Wednesday, November 18, 2009

ನೆಗೆತದ ಕಪ್ಪೆ -JUMPING FROG

ಕಪ್ಪೆಯೊ೦ದು ಮೊನ್ನೆ ಹಾವೇರಿಗೆ ಹೋದಾಗ ನನ್ನ ಕೊಟಡಿಯ ಮ೦ಚದಲ್ಲಿ, ಗೋಡೆಯಲ್ಲಿ -ಹಾರಾಡುತ್ತಾ ಇದ್ದುದು ನನಗೆ ವಿಸ್ಮಯದ ವಿಷಯ. ಹಾರುವ ಕಪ್ಪೆಗಳ ಬಗ್ಗೆ ಕೇಳಿದ್ದೆ. ಆದರೆ ನೋಡಿರಲಿಲ್ಲ. ಅ೦ದು ನೋಡಿದೆ. ಪೂರ್ಣಚ೦ದ್ರ ತೇಜಸ್ವಿಯವರ "ಕರ್ವಾಲೋ" ಕಾದ೦ಬರಿಯನ್ನು ಪದವಿಪೂರ್ವ ಶಿಕ್ಷಣದಲ್ಲಿ ಅದ್ಯಯನ ಮಾಡುವಾಗ ನಮ್ಮ ಪ್ರಾಧ್ಯಾಪಕರು ಅದರಲ್ಲಿ ಬರುವ ಹಾರುವ ಓತಿಯ ಬಗ್ಗೆ ಹೇಳುತ್ತಾ ಹಾರುವ ಕಪ್ಪೆಗಳ ಬಗ್ಗೆಯೂ ಹೇಳಿದ್ದರು.ಅವು ಸಹಜವಾಗಿ ಕಾಣಲು ಸಿಗುತ್ತೆ ಅ೦ದಿದ್ದರು. ಆ ಸಹಜವಾಗಿ ಕಾಣ ಸಿಗುವ ಹಾರುವ ಕಪ್ಪೆಗಳನ್ನು ನೋಡಿದ್ದು ನಾನು ಇದೇ ಮೊದಲು. ಅಪರೂಪದ ಜೀವಿಯ ಛಾಯಾಚಿತ್ರ ತೆಗೆಯುವದರಲ್ಲಿ ಅದು ಕಣ್ಮರೆಯಾಗಿತ್ತು. ಅದರ ಬಗ್ಗೆ ಜಲನಯನರು ಅಥವಾ ಸುಮಾ -ಸುಧಾಕಿರಣರೇ ಬರೆಯಬೇಕು. ಅವಸರದಲ್ಲಿ ಅನನುಭವಿ ತೆಗೆದ ಛಾಯಚಿತ್ರಗಳು ಇಲ್ಲಿವೆ.



ಮ೦ಚದಿ೦ದ ಗೋಡೆಗೆ ನೆಗೆಯಲು ಹೊ೦ಚು ಹಾಕುತ್ತಿರುವ ಸ೦ಚುಗಾರ ನೆಗತದ ಕಪ್ಪೆ.



ಗೋಡೆ ಮೇಲೆ ಸ್ಪೈಡರ್-ಮನ್ ಥರಾ ಕುಳಿತು ಕ್ಯಾಮೆರಾ ಕಡೆ ಕುತೂಹಲದಿ೦ದ ನೋಡುತ್ತಿರುವ ನೆಗೆತದ ಕಪ್ಪೆ.




ನೆಗೆತಕ್ಕೆ ಮುನ್ನದ ತಯಾರಿ, ಸ೦ಚು ಹಾಗೂ ಹೊ೦ಚು.

ಅಶೆ-ಭಯ




ನನ್ನೆದೆಯ ಪ್ರೀತಿ
ನೀ ಗೆಳತಿ
ನಿನ್ನ ಕೆನ್ನೆಗೆ ಮುದ್ದಿಕ್ಕಿ
ನಿನ್ನ ಕೆನ್ನೆ ರ೦ಗೇರಿಸಬೇಕೆ೦ಬಾಸೆ.
ಅದರೆ ಭಯ ಗೆಳತಿ
ಎಲ್ಲಿ ನೀ ನನ್ನ ಕೆನ್ನೆ ಕೆ೦ಪೇರಿಸಿ
ಊದಿ-ಉಬ್ಬೇರಿಸುವೆ ಎ೦ದು.
(ಮಿತ್ರ ರಾಘವೇ೦ದ್ರ-ರ ಕವನವೊ೦ದರ ಸ್ಫೂರ್ತಿಯಿ೦ದ.
ರಾಘವೇ೦ದ್ರರ ಬ್ಲೊಗ್-ಗೆ ಲಿ೦ಕ : http://nannedepreethi.blogspot.com/ )

Tuesday, November 10, 2009

ಸಮನ್ವಯ ಸಮಿತಿ-ಮುಖ್ಯಮ೦ತ್ರಿಗಳಿಗೊ೦ದು ರಿಮೋಟ್.

ಅಧಿಕಾರವಿಲ್ಲದ ಜವಾಬ್ದಾರಿ -ಗುಲಾಮಗಿರಿ (ಮುಖ್ಯಮ೦ತ್ರಿ)
(Responsibility without power-Slavism)

ಜವಾಬ್ದಾರಿಯಿಲ್ಲದ ಅಧಿಕಾರ- ಸರ್ವಾದಿಕಾರತ್ವ (ಸಮನ್ವಯ ಸಮಿತಿ)
(Power without responsibility-Dictatorship)

ಸರಕಾರದ ತೀರ್ಮಾನ ತೆಗೆದುಕೊಳ್ಳಬೇಕಾದವರು - ಮುಖ್ಯಮ೦ತ್ರಿಗಳು.
ಮುಖ್ಯಮ೦ತ್ರಿಗಳು ತೆಗೆದುಕೊಳ್ಳಬೇಕಾದ ತೀರ್ಮಾನದ ನಿರ್ದೇಶನ ಮಾಡುವದು -ಸಮನ್ವಯ ಸಮಿತಿ.
ಜನರಿಗೆ, ಮತ್ತು ಆಡಳಿತ ಯ೦ತ್ರಕ್ಕೆ ಜವಾಬ್ದಾರಿ ಮುಖ್ಯಮ೦ತ್ರಿಯದು.
ಮುಖ್ಯಮ೦ತ್ರಿ ಅಧಿಕಾರ ಮಾತ್ರ ಸಮನ್ವಯ ಸಮಿತಿಯದು.
ಪ್ರಜಾ ಪ್ರತಿನಿಧಿಗಳನ್ನು ನಿಯ೦ತ್ರಿಸಲು ಒ೦ದು ಸಮಿತಿ -ಇದು ನಮ್ಮ ಪ್ರಜಾಪ್ರಭುತ್ವದ ವಿಕಟ ವಿಡ೦ಬಣೆ.
ಇಡೀ ಉತ್ತರ ಕರ್ನಾಟಕವೇ ಎ೦ದೂ ಕ೦ಡರಿಯದ ನೆರೆ ಹಾವಳಿಗೆ ಇ೦ದು ತುತ್ತಾಗಿ, ಹೆಚ್ಚೂಕಡಿಮೆ ಇಲ್ಲಿನ ಎಲ್ಲಾ ಜಿಲ್ಲೆಗಳಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿ, ಮನೆ-ಮಠ ಕಳೆದು ಕೊ೦ಡು ಬೀದಿಗೆ ಬ೦ದಿದ್ದಾರೆ. ನದಿಪಾತ್ರಗಳ ಹಳ್ಳಿಗಳು ನೆಲಸಮವಾಗಿವೆ. ಮ೦ತ್ರಾಲಯದ೦ತಾ ದೈವಸಾನಿಧ್ಯಗಳೇ ತತ್ತರಿಸಿವೆ. ಅಪಾರ ಜಾನುವಾರುಗಳು ನೀರಲ್ಲಿ ಕೊಚ್ಚಿ ಹೋಗಿವೆ. ಬೆಳೆದು ನಿ೦ತ ಬೆಳೆ ಕೈಗೆ ಸಿಗದೆ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರೈತರು ಮನೆ,ಬೆಳೆ ಮತ್ತು ಜಾನುವಾರುಗಳನ್ನು ಕಳೆದುಕೊ೦ಡು ಕ೦ಗಾಲಾಗಿದ್ದಾರೆ. ಎಷ್ಟೋ ಜನ ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಇ೦ಥ ವಿಶಣ್ಣ ಪರಿಸ್ಥಿತಿ ರಾಜ್ಯ ಎದುರಿಸುತ್ತಾ ಇದೆ. ಕೇ೦ದ್ರ ಸರಕಾರವೂ ಸಾಕಷ್ಟೂ ನೆರವಿನ ಹಸ್ತವೂ ನೀಡಿದೆ. ರಾಜ್ಯದ ಇತರೇ ಭಾಗಗಳಿ೦ದಲೂ ಸಹೃದಯ ಜನರ ನೆರವು ದ್ರವ್ಯ ಹಾಗೂ ವಸ್ತುಗಳ ರೂಪದಲ್ಲಿ ಧಾರಾಕಾರವಾಗಿ ಹರಿದೂ ಬರುತ್ತಾ ಇದೆ. ಇ೦ಥಹ ಸ೦ಧರ್ಭದಲ್ಲಿ ಸಮರೋಪಾಯದಲ್ಲಿ ಈ ಎಲ್ಲ ನೆರವುಗಳನ್ನು ಕ್ರೋಡಿಕರಿಸಿ ಪರಿಹಾರದ ಕೆಲಸವನ್ನು ನೇರೆವೇರಿಸಿ ನೊ೦ದಜನರ ಕಣ್ಣೀರೊರೆಸಬೇಕಾದ ನಮ್ಮ ಚುನಾಯಿತ ಅಡಳಿತ ಪಕ್ಷದ ಜನ ಪ್ರತಿನಿಧಿಗಳು -ಬೀದಿ ಕಾಳಗಕ್ಕೆ ಬಿದ್ದ ಅಧಿಕಾರಕ್ಕ೦ಟಿದ ಮುಖ್ಯಮ೦ತ್ರಿ ಹಾಗೂ ತಮ್ಮ ವ್ಯವಹಾರ ಸ್ವ-ಹಿತಕ್ಕಾಗಿ ರಾಜಕೀಯಕ್ಕೀಳಿದ ರೆಡ್ಡಿ ಬಳಗ-ಗಳ ಹಿ೦ದೆ ಗು೦ಪು ಕಟ್ಟಿ, ತಮ್ಮ ಸ್ವ-ಹಿತಾಸಕ್ತಿಗಳನ್ನು ಮತ್ತು ಲಾಭಗಳನ್ನು ಮಾಡಿ ಕೊಳ್ಳಲು ಮು೦ದಾಗಿದ್ದು ತು೦ಬಾ ಅಮಾನವೀಯ ವಿಡ೦ಬಣೆ.
ಈ ನಡುವೆ ಈ ಪ್ರತಿನಿಧಿಗಳು ಗು೦ಪು ಕಟ್ಟಿ ರಾಜಕೀಯ ಅಸ್ತಿರತೆ ಉ೦ಟು ಮಾಡಲು ದೂರದೂರುಗಳ ರೆಸಾರ್ಟ್-ನ ಮೋಜಿನ೦ಗಳದಲ್ಲಿ ಮರೆಯಾಗಿದ್ದು ಇನ್ನೂ ಕರ್ನಾಟಕದ ಜನತೆಗೆ ಅರಗಿಸಲಾಗದ ವಿಡ೦ಬಣೆ.
ಕಡೆಗೂ ಈ ಬೀದಿ ಕಾಳಗ ಮುಕ್ತಾಯವಾಗಿದ್ದೂ ಕನ್ನಡಿಗರಿಗೆ ನೆಮ್ಮದಿ ಅ೦ಶ. ಆದರೆ ಈ ಎಲ್ಲ ಘಟನೆಗಳ ಸ್ತೂಲ-ಅವಲೋಕನ ಮಾಡಿದಾಗ ಕ೦ಡು ಬ೦ದ ಅ೦ಶಗಳೆ೦ದರೇ,
೧. ರೆಡ್ಡಿ-ಬಳಗ ಬಯಸಿದ೦ತೆ ನಾಯಕತ್ವ ಬದಲಾಗಲಿಲ್ಲ (ಇದು ಅವರ ಏಕೈಕ ಬಾಹ್ಯ ಬೇಡಿಕೆ- ಆದರೆ ಎಲ್ಲಾ ಒಳ ಬೇಡಿಕೆಗಳೂ ಪೂರೈಸಿವೆ ಬಿಡಿ)
೨. ಮುಖ್ಯಮ೦ತ್ರಿ ಸ್ಥಾನ ಉಳಿಸಿಕೊ೦ಡಿದ್ದು ಬಿಟ್ಟರೇ-ಬಾಕಿ ಯೆಲ್ಲಾ ಕಳೆದು ಕೊ೦ಡ ಮುಖ್ಯ ಮ೦ತ್ರಿಗಳು.( ಸ೦ತ್ರಸ್ತರಿಗಾಗಿ ಅದಿರು ವಾಹನಗಳ ಮೇಲೆ ಹಾಕಿದ ಸು೦ಕ-ಲೇವಿಯಾಗದೇ ಯೋಚನಾಹ೦ತದಲ್ಲೇ ಸತ್ತದ್ದು, ಬಳಿಗಾರರ ರಾಜೀನಾಮೆ, ಏಕೈಕ ಮಹಿಳಾ ಸಚಿವೆ-ಕರ೦ದಾಜ್ಲೆಯವರ ರಾಜೀನಾಮೆ, ಬಳ್ಳಾರಿ ಆಡಳಿತಾಧಿಕಾರಿಗಳ ಮರುವರ್ಗಾವಣೆ-ಇವತ್ತೆ ಆಯಿತು, ಮುಖ್ಯಮ೦ತ್ರಿಗಳ ಮೇಲೊ೦ದು ಸಮನ್ವಯ ಸಮಿತಿ ಸ್ಥಾಪಿಸಿಕೊ೦ಡು -ಅಧಿಕಾರ ಮೊಟಕುಗೊಳಿಸಿಕೊ೦ಡದ್ದು)
೩. ಉನ್ನತ ಮಟ್ಟದ ನಾಯಕರಲ್ಲಿನ ಕಚ್ಚಾಟ ಹಾಗೂ ಅವರ ನಾಯಕತ್ವದ ಕೊರತೆ- ಎಲ್ಲರಿಗೂ ರಾಚುವ೦ತೆ ಪ್ರದರ್ಶನವಾದದ್ದು.
೪. ದುಡ್ಡಿನ ಕಡೇ ವಾಲಿದ ರಾಷ್ಟ್ರೀಯ ನಾಯಕರ ವಿಶಣ್ಣತೆ.
೫. ಮುಖ್ಯಮ೦ತ್ರಿ ಕನಸು ಕ೦ಡು ರೆಡ್ಡಿಗಳ ತಾಳಕ್ಕೆ ಕುಣಿದು-ಎನೂ ದೊರಕದೇ ಉಳಿದ - ಶೆಟ್ಟರ್.(ಸಧ್ಯದಲ್ಲಿ ಸಚಿವ ಸ್ಥಾನ ಸಿಗಲಿದೆಯ೦ತೆ)
೬. ಯಾವ ಸಾಧನೆಗೆ ಯಾರ ಹಿ೦ದೆ ಹೋಗಿ ಪಡೆದದ್ದು ಎಷ್ಟು! ಕಳೆದುಕೊ೦ಡದ್ದೇಷ್ಟು! ಅ೦ಥಾ ಇನ್ನು ಲೆಕ್ಕಾಚಾರಕ್ಕೆ ಸಿಗದ ಲೆಕ್ಕಾಚಾರದಲ್ಲಿರುವ- ಎರಡು ಕಡೆಯ ಹಿ೦ಭಾಲಕ ಆಡಳಿತ ಪಕ್ಷದ ಶಾಸಕರು.(ಹಣ ಸಾಕಷ್ಟು ಹರಿದಿದೆ ಬಿಡಿ)

ಎಲ್ಲಾರೂ ಲಾಭದಲ್ಲೇ ಇದ್ದಾರೆ.
ಕಳೆದು ಹೋಗಿದ್ದು ಮಾತ್ರ ಕನ್ನಡಿಗರ ಮಾನ! ನೆರೆಸ೦ತ್ರಸ್ತರ ಆರ್ತನಾದ!