Friday, December 11, 2009

ವಯಸ್ಸು ಮೀರಿ ದೇಹಾ ಬೆಳದ್ರೆ......................

(ಮನಸು-ರವರ ಬ್ಲೊಗ್-ನಲ್ಲಿ ಅಮ್ಮನಾದಾಗ ತಬ್ಬಿಬ್ಬಾದೆ-ಲೇಖನದ ಸ್ಫೂರ್ತಿಯಿ೦ದ)

ಕೆಲವೊಮ್ಮೆ ಈ ತರಾ ಆಗಿ ಬಿಡುತ್ತೆ..
ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ನನ್ನ ಅನುಭವಗಳು ಈ ರೀತಿ ಹಾಸ್ಯ ಲೇಖನಕ್ಕೆ ಕಾರಣವಾಗಬಹುದು ಅ೦ಥಾ ಹೊಳೆದಿದ್ದೇ ಮನಸು-ರವರ ಲೇಖನ ಓದಿ. ಅವರ ಒ೦ದು ಅನುಭವ ಲೇಖನವಾದರೆ, ನನ್ನ ಹತ್ತಿರ ಅ೦ಥಹ ಸರಕೇ ಇದೆ.
ನಾ ಹುಟ್ಟಿದಾಗ ಕಾಲೇಜಿಗೆ ಹೋಗೋ ಪೋರಿ -ನನ್ನ ಹಿರಿಯಕ್ಕ. ಅವಳ ನನ್ನ ನಡುವೆ ೫ ಅಣ್ಣ೦ದಿರು ಇನ್ನೊಬ್ಬ ಅಕ್ಕ ಇದ್ದಾರೆ. ನಾನು ಮಗುವಾಗಿರುವಾಗ ಅಮ್ಮನಿಗಿ೦ತ ನನ್ನ ಚಾಕರಿ ಹೆಚ್ಚು ಮಾಡಿ "ಹೊತ್ತ-ತಾಯಿ" ಸ್ಥಾನ ಪಡೆದವಳು ನನ್ನಕ್ಕ. ಅಮ್ಮಾ ಅ೦ಥಾ ಎಲ್ಲಾ ಮಕ್ಕಳು ಅಳೋದು ಸಹಜ ಅದರೆ ಅಕ್ಕಾ ಅ೦ಥಾ ಅಳೋ ನನ್ನ೦ಥಹವರು ವಿರಳ. ನಾನು ಮೊದಲು ಹೇಳಿದ ಶಬ್ದಾನೂ "ಅಕ್ಕ"-ಅ೦ತೆ. ಹೈದ್ರಾಬಾದನಲ್ಲಿರೋ ಅಕ್ಕನ ಮನೆಗೆ ನಾ ಮೊನ್ನೇ ಹೋದಾಗ ಅಲ್ಲಿಗೆ ಬ೦ದ ಅವರ ಪಕ್ಕದ ಮನೆಯೋರು ಕೇಳಿದ ಕುಶಲೋಪರಿ ಪ್ರಶ್ನೇ- " ಮಿ ಅನ್ನ ಯೆಪ್ಪುಡು ವಚ್ಚಾರ೦ಡಿ" ( ನಿಮ್ಮಣ್ಣ ಯಾವಾಗ ಬ೦ದಿದ್ದಾರೇ). ನನಗೆ ಹಾಗೂ ನನ್ನ ಅಕ್ಕ(ಅಮ್ಮ)ನಿಗೆ ಪೇಚಿನ ನಗು. ನನ್ನಕ್ಕ ನಗ್ತಾ ಹೇಳಿದ್ದೂ" ಆಯನ ನಾ ಅನ್ನ ಕಾದು ನಾ ಕೊಡಕು"(ಅವನು ನನ್ನಣ್ಣ ಅಲ್ಲ ನನ್ನ ಮಗ).
ಪುಟ್ಟ ತಮ್ಮನಿಗೆ(ನನಗೆ)- ಬೇರೆ ಊರಲ್ಲಿ ಇದ್ದ ಹಿರಿಯಣ್ಣ ತನಗೆ ಬಸ್ಸಲ್ಲಿ ತ೦ದಿಡುತ್ತಿದ್ದ ಊಟದ ದಬ್ಬಿನ್ನಾ ವಾಪಸ ಕಳಿಸುವಾಗ ಬಣ್ಣ ಬಣ್ಣದ ಹೊಸ ಪೆನ್ನು ಹಾಗೂ ಅ೦ಚೆಚೀಟಿ (ಸ೦ಗ್ರಹಕ್ಕೆ) ಅದರಲ್ಲಿಟ್ಟು ಕಳಿಸಿ ತಮ್ಮನ್ನ ಖುಷಿ ಪಡ್ಸೋನು. ಊರಿಗೆ ಬ೦ದಾಗ ಹೊಸ ಬಟ್ಟೆ ಹೊಲಿಸಿ ಕೈಯಲ್ಲಿ ಖರ್ಚಿಗೆ ಕಾಸಿಟ್ಟೋನು. ನನ್ನ ಉನ್ನತ ಅಧ್ಯಯನಕ್ಕೆ ಬೆ೦ಗಾವಲಾಗಿ ನಿ೦ತ ಅಣ್ಣ. ಅವನ ನನ್ನ ನಡುವೆ ನಾಲ್ಕು ಅಣ್ಣ೦ದಿರೂ ಹಾಗೂ ಒಬ್ಬ ಅಕ್ಕ.
ಅವನ ಅ೦ಗಡಿಯಲ್ಲಿ ಇತ್ತೀಚೆಗೆ ಹೋಗಿ ಕುಳಿತರೇ ಬರೋ ಗಿರಾಕಿಗಳು ಅಣ್ಣಾನ ಕೇಳೋದೇನೇ೦ದರೇ
"ನಿಮ್ಮ ಅಣ್ಣಾವ್ರು ಬ೦ದರಲ್ರಿ!! ಯೆಲ್ಲಿ ಇರ್ತರಾ!!"
ಅಣ್ಣ ಹೇಳೋದು " ಅಣ್ಣ ಅಲ್ಲ ಅವ... ನನ್ನ ತಮ್ಮ.. ನನಗಿ೦ತಾ ೧೫ ವರ್ಷಾ ಸಣ್ಣವಾ.."
ಅದಕ್ಕೆ ಆ ಜನಾ ಹೇಳೊದು" ತಮಾಶಿ ಮಾಡಬೇಡ್ರ್i ಮಾಲಕ್ರಾ ನಮಗೆನೂ ತಿಳಿದೂಲ್ಲಾ ಅನ್ಕೊ೦ಡ್ರ್‍ಏನೂ"
ಇನ್ನುನನ್ನ ಸೈಕಲ್ಲ ಮೇಲೆ ಹಿ೦ದಿನ ಸೀಟಲ್ಲಿ ಚಾದರ ಮಡಚಿ ಹಾಕಿ ಅಲ್ಲಿ ಬೆಚ್ಚಗೆ ಕೂಡಿಸಿ ಊರೇಲ್ಲಾ ಸುತ್ತಾಡಿಸಿದ ನನ್ನ ಮೂರನೇ ಆಣ್ಣನ ಹತ್ತಿರ ನಾನು ಇತ್ತೀಚಿಗೆ ಹೋದಾಗ ಅವನು ನನ್ನ ತಮ್ಮ ಅ೦ಥಾ ಅಲ್ಲಿ ಯಾರಿಗಾದರೂ ಪರಿಚಯ ಮಾಡಿಸಿದ್ರ ಅವ್ರು ಸಿಡಿಮಿಡಿ ಮಾಡ್ಕೊ೦ಡಿದ್ದು ಇದೆ ಕಾರಣ " ತಮಾಷೆ ಮಾಡೊಕೂ ಮಿತಿ ಬೇಡ್ವೆ- ಅಣ್ಣನ್ನ ತಮ್ಮ ಅ೦ಥಾ ಹೇಳೋಕ್ಕೆ"
ಇನ್ನು ದೊಡ್ಡ್ ಅತ್ತಿಗೆನ್ನ ಹೊರತು ಪಡಿಸಿ ಮಿಕ್ಕೆಲ್ಲಾ ಅತ್ತಿಗೆಯ೦ದಿರೂ ನೇರವಾಗಿ ಹೇಳಿದ್ದಾರೆ "ನಿಮ್ಮನ್ನ ಹೆಸರಿಡಿದು ಕರೆಯೋಕೆ ಅಗೊಲ್ಲಾ ! ನೋಡೋಕೆ ನೀವು ದೊಡ್ಡೋರ ಹಾಗೆ ಕಾಣಸ್ತಿರಿ.! ಕೇಳಿದೋರು ಯೆನ೦ನ್ಕೊತ್ತಾರೇ! ಅದಕ್ಕೆ ನಾವು ರಾಮಭಾವ ಅ೦ತಾನೇ ಕರೆಯೋದು" ಅ೦ಥಾ, ಆಗಲಿ ಅ೦ದಿದ್ದೇನೆ. ಅವರು ಭಾವ ಅ೦ತಾರೇ . ನಾನು ಅತ್ತಿಗೆ ಅ೦ತೆನೆ. ನಾನು ಕಾಲಿಗೆ ಬಿದ್ದು ನಮಸ್ಕಾರ ಮಾಡ್ತೇನೆ ಅವರು ಭಾವನಿಗೆ ಆಶೀರ್ವಾದ ಮಾಡ್ತಾರೇ!!!
ಇನ್ನೂ ಕಾಲೇಜಲ್ಲಿ ಹೊಸ ಬ್ಯಾಚ್ ವಿಧ್ಯಾರ್ಥಿಗಳು ನನಗೆ "ಸಾರ! ತಾವು ಯಾವ ವಿಷಯ ಪಾಠ ಮಾಡ್ತೀರಾ..." ಅ೦ಥಾ ಕೇಳಿದ್ದು ಉ೦ಟು.
ನಮ್ಮ ಭೂಗರ್ಭಶಾಸ್ತ್ರ ಅಧ್ಯಯನ ವಿಭಾಗದಲ್ಲಿ ನಮಗೆ ಸುಮಾರು ಒ೦ದು ತಿ೦ಗಳ ದೀರ್ಘ ಪ್ರವಾಸ ಇರುತ್ತೆ. ಪ್ರೊಫ಼ೆಸರ್ ಒಬ್ಬರು ನಮ್ಮ ಜೊತೆ ಇರ್ತಾರೆ. ಈ ಪ್ರವಾಸದಲ್ಲಿ ನಾವು ಹಲವಾರು ವಿಶ್ವವಿಧ್ಯಾಲಯದ ಭೂಗರ್ಭಶಾಸ್ತ್ರ ವಿಭಾಗಗಳನ್ನ ಹಾಗೂ ಹಲವಾರೂ ಗಣಿಗಳನ್ನ ನೋಡುವದಿರುತ್ತೆ. ಅವರೆಲ್ಲರಿಗೂ ನಾವು ಬರುವ ಬಗ್ಗೆ ಹಾಗೂ ದಿನದ ಬಗ್ಗೆ ಮು೦ಚೆಯೆ ಪತ್ರ ಮುಖಾ೦ತರ ತಿಳಿಸುತ್ತಾ ಇದ್ದೆವು. ನಮ್ಮ ಪ್ರವಾಸದ ಒಕ್ಕಣೆ- "ಡಾ! ಬಸವಣ್ಣ -ರೀಡರ್ ೫ ವಿಧ್ಯಾರ್ಥಿಗಳೊ೦ದಿಗೆ ಬರುತ್ತಾ ಇದ್ದಾರೆ" ಎ೦ದು ನಾವು ಹೋಗೋ ಕಡೇ ಎಲ್ಲಾ ತಿಳಿಸಿಯಾಗಿತ್ತು - ದಿನಾ೦ಕದೊ೦ದಿಗೆ.
ನಾನು ಗು೦ಪನಲ್ಲಿ ಸ್ವಲ್ಪ ಮು೦ದೇನೇ ಯಾವಾಗಲೂ. ಅದರಲ್ಲಿ ಬಸವಣ್ಣ ಸಾರ್ ನೋಡೋಕೆ ಹುಡುಗ್ರು ತರ ಇದ್ರೂ.
ಹೀಗಾಗಿ ನಾವು ಹೋದಲ್ಲೆಲ್ಲಾ ಡಾ.ಬಸವಣ್ಣಾ ಸ್ವಾಗತ ಅ೦ಥಾ ನನ್ನ ಕೈ ಹಿಡಿಯೋರೆ- ಎಲ್ಲಾ ಸ್ವಾಗತ್ ಸಮಿತಿಯವ್ರು. ಬಸವಣ್ಣ ಸಾರ್-ಗೆ ಮುಜುಗುರ ಆಗಿ ನ೦ಗೆ ತಾಕೀತು ಮಾಡಿದ್ರು-ಸೀತಾರಾಮ ನೀವು ಯಾವಾಗಲೂ ಹಿ೦ದೆ ಇರಿ -ಮು೦ದೆ ಇರ್ಬೇಡಿ ಅ೦ದರು. ನಾನು ಚಾಚು ತಪ್ಪದೇ ಗುರುಗಳ ಅಜ್ಞೇ ಪಾಲಿಸಿದೇ ಅದರೂ ಸ್ವಾಗತ್ ಮಾಡೋ ಜನ ಮು೦ದಿರೋ ಸರ್-ನ್ನ ಬಿಟ್ಟು ಬ೦ದು ನನ್ನ ಕೈ ಕುಲ್ಕೋರು " ಹೌವ್ ಆರ್ ಯು ಡಾ. ಬಸವಣ್ಣ ಅ೦ಥಾ.". ನಮ್ಮ ಗ್ರೂಪ ಬಿದ್ದು ಬಿದ್ದು ನಗೋದು. ಕಡೇಗೆ ಬಸವಣ್ಣ ಸಾರ್ ಸಹಿತ ನಗೋಕೆ ಸುರು ಹಚ್ಕೊ೦ಡ್ರು. ಇದು ಒ೦ಥರ್ರಾ ಮಜ ಎಲ್ಲರಿಗೂ.
ನನ್ನ ಗೆಟಪ್ಪಿಗೆ ಲ್ಯೆನ್ ಹೊಡೆಯೊದು ಅಭಾಸವಾಗೊದರಿ೦ದ ನಾನು ಕಾಲೇಜ ಲ್ಯೆಫ಼್ ಪೂರ್ತಿ ಡಿಸೆ೦ಟ್ ಮಾಸ್ಕಲ್ಲಿ ಕಳೆಯಬೇಕಾಯ್ತು. (ಛೇ ಪಾಪ)
ಇನ್ನೂ ನನ್ನ ಪ್ರೊಫ಼ಿಲ್ ಫೋಟೋ ನೋಡಿ ನನಗಿ೦ತ ಹಿರಿಯರಾದ ಅಜ಼ಾದರು ನನ್ನ ಅವರಿಗಿ೦ತಾ ದೊಡ್ಡೋನು ಎಣಿಸಿ, ಅವರ ಪ್ರತಿಕ್ರಿಯೆಯಲ್ಲಿ ಅಜ಼ಾದಣ್ಣ ಅ೦ದಿದ್ದನ್ನು ತಮ್ಮ ಲೇಖನವೊ೦ದರಲ್ಲಿ ಪ್ರಸ್ತಾಪಿಸಿ ಸೂಕ್ಷ್ಮದಲ್ಲಿ ಚುರುಕು ಕೊಟ್ಟಿದ್ದಾರ್‍ಎ "ಈಗ ಗಾಯಕ್ಕೆ ಇನ್ನೊಂದು ಬರೆ ಅನ್ನೋಹಾಗೆ..ಸೀತಾರಾಂ ಸೇರ್ಕೊಂಡ್ರು...ನನ್ನ ಇತ್ತೀಚಿನ ಪೋಸ್ಟ್ಗೆ ಪರಿತಿಕ್ರಿಯೆ ಹಾಕ್ತಾ..ಕೊನೆಗೆ ಬಾಂಬ್ ಸಿಡಿಸಿಯೇ ಬಿಟ್ರು..."ಚಮಕಾಯಿಸಿಬಿಟ್ರಿ..ಆಜಾದಣ್ಣ...!!!!""

ಒಟ್ಟಿನಲ್ಲಿ ನನಗೆ ಹೇಳಬೇಕಾಗಿದ್ದೆನೆ೦ದರೇ,

ಇದಕ್ಕೆ ಕಾರಣ ವಯಸ್ಸಿಗೆ ಮೀರಿ ದೇಹಾ ಬೆಳೆಯೋದು!!!!!
ಜೊತೆಗೆ
" ಮೂರ್ತಿ ದೊಡ್ಡದಾದರೂ ವಯಸ್ಸು ಸಣ್ಣದು"

8 comments:

ಆನಂದ said...

ಚೆನ್ನಾಗಿದೆ ಸರ್ ನಿಮ್ಮ ಅನುಭವಗಳು! :)
ನನ್ಕಥೆ ಕೇಳಿ,

ನಾನು ಇನ್ನೂ ಓದ್ತಾ ಇರುವಾಗಲೇ ನನಗೆ ಕೆಲಸ ಸಿಕ್ಕಿತ್ತು.
ಒಂದಿನ ನಾನು ಕುರ್ಚಿ ಮೇಲೆ ಮುದುರಿ ಕುಳಿತ್ಕೊಂಡು ಪೇಪರ್ ಓದ್ತಾ ಇದ್ದೆ.
ಮನೆಗೆ ಬಂದವರಿಗೆ, ಅಪ್ಪ , ನನ್ನ ಮಗನಿಗೆ ಕೆಲ್ಸ ಸಿಕ್ತು ಕಣ್ರೀ ಅಂತ ಹೇಳಿದ್ರು. (ನಮ್ಮನೇಲಿ ನಾನೊಬ್ಬನೇ ಗಂಡು ಮಗ)
ಬಂದವರು ನಮ್ಮ ಮನೆ ಬಗ್ಗೆ ಸ್ವಲ್ಪ ಗೊತ್ತಿರುವವರೇ, ಆದ್ರೂ ಅವರಿಗೆ ಸ್ವಲ್ಪ ಅನುಮಾನ ಆಯ್ತು ಅಂತ ಕಾಣುತ್ತೆ, ನನ್ಕಡೆ ನೋಡಿದವರೇ ’ನೋಡಪ್ಪಾ, ನೀನು ಕೂಡ ನಿನ್ನಣ್ಣಾನ ತರಹನೇ ಓದಿ ಕೆಲ್ಸಕ್ಕೆ ಸೇರ್ಬೇಕು ಆಯ್ತಾ....’!!

ಒಳಗಿದ್ದ ಅಮ್ಮ ಮತ್ತು ನನ್ನ ತಂಗಿ ಜೋರ‍ಾಗಿ ನಗತೊಡಗಿದರು. ಅಪ್ಪ ಬಲವಂತವಾಗಿ ಗಂಭೀರ‍ವದನ!

ನಾನು ಬೆಪ್ಪನಂತೆ ಹ್ಹಿ ಹ್ಹಿ, ಹೂಂ ಅಂದೆ...

ಸುಮ said...

ನಿಜ ನೀವು ಹೇಳುವುದು. ನನಗೂ ಇಂತಹ ಅನುಭವಗಳು ಆಗಿವೆ . ನನ್ನದೇ ವಯಸ್ಸಿನ ನನ್ನ ಗೆಳತಿಯರಿಗಿಂತ ನಾನು ದೊಡ್ಡವಳೆನ್ನಿಕೊಳ್ಳುತ್ತೇನೆ. ಅವರೆಲ್ಲರಿಗಿಂತ ಬೇಗ ಮದುವೆಯಾಗಿ , ಸಾಕಷ್ಟು ಎತ್ತರವಾಗೇ ಇರುವ ಮಗಳ ತಾಯಾಗಿರುವುದು , ಹಾಂ... ಸ್ವಲ್ಪ ಡುಮ್ಮಿಯಾಗಿರುವುದೂ ಇದಕ್ಕೆ ಕಾರಣ :-(

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ನನ್ನ ತಮ್ಮ ನನಗಿಂತ ಬಹಳ ದೊಡ್ಡವನ ಥರ ಕಾಣಿಸ್ತಾನೆ.
ನಾನು ಯಾರಿಗಾದರು ಇವನು ನನ್ನ ತಮ್ಮ ಎಂದು ಪರಿಚಯಿಸಿದರೆ ಯಾರು ನಂಬುವುದಿಲ್ಲ. ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳ್ತಾರೆ...
ಕೆಲೋವೊಮ್ಮೆ "ಇವ ನಮ್ಮ ಅಣ್ಣ" ಎಂದು ಹೇಳುತ್ತೇನೆ... ಇಲ್ಲವಾದರೆ "ನನ್ನ ಸಹೋದರ" ಎಂದು ಸುಳ್ಳು ಹೇಳಿಬಿಡುತ್ತೇನೆ ... ಹ್ಹಾ ಹ್ಹಾ ಹ್ಹಾ.

ಸಾಗರದಾಚೆಯ ಇಂಚರ said...

ಸರ್
ತುಂಬಾ ಚೆನ್ನಾಗಿದೆ ಅನುಭವಗಳ ಬರಹ
ಎಷ್ಟೋ ಸಲ ಇಂಥಹ ಮುಜುಗರಕ್ಕೆ ಸಿಲುಕಿಬಿಡುತ್ತೇವೆ,
ಆದರೆ ಇದೊಂದು ಹಾಸ್ಯ ಘಟನೆಯಾಗಿಯೂ ನೆನಪಿನಲ್ಲಿ ಉಳಿದುಬಿಡುತ್ತದೆ ಅಲ್ಲವೇ?

ಸೀತಾರಾಮ. ಕೆ. said...

ಆನ೦ದರವರೇ ಬ್ಲೊಗಿಗೆ ಸ್ವಾಗತ. ತಮ್ಮ ಅನಿಸಿಕೆ ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು. ತಮ್ಮದು ವಯಸ್ಸಿಗೆ ಮೀರಿ ದೇಹ ಬೆಳೆದ ಸಮಸ್ಯೆಯಲ್ಲ ಅದರ ವಿರುಧ್ಧದು ಅ೦ದರೆ ವಯಸ್ಸಿಗೆ ತಕ್ಕ ಹಾಗೇ ಬೆಳೆಯದ ದೇಹ -ಇದೂ ಹೇಗೆ ಪೇಚಿಗೆ ಸಿಲುಕಿಸುತ್ತದೆ೦ದು ನನ್ನ ಲೇಖನದ ಇನ್ನೊ೦ದು ಮುಖ ತೋರಿಸಿದ್ದಿರಾ! ವ೦ದನೆಗಳು.

ಸುಮಾರವರೇ -ತಮ್ಮ ಪ್ರತಿಕ್ರಿಯೆಗೆ ಹಾಗೂ ತಮ್ಮ ಅನುಭವ ಹ೦ಚಿಕೊಡಿದ್ದಕ್ಕೆ ಧನ್ಯವಾದಗಳು. ಸುಧಾಕಿರಣರ ಮೆಚ್ಚಿನವರಾದ ಮೇಲೆ ಹಾಗೇನೂ ಚಿ೦ತೆ ಮಾಡಬೇಕಾದದಿಲ್ಲ ಅಲ್ಲವೇ..

ನಮ್ಮ ಅಣ್ಣನ ಸಮಸ್ಯೆ ನಿಮ್ಮದು ಶಿವಪ್ರಕಾಶರವರೇ- ಅಭಿಪ್ರಾಯ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು

ಡಾ. ಗುರುಮೂರ್ತಿಯವರೇ ಅನಿಸಿಕೆಗೆ ಧನ್ಯವಾದಗಳು. ಇ೦ಥಾ ಪ್ರಸ೦ಗಗಳು ಆ ಕ್ಷಣ ಮುಜುಗುರವೆನಿಸಿದರು ನ೦ತರ ಯೋಚಿಸಿದಾಗ ನಗೆ ಬರುವದು ಹಾಗೂ ಹಾಸ್ಯ ಲೇಖನಕ್ಕೆ ವಸ್ತುವಾಗುವದು.

ಜಲನಯನ said...

ಸೀತಾರಾಂ ಸರ್, ನಿಮ್ಮ ವಯಸ್ಸನ್ನು ನೋಡಿರಲಿಲ್ಲ ನಿಜ..ಆದ್ರೆ ನಿಮ್ಮ ಫೋಟೋ ನನಗೆ ಮೋಸ ಮಾಡಿಬಿಡ್ತು...ನಾನು ಫೋಟೋಹಾಕಿರಲಿಲ್ಲ ಅದಕ್ಕೆ ನೀವು ಮೋಸ ಹೋದ್ರಿ...ಹಹಹ..ಬಹಳ ಚನ್ನಾಗಿದೆ...ನಿಮ್ಮಣ್ಣನ ಥರದ ಗೋಳೇ ನನ್ನದು ನನ್ನ ತಮ್ಮ ನನ್ನನ್ನ ಅಣ್ನ ಅಂತ ಪರಿಚಯಿಸೋದನ್ನ ಬಿಟ್ಟಿದ್ದಾನೆ ಈಗ..ಉರ್ದುನಲ್ಲಿ ದಾದ ಅಂತೀವಿ...ಅದನ್ನ ಬಿಟ್ಟು ಈಗ ಅವನು ಮೇರಾ ಭಾಯಿ ಅಂತಾನೆ...ಹಹಹ,

ಸವಿಗನಸು said...

ಸರ್,
ಚೆನ್ನಾಗಿ ಬರೆದಿದ್ದೀರ.....ನಾನು ಈಗ ಸೀತಾರಾಮಣ್ಣ ಅಂತ ಹೇಳೊಲ್ಲ...ಹಹ್ಹಹಹ...
ಕೆಲವು ಗಂಡ ಹೆಂಡತಿ ಸಹ ಅಪ್ಪ ಮಗಳ ಹಾಗೆ ಕಾಣೋದು ಉಂಟು.....

ಸೀತಾರಾಮ. ಕೆ. said...

ಭಾಯಿ ಅನ್ನೋದು ಸುಲಭ ನೋಡಿ ಅಣ್ಣನೂ ಅಥವಾ ತಮ್ಮನೂ ಅನ್ಕೋಬಹುದು ಅಲ್ಲವೇ! ಧನ್ಯವಾದಗಳು ಜಲನಯನರೇ.
ಹಾ ನಮ್ಮಿಬ್ಬರಲ್ಲಿ ಯಾರು ಅಣ್ಣ ಯಾರು ತಮ್ಮ ಅನ್ನೋ ಸಮಸ್ಯೆ ಇಗ ಬಗೆಹರಿದಿದೆ ಅಲ್ಲವೇ!! ನಮಗೇಕೇ ನಮ್ಮ ಬ್ಲೊಗ್ ಓದೋ ಎಲ್ಲರಿಗೂ ಹಾಃ.. ಹಾಃ..

ಸವಿಗನಸು ಮಹೇಶರವರೇ ಬಹಳ ದಿನದ ನ೦ತರದ ಭೇಟಿ ಬ್ಲೊಗ್-ಗೆ. ನನ್ನ ಲೇಖನ ಒದಿ ಎಲ್ಲಾ ಅವಾ೦ತರಗಳನ್ನು ಹೇಳಿ ಯಾವದೋ ಒ೦ದನ್ನ ಸೀತಾರಾಮ ಬಿಟ್ಟಿದ್ದಾನೆ ಅ೦ಥಾ ಹಲವರು ಅನ್ಕೊ೦ಡಿರ್ಬಹುದು. ಅ೦ತಹ ಪ್ರಶ್ನೇನ್ನ ನೀವು ನೇರವಾಗಿ ಅಲ್ಲದೇ ಹೋದರು ಸುತ್ತು ಬಳಸಿ ಎಳೆದಿದ್ದಿರಾ.... ಚೆ೦ದ ಪ್ರತಿಕ್ರಿಯೆ-ಧನ್ಯವಾದಗಳು.