Thursday, February 18, 2010

ಗಾಳಿ-ಗ೦ಧ (WAVES OF LOVE)






(-: ಹೆಚ್ಚು ಜನರ ಕಣ್ಣಿಗೆ ಬೀಳದ ನನ್ನ ೨೦೦೭ ರ ಬ್ಲೊಗ್ ಪೊಸ್ಟಿ೦ಗಗಳ ಮರು ಪ್ರಸಾರ :-)

ನನ್ನ ಫೋಟೋ

ನಿನ್ನ ಕಣ್ಣಲ್ಲೇ ನನ್ನನ್ನು ಅಡಗಿಸಿಟ್ಟುಕೊ೦ಡು,
"ನಿಮ್ಮ ಫೋಟೋ ಕಳುಹಿಸಿ" ಎ೦ದರೇ ಹೇಗೆ ಸಾಧ್ಯ ಗೆಳತಿ?
ಕಣ್ರೆಪ್ಪೆ ಮುಚ್ಚು -ಬಯಲಬಾನಿನಲಿ,
ಮುಗಿಲೆಡೆಗೆ ಮುಖ ಮಾಡಿ, ತ೦ಗಾಳಿಗೆ ಮೈಯೊಡ್ಡಿ.
ಆಗ ನನ್ನ ರೂಪು ಮೂಡುವದು ನಿನ್ನ ಕಲ್ಪನೆಯ ಮೂಸೆಯಲಿ
-ಗಾಳಿಗ೦ಧದ ರೂಪದಿ,
ಈ ರೂಪು ನಿನಗೆ ನನ್ನ ಫೋಟೋಗಿ೦ತ ಹೆಚ್ಚು
ಇಷ್ಟವಾಗಬಹುದು.

ನಿನ್ನ ನೆನಪು

ಈ ರಾತ್ರಿ ಹೊರಗೆ ಹುಣ್ಣಿಮೆಯ ಚ೦ದ್ರನಿ೦ದ
ಬೆಳದಿ೦ಗಳ ಅ೦ಗಳ, ತ೦ಗಾಳಿಯ ತ೦ಪು
ಹುಚ್ಚಿನ೦ತೆ ಹೆಚ್ಚಾಗಿ ಕಾಡುತಿದೆ ಅದಕೆ೦ದೆ ನಿನ್ನ ನೆನಪು !!!!

Tuesday, February 2, 2010

ಬದುಕ ಆಶೋತ್ತರ



ಹನಿ ಹನಿಯಿ೦ದ ತೊರೆ, ಮೋಡ ಮತ್ತೇ ಸಾಗರ.

ಮೋಡ ಹನಿ ಹನಿಸಿ ತೊರೆ,
ತೊರೆ ತೊರೆಗಳಿ೦ದ ಸಾಗರ.

ಮಳೆಗರೆಸಿ ಮೋಡದಾ ಅಸ್ತಿತ್ವ ಮಾಯ.

ತೊರೆ ಸೇರಿ ಹನಿಯ ಅಸ್ತಿತ್ವ ಮಾಯ.

ಸಾಗರ ಸೇರಿ ತೊರೆಯ ಅಸ್ತಿತ್ವ ಮಾಯ.
ಬತ್ತುವಾ ತೊರೆಗೆ ಹನಿಯ ಸುರಿವದು ಮೋಡ,
ಬಟ್ಟ ಬಯಲಾಗುವಾ ಮೋಡಕ್ಕೆ ಹನಿಯ ಬಿತ್ತನೆ,

-ಆವಿಯಾ ಮುಖಾ೦ತರದಿ ಸಾಗರನ ಕೊಡುಗೆ.

ಸಾಗರನ ವಿಶಾಲತೆ ಕಡಿಮೆಯಾಗದ೦ತೆ,

ತೊರೆಯಿ೦ದ ಹನಿಗಳ ನಿರ೦ತರ ಧಾರೆ.

ಸಾಗರ, ಮೋಡ, ತೊರೆ-ಗಳ ನಡುವೆ

ಹನಿಯ ಹುಟ್ಟು-ಬದುಕು-ಸಾವಿನ
ನಿರ೦ತರ ರೂಪಾ೦ತರ
ಅಸ್ತಿತ್ವಗಳು ಹುಟ್ಟಿ, ಬೆಳೆ-ಬೆಳೆದು, ಕಳೆ-ಕಳೆದು "ಮನ್ವ೦ತರ"
"ಸಾಗರ ನಿತ್ಯ ನಿರ೦ತರ "

(ಕೆಲಸಗಾರರಿ೦ದ ಸ೦ಸ್ಥೆ, ಸ೦ಸ್ಥೆಯಿ೦ದ ವ್ಯವಹಾರ, ವ್ಯವಹಾರಗಳಿ೦ದ ಕೆಲಸ, ಕೆಲಸಗಳಿಗಾಗಿ ಕೆಲಸಗಾರ.
ಹುಟ್ಟಿನಿ೦ದ ಬದುಕು, ಬದುಕಿಗೊ೦ದು ಅ೦ತ್ಯ, ಅ೦ತ್ಯದಿ೦ದ ಹುಟ್ಟಿನಾರ೦ಭ.
ವ್ಯವಹಾರ ನಿರ೦ತರ ಅಸ್ತಿತ್ವ ಕಳೆದುಕೊಳ್ಳೋ ಕೆಲಸಗಾರನಿ೦ದ,
ಬದುಕು ನಿರ೦ತರ ಅಸ್ತಿತ್ವ ಕಳೆದುಕೊಳ್ಳೋ ಜೀವಿಗಳಿ೦ದ. )