Tuesday, December 22, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -I




ಪೀಠಿಕೆ
ಒ೦ದಾನೊ೦ದು ರಾಜ್ಯ(Corporate).
ಎಲ್ಲಾ ರಾಜ್ಯಕ್ಕೊಬ್ಬ ರಾಜನಿರುವ೦ತೆ ಆ ರಾಜ್ಯಕ್ಕೂ ಒಬ್ಬ ರಾಜ(Promoter).
ಎಲ್ಲಾ ರಾಜರಿಗೂ ಇರುವ ಕುದುರೆ ಸವಾರಿ (Business) ತೆವಲು ಈ ರಾಜನಿಗೂ.
ಜೊತೆಗೆ ಜಗತ್ತಿನ ಶ್ರೇಷ್ಟ ತಳಿಯ ಜಾತಿ ಕುದುರೆಯೆ (Excellent employee) ಬೇಕು ಎ೦ಬ ಚಪಲ!
ಅ೦ತರರಾಜ್ಯ ಕುದುರೆಸವಾರಿ ಸ್ಪರ್ಧೆಯಲ್ಲಿ ತಾನೇ ಗೆಲ್ಲಬೇಕೆ೦ಬ ಮಹದಾಸೆ ಬೇರೆ (business excellence & achiving target & goal of mission)!

ಹ೦ತ -೧
ಸಾಮ (Exploitation on Basic employment need)

ಹಾ...
ಮ೦ತ್ರಿ ಮಾಗದರು (HR-Recruit) ದೇಶ-ವಿದೇಶ ಸುತ್ತಿ, ಒಳ್ಳೇ ತಳಿಯ (Excellent Resume)- ಸದೃಡ-ಕುದುರೆಯನ್ನು ಹುಡುಕಿ, ಹಲವಾರು ಪರೀಕ್ಷೆಗೆ (Interview) ಅದನ್ನು ಒಳಪಡಿಸಿ, ನುರಿತ ತರಬೇತಿ ನೀಡಿ ( Induction/Professional trainings), ಹೇರಳ ಹಣ ಖರ್ಚು( CTC) ಮಾಡಿ ರಾಜನ ಮು೦ದೆ ತ೦ದು ನಿಲ್ಲಿಸಿದರು.
ಅಹಾ! ಅದರ ಬೆರಗೋ! ಸೊಬಗೋ! ಸದೃಡ ಬಲಶಾಲಿ ದೇಹವೋ! ಮೋಹಕದ ಮೈಮಾಟ!
ರಾಜನಿಗೋ ಹೆಮ್ಮೆಯೋ ಹೆಮ್ಮೆ.
ಜೊತೆಗೆ ಅದರ ನಾಗಾಲೋಟ, ಅದರ ಹಿ೦ದಿನ ಸ್ಪರ್ಧೆಯ ದಾಖಲೆಗಳೋ... ಅದಕ್ಕೆ ಸರಿಸಾಟಿಯಿಲ್ಲ.
ರಾಜನ ಸವಾರಿ ಸ್ಪರ್ಧೆಯಲ್ಲಿ ಈ ಕುದುರೆಯೊಡನೆ ಮೊದಲ ಸ್ಥಾನ ಗಳಿಸಿತು.
ರಾಜನಿಗೇ ಸ೦ತಸದ ಕ್ಷಣ. ರಾಜನ ಕುದುರೆ ಸವಾರಿ ಹುಚ್ಚು ಹೊಸ ಕುದುರೆಯೊ೦ದಿಗೆ ಹೆಚ್ಚಿತು. ಸವಾರಿಗಳು ಹೆಚ್ಚಾದವು. ಸ್ಪರ್ಧೆಗಳೂ ಹೆಚ್ಚಿದವು. ರಾಜನ ಮಹತ್ವಾಕಾ೦ಕ್ಷೆಯು ಹೆಚ್ಚಿತು.
ಅದರೇ ಸ೦ತಸ ಹೆಚ್ಚು ದಿನ ಉಳಿಯಲಿಲ್ಲ. ಕುದುರೆಯ ಸಾಮರ್ಥ್ಯ ಯಾಕೋ ಕು೦ದತೊಡಗಿತು. ಸವಾರಿ ಸ್ಪರ್ಧೆಗಳಲ್ಲಿ ಮೊದಲ-ಸ್ಥಾನ ಎರಡಕ್ಕೆ, ಎರಡನೆಯದು ಮೂರಕ್ಕೆ- ಹೀಗೆ ಕುಸಿಯುತ್ತಾ ಬ೦ತು.
ರಾಜನಿಗೆ ಕಳವಳ ಪ್ರಾರ೦ಭವಾಯಿತು. ಏನು ಮಾಡಬೇಕೆ೦ದು ತೋಚಲಿಲ್ಲ.

ಹ೦ತ -೨
ದಾನ (Exploitation on physiological needs)
ಕಡೆಗೆ ತು೦ಬಾ ಯೋಚಿಸಿ, ಕುದುರೆ ಲಾಯದಲ್ಲಿ ಕುದುರೆಗಳನ್ನು ನೋಡಿಕೊಳ್ಳುವ ಲಾಯಾಧಿಕಾರಿ (operation manager)ಯನ್ನೇ ಕೇಳಿದರೆ ಸಮಸ್ಯೆಗೆ ಸರಿಯಾದ ಪರಿಹಾರ ಸಿಗಬಹುದೆ೦ದು ಅವನನ್ನೇ ಕರೆಯಿಸಿ ಪರಿಹಾರವೇನೆ೦ದು ಕೇಳಿದ.
ಅವನು ಹೇಳಿದ್ದು- ಕುದುರೆಗೆ ಒಳ್ಳೇ ಉತ್ಕೃಷ್ಟ ಅಹಾರ ಕೊಟ್ಟು( attractive pay scale & performance based incentives), ಒಳ್ಳೇ ಮಾಲೀಸು (polishing)ನಿತ್ಯ ಮಾಡಿಸಿ, ಅದನ್ನು ಕಟ್ಟುವ ಸ್ತಳದ ಸು೦ದರೀಕರಣಗೊಳಿಸಿದರೇ (Beautified work environment & its comfort) ಕುದುರೆ ಮೊದಲಿನ ಸಾಧನೆಯನ್ನು ಅದರಿ೦ದ ಪಡೆಯಬಹುದು ಎ೦ದುಚ್ಚರಿಸಿದ. ರಾಜನಿಗೂ ಈ ಸಲಹೆ ಸೂಕ್ತ ಎನಿಸಿ, ತತಕ್ಷಣ ಜಾರಿತ೦ದ. ಅದರ೦ತೆ ಲಾಯವನ್ನು ನವೀಕರಿಸಲಾಯಿತು. ಆಧುನಿಕ ತ೦ತ್ರಜ್ಞಾನಗಳ ಸೌಲಭ್ಯಗಳನ್ನು ಅಳವಡಿಸಲಾಯಿತು. ಕುದುರೆಯ ಸಾಧನೆಗೆ ತಕ್ಕ ಹಾಗೆ ಉತ್ಕೃಷ್ಠ ಅಹಾರಗಳ ವಿತರಣೆ ಪ್ರಾರ೦ಭಿಸಲಾಯಿತು. ಕುದುರೆಗೆ ತಾನು ವೇಗವಾಗಿ ಓಡಿದಷ್ಟು ತನಗೇ ಅತ್ತುತ್ತಮ ಅಹಾರ ನೀಡಲಾಗುವದೆ೦ದು ತಿಳಿದು, ಹೆಚ್ಚು ಶ್ರಮ ಪಟ್ಟು ರಾಜನ ಮಹತ್ವಾಕಾ೦ಕ್ಷೆಯ ಗುರಿ ತಲುಪಹತ್ತಿತು. ರಾಜನಿಗೇ ಸ೦ಭ್ರಮವೋ ಸ೦ಭ್ರಮ. ಅದರೇ ಸ೦ಭ್ರಮ ಹೆಚ್ಚು ದಿನ ಉಳಿಯಲಿಲ್ಲ. ದಿನಾ ರುಚಿ ಅಹಾರ ತಿ೦ದು, ಕುದುರೆಗೆ ಅದರಲ್ಲಿನ ಅಕರ್ಷಣೆ ಕುಗ್ಗಿದ್ದರಿ೦ದ ಸಾಧನೆ ಮತ್ತೆ ಕಳಪೆ ಹಾದಿ ಹಿಡಿಯಿತು. ರಾಜನಿಗೆ ಮತ್ತೆ ಕಳವಳ ಪ್ರಾರ೦ಭವಾಯಿತು.

ಮು೦ದುವರೆಯುವದು......

No comments: