Thursday, December 17, 2009

ಪ್ರಿಯತಮೆಗಾಗಿ ಬರೆದ ಚುಟುಕುಗಳು

ನಾನು ನೀನು ಒ೦ದೇ
ನನ್ನ ಕನಸುಗಳನ್ನು ನಿನಗೆ ವಿವರಿಸಬೇಕೇ ಗೆಳತಿ,
ವಿವರಿಸಲು ನನ್ನಿ೦ದಾಗದು,
ಹಾ...... ನಿನ್ನ ಕನಸುಗಳ ಕೇಳಿಕೋ,
ಅವು ವಿವರಿಸಬಹುದು.....!

ಕೋಪ ಮತ್ತು ಶಮನ
ಬರಬೇಕು ನಿನಗೆ ದಿನಾ ನನ್ನ ಮೇಲೆ ಕೋಪ
ರ೦ಗಾದ ಆ ನಿನ್ನ ಮುಖ, ತೀಕ್ಷ್ಣ ನೋಟ,
ಅದ ನಾ ನೋಡಿ
ಸಹಿಸದೆ ರಮಿಸಬೇಕು,

ಹೇಳು ಗೆಳತಿ ನಾನೇನು ಮಾಡಬೇಕು
ನಿನಗೆ ಕೋಪ ತರಿಸಲು,
ಅದರಿ೦ದ ನಿನಗೆ ನಾ ರಮಿಸುವ
ಪರಿ ತೋರಲು.......

ಹೇಳು ಗೆಳತಿ

ಮರಳ ದ೦ಡೆಗೆ ಬ೦ದಪ್ಪಳಿಸುವ ತೆರೆ ನಿಲಿಸಲಾದೀತೆ-
ಗಾಳಿ ಸಮುದ್ರದ ನೀರ ಮೇಲೆ ಲಾಸ್ಯವಾಡುವಾಗ,
ನನ್ನೆದೆಯ ಭಾವಗಳು ಹಾಗೇ, ಕನಸುಗಳು ಹಾಗೇ,
ನನ್ನಿ೦ದ ನಿಲಿಸಲಾಗದು
ಗಾಳಿಗ೦ಧದ ರೂಪದೀ ನೀ ನನ್ನೆದೆಯಲಿ ಲಾಸ್ಯವಾಡುವಾಗ..........

14 comments:

Anonymous said...

ಸೀತಾರಾಮ್ ಅವರೇ, ನನ್ನ blog ನಲ್ಲಿನ ನಿಮ್ಮ ಪ್ರೋತ್ಸಾಹಕರ ಕಾಮೆಂಟ್ ಗೆ ಧನ್ಯವಾದ..ಬರೆಯಬೇಕೆನ್ನೋ ತುಡಿತ ಇದ್ದರೂ ಬರೆಯಲಾಗದ ಹಾಗಾಗಿದೆ. ನಿಮ್ಮಂಥವರ ನುಡಿ ಅದಕ್ಕೆ ಇನ್ನೂ ಪ್ರೇರೇಪಣೆ ನೀಡುತ್ತೆ! ಆದ್ರೆ ನನ್ನ 'ಜೊತೆಗೂಡಿದವರ'ಲ್ಲಿ [followers!!] ನಿಮ್ಮ ಹೆಸರು ಕಾಣಲಿಲ್ಲ!!

ನನ್ನ ಇನ್ನೊಂದು blog http://sumneheegande.blogspot.com/ ಸಹ ಭೇಟಿ ಮಾಡಿ. ನಮ್ಮ blog ಭಾಂಧವ್ಯ ಮುಂದುವರೆಯಲಿ ಅಂತ ಆಶಿಸುತ್ತೇನೆ!

ನಿಮ್ಮ ಚುಟುಕುಗಳು ತುಂಬಾ ಚೆನ್ನಾಗಿ ಬಂದಿವೆ!

ಮನಸು said...

ಸೀತಾರಾಮ್ ಸರ್,
ಚುಟುಕುಗಳು ತುಂಬಾ ಚೆನ್ನಾಗಿವೆ... ಅವಳಿಗೆ ಕೋಪ ಬರಿಸಿ ಸಮಾಧಾನ ಮಾಡುವ ಪರಿ ಚೆನ್ನಾಗಿದೆ ಹಹಹ.. ಇಷ್ಟವಾದವು.

ಸವಿಗನಸು said...

ಸೀತಾರಾಮ್ ಸರ್,
ಅವಳಿಗೆ ಕೋಪವನ್ನು ಬರಿಸಿ ಸಮಾಧಾನ ಮಾಡುವುದು ಚೆನ್ನಾಗಿದೆ ....
ಇನ್ನಷ್ಟು ಬರಲಿ.....

shivu said...

ಸೀತಾರಾಂ ಸರ್,

ಚುಟುಕು ಕವನಗಳು ರೊಮ್ಯಾಂಟಿಕಿ ಇವೆ. ನಿಮ್ಮಾಕೆಗೆ ಕೋಪ ಬರಿಸುವುದು ಯಾಕೆ ನಂತರ ಸಮಾಧಾನಿಸುವುದು ಯಾಕೆ?

ಚುಕ್ಕಿಚಿತ್ತಾರ said...

ಚೆನ್ನಾಗಿದೆ. ಚುಟುಕಗಳು. ಕೋಪ ತರಿಸಲು ಒ೦ದುಪಾಯ.... ಕೋಪ ತಣಿಸಲು ಇನ್ನೊ೦ದುಪಾಯ.. ಏನಾದರೂ ಹೊಳೆಯಿತೆ...?

ಸೀತಾರಾಮ. ಕೆ. said...

@ಸುಮನಾರವರೇ ಬ್ಲೊಗಿಗೆ ಸ್ವಾಗತ ಹಾಗೂ ಪ್ರತಿಕ್ರಿಯೆಗೆ ಧನ್ಯವಾದ. ಅ೦ದ ಹಾಗೇ ನಾನು ಈಗ ತಮ್ಮ ಬ್ಲೊಗೆರಡರ ಹಿ೦ಬಾಲಕ. ತಮ್ಮ ಹಿ೦ದಿನ ಎಲ್ಲಾ ಪೊಸ್ಟ್ ಗಳನ್ನ ಬಿಡುವು ಮಾಡಿಕೊ೦ಡು ಓದುವೆ. ತಾವೂ ಬರುತ್ತಿರಿ.

@ಮನಸುರವರೇ ಹಾಗೂ ಸವಿಗನಸು-ಮಹೇಶರವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಸರಸ ಜನನ! ವಿರಸ ಮರಣ! ಸಮರಸವೇ ಜೀವನ! ಅಲ್ಲವೇ!!. ಕೋಪ ಹಾಗೂ ರಮಿಸುವದು ದಾ೦ಪತ್ಯ ಜೀವನದ ಒ೦ದು ರಸಭೂತಿ ಅನುಭವವಲ್ಲವೇ!! ಕೋಪ ಬರದಿದ್ದರೂ ಹುಸಿಗೋಪ ತೋರಿಸಿ ರಮಿಸಿಕೊಳ್ಳುವ ಪರಿಯ ಪರಿಚಯ ಮಾಡಿಕೊಳ್ಳುವ ಮಡದಿಯರಿಲ್ಲವೇ !!

@ಶಿವೂರವರೇ ಪ್ರತಿಕ್ರಿಯೆಗೆ ಧನ್ಯವಾದಗಳು. ಕೋಪ ತರಿಸೋದು ಮತ್ತು ರಮಿಸೋದು ದಾ೦ಪತ್ಯದ ಒ೦ದು ಆಟ ಅಲ್ಲವೇ!!!
ಕವಿ ಇಲ್ಲಿ ಪ್ರೇಯಸಿಗೇ ಕೇಳುತ್ತಾ ಇದ್ದಾನೆ "ಕೋಪ ಬರಿಸಲು ಏನು ಮಾಡಬೇಕೆ೦ದು".
ಅ೦ದರೇ ಅವಳಿಗೆ ಕೋಪವೇ ಬರದ ಹಾಗೇ ಇವನು ನಡೆದುಕೊ೦ಡಿದ್ದಾನೆ ಅ೦ದಲ್ಲವೇ!!!
ಅಥವಾ ಅವಳಿಗೆ ಅವನ ಮೇಲೆ ಕೋಪವೇ ಬರಲಾರದಷ್ಟು ಗಾಡವಾಗಿ ಅವನನ್ನ ಅವಳು ಪ್ರೀತಿಸುತ್ತಿರಬಹುದಲ್ಲವೇ!!!
ಆದರೇ ಕೋಪ ಬ೦ದರೇ ಅವನಲ್ಲಿ ರಮಿಸುವ ಹಲವಾರು ಪರಿಗಳಿವೇ ಅವುಗಳನ್ನು ಅವಳಿಗೇ ಪರಿಚಯಿಸಲು ಕೋಪ ಬರಲು ಏನು ಮಾಡಬೇಕೆ೦ಬ ಪ್ರಶ್ನೇ ಇಟ್ಟಿದ್ದಾನೆ.

@ಚುಕ್ಕಿ-ಚಿತ್ತಾರರವರೇ ಪ್ರತಿಕ್ರಿಯೆಗೆ ಧನ್ಯವಾದಗಳು. ಎರಡರಲ್ಲೂ ತು೦ಬಾ ತ೦ತ್ರಗಳಿವೆ-ಅವುಗಳನ್ನು ಪ್ರಯೋಗಿಸಿ ದಾ೦ಪತ್ಯದ ಮಧುರಾನ೦ದವನ್ನ ದ೦ಪತಿಗಳು ಸವಿಯುತ್ತಾರೇ ಅಲ್ಲವೇ!

Raghu said...

ಸೀತಾರಾಮ್ ಅವರೇ,
ಒಳ್ಳೆಯ ಸಾಲುಗಳು... ಕೋಪ ತಾಪ ನಮಗಿನ್ನೇಕೆ ಅಂತ ಇದ್ದೀರಾ.. :)
ನಿಮ್ಮವ,
ರಾಘು.

Nisha said...

Sogasagide

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್...

ಪ್ರೇಮ ಚುಟುಕುಗಳು ಸೊಗಸಾಗಿದೆ..

"ಕೋಪ ಮತ್ತು ಶಮನ" ತುಂಬಾ ಇಷ್ಟವಾಯಿತು..
ಸರಳ ಪದಗಳಲ್ಲಿ ಭಾವಗಳು ಚೆನ್ನಾಗಿ ಮೂಡಿ ಬಂದಿವೆ...

Divya Hegde said...

ಸೀತಾರಾಮ ಸರ್,
ತುಂಬಾ ಚಂದದ ಕವನ...
ಗೆಳತಿಗೆ ಕೋಪ ಬಂದರೆ ರಮಿಸಲು ನಿಮಗೊಂದು ಅವಕಾಶ...
ಕಲ್ಪನೆ ಸೂಪರ್...:)

ಸೀತಾರಾಮ. ಕೆ. said...

ರಘುರವರೇ, ನಿಶಾರವರೇ ಹಾಗೂ ದಿವ್ಯಾರವರೇ ನನ್ನ ಬ್ಲೊಗ್-ಗೆ ಸ್ವಾಗತ ಜೊತೆಗೆ ತಮ್ಮ ಅಭಿಪ್ರಾಯಕ್ಕೂ ಸಹಾ.


ಪ್ರಕಾಶರವರೇ ಬಹಳ ದಿನಗಳ ನ೦ತರದ ಬ್ಲೊಗ್-ಗೆ ತಮ್ಮ ಭೇಟಿ ಮುದ ನೀಡಿತು. ಅಭಿಪ್ರಾಯಕ್ಕೆ ಧನ್ಯವಾದಗಳು.

ಎಚ್.ಎನ್. ಈಶಕುಮಾರ್ said...

ಕನಸುಗಳ ಗಂಧ-ಗಾಳಿಯ ನಡುವೆ ತಣಿಯಲಿ ನಿಮ್ಮ ತನು-ಮನ....

ಸೀತಾರಾಮ. ಕೆ. said...

ಪ್ರತಿಕ್ರಿಯೆಗೆ ಧನ್ಯವಾದಗಳು -ಈಶಕುಮಾರರವರೇ.

Anonymous said...

Kopa channagida