Friday, March 16, 2007

ವಿದ್ಯುತಯಸ್ಕಾ೦ತೀಯ ಪ್ರೇರಣೆ
ಬಹು ಹತ್ತಿರದಿ ಬಳುಕುತ್ತಾ, ಕುಲುಕುತ್ತಾ,
ವೈಯಾರಿ ನೀ ನಡೆದಾಗ-
ನನ್ನ ಹ್ರು಼ದಯವೆ೦ಬಾ ಗೆಲ್ವನಾಮೀಟರಲ್ಲಿ ಡಿಫ಼್ಲೆಕ್ಷನ್ ಕ೦ಡಾಗಲೇ,
ನನಗೆ ಕ್ಲಾಸಲ್ಲಿ ಹೇಳಿದ್ದ
ಫ಼ೆರಡೆಯ ವಿದ್ಯುತಯಸ್ಕಾ೦ತಿಯ ಪ್ರೇರಣೆ
ಏನೆ೦ದು ಅರ್ಥವಾದದ್ದು.

ಮದುವೆ ಮು೦ಚಿನ ನಿಶ್ಚಿತಾರ್ಥದ ನ೦ತರದ ಕವನ- ನನ್ನವಳಿಗೆಬಾಡಿಗೆದಾರರ ಕುರಿತೊ೦ದು ಕವನ


ಎನ್ನೆದೆಯಾ ಗೂಡೊ೦ದು ಬೆಚ್ಚನೆಯಾ ಮಾಡು
ಖಾಲಿಯಿತ್ತು ಬಾಡಿಗೆದಾರರಿಗೆ೦ದು,

ದಿನವು ಮನೆ ಗುಡಿಸಿ, ತಳಿ ಹೋಯ್ದು,
ರ೦ಗವಲ್ಲಿಯಾ ಇಟ್ಟು, ಕಾಯುತ್ತಿದ್ದೆ.

ಬ೦ದು ನೋಡಿದವರು ಹಲವರು,
ನಾನು ವಿಚಾರಿಸಿದ್ದು ಹಲವರಲ್ಲಿ,

ಮನೆ ಮೆಚ್ಚುಗೆಯಾಗಲಿಲ್ಲ ಹಲವರಿಗೆ,
ಮನೆ ಮೆಚ್ಚಿದಾ ಕೆಲವರ ಮೆಚ್ಚಲ್ಲಿಲ್ಲ- ಮನೆ ಮಾಲೀಕರು.

ಈಗ ನೀವು ಬರುತಿರುವಿರಿ ಮನೆ(ನ) ಮೆಚ್ಚಿ ಬಾಡಿಗೆಗೆ೦ದು,
ದೀಪ ಹಚ್ಚಿ, ಕತ್ತಲೆ ಓಡಿಸಿ, ನೀರೀಕ್ಷೆ ಮೀರಿಸಿ,
ಮಾಲೀಕರ ಮೆಚ್ಚಿನವರಾಗಿ.

ಆದರೂ ಮಾಲೀಕರಾಗಿ ತಕರಾರಿದೆ ನಮ್ಮದೊ೦ದು
ಕೊಟ್ಟಿಲ್ಲ ನೀವಿನ್ನೂ ನಮಗೆ ಅಡ್ವಾನ್ಸು.