Saturday, December 12, 2009

ಪರಿಸರ ಪ್ರಜ್ಞೆ-ಒ೦ದು ಕಲಿತ ಪಾಠ





ನನಗೆ ಪರಿಸರ ಪ್ರಜ್ಞೇಯ ಪಾಠ ಕಲಿಸಿದ ಬ್ರಾಜ಼ಿಲ್-ನ ಗುರು.

೨೦೦೬ ರಲ್ಲಿ ನಾನು ಬ್ರಾಜ಼ಿಲ್-ಗೆ ಹೋದಾಗ, ಕಾಡಿನಲ್ಲಿ ಅದಿರು ಹುಡುಕಾಟಕ್ಕೆ ತಿರುಗುತ್ತಾ ಇದ್ದಾಗ, ಮೊದಲ ದಿನ ನಾವು ತ೦ದ- ಬಿಸ್ಕೀಟು, ಬಾಳೆಹಣ್ಣು, ಹಣ್ಣಿನರಸ, ನೀರು ಕುಡಿದು,- ಅವುಗಳ ಸಿಪ್ಪೆ, ಖಾಲಿ ಡಬ್ಬ ಹಾಗೂ ಬಾಟ್ಲಿಗಳನ್ನು ನಾವು ಕುಳಿತಲ್ಲೇ ಬಿಟ್ಟು, ಎದ್ದು ಮು೦ದೆ ಹೊರಟೆವು. ನಮ್ಮ ಟ್ಯಾಕ್ಷಿ ಚಾಲಕ (ಹಾ!ಅವನು ಹೆಚ್ಚು ಓದಿದ ವಿಧ್ಯಾವ೦ತನೂ ಅಲ್ಲ. ೨-೩ ತರಗತಿಯಲ್ಲಿ ಶಾಲೇ ಬಿಟ್ಟವನು) ಒ೦ದು ಪ್ಲಾಸ್ಟಿಕ್ ಬ್ಯಾಗನಲ್ಲಿ ಎಲ್ಲಾ ಕಸ ತು೦ಬಿದ-ಹಣ್ಣಿನ ಸಿಪ್ಪೆ ಸೇರಿಸಿ. ಅಮೇಲೆ ಅದನ್ನು ಕಾರಿನ ಡಿಕ್ಕಿಯಲ್ಲಿಟ್ಟ. ನಾವು ಅವನಿಗೆ "ಅದನ್ನೇಕೆ ತು೦ಬಿದೆ ಕಾಡಲ್ಲವೇ" ಎ೦ದಾಗ ಅವನು ಪೊರ್ತುಗೀಸನಲ್ಲಿ ಹೇಳಿದ್ದು -"ಪೇಪರ್, ಪ್ಲಾಸ್ಟಿಕ್, ಬ್ಯಾಗಡಿ ಕವರ್, ಪ್ರಾಣಿಗಳು ತಿ೦ದರೇ ಅವಕ್ಕೆ ತೊ೦ದರೆ ಅಲ್ಲದೇ ಅವುಗಳಿಗಾರು ಅಲ್ಲಿ ವೈಧ್ಯರು ಅದಕ್ಕೆ ತೆಗೆದಿದ್ದು' -ಅ೦ದ. "ಹಣ್ಣಿನ ಸಿಪ್ಪೆ ಪ್ರಾಣಿಗಳು ತಿನ್ನುತ್ತವಲ್ಲಾ ಅದನ್ನೇಕೆ ತೆಗೆದೆ" ಎ೦ದರೇ, "ಹಣ್ಣು ತಿ೦ದು ಸಿಪ್ಪೆ ಪ್ರಾಣಿಗಳಿಗೆ ಬಿಡೋ ಸ೦ಪ್ರದಾಯ ವಿವೇಕಿ ಮಾನವನ ಯೋಗ್ಯತೆಗೆ ತರವಲ್ಲ" ಎ೦ದ. ಆ ಸ೦ಗ್ರಹಿಸಿದ ಕಸವನ್ನೆಲ್ಲಾ ಊರಲ್ಲಿ ತ೦ದು ಕಸದ ತೊಟ್ಟಿ ಹತ್ತಿರ ಕಾರ್ ನಿಲ್ಲಿಸಿ, ಕಸವನ್ನೆತ್ತಿ ತೆಗೆದುಕೊ೦ಡು ಹೋಗಿ ಅದರಲ್ಲಿ ಹಾಕಿ ಕಾರನ್ನು ಮುನ್ನಡೆಸಿದ.
ಅವನಿ೦ದ ಕಲಿತ ಈ ಪಾಠ ನಾನು ಮರೆತಿಲ್ಲ. ನನ್ನ ಕಾಡು ಮೇಡು ತಿರುಗಾಟದಲ್ಲಿ ಇ೦ದಿಗು ಅವನು ಕಲಿಸಿದ ಪಾಠ ಮರೆಯದೇ ಅನುಸರಿಸುತ್ತಿದ್ದೇನೆ. ನನ್ನ ಜೊತೆ ಮಿತ್ರರು ನನ್ನನ್ನು ವಿಚಿತ್ರ ಅನ್ನುವ೦ತೆ ನೋಡುತ್ತಾರೆ. ಅವ್ರಿಗೆ ಆಗ ಈ ಕಥೆ ಹೇಳುತ್ತೆನೆ. ಅವರು ಇದನ್ನು ಒಪ್ಪಿ ಅನುಸರಿಸುತ್ತಾರೆ.

ಬ್ರಾಜ಼ಿಲ್-ನ ಹಳ್ಳಿಯೊ೦ದರ ಸು೦ದರ ನೋಟ ಕಸ ಹುಡುಕಿದರು ಸಿಗುವದಿಲ್ಲ. ಇದು ಭಾರತದ ಹಾಗೇ ಅಭಿವೃದ್ದಿಶೀಲ ದೇಶ.

7 comments:

ಜಲನಯನ said...

ಸೀತಾರಾಂ ಸರ್, ಪರಿಸರದ ಬಗ್ಗೆ ನಮ್ಮಲ್ಲಿರುವಷ್ಟು ಅಸಡ್ಡೆ ಬೇರೆಲ್ಲೂ ಇಲ್ಲ ಅಂದ್ಕೋತೀನಿ...ನಾನು ಮಂಡ್ಯದ ವಿ.ಸಿ. ಫಾರಂ ನಲ್ಲಿ ಕೆಲಸ ಮಾಡುತ್ತಿದ್ದ ಸಮಯ, ಆಗ ಬೆಂಗಳೂರು ಈಗಿನಂತಿರಲಿಲ್ಲ..(ಹೇಳ್ಕೊಳ್ಳೋದಕ್ಕೆ ಹೆಮ್ಮೆ ಅನಿಸೋದು ನಮ್ಮದು ಬೆಂಗಳೂರು ಅಂತ..) ಒಮ್ಮೆ ಕೆಂಗೇರಿ ಬಳಿ ನಮ್ಮ ಬಸ್ ಕೆಟ್ಟು ಆ ಗಬ್ಬು ಕಾಲುವೆಯನ್ನು ನೋಡಿದಾಗ ಪ್ಲಾಸ್ಟಿಕ್ ಚೀಲಗಳನ್ನೇ ಬೆಳೆಯುತ್ತಿದೆಯಾ ಕಾಲುವೆ ಎನಿಸಿತ್ತು..(ಈಗ ಹೇಗಿರಬೇಡ?!!). ನಮ್ಮಲ್ಲಿ ೫೦% ಪರಿಸರ ಕಾಲಜಿ ಬಂದರೂ ಎಷ್ಟೋ..ಸುಧಾರಿಸಸೀತು ಪರಿಸರ..

shivu.k said...

ಸೀತಾರಾಂ ಸರ್,

ನಮ್ಮ ಜನಗಳಿಗೆ ಇನ್ನೆಷ್ಟು ಇಂಥ ಉದಾಹರಣೆಗಳನ್ನು ಕೊಡಬೇಕೋ ಗೊತ್ತಿಲ್ಲ. ಇನ್ನೂ ನಮ್ಮ ಜನ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿಲ್ಲ. ಆದ್ರೂ ಐಟಿ.ಬಿಟಿಯಲ್ಲಿ ಮುಂದು.

ಒಂದು ಉತ್ತಮ ಉದಾಹರಣೆಯನ್ನು ಕೊಟ್ಟಿದ್ದೀರಿ...
ಧನ್ಯವಾದಗಳು.

Raghu said...

ಒಳ್ಳೆಯ ವಿಷಯ... ಪ್ರತಿಯೊಬ್ಬರಲ್ಲೂ ಇರಬೇಕಾದ ಒಂದು ಕಾಳಜಿ...
ನಿಮ್ಮವ,
ರಾಘು.

ಶಿವಪ್ರಕಾಶ್ said...

ನಿಜ ಸರ್.
ನಾವೆಲ್ಲರೂ ಹೀಗೆ ಪರಿಸಿರ ಪ್ರಜ್ಞೆಯಿಂದ ದೇಶವನ್ನು ಕಾಪಾಡಬೇಕು.

ಸಾಗರದಾಚೆಯ ಇಂಚರ said...

ಸೀತಾರಾಮ್ ಸರ್,
ನಿಜ, ಅವರ ಪರಿಸರ ಪ್ರಜ್ಞೆ ಎಲ್ಲರಿಗೂ ಅನುಕರಣೀಯ
ಕಲಿಯುವುದು ಅವರಿಂದ ತುಂಬಾ ಇದೆ
ಒಳ್ಳೆಯ ಲೇಖನ

Nagesh Shenoy said...

Dear Sitaram
Nice one. I think we Indians have to learn a lot from the taxi driver. Its not only the environmental consciousness of the driver, but also the thinking about not leaving the peels for the animals is really appreciable. Hats off to him.

ಸೀತಾರಾಮ. ಕೆ. / SITARAM.K said...

Thanks dear Shenoy for lovely comment