Friday, June 25, 2010

ಪ್ರಜಾಪ್ರಭುತ್ವದ ಅವಸಾನ

ಮನ ಯಾಕೋ ವಿಶಣ್ಣವಾಗಿದೆ.....

ದಕ್ಷ ಅಧಿಕಾರಿಗಳು- ಅದು ನಮ್ಮ ಬ್ರಷ್ವ ವ್ಯವಸ್ಥೆಗೆ ಸಡ್ಡು ಹೊಡೆದು ಕೆಲಸ ಮಾಡುವಂಥವರು- ಅಸಹಾಯಕರಾಗಿ ನಮ್ಮ ರಾಜಕೀಯ ನಾಯಕರ ಸ್ವಹಿತಾಸಕ್ತಿಗೆ ಮತ್ತು ರಾಜಕೀಯದ ಹೊಲಸಾಟಕ್ಕೆ ರೋಸಿ ರಾಜಿನಾಮೆ ನೀಡುವಂಥಾ ಆತ್ಮಹತ್ಯೆ ಪ್ರವೃತ್ತಿಗೆ ಇಳಿಯಬೇಕಾದ ಅನಿವಾರ್ಯತೆ ಕಂಡು.

ನಿರ್ಧಾಕ್ಷಿಣ್ಯವಾಗಿ ಬ್ರಷ್ಟ ಅಧಿಕಾರಿಗಳನ್ನು, ಕಬ್ಬಿಣ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಆಕ್ರಮಗಳನ್ನು ಮತ್ತು, ಕಳ್ಳ ಅದಿರು ಸಾಗಾಣಿಕೆಯನ್ನು ಮೂಲ ಸಮವಾಗಿ ಶೋಧಿಸಿ ಕಿತ್ತೆಸೆಯಲು, ಎಲ್ಲ ವೈರುಧ್ಧ್ಯಗಳ ನಡುವೆಯೂ, ಬಿಡದೇ ಹೋರಾಟ ನಡೆಸಿದ ದಿಟ್ಟ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ, ರಾಜೀನಾಮೆಯಿ೦ದಾಗಿ ಮನ ಪ್ರಕ್ಶುಬ್ದವಾಗಿದೆ.
ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ.

ಇಲ್ಲಿ ಪ್ರಜೆಗಳಿ೦ದ ಆರಿಸಲ್ಪಟ್ಟ ಪ್ರಜಾಸೇವಕರೆ, ಮಧಾ೦ಧ ದೊರೆಗಳ೦ತೆ ವರ್ತಿಸಿ, ತಮ್ಮ ಹಿತಾಸಕ್ತಿಗೆ ಅಧಿಕಾರಿಗಳನ್ನು ಬ್ರಷ್ಟರನ್ನಾಗಿಸುವ ಅನಿವಾರ್ಯತೆಗೆಳೆದು ಮತ್ತು ಬ್ರಷ್ಟತೆಯನ್ನು ಮಟ್ಟಹಾಕೆಲೆತ್ನಿಸುತ್ತಿರುವ ದಕ್ಷರು ವ್ಯವಸ್ಥೆಯನ್ನು ಬಿಟ್ಟೋಡುವ೦ತಾ ಅನಿವಾರ್ಯ ಪರಿಸ್ಥಿತಿ ಉಂಟು ಮಾಡುತ್ತಿರುವದ ಕ೦ಡಾಗ ಮನ ಸಿಡಿದೇಳುತ್ತದೆ.

ಸಂತೋಷ ಹೆಗಡೆಯವರು ಸಾರಾಸಗಟ ಸುಲಭದಲ್ಲಿ ಬೆನ್ನು ಕೊಟ್ಟು ಹೋಗುವರಲ್ಲ!!

ಅವರು, ಅವರೊಡನೆ ದಕ್ಷ ಅರಣ್ಯ ಅಧಿಕಾರಿ ಯೂ.ವಿ.ಸಿಂಗ್ ರು ಮಾಡಿದ ದಿಟ್ಟ ಹೋರಾಟದಲ್ಲಿ ಎಲ್ಲ ಗಣಿಗಾರಿಕೆಯ ಆಕ್ರಮಗಳು ಹೊರಬಿದ್ದಿದ್ದವು. ಇದರಲ್ಲಿ ನಿಷ್ಪಕ್ಷಪಾತ ವರದಿ ಇತ್ತು. ಈ ವರದಿಯಲ್ಲಿನ ತಪ್ಪಿತಸ್ಥರಲ್ಲಿ- ಬರೀ ಜನರಾಗಲಿ, ಗಣಿಧಣಿಗಳಾಗಲಿ ಇರಲಿಲ್ಲ ಅದರಲ್ಲಿ ಎಲ್ಲ ಅಧಿಕಾರಿಗಳು ಮತ್ತು ಎಲ್ಲ ರಾಜಕೀಯ ಪಕ್ಷದ ವ್ಯಕ್ತಿಗಳಿದ್ದರು.

ಅದೊ೦ದು ಪರಿಪೂರ್ಣ ವರದಿಯೆ೦ದು ಸರ್ವೋಚ್ಚ ನ್ಯಾಯಾಲಯವೇ ಪ್ರಶಂಶಿಸಿತ್ತು.

ಆದರೇ ಆ ವರದಿಯ ಮೇಲೆ ಕ್ರಮ ಕೈಗೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ರಾಜಕೀಯ ನಾಯಕರುಗಳಿಗೆ ಇರಲಿಲ್ಲ!

ಅದನ್ನು ತೆಗೆದು ನೋಡಲಿಲ್ಲ!

ಇಷ್ಟಕ್ಕೇ ನಿಲ್ಲಲಿಲ್ಲ ಅದು ಹಣ ಮಾಡುವ ಸಾಧನ ಆಯಿತು!

ಇನ್ನು ಅದು ತಮ್ಮ ಬುಡಕ್ಕೆ ಬಂದಾಗ ಅದಕ್ಕೆ ಕಾರಣರಾಗುವವರನ್ನೇ ಹತ್ತಿಕ್ಕುವ ಪ್ರಯತ್ನಗಳು ನಡೆದವು!

ಅದರ ಫಲವೇ ಹೆಗಡೆಯವರ ರಾಜಿನಾಮೆ!

ಇಂತಹ ಘಟಾನುಗಟಿಯೇ ರಾಜಿನಾಮೆ ನೀಡುವಂಥಾ ಪರಿಸ್ಥಿತಿ ಉಂಟಾಗಿದೆಯೆಂದರೆ ನಮ್ಮಲ್ಲಿ ಪ್ರಜಾಪ್ರಭುತ್ವವಿದೆಯೇ?

ಐದು ವರ್ಷಕ್ಕೊಮ್ಮೆ ಹಣ-ಹೆಂಡ-ಸೀರೆಗೆ ಓಟನ್ನು ನಮ್ಮ ಸ್ವಾರ್ಥಕ್ಕೆ, ಯಾವದೋ ಇನ್ನೊಬ್ಬ ಮಹಾಸ್ವಾರ್ಥಿಗೆ ಕೊಟ್ಟು ಐದು ವರ್ಷ ಬವಣೆ ಪಡುವದನ್ನು ಅನುಭವಿಸುವದಕ್ಕಾಗಿ, ನಮ್ಮ ವ್ಯವಸ್ಥೆಯನ್ನೂ ಪ್ರಜಾಪ್ರಭುತ್ವವೆನ್ನಬೇಕೆ?

ನಾವೆತ್ತ ಸಾಗುತ್ತಿದ್ದೇವೆ??

ಇದು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ಅವಸಾನ!!!!!

25 comments:

Subrahmanya said...

ಗಣಿಗಾರಿಕೆ ವರದಿಯನ್ನೂ ದುರುಪಯೋಗಪಡಿಸಿಕೊಂಡಿದ್ದನ್ನು ತಿಳಿದು ಬೇಸರವಾಯಿತು. by chance ಅಧಿಕಾರ ಹಿಡಿದಿರುವ ( ಕುಮಾರಸ್ವಾಮಿ ಮಾಡಿದ ತಪ್ಪಿನಿಂದ !) ಇವರಿಗೆ , ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ. ಇಂದಿನ ಪತ್ರಿಕೆಗಳಲ್ಲಿ "ಸಾಧನಾ" ಸಮಾವೇಶದ ಬಗೆಗೆ ಬಂದಿರುವ adds ಗಳನ್ನು ನೋಡಿ, ಇಂತಹ ಕೆಟ್ಟ ಆಡಳಿತವನ್ನು ಕೊಟ್ಟ ಸರ್ಕಾರ ಮತ್ತೊಂದಿಲ್ಲವೆನಿಸಿತು. ಸರ್ಕಾರದ ಮಿತಿಯೊಳಗೆ ಒಂದಷ್ಟು ಸಾಧಿಸಿ ತೊರಿಸಿದ ಸಂತೋಷ ಹೆಗಡೆಯವರಂತಹವರಿಗೇ ವ್ಯವಸ್ಥೆ ಬೇಸರವನ್ನುಂಟುಮಾಡಿದೆ ಎಂದರೆ, ನಮ್ಮಂತಹ ಪಾಮರರ ಪಾಡೇನು ? ಜಾಹಿರಾತುಗಳಿಗೆ, ಫಲಕಗಳಿಗೆ, ಕೋಟಿಗಟ್ಟಲೆ ವ್ಯಯಿಸುತ್ತಿರುವ ಇವರಿಗೆ ಒಬ್ಬ ನಿಷ್ಠಾವಂತರನ್ನು ಉಳಿಸುಕೊಳ್ಳಲು ಆಗಲಿಲ್ಲವೆ ? ಅಸಹ್ಯ ಹುಟ್ಟುತ್ತಿದೆ....ಪ್ರಜಾಪ್ರಭುತ್ವ ಸತ್ತಿದೆ ಬಿಡಿ...ಇನ್ನೆಂಥಾ ಆಶಾವಾದ ಇಟ್ಟುಕೊಳ್ಳುವುದು ?

ತೇಜಸ್ವಿನಿ ಹೆಗಡೆ said...

ನಿಜ.... ಇದು ತುಂಬಾ ಖಂಡನೀಯ ಹಾಗೂ ಖೇದಕರ ವಿಷಯ. ಅಸಹಾಯಕತೆಯಿಂದ ನೋಡಲು ಮಾತ್ರ ನಮ್ಮಿಂದ ಈಗ ಸಾಧ್ಯ. ಮುಂದಿನ ಚುನಾವಣೆಯಲ್ಲಿ ಈ ಪ್ರಸಂಗಗಳನ್ನೆಲ್ಲಾ ಎದುರಿಗಿಟ್ಟೂಕೊಂಡು ಮತ್ತೊಂದು ಪಾರ್ಟೀ ಲಾಭ ಪಡೆದು ಗದ್ದಿಗೆ ಏರಿದರೂ ಮಾಡೋದು ಇದೇ ಕೆಲಸ! :(

ಸೀತಾರಾಮ. ಕೆ. / SITARAM.K said...

ತಮ್ಮಿಬ್ಬರ ಸ್ಪ೦ದನ್ನಕ್ಕೆ ಧನ್ಯವಾದಗಳು ಸುಬ್ರಮಣ್ಯಾರೇ ಮತ್ತು ತೇಜಸ್ವಿನಿಯವರೇ.
ಲೋಕಾಯುಕ್ತರ ವರದಿ ಪ್ರತಿ ಐದು ವರ್ಷಕ್ಕೊಮ್ಮೆ ಆರಿಸಿ ಬ೦ದು ಆಳುವ ಪ್ರಭುಗಳ ಹಣ ಮಾಡುವ ಅಕ್ಷಯ ಪಾತ್ರೆಯೇ ಹೊರತು ಅದರಿ೦ದ ಯಾವ ಪ್ರಯೋಜನವೂ ಆಗದು. ಅದನ್ನು ಹೊರತೆಗೆದು ಅದರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎ೦ದರೆ ಸಾಕು ಅಪಾರ ಹಣ ಹರಿಯುತ್ತೆ. ಆಮೇಲೆ ಅದನ್ನು ಎತ್ತಿ ಇಟ್ಟರಾಯಿತು ಮು೦ದಿನ ಪ್ರಭುಗಳಿಗೆ. ಇದು ನಮ್ಮ ಲೋಕಾಯುಕ್ತರ ವರದಿಯ ಮೇಲೆ ನಡೆಯಬಹುದಾದ ಏಕೈಕ ಕ್ರಮ.

ಸಾಗರಿ.. said...

ಬಿಜೆಪಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಗೆದ್ದುಬಂದಾಗ "ಏನಾದರೂ" ಆಗಬಹುದೇನೋ ಎಂಬ ನಿರೀಕ್ಷೆ ಇತ್ತು. ನಮ್ಮ ಭಟ್ಕಳ ಪಾಕಿಸ್ತಾನವಾಗುವುದು ತಪ್ಪಬಹುದು ಎಂದಿತ್ತು, ಹೀಗೇ ಎಷ್ಟೊಂದು ನಿರೀಕ್ಷೆಗಳು.. ಬದಲಿಗೆ ದೊಡ್ಡ ದೊಡ್ಡ ಆಫೀಸರುಗಳ ವರ್ಗಾವಣೆ, ಸಂಪಂಗಿ ಪ್ರಕರಣ, ಹಾಲಪ್ಪನ ಕಾಮಕಾಂಡ,ರೆಡ್ಡಿಗಳ ಮನವೊಲಿಕೆ ಅದೂ ಪ್ರವಾಹದಿಂದ ಉತ್ತರ ಕರ್ನಾಟಕದ ಜನ ತತ್ತರಿಸುತ್ತಿರುವಾಗ.. ಬರೀ ಭ್ರಷ್ಟರಿಗೇ ಮಣೆ ಹಾಕಿದೆ ಈ ಸರ್ಕಾರ.(ಪ್ರವಾಹದ ಹಣ ಗುಳುಂಗುಡಿಸಲು ಕಾಂಗ್ರೆಸ್ ಸಹ ಹಿಂದೆ ಬಿದ್ದಿಲ್ಲ. ಜನ ತತ್ತರಿಸುತ್ತಿರುವಾಗ ಅವರಿಗಾಗಿ ವಿನಿಯೋಗಿಸುವುದು ಬಿಟ್ಟು bank ಲಿ ಹಣ ಇಟ್ಟರೆ ಬಡ್ಡಿಬರುತ್ತದೆ ಎಂಬ ನೆಪ ಕೊಟ್ಟರು). ಇಂಥವರಿಂದೆಲ್ಲ ನಾವು ಏನನ್ನು ತಾನೇ ನಿರೀಕ್ಷಿಸಬಹುದು. ಬಿಹಾರವನ್ನೂ ಹಿಂದೆ ಹಾಕುತ್ತಿದೆ ನಮ್ಮ ರಾಜ್ಯ ಭ್ರಷ್ಟಾಚಾರದಲ್ಲಿ

ಶಿವರಾಮ ಭಟ್ said...

ಆತ್ಮೀಯರೆ,
ನಿಮ್ಮ ಭಾವನೆಗಳು ನನ್ನದೂ ಕೂಡ.
ನಿಮ್ಮೆಲ್ಲರ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ.
ಇಷ್ಟೊಂದು ಭ್ರಮನಿರಸನ ಯಾವಾಗಲೂ ಆಗಿರಲಿಲ್ಲ.
ಶಿವರಾಂ

ಮನದಾಳದಿಂದ............ said...

ಇಂದಿನ ಹೊಲಸು ರಾಜಕೀಯದ ಬಗ್ಗೆ ಮಾತನಾಡಲೂ ಹೇಸಿಗೆಯಾಗುತ್ತದೆ. ಸ್ವಾರ್ಥ ರಾಜಕಾರಣಿಗಳ ಹಿತಾಸಕ್ತಿಗೆ ಸಂತೋಷ ಹೆಗಡೆಯವರಂತಹ ನಿಸ್ವಾರ್ಥ ದಿಟ್ಟ ಅಧಿಕಾರಿಗಳೇ ಬಲಿಯಾಗುತ್ತಿದ್ದಾರೆ. ಇನ್ನು ಸಾಮಾನ್ಯನೊಬ್ಬನ ಗತಿಯೇನು?
ಪ್ರಜಾಪ್ರಭುತ್ವ ಅವಸಾನದ ಅಂಚಿಗೆ ತಲುಪುತ್ತಿರುವುದು ನಿಜವೇ...........

sunaath said...

ಓರ್ವ ಪ್ರಾಮಾಣಿಕ ನಾಗರಿಕನ ಮನದ ಅಳಲನ್ನು ಚೆನ್ನಾಗಿ ವ್ಯಕ್ತ ಮಾಡಿದ್ದೀರಿ. ಲೋಕಾಯುಕ್ತರೇ ರಾಜೀನಾಮೆ ಕೊಡುವಂತಹ ಪರಿಸ್ಥಿತಿಯು ನಮ್ಮ ದುರ್ದೈವಕ್ಕೆ ಹಿಡಿದ ಕನ್ನಡಿಯಾಗಿದೆ.

ಕೇಶವ ಪ್ರಸಾದ್.ಬಿ.ಕಿದೂರು said...

ನಿಜ. ನಿಮ್ಮ ಲೇಖನ ಮನೋಜ್ಞ ಮತ್ತು ಸಕಾಲಿಕ. ಲೋಕಾಯುಕ್ತರ ರಾಜೀನಾಮೆ ಹಾಗೂ ನಂತರ ಸರಕಾರ ಮತ್ತು ರಾಜಕಾರಣಿಗಳ ವರ್ತನೆ ಹಾಗೂ ಬಹುಪಾಲು ಜನತೆಯ ವೇದನೆಯನ್ನು ಕಂಡು ಮನಸ್ಸು ಭಾರವಾಗಿದೆ. ಪ್ರಜಾಪ್ರಭುತ್ವ ಈ ಸ್ಥಿತಿಗೆ ಇಳಿಯುತ್ತಿದೆಯೇ ಅಂತ ನೋವಾಗುತ್ತಿದೆ. ನಿಜ. ಆದರೂ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ರಾಜೀನಾಮೆ ಕೊಡಬಾರದಿತ್ತು ಎಂದು ಹೇಳಬಹುದು. ಆದರೆ ರಾಜೀನಾಮೆ ನೀಡುವುದರ ಮೂಲಕ ರಾಜ್ಯದ ಜನತೆಗೆ, ಸರಕಾರಕ್ಕೆ ಅವರು ರವಾನಿಸಿರುವ ಸಂದೇಶ ಮಾತ್ರ ನಿದ್ದೆಯಲ್ಲಿರುವವರನ್ನು ಬಡಿದೆಬ್ಬಿಸುವಂತಿದೆ. ಈವತ್ತು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಯಾವೊಬ್ಬ ರಾಜಕಾರಣಿ ಎಷ್ಟೇ ಅತ್ತು ಕರೆದರೂ ಜನ ನಂಬಲಾರರು. ಅಂತಹ ಯೋಚನಾ ತರಂಗವನ್ನು ಎಬ್ಬಿಸಿದ್ದಾರೆ ಹೆಗ್ಡೆ. ಅದಕ್ಕಾಗಿ ಅವರಿಗೆ ನಾವೆಲ್ಲ ಆಭಾರಿಯಾಗಬೇಕು.

ಸುಬ್ರಮಣ್ಯ ಮಾಚಿಕೊಪ್ಪ said...

ಸಂತೋಷ್ ಹೆಗಡೆ ರಾಜಿನಾಮೆ ಬಗ್ಗೆ ನಾವು ಯಾಕೆ ತಲೆಕೆಡೆಸಿಕೊಳ್ಳುವುದು? ಅವರು ಹೋದರೆ ಇನ್ನೊಬ್ಬರು ಬರುತ್ತಾರೆ.ರಾಮಾ ಜೋಯ್ಸ್ ಆಗಬಹುದು.

Dr.D.T.K.Murthy. said...

ಸಮಯೋಚಿತ ಲೇಖನ.ನಿಮ್ಮ ಬೇಸರದಲ್ಲಿ ನಾವೂ ಭಾಗಿಗಳು.

ಸವಿಗನಸು said...

ಯಾವ ಪಕ್ಷ ಬಂದರೂ, ಯಾವ ಲೋಕಾಯುಕ್ತ ಬಂದರೂ ಎಲ್ಲವೂ ಅದೇ....
ಜೇನು ಕಿತ್ತವನ್ನು ಕೈ ನೆಕ್ಕದೆ ಇರುತ್ತಾನ.....
ಒಳ್ಳೆ ಬರಹ ಸರ್.....

ವಿ.ಆರ್.ಭಟ್ said...

Extremely good article! I am very happy about your concern, thanks a lot.

Raghu said...

ಯಾವ ಪಕ್ಷ ಏನು ಮಾಡಿದೆ ಎನ್ನೋದು ಎಲ್ಲಾ ತಿಳಿದ ವಿಚಾರ..ಯಾರ್ ಯಾರ್ ಎಷ್ಟು ಎಷ್ಟು ಹಣ ತಿಂದಿದ್ದಾರೆ ಎನ್ನೋದು ಹೇಳೋದೇ ಬೇಡ.
ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ಕೊಡುವ, ಕೂತು ಚರ್ಚೆ ಮಾಡುವ ಎಂದು ಆಡಳಿತ ಪಕ್ಷ ಕರೆದರೆ ಪ್ರತಿಪಕ್ಷಗಳು ಮುಖ ತಿರುಗಿಸುತ್ತದೆ.
ಅದೇ ಪ್ರತಿಪಕ್ಷಗಳು ಆಡಳಿತಕ್ಕೆ ಬಂದರೆ ಬೇರೆ ಪಕ್ಷಗಳು ನನಗು ಇದಕ್ಕೂ ಏನು ಸಂಬಂಧವಿಲ್ಲ ಎನ್ನುವಂತೆ ಇರುತ್ತದೆ.
ನೀವೇ ಹೇಳಿ ಸರ್ ಯಾರನ್ನು ನಂಬೋದು..?

ಇವತ್ತು ಸಂತೋಷ್ ಹೆಗ್ಡೆ ಏನೋ ಸರಿ.. ನಾಳೆ ಇನ್ನೊಬ್ಬ ನಿಷ್ಟಾವಂತ, ನಿಸ್ಪಕ್ಷಪಾತ ಅಧಿಕಾರಿ ಬರುತ್ತಾನೆ ಎನ್ನೋದು ಎಷ್ಟು ಗ್ಯಾರಂಟೀ..?
ಇವತ್ತು ಹೆಚ್ಚಿನ ಅಧಿಕಾರ ಕೊಟ್ಟರೆ ನಾಳೆ ಅಧಿಕಾರ ದುರುಪಯೋಗವಾಗೋಲ್ಲ ಅಂತ ಸುಮ್ಮನೆ ಕೂರೋದು ಸರಿಯೇ..?
ನಮ್ಮ ವ್ಯವಸ್ಥೆಯ ಬೇರು ಕೊಳೆತು ಹೋಗಿದೆ. ಬೇರು ಕೊಳೆತು ಹೋದ ಮೇಲೆ ಮರ ಗಟ್ಟಿಮುಟ್ಟಾಗಿದೆ ಎಂದು ಹೇಳೋದು ಅದೆಷ್ಟು ಸರಿ.

ಅಂದು ಈಡೀ ದೇಶವನ್ನೇ ಒಂದು ಮಾಡಿ ದೇಶ ಕಟ್ಟಿದ ಮಹಾತ್ಮಾ ಗಾಂಧಿ ಹೇಳಿದ ಮದ್ಯಪಾನ ಬೇಡ ಎಂಬ ಮಾತಿಗೆ ಒಂದೆರಡು ರಾಜ್ಯ ಬಿಟ್ಟರೆ ಬೇರೆ ಯಾವ ರಾಜ್ಯದ ಆಡಳಿತ ಪಕ್ಷಕ್ಕೆ ಮದ್ಯಪಾನ ಮೇಲೆ ನಿಷೇಧ ಹೇರುವ ಧರ್ಯವಿದೆ. ?!!

ಎಲ್ಲಿಯವರೆ ನಮ್ಮ ನಾಯಕರು (ಕಳ್ಳರ ಸಂತೆ ) ಬುದ್ದಿ ಕಲಿಯೋದಿಲ್ಲವೋ, ಯಾ ನಾವು ಬುದ್ದಿ ಕಲಿಸೋದಿಲ್ಲವೋ ಅಲ್ಲಿಯವಗೆ ಇದೆ ಗೋಳು..
ಹೊಳಾಗದಿರಲಿ ನಮ್ಮ ಈ ಭೂಮಿ ಅಂತ ಆಶಿಸೋಣ.

ಈ ಲೇಖನ ತುಂಬಾ ಚೆನ್ನಾಗಿದೆ. ಇಷ್ಟ ಆಯಿತು.
ನಿಮ್ಮವ,
ರಾಘು.

prabhamani nagaraja said...

ಲೇಖನ ಸಮಯೋಚಿತವಾಗಿದ್ದು ಎಲ್ಲರನ್ನೂ ಚಿ೦ತನೆಗೆ ಪ್ರೇರೇಪಿಸುವ೦ತಿದೆ.

nimmolagobba said...

ಉತ್ತಮ ವಿಮರ್ಶೆ !!!! ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಪ್ರಭುಗಳೇ.ಹಾಗಾಗಿ ಯಾರ ಬಗ್ಗೆ ಯಾರಿಗೂ ಗೌರವ ಇಲ್ಲಾ .ಇಂತಹ ಎಡವಟ್ಟುಗಳ ನಡುವೆಯೂ ನನ್ನ ದೇಶ ಪ್ರಗತಿಪಥದಲ್ಲಿದೆ ಅದೇ ಸ್ವಲ್ಪ ಸಮಾಧಾನ .ಅದಕ್ಕೆ ಇಂಗ್ಲೀಷಿನ ಒಂದು ಹಾಡು ಜ್ಞಾಪಕಕ್ಕೆ ಬರುತ್ತೆ " every body wants to rule the world" ಅಂಥಾ ಪ್ರಾರಂಭವಾಗುತ್ತೆ ಇದು ಸತ್ಯಾ ಆಲ್ವಾ!!!

ಅನಂತರಾಜ್ said...

ನಿಜ ನಿಮ್ಮ ವಿಮರ್ಶಾತ್ಮಕ ಮಾತುಗಳು ನೂರಕ್ಕೆ ನೂರರಷ್ಟು ನಿಜ ಸೀತಾರಾ೦ ಅವರೆ. ಲೋಕಾಯುಕ್ತರ ವರದಿಗೆ ಕಿಮ್ಮತ್ತಿನ ಬೆಲೆಯೂ ಇಲ್ಲ. ಈ ಕಾರ್ಯಕ್ರಮದಲ್ಲಿ ಬಲಿಪಶು ಆದ ಶ್ರೀ ಗೋಕುಲ್ ರವರು ಕೂಡ ತು೦ಬಾ ದಕ್ಷ ಅಧಿಕಾರಿಗಳು. ನಾನು ಅವರೊಡನೆ ಕೆಲಸ ಮಾಡಿದ್ದೇನೆ. ನಮ್ಮ ಕಾರ್ಖಾನೆಯಲ್ಲಿ (ಮೈಸೂರು ಕಾಗದ ಕಾರ್ಖಾನೆ, ಭದ್ರಾವತಿ)ಜನರಲ್ ಮ್ಯಾನೇಜರ್ ಆಗಿದ್ದವರು. ಇ೦ತಹ ದಕ್ಷ ಅಧಿಕಾರಿಗಳಿಗೆ ಸಿಗುವ ಬಹುಮಾನವೆ೦ದರೆ "ಸಸ್ಪೆನ್ಷನ್"..! ಎ೦ತಹ ವಿಪರ್ಯಾಸ..ಅಲ್ಲವೆ?

ಅನ೦ತ್

!! ಜ್ಞಾನಾರ್ಪಣಾಮಸ್ತು !! said...

ಸೀತಾರಾಮ.ಕೆ.,

ಹೌದು..
ಎಲ್ರೂ ವಿವೇಕ ಮಾರ್ಕೊಳ್ತಾ ಇದಾರೆ..

ದಿನಕರ ಮೊಗೇರ.. said...

ಸೀತಾರಾಂ ಸರ್,
ಸಕಾಲಿಕ ಉತ್ತಮ ಅಭಿಪ್ರಾಯ ನಿಮ್ಮದು....... ಬಿ ಜೆ ಪಿ , ಉಳಿದ ಪಾರ್ಟಿಗಿಂತ ಉತ್ತಮ ಪಕ್ಷ ಎಂದು ತಿಳಿದಿದ್ದೆ...... ವೋಟು ಸಹ ಹಾಕಿದ್ದೆ...... ಮನುಷ್ಯನ ನಿಜವಾದ ಬಣ್ಣ , ಅಧಿಕಾರ ಬಂದಾಗ ತಿಳಿಯತ್ತಂತೆ.... ಇವರ ಬಣ್ಣ ಬಯಲಾಗಿದೆ..... ಥೂ ಇವರ ಬಗ್ಗೆ ಮಾತಾಡಕ್ಕೆ ನಾಚಿಕೆಯಾಗತ್ತೆ....... ಆದರೂ ಸಂತೋಷ್ ಹೆಗಡೆಯವರು ರಾಜೀನಾಮೆ ಕೊಡಬಾರದಿತ್ತು......... ಇಂಥವರೇ , ಕಾನೂನಿನ ಬಗ್ಗೆ ವಿಶ್ವಾಸ ಕಳೆದುಕೊಂಡು ರಾಜೀನಾಮೆ ಕೊಟ್ಟರೆ, ಜನಸಾಮಾನ್ಯರಿಗೆ ಏನು ಸಂದೇಶ ಹೋಗತ್ತೆ ಆಲ್ವಾ.... ಒಳಗಡೆ ಇದ್ದೇ ವ್ಯವಸ್ತೆ ವಿರುದ್ದ ಹೊರಾಡಬೇಕಿತ್ತು...... ಇನ್ನಷ್ಟು ಕಿರಿ ಕಿರಿ ಕೊಡಬಹುದಿತ್ತು ಸರಕಾರಕ್ಕೆ, ಬ್ರಷ್ಟ ಅಧಿಕಾರಿಗಳಿಗೆ.............

ಸಾಗರದಾಚೆಯ ಇಂಚರ said...

ಚೆನ್ನಾಗಿದೆ ಸರ್ ಬರಹ

shivu.k said...

ಸೀತಾರಾಂ ಸರ್,

ಇದು ನೀವು ಹೇಳಿದಂತೆ ಪ್ರಜಾಪ್ರಭುತ್ವದ ಅವಸಾನವ ಅಂತ ನನಗೂ ಆತಂಕವಾಗುತ್ತಿದೆ. ಒಂಥರ ಅಸಹ್ಯವಾಗುತ್ತಿದೆ. ಭರವಸೆಯೇ ಇಲ್ಲದಂತಾಗಿಬಿಟ್ಟಿದೆಯಲ್ಲವೇ...

ಬಾಲು said...

ಪ್ರಜಾಪ್ರಭುತ್ವ ಅವಸಾನ ಆಗುತ್ತಾ ಇದೆಯಾ? ನನ್ನ ಮಟ್ಟಿಗೆ ಇಲ್ಲ. ನಮ್ಮನ್ನ ಆಳುತ್ತಾ ಇರೋರು ಕಳ್ಳರು, ದುಡ್ಡಿಗೆ ವೋಟು ಹಾಕೋ ನಾವು ದೊಡ್ಡ ಖದೀಮರು. ದಾಸರೇ ಹೇಳಿಲ್ಲವೇ, ಒಳ್ಳೆಯವರಿಗೆ ಇದು ಕಾಲವಲ್ಲ ಅಂತ, ಎಲ್ಲಿಯವರೆಗೆ ನಾವು ತಿರುಗಿ ಬೀಳೋಲ್ವೋ ಅಲ್ಲಿಯವರೆಗೆ ವ್ಯವಸ್ತೆ ಸರಿ ಹೋಗೋಲ್ಲ.

Snow White said...

nimma lekhana tumba chennagide sir:)

ಜಲನಯನ said...

ಲೋಕಾಯುಕ್ತರನ್ನ ಬರೀ ಆಯುಕ್ತರಿಂದ ಕಡೆ ಮಾಡಿದ ಶ್ರೇಯಸ್ಸು ಒಟ್ಟಾರೆ ರಾಜಕೀಯ ವ್ಯವಸ್ಥೆಗೆ ದಕ್ಕಬೇಕು...ಇನ್ನು ನಮ್ಮ ಸರ್ಕಾರವೋ ಕೇಳಲೇಬೇಡಿ...ಸಾಧನೆ..!!?? ಎಲ್ಲಿ ಮಾಡಿದೆಯೋ ಗೊತ್ತಿಲ್ಲ..!!! ಸಮಾರೋಹಗಳಿಗೆ ಖರ್ಚುಮಾಡಿದ ಸಾಧನೆ ಅಂತೂ ಮಾಡಿದೆ...ಪರಮಾಧಿಕಾರ ಕೊಡ್ತೀವಿ ಎಂದವರು ಅಧಿಕಾರವೇ ಬೇಡ ಎನ್ನೋ ಮನಸ್ಥಿತಿಗೆ ತಳ್ಳಿದ್ದೂ ಒಂದು ಸಾಧನೆಯೇ ಬಿಡಿ....

ವನಿತಾ / Vanitha said...

Good Article Seetaram Sir:))
Nothing to say about Karnataka Govt/ Politics!!:(

ashokkodlady said...

ಸೀತಾರಾಮ್ ಸರ್,

ಸಮಯೋಚಿತ ಲೇಖನ...ರಾಜ್ಯದ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಯೋಚಿಸಿದರೆ ತುಂಬಾ ಬೇಸರವಾಗುತ್ತದೆ. ರಾಜ್ಯದ ಹೆಸರು ಹಾಳಗುತ್ತಿರುವುದಕ್ಕೆ ದುಖವಾಗುತ್ತಿದೆ...ತುಂಬಾ ಉತ್ತಮ ಲೇಖನ...