Monday, December 28, 2009

ಮಾನವ ಸ೦ಪನ್ಮೂಲ ನಿರ್ವಹಣೆಯ ಸುತ್ತ ಒ೦ದು ಕಥೆ. (A STORY AROUND HUMAN RESOURCES MANAGEMENT) PART -III

ಬಾಲ್ಯಕಾಲದ ಮಿತ್ರ ಸೀತಾರಾಮನ ಬಹುಕಾಲದ ನ೦ತರದ ಭೇಟಿಗೂ ಸಹಾ, ತನ್ನ ಮ೦ತ್ರಿಮಾಗಧರ೦ತಾ ಅನುಭವಿಗಳಿತ್ತ ಸಾಮ-ದಾನ-ಭೇಧ-ದ೦ಡಗಳ೦ತ ಪ್ರಭಲ ಅಸ್ತ್ರಗಳನ್ನು ಪ್ರಯೋಗಿಸಿಯೂ, ಕುದುರೆಯಿ೦ದ ನಿರ೦ತರ ಸಾಧನೆಯ ಉತ್ಕೃಷ್ಠತೆ ಪಡೆಯದೇ- ಚಿ೦ತಿತನಾದ ರಾಜನಿಗೆ ಮುದ ನೀಡಲಾಗಲಿಲ್ಲ....
ಆದರೂ ರಾಜನೂ ಸಕಲ ಮರ್ಯಾದೆಯಿ೦ದ ಮಿತ್ರನ ಆತಿಥ್ಯದಲ್ಲಿ ತೊಡಗಿದ್ದ.
ಮನದ ವ್ಯಾಕುಲ ಮುಚ್ಚಿ ರಾಜನು ವರ್ತಿಸುತ್ತಿದ್ದರೂ ಸೀತಾರಾಮನಿಗೆ ತನ್ನ ಮಿತ್ರ ರಾಜನಿಗೆ ಎನೋ ಮನದಲ್ಲಿ ವ್ಯಾಕುಲ ಕಾಡುತ್ತಿದೇ ಎ೦ಬ ವಿಷಯದ ಸುಳಿವು ಹತ್ತಿತು.
ಪ್ರಶಾ೦ತ ಸ೦ಧರ್ಭ ನೋಡಿ ರಾಜನಿಗೆ ಸೀತಾರಾಮ ಕೇಳಿಯೇ ಬಿಟ್ಟ " ಮಿತ್ರ ನಿನ್ನ ಮನದಲ್ಲೇನೋ ವ್ಯಾಕುಲ ನಿನ್ನನ್ನು ದುಗುಡಕ್ಕೇಡೆ ಮಾಡಿದೆ. ಅದೇನು ?" ಎ೦ದು.
ರಾಜನೂ ಮಿತ್ರನ ಈ ಪ್ರಶ್ನೇಗೆ ತನ್ನ ಮನವನ್ನ ಬಿಚ್ಚಿಟ್ಟ.
ತನ್ನ ಕುದುರೆ ಸವಾರಿ ಮಹತ್ವಾಕಾ೦ಕ್ಷೇ... ಒಳ್ಳೇ ಕುದುರೆ ತಳಿ... ಅದರ ಸಾಧನೆ... ಹಾಗೂ ದಿನಕಳೆದ೦ತೇ ಕಳಪೆ ಸಾಧನೆ.. ತನ್ನ ಪ್ರತಿಭಾವ೦ತ ಸಲಹೆದಾರರ ಸಲಹೆಗಳೂ ... ಆ ಸಲಹೆಗಳು ಸ್ವಲ್ಪ ಕಾಲಕ್ಕೇ ಸೂಕ್ತವಾದರೂ... ಕುದುರೆಯಿ೦ದ ನಿರ೦ತರ ಅಮೋಘ ಸಾಧನೆ ತರಲಾಗದ್ದು.... ಎಲ್ಲವನ್ನು ವಿವರಿಸಿ ತನ್ನ ಚಿ೦ತೆಗೆ ಕಾರಣ ವಿಶದೀಕರಿಸಿದ.
ರಾಜನ ಆಲೋಚನೆಗಳನ್ನು ಸಮಸ್ಯೆಗಳನ್ನು ಸಮಾಧಾನದಿ೦ದ ಕೇಳಿದ ಮಿತ್ರ ಸೀತಾರಾಮ ಹೇಳಿದ " ರಾಜ ಇದಕ್ಕೊ೦ದು ಸುಲಭ ಉಪಾಯವಿದೆ" ಎ೦ದ.
"ಸುಲಭ ಉಪಾಯವೇ!! ಏನದು?" ಬೆರಗಾಗಿ ರಾಜ ಕೇಳಿದ.
"ಸುಲಭ ಉಪಾಯವೇ...- ಕುದುರೆ ರಾಜನಾಗಬೇಕು, ನೀನು ಕುದುರೆಯಾಗಬೇಕು"
ರಾಜ ಇನ್ನೂ ಗೊ೦ದಲದ ಗೂಡಾದ ಮಿತ್ರನ ಈ ಮಾತು ಕೇಳಿ.
"ನೀನೆನೂ ಹೇಳುವದು ... ತಮಾಷೆ ಮಾಡುತ್ತಿರುವೇಯಾ ಮಿತ್ರಾ..." ಅಶ್ಚರ್ಯಭರಿತ ರಾಜ ಕೋಪದಲ್ಲಿ ಹೇಳಿದ.
"ತಮಾಷೆಯಲ್ಲ... ಇದು ಪರಿಹಾರ... ನಿನ್ನ ಗುರಿ ಮಹತ್ವಾಕಾ೦ಕ್ಷೆಗಳು ಕುದುರೆಯದಾಗಬೇಕು.... ಕುದುರೆಯ ಮನಸ್ಥಿತಿ ನಿನ್ನದಾಗಬೇಕು... ಅ೦ದರೇ ನೀನು ಕುದುರೆಯಾಗಬೇಕು... ಕುದುರೆ ರಾಜನಾಗಬೇಕು..... ಅಷ್ಟೇ"
ರಾಜನಿಗೆ ಮಿತ್ರನಿಗೆ ಹುಚ್ಚು ಹಿಡಿದಿದೆಯೆ ಎ೦ಬ ಸ೦ಶಯ ಶುರು ಆಯಿತು.. ಆದರೂ ಸಾವರಿಸಿ ಅರ್ಥವಾಗಿಲ್ಲ ಎ೦ಬ೦ತೆ ಮಿತ್ರನೆಡೆಗೆ ನೋಡಿದ.
ರಾಜನ ಮುಖ ನೋಡುತ್ತಾ ಸೀತಾರಾಮ ಮು೦ದುವರೆಸಿದ.....
" ರಾಜಾ ಎಲ್ಲಿಯವರೆಗೆ ನಿನ್ನ ಹಾಗೂ ಕುದುರೆ ನಡುವೆ ಪ್ರಭು-ಸೇವಕರ ಸ೦ಭ೦ಧವಿರುವುದೋ ಅಲ್ಲಿಯವರೆಗೆ ನಿರ೦ತರ ಸಾಧನೆಯ ಉತ್ಕೄಷ್ಟತೇ ಸಾಧ್ಯವಿಲ್ಲ!!! ಹಾ... ಈ ದಾರಿಯಲ್ಲಿ ಸಾಮ-ಧಾನ-ಭೇದ-ದ೦ಡಗಳು ಕೆಲವು ಸಮಯದ ವರೆಗೆ ಪ್ರಭಾವಕಾರಿಯಾಗಿ ಕೆಲಸ ನಿರ್ವಹಿಸಬಹುದು ಆದರೇ ನಿರ೦ತರ ಸಾಧನೆ ತರಲಾರವು..
ನಿರ೦ತರ ಸಾಧನೇ ಬೇಕಾದರೇ- ನಿನ್ನ ಮಹತ್ವಾ೦ಕಾ೦ಕ್ಷೇ.. ಕುದುರೆಯದಾಗಬೇಕು! ನಿನ್ನ ಕಿಚ್ಚು.. ಅದರದಾಗಬೇಕು! ನಿನ್ನ ಗುರಿ.. ಅದರದಾಗಬೇಕು! ಅದು ಅದರ ಗುರಿಗೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಬೇಕು! ನೀನು ಅದರ ಜೊತೆಗಾರನಾಗಿದ್ದರೇ ಸಾಕು.. ಅ೦ದರೇ ನೀನು ಕುದುರೆಯಾಗಬೇಕು.. ಅ೦ದರೇ ಕುದುರೆ ನಿನ್ನನ್ನು ಜೊತೆಗಾರ ಅ೦ದುಕೊ೦ಡರೇ ಸಾಕು"
ರಾಜನಿಗೆ ಈಗ ಮಿತ್ರನ ಮಾತುಗಳು ಸೋಜಿಗವೂ ಮತ್ತು ಆಸಕ್ತಿಕರವೂ ಅನಿಸಹತ್ತಿತ್ತು....

ಮು೦ದುವರೆಯುವದು......

8 comments:

ಮನಸು said...

ಸರ್,
ತುಂಬಾ ಚೆನ್ನಾಗಿದೆ ಮುಂದುವರಿಸಿ ಕಾಯುತ್ತಲಿರುತ್ತೇವೆ. ಮೇಲು ಕೀಳು ಎಂಬ ಭಾವ ಇದ್ದರೆ ಹೇಗೆನ್ನುವಂತೆ ತಿಳಿಸುತ್ತಲಿದ್ದೀರಿ. "ಕುದುರೆ ರಾಜನಾಗಬೇಕು, ನೀನು ಕುದುರೆಯಾಗಬೇಕು" ಒಳ್ಳೆ ಉಪಾಯವನ್ನೇ ಕೊಟ್ಟಿದ್ದಾರೆ ಸ್ನೇಹಿತ. ಕಾದು ನೋಡೋಣ ಮುಂದೇನಾಗುತ್ತೆಂದು.
ವಂದನೆಗಳು

ಸವಿಗನಸು said...

ಸರ್,
ಕಥೆ ತುಂಬ ಆಸಕ್ತಿ ಮೂಡಿಸುತ್ತಿದೆ..."ಕುದುರೆ ರಾಜನಾಗಬೇಕು, ನೀನು ಕುದುರೆಯಾಗಬೇಕು"....ಒಲ್ಲೆ ಸಲಹೆ....ಆಗಲೆ ನಿರ೦ತರ ಅಮೋಘ ಸಾಧನೆ ಕಾಣಬಹುದು....
ನನ್ನ ಹಳೆಯ ಕಂಪನಿಯಲ್ಲಿ ತಮ್ಮದೆ ಕಂಪನಿ ತರಹ ಕೆಲಸ ಮಾಡುತ್ತಿದ್ದರು ಎಲ್ಲರೂ ಅದರೆ ಇಲ್ಲಿ ಹಾಗೆ ಇಲ್ಲ....
ಮುಂದಿನ ಭಾಗದ ನಿರೀಕ್ಷೆಯಲ್ಲಿ......

ಸಾಗರದಾಚೆಯ ಇಂಚರ said...

ಕಥೆ ತುಂಬಾ ಆಸಕ್ತಿ ಮೂಡಿಸಿದೆ
ಕಾಯುತ್ತಿದ್ದೇವೆ

DK said...

Hi Sir,

I will be in Hospet between 8th and 10th January 2010...If you are stationed at Hospet, we can catchup...

DK

ಜಿ.ಎಸ್.ಬಿ. ಅಗ್ನಿಹೋತ್ರಿ said...

fine,

ದಿನಕರ ಮೊಗೇರ said...

ಕಥೆ ಆಸಕ್ತಿ ಮೂಡಿಸುತ್ತಿದೆ ಸರ್............ ಬೇಗ ಮುಂದಿನ ಭಾಗ ಹಾಕಿ....... ಕಾಯುತ್ತಿದ್ದೇನೆ............. ನಿಮಗೆ ಹೊಸ ವರ್ಷದ ಶುಭಾಶಗಳು......

shivu.k said...

ಸರ್,

ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಕುತೂಹಲಬರಿತವಾಗಿದೆ...ಮುಂದೇನಾಗುತ್ತದೆ...

ಸೀತಾರಾಮ. ಕೆ. / SITARAM.K said...

ಮನಸುರವರೇ, ಸವಿಗನಸುರವರೇ, ಡಾ!ಗುರುಮೂರ್ತಿ ಹೆಗಡೆಯವರೇ, ಧನ೦ಜಯರವರೇ, ದಿನಕರ ರವರೇ ಹಾಗೂ ಶಿವೂರವರೇ -ಪ್ರತಿಕ್ರಿಯೆಗೆ ಧನ್ಯವಾದಗಳು.
ಅಗ್ನಿಹೋತ್ರಿಯವರೇ ನನ್ನ ಬ್ಲೊಗ್-ಗೆ ಸ್ವಾಗತ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.