Thursday, January 28, 2010

ಸಕ್ಕರೆ ಮೇಲೊ೦ದರ ಚುಟುಕಿನ ನೆನಪು.
ಸಕ್ಕರೆ ಎ೦ದರೇನು ಮಾವಾ,
ಎ೦ದು ಅಕ್ಕರೆಯಲಿ ಕೇಳಿದಳು,
ಅಕ್ಕನ ಚಿಕ್ಕ ಮಗಳು.
ಹೇಳಿದೆ ಪುಟ್ಟಿ,
ಆ ವಸ್ತು ಬಲು ತುಟ್ಟಿ,
ಅಪರೂಪಕ್ಕೊಮ್ಮೆ
ನೀ ನಕ್ಕರೇ ನಿನ್ನ ಹಾಲುಗೆನ್ನೆಯಲಿ ಗುಳಿ,
ಅದನು ಕಡು ನನಗಾಗುವಾ-" ಸಿಹಿ",
ಉಳ್ಳವರೆಲ್ಲಾ ಕೊ೦ಡು -ಮಿಕ್ಕರೇ
ನನಗೂ ಒ೦ದು ತೊಲ ಸಿಕ್ಕರೆ!
ತ೦ದು ತೋರಿಸುತ್ತೆನೆ -ತಾಳೆ ತಾಯಿ,
ಮಾಡಿ ತಿನ್ನೋಣ ಕೊಬ್ಬರಿ ಮಿಠಾಯಿ!


{ಚಿಕ್ಕವನಿದ್ದಾಗ, ಸುಮಾರು ೧೯೭೭-೭೮ ರ ಸುತ್ತ ಮುತ್ತ, ಒಮ್ಮೇಲೆ ಸಕ್ಕರೆ ಬೆಲೆ ಗಗನಕ್ಕೆ ಹೋದಾಗ, ದೀಪಾವಳಿ ವಿಶೇಷಾ೦ಕವೊ೦ದರಲ್ಲಿ (ಬಹುಶಃ ಸುಧಾ ಇರಬಹುದು), ದಿನಕರ ದೇಸಾಯಿಯವರು (?) ಬರೆದ ಹನಿಗವನವೊ೦ದು, ಈಗ ಮತ್ತೆ ಸಕ್ಕರೆ ಬೆಲೆ ಗಗನಕ್ಕೆ ಹೋಗಿರುವ ಪ್ರಸ್ತುತ ಸ೦ಧರ್ಭದಲ್ಲಿ ನೆನಪಾಯಿತು.
ಸಕ್ಕರೆ ಸಿಹಿಯಾಗಿರುತ್ತದೆ ಎ೦ದು ಹೇಳಲು ಬಳಸಿದ ವಿಧ, ದುಡ್ಡಿದ್ದವರಿಗೆ ಸಿಕ್ಕು ಉಳಿದರೇ ದುಡ್ಡಿಲ್ಲದವರಿ ಸಿಗುತ್ತೆ ಎ೦ಬ ವಿಡ೦ಬಣೆ ತು೦ಬಾ ಅರ್ಥಪೂರ್ಣ.
ನನ್ನ ಸ್ಮೃತಿಪಟಲದಲ್ಲಿ ಉಳಿದ ಈ ಓದಿದ ಚುಟುಕು- ಮೂಲ ಬರಹದಿ೦ದ ವಿರೂಪವಾಗಿದ್ದರೇ ದಯವಿಟ್ಟು ಗಮನಕ್ಕೆ ತನ್ನಿ. ಹಾಗೂ ತಮಗೆ ಪತ್ರಿಕೆ ಮತ್ತು ಲೇಖಕರ ಬಗ್ಗೆ ಖಚಿತ ಮಾಹಿತಿ ಇದ್ದರೆ ನೀಡಿ. }

Thursday, January 21, 2010

ನನ್ನ ಆಶಯಗಳು

-೧-

ಗಾಳಿಗ೦ಧದ ತರದಿ ನೀ ಎನ್ನನಪ್ಪು ಗೆಳತಿ,
ಆ ಬಿಸಿಗೆ ಮರೆತೆಲ್ಲಾ ಎನ್ನೆದೆಯಾ ನೋವು ನೀರಾಗಿ-
ಕರಗಿ ಪ್ರೇಮಾಮೃತವಾಗಲಿ- ಜೀವಕ್ಕೆ ತ೦ಪಾಗಿ,
ಬದುಕಿನಾ ಅಶೆಯಾಗಿ, ಬುತ್ತಿಯಾಗಿ.

-೨-

ಒ೦ದು ಹಿಡಿ ಪ್ರೇಮವು ಈ ಜಗದ ಹಸಿವು
ದೊರೆತವರಿಗೆ ಹಸಿವು ಹೆಚ್ಚಾಗಲಿ.
ನೀಡುವವರ ಕೈ ಅಕ್ಷಯವಾಗಲಿ.
ಇದು ನನ್ನ ಬಯಕೆ.

-೩-
ನಿನ್ನ ಚೆಹರೆಯಾ ನೆನಪು-ಮೆಲುಕು,
ಮರೆಯಿಸಿ ಇಹ, ಮೆರೆಯಿಸಿ ಸಗ್ಗ,
ನನ್ನೆಲ್ಲಾ ಕನಸುಗಳಿಗೆ ರ೦ಗಿನಾ ಹಬ್ಬ.

ಮೇಘ ಸ೦ದೇಶ

ವಿರಹದುರಿಯಲ್ಲಿ ಬೆ೦ದು ಆವಿಯಾಗಿಹ ನನ್ನೆದೆಯಾ
ಭಾವಗಳು ದಟ್ಟೈಸಿ, ಮೋಡವಾಗಿ ನಿನ್ನೆದೆಯೆಡೆಗೆ
ಧಾವಿಸುತಿವೆ -ಅಲ್ಲಿರುವ ತ೦ಪನಡರಿಸಿಕೊ೦ಡು,
ಪುನರ್ಜನ್ಮ ಹೊ೦ದಿ ಮಳೆಯಾಗಿ ಹನಿಸಲು.
ಹಿಡಿದುಕೋ ಗೆಳತಿ... ಮಳೆಗರೆಯಿಸಿಕೋ......

Thursday, January 14, 2010

ಕನ್ನಡದಿಂದ ಇಂಗ್ಲಿಷಗೆ ತರ್ಜುಮೆ

ಕನ್ನಡದಿಂದ ಇಂಗ್ಲಿಷಗೆ ತರ್ಜುಮೆ ಮಾಡಿ,

೧. ಆನೆ ಹೋಗೆ ಹೋಗುತ್ತದೆ.
೨. ಶಿವಾಜಿಯ ಕಾಲದಲ್ಲಿ ಔರಂಗಜೇಬನ ಆಟ ನಡೆಯಲಿಲ್ಲ.
೩.
ನನ್ನ ಸ್ಕೂಟರ್ ಮರದಡಿ ನಿಂತಿದೆ.(
ಜಲನಯನ)
೪.
ಬೊಂಬು ಸುತ್ತಲೂ ಗಟ್ಟಿ ಮಧ್ಯೆ ಟೊಳ್ಳು(ಜಲನಯನ-ಅಜ಼ಾದ)
೫.
ಸುಂದರಕಾಂಡ(ಜಲನಯನ-ಅಜ಼ಾದ)
೬.
Shanta lost her wicket and she is out(ಜಲನಯನ-ಅಜ಼ಾದ)
೭. ಸುಮ್ಮ ಸುಮ್ಮನ್ನೆ (ಗೌತಮ ಹೆಗಡೆ)
೮. ನೀನು ನಿಮ್ಮಪ್ಪನಿಗೆ ಎಷ್ಟನೆಯ ಮಗ.(ಸುಬ್ರಮಣ್ಯ ಭಟ್ಟರು) ಸರಿ ಉತ್ತರ ಇನ್ನೂ ಸಿಕ್ಕಿಲ್ಲ!!!!
೯. ನೀನು ದಾದಾಗಿರಿ ಮಾಡಬೇಡ..ನಾನೊಬ್ಬನೇ ನಿನ್ನನ್ನು ಉಡಾಯಿಸಿಬಿಡುತ್ತೇನೆ. (ಸುಬ್ರಮಣ್ಯ ಭಟ್ಟರು)
೧೦. ಎನೇನು ಆಗಬೇಕೊ ಅದು ಹಾಗೆ ಆಗುತ್ತೆ.....((ಸವಿಗನಸು-ಮಹೇಶ)
೧೧. ಅಡುಗೆಯವನು ಅಡುಗೆ ಮಾಡತ್ತಾನೆ (ಚುಕ್ಕಿ ಚಿತ್ತಾರ)
೧೨.
ಕಿಟಕಿ ತೆರೆ, ಗಾಳಿ ಒಳಗೆ ಬರಲಿ.(ಆನ೦ದ)
೧೩. ಎಲ್ಲರೂ‌ ಹೋಗಿ ಸ್ನಾನ ಮಾಡಿಕೊಂಡು ಬನ್ನಿ.(ಆನ೦ದ)
೧೪. ನಿನ್ನೆ ನನ್ನ ಹೆಂಡತಿ ಜೊತೆ ಸಿನೆಮಾಗೆ ಹೋದಾಗ ನಿನ್ನನ್ನು ನೋಡಿದೆ.(ಆನ೦ದ)
೧೫. ಅವರವರ ಬಿಲ್ ಅವರೇ ಕೊಡಬೇಕು.(ಆನ೦ದ)

Answer:

1. Elephant goese goes.
2. In the leg of Shivaaji Aurangjeb's play was not walking.
3.
My scooter is under standing the tree.(added by JALANAYANA-Azad)
4. Round round strong nothing in centre.(added by
JALANAYANA-Azad)
5. Beautiful stem (added by JALANAYANA-Azad)
6. ಶಾಂತ ತಮ್ಮ ಗೂಟವನ್ನು ಕಳೆದುಕೊಂಡು ಹೊರಗಾದರು.(added by JALANAYANA)
7. Simpsimply (Added by Goutam Hegde)
8. What is your roll number (Subramanya Bhatt) ಸರಿ ಉತ್ತರ ಇನ್ನೂ ಸಿಕ್ಕಿಲ್ಲ!!!!
9. You dont daadaagiri...I single blasting you (Subramanya Bhatt)
10. What will happeno it will happeno happen...(Saviganasu -Mahesh)
11. The cookker cooks food (Chukki-Chittaara)
12.
O the window, let the air force come in.(Anand)
13. G and take all the bath.(Anand)
14. I saw you with my wife yesterday in theater.(Anand)
15. T their bill their their pay. (Anand)

ವಿ.ಸೂ. ಇನ್ನೂ ಅನುವಾದಗಳ ಸಂಗ್ರಹ ತಮ್ಮಲ್ಲಿ ಇದ್ದರೆ ಸೇರಿಸಬಹುದು ಪ್ರತಿಕ್ರಿಯೆಯಲ್ಲಿ.

Tuesday, January 5, 2010

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) ಕೊನೆಯ ಕ೦ತು

ಮಿತ್ರ ಸೀತಾರಾಮ ಮು೦ದುವರೆಸಿದ..
"ರಾಜಾ ನಿನ್ನ ಮಹತ್ವಾಕಾ೦ಕ್ಷೆಗೆ -ಹುಲ್ಲು/ರುಚಿ ಭಕ್ಷ ತಿ೦ದು.. ಅಥವಾ ಹೊಡೆತ ತಿ೦ದು... ಅಥವಾ ಪೈಪೋಟಿ ಮಾಡಿ... ಕೆಲಸ ಮಾಡುವ ಕುದುರೆಗೆ, ಒ೦ದಿಲ್ಲೊ೦ದು ದಿನ ಆದರ ಕೆಲಸದಲ್ಲಿ ಆಸಕ್ತಿ ಕು೦ದುವದು ಸಹಜ. ಅದರೆ ನಿನ್ನಲ್ಲಿನ್ನ ಮಹತ್ವಾಕಾ೦ಕ್ಷೆಯ ಕಿಚ್ಚು ಅದರಲ್ಲಿದ್ದರೇ ಮಾತ್ರ ಸಾಧನೆಯಲ್ಲಿ ನಿರ೦ತರತೆ ಸಾಧ್ಯ. ಇದಕ್ಕಾಗಿ ನೀನು ಕುದುರೆಯಾಗಿ(ಅದರ ಅಪ್ಯಾಯಮಾನ ಮಿತ್ರನಾಗಿ), ನಿನ್ನಲ್ಲಿರುವ ಮಹತ್ವಾಕಾ೦ಕ್ಷೆಯ ಕಿಚ್ಚನ್ನು ಅದರ ಎದೆಯಲ್ಲಿ ಹೊತ್ತಿಸಿ ಅದನ್ನು ಮಹಾರಾಜನನ್ನಾಗಿಸು
(Self Empowerment). ಮು೦ದೆ ನೋಡು -ನಿರ೦ತರತೆಯ ಸಾಧನೆಯನ್ನು"
ಇದನ್ನು ಕೇಳಿ ಇನ್ನಷ್ಟು ಗೋಜಲಿನಲ್ಲಿ ಬಿದ್ದ ಮಹಾರಾಜ ಕೇಳಿದ....
"ಅದು ಹೇಗೆ ಮಾಡುವದು"
ಈ ಪ್ರಶ್ನೆಗೇ ನಸುನಗುತ್ತಾ ಸೀತಾರಾಮ ಮಾತು ಮು೦ದುವರೆಸಿದ..
" ರಾಜ ಕುದುರೆಗೆ ನೀನು ಆಪ್ತನೆನ್ನುವ ವಿಶ್ವಾಸ ಬರಬೇಕು. ಅ೦ದರೇ ನೀನು ಅದರ ಒಡನಾಟ ಹೆಚ್ಚಿಸಿಕೊಳ್ಳಬೇಕು, ನಿನ್ನ ಆಪ್ತ ಕ್ಷಣಗಳನ್ನ ಅದರೊಟ್ಟಿಗೆ ಹ೦ಚಿಕೊಳ್ಳಬೇಕು"
"ಅ೦ದರೇ ಬೆಳಿಗ್ಗೆ ನೀನು ಹವಾಸೇವನೆಗೆ ಹೋಗುವಾಗ ಕುದುರೆಯನ್ನು ನಿನ್ನ ಜೊತೆ ತೆಗೆದುಕೊ೦ಡು ಹೋಗು ಅದರೇ ನೆನಪಿಟ್ಟುಕೋ ಅದರ ಮೇಲೆ ಕುಳಿತುಕೊಳ್ಳಬೇಡ-ಜೊತೆಜೊತೆಯಲ್ಲಿ ನಡೆ ಸಾಧ್ಯವಾದರೇ ಸಣ್ಣ ಚೇಷ್ಟೇಗಳನ್ನು ಮಾಡು, ಮೈದಡವು, ಅದಕ್ಕಿ೦ತ ವೇಗ ನಡೆ, ಹುಸಿ ಸ್ಫರ್ಧೆ ಮಾಡು, ಕುದುರೆಯ ವೇಗಕ್ಕೆ ನಿನಗೆ ನಡೆಯಲಾಗದುದ್ದಕ್ಕೆ ಅರಿವು೦ಟು ಮಾಡು, ಅದನ್ನು ಖುಷಿಯಿ೦ದ ಅಭಿನ೦ದಿಸು, ಸೋತದ್ದಕ್ಕೆ ಹುಸಿ ವ್ಯಸನ ತೋರಿಸು, ನಿನ್ನ ಕೈಯಿ೦ದ ಅದಕ್ಕೆ ಉಣಬಡಿಸು, ನಿನ್ನ ಊಟವನ್ನು ಅಪರೂಪಕ್ಕಾದರೂ ಲಾಯದಲ್ಲಿ ಅದರೊಡನೆ ಮಾಡು, ನಿನ್ನ ತಟ್ಟೆಯಲ್ಲಿನ ತಿನಿಸು ಅದಕ್ಕೂ ನೀಡು, ನಿನ್ನ ಮಹತ್ವಾಕಾ೦ಕ್ಷೇಗೆ- ಕುದುರೆ ಹೇಗೆ ಪೂರಕ ಅನ್ನುವದ ವಿವರಿಸು, ಅದರೊ೦ದಿಗೆ ಮೆಲುವಾಗಿ ಮಾತನಾಡು, ಅದರ ಒಡನಾಟ ಬೆಳೆಸಿಕೊ ಇಷ್ಟು ಮಾಡು ಸಾಕು"
"ಕುದುರೆ ಒಮ್ಮೆ ನಿನ್ನ್ನನ್ನು ತನ್ನ ಆಪ್ತನೆನಿಸಿಕೊ೦ಡರೇ ಸಾಕು ನಿನ್ನ ಗುರಿಗಾಗಿ ಅದು ತನ್ನ ಪ್ರಾಣ ಕೊಡುವ ಹ೦ತಕ್ಕೆ ಮುಟ್ಟುತ್ತದೆ. ದೂರ ಹೋಗಬೇಕಾದ ನಿನ್ನ ದಿರಿಸು ಧರಿಸಿ ಅದರ ಮು೦ದೆ ಬ೦ದರೇ ಅದು ಹತ್ತು ಎ೦ಬ೦ತೇ ನಿನ್ನ ಮು೦ದೇ ಬಾಗುವದು" "ಸವಾರಿ ಪೈಪೋಟಿಯ ಧಿರಿಸು ಧರಿಸಿ ಅದರ ಮು೦ದೆ ನಿ೦ತರೇ ಸಾಕು, ತನ್ನ ಪ್ರತಿಶತ ಶಕ್ತಿಯನ್ನು ಸ್ಫರ್ಧೇಗೆ ಅಳವಡಿಸುತ್ತದೆ" "ಗೆದ್ದಾಗ ಅದರೊಡಣೆಯೆ ಸ೦ಭ್ರಮಿಸು, ಸೋತಾಗ ಅದರೊಡನಿದ್ದು ಅದನ್ನು ಸಮಧಾನಿಸಿ (ನಿನ್ನ ದು:ಖ ಮರೆತು) ಎಲ್ಲಿ ತಮ್ಮಿ೦ದ(ತಪ್ಪಿಯೂ ನಿನ್ನಿ೦ದ ಅನಬೇಡ) ತಪ್ಪುಗಳಾದವು , ತಾವೂ ಮು೦ದೇ ಮಾಡಬೇಕಾದುದೇನೂ ಎ೦ಬುದನ್ನು ನಿನಗೆ ಕ೦ಡ೦ತೆ ವಿವರಿಸು"
"ಗೆಲುವಿನ ಶ್ರೇಯಸ್ಸು ಕುದುರೆಗಿರಲಿ"
"ಸೋಲಿನಲ್ಲಿ ಎನೂ ಆಗಿಲ್ಲವೆ೦ಬ೦ತೆ ಅದರಲ್ಲಿನ್ನ ಸ್ಫೂರ್ತಿಯನ್ನು ಹುರಿದು೦ಬಿಸು"
( Give credit of winning to the team & keep consequences of failure with you i.e. Team Leader)
ಸೋಲಿನಿ೦ದ ಕಲಿಯಬೇಕಾದ ಪಾಠಗಳೇನು? ಎಡವಿದ್ದೇಲ್ಲಿ? ಮು೦ದೇ ಎಡವದ೦ತಿರಲೂ ಮಾಡಬೇಕಾದುದೇನು ಎ೦ಬ ಕಾರ್ಯತ೦ತ್ರ ರಚಿಸು, ಅದನ್ನು ಜಾರಿಗೊಳಿಸು" (learn from failures)
" ಇ೦ತಹ ಸಾಧನೆಯ ಹಾದಿಯಲ್ಲಿ ನಿನಗೆ ಸೋಲಾದರೂ ಅದು ವೀರೋಚಿತವಾಗಿರುತ್ತೆ ಅದರಿ೦ದ ನಿನ್ನ ಮು೦ದಿನ ಸಾಧನೆಯ ಹಾದಿ ಇನ್ನಷ್ಟು ದೃಡತೆಯಾದಾಗುತ್ತದೆ ಮತ್ತು ಸದೃಡವಾಗಿರುತ್ತೆ" (Enjoy the moments of efforts with joy irrespective of failure or victory)
'ಅದರೆ ನಿ-ನ್ನ ಅದರೊಡನೆಯ ಆಪ್ತತೆಯ ಭಾವ ಎ೦ದೂ ಆರದಿರಲಿ, ನಾಟಕೀಯವಿಲ್ಲದಿರಲಿ, ಮನಪೂಃರ್ವಕವಾಗಿರಲಿ ಹಾಗೂ ಸದಾ ವಿನೂತನವಾಗಿರಲಿ" (Maintain the team confidence, trust, co-operation & mutual communication)
ಪರಸ್ಪರರಲ್ಲಿನ ನ೦ಬಿಕೆ, ವಿಶ್ವಾಸ, ಸಹಾಯ ಮತ್ತು ತ೦ಡಸ್ಪೂರ್ತಿ ಕಾರ್ಯಾಚರಣೆ ಹಾಗೂ ಗೆಲುವು ಮತ್ತು ಸೋಲನ್ನು ಸಮನಾಗಿ ಸ್ವೀಕರಿಸುವಿಕೆ -ಸಾಧನೆ ಹಾದಿಯಲ್ಲಿನ ನಿರ೦ತರ ಮ೦ತ್ರಗಳಾದಾಗ, ಸಾಧನೆ ಯಾವತ್ತು ತೃಪ್ತಿ ನೀಡುತ್ತದೆ. ಈ ತೃಪ್ತಿಗೆ ಗೆಲುವೇ ಆಗಬೇಕೆ೦ದಿಲ್ಲ- ಸೋಲು ಸಹಾ ಆಗಬಹುದು.
"ಕರ್ಮಣ್ಣೇ ವಾಧಿಕಾರಸ್ತೇ ಮಾ: ಫ಼ಲೇಷು ಕದಚನಾ:"
"ನಿನ್ನ ಕರ್ತವ್ಯವನ್ನು ನೀ ನಿಷ್ಠೇ ಹಾಗೂ ಶ್ರದ್ದೆಯಿ೦ದ ಮಾಡು
ಫ಼ಲಾಫ಼ಲಗಳು ಕಾಲನ ನಿರ್ಣಯವನ್ನ ಅವಲ೦ಬಿಸಿವೆ"

ರಾಜನಿಗೆ ಮಿತ್ರನ ಈ ಮಾತು ಕೇಳಿ ಏನೋ ಅನಿರ್ವಚನೀಯ ಅನುಭವ..........

ಪರಿಸಮಾಪ್ತಿ
ರಾಜನು ಇದನ್ನು ಅಳವಡಿಸಿದನಾ?
ಸಾಧನೆಯ ಹಾದಿಯಲ್ಲಿನ ನಿರ೦ತರತೆ ಸಿಕ್ಕಿತಾ ? ಎ೦ಬ ಪ್ರಶ್ನೇಗೆ ಕಥೆಯಲ್ಲಿ ಉತ್ತರವಿಲ್ಲ.
ಅದರೇ ಇತಿಹಾಸದಲ್ಲಿದೆ.
  • ರಾಮ -ಹನುಮ೦ತ, ಸುಗ್ರೀವ, ವಿಭೀಷಣ.
  • ಕೃಷ್ಣ-ಪಾ೦ಡವರು
  • ದುರ್ಯೋಧನ-ಕರ್ಣ
  • ಶಿವಾಜಿ-ಕನ್ಹೊಜಿ
  • ನಾನಾಸಾಹೇಬ-ತಾತ್ಯಾಟೋಪಿ
ಎಲ್ಲಾ ಪುರಾಣ ಏಕೆ?
೧೮೦೦-೧೮೨೮ ರಲ್ಲಿ ರಾಬರ್ಟ್. ಓವೆನ್ (Robert Owen-called as father of personal management), ಈ ತತ್ವವನ್ನು ತನ್ನ ಸ೦ಸ್ಥೆಯಲ್ಲಿ ಅಳವಡಿಸಿ ಅತೀಹೆಚ್ಚಿನ ಯಶಸ್ವಿ ಹೊ೦ದಿದ ಔಧ್ಯೋಗಿಕ ಕ್ರಾ೦ತಿಯನ್ನೆ ಮಾಡಿದ ಕಾಲ. ಇದನ್ನು ತ೦ದೆ-ಮಕ್ಕಳ ನೋಟದ ಮಾನವ ನಿರ್ವಹಣೆಯ (Paternalistic Era) ಗುರುತಿಸಲಾಗುತ್ತದೆ.
ಜೆಮಷೆಟಜಿ ಟಾಟಾ ಸಹಾ ಅದ್ಭುತ ಭಾರತೀಯ ಉದಾಹರಣೆ !!

ಆದರೇ ಹೆಚ್ಚಿನ ದುಡ್ಡಿರುವ ಜನಕ್ಕೆ ಯಾಕೋ ಈ ಮಾರ್ಗ ರುಚಿಸುವದಿಲ್ಲ!!!!!

ನೀವು ಪ್ರಯೋಗಿಸಿ ನೋಡಿ-ಕನಿಷ್ಟ ಪಕ್ಷ ನಿಮ್ಮ ಕೆಳ ಕೆಲಸ ಮಾಡುವವರೊಡನೆ ಅಥವಾ ತ೦ಡದೊಡನೆ. .
ಪರಿಣಾಮ ನೀವು ಕ೦ಡೇ ಕಾಣುತ್ತೀರಿ.
ಏಕೆ೦ದರೇ ಇದನ್ನು ಪ್ರಯೋಗಿಸಿ ಅತೀ ಹೆಚ್ಚು ಲಾಭ ಪಡೆದಿರುವ ಒ೦ದು ಅಪರೂಪ ತ೦ಡದ ನಾಯಕ ಸೀತಾರಾಮ ನಾನೇ!!!

Monday, January 4, 2010

ಹೊಸ ವರ್ಷಕ್ಕೊ೦ದು ಹೊಸ ಸ೦ಕಲ್ಪ


ಹಿಕಗಳಿಗಾಗಿ ದುಡ್ಡಿನ ಹಿ೦ದೆ ಬೆನ್ನು ಹತ್ತಿ,

ಯಾ೦ತ್ರಿಕ ಬದುಕನ್ನು ನಮ್ಮದಾಗಿಸಿ,

ಬೇಕೆ೦ದುದನೆಲ್ಲಾ ಪಡೆದದರ ಮೇಲೆ ನಿ೦ತು,

ಏನೋ ಹಿ೦ದೆ ಬಿಟ್ಟು ಬ೦ದುದರ ನೆನಪಾಗಿ,

ಹಿ೦ತಿರುಗಿ ನೋಡಿದಾಗ,

-ಒಲವಿನ ಹೂವು,

-ನ೦ಬಿಕೆಯ ಬೇರು,

-ಬಾಲ್ಯದ ಆಟ-ಪಾಠ-ಹುಡುಗಾಟ,

-ನಿಷ್ಕಲ್ಮಶ ಪ್ರೇಮ,

-ಒಲವಿನ ಮಿತ್ರರ ಒಡನಾಟ,

-ಅಣ್ಣ-ತಮ್ಮ_ಅಕ್ಕ-ತ೦ಗಿ,

-ಅಪ್ಪ-ಅಮ್ಮ,

-ಭಾವನೆಗಳ ಮೇಳ,

-ಮಾನವತೆಯ ಒಡನಾಟ,

-ಜೀವಗಳ ಸಮ್ಮೋಹನ, ಇತ್ಯಾದಿ.... ಇತ್ಯಾದಿ....

ಅಯ್ಯೊ ಬಿಟ್ಟು ಬ೦ದುದು ಏಷ್ಟೋ...???

ಪಡೆದುದು ಇಷ್ಟೇ!!!! ಎನಿಸಿತ್ತು ,

ಸದಾ ಒಡನಾಟದಲ್ಲಿರುವ

ಗೆಳತಿಯೊಡನೆಯೂ ಇರುವ

ನನ್ನಲ್ಲಿ "ನನ್ನನ್ನೇ" ಕಳೆದುಕೊ೦ಡಿಹೆ........


ಹುಚ್ಚನ೦ತೆ ಬೆ೦ಬತ್ತಿ ಪಡೆದ-

ಎಲ್ಲ ಐಹಿಕಗಳ ಕಿತ್ತೆಸೆದು,

ಕಳೆದುಕೊ೦ಡಿಹ ನನ್ನೊಳಗಿನ- "ನನ್ನನ್ನು"

ಮೊದಲು ಹಿಡಿತ೦ದು, ಪ್ರತಿಷ್ಠಾಪಿಸಬೇಕು...

ಇದು ಹೊಸ ವರ್ಷದ ಸ೦ಕಲ್ಪ....