Tuesday, October 4, 2011

ಕಥೆ........ ಕಥೆಯ೦ತಿಲ್ಲ! ಕಥೆಯೊಂದು ಜೀವನ


ಆತ ...

ಮುಖ ತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...


ನನಗೂ.. ಅಸಾಧ್ಯ ಕೋಪ ಬಂತು..


ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...
(ಇಲ್ಲಿಗೆ ಮುಗಿದ ಇಟ್ಟಿಗೆ ಸಿಮೆಂಟಿನ ಪ್ರಕಾಶರ ಕಥೆ "ನೀತಿ" ಯ ಮುಂದುವರೆದ ಭಾಗ ಕೊಂಡಿ: http://ittigecement.blogspot.com/2011/09/blog-post.html


ಆತ...

ಅಬ್ಬಾ ಎಷ್ಟೊಂದು ಅನುಮಾನ ಇವಳಿಗೆ

ಇಂದು ಮೊದಲ ರಾತ್ರಿಯೇ ಹೀಗೆ
ಆದರೆ ಇನ್ನು ಜೀವನ ಪರ್ಯಂತರ ಹೇಗೆ?
"ಆದರೆ ಹೇಗೆ ನಂಬಲಿ" ಎಂದರೆ... ನಾನೇನು ಹೇಳಬೇಕಿತ್ತು...??
ನಾನು ಮಾಡಿದ್ದೆ ಸರೀ!
ಒಮ್ಮೆಲೆ ಮೊದಲ ರಾತ್ರಿ ನಾನು ಅದು ಇದು ನೇರ ಅಂಥಾ ಎಲ್ಲವನ್ನೂ ಒಮ್ಮೆ ಹೇಳಿದ್ದೆ ತಪ್ಪಾಯಿತು .....ಸ್ವಲ್ಪ ಸಮಯದ ನಂತರ ಹೇಳಬಹುದಿತ್ತು... ಹೇಳದೆ ಮುಚ್ಚಿಟ್ಟಿದ್ದಾರೆ ಏನಾಗುತ್ತಿತ್ತು...??? ಸುಮ್ಮನೆ ನೆರವೆಂದು ಎಲ್ಲವನ್ನೂ ಬಿಚ್ಚಿಟ್ಟು ಅನುಮಾನಕ್ಕೆಡೆ ಮಾಡಿಸಿದೆನಲ್ಲಾ ...ಹೋಗಲಿ ಅಷ್ಟಕ್ಕೂ ಅನುಮಾನಪಟ್ಟಿದ್ದು ಅವಳು... ಅದಕ್ಕೆ ಸಿಟ್ಟು ಬಂದು ನಾನು ತಿರುಗಿದೆ... ಅಬ್ಬಾ.. ಅದಕ್ಕೆ ತಾನೂ ತಿರುಗಿ ಮಲಗಬೇಕೆ...? ಹೋಗಲಿ ಹೆಣ್ಣಿಗೆ ಹಠ ಎನ್ನುತ್ತಾರೆ ನಾನೆ ಒಮ್ಮೆ ಮಾತಾಡಿಸಲೇ... ಮಾತಾಡಿಸಿ ಸೋತು ...ಮೊದಲ ರಾತ್ರಿ ಗೆಲ್ಲಲೇ ????.....ಮೆಲ್ಲ ಅರೆ ನಿದ್ದೆಯಲ್ಲಿದ್ದ೦ತೆ ... ಕೈ ಅವಳ ಮೈ ಮೇಲೆ ಹಾಕಲೇ...ಗಂಡಿಗೆ ಹೇಗಿದ್ದರೂ ಚಟ ವಲ್ಲವೇ? ಹಾಕಿ ಬಿಡುತ್ತೇನೆ.... ಇನ್ನು ಸಿಟ್ಟಿದ್ದರೆ ಕೈ ಬಿಸಾಕುತ್ತಾಳೆ ... ಇಲ್ಲಿದಿದ್ದರೆ ನಾನೆಂದು ಕೊಂಡ೦ತೆ ಮೊದಲ ರಾತ್ರಿ ಮಿಲನ ಮಹೋತ್ಸವ...ಆಕೆ .....
"ನಾನೇಗೆ ನಂಬುವದು" ಎಂಬ ನನ್ನ ಪ್ರಶ್ನೆ ಅವರ ಅಸ್ತಿತ್ವವನ್ನೇ ಕೆಣಕುವ೦ತಿತ್ತಲ್ಲವೆ ??
ನಾನು ಅದನ್ನು ಕೇಳಬಾರದಿತ್ತು ...
ಪರಸ್ಪರರನ್ನು ನಂಬದೆ ಸಂಭಂಧ ಗಟ್ಟಿ ಮಾಡುವದು ಹೇಗೆ?...
ಅದು ಪ್ರಾರಂಭದಲ್ಲೇ...
ಅವರು ಆದನ್ನು ಹೇಳದೆ ಮುಚ್ಚಿಡಬಹುದಿತ್ತು...
ಹೇಳಿದ ಮೇಲೆ ಅದ್ದನ್ನು ನಾನು ನಂಬದೆ ಅನುಮಾನಿಸುವದು ತಪ್ಪು ನಾನು
ಅವರು ಹೇಳಿದ್ದರಲ್ಲಿ ಅರ್ಧವನ್ನೇ ನಂಬಿದೆ ಇನ್ನರ್ಧ ಅನುಮಾನಿಸಿದೆ...
ಅದನ್ನು ಅನುಮಾನಿಸಬಹುದಿತ್ತು...
ಇಲ್ಲ ಇದನ್ನು... ನ೦ಬಬಹುದಿತ್ತು...
ಹೆಣ್ಣಿಗೆ ಹಠ ಎನ್ನುವದು ಇವರಿಗೆ ಗೊತ್ತಿಲ್ಲವೇ/.... ಒಮ್ಮೆ ಅವರ ಕೈ ನನ್ನ ಮೇಲೆ ಬಿದ್ದರೆ ನಾನೆಲ್ಲಾ ಮರೆತು ಅವರನ್ನ ತಬ್ಬಿ ಬಿಡುತ್ತೇನೆ....

ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನು ಬದಿ ತಿರುಗಿಸಿ ಅವಳೆಡೇಗೆ ಮುಖ ಮಾಡಿ ತಿರುಗುತ್ತಾನೆ...

ಅವನು ತನ್ನ ಕಡೆ ತಿರುಗಿದ್ದು ಅವಳಿಗೆ ಅರಿವಾಗುತ್ತೆ...ನಿದ್ದೆಯಲ್ಲಿದ್ದಾನೋ...? ಅಥವಾ ಬೇಕಂತಲೇ ತಿರುಗಿರುವನೋ? ತಿರುಗಿ ನೋಡಲು ಕಾತರ... ಆದರೆ ನೇರ ನೋಡಲಾಗುವದಿಲ್ಲ... ಆದ್ದರಿಂದಲೇ ನಿದ್ರೆಯಲಿಂದಲೇ ಮೇಲ್ಮುಖಕ್ಕೆ ತಿರುಗಿ ನಿಮಿಲಿತ ನೇತ್ರದಲ್ಲಿ ಅವನನ್ನು ನೋಡುತ್ತಾಳೆ... ನಿದ್ರೆಯಲ್ಲಿದ್ದಂತೆ ನಟಿಸುತ್ತಿರುವದು ಗೊತ್ತಾಗುತ್ತೆ ....ಇರಲಿ ನೋಡೋಣ....ಗಂಡಿಗೆ ಚಟವಂತೆ... ಸರಿಯೇ ನೋಡೋಣ...
ಅವಳು ಮೇಲ್ಮುಖ ಮಾಡಿ ತಿರುಗಿದ್ದು ಇವನು ನಿಮಿಲಿತನಾಗೆ ಗಮನಿಸುತ್ತಾನೆ... ಅಬ್ಬ ಹೆಣ್ಣೇ ಇನ್ನು ಹಟವೇ? ಇರಲಿ ಮೆಲ್ಲ ಕೈ ಮೇಲೆ ಹಾಕುತ್ತೇನೆ ನೋಡೋಣ...ಕೈ ನಿದ್ರೆಯಲ್ಲಿ ಬಂದಂತೆ ಅವಳ ಮೇಲೆ ಬಳಸಿಯೂ ಬಳಸದಂತೆ ಇರಿಸಿದ...

ಕೈ ಬೀಳುತ್ತಲೇ ಇವಳು ಅವನೆಡೆಗೆ ನಿದ್ರೆಯಲ್ಲಿದ್ದಂತೆ ನಟಿಸುತ್ತಾ ಅವನೆಡೆಗೆ ಸರಿಯುತ್ತಾಳೆ... ಈಗ

ಈಗ ನಟನೆಯಲ್ಲಿ ಮುಚ್ಚಿದ ಇಬ್ಬರ ಕಣ್ಣುಗಳಲ್ಲಿ ಅಪಾರ ಆಶೆ ತುಂಬಿದೆ... ಪರಸ್ಪರರ ಮುಖಕ್ಕೆ ಪರಸ್ಪರರ ಬಿಸಿಯುಸಿರು ಬೀಸುತ್ತಿದೆ...ತಂಗಾಳಿಯಂತೆ..ಮಂದಾನಿಲದಂತೆ .... ಮಾರುತವಾಗಿ... ಅದರೊಡನೆ ಮನದ ಸುಪ್ತ ಬಯಕೆಗಳು ಹೊತ್ತಿ ಕಂಬಾರನ ತಿದಿಗೇ ಬೆದೆಯೋಡಿವ ಬೆಂಕಿಯಂತೆ ಹರಡಿ ಸುತ್ತೆಲ್ಲಾ ಮುತ್ತಿ, ಜಗಳ ಕದನಗಳ ಕಾರಣಗಳು ಗೌಣವಾಗಿ ಅದರಲ್ಲಿ ಸುಟ್ಟು ಕರಗಿತು ... ಕೇವಲ ಬಯಕೆ ಪ್ರೀತಿಯ ಬೆಂಕಿ ಹೊತ್ತೊಡೆದು ...ಪರಸ್ಪರರನ್ನು ಅಪ್ಪಿಸಿ ಮುತ್ತಾಡಿಸಿ ಮಿಲನಕ್ಕೆ ಮುಂದುವರೆಸುತ್ತದೆ... ಮುಚ್ಚಿದ ಕಂಗಳು ತೆರೆಯದೆ ಎಲ್ಲವನ್ನೂ ನೋಡಿ ಸವಿಯಿತು... ತೆಗೆದಾಗ ಕಾಣದ್ದು ಮುಚ್ಚಿದಾಗಲೇ ಕಂಡಿತು...ಕತ್ತಲು ಆಪ್ತವಾಯಿತು... ಬಯಕೆ ಮುಗಿಲ ಮುತ್ತಿಟ್ಟು ಮುತ್ತಿಕ್ಕಿ ... ಮೊದಲಿನ ಮಾತಿನ ಕದನ ಕಾಣದಾಗಿ ಈಗ ಇಲ್ಲಿ ಮಾತಿಲ್ಲದ ಪ್ರೇಮದ ಕದನ ಆರಂಭವಾಯಿತು ...ಒಬ್ಬರಲ್ಲಿ ಒಬ್ಬರು ಕಳೆದು ಹೋದರು....!

ಮಿಲನದ ಕದನದಲ್ಲಿ ಸುಸ್ತಾಗಿ ಅಪ್ಪಿ ವಿರಮಿಸಿದ ಪರಸ್ಪರ ಮೈ ಮನಗಳಲ್ಲಿ ಧನ್ಯತೆ ತುಂಬಿ ....
ಆತ "ಪುಟ್ಟಾಣಿ ನಾನು ತಿರುಗಿ ಮಲಗಿದ್ದು ತಪ್ಪು" ಎಂದ

ಅವಳು " ಪೋಲಿ ಕಿಟ್ಟಾಣಿ ಅನುಮಾನಿಸಿದ್ದು ನನ್ನ ತಪ್ಪು"

ಆಮೇಲೆ ಇಬ್ಬರು ಒಟ್ಟಿಗೆ ಅರಿವಿಲ್ಲದೆ ಅಂದಿದ್ದು "ಇರಲಿ ಬಿಡು ಅದೊಂದು ಕಹಿ ಕಾಲ -ಸುಖದಲ್ಲಿ ಅದೆನೇಕೆ ನೆನೆವ"

"ಹೆಣ್ಣಿಗೆ ಹಠ - ಗಂಡಿಗೆ ಚಟ " ಇದು ಸತ್ಯ.... ಇದರಲ್ಲಿ ಸಹಸ್ರಾರು ವಿಚ್ಚೆದನಕ್ಕೆ ಕಾರಣವಾಗಬಹುದಾದ ಘಟನೆಗಳು ಸತ್ತು ಮತ್ತು ಸುಟ್ಟು ಹೋಗಿವೆ....

ಅದಕ್ಕೆ ಹೇಳಿದ್ದು " ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ "

15 comments:

ಜಲನಯನ said...

ವಾರೆವಾ...ಬಾಲು ಸರ್ ಈಗ ಹೇಳಿ...ರಸಿಕತೆಯಲ್ಲಿ ನನ್ನ ಮೀರಿಸೋರೂ ಇದ್ದಾರೆ ಅನ್ನೋದನ್ನ ನೀವೇ ಹೇಳಬೇಕು...ಹಹಹಹ ಬಹಳ ಸುಂದರ ರಸ ಸನ್ನಿವೇಶದ ವರ್ಣನೆ ಸೀತಾರಾಂ ...ನಿಮ್ಮನ್ನ ಮೀರಿಸುವುದು ಕಷ್ಟವೇ...ಹಹಹಹ ಸುಂದರ ಮತ್ತು ಮಧುರ ಅಂತ್ಯ...ಕಥೆಗೆ ತಕ್ಕ ಅಂತ್ಯ,,,ಜೈ ಹೋ...

ಮನಸು said...

haha sir kate kateyalla... jeevana nija nimma matu.. kate chennagide sir..

ಸಿಮೆಂಟು ಮರಳಿನ ಮಧ್ಯೆ said...

ಡೆಲ್ಲಿ ಸೀತಣ್ಣಾ..

ಕಥೆ ಸೂಪರ್ರೂ.... !!

ಗಂಡು ಹೆಣ್ಣಿನ ಮನದ ತಾಕಲಾಟವನ್ನು ಸರಿಯಾಗಿ ನಿರೂಪ್ಸಿದ್ದೀರಿ..

ವಾರೇವಾಹ್ !! ಭಲೆ ಭಲೇ !!

ಏನೂ ಹೇಳಲಿಕ್ಕೆ ಉಳಿದಿಲ್ಲ..

ಐ ಲೈಕ್ ಇಟ್ , ಐ ಲೈಕ್ ಇಟ್... !!

ಜೈ ಜೈ ಜೈ ಹೋ !!

ಮುಂದಿನ ಖೊಖ್ಕೋ... ಯಾರು?

ಚುಕ್ಕಿಚಿತ್ತಾರ said...

ಸರಿ ಹೋಯ್ತು...:))

nimmolagobba said...

ಅಬ್ಬಬ್ಬಾ , ಏನ್ ಸಾರ್ ಸೀತಾರಾಂ ಸರ್ , ಅಜಾದ್ ಮಾತನ್ನ ನಂಬೋ ಹಾಗೆ ಮಾಡಿಬಿಟ್ರೀ!!!! ಆ ಹಾ ಏನು ರಸಿಕತೆ , ಕಥೆಯನ್ನು ಕಥೆಯಲ್ಲದೆ ಜೀವನ ಅನ್ನೋದನ್ನ ನಿರೂಪಿಸಿದಿರಿ !!!!!! ಬಳಸಿರುವ ಸನ್ನಿವೇಶ ಕಥೆಗೆ ಪೂರಕವಾಗಿ ಬಳಸಿದ್ದೀರಿ ಐ ಲೈಕ್ ಇಟ್, ಐ ಲೈಕ್ ಇಟ್ , ಐ ಲೈಕ್ ಇಟ್ !!!! ಅಂತಾ ಪ್ರಕಾಶಣ್ಣನ ಜೊತೆ ನಂದೂ ಒಂದು ಕೂಗು.

shivu.k said...

ಸೀತರಾಂ ಸರ್,

ಒಬ್ಬರಿಗಿಂತ ಒಬ್ಬರು ಸೂಪರ್..ನಿಮ್ಮ ಕತೆಯಲ್ಲಿ ಶೃಂಗಾರ ಕಾವ್ಯ ಅದ್ಬುತವಾಗಿದೆ. ನಿಮ್ಮ ಮಾತು ನಿಜ. ಗಂಡ ಹೆಂಡತಿ ಜಗಳ ಉಂಡು ಮಲಗೋತನಕ.

ನಿಮ್ಮೆಲ್ಲರನ್ನು ನೋಡಿ ನಾನು ಬರೆಯಬೇಕೆನಿಸಿದೆ. ನನ್ನ ಬರಹಕ್ಕೆ ಎಳೆ ಸಿಕ್ಕಿದೆ. ಕೂತು ಬರಯಲಾಗುತ್ತಿಲ್ಲ. ಇವತ್ತು ಬರೆಯಬೇಕಿಂದಿದ್ದೆ. ಅನಿರೀಕ್ಷಿತವಾಗಿ ಇಡೀ ದಿನ ಮನೆಯಲ್ಲಿರಲಿಲ್ಲ. ಒಂದೆರಡು ದಿನದಲ್ಲ ಸಾಧ್ಯವಾಗಬಹುದು. ಬಹುಶಃ ಕತೆಗೆ ಇನ್ನೂ ಪ್ರಸವ ವೇದನೆಯ ವೇಗ ಬಂದಿಲ್ಲವೇನೋ ಅನ್ನಿಸುತ್ತೆ...
ಅಷ್ಟರಲ್ಲಿ ಇನ್ಯಾರಾದರೂ ಒಂದು ಖೋ ಕೊಡುತ್ತಾರ..?

ದಿನಕರ ಮೊಗೇರ said...

sakkat HOt ending...aadru kathe katheyantilla..........


shrangaara kaavya........

sunaath said...

ಸೀತಾರಾಮರೆ,
ಮೊದಲ ರಾತ್ರಿಯನ್ನು ತುಂಬ ರಸವತ್ತಾಗಿ ಚಿತ್ರಿಸಿದ್ದೀರಿ! ಓದುತ್ತ ಹೋದಂತೆ ಖುಶಿಯಾಯಿತು!

ಅನಂತ್ ರಾಜ್ said...

ಧಾರಾವಾಹಿಯಲ್ಲಿ ಶೃ೦ಗಾರ ರಸ..ತು೦ಬಾ ಚೆನ್ನಾಗಿ ಬ೦ದ ನಿರೂಪಣೆ. ಅಭಿನ೦ದನೆಗಳು ಸೀತಾರಾ೦ ಸರ್.

ಅನ೦ತ್

ಕಲರವ said...

sir tumbaa sogasaada lekhana.

ISHWARA BHAT K said...

ಸೀತಾರಾಮಣ್ಣ, ಸೂಪರ್ .. ಎಲ್ಲರ ಸಪ್ಪೋರ್ಟ್ ಇದೆ ಬಿಡಿ :) :) ಥೌಸಂಡ್ ಲೈಕ್ಸ್ :)

Badarinath Palavalli said...

ನಮ್ಮ ಬ್ಲಾಗ್ ಲೋಕದ ಆಧುನಿಕ ರಸ ಋಷಿ ನೀವು. ಒಳ್ಳೇ ವಿಶ್ವಕೋಶದಂತಹ ಬ್ಲಾಗ್ ರೂಪಿಸುವುದು ಸುಲಭದ ಮಾತಲ್ಲ ಸಾರ್.

ಕಥಾ ಖೋ ಖೋವನ್ನು ರಸವತ್ತಾಗಿ ಮತ್ತು ಕಾವ್ಯಮಯವಾಗಿ ಮುಂದುವರೆಸಿದ್ದೀರ, ಸೂಪರ್!...

Sushma said...

chennagide sir...ishta aytu..

Sahana Rao said...

Ahaa.. Bhaavanegala janjaata oddata tuditavanna sundaravaagi sere hiDididdeera!

O manashe said...

Naic sir