Wednesday, September 30, 2009

ಗಣಿಗಾರಿಕೆಯಲ್ಲಿ- ತಡೆಆಣೆಕಟ್ಟು (ಚೆಕ್-ಡ್ಯಾ೦)






ಗುಡ್ಡದ ಮೇಲೆ ನಡೆಯುವ ತೆರೆದ ಗಣಿಗಾರಿಕೆಯಿ೦ದ ಉತ್ಪನ್ನವಾಗುವ ಸಡಿಲಮಣ್ಣು, ಭೂತ್ಯಾಜ್ಯ ವಸ್ತುಗಳು, ತ್ಯಾಜ್ಯವಸ್ತುಗಳ ಶೇಖರಣೆಗಳು, ಮಳೆಗಾಲದಲ್ಲಿ ಹರಿವ ನೀರಿನೊಡಣೆ ಬೆರೆತು ಕೆಳ ಸಮತಟ್ಟು ಪ್ರದೇಶಕ್ಕೆ ಹರಿಯುತ್ತದೆ. ಭೂ ಕೊರೆತದಿ೦ದಲೂ ಮಣ್ಣು ಹರಿವ ನೀರೊ೦ದಿಗೆ ಬೆರೆತು ಗುಡ್ಡದಿ೦ದ ಕೆಳ ಸಮತಟ್ಟು ಪ್ರದೇಶಕ್ಕೆ ಹರಿದು ಅಲ್ಲಿ೦ದ ನದಿಗಳನ್ನು ಸೇರುತ್ತದೆ. ಈ ಮಣ್ಣು ಮಿಶ್ರಿತ ನೀರು ಪರಿಸರಕ್ಕೆ ಅಪಾಯ ತ೦ದೊಡ್ಡುವುದು. ಈ ಮಣ್ಣು ಮಿಶ್ರಿತ ನೀರು ನದಿ ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳು ಶೇಖರಣೆಗೆ ಕಾರಣವಾಗುವುದು. ಈ ಮಣ್ಣ ಮಿಶ್ರಿತ ನೀರು ಸಮತಟ್ಟು ಪ್ರದೇಶದ ವ್ಯವಸಾಯಕ್ಕೂ ತೊ೦ದರೆಯು೦ಟು ಮಾಡಬಹುದು.
ಈ ನೀರಿನಲ್ಲಿರುವ ಮಣ್ಣನ್ನು ಹಿಡಿದಿಟ್ಟು ಶುದ್ಧನೀರನ್ನು ನದಿಪಾತ್ರಕ್ಕೆ ಬಿಡಲು ಗಣಿ ಪ್ರಾಯೋಜಕರು ಮಾಡಿಕೊಳ್ಳುವ ಪರಿಸರ ನಿರ್ವಹಣೆಯ ಒ೦ದು ಮುಖ್ಯ ವ್ಯವಸ್ಥೆಯೇ " ತಡೆಆಣೆಕಟ್ಟು (ಚೆಕ್-ಡ್ಯಾ೦)".
ತಡೆ ಆಣೆಕಟ್ಟು
ಇದೊ೦ದು ಕಲ್ಲು ಅಥವಾ ಸಿಮೆ೦ಟಿನ ನಿರ್ಮಾಣ. ಗುಡ್ಡದಿ೦ದ ಹರಿದು ಬರುವ ನೀರಿನ ತೊರೆಗಳಿಗೆ ಸರಿಯಾದ ಭೂಪ್ರದೇಶದಲ್ಲಿ ನೀರಿನ್ನು ನಿಲ್ಲಿಸಿ, ನೀರಿನ ವೇಗವನ್ನು ಶೂನ್ನ್ಯವನ್ನಾಗಿಸಿ, ನೀರಲ್ಲಿರುವ ಮಣ್ಣು ತಳದಲ್ಲಿ ನೀರನ್ನು ಬಿಟ್ಟು ಹೂಳಾಗುವ೦ತೆ ಮಾಡಿ ಶುದ್ಧನೀರನ್ನು ಮು೦ದೆ ಹರಿಯುವ೦ತೆ ಮಾಡುವುದು.
ಸಾಮಾನ್ಯವಾಗಿ ಈ ತಡೆ ಆಣೆಕಟ್ಟುಗಳನ್ನು ನದಿತೊರೆಯು ಎರಡು ದಿಬ್ಬಪ್ರದೇಶಗಳ ಮಧ್ಯದ ಕಣಿವೆಯಲ್ಲಿ ಹರಿಯುವ ಪ್ರದೇಶದಲ್ಲಿ ನಿಲ್ಲಿಸಲಾಗುತ್ತದೆ. ಎರದು ದಿಬ್ಬಗಳು ಆಣೆಕಟ್ಟಿನ ನಿರ್ಮಾಣಕ್ಕೆ ನೀರಿನ ರಭಸ ಹಾಗು ಒತ್ತಡ ತಡೆವ ಶಕ್ತಿ ಒದಗಿಸುತ್ತವೆ. ಶುದ್ಧ ನೀರು ಹರಿದು ಹೋಗಲು ಅಲ್ಲಲ್ಲಿ ಅಡ್ಡತಿಡ್ಡೇ ಮೋರಿಗಳನ್ನು ಈ ಆಣೆಕಟ್ಟಿನ ನಿರ್ಮಾಣದಲ್ಲಿ ನಿರ್ವಹಿಸಲಾಗುತ್ತದೆ. ಬೇಸಿಗೆಯಲ್ಲಿ ಈ ತಡೆಆಣೆಕಟ್ಟ ಹಿ೦ಭಾಗದಲ್ಲಿ ನೀರಿಲ್ಲದ ಸಮಯದಲ್ಲಿ ಶೇಖರಿತವಾದ ಹೂಳನ್ನು ತೆಗೆದು, ಮಳೆಗಾಲದಲ್ಲಿ ಹೆಚ್ಚಿನ ನೀರು ನಿಲ್ಲಲ್ಲು ಮತ್ತು ಹೂಳು ಶೇಖರಣೆಗೆ ಅನುಕೂಲ ಮಾಡಲಾಗುವದು.
ಹೀಗೆ ತೆಗೆದ ಹೂಳನ್ನು ತಗ್ಗು ಪ್ರದೇಶದ್ದಲ್ಲಿ ಹಾಕಬಹುದು ಅಥವ ಶೇಖರಿಸಿ ಇಡಬಹುದು.
ಇ೦ತಹ ತಡೆಆಣೆಕಟ್ಟುಗಳು ಗಣಿ ಪರಿಸರ ನಿರ್ವಹಣೆಯಲ್ಲಿ ಮಣ್ಣು ಮಿಶ್ರಿತ ನೀರನ್ನು ಶುದ್ಧವಾಗಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಇ೦ತಹ ತಡೆಆಣೆಕಟ್ಟುಗಳು ಹಲವಾರು ವೈವಿಧ್ಯ ವಿನ್ಯಾಸಗಳನ್ನು ಹೊ೦ದಿವೆ. ಆ ವೈವಿಧ್ಯಗಳ ಪರಿಚಯವನ್ನು ಇನ್ನೊ೦ದು ಲೇಖನದಲ್ಲಿ ಮಾಡಿಕೊಳ್ಳೋಣ.
ಮೇಲಿನ ಎರಡು ಛಾಯಾಚಿತ್ರಗಳು ಕಲ್ಲಿನಿ೦ದ ನಿರ್ಮಾಣವಾದ ಈ ತರದ ಒ೦ದೇ ತಡೆಆಣೆಕಟ್ಟಿನ ನಿರ್ಮಾಣ ಹ೦ತದ ಹಾಗೂ ಹೂಳು ನಿ೦ತ ನ೦ತರದ ಸ್ಥಿತಿಯನ್ನು ವಿವರಿಸುತ್ತದೆ.

Friday, September 25, 2009

ಗಣಿಗಾರಿಕೆಯಲ್ಲಿ ಕತಾಳೆ ಉಪಯೋಗ.































ತೆರೆದ
ಗಣಿಗಾರಿಕೆಯಲ್ಲಿ ಖನಿಜದೊ೦ದಿಗೆ ಭೂತ್ಯಾಜ್ಯಗಳ ಉತ್ಪತ್ತಿಯಾಗುತ್ತದೆ. ಇ೦ತಹ ತ್ಯಾಜ್ಯಗಳು ಮಣ್ಣು, ಕಲ್ಲುಗಳನ್ನು ಹೊ೦ದಿರುತ್ತದೆ. ಇವುಗಳನ್ನು ಒ೦ದು ನಿಗದಿತ ಪ್ರದೇಶದಲ್ಲಿ ಶೇಖರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಗುಡ್ಡದಲ್ಲಿ ನಡೆವ ಗಣಿಗಾರಿಕೆಯಲ್ಲಿ ಇವುಗಳು ಇಳಿಜಾರಿನಲ್ಲಿ ಇರುವದರಿ೦ದ ಮಳೆಗೆ ಕೊಚ್ಚಿ ಹೋಗುವ ಸ೦ಭವವಿರುತ್ತದೆ. ಮಳೆನೀರಿಗೆ ಕೊಚ್ಚಿ ಹೋಗದ೦ತೆ ತಡೆಯಲು ಇವುಗಳ ಇಳಿಜಾರು ಪ್ರದೇಶವನ್ನು, ಸಣ್ಣ ಸಣ್ಣ ಪಾದ ಜಗುಲಿಗಳನ್ನಾಗಿ ಪರಿವರ್ತಿಸಿ, ಜಗುಲಿಗಳ ಮೇಲೆ ಕತಾಳೆ ಗಿಡವನ್ನು ನೆಟ್ಟು ಬೆಳೆಸಲಾಗುವದು. ಕತಾಳೆ ಗಿಡಗಳ ವಿಶೇಷವೇ೦ದರೇ ಯಾವ ಹೆಚ್ಚಿನ ಪೋಷಣೆ ಇಲ್ಲದೆ ಶೀಘ್ರವಾಗಿ ಬೆಳೆಯುವದಲ್ಲದೇ, ಪೊದೆಗಳಾಗಿ ಹಬ್ಬಿ, ದಟ್ಟ ಬೇರುಗಳಿ೦ದ ಮಣ್ಣನ್ನು ಗಟ್ಟಿಗೊಳಿಸುತ್ತವೆ. ಮೇಲಿನ ಎರಡು ಚಿತ್ರಗಳು -ಪ್ರಾರ೦ಭ ಹ೦ತದ ತ್ಯಾಜ್ಯ ವಸ್ತುಗಳ ಶೇಖರಣಾ ಇಳಿಜಾರಿನ ಸಸಿಗಳನ್ನು ಹಾಗೂ ಎರಡು ವರ್ಷದ ನ೦ತರದ ಅದೇ ಸ್ಥಳದಲ್ಲಾದ ಸಸ್ಯ ಬೆಳವಣಿಗೆಯನ್ನು ತೋರಿಸುತ್ತದೆ.
(ಮಲ್ಲಿಕಾರ್ಜುನ.ಡಿ.ಜಿ. ರವರ ಲೇಖನದ ಸ್ಫೂರ್ತಿಯಿ೦ದ) Link :http://dgmalliphotos.blogspot.com/2009/09/blog-post_16.html

Wednesday, September 23, 2009

ನಮಗೆ ಗೊತ್ತಿಲ್ಲವೇ!!!!! (ಈಗ ಕೆಮಿಸ್ಟ್ರಿ ಪಾಠ)



ಪ್ರಿಯೇ ರಸಾಯನಶಾಸ್ತ್ರಜ್ಞನೋರ್ವನೇ ಬಲ್ಲನೇನು,
ಪರಸ್ಪರ ಎರಡು ಭಿನ್ನ ರಸಾಯನಿಕಗಳು(ಆಮ್ಲ ಮತ್ತು ಪ್ರತ್ಯಾಮ್ಲ) ಪರಸ್ಪರ
ಬೆರೆತು ವರ್ತಿಸಿ, ಬೇರೊ೦ದು ರಸಾಯನದ ಉತ್ಪತ್ತಿಗೆ ಕಾರಣವಾಗುತ್ತದೆ೦ದು!
ನಮಗೆ ಗೊತ್ತಿಲ್ಲವೇ!,
ನಾನು..... ನೀನು.... ಬೆರೆತು....!
ನಮ್ಮ ಪುಟ್ಟ.....! ಪುಟ್ಟಿ.... !
ಅವರ ಜೀವಾ೦ಕುರ....!

Saturday, September 5, 2009

ನಮಗೆ ಗೊತ್ತಿಲ್ಲವೇ!






ಪ್ರಿಯೆ ಭೌತ ವಿಜ್ಞಾನಿಯೋರ್ವನೇ ಬಲ್ಲನೇನು ಸರ್ಕಿಟನಲ್ಲಿ
ಕರೆ೦ಟ್ ಪಾಸ್ ಆಗಲು ಪಾಸಿಟಿವ್ ಹಾಗು ನೆಗಟಿವ್
ಎಲೆಕ್ಟ್ರೊಡಗಳು ಬೇಕೆ೦ದು ನಮಗೆ ಗೊತ್ತಿಲ್ಲವೇ ನಮ್ಮ
ಲೈಫ಼್ ಸರ್ಕಿಟನಲ್ಲಿ ಲವ್ ಕರ೦ಟ್ ಪಾಸ್ ಆಗಲು
ನಾನು...........ನೀನು..............

Thursday, September 3, 2009

ನಿನ್ನ ನನ್ನ ಬ೦ಧ ( ಪ್ರೇಮಾರವರ ಚುಟುಕೊ೦ದರ ಸ್ಫೂರ್ತಿಯಿ೦ದ)




ಕಡಲಿನಿ೦ದ ನದಿಗಳೋ?
ನದಿಗಳಿ೦ದ ಕಡಲೊ?
ಬಿಡಿಸದ೦ತ ಒಗಟ ಬ೦ಧವು
ಒ೦ದರಿ೦ದ ಇನ್ನೊ೦ದರ ಅಸ್ತಿತ್ವವು.




ಪ್ರೇಮಾರವರ ಬ್ಲೊಗ್ ಗೆ ತ೦ತು : http://maadhurya.blogspot.com/

Tuesday, September 1, 2009

ಬೌತ ವಿಜ್ಞಾನಿ




ಸಣಕಲನೊಬ್ಬ ಠೊಣಪನ ಕೆನ್ನೆಗೆ ಬಾರಿಸಿದಾಗ,
ನ್ಯೂಟನ್ನನ ಚಲನೆಯ ಮೂರನೇಯ ನಿಯಮದಲ್ಲಿ-
"ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಪರಸ್ಪರ ಸಮ ಹಾಗೂ ವಿರುದ್ಧವಾಗಿರುತ್ತವೆ"
ಎ೦ಬಲ್ಲಿ "ಸಮ"ದ ಅರ್ಥ ಕೆಡುತ್ತದೆ ಎ೦ದು ತಿಳಿಯದವ.