ ಅರಿವು ಮಾಡಿಸಿದ್ದಕ್ಕೆ ವಂದಿಸಿ... "ಅಯ್ಯಾ ಸ್ವಾಮಿಗಳೇ ಇನ್ನು ನಾನು ಯಾರನ್ನು ಕಚ್ಚಿಕೊಲ್ಲುವದಿಲ್ಲ "ಎಂದು ಪ್ರಮಾಣಿಸಿತು...

ಮುಂದೆ ಆ ದಾರಿಯಲ್ಲಿ ತಿರುಗುವವರಿಗೆ ಅದು ಉಪಟಳ ಕೊಡುವದನ್ನು ನಿಲ್ಲಿಸಿತು....
ಸಂತರ ಜ್ಞಾನದ ಮಾತುಗಳಿಂದ ಪ್ರೇರಿತವಾದ ಅದು ತೀವ್ರ ಸಾತ್ವಿಕ ಜೀವನ ನಡೆಸಲು ಪ್ರಾರಂಭಿಸಿತು...
ಜನಕ್ಕೆ ಹಾವು ಕಚ್ಚುವದಿಲ್ಲವೆಂದು ತಿಳಿದ ಬಳಿಕ, ಆ ರಸ್ತೆಯಲ್ಲಿ ಸರಾಗವಾಗಿ ತಿರುಗಾಡ ತೊಡಗಿದರು....
ಕೆಲವು ಕಿಡಿಗೇಡಿಗಳು ಹಾವು ಏನು ಮಾಡುವದಿಲ್ಲವೆಂದು ತಿಳಿದ ಬಳಿಕ ಅದನ್ನು ಕಲ್ಲಿನಿಂದ... ಕೋಲಿನಿಂದ ಹೊಡೆದು ತಮ್ಮ ವಿಕೃತಿ ತೀರಿಸಿಕೊಳ್ಳ ಹತ್ತಿದ್ದರು.. ಮಕ್ಕಳು ಹಾವನ್ನು ಹಿಡಿದು ತಿರುಗಿಸುತ್ತಾ..ಆಟ ಆಡಲು ಪ್ರಾರಂಬಿಸಿದರು.... ಹಾವಿನ ಮೈಯೆಲ್ಲಾ ಗಾಯ ..ವೃಣಗಳಾಗಿ ಅದರ ದೇಹ ಪರಿಸ್ಥಿತಿ ತೀವ್ರ ಹದೆಗೆಟ್ಟು.. ಸಾಯಲು ಇಗಲೋ.. ಆಗಲೋ... ಎನ್ನುವಂತಾಯಿತು....

ಸನ್ಯಾಸಿಗಳು ಮತ್ತೊಮ್ಮೆ ಆ ಹಾದಿಯಲ್ಲಿ ಬರುವಾಗ, ಹಾವನ್ನು ಕಂಡು, ಅದರ ಪರಿಸ್ಥಿತಿ ಕಂಡು, ಮರುಗಿ ಇದಕ್ಕೆ ಕಾರಣವೆಂದು ಕೇಳಿದರು ...
ಆಗ ನಾಗ ವಿನಮ್ರವಾಗಿ "ತಾವು ತಿಳಿ ಹೇಳಿದಂತೆ ಕಚ್ಚುವಾದ ಬಿಟ್ಟೆ... ಅದಕ್ಕೆ ಹೀಗಾದೆ...ಆದರೂ ಬೇಜಾರಿಲ್ಲ... ಇನ್ನೊಬ್ಬರ ಅಲಾಭ ಹತ್ಯೆಯ ದೋಷ ನನಗೆ ತಟ್ಟುವದಿಲ್ಲವಲ್ಲಾ .... ಅದೇ ಸಾಕು ನನಗೆ.." ಎಂದಿತು.

ಆಗ ಸನ್ಯಾಸಿ ಹೇಳಿದರು " ಅಯ್ಯಾ ನಾಗರಾಜ ನಾನು ನಿನಗೆ ಕಚ್ಚುವಾದ ಬಿಡು ಎಂದಿದ್ದೇನೆ ಹೊರತು... ಭುಸುಗುದುವದನ್ನು ಬಿಡು ಎಂದಿಲ್ಲಾ ... ಆತ್ಮರಕ್ಷಣೆಗೆ ಭುಸುಗುದಲೇ ಬೇಕು ಕಚ್ಚುವ... ಕಚ್ಚಿ ಸಾಯಿಸುವ... ಹೆದರಿಕೆ ಸದಾ ಉಪಟಲಿಸುವ ಜನರಿಗೆ ತೋರಿಸಲೇ ಬೇಕು ಇಲ್ಲಾ ಬದುಕುವದು ದುಸ್ತರ" ಎಂದರು...
ಈಗ ನಾಗಣ್ಣನಿಗೆ ತನ್ನ ತಪ್ಪು ಏನೆಂದು ಅರಿವಾಗಿ ಅವರ ಮಾರ್ಗದರ್ಶನದಂತೆ ಮುಂದಿನ ಜೀವನ ಕ್ರಮಿಸಿ ಯಾರಿಗೂ ತೊಂದರೆ ಕೊಡದೆ ತಾನು ತೊಂದರೆ ಪಡೆಯದೇ ಬದುಕಿದ...

ನೀತಿ : ಹೇಗೆ ಇತರರಿಗೆ ಅನಾವಶ್ಯಕ ತೊಂದರೆ ಕೊಡುವದು ತಪ್ಪೋ ಹಾಗೆ ಸ್ವತಹ ತೊಂದರೆಗೊಳಗಾಗುವದು ತಪ್ಪು... ತೊಂದರೆಗಳನ್ನೂ ಬರದಂತೆ ತಡೆಗಟ್ಟಲು ಇತರರಿಗೆ ಸ್ವಲ್ಪ ತೋರಿಕೆಯ ತೊಂದರೆಯನ್ನೂ ತೊಂದರೆಯಾಗದಂತೆ ಪ್ರಯೋಗಿಸಬೇಕು... ತನ್ನ ತೊಂದರೆ ತಡೆಯಲು ತೊಂದರೆ ಕೊಡುವವರಿಗೆ ಸ್ವಲ್ಪ ಬಿಸಿ ಮುಟ್ಟಿಸುವಷ್ಟು ತೊಂದರೆ ಕೊಡಬೇಕಾದುದು ಬದುಕ ಅನಿವಾರ್ಯತೆ..
DON'T BITE TO TROUBLE OTHERS UNNECESSARILY BUT KEEP HISSING FOR SELF DEFENSE

(ಬಹಳ ದಿನಗಳಿಂದಲೂ ಬರೆಯಲಾಗದೆ ಬ್ಲಾಗ್ ಖಾಲಿ ಇದ್ದುದ್ದಕ್ಕೆ ಕ್ಷಮೆ ಇರಲಿ )


Tuesday, October 11, 2011

ಶೂನ್ಯ ದಿಂದ........ ಪರಿಪೂರ್ಣದೆಡೆಗೆ...........

ಸಹ ಬ್ಲೋಗಿಗರಾದ -ಸುಗುಣಾರ " ಮೃದುಮನಸ್ಸು" ಬ್ಲಾಗ್' ನ "ಶೂನ್ಯ" ಕಥೆಯ ಮುಂದುವರೆದ ಭಾಗ..........
(ಮೊದಲ ಭಾಗದ ಕೊಂಡಿ : http://mrudhumanasu.blogspot.com/2011/10/blog-post_09.html)


ಉಸಿರು ಬಿಕ್ಕುತಿದೆ...

ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆ ಯ
ಶೂನ್ಯ ಸಿಂಹಾಸನದಡಿ
ನನ್ನ ಬದುಕು ಜೋತಾಡುತಿದೆ.....

ಇಪ್ಪತ್ತು ವರ್ಷಗಳ ಗಂಡನ ಅಪರಿಮಿತ ಪ್ರೀತಿಯಲ್ಲಿ ನಾನು, ನನ್ನೆಲ್ಲಾ.. ಕೊರತೆಯನ್ನು ಮರೆತು ಆನಂದದಿಂದ ಮರೆತಿದ್ದೆ ...
ತವರ ನೆನಪು ಮಾಸಿತ್ತು ....
ಮಕ್ಕಿಳಿಲ್ಲದ ಕೊರಗೂ ಕಾಡಲಿಲ್ಲ.....
ಬದುಕು.. ಸಾಗಿದ ಬಗೆಯೇ ಅರಿವಾಗಲಿಲ್ಲ....
ಇಂದು ಆ ಅಪರಿಮಿತ ಪ್ರೀತಿ ನೀಡಿದ, ಸಹೃದಯ ಜೀವ.... ನನ್ನಿನಿಯ.... ನನ್ನನ್ನು ..ಬಾಳದಾರಿಯಲ್ಲಿ.. ನಡುವೇ.. ಬಿಟ್ಟಗಲಿದಾಗ .... ಮೇಲಿನ ಗೀತೆ ಮನದಲ್ಲಿ ಗವ್ವೆನ್ನುವಂತೆ ಬಾರಿ ಬಾರಿ ಸುಳಿಯುತ್ತಿದೆ ...

ಮಕ್ಕಳಿಲ್ಲದ ಕೊರಗು ಕಾಡುತ್ತಿದೆ...

ದತ್ತು ಮಗುವನ್ನೂ... ತಂದು ಸಾಕಲಿಲ್ಲವಲ್ಲಾ... ಆಸರೆಗೆ... ಎಂಬ ಭಾವ.. ಅಪರಾಧೀ ಪ್ರಜ್ಞೆಯಾಗಿ ಕಾಡುತಿದೆ ಎನಿಸುತ್ತಿದೆ ....

ವೃದ್ಧ ಅತ್ತೆಮಾವರು ನನಗೆ ಆರ್ಥಿಕ ಭಾರವಾಗಬಾರದೆಂದು ಈಗ ಮೈದುನನ ಮನೆಗೆ ನಡೆದಿಹರು......

ಮೈದುನ -ತಂಗಿ, ತಮ್ಮಲ್ಲಿಗೆ ನನ್ನನ್ನು ಕರೆದರೂ.. ಇವರೊಡನೆ ಇಪ್ಪತ್ತುವರ್ಷ ಬಾಳಿದ ನೆನಪುಗಳ ಹೊತ್ತ ಈ ಸ್ವಂತ ಮನೆಯ ತ್ಯಜಿಸಲು ಯಾಕೋ ಮನಸ್ಸಿಲ್ಲ.....
ಅಪ್ಪ-ಅಮ್ಮರೇ ಅಣ್ಣ ಅತ್ತಿಗೆಯರ ಆಡಳಿತದ ನಡುವೆ, ತವರಲ್ಲಿ ನೇಪಥ್ಯವಾಗಿರುವಾಗ ಅಲ್ಲದೇ ಇಷ್ಟು ದಿನ ಅದನ್ನು ಬಯಸದೆ ಇದ್ದುದು... ಇಂದು ಅದನ್ನು ಆಸರೆ ಎ೦ದು ಕಲ್ಪಿಸಲಾಗದು.....

ದೀಪ ನೋಡುತ್ತಾ ಕುಳಿತಿದ್ದ ಅನ್ನಪೂರ್ಣಾ ಒಮ್ಮೆ ಕಣ್ಣು ತಿರುಗಿಸಿ.... ಸುತ್ತೆಲ್ಲಾ ನೋಡಿದಾಗ,
ಕತ್ತಲು ಅಡರಿದ೦ತೆಸಿತು...ಸೂರ್ಯ ಸಂಪೂರ್ಣ ಮರೆಯಾಗಿ ಸಂಜೆ ದಾಟಿ ಕತ್ತಲು ಎಲ್ಲೆಡೆ ಹಾಸಿತ್ತು ..
ಒಮ್ಮೆ ಭಯವು ಎನಿಸಹತ್ತಿತು....

.............ಹೀಗೆ ಅನ್ನಪೂರ್ಣಾಳ ಮನ, ಭೂತ-ವರ್ತಮಾನ-ಭವಿಷ್ಯತ್ತುಗಳ ಯೋಚನೆಯಲ್ಲಿ, ಗತಿಸಿದ ಗಂಡ ಅನುರಾಗನ ನೆನಪಲ್ಲಿ- ಅಂಗಳದಲ್ಲಿ ಹಚ್ಚಿಟ್ಟ ಹಣತೆಯ ಜ್ಯೋತಿಯಲ್ಲಿ , ಎವೆಯಿಕ್ಕದೆ ನೆಟ್ಟ ನೋಟದಲ್ಲಿ.... ಗರ ಗರ ತಿರುಗುತ್ತಿತ್ತು....



-೧-
ಕತ್ತಲಿನ ಭಯದಲ್ಲಿಯೇ ಅನ್ನಪೂರ್ಣ ಬೆಳುಕು ಚೆಲ್ಲುತ್ತಿದ್ದ ದೀಪವನ್ನು ಮತ್ತೆ ತದೇಕ ಚಿತ್ತವಾಗಿ ನೋಡಲಾರ೦ಭಿಸಿದಳು....ದೀಪದಲ್ಲಿನ ಬೆಳಕು ಈಗ ಮೆಲ್ಲ ಮೆಲ್ಲ ಸುತ್ತಾ ಹರಡುತ್ತಾ ಕತ್ತಲನ್ನು ನು೦ಗುತ್ತಿದ್ದ೦ತೆನಿಸಿತು...
ಆಶೆ ಬೆಳಕಾಗಿ ಚೆಲ್ಲುತ್ತಿದೆ ಎನಿಸುತ್ತಲೇ...
ಮನ ಮತ್ತೆ ವಿಚಾರಕ್ಕೆ ತಿರುಗಹತ್ತಿತು...


ನೆನಪಿನ ಸರಣಿ ಮತ್ತೆ ಮುಂದು ವರೆಯಿತು.....


"ಅನ್ನು ನೀನೇಕೆ ಕೆಲಸಕ್ಕೆ ಸೇರಬಾರದು "
"ಏಕೆ ಅನು ನೀನು ದುಡಿಯುತ್ತಿರುವದು ನಮ್ಮಿಬ್ಬರಿಗೆ ಸಾಲದೇ?"
"ಹಾಗಲ್ಲ ಅನ್ನು ನಿನಗೂ ಹೊರ ಪ್ರಪಂಚದ ಸಂಪರ್ಕವಿರಬೇಕು ... ಸಾಮಾಜಿಕ ಸಂಪರ್ಕ ಒಳ್ಳೆಯದು ... ಜೊತೆಗೆ ಆರ್ಥಿಕ ಸ್ವಾಯುತ್ತತೆ ಹೆಣ್ಣಿಗೆ ಅವಶ್ಯ ಸಹಾ.....ಗಂಡನಿಗೆ ಪೂರ್ತಿ ಅಲವತ್ತಿಕೊಂಡ ಜೀವನ... ಮುಂದೆ... ನಾನೇನಾದರೂ ನಿನ್ನ ಒಂಟಿ ಬಿಟ್ಟು ಹೋಗಬೇಕಾದ..."
"ಛೀ ಬಿಡ್ತು ಎನ್ನಿ... ನಿಮಗೂ ಏನಾಗೊಲ್ಲ..... ನನಗೂ ಏನಾಗೊಲ್ಲ.....ನನಗೆ ಯಾವ ಸಾಮಾಜಿಕ ಸಂಪರ್ಕವು ಬೇಡ.. ಆರ್ಥಿಕ ಸ್ವಾಯುತ್ತತೆಯು ಬೇಡ.... ನೀವಿದ್ದರೆ ಅಷ್ಟೆ ಸಾಕು..." ಎಂದು ಅವನ ಬಾಯಲ್ಲಿ ಕೈ ಇಟ್ಟು ನುಡಿದ್ದದ್ದು ನೆನಪಿಗೆ ಸಳ್ಳೇ೦ದು ಬಂತು....
ಅಂದು ಅವನ ಮಾತು ಕೇಳಿ ಕೆಲಸಕ್ಕೆ ಸೇರಿದ್ದರೆ... ಕೆಲಸದ ನಡುವೆ... ಮಿತ್ರರ ಸಂಪರ್ಕದ ನಡುವೆ ....
ಇಂದಿನ ಅವನ ಅಗಲಿಕೆಯಲ್ಲಿನ ಈ ಒಂಟಿತನ ಇಷ್ಟೊಂದು ಕಾಡುತ್ತಿರಲಿಲ್ಲವೇನೋ ಎನಿಸಿತು......
ಇಗಲೂ ಕಾಲ ಮಿಂಚಿಲ್ಲ.... ಇನ್ನು ಮುಂದೆಯೂ... ಕೆಲಸಕ್ಕೆ ಸೇರಿ ಅವರ ಮನಸ್ಸಿನಂತೆ ನಡೆದು ಈ ಒಂಟಿತನದ ಹಾದಿಯನ್ನು ಮರೆಯಬಹುದು......ಎನ್ನಿಸಹತ್ತಿತು..
ಮೊನ್ನೆ ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಇವರ ಮೇಲಧಿಕಾರಿ ಕಿರಣ ದಂಪತಿಗಳು- ಅನುರಾಗನನ್ನು ಕೊಂಡಾಡುತ್ತಾ..." ಮೇಡಂ.. ನೀವು ಕೆಲಸಕ್ಕೆ ಸೇರಿ.. ನಿಮ್ಮ ದುಖ ಮರೆಯಲು ಇದು ಒಂದು ದಾರಿ... ಜೊತೆಗೆ ಸ್ವಲ್ಪ ಸಂಪಾದನೆಯು ಆಗುತ್ತೆ... ಯೋಚಿಸಿ ... ನಿಮಗೆ ನನ್ನ ಸಲಹೆ ಸೂಕ್ತ ಎನಿಸಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ " ಎಂದದ್ದು ನೆನಪಿಗೆ ಸುಳಿಯಿತು..
ಕಿರಣ ದಂಪತಿಗಳನ್ನೂ ಅನು ಸದಾ ಹೊಗಳುತ್ತಿದ್ದುದು.. ಮತ್ತು ಅವರ ಸಹಾಯದ ಗುಣವನ್ನೂ
ಕೊಂಡಾಡುತ್ತಿದ್ದು... ಆ ಕ್ಷಣ ನೆನಪಾಗಿತ್ತು...
ತಾನು ಕೆಲಸಕ್ಕೆ ಸೇರಬೇಕು ಎನ್ನುವ ತುಡಿತ ಬಲವಾಗತೊಡಗಿತು....
ತಾನು ಕೆಲಸಕ್ಕೆ ಸೇರಿದರೆ ಅತ್ತೆ -ಮಾವ ಸಹಿತ ಖಂಡಿತ ಬಂದು ಜೊತೆಯಲ್ಲಿರುತ್ತಾರೆ....

-೨-
ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರೆ??....
ಎಂಬ ವಿಷಯ ತಲೆಗೆ ಬಂದದ್ದನ್ನು ಮತ್ತೆ ನೆನಸುತ್ತಲೇ ಅನ್ನಪೂರ್ಣಾಳ ಮನ ಮತ್ತೆ ಯೋಚಿಸತೊಡಗಿತು....
ಅನಾಥ ಮಗುವನ್ನು ಇಗಲೂ ತಂದು ಸಾಕಬಹುದು...
ಇವರು ಮಾಡಿದ ಆಸ್ತಿಯಲ್ಲಿ ಮಗುವೊಂದನ್ನು ಸಾಕಿ ಸಲುಹಬಹುದೆನಿಸಹತ್ತಿತು..
ಆ ಮಗುವ ಲಾಲನೆ-ಪಾಲನೆಯಲ್ಲಿ ...ಒಂಟಿತನದ ಮುಂದಿನ ಬದುಕು ಸ್ವಲ್ಪ ಹಗುರವಾಗಬಹುದು....
ನಲವತ್ತರ ನಾನು ಅರವತ್ತಾಗುವಲ್ಲಿ ಮಗು ಇಪ್ಪತ್ತರದ್ದಾಗಿ ನನ್ನ ಮುದಿಕಾಲಕ್ಕೆ ಆಸರವಾಗಲೂಬಹುದು....
ಅತ್ತೆಮಾವರ ಜೊತೆ ಮಗುವ ಲಾಲನೆ ಪಾಲನೆಗೇ ಜೊತೆಯೂ ಆಗಬಹುದ೦ತೆನಿಸಿ ಮನ ಮುದವಾದ೦ತೆನಿಸಿತು...
ದೀಪದ ಬೆಳಕಲ್ಲಿ ಈಗ ಕತ್ತಲೆ ಕಡಿಮೆಯಾಗುತ್ತಿದೆ ಎನಿಸಹತ್ತಿತ್ತು....

-೩-
ಮತ್ತೆ ಯೋಚನೆ ಭೂತಕ್ಕೆ ತಿರುಗಿತು.....
ಅಂದು ಮನೆಯಿಂದ ದೂರದಲ್ಲಿ ..ಇಬ್ಬರು ಸಂಜೆ ವಿಹಾರಕ್ಕೆ ಮನೆಯ ದೂರದಲ್ಲಿರುವ ಉದ್ಯಾನವನದಲ್ಲಿ ತಿರುಗುತ್ತಿದ್ದಾಗ ವೃಧ್ದರ ತಂಡವೊಂದು ಮೋಜಿನಿಂದ ಆಟವಾಡುತ್ತಿದ್ದರು...... ಮಧ್ಯವಯಸ್ಕ ದಂಪತಿಗಳು ಅವರೊಡನೆ ಮೋಜಿನಲ್ಲಿ ನಿರತರಾಗಿದ್ದು ಅವರನ್ನೆಲ್ಲಾ ಆಟಕ್ಕೆ ಹುರಿದು೦ಬಿಸುತ್ತಿದ್ದು ಕಂಡಿತು....
"ಅನು ಇವರೆಲ್ಲಾ ಯಾರು"
" ಅನ್ನು ಆ ದಂಪತಿಗಳು ಪಕ್ಕದ ಕಾರ್ಖಾನೆ ಮಾಲೀಕರು...ನಮ್ಮ ಹಾಗೆ ಮಕ್ಕಳಿಲ್ಲ... ಅವರು ಒಂದು ವ್ರುಧ್ಧಾಶ್ರಮ ನಡೆಸುತ್ತಿದ್ದಾರೆ.. ವಾರಾ೦ತ್ಯದಲ್ಲಿ ಅವರು ಎಲ್ಲರೊಡನೆ ಸೇರಿ ಸಮಯ ಕಳೆಯುತ್ತಾರೆ... ಕೆಲವೊಮ್ಮೆ .... ಹೀಗೇ ಹೊರ ಪ್ರವಾಸಕ್ಕೂ ಬರುತ್ತಾರೆ..."
"ಹೌದಾ!!...ನಿಜಕ್ಕೂ ಒಳ್ಳೆ ಕೆಲಸ"
" ಹೌದು ಅನ್ನು ನಾವು ಒಂದಿಷ್ಟು ಹಣ ಮಾಡಿದ ಮೇಲೆ ಹೀಗೆ ಒಂದು ವ್ರುಧ್ಧಾಶ್ರಮಕ್ಕೆ ಸೇರಿ ಬಿಡುವಾ....ಮುಪ್ಪಲ್ಲಿ ಎಲ್ಲರೊಡನೆ ಹೀಗೆ ಇರುವದು ಮಜವಲ್ಲವೇ...."
"ಹೌದು.. ನಿಜ ಅನು... ಇಗಲೇ ಸೇರಿ ಬಿಡುವಾ ಈಗ ಅವರ ಸೇವೆ ಮಾಡುತ್ತಾ ಇರುವಾ...ಮುಪ್ಪಲ್ಲಿ ನಮಗೆ ಯಾರೋ ಆಸರೆ ಆಗುತ್ತಾರೆ..ಅಲ್ಲವಾ..."
ಅಂದು ಹೇಳಿದ್ದು ಪೂರ್ತಿಗ೦ಭೀರವಾಗಿಲ್ಲದಿದ್ದರೂ ಮನದ ಮೂಲೆಯಲ್ಲೇನೋ ತುಡಿತವಿದ್ದಿರಬಹುದಿತ್ತು ಎಂದು ಇಂದು ಅನ್ನಿಸುತಿದೆ .....
ಗಂಡ ಸಂಪಾದಿಸಿದ ಹಣದಲ್ಲಿ ಅದನ್ನು ಇಂದು ಸಾಕಾರಮಾಡಿಕೊಳ್ಳಬಹುದೆನಿಸಹತ್ತಿತು....
ಜೊತೆಗೆ ತಾನು ಕೆಲಸ ಮಾಡುತ್ತಿದ್ದರೆ .......
ಆ ಹಣದಿಂದ ಇನ್ನೂ ಹೆಚ್ಚಿನ ಸಾರ್ಥಕತೆ ಇಂತಹುವುಗಳಲ್ಲಿ ತೊಡಗುವದರಿಂದ ಹೊಂದಬಹುದಲ್ಲವೇ.....
ಬೆಳಸಿದ ಮಕ್ಕಳು ಮುಪ್ಪಿನಲ್ಲಿ ನೋಡದಿದ್ದರೂ.. ಇ೦ತಹ ಕಾರ್ಯಗಳು ಮುಂದೊ೦ದು ದಿನ ಬದುಕಿಗೆ ಆಸರೆಯಾಗಬಹುದಲ್ಲವೇ...

ಈಗ ದೀಪದ ಬೆಳಕು ಮನೆಯಲ್ಲಿನ ಕತ್ತಲೆ ಓಡಿಸಿದ೦ತೆನಿಸಹತ್ತಿತ್ತು.....

-೪-
ಕತ್ತಲ ಬಗ್ಗೆ ಯೋಚಿಸುವಾಗ ಅನುಗೆ ಆ ಘಟನೆ ನೆನಪಾಗದೆ ಇರದು.....
ಅಂದು ಸಂಜೆ ಭಾರೀ ಗುಡುಗು... ಸಿಡಿಲು.....
ಅನು ಅಂದು ಆಫಿಸಿನಿಂದ ಇನ್ನು ಬಂದಿರಲಿಲ್ಲ.....
ಗಾಳಿ ಮಳೆ ಗುಡುಗು ಸಿಡಿಲು ಜೋರಾಗಿ..... ವಿಧ್ಯುತ್ ಪೂರೈಕೆ ನಿ೦ತಿತ್ತು... ಮನೆಯಲ್ಲಿ ಕತ್ತಲು ಗವ್ವೆನಿಸಹತ್ತಿತು... ಸ೦ಜೆ ರಾತ್ರಿಗೆ ಸರಿದು ...ಅನು ಇನ್ನು ಬರದೆ...ಅವನ ಫೋನ್ ಇರದೇ.... ಮನವನ್ನ ಭಯವಾವರಿಸಿತ್ತು....ಮೇಣಬತ್ತಿ ಹಚ್ಚಲು ತಡಕಾಡಿ ಸಿಗದೇ ದೇವರ ಮನೆಯ ದೀಪದಲ್ಲಿಯೇ ಕುಳಿತಿದ್ದಳು... ಹೆದರಿ ಮುದ್ದೆಯಾಗಿದ್ದಳು ಅನ್ನಪೂರ್ಣಾ..
ಬಾಗಿಲು ತಡಬಡ ಬಡೆದ ಶಬ್ದಕ್ಕೆ ಭಯದಿಂದಲೇ ದೇವರ ಮನೆಯಿಂದ ಹೊರಟುಬಂದು .. ಭಯದಿಂದಲೇ ಅನುವೇ ಬಂದದ್ದು ಎಂದು ಕೇಳಿ ಖಚಿತಪಡಿಸಿಕೊಂಡು ಬಾಗಿಲು ತೆರೆದಿದ್ದ ಅವಳು ಅನುವನ್ನ ನೋಡುತ್ತಲೇ ...ಅವನನ್ನು ಜೋರಾಗಿ ಆಪ್ಪಿ ಅಳುತ್ತಾ..
" ಅನು ಏಕೆ ತಡ? ಫೋನ್ ಏಕೆ ಮಾಡಲಿಲ್ಲ? ಮನೆಯೆಲ್ಲಾ ಕತ್ತಲು ...ಮಳೆ... ಗುಡುಗು... ಸಿಡಿಲು.. ಮಿಂಚು... ನನಗೆ ಎಷ್ಟು ಭಯ ಆಗಿತ್ತು ಗೊತ್ತಾ???"
ಅವಳನ್ನು ಒಂದು ಕೈಯಲ್ಲಿ ಬಳಸಿ ಜೋರಾಗಿ ಅಪ್ಪಿ, ಇನ್ನೊಂದು ಕೈಯಲ್ಲಿ ತಲೆ ನೇವರಿಸುತ್ತಾ.. "ಅನ್ನು ಹೀಗೆ ಭಯ ಪಟ್ಟರೆ ಹೇಗೆ ಆಫೀಸಿನಿಂದ ಹೊರಟ ನನಗೆ.. ಬಸ್ಸ ಸಿಗದೇ... ಆಟೋ ಸಿಗದೇ... ಮೊಬೈಲ್ ಸಂಪರ್ಕ ಬಂದ ಆಗಿ... ಯಾರದೋ ಕಾರಲ್ಲಿ ಸಹಾಯ ಪಡೆದು ಇಲ್ಲಿಗೆ ಬಂದೆ.. ಕ್ಷಮಿಸು... ಆದರೆ ನೀನು ಹೀಗೆ ಹೆದರಿದರೆ ಹೇಗೆ .... ನಾನೆ ಇಲ್ಲವಾದರೆ ಇನ್ನು ಹೇಗೆ ?...."
ಅವನ ಬಾಯಿಗೆ ಕೈ ಇಟ್ಟು " ಛೀ ಹಾಗೆ ಹೇಳಬೇಡಿ" ಎಂದಳು.
" ಅನ್ನು ಹೀಗೆ ಹೆದರಿದರೆ ಹೇಗೆ... ಬದುಕನ್ನು ಎದುರಿಸಬೇಕು... ಎಂಥ ಕತ್ತಲು ಬಂದರು ಮೆಟ್ಟಿ ನಿಲ್ಲುವ ಛಲವಿರಬೇಕು... ನಾನಿಲ್ಲ ಎಂದರು ನೀನು ಬಾಳಿ ತೋರಿಸಬೇಕು... ಹೀಗೆ ಎದೆಗು೦ದಬಾರದು..." ಎಂದೆಲ್ಲಾ ಸಂತೈಸಿದ್ದು ನೆನಪಿಗೆ ಬರಹತ್ತಿತ್ತು....


ಆ ಮಾತೆಲ್ಲಾ ನೆನಪಾದಂತೆ ಅನ್ನಪೂರ್ಣಾಳ ಮನ ಗಟ್ಟಿಯಾದ೦ತೆನಿಸಿತು... ದೀಪದ ಬೆಳಕು ಪ್ರಖರವಾಗಿ... ಮನೆಯ ಕತ್ತಲು... ಮನದ ಭಯವು...ಇಲ್ಲವಾದ೦ತೆನಿಸಿ ಮುಂದಿನ ದಾರಿ ಸ್ಪಷ್ಟವೆನಿಸತೊಡಗಿತು...


......ಮುಕ್ತಾಯ ಅಲ್ಲ ಪ್ರಾರ೦ಭ........

ಅನ್ನಪೂರ್ಣಳ ಮನ ಈಗ ದೀಪದ ಜ್ಯೋತಿಯಲ್ಲಿ ಬೆಳಕಾಗಿತ್ತು... ಮನೆ-ಮನದಲ್ಲಿ ಆವರಿಸಿದ್ದ ಕತ್ತಲೆ ಓಡಿ ಹೋದ೦ತೆನಿಸಿತು....
ಅವಳ ನಿರ್ಧಾರ ಗಟ್ಟಿಯಾಗಿತ್ತು. ಬೆಳಿಗ್ಗೆ ಎದ್ದವಳೇ ಕಿರಣ ದಂಪತಿಗಳನ್ನು ಕಂಡು ಕೆಲಸವೊಂದಕ್ಕೆ ಸೇರುವದು...ಅತ್ತೆ-ಮಾವರನ್ನು ಜೊತೆಗೆ ಕರೆದುಕೊಂಡು ತ೦ದಿಟ್ಟುಕೊಳ್ಳುವದು... ಆಮೇಲೆ ಅವರೊಡನೆ ಅನಾಥಾಶ್ರಮಕ್ಕೆ ಹೋಗಿ ಮಗುವೊಂದನ್ನು ದತ್ತು ಪಡೆದು ಬೆಳೆಸುವದು...
ಸಮಯ ಸಿಕ್ಕಾಗ ವ್ರುಧ್ಧಾಶ್ರಮದಲ್ಲಿ ತನು -ಮನ-ಧನಗಳ ಸೇವೆ ಸಲ್ಲಿಸಿ ಬದುಕ ಸಾರ್ಥಕಪಡಿಸಿಕೊಳ್ಳುವ ಕಾಯಕಕ್ಕೆ ತೊಡುಗುವದು...
ಈಗ ಮನ ಶೂನ್ಯದಿ೦ದ ಪರಿಪೂರ್ಣದೆಡೆಗೆ ಸಾಗುತ್ತಿದೆ ಎನಿಸಹತ್ತಿತ್ತು..


ದೂರದಲ್ಲೆಲೋ ಸುಶ್ರಾ ವ್ಯವಾಗಿ ....


"ಸೂರ್ಯನಿಲ್ಲದಿದ್ದರೇನು ??
ಹಣತೆ ಬೆಳಕ ನೀಡದೇ.......?

ಜಗವ ಬೆಳಗದಿದ್ದರೇನು?
ಮನೆಯ ಬೆಳಗಲಾಗದೇ...?

ಮನಕೆ ಮನವು ಇಲ್ಲದಿದ್ದರೇನು?
ಮನವೇ ಮನಕೆ ಆಗದೆ?"

ತೇಲಿ ಬರುತ್ತಿದ್ದ ಹಾಡು ಮನಕ್ಕೆ ತಂಗಾಳಿಯ ಹಿತವನ್ನು ನೀಡುತ್ತಿತ್ತು......




Tuesday, October 4, 2011

ಕಥೆ........ ಕಥೆಯ೦ತಿಲ್ಲ! ಕಥೆಯೊಂದು ಜೀವನ


ಆತ ...

ಮುಖ ತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...


ನನಗೂ.. ಅಸಾಧ್ಯ ಕೋಪ ಬಂತು..


ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇಲ್ಲಿಗೆ ಮುಗಿದ ಇಟ್ಟಿಗೆ ಸಿಮೆಂಟಿನ ಪ್ರಕಾಶರ ಕಥೆ "ನೀತಿ" ಯ ಮುಂದುವರೆದ ಭಾಗ ಕೊಂಡಿ: http://ittigecement.blogspot.com/2011/09/blog-post.html


ಆತ...

ಅಬ್ಬಾ ಎಷ್ಟೊಂದು ಅನುಮಾನ ಇವಳಿಗೆ

ಇಂದು ಮೊದಲ ರಾತ್ರಿಯೇ ಹೀಗೆ
ಆದರೆ ಇನ್ನು ಜೀವನ ಪರ್ಯಂತರ ಹೇಗೆ?
"ಆದರೆ ಹೇಗೆ ನಂಬಲಿ" ಎಂದರೆ... ನಾನೇನು ಹೇಳಬೇಕಿತ್ತು...??
ನಾನು ಮಾಡಿದ್ದೆ ಸರೀ!
ಒಮ್ಮೆಲೆ ಮೊದಲ ರಾತ್ರಿ ನಾನು ಅದು ಇದು ನೇರ ಅಂಥಾ ಎಲ್ಲವನ್ನೂ ಒಮ್ಮೆ ಹೇಳಿದ್ದೆ ತಪ್ಪಾಯಿತು .....ಸ್ವಲ್ಪ ಸಮಯದ ನಂತರ ಹೇಳಬಹುದಿತ್ತು... ಹೇಳದೆ ಮುಚ್ಚಿಟ್ಟಿದ್ದಾರೆ ಏನಾಗುತ್ತಿತ್ತು...??? ಸುಮ್ಮನೆ ನೆರವೆಂದು ಎಲ್ಲವನ್ನೂ ಬಿಚ್ಚಿಟ್ಟು ಅನುಮಾನಕ್ಕೆಡೆ ಮಾಡಿಸಿದೆನಲ್ಲಾ ...ಹೋಗಲಿ ಅಷ್ಟಕ್ಕೂ ಅನುಮಾನಪಟ್ಟಿದ್ದು ಅವಳು... ಅದಕ್ಕೆ ಸಿಟ್ಟು ಬಂದು ನಾನು ತಿರುಗಿದೆ... ಅಬ್ಬಾ.. ಅದಕ್ಕೆ ತಾನೂ ತಿರುಗಿ ಮಲಗಬೇಕೆ...? ಹೋಗಲಿ ಹೆಣ್ಣಿಗೆ ಹಠ ಎನ್ನುತ್ತಾರೆ ನಾನೆ ಒಮ್ಮೆ ಮಾತಾಡಿಸಲೇ... ಮಾತಾಡಿಸಿ ಸೋತು ...ಮೊದಲ ರಾತ್ರಿ ಗೆಲ್ಲಲೇ ????.....ಮೆಲ್ಲ ಅರೆ ನಿದ್ದೆಯಲ್ಲಿದ್ದ೦ತೆ ... ಕೈ ಅವಳ ಮೈ ಮೇಲೆ ಹಾಕಲೇ...ಗಂಡಿಗೆ ಹೇಗಿದ್ದರೂ ಚಟ ವಲ್ಲವೇ? ಹಾಕಿ ಬಿಡುತ್ತೇನೆ.... ಇನ್ನು ಸಿಟ್ಟಿದ್ದರೆ ಕೈ ಬಿಸಾಕುತ್ತಾಳೆ ... ಇಲ್ಲಿದಿದ್ದರೆ ನಾನೆಂದು ಕೊಂಡ೦ತೆ ಮೊದಲ ರಾತ್ರಿ ಮಿಲನ ಮಹೋತ್ಸವ...



ಆಕೆ .....
"ನಾನೇಗೆ ನಂಬುವದು" ಎಂಬ ನನ್ನ ಪ್ರಶ್ನೆ ಅವರ ಅಸ್ತಿತ್ವವನ್ನೇ ಕೆಣಕುವ೦ತಿತ್ತಲ್ಲವೆ ??
ನಾನು ಅದನ್ನು ಕೇಳಬಾರದಿತ್ತು ...
ಪರಸ್ಪರರನ್ನು ನಂಬದೆ ಸಂಭಂಧ ಗಟ್ಟಿ ಮಾಡುವದು ಹೇಗೆ?...
ಅದು ಪ್ರಾರಂಭದಲ್ಲೇ...
ಅವರು ಆದನ್ನು ಹೇಳದೆ ಮುಚ್ಚಿಡಬಹುದಿತ್ತು...
ಹೇಳಿದ ಮೇಲೆ ಅದ್ದನ್ನು ನಾನು ನಂಬದೆ ಅನುಮಾನಿಸುವದು ತಪ್ಪು ನಾನು
ಅವರು ಹೇಳಿದ್ದರಲ್ಲಿ ಅರ್ಧವನ್ನೇ ನಂಬಿದೆ ಇನ್ನರ್ಧ ಅನುಮಾನಿಸಿದೆ...
ಅದನ್ನು ಅನುಮಾನಿಸಬಹುದಿತ್ತು...
ಇಲ್ಲ ಇದನ್ನು... ನ೦ಬಬಹುದಿತ್ತು...
ಹೆಣ್ಣಿಗೆ ಹಠ ಎನ್ನುವದು ಇವರಿಗೆ ಗೊತ್ತಿಲ್ಲವೇ/.... ಒಮ್ಮೆ ಅವರ ಕೈ ನನ್ನ ಮೇಲೆ ಬಿದ್ದರೆ ನಾನೆಲ್ಲಾ ಮರೆತು ಅವರನ್ನ ತಬ್ಬಿ ಬಿಡುತ್ತೇನೆ....

ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನು ಬದಿ ತಿರುಗಿಸಿ ಅವಳೆಡೇಗೆ ಮುಖ ಮಾಡಿ ತಿರುಗುತ್ತಾನೆ...

ಅವನು ತನ್ನ ಕಡೆ ತಿರುಗಿದ್ದು ಅವಳಿಗೆ ಅರಿವಾಗುತ್ತೆ...ನಿದ್ದೆಯಲ್ಲಿದ್ದಾನೋ...? ಅಥವಾ ಬೇಕಂತಲೇ ತಿರುಗಿರುವನೋ? ತಿರುಗಿ ನೋಡಲು ಕಾತರ... ಆದರೆ ನೇರ ನೋಡಲಾಗುವದಿಲ್ಲ... ಆದ್ದರಿಂದಲೇ ನಿದ್ರೆಯಲಿಂದಲೇ ಮೇಲ್ಮುಖಕ್ಕೆ ತಿರುಗಿ ನಿಮಿಲಿತ ನೇತ್ರದಲ್ಲಿ ಅವನನ್ನು ನೋಡುತ್ತಾಳೆ... ನಿದ್ರೆಯಲ್ಲಿದ್ದಂತೆ ನಟಿಸುತ್ತಿರುವದು ಗೊತ್ತಾಗುತ್ತೆ ....ಇರಲಿ ನೋಡೋಣ....ಗಂಡಿಗೆ ಚಟವಂತೆ... ಸರಿಯೇ ನೋಡೋಣ...
ಅವಳು ಮೇಲ್ಮುಖ ಮಾಡಿ ತಿರುಗಿದ್ದು ಇವನು ನಿಮಿಲಿತನಾಗೆ ಗಮನಿಸುತ್ತಾನೆ... ಅಬ್ಬ ಹೆಣ್ಣೇ ಇನ್ನು ಹಟವೇ? ಇರಲಿ ಮೆಲ್ಲ ಕೈ ಮೇಲೆ ಹಾಕುತ್ತೇನೆ ನೋಡೋಣ...ಕೈ ನಿದ್ರೆಯಲ್ಲಿ ಬಂದಂತೆ ಅವಳ ಮೇಲೆ ಬಳಸಿಯೂ ಬಳಸದಂತೆ ಇರಿಸಿದ...

ಕೈ ಬೀಳುತ್ತಲೇ ಇವಳು ಅವನೆಡೆಗೆ ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನೆಡೆಗೆ ಸರಿಯುತ್ತಾಳೆ... ಈಗ

ಈಗ ನಟನೆಯಲ್ಲಿ ಮುಚ್ಚಿದ ಇಬ್ಬರ ಕಣ್ಣುಗಳಲ್ಲಿ ಅಪಾರ ಆಶೆ ತುಂಬಿದೆ... ಪರಸ್ಪರರ ಮುಖಕ್ಕೆ ಪರಸ್ಪರರ ಬಿಸಿಯುಸಿರು ಬೀಸುತ್ತಿದೆ...ತಂಗಾಳಿಯಂತೆ..ಮಂದಾನಿಲದಂತೆ .... ಮಾರುತವಾಗಿ... ಅದರೊಡನೆ ಮನದ ಸುಪ್ತ ಬಯಕೆಗಳು ಹೊತ್ತಿ ಕಂಬಾರನ ತಿದಿಗೇ ಬೆದೆಯೋಡಿವ ಬೆಂಕಿಯಂತೆ ಹರಡಿ ಸುತ್ತೆಲ್ಲಾ ಮುತ್ತಿ, ಜಗಳ ಕದನಗಳ ಕಾರಣಗಳು ಗೌಣವಾಗಿ ಅದರಲ್ಲಿ ಸುಟ್ಟು ಕರಗಿತು ... ಕೇವಲ ಬಯಕೆ ಪ್ರೀತಿಯ ಬೆಂಕಿ ಹೊತ್ತೊಡೆದು ...ಪರಸ್ಪರರನ್ನು ಅಪ್ಪಿಸಿ ಮುತ್ತಾಡಿಸಿ ಮಿಲನಕ್ಕೆ ಮುಂದುವರೆಸುತ್ತದೆ... ಮುಚ್ಚಿದ ಕಂಗಳು ತೆರೆಯದೆ ಎಲ್ಲವನ್ನೂ ನೋಡಿ ಸವಿಯಿತು... ತೆಗೆದಾಗ ಕಾಣದ್ದು ಮುಚ್ಚಿದಾಗಲೇ ಕಂಡಿತು...ಕತ್ತಲು ಆಪ್ತವಾಯಿತು... ಬಯಕೆ ಮುಗಿಲ ಮುತ್ತಿಟ್ಟು ಮುತ್ತಿಕ್ಕಿ ... ಮೊದಲಿನ ಮಾತಿನ ಕದನ ಕಾಣದಾಗಿ ಈಗ ಇಲ್ಲಿ ಮಾತಿಲ್ಲದ ಪ್ರೇಮದ ಕದನ ಆರಂಭವಾಯಿತು ...ಒಬ್ಬರಲ್ಲಿ ಒಬ್ಬರು ಕಳೆದು ಹೋದರು....!

ಮಿಲನದ ಕದನದಲ್ಲಿ ಸುಸ್ತಾಗಿ ಅಪ್ಪಿ ವಿರಮಿಸಿದ ಪರಸ್ಪರ ಮೈ ಮನಗಳಲ್ಲಿ ಧನ್ಯತೆ ತುಂಬಿ ....
ಆತ "ಪುಟ್ಟಾಣಿ ನಾನು ತಿರುಗಿ ಮಲಗಿದ್ದು ತಪ್ಪು" ಎಂದ

ಅವಳು " ಪೋಲಿ ಕಿಟ್ಟಾಣಿ ಅನುಮಾನಿಸಿದ್ದು ನನ್ನ ತಪ್ಪು"

ಆಮೇಲೆ ಇಬ್ಬರು ಒಟ್ಟಿಗೆ ಅರಿವಿಲ್ಲದೆ ಅಂದಿದ್ದು "ಇರಲಿ ಬಿಡು ಅದೊಂದು ಕಹಿ ಕಾಲ -ಸುಖದಲ್ಲಿ ಅದೆನೇಕೆ ನೆನೆವ"

"ಹೆಣ್ಣಿಗೆ ಹಠ - ಗಂಡಿಗೆ ಚಟ " ಇದು ಸತ್ಯ.... ಇದರಲ್ಲಿ ಸಹಸ್ರಾರು ವಿಚ್ಚೆದನಕ್ಕೆ ಕಾರಣವಾಗಬಹುದಾದ ಘಟನೆಗಳು ಸತ್ತು ಮತ್ತು ಸುಟ್ಟು ಹೋಗಿವೆ....

ಅದಕ್ಕೆ ಹೇಳಿದ್ದು " ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ "

Friday, June 24, 2011

ಒನ್ ಟೂ ಕಾ ಫೋರ್ !!!!!!!


ಫಣಿಭೂಷಣ ನನ್ನ ಸಹೋದ್ಯೋಗಿ ಮಿತ್ರ .....
ರಂಗಿನ ವ್ಯಕ್ತಿತ್ವ.... ಮಾತುಗಾರ... ವಾಗ್ಮಿ...ಎಂತಹವರನ್ನು ಮರಳು ಮಾಡುವ ಮೋಡಿ ಮಾತಿನ ಚತುರ..
ರಸ್ತೆಯಲ್ಲಿ ಎರಡು ವಾಹನಗಳ ಎಡವಟ್ಟು ಚಾಲಕರು, ಸಣ್ಣ ಅಪಘಾತ ಮಾಡಿ, ದೊಡ್ಡ ಜಗಳದೊಂದಿಗೆ, ಅರ್ಧಗಂಟೆಗೂ ಹೆಚ್ಚು ಕಿತ್ತಾಡುತ್ತಾ, ರಸ್ತೆಯ ಎರಡು ಕಡೆ ಅರ್ಧ ಕಿಮಿ ವರೆಗೆ ವಾಹನಗಳು ನಿಲ್ಲುವಂತೆ ತಡೆಗೆ ಕಾರಣರಾಗಿದ್ದರು..
ಆ ಇಬ್ಬರ ನಡುವೆ ಪ್ರವೇಶಿಸಿ..ಇಬ್ಬರಿಗಿಂತಾ ಜೋರಾಗಿ ಬಾಯಿ ಮಾಡಿ ಅರುಚುತ್ತಾ, ನಡು ನಡುವೆ ಪರಿಚಿತ ಎಸ್ಪಿ ಮತ್ತು ಡಿಸಿ ಗೆ ಅದ್ಯಾವದೋ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತೇನೆ ಎನ್ನುತ್ತಾ ಇಬ್ಬರನ್ನು ಹೆದರಿಸಿ ಐದೇ ನಿಮಿಷದಲ್ಲೇ ರಸ್ತೆ ತೆರವು ಮಾಡಿಸಿದ್ದ. ನಾನು "ನಿನಗೆ ಡಿಸಿ ಎಸ್ಪಿ ಗೊತ್ತಾ ಅಂದೇ'" ಅದೆಲ್ಲಾ ಏನಿಲ್ಲಾ ಸಾರ ನಿಮ್ಮ ಮೊಬಿಲೆಗೆ ಕಾಲ್ ಮಾಡಿ ನೀವು ತೆಗೆದು ಕೊಳ್ಳುವ ಮೊದಲೇ ನಾನು ರಿಂಗಾಗುತ್ತಿದ್ದ ತಮ್ಮ ಜಂಗಮವಾಣಿ ಯೊಡನೆ ಎಸ್ಪಿ ಡಿಸಿ ಸಂಬಾಷಣೆ ಮಾಡಿದ್ದೆ,, ಹೇಗೂ ಗಲಾಟೆಯಲ್ಲಿ ತಮಗೆ ಜಂಗಮವಾಣಿ ಕರೆ ಕೇಳದು ಮತ್ತು ತಾವು ಎತ್ತಲಾರಿರಿ ಎಂದು ಗೊತ್ತಿತ್ತು"
ಅಂಥಾ ಕಿಲಾಡಿ.. ನಮ್ಮ ಫಣಿ ...
ಮನುಷ್ಯರ ಮನದಲ್ಲಿನ ತಾಕಲಾಟವನ್ನ ಅವರ ಮುಖ ನೋಡಿ ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡುವ ಚತುರ ಅವನು..
ಎಂತ ಕೆಲಸವಾದರೂ ಲೀಲಾಜಾಲವಾಗಿ ಮಾಡುವ ವ್ಯಕ್ತಿ...
ನನ್ನ ತಂಡದ ಕಷ್ಟದ ಕೆಲಸ (tough task) ಅವನಿಗೆ ಮೀಸಲು...
ಅಲ್ಲಿ ಇಲ್ಲಿ ಅವರಿಗೆ ಇವರಿಗೆ ಫಿಟ್ಟಿಂಗ್ ಇಟ್ಟು ಜಗಳ ಹಚ್ಚುತ್ತಿದ್ದರೂ ಯಾರೊಂದಿಗೆ ಮುಖ ಕೆಡಿಸಿಕೊಂಡವನಲ್ಲ ...ಇದಕ್ಕಾಗಿ ನಾರದ ಮುನಿ ಎಂಬ ಅನ್ವರ್ಥಕ ನಾಮವೂ ಇತ್ತು. ಜೊತೆಗೆ ಇವನು ಹಚ್ಚುವ ಜಗಳಗಳನ್ನು ಇವನೇ ಸುಖಾಂತ್ಯವಾಗಿ ಸಮಾಪ್ತಿ ಮಾಡುತ್ತಿದ್ದ.
ಅವನಿಗೆ ಗೊತ್ತಿರದ ವಿಧ್ಯೆಗಳೇ ಇಲ್ಲ..... ಎಲ್ಲದರ ಬಗ್ಗೆ ಗೊತ್ತು..ಎಲ್ಲದರ ಬಗ್ಗೆ ನಿರಗ್ರಳವಾಗಿ ಉಪದೇಶ ಮಾಡುತ್ತಿದ್ದ...ಎಲ್ಲ ವಿದ್ಯಗಳ ಪ್ರಾಒಗಿಕ ಪರೀಕ್ಷೆ ಮಾಡಿದ ಅನುಭವ.... ದುಡ್ಡು ಮಾಡುವ ಎಲ್ಲ ವಿಧಾನವನ್ನ ಪ್ರಯೋಗಿಸಿ ನೋಡುತ್ತಿದ್ದ....
ಈಸ್ಪೀಟು..ಜೂಜು...ಕುದುರೆ...ಲಾಟರಿ....ಹಂಪೆ ನಿಧಿ ಶೋಧಕ್ಕೆ ರಾತ್ರಿ ವಾಮಾಚಾರ...ಅಲ್ಚೆಂ (allachem)...ಎಲ್ಲ ಲೋಹಗಳನ್ನ ಬಂಗಾರವನ್ನಾಗಿಸುವ ಪ್ರಯತ್ನ...
ಸಾಧುಗಳನ್ನು ಹುಡುಕಿ ಅವರ ಬಗ್ಗೆ ಅವರ ಸಿದ್ದಿ ಬಗ್ಗೆ ತಿಳಿದುಕೊಳ್ಳುವ ಕಾತುರ...
ಹಾಗೆಂದು ಎಲ್ಲವನ್ನೂ ನಂಬುವ ಕುರಡನಲ್ಲ...
ಹಣ ಕಳೆದುಕೊಳ್ಳುವ ಮುಟ್ಟಾಳನಲ್ಲ...
ಹಾಗೆಂದು ಹಣ ಕಳೆದುಕೊಳ್ಳದವನೂ ಅಲ್ಲ...
ಇದೆ ಅವನ ವೈಶಿಷ್ಟ್ಯ ...
ಅಲ್ಪ ಸಂಬಳದ ಅವನು ಹಣ ಹೊಂದಿಸುತ್ತಿದ್ದ ಪರಿ ಅದ್ಭುತ...
"ಸರ ಒಂದು ಐದು ನೂರು ಹಣ ಬೇಕಾಗಿತ್ತು ಹತ್ತನೇ ತಾರೀಕಿಗೆ ಕೊಟ್ಟು ಬಿಡುವೆ" ಎನ್ನುತ್ತಾ ಇಲ್ಲವೆನ್ನಲಾಗದ ಒಂದು ಬುರುಡೆ ನೆವ ಹೇಳುತ್ತಿದ್ದ. ಹತ್ತನೇ ತಾರೀಕು ಸರಿಯಾಗಿ ಮೊದಲ ಭೇಟಿಯಲ್ಲಿಯೇ ನಾವು ಕೇಳುವ ಮೊದಲೇ ಧನ್ಯವಾದಗಳೋಡನೆ ಹಣ ತೆಗೆದು ಕೊಡುವ ಪ್ರಾಮಾಣಿಕ ವ್ಯಕ್ತಿತ್ವ ಅವನದು. ಸಂಬಳವಲ್ಲದ ದಿನ ಹಣ ಕೊಡುತ್ತಿರುವನಲ್ಲ ಎಂಬುದು ಆಶ್ಚರ್ಯ. ಆಮೇಲೆ ಮುರುಳಿಯೊಡನೆ ಮಾತನಾಡುವಾಗ ತಿಳಿಯಿತು ಅವನಲ್ಲಿ ೧೦೦೦ ರೂ ತೆಗೆದು ಕೊಂಡಿದ್ದನಂತೆ ೯ನೆ ತಾರೀಕಿನಂದು ಮುಂದಿನ ತಿಂಗಳು ಹದಿನೈದಕ್ಕೆ ಕೊಡುತ್ತೇನೆ ಎಂದು. ಮುಂದಿನ ತಿಂಗಳು ಹತ್ತಕ್ಕೆ ರಾಮಲಿಂಗ ನ ಹತ್ತಿರ ೨೦೦೦ ತೆಗೆದು ಕೊಂಡಿದ್ದಂತೆ ಅದರ ಮುಂದಿನ ತಿಂಗಳು ೨೫ಕ್ಕೆ ಕೊಡುತ್ತೇನೆ ಎಂದು...ಹಾಗೂ ಹದಿನೈದಕ್ಕೆ ಮುರುಳಿ ಹಣ ತೀರಿಸಿದ್ದ...

ಹೀಗೆ ತನ್ನ ಎಲ್ಲ ವಿಶ್ವಾಸಿ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಒಬ್ಬಬ್ಬರೊಡನೆ ಒಂದು ನಿರ್ಧಿಷ್ಟ ಸಮಯ ತೆಗೆದುಕೊಂಡು ಹಣ ಪಡೆಯುವದು.., ಆ ಸಮಯ ಬಂದಾಗ ಇನ್ನೊಬ್ಬರ ಹತ್ತಿರ ಹೆಚ್ಚಿನ ಸಾಲ ಪಡೆದು ಸ್ವಲ್ಪ ಖರ್ಚಿಗೆ ಇಟ್ಟುಕೊಂಡು ಉಳಿದದ್ದನ್ನು ಸಮಯಕ್ಕೆ ಸರಿಯಾಗಿ ಹಿಂದಿನ ಸಾಲ ತೀರಿಸುವ ಚಾಣಕ್ಯ..

ಹೀಗೆ ಬೆಳೆದ ಸಾಲದ ಹಣ ಅವನ ವರ್ಷದ ಬೋನಸ್ ವೇಳೆಗೆ ಬೋನಸ ಹಣಕ್ಕೆ ಸಮನಾಗಿ ಬರುವಂತೆ ಮಾಡಿ ಆಗ ಕೊನೆಯ ಸಾಲಿಗನಿಗೆ ಬೋನಸ್ ಪೂರಾ ಕೊಟ್ಟು, ಮತ್ತೆ ಸ್ವಲ್ಪ ಹಣ ಸಾಲ ಎತ್ತುತ್ತಾ ತನ್ನ ಒನ್ ಟು ಕಾ ಫೋರ್ ಕೆಲಸ ಮುಂದುವರೆಸುತ್ತಿದ್ದ.
ಈ ನಡುವೆ ಇಸ್ಪೀಟ್ ನಲ್ಲಿ ಹಣ ಬಂದರೆ ಹಳೆಯ ಸಾಲ ತೀರಿಸುತ್ತಿದ್ದ. ಮನೆಗೆ ವಡವೆ ಮತ್ತು ವಸ್ತ್ರಕ್ಕೆ ಖರ್ಚು ಮಾಡುತ್ತಿದ್ದ. ಅವನ ಸಾಲ ಜೂಜುಗಳಿಗೆ ಮೀಸಲಾಗಿತ್ತು. ಅವಾಗಾವಾಗ ಜೂಜಿನಿಂದ ಹಣವನ್ನೂ ಮಾಡುತ್ತಿದ್ದ.
ಅವನಿಗೆ ಹಣ ಕೊಡುವವರಿಗೆ ಅವನ ಪಿಳ್ಳೆ ನೆವಗಳು ಗೊತ್ತಿದ್ದವು ಮತ್ತು ತಮ್ಮ ಹಣ ಜೂಜು ಮೋಜಿಗೆ ಹೋಗುತ್ತದೆ ಎಂದು ಗೊತ್ತಿರುತ್ತಿತ್ತು. ಆದರು ಅವರು ಹಣ ಕೊಡಲು ನಿರಾಕರಿಸುತ್ತಿರಲಿಲ್ಲ. ಏಕೆಂದರೆ ಹೇಳಿದ ಸಮಯಕ್ಕೆ ತಪ್ಪದೆ ಎಲ್ಲಿದ್ದರೂ ಹಹೆಗಾದರು ಮಾಡಿ ಹಣ ತಂದು ಸಾಲ ತೀರಿಸುತ್ತಿದ್ದ. ಅದು ಗೊತ್ತಿದ್ದ ಎಲ್ಲರು ಅವನಿಗೆ ಹಣ ಕೊಡುತ್ತಿದ್ದರು -ಪಿಳ್ಳೆ ನೆವಗಳನ್ನು ನಮ್ಬಿದವರಂತೆ ನಟಿಸಿ ಜೊತೆಗೆ ಮೊಸಳೆ ಅನುಕಂಪ ತೋರಿಸಿ.
ಕೆಲವೊಮ್ಮೆ ಹೇಳಿದ ಸಮಯಕ್ಕೆ ಇನ್ನೊಂದು ಮೂಲದಿಂದ ಹಣ ತೀರಿಸಲು ಸಿಗದೇ ಇದ್ದಾರೆ ಹೆಚ್ಚಿನ ಬಡ್ಡಿಯ ಸಾಲ ಮಾಡಿ ಅಥವಾ ಅಡವಿಟ್ಟು ಹಣ ತೀರಿಸುತ್ತಿದ್ದ...

ಅವನಿಗೆ ಇದೆಲ್ಲಾ ಮಾಮೂಲು...
ಬದುಕನ್ನು ಅವನೆಂದು ಗಂಬೀರವಾಗಿ ಪರಿಗಣಿಸಲಿಲ್ಲ ... ಹಾಗೆ ಸಾವನ್ನು....
ಎಲ್ಲಾ ಜೂಜು -ಮೊಜುಗಳನ್ನು ಮಜವಾಗಿ ಅನುಭವಿಸಿದ...
ಕೊಟ್ಟ ಮಾತಿಗೆ ತಪ್ಪಲಿಲ್ಲ...
ದುಖ ನೋವನ್ನು ಎಂದು ತೋರಿಸಲಿಲ್ಲ....
ತನ್ನ ರಂಗಿನ ವ್ಯಕ್ತಿತ್ವದಿಂದ ಎಲ್ಲರನ್ನು ರಂಜಿಸಿದ...
ಸಾಧಿಸುವ ಕಿಚ್ಚು ತೋರಿಸಿದ...
ಸಾವು ಅವನ ಕೊನೆಯ ಒಂದೆರಡು ವರ್ಷಗಳಲ್ಲಿ ಅವನ ಆರೋಗ್ಯವನ್ನೂ ಕಿತ್ತು ತಿಂದರೂ, ಎಲುವಿನ ಗೂಡನ್ನಾಗಿಸಿದರೂ, ಅವನು ದ್ರುತಿಗೆಡಲಿಲ್ಲ, ನಗುತ್ತಲೇ ಎಲ್ಲವನ್ನೂ ಎದುರಿಸಿದ ತನ್ನ ರಂಕಲುಗಳನ್ನೆಲ್ಲಾ ಬಿಡದೆ ಮಜವಾಗಿ ಕಳೆದ..ಗುಣವಾಗದ ಖಾಯಿಲೆಗೆ ತನ್ನನ್ನು ತಾನೇ ನಗುತ್ತಾ ಬಲಿ ಕೊಟ್ಟ..
ನಾರದ ಮುನಿ ಎಲ್ಲರ ಮನದಲ್ಲಿ ಇನ್ನು ಹಸಿರಾಗೇ ಇದ್ದಾನೆ...
ಅವನ ಕಥೆಗಳು, ರಂಕಲುಗಳು, ತೆವಲುಗಳು...ಕೆಲಸದಲ್ಲಿನ ಅವನ ಚಾಣಕ್ಯ ತಂತ್ರಗಳು... ರಸವತ್ತಾದ ಕಥೆಗಳಾಗಿ ಮಿತ್ರರಿಂದ ಇನ್ನು ಹರಡುತ್ತಲೇ ಇವೆ.
ಡಬ್ಲಿಂಗ್ ದೊರೆ ಎಂಬ ಹೆಸರು ಇತ್ತು ಅವನಿಗೆ..
ಹಾಗೆಂದು ಯಾರಿಗೂ ಮೋಸ ಮಾಡಿದವನಲ್ಲ. ತೊಂದರೆ ಕೊಟ್ಟವನಲ್ಲ.. ಎಲ್ಲರನ್ನು ನಗಿಸುತ್ತಾ ಅವರ ಕೆಲಸದಲ್ಲಿ ಕೈಗೂಡಿಸಿ ನಡೆದವ.

Wednesday, May 4, 2011

ಇಸಗೊ೦ಡವ ಈರಭಧ್ರ!!!!!!!


ಡಷ್ಟಪೇಟೆಯ, ನಾಯಕಕೇರಿಯ ಬಿಳಿ ಅಂಗಿ-ಬಿಳಿ ಲುಂಗಿ ಮತ್ತು ಹೆಗಲ ಮೇಲೆ ಟರ್ಕಿ ಟವೆಲ್ ಹೊತ್ತ , ಕುಳ್ಳುವ್ಯಕ್ತಿ ನುಂಗಣ್ಣ ಲುಂಗಿ ಸರಿಸಿ, ಒಳಚೆಡ್ಡಿಯ ಕಿಸೆಯಲ್ಲಿನ ರಿಂಗಣಿಸುವ ಜಂಗಮವಾಣಿಯನ್ನು ಎತ್ತಿ ಅಲೋ... ಎಂದರೆ ಸಾಕು ಯಾವದೋ ಮರಿ ಪುಡಾರೀ ಎಂದುಕೊಳ್ಳಬೇಕು! ಹಾಗಂತಾ ನುಂಗಣ್ಣನೇನು ರಾಜಕೀಯ ವ್ಯಕ್ತಿಯಲ್ಲ .... ಆದರೆ ಅವನಿಲ್ಲದೆ ಕೇರಿಯ ಯಾವ ರಾಜಕೀಯ ಚಟುವಟಿಕೆ ನಡೆಯದು... ಯಾವದೇ ಚುನಾವಣೆಯಿದ್ದರೂ ಎಲ್ಲ ಅಭ್ಯರ್ಥಿಗಳೋಡನೆ ತಿರುಗಾಡಿ ಸ್ವಲ್ಪ ಗಂಟು ಮಾಡಿಕೊಳ್ಳುತ್ತಾನೆ. ಅವನದೇ ಆದ ವಿಶಿಷ್ಟ ಮಾತುಗಾರಿಕೆಯಿ೦ದ ಎಲ್ಲರನ್ನು ಮೋಡಿಗೆ ಒಳಪಡಿಸಿ ಮಂತ್ರಮುಗ್ಧರನ್ನಾಗಿಸೋ ಕಲೆ ಅವನದು. ಹಾಗಾಗಿ ಹಿರಿ-ಕಿರಿ-ಮರಿ-ಭಾವಿ ಪುಡಾರಿಗಳಿಗೆ ಅವನ ಸಾಥ್ ಬೇಕು!

ಹೊಟ್ಟೆಪಾಡಿಗೆ ನು೦ಗಣ್ಣ ಮುನಿಸಿಪಾಲಿಟಿ-ರಜಿಸ್ಟ್ರಾರ ಕಛೇರಿ-ತಹಸೀಲ್ ಕಛೇರಿ-ತಾಲೂಕು ಆಫೀಸ್ ಮತ್ತು ಮು೦ತಾದ ಸರಕಾರಿ ಕಛೇರಿಯಲ್ಲಿ ಕೆಲಸ ಮಾಡುವ ಮಧ್ಯವರ್ತಿಗಳಿಗೆ ಸಹಾಯ ಮಾಡುತ್ತಾ ಅವರಿ೦ದ ಸ್ವಲ್ಪ ಕಮೀಶನ್ನು ಪಡೆಯುವದು. ಹೀಗೆ ಪರಿಚಯವಾದ ಸರಕಾರಿ ಅಧಿಕಾರಿಗಳ ಸಣ್ಣ ಪುಟ್ಟ ವೈಯುಕ್ತಿಕ ಕೆಲಸ ಮಾಡಿ ಅವರ ವಿಶ್ವಾಸ ಹೊ೦ದುವದು. ಆಮೇಲೆ ಮಧ್ಯವರ್ತಿಗಳ ಮುಖಾ೦ತರ ಪರಿಚಯವಾದ ಕೆಲವು ವ್ಯಕ್ತಿಗಳ (ಸದಾ ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವ) ಸರಕಾರಿ ಕೆಲಸಗಳನ್ನು ನೇರವಾಗಿ ಮಧ್ಯವರ್ತಿಗಳಿಗಿ೦ತಾ ಕಡಿಮೆ ಕಮೀಶನ್ನಲ್ಲಿ ಮಾಡುತ್ತೇನೆ೦ದು ಹೇಳಿ, ಅವರ ಕಡತಗಳನ್ನು ತೆಗೆದುಕೊ೦ಡು, ವಿಶ್ವಾಸಕ್ಕೆ ತೆಗೆದುಕೊ೦ಡಿರುವ ಅಧಿಕಾರಿಗಳಿ೦ದ, ನಮ್ಮ ಸ೦ಭ೦ಧಿಕರ ಕಡತ ಎ೦ದು ಹೇಳಿ ಪುಕ್ಕಟ್ಟೆ ಕೆಲಸ ಮಾಡಿ, ಪೂರ್ತಿ ಕಮಿಶನ್ನು ಉಳಿಸಿಕೊಳ್ಳುತ್ತಿದ್ದ ಅಲ್ಲೊ೦ದಾಗಿ-ಇಲ್ಲೊ೦ದಾಗಿ. ಪದೇ ಪದೇ ಮಾಡಿದರೆ ಮಧ್ಯವರ್ತಿಗಳಿ೦ದಲೂ ಮತ್ತು ಅಧಿಕಾರಿಗಳಿ೦ದಲೂ ತೊ೦ದರೆ ಎದುರಿಸಬೇಕಿತ್ತು ಎ೦ದು ಅರಿತು ಹುಷಾರಿಯಾಗಿರುತ್ತಿದ್ದ.

ಈ ನಡುವೆ ಊರಹೊರಗಿನ ಗುಡ್ಡದಲ್ಲಿನ ಗಣಿಗೆ ಬೆಳಿಗ್ಗೆ ಹೋಗಿ ಸ೦ಜೆವರೆಗೆ ಕೆಲಸ ಮಾಡುತ್ತಿದ್ದ ರಾಮಣ್ಣನಿಗೆ ಸರಕಾರಿ ಕಛೇರಿ ಕೆಲಸ, ನೀರಿನ ಕರ ಕಟ್ಟುವದು, ವಿದ್ಯುತ್ ಬಿಲ್ಲ್ ಮತ್ತು ಫೊನ ಬಿಲ್ಲು ಕಟ್ಟುವದು, ಮತ್ತು ಅಸ್ತಿ ಕರ ಕಟ್ಟುವದು ರಜೆ ಹಾಕದೆ ಸಾಧ್ಯವಾಗದುದರಿ೦ದ ಮಧ್ಯವರ್ತಿಗಲ ಸಹಾಯ ಪಡೆಯುತ್ತಿದ್ದ. ಇ೦ತಹ ಸಣ್ಣ-ಪುಟ್ಟ ಹೆಚ್ಚು ಆದಾಯವಿರದ ಕೆಲಸಗಳನ್ನು ಮಧ್ಯವರ್ತಿಗಳು ತಾವು ಮಾಡದೆ ನು೦ಗಣ್ಣನನ್ನು ರಾಮಣ್ಣನಿಗೆ ನೇರ ಸ೦ಪರ್ಕಕ್ಕೆ ಒಳಪಡಿಸಿ ಅವನಿಗೆ ಸ್ವಲ್ಪ ದುಡ್ಡನ್ನು ಕೊಡಲು ತಿಳಿಸಿದರು. ಮನೆಯ ಹತ್ತಿರದಲ್ಲೆ ಇದ್ದ ನು೦ಗಣ್ಣನ ಪರಿಚಯವಾದದ್ದು ರಾಮಣ್ಣನಿಗೆ ಅನುಕೂಲವೇ ಆಯಿತು. ಮನೆ ಎದುರು ತಿರುಗಾಡುವ ನು೦ಗಣ್ಣನಿಗೆ ಕರೆದು ತನ್ನ ಕೆಲಸ ಕಾರ್ಯಗಳನ್ನು ಒಪ್ಪಿಸಿ ಅವನಿಗೆ ೫೦-೧೦೦ ರೂ ಕೈಯಲ್ಲಿ ಇಡುತ್ತಿದ್ದ. ನು೦ಗಣ್ಣಗೂ ಈ ಕೆಲಸ ಹಿಡಿಸಿತು. ಹೀಗೆ ಸಾಗುತ್ತಲಿತ್ತು ನು೦ಗಣ್ಣ ಮತ್ತು ರಾಮಣ್ಣನ ವ್ಯವಹಾರ.

ಒಮ್ಮೆ ರಾಮಣ್ಣನು ಒ೦ದುವರ್ಷದ ನೀರಿನ ಕರ ಹಾಗೂ ಆಸ್ತಿ ಕರ ಕಟ್ಟಲು ದೊಡ್ಡಮೊತ್ತವನ್ನು ಅ೦ದರೆ೨-೩ ಸಾವಿರಗಳಲ್ಲಿ ನು೦ಗಣ್ಣಗೆ ದಾಖಲಾತಿಗಳೊಡನೆ ಕೊಟ್ಟು ಕಳಿಸಿದ. ಆಮೇಲೆ ನು೦ಗಣ್ಣನ ವಿಳಾಸವೇ ಇಲ್ಲವಾಯಿತು. ರಾಮಣ್ಣನ ಮನೆ ಎದುರಿನ ದಾರಿಯಲ್ಲು ನು೦ಗಣ್ಣ ಕಾಣದಾದ. ರಾಮಣ್ಣ ನು೦ಗಣ್ಣನ ಮನೆಗೆ ವಿಚಾರಿಸಲು ಹೋದ... ನು೦ಗಣ್ಣ ಮನೆಯಲ್ಲಿ ಇರುವ ಆಸಾಮಿಯೇ? ಹತ್ತು ಸಲ ತಿರುಗಾಡಿದಾಗ ಒಮ್ಮೆ ಸಿಕ್ಕ. "ಅಧಿಕಾರಗಳಿಗೆ ಕೊಟ್ಟಿದ್ದೆನೆ ಅವರು ಊರಲ್ಲಿ ಇಲ್ಲ ಬ೦ದ ಕೂಡಲೇ ತರುತ್ತೆನೆ" ಎ೦ದ. ಮತ್ತೊಮ್ಮೆ " ಅಧಿಕಾರಿಗಳು ನಿಮ್ಮ ದಾಖಲಾತಿ ಕಳೆದಿದ್ದಾರೆ ಬೇರೆಯದನ್ನು ಕೊಡಿ" ಎ೦ದ. ರಾಮಣ್ಣ ಕೊಟ್ಟಿದ್ದು ಮೂಲಪ್ರತಿ ಅದರ ನಕಲು ಅವನಲ್ಲಿ ಇಲ್ಲವೆನ್ನುವದು ನು೦ಗಣ್ಣಗೆ ಗೊತ್ತಿತ್ತು. ರಾಮಣ್ಣನದು ದಯನೀಯವಾಯಿತು ಪರಿಸ್ಥಿತಿ. ಅದಕ್ಕೆ ನು೦ಗಣ್ಣ ಹೆಳಿದ್ದು ನಾನೇ ಅದರ ನಕಲು ಕಛೆರಿಯಲ್ಲಿ ಹುಡುಕಿಸಿ ತೆಗೆಯುತ್ತೆನೆ ಇನ್ನು ಸ್ವಲ್ಪ ಕರ್ಚಾಗಬಹುದು ಎ೦ದ. ರಾಮಣ್ಣಗೆ ಸರಿ ಎನ್ನದೆ ವಿಧಿಯಿರಲಿಲ್ಲ. ಹೀಗೆ ಹಲವಾರು ತಿ೦ಗಳುಗಳೇ ಕಳೆದವು. ಕೈಗೆ ಸಿಗದ ನು೦ಗಣ್ಣ ಫೋನಲ್ಲಿ ಸಿಕ್ಕಿದಾಗ ಹೇಳುತ್ತಿದ್ದ ನೆವಗಳು-
" ದಾಖಲೆ ಸಿಕ್ಕಿಲ್ಲಾ"
"ನಾಳೆ ಕಟ್ಟುತ್ತೇನೆ"
ಕಟ್ಟಿದ್ದೆನೆ ನಾಳೆ ರಶೀದಿ ತರುತ್ತೇನೆ"
ಹೀಗೆ ಹಲವಾರು ತಿ೦ಗಳುಗಳೇ ಸೇರಿ ವರ್ಷಗಳಾದವು. ಈ ನಡುವೆ ಮುನಿಸಿಪಾಲಿಟಿಯವರು ನೀರಿನ ಕರ ಕಟ್ಟದ್ದಕ್ಕೆ ಸ೦ಪರ್ಕ ಕಡಿಯಲು ಬ೦ದರು- ಆಗ ರಾಮಣ್ಣ ದ೦ಡ ಸಹಿತ ಬಾಕಿ ಪಾವತಿಸಿ ಸ೦ಪರ್ಕ ಕಡಿತ ತಪ್ಪಿಸಿಕೊ೦ಡ. ಜೊತೆಗೆ ಇನ್ನು ಆಸ್ತಿ ಕರ ದ ತೊ೦ದರೆಯಾಗಬಾರದೆ೦ದು ಅದನ್ನು ನೇರ ಕಟ್ಟಿದ. ಇನ್ನು ಉಳಿದದ್ದು ನು೦ಗಣ್ಣನಿ೦ದ ಹಣ ಹಣ ವಾಪಸ್ ಪಡೆಯುವದು.
ಸಿಕ್ಕಾಗ, ಹುಡುಕಿ ಹಿಡಿದಾಗ, ಜಂಗಮವಾಣಿಯಲ್ಲಿ ಪದೇ ಪದೇ ರಿಂಗಣಿಸಿ -ವಿಚಾರಿಸಿದಾಗ ನುಂಗಣ್ಣನದ್ದು ಒಂದೇ ಸ್ವರ !
"ನಾಳೆ-ನಾಡಿದ್ದು "
ಕಡೆಗೆ ಜಂಗಮವಾಣಿಯ ಕರೆ ತೆಗೆದುಕೊಳ್ಳುವದನ್ನೇ ಬಿಟ್ಟ.....
ರಾಮಣ್ಣನು ಹಟವಾದಿ..
"ಕೊಡುವದು ಆಗುತ್ತೋ ಇಲ್ಲವೋ?" ಎಂದ
"ಆಗೋಲ್ಲಾ ಏನು ಮಾಡ್ತಿಯಾ - ಏನು ಮಹಾ ಕೋಟ್ಯಾಂತರ ರುಪಾಯಿ ಕೊಟ್ಟವರ ಹಾಗೆ ಬೆನ್ನು ಹತ್ತಿದ್ದಿಯಾ -ಇಷ್ಟು ದಿನ ಕೊಡದೆ ಹೀಗೆ ಸತಾಯಿಸಿದರೂ, ಇನ್ನು ಇವನು ಕೊಡುವದಿಲ್ಲ- ಎಂದು ತಿಳಿದುಕೊಂಡು ಕೇಳುವದನ್ನ ಬಿಡುತ್ತಿಯಾ ಎಂದರೆ, ಪದೇ ಪದೇ ಕೋಟ್ಯಾಂತರ ದುಡ್ಡು ಕೊಟ್ಟವನ ಹಾಗೆ ಕೇಳ್ತಿಯಲ್ಲಾ ಸ್ವಲ್ಪವು ಸಾಮಾನ್ಯ ಜ್ಞಾನ ಇಲ್ಲವಾ !! " ಅಂಥಾ ದಬಾಯಿಸೋದ ಭಂಡ ನುಂಗಣ್ಣ.
ಈ ಉತ್ತರವನ್ನ ನೀರಿಕ್ಸಿಸದೆ ಇದ್ದ ರಾಮಣ್ಣಗೆ ಕೆನ್ನೆಗೆ ಬಾರಿಸಿದಂತಿತ್ತು....
" ಐದು ಅಂಕಿ ಸಂಬಳ ತಗೊಳ್ಲ್ಲೋ ನೀನು ಜುಜುಬಿ ೨೦೦೦ ರೂಪಾಯಿಗೆ ಒಳ್ಳೆ ಶನಿ ಬೆನ್ನು ಹತ್ತಿದ ಹಾಗೆ ಕಳೆದ ಒಂದು ವರ್ಷದಿಂದ ಸತಾಯಿಸ್ತಾ ಇದ್ದಿಯಾ... ಸ್ವಲ್ಪವು ಅರ್ಥ ಆಗೋಲ್ವಾ .... ಇಷ್ಟು ದಿನ ಕೊಡದೆ ಇದ್ದದ್ದು ನೋಡಿ ಸೂಕ್ಷ್ಮವಾಗಿ, ಇವನು ಕೊಡೋನಲ್ಲ ಅನ್ಕೊಂಡು, ಹೋಗಲಿ ಬಿಡು, ಎಂದು ತೆಪ್ಪಗಿರೋದು ಬಿಟ್ಟು ಪದೇ ಪದೇ ಕೇಳ್ತಿಯಲ್ಲಾ ನಾಚಿಕೆ ಆಗಲ್ವಾ.. " ಮತ್ತೆ ದಬಾಯಿಸಿದ.
ಅಲ್ಲಿವರೆಗೆ ಸಾರ್ ಎಂದು ಮಾತಾಡುತ್ತಿದ್ದ ನುಂಗಣ್ಣ ಈ ತರ ಏಕವಚನದಲ್ಲಿ ಅದು ಈ ರೀತಿ ದಬಾಯಿಸೋದನ್ನ ಕಲ್ಪಿಸದ ರಾಮಣ್ಣಗೆ ಆಘಾತವಾಗಿತ್ತು.
"ನೀ ನನ್ನ ಹಣ ಕೊಡದಿದ್ದರೂ ಸರಿ ಈ ರೀತಿ ಏಕವಚನದಲ್ಲಿ ಮಾತಾಡೋದು ತಪ್ಪು ಅಲ್ಲದೆ ಪದೇ ಪದೇ ನಾಳೆ ಎಂದು ಹೇಳುವ ಬದಲು ಮೊದಲೇ ಹೇಳಬೇಕಿತ್ತು " ಅಂಥಾ ತಡವರಿಸುತ್ತಾ ಅವನಿಗೆ ಏನು ಉತ್ತರಿಸಬೇಕು ಎಂದು ತಿಳಿಯದೆ ರಾಮಣ್ಣ ತೊದಲಿದ.
" ಅಯ್ಯಿತು ಸಾರ ನಿಮ್ಮ ಹಣ ಅಷ್ಟೆ ಅದು ಬರೋಲ್ಲ ಸುಮ್ಮನೆ ಹೋಗಿ" ಎಂದು ಮರ್ಯಾದೆಯಲ್ಲಿ ಹೇಳಿದ ನುಂಗಣ್ಣ.
ಸಧ್ಯ ಮರ್ಯಾದೆ ಸಿಕ್ಕಿತಲ್ಲ ಹಣ ಹೋದರೂ ಸಹಾ ಎಂದು ಸಮಾಧಾನಿಸುತ್ತಾ ರಾಮಣ್ಣ ಅಲ್ಲಿಂದ ಕಾಲ್ಕಿತ್ತಿದ್ದ.
ಈಗ ಕೆಲವು ದಿನಗಳಿಂದ ನುಂಗಣ್ಣನಹೊಸ ಮಹಡಿ ಮನೆ ಕಟ್ಟಡ ಭರದಿಂದ ಏರುತ್ತಿದೆ.
ರಾಮಣ್ಣ ಆ ಮನೆ ಮುಂದೆ ತಿರುಗಾಡುವಾಗ ಮನದಲ್ಲೇ ಅಂದುಕೊಳ್ಳುತ್ತಾನೆ "ಈ ಕಟ್ಟಡದಲ್ಲಿ ನನ್ನದು ಸ್ವಲ್ಪ ಅಳಿಲು ಸೇವೆ ಇದೆ ಹಾಗೂ ನನ್ನಂತವರ ಅಳಲಿದೆ"
ರಾಮಣ್ಣನಂತಹವರು ಹಲವಾರು ಜನವು ಹೀಗೆ ಅಂದುಕೊಂಡಿರಬಹುದು ಅಲ್ಲಿ ತಿರುಗಾಡುವಾಗ.
ನುಂಗಣ್ಣನಿಗೆ ಅದರ ಪರಿವೆ ಇಲ್ಲ!!
"ಸಾರ್ ನನ್ನ ಮನೆ ಗ್ರಹ ಪ್ರವೇಶಕ್ಕೆ ಬರಬೇಕು -ಉಟಕ್ಕೆ ತಪ್ಪಿಸಬಾರದು -ಅಕ್ಕವ್ರನ್ನು ಕರೆತರಬೇಕು" ನುಂಗಣ್ಣನ ಆಗ್ರಹ ರಾಮಣ್ಣಗೆ.
ರಾಮಣ್ಣ ಅಂದುಕೊಂಡಿದ್ದು- "ಬಹುಶಃ ನುಂಗಣ್ಣನಿಗೆ ಮನದಲ್ಲೆಲ್ಲೋ ಪಶ್ಚಾತಾಪವಿರಬೇಕು ನನ್ನ ಹಣ ಮುಳುಗಿಸಿದ ಬಗ್ಗೆ ಅದಕ್ಕೆ ಕರೆಯುತ್ತಿದ್ದಾನೆ ಎಂದು"
ನುಂಗಣ್ಣ ಅಂದುಕೊಡದ್ದೇ ಬೇರೆ ಲೆಕ್ಕಾಚಾರ " ರಾಮಣ್ಣನಂತಾ ಜನ ಸಮಾರಂಭಕ್ಕೆ ಬಂದರೆ ಒಳ್ಳೆ ಉಡುಗೊರೆ ಜೊತೆ ಅವನ ತೂಕವು ಹೆಚ್ಚುತ್ತೆ ಹೀಗೆ ತೂಕ ಹೆಚ್ಚಿದರೆ ಹೊಸ ಬಕರಾಗಳನ್ನು ಹಿಡಿಯಬಹುದು ಅಥವಾ ರಾಮಣ್ಣನೆ ಹಳೆಯದನ್ನ ಮರೆತು ಇನ್ನೊಮ್ಮೆ ಬಕರಾ ಆಗಬಹುದು "

Friday, August 20, 2010

ಸಮಾವೇಶಗಳು - ಸಾರ್ವಜನಿಕರು



ನಿನ್ನೆ ರಾತ್ರಿ ಗೋವೆಯಿಂದ ಹಿಂದುರಿಗಿ ಬರುತ್ತಾ ಇದ್ದೆ -ನೂರಾರು ಖಾಲಿ ಬಸ್ಸುಗಳು ಬಿಜಾಪುರ-ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಇತರೇ ಭಾಗದಿಂದ ಹೊಸಪೇಟೆ ಗಡಿ ನುಗ್ಗುತ್ತಾ ಇದ್ದವು. ಯಾಕೆಂದು ಯೋಚಿಸುತ್ತಿದ್ದೆ. ಕೆಲವು ಬಸ್ಸುಗಳ ಮೇಲೆ ಅರೋಗ್ಯ ಶಿಬಿರದ ಫಲಕಗಳಿದ್ದವು. ಆರೋಗ್ಯ ಶಿಬಿರ ಇದೆಯೇನೋ ಅಂದುಕೊಂಡೆ. ಇಡೀ ಹೊಸಪೇಟೆ ಊರಲ್ಲಿ ಎಲ್ಲೆಂದರಲ್ಲಿ ಅಲ್ಲಿ ಬಸ್ಸುಗಳು ನಿಂತಿದ್ದವು. ಸುತ್ತಲ್ಲಿನ ಎಲ್ಲ ಊರು-ಕೇರಿಗಳಲ್ಲಿ ಹೀಗೆ ಬಸ್ಸುಗಳು ನಿಂತಿದ್ದವು.
ಬೆಳಿಗ್ಗೆಯಂತೂ ಸಂದಿ ಗೊಂದಿಗಳಲ್ಲಿ ಚಾಲಕರು ಕಷ್ಠ ಪಟ್ಟು ಬಸ್ಸುಗಳನ್ನು ತಂದಿದ್ದು, ದಲ್ಲಾಳಿಗಳು ಜನರನ್ನು ತುಂಬಿಸಿ ಕರೆದೊಯ್ಯಲು ಮನವೊಲಿಸಿ ಒಯ್ಯಲು ಚರ್ಚೆ/ಚೌಕಾಶಿ ನಡೆಸುತ್ತಿದ್ದರು.

ಬಸ್ಸಿಗೆ ರೂ.೨೫೦೦೦/-ದಂತೆ ದಲ್ಲಾಳಿಗಳು ತೆಗೆದುಕೊಂಡು ಬಂದು ಜನರಿಗೆ ಹಂಚಿ ಬಸ್ಸು ತುಂಬಿಸುತ್ತಿದ್ದರು. ಬಸ್ಸುಗಳು ಹಲವು ರಾಜಕೀಯ ಕಾರ್ಯಕರ್ತರ ಮೇಲುಸ್ತುವಾರಿಯಲ್ಲಿ ಜನರನ್ನು ಬಳ್ಳಾರಿಯಲ್ಲಿ ನಡೆವ ಸಮಾವೇಶಕ್ಕೆ ಕರೆದೊಯ್ಯಲು ಬಂದಿದ್ದು!
ಖಾಲಿ ಖಾಲಿ ಬಸ್ಸುಗಳು ತುಂಬಿದವು. ೩೦೦ ರೂ ನಿಂದ ೫೦೦ರೂಪಡೆದ ಜನ ಊಟ, ತಿಂಡಿ, ಎಲ್ಲ ಖರ್ಚನ್ನು ಭಾರಿಸಿದ ಪಕ್ಷದ ಸಾಧನೆಯ ಸಮಾವೇಶಕ್ಕೆ ಮತ್ತು ವರಮಹಾಲಕ್ಷ್ಮಿ ಪೂಜೆಗೆ ಬಂದ ಭಾವಿ ಭಾರತದ ಪ್ರಧಾನಿ ಕನಸು ಕಾಣುತ್ತಿರುವ, ಸುಷ್ಮಾ ಸ್ವರಾಜರವರ ಬಳ್ಳಾರಿ ಭೇಟಿಯ ಸಂಧರ್ಭದಲ್ಲಿ ಮಾಡಬೇಕಿದ್ದ ಪಕ್ಷದ ಸಾಧನ ಸಮಾವೇಶದ ಭಾಷಣ ಆಲಿಸಲು ಜಮಾಗೊಳ್ಳುತ್ತಿದ್ದರು.
ಮೊನ್ನೆ ನಡೆದ ಕಾಂಗ್ರೆಸಿಗರ ಸಮಾವೇಶದ ಆರುಪಟ್ಟು ಜನರನ್ನು ಸೇರಿಸುವ ಸಂಕಲ್ಪದಲ್ಲಿ ರೆಡ್ಡಿಯವರು ಗಣಿಧನವನ್ನ ಪಣಕ್ಕಿಟ್ಟಿದ್ದರು.

ಇನ್ನೊಂದು ಕಡೆ ಬಸ್ಸಿಲ್ಲದೆ ಊರಿಂದ ಊರಿಗೆ ಹೋಗಬೇಕಾದ ಪ್ರಯಾಣಿಕರ ಪಾಡು, ಅವರನ್ನು ಸಂತೈಸುವಲ್ಲಿ ವಿಫಲರಾದ ಬಸ್ಸ ನಿಯಂತ್ರಣಾಧಿಕಾರಿಗಳು, ಹತಾಶಜನ, ಮಧ್ಯ ಸಿಕ್ಕಿ ಹಾಕಿಕೊಂಡ ಜನ, ಸಂಚಾರ ನಿಯ೦ತ್ರಣದಲ್ಲಿ ಹುಚ್ಚರಾಗದೆ ಉಳಿದ ಸಂಚಾರಿ ಪೊಲೀಸರು, ಜನರನ್ನು ನಿಯಂತ್ರಿಸುವಲ್ಲಿ ಹೈರಣಾದ ಪೊಲೀಸರು, ಬರುತ್ತಿರುವ ಮಂತ್ರಿ-ತಂತ್ರಿಗಳನ್ನು ಬರಮಾಡಿ ಕೊಳ್ಳುವದರಲ್ಲಿ ಸುಸ್ತಾದ ಜಿಲ್ಲಾ ಅಧಿಕಾರ ವರ್ಗ, ಊಟ-ತಿಂಡಿಗೆ ಹೋಟೆಲ್ ಅವಲಂಬಿಸಿದ ಜನ ಆಹಾರಕ್ಕೆ ಪರದಾಡುತ್ತಿದ್ದದ್ದು, ಇಂದು ಕಣ್ಣಿಗೆ ರಾಚುತ್ತಿತ್ತು.
ಸಂಜೆ ಎಲ್ಲ ಬಸ್ಸುಗಳು ಜನರನ್ನು ಹಿಂದೆ ತಂದು ಬಿಡುತ್ತಿದ್ದವು. ಏಕಮುಖ-ದ್ವಿಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಸಂಚರಿಸುವ ಈ ಬಸ್ಸುಗಳನ್ನು ಹತಾಶೆಯಲ್ಲಿ ನೋಡುತ್ತಿದ್ದ ಸಂಚಾರಿ ಪೊಲೀಸರು.

ಈ ಎಲ್ಲ ಗೊಂದಲಗಳಲ್ಲಿ ಹೆಚ್ಚಿನ ಸಾಮಾನ್ಯ ಮತ್ತು ಕದುಬದವಜನ ಊಟ-ತಿಂಡಿ-ಇತರೇ ಜೊತೆಗೆ ೩೦೦-೫೦೦ ರುಪಾಯಿ ದುಡಿದದ್ದು ಒಂದು ವಿಶೇಷವೇ! ಅವರು ಹೊಟ್ಟೆಹೊರೆಯಲು ಇಡೀ ದಿನ ದುಡಿದರು ೧೦೦ರೂ ಸಿಗುವದು ಕಷ್ಟ. ಅನ್ಥದುರಲ್ಲಿ ಈ ದುಡಿಮೆ ಒಂದು ವಿಶೇಷವೇ!
ಒಮ್ಮೆ ಅನಿಸಿತು ಈ ಸಮಾವೇಶದಿಂದ ಕೆಲವು ಜನರಿಗೆ ತೊಂದರೆ ಆದರು ಕೆಲವು ಜನರಿಗೆ ಅಯಾಚಿತ ದುಡಿಮೆಯೂ ಆಯಿತಲ್ಲವೇ. ಆದರೆ ನೋವಿನ ಸಂಗತಿ ಎಂದರೆ ಈ ಮುಗ್ದಜನರ ಬದುಕಿನ ಅವಶ್ಯಕತೆಯನ್ನು ತಮ್ಮ ರಾಜಕೀಯ ಸಂಖ್ಯಾಬಲ ತೋರಿಸುವಲ್ಲಿ ಅವರನ್ನು ಉಪಯೋಗಿಸಿದ್ದು ಮತ್ತು ಜನರನ್ನು ಕುರಿಯಂತೆ ತಂದು ಪ್ರದರ್ಶಿಸಿದ್ದು.
ಅಂದು ಕಾಂಗ್ರೆಸ್ಸಿಗರು, ಇಂದು ಬಿಜೆಪಿಯವರು ಮತ್ತೆ ನಾಳೆ ದಳದವರು. ಹೀಗೆ ಒಬ್ಬರ ನಂತರ ಇನ್ನೊಬ್ಬರು. ಮೊನ್ನೆ ಸರಕಾರದ ಸಾಧನೆ ಏನು ಇಲ್ಲ ಎಂದು ಪ್ರತಿಭಟಿಸಿದ ವಿರೋಧ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ ಜನವೇ ಇಂದು ಸರಕಾರದ ಸಾಧನೆ ಘನ೦ದಾರಿಯದು ಎನ್ನುವರ ಜೊತೆ ಇದ್ದರು!
ಅವರಿಗೆ ಸಮಾವೇಶ ಯಾರು ಮಾಡಿದರೇನು ? ಯಾತಕ್ಕಾದರೂ ಮಾಡಿದರೇನು! ಸುಲಭದಲ್ಲಿ ತುತ್ತಿನ ಚೀಲ ತುಂಬಬೇಕಿತ್ತು! ಜೊತೆಗೆ ಮನೋರಂಜನೆಯು ಇತ್ತಲ್ಲವೇ!

ಜನ ಮರುಳೋ! ಜಾತ್ರೆ ಮರುಳೋ!

ಸಮಾವೇಶಗಳು ತಮಾಷೆಗಳಾಗುತ್ತಿವೆ, ಮಾನವೀಯ ಮೌಲ್ಯದ ಅಣುಕುಗಳಾಗುತಿವೆ.
ಯಾಕೋ ಮನ ಉದ್ವಿಗ್ನಗೊಂಡಿದೆ.
ನಾವೆತ್ತ ಸಾಗುತ್ತಿದ್ದೇವೆ.
ಜನಕ್ಕೂ ಬೇಕಾಗಿದ್ದೇ ರಾಜಕೀಯದವರು ಮಾಡುತ್ತಿರಬಹುದು. ನಮ್ಮ ಯೋಚನೆಗಳು ಅಲ್ಪಸಂಖ್ಯಾತವೆ!

Monday, July 26, 2010

ಸಾಧನೆಯ ಹಾದಿಯಲ್ಲಿ..................



(PHOTO -P.T.USHA INDIA'S RUNNING CHAMPION Photo Source : Internet Search)

ಅದೊಂದು ರಾಷ್ಟ್ರೀಯ ಓಟದ ಸ್ಪರ್ಧೆ!!!

ಕಿಕ್ಕಿರಿದ ಕ್ರೀಡಾಂಗಣ!!

ದೇಶದ ವೇಗದ ವ್ಯಕ್ತಿಯ ಆಯ್ಕೆಯ ಹಂತದ ಸ್ಪರ್ಧೆ! ಜನ ತಮ್ಮ ತಮ್ಮ ಮೆಚ್ಚಿನ ಕ್ರೀಡಾಳುಗಳ ಹುರಿದುಂಬಿಸುತ್ತಾ, ಅವರು ಗೆಲ್ಲುವ ಕನಸಿನಲ್ಲಿ, ಸಹವೀಕ್ಷಕರೊಡನೆ ಪೈಪೋಟಿಯಲ್ಲಿ ಪಂದ್ಯಕಟ್ಟುತ್ತಾ, ಸಂಬ್ರಮಿಸುತ್ತಿದ್ದರು.

ಎಲ್ಲ ಸ್ಪರ್ಧಾಳುಗಳು ಓಟದ ತಮ್ಮ ಸುತ್ತಿನಲ್ಲಿ ಓಡಲು ತಯಾರಾಗಿ ನಿಂತಿದ್ದು, ಪಂದ್ಯ ನಿರ್ಣಾಯಕರ ಓಟದ ಆದೇಶಕ್ಕೆ ಕಾಯುತ್ತಿದ್ದರು.

ನಿರ್ಣಾಯಕರ ರೆಡಿ,ಸೆಟ್,ಗೋ-ದೊಂದಿಗೆ ಮೊಳಗಿದ ಬಂದೂಕಿನ ಶಬ್ದಕ್ಕೆ ಓಟಗಾರರು ನಾಗಾಲೋಟದಲ್ಲಿ ಸ್ಪರ್ಧೆ ಪ್ರಾರಂಭಿಸಿದರು.

ಎಲ್ಲರ ಕಣ್ಣುಗಳು ಸುತ್ತಿನ ಕೊನೆಗೆ ಮುಟ್ಟಬೇಕಾದ ಗೆರೆಯ ದಾರದ ಮೇಲೆ....

ಸ್ಪರ್ಧಾಳುಗಳು ಒಬ್ಬರೊಬ್ಬರಿಗೆ ಪೈಪೋಟಿಯಲ್ಲಿ, ಅಂತಿಮ ರೇಖೆಯ ಮುಟ್ಟಲು, ತವಕದಲಿ, ಮೈಯೆಲ್ಲಿನ ಕಸುವನ್ನು ಕ್ರೋಡಿಕರಿಸುತ್ತಾ ಕಾಲುಗಳನ್ನು ಸಾಧ್ಯವಾದಷ್ಟು ನೀಳವಾಗಿ ಚಾಚಿ ಪೂರ್ಣ ವೇಗದಲ್ಲಿ ಓಡುತ್ತಿದ್ದರು....

ಅಂತಿಮ ರೇಖೆಗೆ ಮೊದಲು ಮುಟ್ಟಿದವನು ನಂಬರ ೫ ರ ಸ್ಪರ್ಧಿ, ತದನಂತರ ೮ ಅಂಕೆಯ ಸ್ಪರ್ಧಿ ಅಮೇಲೆ ೧೨ ಅ೦ಕೆಯ ಸ್ಪರ್ಧಿ.
ಈ ಮೂರು ಸ್ಪರ್ಧಾಳುಗಳು -ಪ್ರಥಮ, ದ್ವೀತಿಯ ಮತ್ತು ತೃತೀಯ ವಿಜೇತರಾಗಿ ಆಯ್ಕೆಯಾಗಿದ್ದರು!!

ಪ್ರೇಕ್ಷಕರ ಕರಡತಾನ ನಭವನ್ನ ಸೀಳಿತ್ತು....

ಅಭಿನಂದನೆಗಳ ಸುರಿಮಳೆ ವಿಜೇತರಿಗೆ ಹರಿದಿತ್ತು...

ಎಲ್ಲರ ಕಣ್ಣು ಅವರ ಮೇಲೆ...

ವಿಜೇತರು ಸಂಬ್ರಮಿಸುತ್ತಿದ್ದರು...

ಮಾಧ್ಯಮದವರ ವೀಡಿಯೊ ಕ್ಯಾಮೆರಾಗಳು ವಿಜೇತರನ್ನೇ ಸೆರೆಹಿಡಿದಿದ್ದವು!!

ಜನ ಮತ್ತು ಮಾಧ್ಯಮದವರು ಸ್ವಲ್ಪ ಆಚೀಚೆ ಕಣ್ಣು ಹಾಯಿಸಿದಾಗ ಅಲ್ಲಿ ಇನ್ನೂ ಮೂವರು ಸ್ಪರ್ಧಿಗಳು ಸ್ವಲ್ಪ ದೂರದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಾ ಕಿರಿಚಾಡುತ್ತಾ ಸಂಬ್ರಮಿಸುತ್ತಿದ್ದರು...

ಗೆಲ್ಲದ ಅವರ ಸಂಬ್ರಮವೇಕೆ??? ಎಂದು ಎಲ್ಲರಿಗೂ ಆಶ್ಚರ್ಯ....

ಮಾಧ್ಯಮದವರಿಗೂ ಕುತೂಹಲ ಸೀದಾ ಹೋಗಿ ಅವರಿಗೆ ಕೇಳಿದರು "ಸ್ಪರ್ಧೆಯಲ್ಲಿ ಗೆಲ್ಲದ ನೀವೇಕೆ ಸಂಬ್ರಮಿಸುತ್ತಿರುವಿರಿ?" ಎಂದು.

ಮೊದಲನೇಯವ ಹೇಳಿದ - "ನನ್ನ ಜೀವನದಲ್ಲಿ ನಾನು ರಾಷ್ಟ್ರೀಯ ಓಟದ ಸ್ಫರ್ಧೆಯಲ್ಲಿ ಭಾಗವಹಿಸಬೇಕೆಂಬ ನನ್ನ ಗುರಿ ಇಂದು ನೆರವೇರಿದೆ. ಅದಕ್ಕಾಗಿ ಸಂಬ್ರಮಿಸುತ್ತಿದ್ದೆ"

ಎರಡನೆಯವ ಹೇಳಿದ - "ನಾನು ರಾಷ್ಟ್ರೀಯ ಓಟದಲ್ಲಿ ಓಟದ ಸುತ್ತನ್ನು ಯಾವಾಗಲು ಪುರ್ಣಗೊಳಿಸಲಾಗುತ್ತಿರಲಿಲ್ಲ ಇಂದು ಪುರ್ಣಗೊಳಿಸಿದೆ, ಅದಕ್ಕಾಗಿ ಸಂಬ್ರಮಿಸುತ್ತಿದ್ದೆನೆ"

ಮೂರನೇಯವ ಹೇಳಿದ -ನಾನು ಕಳೆದ ಸರ್ತಿ ಒಂದು ಸುತ್ತು ಹಾಕಲು ತೆಗೆದುಕೊಂಡ ಸಮಯಕ್ಕಿಂತಾ ಕಡಿಮೆ ಸಮಯದಲ್ಲಿ ಸುತ್ತು ಪೂರ್ಣ ಮಾಡಬೇಕೆಂದು ಸಂಕಲ್ಪಿಸಿದ್ದೆ ಅದನ್ನು ಇಂದು ಸಾಧಿಸಿದೆ ಅದಕ್ಕಾಗಿ ಸಂಬ್ರಮಿಸುತ್ತಿದ್ದೇನೆ"

ಈ ಮೂರೂ ಜನರ ಸಾಧನೆಯ ಹಾದಿಯ ಮೆಟ್ಟಿಲನ್ನು ಸುಲಭವಾಗಿ ನಮಗೆ ನೀಡಿದ್ದಾರೆ.

ಏನಾದರು ನಾವು ಸಾಧಿಸಿ ತೋರಬೇಕಿದ್ದಲ್ಲಿ ಮೂರೂ ಹಂತದ ಪರಿಶ್ರಮ ಅವಶ್ಯ!

ಮೊದಲಿಗೆ ನಮ್ಮನ್ನು ಸಾಧನೆಯ ಹಾದಿಯಲ್ಲಿ ತೊಡಗಿಸಿಕೊಳ್ಳಬೇಕು! (To get participation)

ಎರಡನೆಯದಾಗಿ ನಾವು ಸಾಧನೆಯ ಸಾಮಾನ್ಯ ಗುರಿ ತಲುಪಬೇಕು. (To meet the standards required)

ಮೂರನೆಯದಾಗಿ ನಿರ೦ತರ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧನೆಯಲ್ಲಿ ಸಾಧಿಸಬೇಕು!(Continual improvement by self competition -upgrading the achievement standards continually)

ಯಾವಾಗ ನಾವು, ನಮ್ಮೊಂದಿಗಿನ ಪೈಪೋಟಿಯಲ್ಲಿ, ನಮ್ಮ ಹಿಂದಿನ ದಾಖಲೆಗಳನ್ನ ಮುರಿಯುತ್ತಾ, ಪ್ರತಿ ಹಂತದಲ್ಲೂ ಮುಂದುವರೆದಾಗ, ಒಂದು ದಿನ ನಾವು ಪೈಪೋಟಿಯಲ್ಲಿ ಎಲ್ಲರನ್ನು ಮೀರಿ ಮುಂಚೂಣಿಯಲ್ಲಿರುತ್ತೇವೆ ಮತ್ತು ಆಗ ನಾವು ಇತರರೊಂದಿಗೆ ಸ್ಪರ್ಧೆಯಲ್ಲಿ ವಿಜೇತರಾಗುತ್ತೇವೆ.

ಸಾಧಕರು ಹೊಸದನ್ನು ಮಾಡುವದಿಲ್ಲ ಆದರೆ ಹೊಸವಿಧಾನದಲ್ಲಿ ಅಥವಾ ಹೊಸ ಅಳತೆಗೋಲಿನಲ್ಲಿ ಸಾಧನೆ ನಿರ್ಮಿಸುತ್ತಾರೆ.

ಆದರೆ ಸಾಧನೆಯ ಎಲ್ಲ ಹಂತದಲ್ಲೂ ಸಂಬ್ರಮಿಸಬೇಕು. ಸಾಧನೆಯ ಹೆಜ್ಜೆ ಹೆಜ್ಜೆಯು ವಿಶಿಷ್ಟವಾಗಿರಬೇಕು ಮತ್ತು ನಮ್ಮ ಹಳೆಯ ಅಳತೆಯನ್ನು ಮೀರಬೇಕು ಅಂದರೆ ನಿರಂತರ ಪ್ರಗತಿಯಿರಬೇಕು.
ಪ್ರತಿ ಹಂತದಲ್ಲು ನಮ್ಮ ಸಾಧನೆಯನ್ನು ಅನುಭವಿಸಿ ಸಂಬ್ರಮಿಸಬೇಕು ಮತ್ತು ಮುಂದಿನ ಪ್ರಯತ್ನದಲ್ಲಿ ಹೊಸದನ್ನು ಅಥವಾ ಹೊಸ ಮಟ್ಟದಲ್ಲಿ ಮಾಡಲು ಪಣ ತೊಡಬೇಕು!


"WINNERS DON'T DO DIFFERENT THINGS BUT DO THINGS DIFFERENTLY" -SHIVA KHER

(THE PERCEIVED KNOWLEDGE FROM LMI'S -EFFECTIVE PERSONAL PRODUCTIVITY COURSE)

Friday, June 25, 2010

ಪ್ರಜಾಪ್ರಭುತ್ವದ ಅವಸಾನ

ಮನ ಯಾಕೋ ವಿಶಣ್ಣವಾಗಿದೆ.....

ದಕ್ಷ ಅಧಿಕಾರಿಗಳು- ಅದು ನಮ್ಮ ಬ್ರಷ್ವ ವ್ಯವಸ್ಥೆಗೆ ಸಡ್ಡು ಹೊಡೆದು ಕೆಲಸ ಮಾಡುವಂಥವರು- ಅಸಹಾಯಕರಾಗಿ ನಮ್ಮ ರಾಜಕೀಯ ನಾಯಕರ ಸ್ವಹಿತಾಸಕ್ತಿಗೆ ಮತ್ತು ರಾಜಕೀಯದ ಹೊಲಸಾಟಕ್ಕೆ ರೋಸಿ ರಾಜಿನಾಮೆ ನೀಡುವಂಥಾ ಆತ್ಮಹತ್ಯೆ ಪ್ರವೃತ್ತಿಗೆ ಇಳಿಯಬೇಕಾದ ಅನಿವಾರ್ಯತೆ ಕಂಡು.

ನಿರ್ಧಾಕ್ಷಿಣ್ಯವಾಗಿ ಬ್ರಷ್ಟ ಅಧಿಕಾರಿಗಳನ್ನು, ಕಬ್ಬಿಣ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಆಕ್ರಮಗಳನ್ನು ಮತ್ತು, ಕಳ್ಳ ಅದಿರು ಸಾಗಾಣಿಕೆಯನ್ನು ಮೂಲ ಸಮವಾಗಿ ಶೋಧಿಸಿ ಕಿತ್ತೆಸೆಯಲು, ಎಲ್ಲ ವೈರುಧ್ಧ್ಯಗಳ ನಡುವೆಯೂ, ಬಿಡದೇ ಹೋರಾಟ ನಡೆಸಿದ ದಿಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ, ರಾಜೀನಾಮೆಯಿ೦ದಾಗಿ ಮನ ಪ್ರಕ್ಶುಬ್ದವಾಗಿದೆ.
ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ.

ಇಲ್ಲಿ ಪ್ರಜೆಗಳಿ೦ದ ಆರಿಸಲ್ಪಟ್ಟ ಪ್ರಜಾಸೇವಕರೆ, ಮಧಾ೦ಧ ದೊರೆಗಳ೦ತೆ ವರ್ತಿಸಿ, ತಮ್ಮ ಹಿತಾಸಕ್ತಿಗೆ ಅಧಿಕಾರಿಗಳನ್ನು ಬ್ರಷ್ಟರನ್ನಾಗಿಸುವ ಅನಿವಾರ್ಯತೆಗೆಳೆದು ಮತ್ತು ಬ್ರಷ್ಟತೆಯನ್ನು ಮಟ್ಟಹಾಕೆಲೆತ್ನಿಸುತ್ತಿರುವ ದಕ್ಷರು ವ್ಯವಸ್ಥೆಯನ್ನು ಬಿಟ್ಟೋಡುವ೦ತಾ ಅನಿವಾರ್ಯ ಪರಿಸ್ಥಿತಿ ಉಂಟು ಮಾಡುತ್ತಿರುವದ ಕ೦ಡಾಗ ಮನ ಸಿಡಿದೇಳುತ್ತದೆ.

ಸಂತೋಷ ಹೆಗಡೆಯವರು ಸಾರಾಸಗಟ ಸುಲಭದಲ್ಲಿ ಬೆನ್ನು ಕೊಟ್ಟು ಹೋಗುವರಲ್ಲ!!

ಅವರು, ಅವರೊಡನೆ ದಕ್ಷ ಅರಣ್ಯ ಅಧಿಕಾರಿ ಯೂ.ವಿ.ಸಿಂಗ್ ರು ಮಾಡಿದ ದಿಟ್ಟ ಹೋರಾಟದಲ್ಲಿ ಎಲ್ಲ ಗಣಿಗಾರಿಕೆಯ ಆಕ್ರಮಗಳು ಹೊರಬಿದ್ದಿದ್ದವು. ಇದರಲ್ಲಿ ನಿಷ್ಪಕ್ಷಪಾತ ವರದಿ ಇತ್ತು. ಈ ವರದಿಯಲ್ಲಿನ ತಪ್ಪಿತಸ್ಥರಲ್ಲಿ- ಬರೀ ಜನರಾಗಲಿ, ಗಣಿಧಣಿಗಳಾಗಲಿ ಇರಲಿಲ್ಲ ಅದರಲ್ಲಿ ಎಲ್ಲ ಅಧಿಕಾರಿಗಳು ಮತ್ತು ಎಲ್ಲ ರಾಜಕೀಯ ಪಕ್ಷದ ವ್ಯಕ್ತಿಗಳಿದ್ದರು.

ಅದೊ೦ದು ಪರಿಪೂರ್ಣ ವರದಿಯೆ೦ದು ಸರ್ವೋಚ್ಚ ನ್ಯಾಯಾಲಯವೇ ಪ್ರಶಂಶಿಸಿತ್ತು.

ಆದರೇ ಆ ವರದಿಯ ಮೇಲೆ ಕ್ರಮ ಕೈಗೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ರಾಜಕೀಯ ನಾಯಕರುಗಳಿಗೆ ಇರಲಿಲ್ಲ!

ಅದನ್ನು ತೆಗೆದು ನೋಡಲಿಲ್ಲ!

ಇಷ್ಟಕ್ಕೇ ನಿಲ್ಲಲಿಲ್ಲ ಅದು ಹಣ ಮಾಡುವ ಸಾಧನ ಆಯಿತು!

ಇನ್ನು ಅದು ತಮ್ಮ ಬುಡಕ್ಕೆ ಬಂದಾಗ ಅದಕ್ಕೆ ಕಾರಣರಾಗುವವರನ್ನೇ ಹತ್ತಿಕ್ಕುವ ಪ್ರಯತ್ನಗಳು ನಡೆದವು!

ಅದರ ಫಲವೇ ಹೆಗಡೆಯವರ ರಾಜಿನಾಮೆ!

ಇಂತಹ ಘಟಾನುಗಟಿಯೇ ರಾಜಿನಾಮೆ ನೀಡುವಂಥಾ ಪರಿಸ್ಥಿತಿ ಉಂಟಾಗಿದೆಯೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವವಿದೆಯೇ?

ಐದು ವರ್ಷಕ್ಕೊಮ್ಮೆ ಹಣ-ಹೆಂಡ-ಸೀರೆಗೆ ಓಟನ್ನು ನಮ್ಮ ಸ್ವಾರ್ಥಕ್ಕೆ, ಯಾವದೋ ಇನ್ನೊಬ್ಬ ಮಹಾಸ್ವಾರ್ಥಿಗೆ ಕೊಟ್ಟು ಐದು ವರ್ಷ ಬವಣೆ ಪಡುವದನ್ನು ಅನುಭವಿಸುವದಕ್ಕಾಗಿ, ನಮ್ಮ ವ್ಯವಸ್ಥೆಯನ್ನೂ ಪ್ರಜಾಪ್ರಭುತ್ವವೆನ್ನಬೇಕೆ?

ನಾವೆತ್ತ ಸಾಗುತ್ತಿದ್ದೇವೆ??

ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ!!!!!

Saturday, June 5, 2010

ಇ೦ದು ವಿಶ್ವ ಪರಿಸರದ ದಿನಾಚರಣೆ.




ಇ೦ದು ವಿಶ್ವ ಪರಿಸರದ ದಿನಾಚರಣೆ.
ಈ ಸ೦ಧರ್ಭದಲ್ಲಿ ಇದರ ವಿಶಿಷ್ಠತೆಯನ್ನು ನಾನು ಇಲ್ಲಿ ಪರಿಚಯಪಡಿಸಲು ಬಯಸುತ್ತೆನೆ.

೧೯೭೨ ಜೂನ್ ೫ ರಿ೦ದ ೧೬ ರ ವರೆಗೆ ಸ್ವೀಡನ್ ನ ಸ್ಟಾಕ್-ಹೋ೦ ನಲ್ಲಿ ನಡೆದ ವಿಶ್ವಸ೦ಸ್ಥೆಯ (UN) ಮಾನವ ಪರಿಸರದ (Human Environment) ಮೇಲಿನ ಸಭೆಯ ಪರಿಣಾಮವಾಗಿ ವಿಶ್ವಸ೦ಸ್ಥೆಯ ಪರಿಸರ ಕಾರ್ಯಕ್ರಮ (ಯುನೆಪ್-ಯು.ಎನ್.ಈ.ಪಿ.) (United Nations Environment Programmes-UNEP) - ಸಹ ಅ೦ಗ ಸ೦ಸ್ಥೆಯನ್ನು ಹುಟ್ಟು ಹಾಕಿ, ವಿಶ್ವದಾದ್ಯ೦ತ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು, ಅದರ ಮೂಲಕ ಹಮ್ಮಿಕೊಳ್ಳುವ ನಿರ್ಧಾರ ಮಾಡಲಾಯಿತು. ಈ ವಿಶ್ವಸ೦ಸ್ಥೆಯ ಅ೦ಗಸ೦ಸ್ಥೆ ಪ್ರತಿವರ್ಷ ಜೂನ್ ೫ರ೦ದು, ವಿಶ್ವ ಪರಿಸರ ದಿನಾಚರಣೆಯನ್ನಾಗಿ, ವಿಶ್ವದಾದ್ಯ೦ತ ಆಚರಣೆಗೆ ತರಲು ನಿರ್ಧರಿಸಿತು. ಅದರ೦ತೆ ೧೯೭೩ ರಿ೦ದ ಈ ವಿಶ್ವ ಪರಿಸರ-ದಿನಾಚರಣೆ ಜಾರಿಗೆ ಬ೦ತು.
ಈ ದಿನಾಚರಣೆಯ ಉದ್ಧೇಶ ಜನರಲ್ಲಿ ಪರಿಸರ ಕಾಳಜಿಯನ್ನು೦ಟು ಮಾಡುವದು ಮತ್ತು ಪರಿಸರ ರಕ್ಷಣೆ ಅವಶ್ಯಕತೆಯ ಪ್ರಚಾರ ಹಮ್ಮಿಕೊಳ್ಳುವದು.
ಪ್ರತಿವರ್ಷ ಒ೦ದೊ೦ದು ದೇಶದಲ್ಲಿ, ಒ೦ದು ಪರಿಸರದ ವಿಷಯವನ್ನು, ಮೂಲವಾಗಿಸಿ ಆಚರಣೆಯನ್ನು ಹಮ್ಮಿಕೊಳ್ಳುತ್ತದೆ. ಮತ್ತು ಈ ವಿಷಯವನ್ನು ಪ್ರಪ೦ಚದಾದ್ಯ೦ತ ಪ್ರಚಾರಪಡಿಸಿ ಜನಜಾಗೃತಿ ಮೂಡಿಸಲಾಗುತ್ತದೆ.
ಈ ದಿನಾಚರಣೆ -ವೃಕ್ಷಗಳನ್ನು ನೆಡುವ ಮೂಲಕ, ಜಲ -ಮತ್ತು ವಾಯು ಮಾಲಿನ್ಯ ತಡೆವ ಕಾರ್ಯಕ್ರಮಗಳಿ೦ದ, ಇನ್ನು ಹಲವು ಪರಿಸರ ಆ೦ಧೋಲನಗಳಿ೦ದ ಆಚರಿಸುತ್ತಾ, ಆ ವರುಷದ ಆಚರಣೆಯ ಮುಖ್ಯ ವಿಷಯದ ಸುತ್ತಾ ಜನರಲ್ಲಿ ಜಾಗೃತಿಯು೦ಟು ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಈ ಹಿ೦ದಿನ ವಿಶ್ವ ಪರಿಸರದ ದಿನಾಚರಣೆಯ ವಿಷಯಗಳು ಮತ್ತು ಆಯೋಜಿಸಿದ ದೇಶಗಳ ಪಟ್ಟಿ ಕೆಳಗಿನ೦ತಿದೆ.
Year Theme Host city
1974 Only one Earth
1975 Human Settlements
1976 Water: Vital Resource for Life
1977 Ozone Layer Environmental Concern; Lands Loss and Soil Degradation
1978 Development Without Destruction
1979 Only One Future for Our Children - Development Without Destruction
1980 A New Challenge for the New Decade: Development Without Destruction
1981 Ground Water; Toxic Chemicals in Human Food Chains
1982 Ten Years After Stockholm (Renewal of Environmental Concerns)
1983 Managing and Disposing Hazardous Waste: Acid Rain and Energy
1984 Desertification
1985 Youth: Population and the Environment
1986 A Tree for Peace
1987 Environment and Shelter: More Than A Roof Nairobi, Kenya
1988 When People Put the Environment First, Development Will Last Bangkok, Thailand
1989 Global Warming; Global Warning Brussels, Belgium
1990 Children and the Environment Mexico City, Mexico
1991 Climate Change. Need for Global Partnership Stockolm, Sweden
1992 Only One Earth, Care and Share Rio de Janeiro, Brazil
1993 Poverty and the Environment - Breaking the Vicious Circle Beijing, People's Republic of China
1994 One Earth One Family London, United Kingdom
1995 We the Peoples: United for the Global Environment Pretoria, South Africa
1996 Our Earth, Our Habitat, Our Home Istanbul, Turkey
1997 For Life on Earth Seoul, Republic of Korea
1998 For Life on Earth - Save Our Seas Moscow, Russian Federation
1999 Our Earth - Our Future - Just Save It! Tokyo, Japan
2000 The Environment Millennium - Time to Act Adelaide, Australia
2001 Connect with the World Wide Web of Life Torino, Italy and Havana, Cuba
2002 Give Earth a Chance Shenzhen, People's Republic of China
2003 Water – Two Billion People are Dying for It! Beirut, Lebanon
2004 Wanted! Seas and Oceans – Dead or Alive? Barcelona, Spain
2005 Green Cities – Plan for the Planet! San Francisco, U.S.
2006 Deserts and Desertification - Don't Desert Drylands! Algiers, Algeria
2007 Melting Ice – a Hot Topic? Tromsø, Norway
2008 Kick The Habit - Towards A Low Carbon Economy Wellington, New Zealand
2009 Your Planet Needs You - UNite to Combat Climate Change Mexico City, Mexico
2010 Many Species. One Planet. One Future Kigali, Rwanda
ಈ ಪರಿಸರದ ದಿನಾಚರಣೆಯನ್ನು ನಮ್ಮ ಸ೦ಸ್ಥೆಯ ಗಣಿಗಳಲ್ಲಿ ಅದ್ದೂರಿಯಿ೦ದ ಶಾಲಾಮಕ್ಕಳನ್ನು ಕರೆತ೦ದು ಮರ-ಗಿಡಗಳನ್ನು ನೆಡಿಸಿ, ಅವರಿ೦ದ ಹಲವು ಚಿತ್ರ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ಆಯಾ ವರ್ಷದ ವಿಷಯದ ಬಗ್ಗೆ ಗೋಷ್ಟಿ ಆಯೋಜಿಸುವ ಮೂಲಕ ಆಚರಿಸಲಾಗುವದು. ಈ ಆಚರಣೆಯ ಸ೦ಪ್ರದಾಯ ನಮ್ಮ ಗಣಿಗಳಲ್ಲಿ ಕಳೆದ ೧೫ ವರ್ಷಗಳಿ೦ದಲೂ ಇದ್ದೂ ಈಗಾಗಲೇ ೨೦ ಲಕ್ಷ ಮರಗಳನ್ನು ನಮ್ಮ ಎಲ್ಲಾ ಗಣಿಗುತ್ತಿಗೆ ಸ್ಥಳದಲ್ಲಿ ನೆಡಲಾಗಿದೆ.


ಈ ವರ್ಷದ ವಿಷಯ- "ಹಲವಾರು ಜೀವವೈವಿಧ್ಯ, ಒ೦ದೇ ಗ್ರಹ, ಒ೦ದೇ ಭವಿಷ್ಯ"

ಇದರ ಉದ್ಧೇಶವಿಷ್ಟೇ ಮಾನವ ತಳಿ -ಮಿಲಿಯನಲ್ಲಿ ಒ೦ದು. ಅ೦ದರೇ ಭೂಮಿಯನ್ನು ಅವಲ೦ಬಿಸಿರುವ ಕೊಟ್ಯ್ಯ೦ತರ ಪ್ರಾಣಿಗಳಲ್ಲಿ ನೀನು ಕೇವಲ ಒ೦ದು. ಆದರಿ೦ದ ನಿನ್ನ ಚಟುವಟಿಕೆಗಳಿ೦ದ ಇತರ ಜೀವವೈವಿಧ್ಯಗಳಿಗೆ ತೊ೦ದರೆಯಾಗದಿರಲಿ ಎ೦ಬ ಎಚ್ಚರಿಕೆ , ಮಾನವನಿಗೆ. ನಾವಿರುವ ಭೂಮಿಯೊ೦ದೇ! ನಮಗಿರುವ ಭವಿಷ್ಯತ್ತು ಒ೦ದೇ ಆಗಿರಲಿ. ಅಳಿವ೦ಚಿನಲ್ಲಿರುವ ಲೆಕ್ಕಕ್ಕೆ ಸಿಕ್ಕ ಸುಮಾರು ೧೭೩೦೦ ಜೀವಿಗಳನ್ನು ನಾವು ಉಳಿಸುವಲ್ಲಿ ಮಹತ್ತರ ಪಾತ್ರವಹಿಸಬೇಕಾಗಿದೆ.
ವಿಜ್ಞಾನಿಗಳ ಲೆಕ್ಕಕ್ಕೆ ಇದುವರೆಗೆ ಸಿಕ್ಕ ಜೀವರಾಶಿಗಳು ೨ ಮಿಲಿಯನ್ ಮಾತ್ರ. ಒ೦ದು ಅ೦ದಾಜಿನ ಪ್ರಕಾರ ೫-೧೦ ಮಿಲಿಯನ್ ಜೀವರಾಶಿಗಳಿವೆಯ೦ತೆ.
ಮಾನವನ ಚಟುವಟಿಕೆಗಳು ಮತ್ತು ಮಾಲಿನ್ಯಗಳು ಏಷ್ಟೋ ಜೀವರಾಶಿಗಳ ಅಳಿವಿಗೆ ಕಾರಣವಾಗಿದೆ ಮತ್ತು ಆಗುತ್ತಿದೆ. ಆದ್ದರಿ೦ದ ಜೀವ ವೈವಿಧ್ಯ ಉಳಿಸುವಲ್ಲಿ ಮಾನವನಿಗೆ ಎಚ್ಚರಿಕೆ ಕರೆಗ೦ಟೆ ನೀಡಲು ಈ ವರ್ಷದ ವಿಶ್ವ ಪರಿಸರ ದಿನಾಚರಣೆಗೆ ಆಯ್ದ ವಿಷಯ " ಹಲವಾರು ಜೀವ ವೈವಿಧ್ಯ, ಒ೦ದೇ ಗ್ರಹ, ಒ೦ದೇ ಭವಿಷ್ಯ".
ಇದನ್ನು ಮನಗ೦ಡು ನಾವು ಪರಿಸರವನ್ನು ಊಳಿಸುವಲ್ಲಿ ನಮ್ಮ ಕಾರ್ಯ ಮಾಡೋಣ.
  • ಗಿಡ ಮರಗಳನ್ನು ನಮ್ಮ ಮನೆ ಸುತ್ತ ಬೆಳೆಸೋಣ
  • ಕಸಕಡ್ಡಿ ತ್ಯಾಜ್ಯಗಳನ್ನು ಎಲ್ಲೆ೦ದರಲ್ಲಿ ಹಾಕೋದ ಬಿಡೋಣ
  • ಶಬ್ದ ಮಾಲಿನ್ಯ ಕಡಿಮೆ ಮಾಡೋಣ
  • ಜಲಮಾಲಿನ್ಯ ತಡೆಯೋಣ (ನದಿ, ಭಾವಿ, ಕೆರೆ,ಕೊಳ್ಳಗಳನ್ನು ಉಳಿಸಿ ಮಾಲಿನ್ಯದಿ೦ದ ತಡೆಗಟ್ಟೋಣ)
  • ಬೇಟೆಯ೦ಥ ಮೋಜಿಗಳನ್ನು ತಡೆಗಟ್ಟೋಣ
  • ಅರಣ್ಯಗಳನ್ನು ಉಳಿಸೋಣ
  • ವಾಯುಮಾಲಿನ್ಯ ತಡೆಗಟ್ಟೋಣ (ತೈಲ/ಕಲ್ಲಿದ್ದಲು ಇ೦ಧನಗಳನ್ನು ಕಡಿಮೆ ಮಾಡಿ ಪವನಶಕ್ತಿ, ಜಲವಿಧ್ಯುತ್, ಸೌರ ಶಕ್ತಿಯನ್ನು ಆಧರಿಸೋಣ)
  • ಇನ್ನು ಏನೇನು ಸಾಧ್ಯವೋ ಅದನ್ನು ಮಾಡೋಣ
ಇದು ಈ ದಿನದ೦ದು ನಮ್ಮ ಪ್ರತಿಜ್ಞೆಯಾಗಲಿ.



ಹಸಿರೇ ಉಸಿರು!!


Link for more details on world environment day :
http://www.unep.org/wed/2010/english/theme.asp

Monday, April 5, 2010

ಬೀಳ್ಕೊಡುಗೆಯ ಕವನ

(ಫೋಟೋ ಕೃಪೆ : ಗೂಗಲ್ ಅಂತರ್ಜಾಲ ಹುಡುಕಾಟ )

ಮಿತ್ರ ವಾಮನ ಮತ್ತು ನಾನು ವಿಧ್ಯಾರ್ಥಿನಿಲಯದಲ್ಲಿ ಓದನ್ನು ಮುಗಿಸಿ, ಅಗಲುತ್ತಿರುವ ಕ್ಷಣದ ಅವನು ಬರೆದ "ಬೀಳ್ಕೊಡುಗೆ" ಕವನ.ವಾಮನ ಕುಲ್ಕರ್ಣಿಯವರ "ತೆರೆಗಳು" ಕವನ ಸ೦ಕಲನದ ಕವನ.



Wednesday, March 31, 2010

ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನದ ಪರಿಚಯ




ನನ್ನ ಆಪ್ತ ಮಿತ್ರ ವಾಮನನ "ತೆರೆಗಳು" ಕವನ ಸ೦ಕಲನ ಮೊನ್ನೆ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ದಿನಾ೦ಕ ೨೮-೦೩-೨೦೧೦ ರ೦ದು ಶ್ರೀಯುತ ಏಣಗಿ ಬಾಳಪ್ಪನವರ ಮುಖಾಂತರ ಅದಿಕೃತವಾಗಿ ಬಿಡುಗಡೆಯಾಗಿ, ಆ ಕವನ ಸ೦ಕಲನ ರಾಜ್ಯಮಟ್ಟದ "ಎಸ.ಡಿ. ಇ೦ಚಲ" (ಬೇ೦ದ್ರೆ ಸಮಕಾಲಿನರಾದ ಇ೦ಚಲರ ಹೆಸರಿನಲ್ಲಿ ಸ್ತಾಪಿತವಾದ ಪ್ರತಿಷ್ಠಾನ ಕೊಡಮಾಡುವ) ಪ್ರಶಸ್ತಿ ಪಡೆದು ಎಲ್ಲರ ಮೆಚ್ಚಿಗೆ ಪಡೆದದ್ದು ಹರುಷದ ವಿಷಯ.
ವಾಮನರ ಆ ಕವನ ಸ೦ಕಲನಕ್ಕೆ ನನ್ನ ಬೆನ್ನುಡಿ ಇತ್ತು. ಅದರಲ್ಲಿ ಪ್ರಾಸ, ನವ್ಯ, ಸುನೀತ, ಷಟ್ಪದಿ, ಹಾಗು ಮರಂದ -ವಿಭಿನ್ನ ಪ್ರಾಕಾರಗಳ ಕಾವ್ಯಗಳಿವೆ. ಪರಿಸರದ ಬೆಡಗಿದೆ, ನಾಡಿನ ವರ್ಣನೆ ಇದೆ, ಸ್ಥಳ ವಿಶೇಷ ಮತ್ತು ಪರಿಚಯಗಳಿವೆ, ಸಂಬಂಧಗಳ ಮಾಧುರ್ಯವಿದೆ, ಪರಿಸರದ ಕ್ರೌರ್ಯವಿದೆ, ಸಾಮಾಜಿಕ ಪಿಡುಗುಗಳ ವಿರುಧ್ಧದ ದನಿಯಿದೆ, ನವರಸಗಳಿವೆ.
ಮಿತ್ರ ವಾಮನನಿಗೆ ಅ೦ತರ್ಜಾಲದ ಸ೦ಪರ್ಕ ಹಾಗೂ ಅಭ್ಯಾಸವಿಲ್ಲದ್ದಕ್ಕೆ ಅವನ ಕವನಗಳ ಜೆಪಿಜಿ ಮಾದರಿಯನ್ನು ನಾನು ಅವನ ಹೆಸರಿನಲ್ಲಿ ಬ್ಲಾಗ್ ಒಂದನ್ನು ರಚಿಸಿ ಅಲ್ಲಿ ನಿಮ್ಮೆಲ್ಲರ ರಸಾಸ್ವಾದನೆಗೆ ಏರಿಸಿರುವೆ. ಓದಿ ಪ್ರತಿಕ್ರಿಯಿಸಿ.

ಅದರ ಕೊಂಡಿ : http://vamkulkarni.blogspot.com/
(ಈ ಕವನ ಸ೦ಕಲನದಲ್ಲಿನ ಎಲ್ಲ ಕವನಗಳನ್ನ ವಿ೦ಗಡಿಸಿ ವಿವಿಧ ಪೊಸ್ಟ್-ಗಳನ್ನಾಗಿಸಿ ಅ೦ತರ್ಜಾಲದಲ್ಲಿ ಏರಿಸಿದ್ದೆನೆ. ಮರ೦ದದ ಹನಿಗಳು ನನಗಿಷ್ಟವಾದ ಚೆ೦ದದ ಚುಟುಕು ಪ್ರಾಕಾರ. )

ಅವನು ತನ್ನನ್ನು ಸಕ್ರಿಯ ಅ೦ತರ್ಜಾಲದಲ್ಲಿ ತೊಡಗಿಸಿಕೊಳ್ಳದೇ ಇರುವದರಿ೦ದ, ನಾನು ಹಾಕಿದ ಅವನ ಸು೦ದರ ಕವನಗಳು, ಅ೦ತರ್ಜಾಲದಲ್ಲಿನ ಅವನ ಬ್ಲೊಗ್ನಲ್ಲಿ , ನೇಪಥ್ಯ ಸೇರದಿರಲಿ ಮತ್ತು ತಮ್ಮ೦ಥಾ ಸಹೃದಯ ಓದುಗರ ಕಣ್ಣಿಗೆ ಬೀಳದ೦ತೆ ಇರದಿರಲಿ, ಎ೦ದು ಅವುಗಳ ಪ್ರಸ್ಥಾವನೆಯನ್ನು ಇಲ್ಲಿ, ತಮಗೆ ಅವುಗಳು ಇಷ್ಟವಾಗುತ್ತದೆ೦ಬ ನ೦ಬಿಕೆಯಿ೦ದ, ಮಾಡಿರುವೆ.

ಆ ಕವನ ಸಂಕಲನದ ನನ್ನ ಬೆನ್ನುಡಿಯನ್ನು ಕವನ ಸಂಕಲನದ ಪರಿಚಯಕ್ಕೆ ಕೆಳಗೆ ನೀಡಿರುವೆ.

ನಲ್ನುಡಿ
ಮಿತ್ರ ವಾಮನರ ಕವನ ಸ೦ಕಲನ ಎಲ್ಲ ಒಡನಾಡಿಗಳ ಒತ್ತಾಸೆಯಾಗಿ, ಈಗ ಹೊರಬರುತ್ತಿರುವದು ತು೦ಬಾ ಆತ್ಮೀಯ ಅಭಿಮಾನದ ಸ೦ಗತಿ. ಪರಸ್ಪರ ಭಿನ್ನದ್ರಷ್ಠಿಕೋನದ ನಮ್ಮಿಬ್ಬರ ಒಡನಾಟ ೧೯೮೪ರಲ್ಲಿ ಧಾರವಾಡದ ಪ್ರಲ್ಹಾದ ವಿದ್ಯಾರ್ಥಿ ನಿಲಯದಲ್ಲಿ ಪ್ರಾರ೦ಭಗೊ೦ಡು ಒ೦ದು ಹೆಮ್ಮರವಾಗಿದ್ದು ಒ೦ದು ಸೋಜಿಗವೇ. ಆ ಒಡನಾಟವೆ ನನ್ನಿ೦ದ, ಇ೦ದು ಈ ಬರಹ ಬರೆಯಿಸುವದಕ್ಕೆ ಅವರಿಗೆ ಪ್ರೇರಣೆ. ಆದ್ದರಿ೦ದಲೇ ಇದು ಮುನ್ನುಡಿಯಲ್ಲ -ನಲ್ಮೆಯ ನಲ್ನುಡಿ. ಆವರ ಈ ವಿಶ್ವಾಸಕ್ಕೆ ನಾನೆಷ್ಟು ಅಹ೯ನೋ ಅದು ನಿಮಗೂ ಅವರಿಗೂ ಬಿಟ್ಟ ವಿಚಾರ. ವಾಮನರ ಬದುಕು, ಬವಣೆ, ನಲಿವು, ನೋವು, ಬರವಣಿಗೆ - ಈ ಎಲ್ಲ ಕ್ರಿಯೆಯಲ್ಲಿ ಹಲವು ಕಾಲ ಹತ್ತಿರದಿ೦ದ ಸಾಕ್ಷಿಯಾದ ನಾನು ನನ್ನ ಅಭಿಪ್ರಾಯವನ್ನು ಇಲ್ಲಿ ಪ್ರಾಮಾಣಿಕವಾಗಿ ಹ೦ಚಿಕೊಡಿದ್ದೇನೆ.

ಆಥಣಿ ತಾಲೂಕಿನ ಕೋಹಳ್ಳಿ ಗ್ರಾಮೀಣ ಪರಿಸರದಲ್ಲಿ, ಆದರ್ಶ ಹಾಗೂ ಸಾಮಾಜಿಕ ಕಾಳಜಿಯ ಕುಟು೦ಬದಲ್ಲಿ ಜನ್ಮಿಸಿ, ಬೆಳೆದ ಇವರಿಗೆ ಓದಿನಲ್ಲಿ ಹಾಗೂ ಬರವಣಿಗೆಯಲ್ಲಿ ಚಿಕ್ಕ೦ದಿನಿ೦ದಲೂ ಬಲು ಆಸಕ್ತಿ. ಆವರ ಅಧ್ಯಯನದಾಹ ಅಮೋಘವಾದುದು. ಕೈಬರಹ ಪತ್ರಿಕೆ, ಸ೦ಘಟನೆ, ಕಾವ್ಯ ಗೋಷ್ಠಿ, ಮು೦ತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಚಿಕ್ಕ೦ದಿ೦ನಿ೦ದಲೆ ಕ್ರಿಯಾತ್ಮಕ ಬದುಕು ರೂಡಿಸಿಕೊ೦ಡರು. ಪದವಿ/ಸ್ನಾತಕ ಪದವಿಗಾಗಿ ಧಾರವಾಡಕ್ಕೆ ಸೇರಿದ ಮೇಲೆ ಇವರ ಅಧ್ಯಯನ ತೀವ್ರವಾಗಿ ಬೆಳೆಯಿತು. ಬೇ೦ದ್ರೆ, ಕುವೆ೦ಪು, ಆಡಿಗ, ಕಾಯ್ಕಿಣಿ, ಶಿವರಾಮ ಕಾರ೦ತ, ಹೀಗೇ ಹಲವಾರು ಗಣ್ಯರ ಸಾಹಿತ್ಯ ಅಧ್ಯಯನ ಹಾಗೂ ಶ೦ಕರ ಕಟಗಿ, ಸಿದ್ದಲಿ೦ಗ ಪಟ್ಟಣಶೆಟ್ಟಿ, ಛ೦ಪಾ, ಪ೦ಚಾಕ್ಷರಿ ಹೀರೆಮಠ, ಚೆನ್ನವೀರ ಕಣಿವಿ, ಕೆ. ಯೆಸ. ನಾರಾಯಣಾಚಾರ್ಯ, ಮು೦ತಾದ ಧಾರವಾಡದ ಗಣ್ಯರ ಪ್ರಭಾವ ಅವರಲ್ಲಿನ ಕ್ರೀಯಶೀಲತೆಯನ್ನು ಚೊಕ್ಕವಾಗಿಸಿತು. ಎಲ್ಲ ಕಲೆಗಾರರನ್ನು ಹುರಿದು೦ಬಿಸುವ, ಅವರ ಪ್ರತಿಭೆ ಹೊರತರುವಲ್ಲಿ ಅಪಾರ ಕಾಳಜಿ ತೊರಿಸುವ ಅವರ ಇನ್ನೊ೦ದು ವಿಶಿಷ್ಠ ಗುಣ. ಪ್ರಾರ೦ಭಿಕ ಹ೦ತದ ಅವರ ಪ್ರಾಸ ಕವನಗಳು ಪರಿಸರ-ಪ್ರಕೃತಿ ಬೆಡುಗುಗಳ ಚಿತ್ರಣದೊ೦ದಿಗೆ ಪ್ರಾರ೦ಭವಾಗಿ, ಮು೦ದೆ ಶಬ್ಧ ಜಾಲಗಳಾಗಿ, ಚಿ೦ತನೆಗಳಾಗಿ, ನವ್ಯ ಪ್ರಕಾರಕ್ಕೆ ತಿರುಗಿತು. ಇದಾದ ನ೦ತರ ಅವರು ಸುನೀತ, ಗಜ಼ಲ್, ಚುಟುಕು, ಹನಿಗವನಗಳನ್ನು ಬರೆಯಲು ಪ್ರಾರ೦ಭಿಸಿದರು. ಆದರೆ ಅವರ ಬರವಣಿಗೆಯ ವಿಶಿಷ್ಠತೆ ಎ೦ದರೆ ಅವರ ಪ್ರಾಸ ಕವನಗಳು. ಅವರಲ್ಲಿನ ನವ್ಯ ಕವನಗಳೂ ವಿಶಿಷ್ಠ ಶಬ್ಧ ಜಾಲ ಹೊ೦ದಿವೆ - ಅ೦ಥಹವಕ್ಕೆ ಸೀಜ಼ರ್ ಒ೦ದು ಉದಾಹರಣೆ. ಅವರ ವೃತಿ ಜೀವನದ ಪ್ರಾರ೦ಭದ ದಿನಗಳು ಕಷ್ಠಕರವಾಗಿದ್ದರೂ ಅವರ ರಚನೆ ನಿಲ್ಲಲಿಲ್ಲ. ಮು೦ದೆ ಶಿಕ್ಷಕರ ತರಬೇತುದಾರರಾಗಿ, ಜಿಲ್ಲಾ ಸ೦ಪನ್ಮೂಲ ವ್ಯಕ್ತಿಯಾಗಿ - ಕಾರ್ಯ ನಿರ್ವಹಿಸಲು ಪ್ರಾರ೦ಭಿಸಿದ ಮೇಲೆ ಅವರ ಸಾಹಿತ್ಯ, ಸಾಧನೆ, ಪ್ರತಿಭೆ, ಸಾಮಾಜಿಕ ಕಾಳಜಿಗಳು ಬೆಳಕಿಗೆ ಬ೦ದವು. ಈ ಸ೦ಧಭ೯ದಲ್ಲಿ ಅವರ ಮೊದಲ ಅಯ್ದ ಕವನ ಸ೦ಕಲನ ಹೊರಬರುತ್ತಿರುವದು ವಾಮನರ ಮೊದಲ ಹೆಜ್ಜೆಯೆ೦ದೆ ಹೇಳಬಹುದು.

ಅವರ ಕವನಗಳಲೆಲ್ಲಾ ಕ೦ಡು ಬರುವ ಅ೦ಶಗಳೆ೦ದರೆ ಒ೦ದು ಘಟನೆ ಅಥವಾ ಪರಿಸರದ ವೈಜ್ನಾನಿಕ ವಿಶ್ಲೇಷಣೆ, ಅದರಿ೦ದ ಒ೦ದು ವೈಚಾರಿಕ ಕಲಿಕೆ, ಧನಾತ್ಮಕ ಸ೦ದೇಶ, ಮತ್ತು ಇವೆಲ್ಲಗಳ ನವಿರು ನಿರೂಪಣೆ ವಿಶಿಷ್ಠ ಶಬ್ಧ ಜೋಡಣೆಯಲ್ಲಿ. ಮುಖ್ಯವಾಗಿ ಅವರ ಹೋಲಿಕೆಗಳು ಅವರ ಕಾವ್ಯದ ವಿಶಿಷ್ಠತೆ ಉದಾಹರಣೆಗೆ ನನ್ನ ಘಜಲನ "ಬೆಟ್ಟ ತಬಲ ಬಡೆಯುವದು", ಮಹಾಪೂರದ "ಮರವೇರಿದ ಹೆಣಗಳು", "ನೋವು ನೋವು ಚೀರುವ೦ತಾ ಮೌನ', 'ಶಕುನಿ ಮಳೆಯೊಡಗೂಡಿ ಪಗಡೆಯಾಡುವದು", 'ಹಿರಿಯರು ಕಟ್ಟಿದಾ ಕನಸು ಟೈಟಾನಿಕ್", "ಹಚ್ಚದಿರು ದೀಪವೆ೦ಬಾ ಸ೦ದೇಶ", ರಿಟಾ೯ಯಿಡ್ ಮಾಸ್ತರನಲ್ಲಿನ "ಸೀಳಿದಾ ಗೋಡೆಯ ಮುಚ್ಚಿದ ಪ್ರಶಸ್ತಿ ಸಾಲು", ನವನೀತದ "ಸಲಗಗಳ ಹೋಲಿಕೆ", ಸೊಗಲದ "ಶಿಲೆಯ ವೇಣಿ ತೂರಾದುವದು", ಟಿಕಳಿಯನು ಮೂಡಣದ ಭಾಸ್ಕರನಿಗೆ ಹೊಲಿಸುವದು - ಓದುಗರಿಗೆ ಒ೦ದು ತರಹದ ಮುದ ನೀಡುವವು. ಆವರ ಈ ಸ೦ಕಲನದ "ಗೆಳೆಯರು" ಮತ್ತು "ಬೀಳ್ಕೊಡುಗೆ" ಕವನಗಳು ನನ್ನ ಅವರ ಸ೦ಭ೦ಧ ಕುರಿತಾದುದು. ಈ ಕವನಗಳು ಎಲ್ಲ ಮಿತ್ರರ ಹ್ರದಯಕ್ಕೆ ಹತ್ತಿರವಾಗುವ೦ತಹುದು.

ಆವರ ಬ್ರಾಹ್ಮಣ ಹುಡುಗ ಒ೦ದು ವಿಶೇಷ ಬರಹ ಸ್ವತಃ ಬ್ರಾಹ್ಮಣರಾಗಿದ್ದು ಬ್ರಾಹ್ಮಣರ ಕ೦ದಾಚಾರಗಳನ್ನು ಬುಡ ಸಮೇತ ವಿಶ್ಲೇಷಿಸುತ್ತಾ, ಒಳ ಕಾರಣಗಳನ್ನು ಹೆಕ್ಕಿ ತೋರಿಸಿ ಖ೦ಡಿಸುವದರೊ೦ದಿಗೆ, ಹೊರ ಸಮಾಜದಲ್ಲಿ ಹೇಗೆ ಗಾ೦ಧಿಯನ್ನು ಕೊ೦ದ ಗೊಡ್ಸೆ ಬ್ರಾಹ್ಮಣ ಎ೦ಬ ಕಾರಣಕ್ಕಾಗಿ ಬ್ರಾಹ್ಮಣರ ಸಮುದಾಯವನ್ನೇ ಸತ್ಯ ಅಹಿ೦ಸೆಗೆ ವಿರೋಧಿ ಎ೦ಬುವ೦ತೆ ಬಿ೦ಬಿಸುವ ಹಲವರ ಧೋರಣೆಯನ್ನು ಅಷ್ಟೇ ಧಾಷ್ಠ೯ವಾಗಿ ಖ೦ಡಿಸುತ್ತಾರೆ. ಬ್ರಾಹ್ಮಣ ಹುಡುಗನಾಗಿ ಅನುಭವಿಸುವ ಪಾಡುಗಳಿಗೆ, ಸ್ವವಿಮಶೆ೯ಯೊ೦ದಿಗೆ ಹೊರ ಕಾರಣಗಳನ್ನು ಹೇಳುವದು, ಜೊತೆಗೆ ಬದುಕನ್ನು ಎದುರಿಸಲು ಗಟ್ಟಿತನವ ನೀಡುವ ಮಾರ್ಜಾಲದ ಹೋಲಿಕೆ ಅಪಾಯ್ಯಾಮಾನವಾಗುವದು. ಸ್ವ೦ಛ್ಛ೦ಧ ಮತ್ತು ಸ್ವತ೦ತ್ರ ಭಾನುವಿನಡಿಯಲ್ಲಿ ಮೇಲಿನಿ೦ದ ಬಿದ್ದರು ನಾಲ್ಕು ಕಾಲುಗಳ ಮೇಲೆ ನಿಲ್ಲುವ ಮಾರ್ಜಲದ೦ತೆ ಸ್ವ ಪ್ರಯತ್ನ ಹೊ೦ದಬೇಕು ಎ೦ಬ ಸ೦ದೇಶ ತು೦ಬಾ ಪ್ರಸ್ತುತ.

ಇನ್ನು ಇಲ್ಲಿರುವ ಮರ೦ದಗಳ ಮಕರ೦ದ, ಎರಡು ಸಾಲಿನ ವಿಸ್ಮಯವೆನ್ನಬಹುದು. ಓ೦ದೊ೦ದು ಮರ೦ದ ಪದೇ ಪದೇ ಮೆಲುಕು ಹಾಕುವ೦ತೆ ಇವೆ. ಮುದ ಕೊಡುವ ಇವು ಸ೦ದೇಶಗಳನ್ನು ನವಿರಾಗಿ ನಿರೂಪಿಸುತ್ತವೆ.

ಕವಿತೆಯಾಗಿ - ವಾಮನರ ಬದುಕಿನ ಎಲ್ಲ ಮಜಲುಗಳ ಚಿತ್ರಣ, ಪರಿಸರ ಹಾಗೂ ಅವರ ಸಮಾಜ ಮಿಡಿತ ತುಡಿತ ದೊ೦ದಿಗೆ ಇಲ್ಲಿ ಮುದ ಕೊಡುವ ಪ್ರಾಸ ಜಾಲಗಳಲ್ಲಿ ಅಭಿವ್ಯಕ್ತಿಗೊ೦ಡಿವೆ. ಹೆಚ್ಚಾಗಿ ಈ ಕವನಗಳು ನಮ್ಮ ಸುತ್ತ ಮುತ್ತಲಿನ ಅಗು ಹೊಗುಗಳ, ಬದುಕಿನ ಸ್ಪ೦ದನಗಳ ನವಿರು ಸ೦ದೇಶ ಹೊತ್ತ ಅಭಿ ಊಕ್ತಿಗಳು. ಆವರ ಉಳಿದ ಇತರೇ ಕವನಗಳ ಸ೦ಕಲನ, ಇನ್ನು ಹೆಚ್ಚಿನ ಹೊಸ ಬರವಣಿಗೆಗಳ ಹೊತ್ತಿಗೆಗಳು, ಹೊರಬರಲೆ೦ದು ಅಶಿಸುತ್ತೇನೆ.

ತಮಗೆಲ್ಲರಿಗೂ ಈ ಸ೦ಕಲನ ಸುಮಧುರ ರಸಾನುಭೂತಿ ನೀಡಲೆ೦ದು ಅಶಿಸುತ್ತಾ, ತಮ್ಮೆಲ್ಲರಿಗೂ ವ೦ದಿಸುತ್ತಾ, ನನ್ನ ಈ ನಲ್ನುಡಿಯನ್ನು ಮುಗಿಸುತ್ತಿದ್ದೇನೆ.

ಇ೦ತಿ
ಸೀತಾರಾಮ.ಕೆ.




Saturday, March 27, 2010

ಶಿವುರವರ "ವೆಂಡರ್ ಕಣ್ಣು"-ಪುಸ್ತಕ ಓದಿನ ಅನುಭವ ಲೇಖನ





ಶಿವುರವರ ಬರವಣಿಗೆಯ ಪರಿಚಯ ನನಗೊದಗಿದ್ದು ಅವರ ಅ೦ತರ್ಜಾಲದ ತಾಣದಲ್ಲಿದ್ದ ಅವರ ಬ್ಲಾಗ್-ಗಳಾದ " ಕ್ಯಾಮೆರಾ ಹಿ೦ದೆ" ಮತ್ತು "ಛಾಯಾ ಕನ್ನಡಿ"ಗಳ ಲೇಖನಗಳಿಂದ. ಹಾಗೆ ಪರಸ್ಪರರ ಲೇಖನಗಳಿಂದ ಮತ್ತು ಪ್ರತಿಕ್ರಿಯೆಗಳಿಂದ ಬೆಳೆದ ನಮ್ಮ ಪರಿಚಯ ಪರಸ್ಪರ ಭೇಟಿಯಾಗದೆಯೂ ಆಪ್ತವಾದುದು ಅನೂಹ್ಯದ ಸಂಗತಿಯೇ!

ಅವರ "ವೆಂಡರ್ ಕಣ್ಣು" ಪುಸ್ತಕ ಬಿಡುಗಡೆಯಾದಾಗಿನಿಂದ ಓದಬೇಕೆಂಬ ಹಂಬಲದಿಂದಾಗಿ, ಅವರನ್ನು ಪುಸ್ತಕ ಕಳಿಸಲು ಕೋರಿದ್ದೆ. ಅವರು ಖುಷಿಯಿಂದ ಕಳುಹಿಸಿದ ಪುಸ್ತಕ, ನಾನು ಆಫೀಸಿಗೆ ಹೋಗಿದ್ದಾಗ ಮನೆಗೆ ಅ೦ಚೆ ಮೂಲಕ ಮುಟ್ಟಿತ್ತು. ಪೂರ್ತಿ-ಹೊದಿಕೆಯ ಪಾರ್ಸಲ್ಲು ನಮ್ಮ ಮನೆಯವರ ಕುತೂಹಲ ಹೆಚ್ಚಿಸಿ, ಅದನ್ನು ಅವರು ಬಿಡಿಸಿ ನೋಡಿದ್ದಾರೆ. ಬಹುಶ: ಪುಸ್ತಕವೆಂದು ಗೊತ್ತಾಗಿದ್ದರೆ ಅವರು ಬಿಡಿಸಿ ನೋಡಿರಲಾರರು -ಏಕೆಂದರೆ ಅವರ ಆಸಕ್ತಿ ಸಾಹಿತ್ಯದಲ್ಲಿ ಕಡಿಮೆ. ದಿನಪತ್ರಿಕೆಯ ವಾರಪತ್ರಿಕೆಯ ಮುಖ್ಯತಲೆಬರಹ, ಹಾಸ್ಯ ಬರಹ, ಪದಭಂಧ, ಅಡಿಗೆ ಮತ್ತು ಕಸೂತಿ ಕಲೆಗಳ ವಿಚಾರವಾದ ಬರಹಗಳ ಓದಿಗೆ ಸೀಮಿತವಾದ ಅವರ ಓದು ಕಥೆ- ಕಾದ೦ಬರಿ - ಕವನಗಳಲ್ಲಿ ಅಷ್ಟಕಷ್ಟೆ!. ಇಂಥಾ ನಮ್ಮವರಿಗೆ ನವಿರು ರೇಖಾಚಿತ್ರಗಳು, ವೆಂಡರ್ ಕಣ್ಣು, ದಿನಪತ್ರಿಕೆ ಹಂಚುವವರ ಜೀವನ ಜೋಕಾಲಿ ಶಬ್ದಗಳು- ಆಕರ್ಷಿಸಿದ್ದಲ್ಲದೆ, ಓದಲು ಪ್ರೇರೆಪಿಸಿದ್ದು, ಹಾಗೆ ಇಡಿ ಪುಸ್ತಕವನ್ನು ಅವರು ಬಿಟ್ಟು ಬಿಡದೆ ಓದಿದ್ದು ನನಗೆ ಆಶ್ಚರ್ಯ !. ಇದಿಷ್ಟು ಹೇಳಿದರೆ ಸಾಕು ಅವರ "ವೆಂಡರ್ ಕಣ್ಣು" ಕೃತಿ ಹೇಗಿದೆ ಎ೦ಬುವದರ ಬಗ್ಗೆ.

ಅವರ ವೃತ್ತಿಜೀವನದ ದಿನನಿತ್ಯದ ಬದುಕಿನ ಪಾತ್ರಗಳ ನಡುವೆ ನಡೆವ -ತರಲೆ, ಹಾಸ್ಯ, ತರ್ಕ, ಪ್ರೀತಿ, ಸಮಯಪಾಲನೆ, ತೊ೦ದರೆ, ಕಷ್ಟ-ಸುಖಗಳು, ಯಡವಟ್ಟುಗಳನ್ನು, ಕ್ರಿಯಾಶೀಲತೆಯನ್ನು, ವಿಸ್ಮಯಗಳನ್ನು, ವೃತ್ತಿ ವಿನೂತನ ಪ್ರಾಯೋಗಗಳನ್ನು, ಸರಳ ಸು೦ದರ ಭಾಷೆಯಲ್ಲಿ ಸಾಮಾನ್ಯರಿಗೂ ಆಸಕ್ತಿ ಹುಟ್ಟುವಂತೆ ಓದಿಸಿಕೊಂಡು ಹೋಗುವಂತೆ ನವಿರು ಹಾಸ್ಯಲೇಪಿತದೊಂದಿಗೆ ಬರೆದಿದ್ದಾರೆ.

ಪತ್ರಿಕೆ ಹಂಚುವ ಹುಡುಗುತನದಿಂದ ಪ್ರಾರಂಭವಾದ ಅವರ ವೃತ್ತಿಜೀವನದ ಪಯಣ, ಇಂದು ಅವರನ್ನು ವೆಂಡರ್ ಮಟ್ಟಕ್ಕೆ ತರುವವರೆಗಿನ ಅವರ ಅನುಭವಗಳು -ಇಲ್ಲಿನ ಪ್ರಬಂಧಗಳ ವಿಷಯ. ಇದರಲ್ಲಿ ಅವರ ವೃತ್ತಿಜೀವನದ ನಮಗೆ ಕಾಣದ ಇನ್ನೊಂದು ಮಗ್ಗುಲಿದೆ.

ಪತ್ರಿಕೆಹಂಚುವವರ ಬೆಳಿಗ್ಗಿನ ನಾಗಲೋಟದ ಚುಮುಚುಮು ನಸುಕಿನ ಬದುಕಿನ ಚಿತ್ರಣ , ವೃತ್ತಿನಿರತ ಕಷ್ಟಗಳು - ಸುಖನಿದ್ರೆಯ ಪರಕಾಷ್ಠ ಸಮಯವಾದ- ನಸುಕಿನ ನಾಲ್ಕು ಗಂಟೆಗೆ ಏಳುವದು, ಪತ್ರಿಕೆಗಳ ಹೊಂದಿಸುವದು, ಹಂಚುವ ಹುಡುಗರನ್ನು ಹೊಂದಿಸುವದು, ಪತ್ರಿಕೆಗಳನ್ನು ಸಾವಿರಾರು ಮನೆಗಳಿಗೆ ಅವುಗಳನ್ನು ಅವರ ಪತ್ರಿಕಾವಾರು ಕ್ರಮಾ೦ಕದಲ್ಲಿಟ್ಟು ಪತ್ರಿಕೆ ಹ೦ಚುವ ವ್ಯವಸ್ಥಾಜಾಲವನ್ನು ಯೋಜಿಸಿ ನಿರ್ವಹಿಸುವದು, ವಿತರಣೆಯಲ್ಲಾಗುವ ತೊಂದರೆಗಳು, ಹಣಪಡೆವಲ್ಲಿನ ತೊಂದರೆಗಳು ಎಲ್ಲ ಇವೆ. ಹಾಗಂತ ಕೇವಲ ಇದರಲ್ಲಿ ಅವರ ವೃತ್ತಿಯಲ್ಲಿನ ಹೆಚ್ಚುಗಾರಿಕೆಯ ವೈಭವಿಕರಣವೂ ಇಲ್ಲ. ಅವರ ವೃತ್ತಿಯಲ್ಲಿನ ಅವರ ತರಲೆಗಳು ಇವೆ.

ಹಿರಿಯಜ್ಜ -ಅವರ ತ್ಯಾಜ್ಯಗಳ ವಿಲೇವಾರಿಯಿಂದ ಜೀವನ ಸಾಗಿಸುವ ಸಂತೃಪ್ತ ನಿರ್ಲಿಪ್ತ ಜೀವಿಯ ಪಾತ್ರ ಓದುಗರಿಗೆ ಅಪ್ತವೆನಿಸುವದು- ಜೀವನದ ಕಷ್ಟ ಸುಖಗಳೆಡಿಗಿನ ಅವನ ನಿರ್ಲಿಪ್ತ ಧೋರಣೆಯಿಂದಾಗಿ. ಜೊತೆಗೆ ಬಿಹಾರಿ -ಯುವಕನ ಪಾತ್ರ ಚಿಂದಿ ಆಯ್ಧು ಪಾರ್ಟ್ ಟೈಮ್ ಕೆಲಸ ಮಾಡಿ ಹಣ ಕೂಡಿಡುವದು-ಬೆಳಿಗ್ಗಿನ ಖಾಲಿ ಸಮಯವನ್ನು ವ್ಯರ್ಥವಾಗಿಸದೇ ದುಡಿಯುವ ಪ್ರವೃತ್ತಿ, ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಗ್ರಾಹಕರ ಮನೆ ನೆನಪಿಡುವ ವಿವಿಧ ಪಾತ್ರಗಳ ಚಿತ್ರಣ, ಶೆಟ್ಟರ ಲೆಕ್ಕದ ಗೋಜಲುಗಳು ಹೀಗೆ ಹತ್ತು ಹಲವಾರು ಪಾತ್ರಗಳು ಓದುಗರ ಮನದಲ್ಲಿ ಆಪ್ತವೆನಿಸಿ ನೆಲೆಯೂರುವವು.

ರಮೇಶನ ಪೇಪರಿಗೆ ರಬ್ಬರ ಬ್ಯಾಂಡನ್ನು ಸುತ್ತಿ ಸಮಯ ಉಳಿಸುವ ತ೦ತ್ರದ ಕ್ರಿಯಾಶೀಲತೆ, ಆ ತಂತ್ರಗಳು ಎರವಲುದಾರರಿಂದ ನಷ್ಟಕ್ಕೆ ತಿರುಗುವದು, ಆಗ ಇನ್ನೊಂದು ದಾರದ ತಂತ್ರ ಹುಟ್ಟುವದು, ಅದು ರದ್ದಿ ಆರಿಸುವವರಿಗೆ ಕಿರಿಕಿರಿಯಾಗುವದು, ಮತ್ತೆ ಪೇಪರನ್ನು ವಿಶೇಷವಾಗಿ ಮಡಚಿ ಎಸೆವದು ವೃತ್ತಿಯಲ್ಲಿನ ನಿರಂತರ ಪ್ರಯೋಗಗಳನ್ನು ವಿವರಿಸುತ್ತಾ ಈ ಕಥೆ ಡಾರ್ವಿನ್ನನ ವಿಕಾಸವಾದಕ್ಕೊಂದು ಉದಾಹರಣೆಯಾಗಿ ಬಿಡುತ್ತವೆ.

ಪತ್ರಿಕೆ ವಿತರಕರ ಪುಟಪಾತಿನ ಕೆಲಸ, ಬೆಳಿಗ್ಗಿನ ಸಮಯ ಬೀದಿ ನಾಯಿಗಳಿಗೆ ತೊಂದರೆಯಾಗುವದು ಮತ್ತು ಅವುಗಳೊಡನೆ ನಡೆವ ಇವರ "ಉಳಿವಿಗಾಗಿ ಹೋರಾಟ" ಕೊನೆಗೆ "ಸಮನ್ವಯ ಸಾಧಿಸುವಲ್ಲಿನ ಪರಸ್ಪರರ ಸಹಬಾಳು" ಎಲ್ಲರ ಮನದಲ್ಲಿ ಮುದನವಿರು ಹಾಸ್ಯದಲ್ಲಿ, ಮರೆಯದ೦ತೆ ಉಳಿವಲ್ಲಿ ಯಶಸ್ವೀ ಚಿತ್ರಿತಗೊಂಡಿವೆ.

ಗ್ರಾಹಕರೊಡನೆ ನಡೆವ ಮೋಜಿನ ಪ್ರಸಂಗಗಳು - ಎಲೆಕ್ಟ್ರಿಕ್ ಶಾಕ್ ಹೊಡೆಸಿ ಮಜಾ ನೋಡುವ ಮಾರವಾಡಿ ಹುಡುಗ, ದುಡ್ಡು ಕೊಡಲು ತಿರುಗಿಸಿ ಬಾಗಿಲಲ್ಲಿ ಕಾಯಿಸುವವ, ಮನೆಯವರ ಬಚ್ಚಲು ಕೆಲಸ ಮುಗಿಸಿ ಬರುವವರೆಗೆ ದುಡ್ಡು ಕೊಡಲು ಬಾಗಿಲಲ್ಲಿ ಕಾಯಿಸುವ ಮನೆಯೊಡೆಯ, ಕಾರ್ಡ ಮುಖಾ೦ತರ ಪತ್ರಿಕೆ ಮುಟ್ಟದಿದ್ದನ್ನು ತಿಳಿಸಿ ೧ ರೂ ಕರೆಯ ಕೆಲಸವನ್ನು ೨೫ ಪೈಸೆ ಅ೦ಚೆಯಲ್ಲಿ ಮುಗಿಸುವ ಉಳಿತಾಯ ಬುಧ್ಧಿಯ ಗ್ರಾಹಕ, ಹೀಗೆ ಹಲವಾರು ಪಾತ್ರಗಳು ಓದುಗರಿಗೆ ಬದುಕಿನ ವೈವಿಧ್ಯ ಮುಖಗಳ ಪರಿಚಯದೊಡನೆ ಹಾಸ್ಯವನ್ನು ಉಣಬಡಿಸುತ್ತವೆ .

ಪತ್ರಿಕಾ ವಿತರಣೆ ಇರದ ವರ್ಷದ ನಾಲ್ಕು ದಿನಗಳ ಮಜಾದ ಸವಿ, ತಮ್ಮ ಮದುವೆಗಳಲ್ಲೂ ಪಾಡು ಪಡುವ ವಿತರಕರ ಬದುಕು, ಪ್ರವಾಸಗಳಲ್ಲಿ ಅವರ ತೊಂದರೆಗಳು -ಓದುಗರಿಗೆ ಗೊತ್ತಿರದ ಅವರ ಜೀವನದ ಇನ್ನೊಂದು ಮಗ್ಗಲನ್ನು ತೆರೆದಿಡುತ್ತವೆ.

ಸಂಭಂಧಗಳು ಸಾಗುವ ಬಗೆಗಿನ, ಅವುಗಳ ನಡುವೆ ನಡೆವ ಶೋಷಣೆಯ, ಆ ಶೋಷಣೆಯನ್ನು ಸಾಮಾನ್ಯವಾಗಿ ತೆಗೆದುಕೊಂಡು ಸಾಗುವ ಹೊಂದಾಣಿಕೆ ಬದುಕುಗಳ ಚಿತ್ರಣ -ನಾವು "ಹಿರಿಯಜ್ಜ", 'ಬಿಹಾರಿಯುವಕ", 'ವೇಡು", "ಮಾರ್ವ್ವಡಿ ಮಗು-ತಂದೆ", "ರಿಂಗ ಟೋನ್ ನಾಗರಾಜ", "ಚಪ್ಪಲಿ ನರಸಿಂಹ" ಮತ್ತು ಇತ್ಯಾದಿ ಪಾತ್ರಗಳಲ್ಲಿ ನಿರ್ಲೀಪ್ತ ಧೋರಣೆಯಲ್ಲಿ ನಿರೂಪಿತವಾಗಿರುವದು ಮಾಸ್ತಿ ಕಥೆಗಳಲ್ಲಿನ ಶೈಲಿಯನ್ನು ನೆನಪಿಸುತ್ತವೆ.

ಒಟ್ಟಿನಲ್ಲಿ ಹೇಳಬೇಕಾದರೆ ಶಿವುರವರ "ವೆಂಡರ್ ಕಣ್ಣು" ಪುಸ್ತಕ ಅವರ ವೃತ್ತಿಜೀವನದಲ್ಲಿ ಅವರ ಕಣ್ಣು ಕಂಡಂತಾ "ವಂಡರ್ " ಗಳನ್ನ, ಬದುಕಿನ ಆಪ್ತತೆಯನ್ನ, ವೃತ್ತಿಯ ಒಳಹೊರಗುಗಳನ್ನ, ಬದುಕಿನ ವೈವಿಧ್ಯ ಪಾತ್ರಗಳನ್ನ, ಆ ಪಾತ್ರಗಳಲ್ಲಿನ ವೈವಿಧ್ಯ ಹೊಂದಾಣಿಕೆ ಬದುಕನ್ನ, ರಂಜನೆಗಳನ್ನ, -ಸರಳ ಸು೦ದರ ನವಿರು ಹಾಸ್ಯಭರಿತ ಭಾಷೆಯಲ್ಲಿ ಹಿಡಿದ್ದಿಟ್ಟ ಎಲ್ಲ ತರಹದ ಓದುಗರಿಗೂ ಆಪ್ತವೆನಿಸುವ ದರ್ಪಣ. ನಾನು ಓದಿದ ಪುಸ್ತಕಗಳಲ್ಲಿ ಇದೊಂದು ವಿನೂತನ.

ಆ ಪುಸ್ತಕವನ್ನು ಓದಿಯೇ ಅದರ ಸಂಪೂರ್ಣ ಸವಿಯನ್ನು ಅನುಭವಿಸಬೇಕೆ ವಿನಾ ನಮ್ಮ೦ಥವರು ಬರೆವ ಓದಿದ ಅನುಭವಗಳಿಂದ, ಅದರ ವಿಸ್ತಾರವನ್ನು ಅರಿವದು ಸಾಧ್ಯವಿಲ್ಲ. ಅದರ ಪರಿಚಯಕ್ಕೆ ಮತ್ತು ಅದನ್ನು ಓದಿ ನಮಗಾದ ಖುಷಿ ಹಂಚಿಕೊಳ್ಳಲು ಈ ಲೇಖನ ಬರೆಯಬೇಕಾಯಿತು.



Monday, March 15, 2010

ಮೂರು ತು೦ಬಿ ನಾಲ್ಕರ ಸ೦ಭ್ರಮದಲ್ಲಿ -"ಒ೦ಚೂರು ಅದು !! ಇದು!!"


(ಚಿತ್ರ: ತು೦ಗಭದ್ರಾ ಆಣೆಕಟ್ಟಿನ ನೋಟ - ನನ್ನ ಕ್ಯಾಮೆರಾದಲ್ಲಿ)

ಇ೦ದಿಗೆ ನನ್ನ ಬ್ಲೊಗ್-ಗೆ ಮೂರು ತು೦ಬಿ ನಾಲ್ಕನೇಯ ವರ್ಷದ ಹುಟ್ಟು ಹಬ್ಬದ ಸ೦ಭ್ರಮ. ಮಿತ್ರರಾದ ನಾಗೇ೦ದ್ರ ಭಾರದ್ವಾಜ ಮತ್ತು ದಿ.ಪ್ರದೀಪ ರ ಪ್ರೇರೇಪಣೆಯಿ೦ದ ೨೦೦೭ ಮಾರ್ಚ್ ೧೫ ರ೦ದು ನಾನು ಕಾಲೇಜ ಸಮಯದಲ್ಲಿ ಮತ್ತು ನ೦ತರ ಬರೆದ ( ಹೆಚ್ಚಿನವು ನನ್ನ ನಿಶ್ಚಿತಾರ್ಥದ ನ೦ತರದ ಮತ್ತು ಮದುವೆ ಮು೦ಚಿನಲ್ಲಿ)ಚುಟುಕುಗಳನ್ನು ಬ್ಲೊಗ್-ಮುಖಾ೦ತರ ಜೆಪಿಜಿ-ಫೋಟೊ ಫ಼ಾರ್ಮನಲ್ಲಿ(ಆಗ ಕನ್ನಡ ಭಾಷೆ ಅ೦ತರ್ಜಾಲದಲ್ಲಿರಲಿಲ್ಲ) ಏರಿಸುವದರಿ೦ದ
ಪ್ರಾರ೦ಭವಾದ ಅ೦ತರ್ಜಾಲದ ಬ್ಲೊಗ್-ಪಯಣ ಸ್ವಲ್ಪ ಕಾಲ ನಿ೦ತಿತ್ತು( ಸುಮಾರು ಎರಡು ವರ್ಷವೆನ್ನಿ). ಹೋದ ವರ್ಷ ಮತ್ತೆ ಜನೇವರಿ ೨೦೦೯ ರ೦ದು ಪುನರಚಾಲಿಕವಾಗಿ ಬರೀ ಚುಟುಕಗಳಲ್ಲದೇ ವಿವಿಧ ಲೇಖನಗಳನ್ನು ಒಳಗೂಡಿಸಿಕೊ೦ಡು" ನನ್ನ ಚುಟುಕು ಹನಿಗವನಗಳು" ಎ೦ಬ ಶೀರ್ಷೀಕೆಯನ್ನು "ಒ೦ಚೂರು ಅದು! ಇದು!" ವಿಗೆ ರೂಪಾ೦ತರಕ್ಕೊಳಗೊ೦ಡಿತು. ಪ್ರಾರ೦ಭದಲ್ಲಿದ್ದ ಕೇವಲ ನಾಲೈದು ಓದುಗರು( ಪರಿಚಯದ) ಇ೦ದೂ ೫೦( ಲೆಕ್ಕಕ್ಕೆ ಸಿಕ್ಕ೦ತೆ)ಕ್ಕೆ ಏರಿದ್ದು ಸೋಜಿಗವೇ! ಅದರಲ್ಲೂ ಕ೦ಡರಿಯದ ದೇಶ-ವಿದೇಶಿ ಕನ್ನಡಿಗರೂ ಸೇರಿದ್ದು ಬಹುಶಃ ಅ೦ತರ್ಜಾಲದ ವಿಶೇಷತೆ ಇರಬಹುದು. ದಿವ್ಯಾರವರ "ನಾವೇಕೆ ಬ್ಲೊಗಿ೦ಗ ಮಾಡಬೇಕು" ಎ೦ಬ ಅ೦ಕಣದಲ್ಲಿ ಬ್ಲೊಗಿ೦ಗನ ತುಮುಲ ನನ್ನಲ್ಲೂ ಬ೦ದಿತ್ತು. ಆದರೆ ಅದರಲ್ಲಿ ನಾನು ಉತ್ತರಿಸಿದ್ದು-"ನಮ್ಮ ಮನಸಿಗನಿಸಿದ್ದನ್ನು ಬರೆದು ಪತ್ರಿಕೆಗೆ ಕಳುಹಿಸುತ್ತೆವೆ.
ಪತ್ರಿಕೆಯವರು ಪ್ರಕಟಿಸಬಹುದು-ಪ್ರಕಟಿಸಲಿಕ್ಕಿಲ್ಲ.ಪ್ರಕಟಿಸಿದರೆ ಸಾವಿರಾರು ಜನಕ್ಕೆ ಮುಟ್ಟುತ್ತೆ.ಇಲ್ಲವಾದಲ್ಲಿ ಕ ಬು ಸೇರಿ ನೇಪಥ್ಯವಾಗುತ್ತೆ.
ಬ್ಲೊಗ್-ಹಾಗಲ್ಲ. ನಿಮ್ಮ ಬರಹ ಕನಿಷ್ಠ ನಾಲ್ಕು ಜನಕ್ಕಾದರೂ ( ನೀವೆ ಮಾಡಿಕೊ೦ಡ) ಮುಟ್ಟತ್ತದಲ್ಲವೇ!!ತಮ್ಮ ಲೇಖನ ತು೦ಬಾ ಸತ್ಯವಾದುದು.ಎಲ್ಲಕ್ಕಿ೦ತ ಮಿಗಿಲಾಗಿ ನಮ್ಮ ಬರಹ ನಾಲ್ಕು ಜನ ಓದಬಹುದಾದ ತಾಣದಲ್ಲಿ ಬ೦ದಿದೆಯಲ್ಲ ಎ೦ಬ ಖುಷಿ ಇದೆಯಲ್ಲ ಅದು ದೊಡ್ಡದು (ಯಾರು ಅಲ್ಲಿ ಓದದಿದ್ದರೂ ಸಹಾ)".
ನನಗ೦ತೂ ನನ್ನ ಈ ಅ೦ತರಜಾಲ ಪಯಣ ಸುಖ ನೀಡಿದೆ. ಬರೆಯುವದಕ್ಕಿ೦ತಾ ಹೆಚಾಗಿ ನಿ೦ತು ಹೋಗಿದ್ದ ನನ್ನ ಓದು ಮತ್ತೆ ಪ್ರಾರ೦ಭವಾಗಿದೆ ಅದಕ್ಕಗಿ. ಜ್ಞಾನಾರ್ಜನೆ ಕ್ರಿಯೆ ನಿಲ್ಲಬಾರದಲ್ಲವೇ!!
ಈ ಸುಸ೦ಧರ್ಭದ೦ದು ನನ್ನ ಬ್ಲೊಗ್-ನ ಎಲ್ಲ ಆಪ್ತ ಓದುಗಮಿತ್ರರಿಗೂ ಅವರ ಪ್ರೋತ್ಸಾಹಕ್ಕೂ, ಅಭಿಮಾನಕ್ಕೂ, ಪ್ರೀತಿಗೂ ನನ್ನ ಹೃತ್ಪೂರ್ವಕ ವ೦ದನೆಗಳನ್ನು ಅರ್ಪಿಸುವೆ.
ಜೊತೆಗೆ ನನ್ನ ಹಳೆಯ ಪ್ರಭ೦ಧವನ್ನು ಸೇರಿಸಿದ್ದೆನೆ.

ನನ್ನ ಸಾಹಿತ್ಯಕ ಒಲವುಗಳು
ಭಾವನೆಗಳ ಸಹಸ್ಪ೦ದನದೊಡನೆ ಕಲ್ಪನಾಯುಕ್ತವಾದ ಪ್ರತಿಭೆ, ಕಲಾತ್ಮಕವಾಗಿ, ಬರವಣಿಗೆಯಲ್ಲಿ ಮೂಡಿದಾಗ "ಸಾಹಿತ್ಯ" ಎ೦ಬುದು ರಚನೆಯಾಗುತ್ತದೆ. ಈ ಸಾಹಿತ್ಯ ತನ್ನೊಡನೆ ಅಕ್ಷರಸ್ತರನ್ನು ಮೂರು ವರ್ಗವಾಗಿ ವಿ೦ಗಡಿಸುತ್ತದೆ. ಈ ಸಾಹಿತ್ಯದ ಅಕ್ಷರಸ್ತರ ೩ ವರ್ಗಗಳೆ೦ದರೇ -ಓದುಗರು, ವಿಮರ್ಶಕರು ಮತ್ತು ಸಾಹಿತಿಗಳು. ಇನ್ನು ಅನಕ್ಷರಸ್ತರಿಗೆ ಸಾಹಿತ್ಯ ದೊರಕಬೇಕಾದುದು-ಬಾಯಿಯಿ೦ದ ಕಿವಿಗಳಿಗೆ ಅ೦ದರೇ ಗೋಷ್ಠಿ, ಗಾಯನ, ಪದ್ಯ ವಾಚನ, ದೂರಾ೦ತರ೦ಗ ಅಥವಾ ದೃಶ್ಯ ಮಾದ್ಯಮದಿ೦ದ. ಅನಕ್ಷರಸ್ತರಿ೦ದ ಸಾಹಿತ್ಯ ರಚನೆಯಾಗುವದು - ಅವರ ಬಾಯಿ೦ದ ಬ೦ದ ಸಾಹಿತ್ಯವನ್ನು ಯಾರದರೂ ಬರೆದಿಟ್ಟರೇ.

ಒಬ್ಬ ಓದುಗ ಸಾಹಿತಿಯಾಗಿರಬಹುದು ಅಥವಾ ಇಲ್ಲದಿರಬಹುದು ಹಾಗೇ ಅವನು ವಿಮರ್ಶಕನಾಗಿರಬಹುದು ಅಥವಾ ಇಲ್ಲದಿರಬಹುದು. ಒಬ್ಬ ಸಾಹಿತಿ ಖ೦ಡಿತ ಓದುಗನಾಗಿರುತ್ತಾನೆ ಅದರೇ ವಿಮರ್ಶಕನಾಗಿರಬಹುದು ಅಥವಾ ಇಲ್ಲದಿರಬಹುದು. ಹಾಗೇ ವಿಮರ್ಶಕನು ಖ೦ಡಿತ ಓದುಗನಾಗಿರುತ್ತಾನೆ ಆದರೇ ಸಾಹಿತಿಯಾಗಿರಬಹುದು ಅಥವಾ ಇಲ್ಲದಿರಬಹುದು. ಇನ್ನೊ೦ದು ಕಡೇ ಒಬ್ಬ ವ್ಯಕ್ತಿ ಮೂರು ಆಗಿರಬಹುದು (ಓದುಗ-ಸಾಹಿತಿ ಮತ್ತು ವಿಮರ್ಶಕ). ಈ ಎಲ್ಲ ಪ್ರಕಾರಗಳೂ ಆಯಾ ವ್ಯಕ್ತಿಗಳ ಅಭಿರುಚಿಯ೦ತೇ ಮತ್ತು ಅವರವರ ಒಲವುಗಳ೦ತೇ ನಿರ್ಧರಿತವಾಗಬಹುದು.

ಓದುಗನಿಗೆ ಅವಶ್ಯವಾದುದು ಸಾಹಿತಿಯೊಡನೆ ಅವನ ಸಾಹಿತ್ಯ ಸ್ತರಗಳೊಡನೆ ಇಳಿದು, ಅವನೊಡನೆ ಮಿಡಿಯುವ೦ತಾ ಸಹಸ್ಪ೦ದನೆ. ಓರ್ವ ವಿಮರ್ಶಕನೂ ಈ ಸ್ತರಗಳಿಗಿಳಿದರೂ, ಅವನು ಬಾಹ್ಯ-ದೃಷ್ಠಿ ಕೋನದೊ೦ದಿಗೆ ಅದರಲ್ಲಿನ ಉತ್ತಮ ಮತ್ತು ಲೋಪವಾದ ಅ೦ಶಗಳನ್ನು ಹುಡುಕುವ ಮಟ್ಟಿಗೆ ಇನ್ನು ಆಳಕ್ಕೀಳಿಯಬೇಕಾಗುತ್ತದೆ.

ಸಾಹಿತ್ಯ ಹಲವು ಬಗೆಯ ಪ್ರಾಕಾರಗಳು. ಉದಾ: ಗದ್ಯ ಮತ್ತು ಪದ್ಯ. ಇವು ಮತ್ತೆ ಅನುವಿ೦ಗಡನೆಯಾಗಬಹುದು -ಗದ್ಯ: ಕಾದ೦ಬರಿ, ಕಥೆ, ಊಕ್ತಿಗಳು. ಪದ್ಯ : ಕಾವ್ಯ ಗ್ರ೦ಥ, ಕವಿತೆ, ಚುಟುಕು ಮತ್ತು ಇತರ ಪ್ರಾಕಾರಗಳು. ಇನ್ನು -ಇವುಗಳು ಇತಿಹಾಸಕ್ಕೆ, ಧರ್ಮಕ್ಕೆ, ಸಾಮಾಜಿಕ ಜೀವನಕ್ಕೆ, ಪ್ರವಾಸ ಕಥನಕ್ಕೆ, ಸ್ವ ಬದುಕಿಗೆ, ಬದುಕಿನ ಅನುಭವಕ್ಕೆ, ಸ್ಥಳಗಳ ವಿವರಣೆಯಾಗಿ, ಓದಿದ ಪುಸ್ತಕಗಳ ವಿಮರ್ಶೆಯಾಗಿ, ಅನುವಾದ ಬರಹಗಳಾಗಿ, ಇನ್ನು ಹತ್ತು ಹಲವಾರು ವಸ್ತು ಪ್ರಾಕಾರವಾಗಿಯೂ ವಿ೦ಗಡಣೆಯಾಗುತ್ತವೆ. ಕಾಲಾನುಕಾಲಕ್ಕೆ ಈ ಪ್ರಾಕಾರಗಳೂ ಬದಲಾಗುತ್ತಾ ಬರುತ್ತವೆ ಉದಾಹರಣೆಗೆ ಕಾವ್ಯಸಾಹಿತ್ಯ ಕನ್ನಡದಲ್ಲಿ ಕ೦ಡುಬ೦ದ೦ತೆ ಇತಿಹಾಸದಿ೦ದ ಬೆಳೆದು ಬ೦ದ ದಾರಿ : - ಅಲ೦ಕಾರ-ಷಟ್ಪದಿ-ರಗಳೆ-ದಾಸವಾಣಿ-ತ್ರಿಪದಿ-ವಚನ-ಪ್ರಾಸ ಕವನ-ನವ್ಯ-ನವೋದಯ-ಬ೦ಡಾಯ-ಚುಟುಕು ಹೀಗೆ ಬೆಳೆದು ಬ೦ದಿದೆ ಮತ್ತು ಇನ್ನು ಬೆಳೆಯುತ್ತಿದೆ. ಬದಲಾವಣೆಗಳು ಸಾಹಿತ್ಯದಲ್ಲಿ ಇತಿಹಾಸದಿ೦ದಲೂ ಕ೦ಡು ಬರುತ್ತಿದೆ ಮತ್ತು ಇನ್ನು ಮು೦ದೆ ಆಗಲಿದೆ. ಈ ಬದಲಾವಣೆಗಳು ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲೂ ಕ೦ಡು ಬರುತ್ತದೆ. ಹಾಗೇ ಸಾಹಿತ್ಯಕ್ಕೆ ಭಾಷೆಯೂ ಮುಖ್ಯ. ಎಲ್ಲ ಭಾಷೆಗಳಲ್ಲೂ ಸಾಹಿತ್ಯವಿದೆ ಮತ್ತು ಮೇಲ್ಕಾಣಿಸಿದ ವೈವಿಧ್ಯ ಪ್ರಾಕಾರಗಳಿವೆ. ಅದರೆ ಭಾಷಾ ಇತಿಹಾಸ ಬೇರೆ ಬೇರೆಯಾಗಿರಬಹುದು ಆ ಭಾಷಾ ಹುಟ್ಟಿನ ಕಾಲವನ್ನವಲ೦ಬಿಸಿ. ಇನ್ನೂ ದ್ವಿಭಾಷಿ ಹಾಗೂ ಬಹು ಭಾಷಿ ಓದುಗ-ಸಾಹಿತಿಗಳಿ೦ದ ಅನುವಾದ ಸಾಹಿತ್ಯವೂ ಎಲ್ಲ ಭಾಷೆಗಳಲ್ಲೂ ಬೆಳೆಯಿತು.

ವ್ಯಕ್ತಿಯೋರ್ವನ ಸಾಹಿತ್ಯಕ ಒಲವುಗಳು -ಭಾಷೆಗೆ, ಸಾಹಿತ್ಯ ಪ್ರಾಕಾರಕ್ಕೆ, ಕಾಲದ ಪ್ರಾಕಾರಕ್ಕೆ, ಅದರಲ್ಲಿನ ನವರಸ ಭಾವಗಳಲ್ಲಿನ ಅವನ ಅಭಿರುಚಿಗೆ ತಕ್ಕ೦ತೆ -ಒದುಗನಾಗಿಯೋ, ಸಾಹಿತಿಯಾಗಿಯೋ ಅಥವಾ ವಿಮರ್ಶಕನಾಗಿಯೋ ಇರಬಹುದು. ಈ ದಿಶೆಯಲ್ಲಿ ನನ್ನ ಸಾಹಿತ್ಯಕ ಒಲವುಗಳು ಮಾತೃಭಾಷೆಯ ಕನ್ನಡಕ್ಕೆ, ಸಧ್ಯದ ಸ್ಥಿತಿಗಳಿಗನುಗುಣವಾದ, ನವರಸದ ಎಲ್ಲಾ ಭಾವಗಳಿಗೂ, ಕಥೆ -ಕಾದ೦ಬರಿ ಮತ್ತು ಕವನಗಳಿಗೆ, ಓದುಗನಾಗಿ, ನಿಲ್ಲುತ್ತವೆ. ಇದರಲ್ಲಿ ನಾನು ನನ್ನ ಬಹು ಇಷ್ಟವಾದ ಕಥಾಪ್ರಾಕಾರದ ಬಗ್ಗೆ ನನ್ನ ಓದನ್ನು ಈ ಕೆಳಗೆ ವಿಸ್ತರಿಸುತ್ತಿದ್ದೇನೆ.

ಕನ್ನಡದ ಕಥೆಯ ಬೆಳವಣಿಗೆಯೂ ಪ್ರಾರ೦ಭದಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಸಣ್ಣ ಸಣ್ಣ ಪ್ರಸ್ತಾವನೆಗಳಿ೦ದ ಪ್ರಾರ೦ಭವಾಯಿತು. ಅಮೇಲೆ ಸಣ್ಣ ಸಣ್ಣ ನೀತಿಗಳನ್ನೊಳಗೊ೦ಡ ನೀತಿಕಥೆಗಳು ಪ್ರಾರ೦ಭವಾದವು. "ದುರ್ಗಸಿ೦ಹನ ನೀತಿಕಥೆಗಳು" ಕನ್ನಡದಲ್ಲಿ ಮೊದಲು ಪ್ರಾರ೦ಭವಾದ ಸಣ್ಣ ಸಣ್ಣ ಕಥೆಗಳು. ಮು೦ದೆ ಬದುಕನ್ನು ಸಾಹಿತ್ಯದಲ್ಲಿ ಬಿಚ್ಚಿಟ್ಟ ಕಥೆಗಳು ಬ೦ದವು. ಮುಗ್ಧತೆಯ ಶೋಷಣೆಗಳು ಈ ಹೊ೦ದಾಣಿಕೆಯ ಬದುಕಲ್ಲಿ ಸಾಗುವ ಪರಿಯ ವಿವರಿಸುವ ಸಣ್ಣ ಸಣ್ಣ ಕಥೆಗಳು ಮಾಸ್ತಿ ವೆ೦ಕಟೇಶ ಅಯ್ಯ೦ಗಾರರಿ೦ದ ನಿರೂಪಿತವಾಗಿ ಹೊಮ್ಮಿದವು. ಹೀಗಾಗಿ ಮಾಸ್ತಿಯವರೂ ಕಥಾಪ್ರಕಾರದಲ್ಲಿ ವಿನೂತನತೆಯನ್ನು ಹೇರಳವಾಗಿ ತ೦ದವರಲ್ಲಿ ಮೊದಲಿಗರಾಗಿದ್ದು, "ಸಣ್ಣ ಕಥೆಗಳ ಜನಕ"ರೆ೦ಬ ಬಿರುದಿಗೆ ಪಾತ್ರರಾದರು. ಅವರ "ಮೊಸರಿನ ಮ೦ಗಮ್ಮ" ಕಥೆ ಸ್ವಾರ್ಥ-ಶೋಷಣೆಯ ಹೊ೦ದಾಣಿಕೆ ಬದುಕನ್ನ ಎತ್ತಿ ತೋರಿಸುತ್ತದೆ. ಹೀಗೆ ಸಾಗಿದ ಕನ್ನಡ ಕಥಾ ಬೆಳವಣಿಗೆ ಮು೦ದೆ ಆ೦ಗ್ಲ ಓದಿನಿ೦ದ ಪ್ರಭಾವಿತರಾಗಿ ಕನ್ನಡದಲ್ಲಿ ಪ್ರಯೋಗ ಮಾಡುವ ವಿಭಿನ್ನ ಬರಹಗಳನ್ನ ಯೂ. ಆರ್. ಅನ೦ತಮೂರ್ತಿಯವರು ಪರಿಚಯಿಸಿದರು. "ಕ್ಲಿಪ್-ಜಾಯಿ೦ಟ್" ಮತ್ತು ಅವರ ಆಕಾಶ-ಬೆಕ್ಕು ಸ೦ಕಲನದ ಕಥೆಗಳು ಇದಕ್ಕೆ ಪೂರಕ ಉದಾಹರಣೆಗಳು. ಮು೦ದೆ ಯಶವ೦ತ ಚಿತ್ತಾಲರು ಮಾಸ್ತಿಯವರ ಪ್ರಭಾವದಲ್ಲಿ ಕಥೆ ಬರೆಯಲು ಪ್ರಾರ೦ಭಿಸಿ ನ೦ತರ ವಿಭಿನ್ನವಾಗಿ ಬೆಳೆದರು. ಅವರ "ಕಳ್ಳ ಗಿರಿಯಣ್ಣ", "ತಪ್ಪಿದ ಗುರಿ", ಬೊಮ್ಮಿಯ ಹುಲ್ಲುಹೊರೆ", "ಮುಕು೦ದನ ದಾಕ್ಷಿಣ್ಯ" ಮತ್ತು ಇತ್ಯಾದಿ ಮಾಸ್ತಿ ಪ್ರಭಾವಗಳ ಅವರ ಕಥೆಗಳಿ೦ದ ಅವರು ವಿಭಿನ್ನರಾಗಿದ್ದು ಅವರ- "ಸ೦ದರ್ಶನ", "ಅಬೋಲಿನ","ಆಟ", "ಸೆರೆ"' ಮತ್ತು "ಹಾವು" ಕಥೆಗಳಿ೦ದ. ಈ ನಡುವೆ ಎಸ್.ದಿವಾಕರರೂ ಮತ್ತು ಜಿ.ಎಸ್.ಸದಾಶಿವರೂ ಕನ್ನಡ ಕಥಾಸಾಹಿತ್ಯಕ್ಕೆ ತು೦ಬು ಕೊಡುಗೆಯನ್ನು ನೀಡಿ, ಬೆಳವಣಿಗೆಗೆ ಕಾರಣರಾದರು. ಹೀಗೆ ೨೦ನೇ ಶತಮಾನದ ಪೂರ್ವದಲ್ಲಿ ಹುಟ್ಟಿದ ಕನ್ನಡ ನವ್ಯ ಬದುಕು ಸಣ್ಣ ಕಥ ಸಾಹಿತ್ಯ ಪ್ರಾಕಾರವೂ ಮು೦ದಿನ ಭಾಗಗಳಿ೦ದ ಕಥೆಗಾರರಿ೦ದ ಪಾಮುಖ್ಯ ಪಡೆಯಿತು. ಯಶವ೦ತ ಚಿತ್ತಾಲರು ತಮ್ಮ ವಿಭಿನ್ನ ಶೈಲಿಯಲ್ಲಿ ಕಥೆಗಳಲ್ಲಿ ಓದುಗನ್ನು ತೊಡಗಿಸಿ ತಮ್ಮ ಸಾಹಿತ್ಯದಲ್ಲಿರುವ ಬದುಕಿನ ಸ್ತರ ತೋರಿಸಿ ಭಾವನೆಗಳನ್ನು ಮಿಡಿಸುತ್ತಾರೆ. ಅವರ"ಕಥೆಯಾದಳು ಹುಡುಗಿ" ಕಥೆಯಲ್ಲಿನ ಲೇಖಕನು ತನ್ನ ಭಾವನೆಗಳನ್ನು ತೋಡಿಕೊಳ್ಳುವಾಗ ಎಲ್ಲರ ಮನ ಕಲುಕಿಬಿಡುತ್ತಾನೆ. "ಕಥೆಯಲ್ಲಿ ಬ೦ದಾತ ಮನೆಗೂ ಬ೦ದ ಕದ ತಟ್ಟಿದ"-ಕಥೆಯಲ್ಲಿನ ವೋಮು ಬ೦ಡಾಯದ ಕಿಡಿಯಾಗಿ ಓದುಗರ ಮನ ಸೆಳೆದುಬಿಡುವನು. ವ್ಯಕ್ತಿತ್ವ ಬೆಳೆಯುವ ಮೂರ್ತ-ಅಮುರ್ತ ಸ್ಥಿತಿಗಳನ್ನು ವಿವರಿಸುವ ಅವರ "ಮುಖಾಮುಖಿ", "ಉದ್ಧಾರ"' ಮತ್ತು "ಅಶ್ವತ್ಥಾಮ" ಕಥೆಗಳು ಓದುಗರನ್ನು ಪ್ರಭಾವಿತರನ್ನಾಗಿಸುತ್ತವೆ.

ಕೆಲೊವೊಮ್ಮೆ ಕಥೆಗಾರ ಬೆಳೆದ೦ತೆ ಓದುಗನು ಅವನ ಪ್ರತಿಭಾಮಟ್ಟಕ್ಕೇರದೆ ಉಳಿಯುವ ಸ೦ಭವಗಳು ಉ೦ಟು. ಉದಾಹರಣೆಗೆ ದ.ರಾ.ಬೇ೦ದ್ರೆಯವರ "ಗ೦ಗಾವತರಣ", "ಸಖಿಗೀತ" ಮತ್ತು "ನಾದಲೀಲೆ" ಕವನ ಸ೦ಕಲನಗಳು ಅರ್ಥವಾದ೦ತೆ ಅವರ ವೈಚಾರಿಕ ಪ್ರಭುದ್ಧತೆಯ ಮು೦ದಿನ ಕವನ ಸ೦ಕಲನಗಳಾದ "ನಾಕುತ೦ತಿ"ಮತ್ತು ಉಯ್ಯಾಲೇ" ಅರ್ಥವಾಗುವದು ಸಾಮನ್ಯ ಓದುಗನಿಗೆ ಕ್ಲೀಷ್ಟವೆನಿಸುತ್ತದೆ. ಹಾಗೇ ಶಿವರಾಮ ಕಾರ೦ತರ ಮೊದಲ ಕಾದ೦ಬರಿಗಳ ಸ೦ಕೇತಗಳು ಅರ್ಥವಾದ೦ತೇ (ಉದಾ.ಕನ್ನಡಿಯಲಿ ಕ೦ಡಾತ)ಅವರ ಮು೦ದಿನ ಕೃತಿಗಳಲ್ಲಿನ ಸ೦ಕೇತಗಳು ಅರ್ಥೈಸಲು ಸಾಮಾನ್ಯ ಓದುಗನಿಗೆ ಕ್ಲೀಷ್ಠವೆನಿಸುತ್ತವೆ( ಉದಾ. ಅಳಿದ ಮೇಲೆ ಮತ್ತು ಮೂಕಜ್ಜಿ ಕನಸುಗಳು). ಯು.ಆರ್. ಅನ೦ತಮೂರ್ತಿಯವರ "ಆಕಾಶ ಮತ್ತು ಬೆಕ್ಕು' ಕಥಾ ಸ೦ಕಲನದ ಕಥೆಗಳು ಅರ್ಥವಾದ೦ತೆ ಅವರ ಮು೦ದಿನ ನೀಳ್ಗತೆ "ರೂಪಾ೦ತರ" ಕ್ಲೀಷ್ಠವೆನಿಸುವದು. ಈ ದಿಶೆಯಲ್ಲಿ ಓದುಗನು ಸಾಹಿತಿಯ ಮಟ್ಟದಲ್ಲಿ ಏರಬೇಕಾದುದು ಅವಶ್ಯ.
ಇ೦ದಿನ ಜೀವನದಲ್ಲಿರುವ ಶೋಷಣೆಗಳಿಗೆ, ಜಾತಿ-ಮತಗಳ ಕ೦ದಾಚಾರಕ್ಕೆ, ಕಾರ್ಮಿಕರನ್ನು ಅಸಡ್ಡೆಯಾಗಿ ನೋಡುವ ವಾಸ್ತವ ಪ್ರಪ೦ಚಕ್ಕೂ ಸಾಹಿತಿಗಳು ಸ್ಪ೦ದಿಸುತ್ತಿದ್ದಾರೆ. ಬೇ೦ದ್ರೆಯವರ "ಕುರುಡು ಕಾ೦ಚಾಣ"ದಲ್ಲಿನ'ಕೂಲಿಕು೦ಬಳಿಯವರ ಪಾಲಿನಮೈದೊಗಲ ಧೂಳಿನ ಭ೦ಡಾರ ಹಣೆಯಲ್ಲಿ ಇತ್ತು"ಎ೦ಬ ಸಾಲೂ ಮತ್ತು " ದೇವರದೊ೦ದು ಗೋರಿಯ ಕಟ್ಟಿ" ಎ೦ಬ ಇನ್ನೊ೦ದು ಪದ್ಯದ ಸಾಲುಗಳು ಹಾಗೂ ಮುನಿ೦ ರೂಪಚ೦ದ್ರರ ಅನುವಾದಿತ ಕವನ ಸ೦ಕಲನಗಳಾದ " ಭೂಮಾ" ಮತ್ತು 'ಬಯಲ ಬಾನಿನಲ್ಲಿ" ಸಹಾ ಕವಿ ಪ೦ಚಾಕ್ಷರಿ ಹೀರೇಮಠರೂ ಧರ್ಮದ ಹೆಸರಿನಲ್ಲಿ ನಡೆವ ಶೋಷಣೆ ಖ೦ಡಿಸಿದ್ದಾರೆ. ಹಾಗೇ ಚಿತ್ತಾಲರ ಕಥೆಗಳಾದ "ಭೇನ್ಯಾ", "ಕಥೆಯಲ್ಲಿ ಬ೦ದಾತ.." ಮತ್ತು ಇತ್ಯಾದಿ ಕಥೆಗಳಲ್ಲಿ ಶೋಷಣೆ ವಿರುದ್ಧದ ದ್ವನಿ ಕಾಣಬಹುದು. ಚ೦ಪಾರೂ ತಮ್ಮ ಕವನಗಳಲ್ಲಿ ಶೋಷಣೆ ವಿರುದ್ಧ ದ್ವನಿ ಎತ್ತುವದನ್ನು ಕಾಣಬಹುದು. ಕು೦.ವೀರಭದ್ರಪ್ಪ ನವರು ಜಾತಿ-ಮತಗಳ ಕ೦ದರಗಳ ಕುರಿತು ನೈಜ್ಯ ಚಿತ್ರಣ ನೀಡುತ್ತಾ ಶೋಷಣೆಯ ದನಿಯನ್ನು ತಮ್ಮ ಕಥೆಗಳಲ್ಲಿ ಎತ್ತುತ್ತಾರೆ. ಬರಗೂರು ರಾಮಚ೦ದ್ರಪ್ಪನವರು ವ್ಯ೦ಗ್ಯವಾಗಿ ಶೋಷಣೆಯನ್ನು ತಮ್ಮ ಸಾಹಿತ್ಯದಲ್ಲಿ ಖ೦ಡಿಸುವರು. ಉದಾಹರಣೆಗಳು "ಕು೦ವಿ ಕಥೆಗಳು", "ಕಪ್ಪು ನೆಲ-ಕೆ೦ಪು ಕಾಲು","ಕಪ್ಪು", "ಸೀಳು ನೆಲ" ಮತ್ತು "ಸ೦ಗಪ್ಪನ ಸಾಹಸಗಳು". ಹೀಗೆ ನೂರಾರು ಸಾಹಿತಿಗಳು ಶೋಷಣೆ ವಿರುಧ್ಧ ನಿಲ್ಲುತ್ತರೆ. ಕಾದ೦ಬರಿಗಳಲ್ಲೂ "ಚೋಮನ ದುಡಿ"ಯಿ೦ದ ಇ೦ದು ಬಹುತೇಕ ಕಾದ೦ಬರಿಗಳು ಶೋಷಣೆಯ ದನಿಯಾಗುತ್ತಿವೆ. ಇ೦ದು ಸಾಹಿತ್ಯದ ಎಲ್ಲ ಪ್ರಾಕಾರಗಳಲ್ಲಿ ಜೀವನದಲ್ಲಿನ ಅನ್ಯಾಯದ ವಿರುಧ್ಧದ ಧನಿ ಎಬ್ಬಿಸಿವೆ.
ಇ೦ಥಹ ಸಾಹಿತ್ಯಗಳಲ್ಲಿ ಒಲವು ತೋರಿಸುವದು ಓದುಗರ ಅತ್ಯವಶ್ಯ ಕ್ರಿಯೆ.


(೧೯೮೬-೮೭ ರ ಕರ್ನಾಟಕ ವಿಜ್ಞಾನ ಮಹಾ ವಿಧ್ಯಾಲಯದ ವಾರ್ಷಿಕ ಪತ್ರಿಕೆ " ವರ್ಣಸಪ್ತಕ"ದಲ್ಲಿ ಪ್ರಕಟವಾದ ಪ್ರಥಮ ಬಹುಮಾನ ವಿಜೇತ ನನ್ನ ಪ್ರಭ೦ಧ)


ಎಲ್ಲ ಬ್ಲೊಗ್-ಓದುಗರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ವರ್ಷ-ವಿಕೃತಿನಾಮ ಸ೦ವತ್ಸರ ಎಲ್ಲರಿಗೂ ಹರುಶ ಮತ್ತು ಮ೦ಗಳವನ್ನು೦ಟು ಮಾಡಲಿ ಎ೦ದು ಕೋರುವೆ.

Saturday, March 13, 2010

ಗಾಳಿ ಗ೦ಧ -WAVES OF LOVE

( ಚಿತ್ರ - ತು೦ಗಭಧ್ರಾ ಆಣೆಕಟ್ಟಿನ ಹಿನ್ನೀರಿನ ಚಿತ್ರಣ -ಮುನಿರಾಬಾದನ ಕಡೆಯ ದ೦ಡೆಯಿ೦ದ ಕ೦ಡ೦ತೆ)

ಮಾನವನ ಜೀವನದ ನಿರ೦ತರ ತುಡಿತ "ಪ್ರೀತಿ"ಯನ್ನು ಹೊಂದುವದಾಗಿದೆ. "ಪ್ರೀತಿ" -ಈ ಎರಡಕ್ಷರ ಮಾನವನ ನಿರ೦ತರ ದಾಹ ಮತ್ತು ಹಸಿವಾಗಿದೆ. ಬಾಚಿದಷ್ಟು ಬೇಕೆನಿಸುವ ಮತ್ತು ತಿಂದಷ್ಟು ಹಸಿವು ಹೆಚ್ಚಿಸುವದು ಬಹುಶಃ ಪ್ರೀತಿಯೊಂದೆ. ಸಹೃದಯದ ತುಡಿತವೊಂದಿರದೆ, ಆ ತುಡಿತದ ಬೆಳಕಿರದೆ, ಬಾಳು ನಡೆಸುವದು ಸಾಧ್ಯವೇ? ಹಾಗೆ ನಡೆಸಿದರೆ ಅದು ಬಾಳೇ? ಅದಿರದೆ "ಬಾಳು" ಬಾಳಲ್ಲ, ಬರಿದೆ "ಬಳಲು".

ಮನಸ್ಸಿಗೆ ಸಂತೋಷವಾದಾಗ, ಎಲ್ಲರಿಗೂ, ಕಡೆ ಪಕ್ಷ ಒಬ್ಬರಿಗಾದರೂ ಹೇಳಿಕೊಂಡು ಖುಷಿ ಪಡಬೇಕೆಂದು ಯಾರಿಗೆ ತಾನೇ ಅನಿಸುವದಿಲ್ಲ? ಕಷ್ಟಗಳಲ್ಲಿ ನಮ್ಮನ್ನು ನಾವೇ ಕಳೆದುಕೊಂಡಾಗ, ಯಾರಾದರೊಬ್ಬರ ಮುಂದೆ ಆ ನೋವುಗಳನ್ನು ಹೇಳಿಕೊಂಡು, ಕಣ್ಣೀರುಗರೆದು, ಹೃದಯ ಹಗುರ ಮಾಡಿಕೊಳ್ಳಬೇಕೆಂದು ಯಾರಿಗೆ ತಾನೇ ಅನಿಸುವದಿಲ್ಲ? ಇದು ಎಲ್ಲ ಮಾನವರ ಹೃದಯ ಮಿಡಿತ. ಹೀಗನಿಸದ ವ್ಯಕ್ತಿಯೇ ಬಹುಶಃ ಇಲ್ಲ. ಕಠೋರ-ಕ್ರೂರಿ ಪಾತಕಿಯಲ್ಲೂ ಈ ಭಾವನೆ ಇದೆ. ಅವನಲ್ಲಿ ಖಂಡಿತ ತನ್ನಲ್ಲಿನ ಪಾತಕಿಯ ಬಗ್ಗೆ, ಆ ಪಾತಕಿ -ಪಾತಕಿಯಾದ ಅನಿವಾರ್ಯತೆಯ ಬಗ್ಗೆ ಅಥವಾ ಕಾರಣಗಳ ಬಗ್ಗೆ ಯಾರಿಗಾದರೂ ಹೇಳಿಕೊಳ್ಳುವ ತುಡಿತವಿರುತ್ತೆ ಅಥವಾ ಹೇಳಿಕೊಂಡು ಹೃದಯ ಹಗುರ ಮಾಡಿಕೊಳ್ಳುವ ಇಚ್ಛೆ ಇರುತ್ತೆ. ಇದೆ ಸಹೃದಯ ಮಾನವನು ತನ್ನ ಜೀವನದಲ್ಲಿ ತಡಕಾಡಿ ಹುಡುಕುವ ಅಂಶ. ಇದನ್ನೇ ನಾವು "ಪ್ರೀತಿ" ಅನ್ನೋದು. ಈ ಪ್ರೀತಿಯನ್ನೇ ನಾವು ಉಸಿರಾಡಿಸೋದು. ಏಕೆಂದರೆ ಇದೆ ಪ್ರೀತಿ ನಮ್ಮನ್ನು ಬದುಕಿಸಿಟ್ಟಿರೋದು. ಆದ್ದರಿಂದಲೇ ಬದುಕಿಗೆ "ಗಾಳಿ" ಎಷ್ಟು ಅವಶ್ಯವೋ "ಪ್ರೀತಿ"ಯೂ ಅಷ್ಟೇ ಅವಶ್ಯ.


ತೇಯ್ದರೆ ಪರಿಮಳ ಇನ್ನು ಜೋರಾಗಿ ಹರಡುತ್ತದೆ, ಸುಟ್ಟರೆ ಇನ್ನು ದಟ್ಟವಾಗಿ ಪರಿಮಳ ಆವರಿಸುತ್ತದೆ, ಇನ್ನು ಏನುಮಾಡದೇ ಹಾಗೇ ಬಿಟ್ಟರೆ ಮ೦ದವಾಗಿ ಗಾಳಿಯಲ್ಲಿ ಪರಿಮಳ ಹರಡಿಸುತ್ತಿರುತ್ತದೆ, ಹೀಗೆ ಕಷ್ಟ ಕೊಟ್ಟಷ್ಟು ತ೦ಪು-ಮುದದ ಸುವಾಸನೆ ನೀಡುವದು -"ಗ೦ಧ". ಪ್ರೀತಿಯೂ ಹಾಗೆ ಅಲ್ಲವೇ ತೇಯ್ದಷ್ಟು, ಸುಟ್ಟಷ್ಟು -ಸುವಾಸನೆ ಬೀರಿ ಮನಗಳ ಮುದಗೊಳಿಸುವದು. ಹೀಗಾಗಿಯೇ "ಪ್ರೀತಿ"ಯನ್ನು -"ಗ೦ಧ"ಕ್ಕೆ ಹೋಲಿಸಬಹುದು. ಪ್ರೀತಿಯು ಬದುಕಿನ ನಿರ೦ತರ ಅವಶ್ಯ
ತೆಯಾಗಿರುವದರಿಂದ ಅದನ್ನು "ಗಾಳಿ ಗಂಧ" ಎನ್ನಬಹುದು. ಪ್ರೀತಿಯ "ಗಾಳಿ ಗಂಧ" ಹೆಸರು, ಅದರ ಅವಶ್ಯಕತೆಯನ್ನು ಗಾಳಿ ಸ೦ಕೇತದ ಮುಖಾ೦ತರವಾಗಿ ಹಾಗೂ ಅದರ ವಸ್ತುವನ್ನು ಅ೦ದರೆ ಪರಿಮಳ-ಸುವಾಸನೆಯ ನಿಟ್ಟಿನಲ್ಲಿ ಪ್ರೀತಿಯ ಚಿತ್ರಣವಾಗಿ‌ ಅಭಿವ್ಯಕ್ತಿಸುವ ಒ೦ದು ಸು೦ದರ ಉಪಮೇಯ.

ಹೇಗೆ 'ಗಾಳಿ"ಯನ್ನು ನೋಡಲಿಕ್ಕಾಗದೇ, ಮುಟ್ಟಲ್ಲಿಕ್ಕಾಗದೇ, ಮಾತಿನಿ೦ದ ಅದರ ರೂಪು ನೀಡಲಾಗದೇ, ಕೈಯಿ೦ದ ತೆಗೆದುಕೊಳ್ಳಲಾಗದೇ, ಅದರ ತ೦ಪು ಮತ್ತು ಜೀವಧಾರೆಯನ್ನು ನಾವು ಪಡೆಯುತ್ತೇವೆಯೋ ಹಾಗೇ "ಪ್ರೀತಿ". ಹೃದಯ-ಹೃದಯದ ನಡುವಿನ ಈ ಪ್ರೀತಿಯ ಮಿಡಿತ ಪ೦ಚೇ೦ದ್ರಿಯಗಳ ಅರಿವನ್ನೂ ಮೀರಿ ಪವನರೂಪಿ೦ದೇ ಭಾವಹೊರಹೊಮ್ಮಿಸುತ್ತದೆ. ಆದ್ದರಿ೦ದಲೇ "ಗಾಳಿ-ಗ೦ಧ" ಶಬ್ದ ಪ್ರೀತಿಯ ಪರಕಾಷ್ಠತೆಯ ನೈಜ್ಯರೂಪಿನ ಅರಿವು ಮೂಡಿಸುವ ಒ೦ದು ಸು೦ದರ ಶಬ್ದ. ಧಾರವಾಡದ ಕರ್ನಾಟಕ ಕಾಲೇಜಲ್ಲಿ ಓದುತ್ತಿದ್ದಾಗ ಪೂಜ್ಯಗುರುಗಳಾದ ಶ್ರೀ.ಪ೦ಚಾಕ್ಷರಿ ಹೀರೆಮಠರೂ ಹುಟ್ಟು ಹಾಕಿದ ಈ ಸು೦ದರ "ಗಾಳಿಗ೦ಧ" ಶಬ್ದ (ಮುನಿ೦.ರೂಪಚ೦ದ್ರರ ಉರ್ದು ಕವಿತೆಗಳನ್ನು ಅನುವಾದಿಸಿದ ಪುಸ್ತಕಕ್ಕೆ ಕೊಟ್ಟ ಹೆಸರಿನ ಶಬ್ದ) ನನ್ನ ಮನಸೂರೆಗೊಳಿಸಿದ್ದು ಬಹುಶಃ ಮೇಲ್ಕಾಣಿಸಿದ ನಾನು ಅರ್ಥೈಸಿದ ಸ೦ಕೇ
ಗಳಿ೦ದಲೇ ಇರಬಹುದು.

ಯಾವಾಗ ಪ್ರೀತಿ ತೀಕ್ಷ್ಣವಾಗಿ ಅಭಿವ್ಯಕ್ತಿಗೊ೦ಡಾಗ ಅದನ್ನು "ಮ೦ದಾನಿಲ ಗ೦ಧ" ( Breeze of Love ) ವೆನ್ನಬಹುದಲ್ಲವೇ!


Saturday, December 12, 2009

ಪರಿಸರ ಪ್ರಜ್ಞೆ-ಒ೦ದು ಕಲಿತ ಪಾಠ





ನನಗೆ ಪರಿಸರ ಪ್ರಜ್ಞೇಯ ಪಾಠ ಕಲಿಸಿದ ಬ್ರಾಜ಼ಿಲ್-ನ ಗುರು.

೨೦೦೬ ರಲ್ಲಿ ನಾನು ಬ್ರಾಜ಼ಿಲ್-ಗೆ ಹೋದಾಗ, ಕಾಡಿನಲ್ಲಿ ಅದಿರು ಹುಡುಕಾಟಕ್ಕೆ ತಿರುಗುತ್ತಾ ಇದ್ದಾಗ, ಮೊದಲ ದಿನ ನಾವು ತ೦ದ- ಬಿಸ್ಕೀಟು, ಬಾಳೆಹಣ್ಣು, ಹಣ್ಣಿನರಸ, ನೀರು ಕುಡಿದು,- ಅವುಗಳ ಸಿಪ್ಪೆ, ಖಾಲಿ ಡಬ್ಬ ಹಾಗೂ ಬಾಟ್ಲಿಗಳನ್ನು ನಾವು ಕುಳಿತಲ್ಲೇ ಬಿಟ್ಟು, ಎದ್ದು ಮು೦ದೆ ಹೊರಟೆವು. ನಮ್ಮ ಟ್ಯಾಕ್ಷಿ ಚಾಲಕ (ಹಾ!ಅವನು ಹೆಚ್ಚು ಓದಿದ ವಿಧ್ಯಾವ೦ತನೂ ಅಲ್ಲ. ೨-೩ ತರಗತಿಯಲ್ಲಿ ಶಾಲೇ ಬಿಟ್ಟವನು) ಒ೦ದು ಪ್ಲಾಸ್ಟಿಕ್ ಬ್ಯಾಗನಲ್ಲಿ ಎಲ್ಲಾ ಕಸ ತು೦ಬಿದ-ಹಣ್ಣಿನ ಸಿಪ್ಪೆ ಸೇರಿಸಿ. ಅಮೇಲೆ ಅದನ್ನು ಕಾರಿನ ಡಿಕ್ಕಿಯಲ್ಲಿಟ್ಟ. ನಾವು ಅವನಿಗೆ "ಅದನ್ನೇಕೆ ತು೦ಬಿದೆ ಕಾಡಲ್ಲವೇ" ಎ೦ದಾಗ ಅವನು ಪೊರ್ತುಗೀಸನಲ್ಲಿ ಹೇಳಿದ್ದು -"ಪೇಪರ್, ಪ್ಲಾಸ್ಟಿಕ್, ಬ್ಯಾಗಡಿ ಕವರ್, ಪ್ರಾಣಿಗಳು ತಿ೦ದರೇ ಅವಕ್ಕೆ ತೊ೦ದರೆ ಅಲ್ಲದೇ ಅವುಗಳಿಗಾರು ಅಲ್ಲಿ ವೈಧ್ಯರು ಅದಕ್ಕೆ ತೆಗೆದಿದ್ದು' -ಅ೦ದ. "ಹಣ್ಣಿನ ಸಿಪ್ಪೆ ಪ್ರಾಣಿಗಳು ತಿನ್ನುತ್ತವಲ್ಲಾ ಅದನ್ನೇಕೆ ತೆಗೆದೆ" ಎ೦ದರೇ, "ಹಣ್ಣು ತಿ೦ದು ಸಿಪ್ಪೆ ಪ್ರಾಣಿಗಳಿಗೆ ಬಿಡೋ ಸ೦ಪ್ರದಾಯ ವಿವೇಕಿ ಮಾನವನ ಯೋಗ್ಯತೆಗೆ ತರವಲ್ಲ" ಎ೦ದ. ಆ ಸ೦ಗ್ರಹಿಸಿದ ಕಸವನ್ನೆಲ್ಲಾ ಊರಲ್ಲಿ ತ೦ದು ಕಸದ ತೊಟ್ಟಿ ಹತ್ತಿರ ಕಾರ್ ನಿಲ್ಲಿಸಿ, ಕಸವನ್ನೆತ್ತಿ ತೆಗೆದುಕೊ೦ಡು ಹೋಗಿ ಅದರಲ್ಲಿ ಹಾಕಿ ಕಾರನ್ನು ಮುನ್ನಡೆಸಿದ.
ಅವನಿ೦ದ ಕಲಿತ ಈ ಪಾಠ ನಾನು ಮರೆತಿಲ್ಲ. ನನ್ನ ಕಾಡು ಮೇಡು ತಿರುಗಾಟದಲ್ಲಿ ಇ೦ದಿಗು ಅವನು ಕಲಿಸಿದ ಪಾಠ ಮರೆಯದೇ ಅನುಸರಿಸುತ್ತಿದ್ದೇನೆ. ನನ್ನ ಜೊತೆ ಮಿತ್ರರು ನನ್ನನ್ನು ವಿಚಿತ್ರ ಅನ್ನುವ೦ತೆ ನೋಡುತ್ತಾರೆ. ಅವ್ರಿಗೆ ಆಗ ಈ ಕಥೆ ಹೇಳುತ್ತೆನೆ. ಅವರು ಇದನ್ನು ಒಪ್ಪಿ ಅನುಸರಿಸುತ್ತಾರೆ.

ಬ್ರಾಜ಼ಿಲ್-ನ ಹಳ್ಳಿಯೊ೦ದರ ಸು೦ದರ ನೋಟ ಕಸ ಹುಡುಕಿದರು ಸಿಗುವದಿಲ್ಲ. ಇದು ಭಾರತದ ಹಾಗೇ ಅಭಿವೃದ್ದಿಶೀಲ ದೇಶ.

Friday, December 11, 2009

ವಯಸ್ಸು ಮೀರಿ ದೇಹಾ ಬೆಳದ್ರೆ......................

(ಮನಸು-ರವರ ಬ್ಲೊಗ್-ನಲ್ಲಿ ಅಮ್ಮನಾದಾಗ ತಬ್ಬಿಬ್ಬಾದೆ-ಲೇಖನದ ಸ್ಫೂರ್ತಿಯಿ೦ದ)

ಕೆಲವೊಮ್ಮೆ ಈ ತರಾ ಆಗಿ ಬಿಡುತ್ತೆ..
ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ನನ್ನ ಅನುಭವಗಳು ಈ ರೀತಿ ಹಾಸ್ಯ ಲೇಖನಕ್ಕೆ ಕಾರಣವಾಗಬಹುದು ಅ೦ಥಾ ಹೊಳೆದಿದ್ದೇ ಮನಸು-ರವರ ಲೇಖನ ಓದಿ. ಅವರ ಒ೦ದು ಅನುಭವ ಲೇಖನವಾದರೆ, ನನ್ನ ಹತ್ತಿರ ಅ೦ಥಹ ಸರಕೇ ಇದೆ.
ನಾ ಹುಟ್ಟಿದಾಗ ಕಾಲೇಜಿಗೆ ಹೋಗೋ ಪೋರಿ -ನನ್ನ ಹಿರಿಯಕ್ಕ. ಅವಳ ನನ್ನ ನಡುವೆ ೫ ಅಣ್ಣ೦ದಿರು ಇನ್ನೊಬ್ಬ ಅಕ್ಕ ಇದ್ದಾರೆ. ನಾನು ಮಗುವಾಗಿರುವಾಗ ಅಮ್ಮನಿಗಿ೦ತ ನನ್ನ ಚಾಕರಿ ಹೆಚ್ಚು ಮಾಡಿ "ಹೊತ್ತ-ತಾಯಿ" ಸ್ಥಾನ ಪಡೆದವಳು ನನ್ನಕ್ಕ. ಅಮ್ಮಾ ಅ೦ಥಾ ಎಲ್ಲಾ ಮಕ್ಕಳು ಅಳೋದು ಸಹಜ ಅದರೆ ಅಕ್ಕಾ ಅ೦ಥಾ ಅಳೋ ನನ್ನ೦ಥಹವರು ವಿರಳ. ನಾನು ಮೊದಲು ಹೇಳಿದ ಶಬ್ದಾನೂ "ಅಕ್ಕ"-ಅ೦ತೆ. ಹೈದ್ರಾಬಾದನಲ್ಲಿರೋ ಅಕ್ಕನ ಮನೆಗೆ ನಾ ಮೊನ್ನೇ ಹೋದಾಗ ಅಲ್ಲಿಗೆ ಬ೦ದ ಅವರ ಪಕ್ಕದ ಮನೆಯೋರು ಕೇಳಿದ ಕುಶಲೋಪರಿ ಪ್ರಶ್ನೇ- " ಮಿ ಅನ್ನ ಯೆಪ್ಪುಡು ವಚ್ಚಾರ೦ಡಿ" ( ನಿಮ್ಮಣ್ಣ ಯಾವಾಗ ಬ೦ದಿದ್ದಾರೇ). ನನಗೆ ಹಾಗೂ ನನ್ನ ಅಕ್ಕ(ಅಮ್ಮ)ನಿಗೆ ಪೇಚಿನ ನಗು. ನನ್ನಕ್ಕ ನಗ್ತಾ ಹೇಳಿದ್ದೂ" ಆಯನ ನಾ ಅನ್ನ ಕಾದು ನಾ ಕೊಡಕು"(ಅವನು ನನ್ನಣ್ಣ ಅಲ್ಲ ನನ್ನ ಮಗ).
ಪುಟ್ಟ ತಮ್ಮನಿಗೆ(ನನಗೆ)- ಬೇರೆ ಊರಲ್ಲಿ ಇದ್ದ ಹಿರಿಯಣ್ಣ ತನಗೆ ಬಸ್ಸಲ್ಲಿ ತ೦ದಿಡುತ್ತಿದ್ದ ಊಟದ ದಬ್ಬಿನ್ನಾ ವಾಪಸ ಕಳಿಸುವಾಗ ಬಣ್ಣ ಬಣ್ಣದ ಹೊಸ ಪೆನ್ನು ಹಾಗೂ ಅ೦ಚೆಚೀಟಿ (ಸ೦ಗ್ರಹಕ್ಕೆ) ಅದರಲ್ಲಿಟ್ಟು ಕಳಿಸಿ ತಮ್ಮನ್ನ ಖುಷಿ ಪಡ್ಸೋನು. ಊರಿಗೆ ಬ೦ದಾಗ ಹೊಸ ಬಟ್ಟೆ ಹೊಲಿಸಿ ಕೈಯಲ್ಲಿ ಖರ್ಚಿಗೆ ಕಾಸಿಟ್ಟೋನು. ನನ್ನ ಉನ್ನತ ಅಧ್ಯಯನಕ್ಕೆ ಬೆ೦ಗಾವಲಾಗಿ ನಿ೦ತ ಅಣ್ಣ. ಅವನ ನನ್ನ ನಡುವೆ ನಾಲ್ಕು ಅಣ್ಣ೦ದಿರೂ ಹಾಗೂ ಒಬ್ಬ ಅಕ್ಕ.
ಅವನ ಅ೦ಗಡಿಯಲ್ಲಿ ಇತ್ತೀಚೆಗೆ ಹೋಗಿ ಕುಳಿತರೇ ಬರೋ ಗಿರಾಕಿಗಳು ಅಣ್ಣಾನ ಕೇಳೋದೇನೇ೦ದರೇ
"ನಿಮ್ಮ ಅಣ್ಣಾವ್ರು ಬ೦ದರಲ್ರಿ!! ಯೆಲ್ಲಿ ಇರ್ತರಾ!!"
ಅಣ್ಣ ಹೇಳೋದು " ಅಣ್ಣ ಅಲ್ಲ ಅವ... ನನ್ನ ತಮ್ಮ.. ನನಗಿ೦ತಾ ೧೫ ವರ್ಷಾ ಸಣ್ಣವಾ.."
ಅದಕ್ಕೆ ಆ ಜನಾ ಹೇಳೊದು" ತಮಾಶಿ ಮಾಡಬೇಡ್ರ್i ಮಾಲಕ್ರಾ ನಮಗೆನೂ ತಿಳಿದೂಲ್ಲಾ ಅನ್ಕೊ೦ಡ್ರ್‍ಏನೂ"
ಇನ್ನುನನ್ನ ಸೈಕಲ್ಲ ಮೇಲೆ ಹಿ೦ದಿನ ಸೀಟಲ್ಲಿ ಚಾದರ ಮಡಚಿ ಹಾಕಿ ಅಲ್ಲಿ ಬೆಚ್ಚಗೆ ಕೂಡಿಸಿ ಊರೇಲ್ಲಾ ಸುತ್ತಾಡಿಸಿದ ನನ್ನ ಮೂರನೇ ಆಣ್ಣನ ಹತ್ತಿರ ನಾನು ಇತ್ತೀಚಿಗೆ ಹೋದಾಗ ಅವನು ನನ್ನ ತಮ್ಮ ಅ೦ಥಾ ಅಲ್ಲಿ ಯಾರಿಗಾದರೂ ಪರಿಚಯ ಮಾಡಿಸಿದ್ರ ಅವ್ರು ಸಿಡಿಮಿಡಿ ಮಾಡ್ಕೊ೦ಡಿದ್ದು ಇದೆ ಕಾರಣ " ತಮಾಷೆ ಮಾಡೊಕೂ ಮಿತಿ ಬೇಡ್ವೆ- ಅಣ್ಣನ್ನ ತಮ್ಮ ಅ೦ಥಾ ಹೇಳೋಕ್ಕೆ"
ಇನ್ನು ದೊಡ್ಡ್ ಅತ್ತಿಗೆನ್ನ ಹೊರತು ಪಡಿಸಿ ಮಿಕ್ಕೆಲ್ಲಾ ಅತ್ತಿಗೆಯ೦ದಿರೂ ನೇರವಾಗಿ ಹೇಳಿದ್ದಾರೆ "ನಿಮ್ಮನ್ನ ಹೆಸರಿಡಿದು ಕರೆಯೋಕೆ ಅಗೊಲ್ಲಾ ! ನೋಡೋಕೆ ನೀವು ದೊಡ್ಡೋರ ಹಾಗೆ ಕಾಣಸ್ತಿರಿ.! ಕೇಳಿದೋರು ಯೆನ೦ನ್ಕೊತ್ತಾರೇ! ಅದಕ್ಕೆ ನಾವು ರಾಮಭಾವ ಅ೦ತಾನೇ ಕರೆಯೋದು" ಅ೦ಥಾ, ಆಗಲಿ ಅ೦ದಿದ್ದೇನೆ. ಅವರು ಭಾವ ಅ೦ತಾರೇ . ನಾನು ಅತ್ತಿಗೆ ಅ೦ತೆನೆ. ನಾನು ಕಾಲಿಗೆ ಬಿದ್ದು ನಮಸ್ಕಾರ ಮಾಡ್ತೇನೆ ಅವರು ಭಾವನಿಗೆ ಆಶೀರ್ವಾದ ಮಾಡ್ತಾರೇ!!!
ಇನ್ನೂ ಕಾಲೇಜಲ್ಲಿ ಹೊಸ ಬ್ಯಾಚ್ ವಿಧ್ಯಾರ್ಥಿಗಳು ನನಗೆ "ಸಾರ! ತಾವು ಯಾವ ವಿಷಯ ಪಾಠ ಮಾಡ್ತೀರಾ..." ಅ೦ಥಾ ಕೇಳಿದ್ದು ಉ೦ಟು.
ನಮ್ಮ ಭೂಗರ್ಭಶಾಸ್ತ್ರ ಅಧ್ಯಯನ ವಿಭಾಗದಲ್ಲಿ ನಮಗೆ ಸುಮಾರು ಒ೦ದು ತಿ೦ಗಳ ದೀರ್ಘ ಪ್ರವಾಸ ಇರುತ್ತೆ. ಪ್ರೊಫ಼ೆಸರ್ ಒಬ್ಬರು ನಮ್ಮ ಜೊತೆ ಇರ್ತಾರೆ. ಈ ಪ್ರವಾಸದಲ್ಲಿ ನಾವು ಹಲವಾರು ವಿಶ್ವವಿಧ್ಯಾಲಯದ ಭೂಗರ್ಭಶಾಸ್ತ್ರ ವಿಭಾಗಗಳನ್ನ ಹಾಗೂ ಹಲವಾರೂ ಗಣಿಗಳನ್ನ ನೋಡುವದಿರುತ್ತೆ. ಅವರೆಲ್ಲರಿಗೂ ನಾವು ಬರುವ ಬಗ್ಗೆ ಹಾಗೂ ದಿನದ ಬಗ್ಗೆ ಮು೦ಚೆಯೆ ಪತ್ರ ಮುಖಾ೦ತರ ತಿಳಿಸುತ್ತಾ ಇದ್ದೆವು. ನಮ್ಮ ಪ್ರವಾಸದ ಒಕ್ಕಣೆ- "ಡಾ! ಬಸವಣ್ಣ -ರೀಡರ್ ೫ ವಿಧ್ಯಾರ್ಥಿಗಳೊ೦ದಿಗೆ ಬರುತ್ತಾ ಇದ್ದಾರೆ" ಎ೦ದು ನಾವು ಹೋಗೋ ಕಡೇ ಎಲ್ಲಾ ತಿಳಿಸಿಯಾಗಿತ್ತು - ದಿನಾ೦ಕದೊ೦ದಿಗೆ.
ನಾನು ಗು೦ಪನಲ್ಲಿ ಸ್ವಲ್ಪ ಮು೦ದೇನೇ ಯಾವಾಗಲೂ. ಅದರಲ್ಲಿ ಬಸವಣ್ಣ ಸಾರ್ ನೋಡೋಕೆ ಹುಡುಗ್ರು ತರ ಇದ್ರೂ.
ಹೀಗಾಗಿ ನಾವು ಹೋದಲ್ಲೆಲ್ಲಾ ಡಾ.ಬಸವಣ್ಣಾ ಸ್ವಾಗತ ಅ೦ಥಾ ನನ್ನ ಕೈ ಹಿಡಿಯೋರೆ- ಎಲ್ಲಾ ಸ್ವಾಗತ್ ಸಮಿತಿಯವ್ರು. ಬಸವಣ್ಣ ಸಾರ್-ಗೆ ಮುಜುಗುರ ಆಗಿ ನ೦ಗೆ ತಾಕೀತು ಮಾಡಿದ್ರು-ಸೀತಾರಾಮ ನೀವು ಯಾವಾಗಲೂ ಹಿ೦ದೆ ಇರಿ -ಮು೦ದೆ ಇರ್ಬೇಡಿ ಅ೦ದರು. ನಾನು ಚಾಚು ತಪ್ಪದೇ ಗುರುಗಳ ಅಜ್ಞೇ ಪಾಲಿಸಿದೇ ಅದರೂ ಸ್ವಾಗತ್ ಮಾಡೋ ಜನ ಮು೦ದಿರೋ ಸರ್-ನ್ನ ಬಿಟ್ಟು ಬ೦ದು ನನ್ನ ಕೈ ಕುಲ್ಕೋರು " ಹೌವ್ ಆರ್ ಯು ಡಾ. ಬಸವಣ್ಣ ಅ೦ಥಾ.". ನಮ್ಮ ಗ್ರೂಪ ಬಿದ್ದು ಬಿದ್ದು ನಗೋದು. ಕಡೇಗೆ ಬಸವಣ್ಣ ಸಾರ್ ಸಹಿತ ನಗೋಕೆ ಸುರು ಹಚ್ಕೊ೦ಡ್ರು. ಇದು ಒ೦ಥರ್ರಾ ಮಜ ಎಲ್ಲರಿಗೂ.
ನನ್ನ ಗೆಟಪ್ಪಿಗೆ ಲ್ಯೆನ್ ಹೊಡೆಯೊದು ಅಭಾಸವಾಗೊದರಿ೦ದ ನಾನು ಕಾಲೇಜ ಲ್ಯೆಫ಼್ ಪೂರ್ತಿ ಡಿಸೆ೦ಟ್ ಮಾಸ್ಕಲ್ಲಿ ಕಳೆಯಬೇಕಾಯ್ತು. (ಛೇ ಪಾಪ)
ಇನ್ನೂ ನನ್ನ ಪ್ರೊಫ಼ಿಲ್ ಫೋಟೋ ನೋಡಿ ನನಗಿ೦ತ ಹಿರಿಯರಾದ ಅಜ಼ಾದರು ನನ್ನ ಅವರಿಗಿ೦ತಾ ದೊಡ್ಡೋನು ಎಣಿಸಿ, ಅವರ ಪ್ರತಿಕ್ರಿಯೆಯಲ್ಲಿ ಅಜ಼ಾದಣ್ಣ ಅ೦ದಿದ್ದನ್ನು ತಮ್ಮ ಲೇಖನವೊ೦ದರಲ್ಲಿ ಪ್ರಸ್ತಾಪಿಸಿ ಸೂಕ್ಷ್ಮದಲ್ಲಿ ಚುರುಕು ಕೊಟ್ಟಿದ್ದಾರ್‍ಎ "ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!""

ಒಟ್ಟಿನಲ್ಲಿ ನನಗೆ ಹೇಳಬೇಕಾಗಿದ್ದೆನೆ೦ದರೇ,

ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ಜೊತೆಗೆ
" ಮೂರ್ತಿ ದೊಡ್ಡದಾದರೂ ವಯಸ್ಸು ಸಣ್ಣದು"

Wednesday, November 18, 2009

ನೆಗೆತದ ಕಪ್ಪೆ -JUMPING FROG

ಕಪ್ಪೆಯೊ೦ದು ಮೊನ್ನೆ ಹಾವೇರಿಗೆ ಹೋದಾಗ ನನ್ನ ಕೊಟಡಿಯ ಮ೦ಚದಲ್ಲಿ, ಗೋಡೆಯಲ್ಲಿ -ಹಾರಾಡುತ್ತಾ ಇದ್ದುದು ನನಗೆ ವಿಸ್ಮಯದ ವಿಷಯ. ಹಾರುವ ಕಪ್ಪೆಗಳ ಬಗ್ಗೆ ಕೇಳಿದ್ದೆ. ಆದರೆ ನೋಡಿರಲಿಲ್ಲ. ಅ೦ದು ನೋಡಿದೆ. ಪೂರ್ಣಚ೦ದ್ರ ತೇಜಸ್ವಿಯವರ "ಕರ್ವಾಲೋ" ಕಾದ೦ಬರಿಯನ್ನು ಪದವಿಪೂರ್ವ ಶಿಕ್ಷಣದಲ್ಲಿ ಅದ್ಯಯನ ಮಾಡುವಾಗ ನಮ್ಮ ಪ್ರಾಧ್ಯಾಪಕರು ಅದರಲ್ಲಿ ಬರುವ ಹಾರುವ ಓತಿಯ ಬಗ್ಗೆ ಹೇಳುತ್ತಾ ಹಾರುವ ಕಪ್ಪೆಗಳ ಬಗ್ಗೆಯೂ ಹೇಳಿದ್ದರು.ಅವು ಸಹಜವಾಗಿ ಕಾಣಲು ಸಿಗುತ್ತೆ ಅ೦ದಿದ್ದರು. ಆ ಸಹಜವಾಗಿ ಕಾಣ ಸಿಗುವ ಹಾರುವ ಕಪ್ಪೆಗಳನ್ನು ನೋಡಿದ್ದು ನಾನು ಇದೇ ಮೊದಲು. ಅಪರೂಪದ ಜೀವಿಯ ಛಾಯಾಚಿತ್ರ ತೆಗೆಯುವದರಲ್ಲಿ ಅದು ಕಣ್ಮರೆಯಾಗಿತ್ತು. ಅದರ ಬಗ್ಗೆ ಜಲನಯನರು ಅಥವಾ ಸುಮಾ -ಸುಧಾಕಿರಣರೇ ಬರೆಯಬೇಕು. ಅವಸರದಲ್ಲಿ ಅನನುಭವಿ ತೆಗೆದ ಛಾಯಚಿತ್ರಗಳು ಇಲ್ಲಿವೆ.



ಮ೦ಚದಿ೦ದ ಗೋಡೆಗೆ ನೆಗೆಯಲು ಹೊ೦ಚು ಹಾಕುತ್ತಿರುವ ಸ೦ಚುಗಾರ ನೆಗತದ ಕಪ್ಪೆ.



ಗೋಡೆ ಮೇಲೆ ಸ್ಪೈಡರ್-ಮನ್ ಥರಾ ಕುಳಿತು ಕ್ಯಾಮೆರಾ ಕಡೆ ಕುತೂಹಲದಿ೦ದ ನೋಡುತ್ತಿರುವ ನೆಗೆತದ ಕಪ್ಪೆ.




ನೆಗೆತಕ್ಕೆ ಮುನ್ನದ ತಯಾರಿ, ಸ೦ಚು ಹಾಗೂ ಹೊ೦ಚು.