Friday, June 4, 2010

ಮನ ಮೆಚ್ಚಿದ ಗೀತೆ "ವಾಮನ ಕುಲ್ಕರ್ಣಿ " ರಚಿತ "ತೆರೆಗಳು" ಕವನ ಸ೦ಕಲನದ ಗಜ಼ಲ್. "ಹಚ್ಚದಿರು ದೀಪ"

The Glow of Hope
Painting by S. L. Haldankar. Sri Jayachamarajendra Art Gallery, Mysore
(internet collection)

more info. on :- http://en.wikipedia.org/wiki/Glow_of_Hope

"ಹಚ್ಚದಿರು ದೀಪ"-ವಾಮನ ಕುಲ್ಕರ್ಣಿ

ಇರಲಿ ಬಿಡು ಕತ್ತಲೆ, ಹಚ್ಚದಿರು ದೀಪ
ಬೆಳಕಿನಲ್ಲಿ ಗುರುತಾಗದು ನಮ್ಮ ನಿಜಸ್ವರೂಪ

ನನ್ನ ನಿನ್ನ ಮುಖದ ಹಿ೦ದೆ, ಕಾಣದ೦ತಾ ಘೋರ ಕಡಲು
ಅಪ್ಪಳಿಸುವ ತೆರೆಗಳಿ೦ದ, ಕೊರೆಯುತಿದೆ ಒಡಲು

ಕಾಣದಿರಲಿ ಶ೦ಕೆ ನಖ, ಇರಿಯದಿರಲಿ ಗೊ೦ದಲ
ಆಡದಿರು ನೂರು ಮಾತು, ಸಾಕು ಮೌನ ಹ೦ಬಲ

ಹೊರಗೆ ಕ೦ಡ ಬೆಳಕಿನಲ್ಲಿ, ಬೆಳೆದ ನಮ್ಮಸ೦ಗ
ಚೂರಾದರೂ ಅರಿಯೋಣ ಇ೦ದು ಅ೦ತರ೦ಗ

ಇರುಳು ಬೆರಳು ಹಿಡಿದು ನೊ೦ದ ಕರುಳ ಬೇಗೆ ತಣಿಯಲಿ
ಮೊಸರಿನಲ್ಲಿ ಉಪ್ಪಿನ೦ತೆ ಬೆರೆತು ನೋವು ಕರಗಲಿ

ಎದೆಯ ಗೂಡಿನಲ್ಲಿ ಅಡಗಿ, ಕಾಣದ೦ಥಾ ಜ್ಯೋತಿ
ಅದರ ಬೆಳಕೆ ಸಾಕು ಬಿಡು, ಹಬ್ಬಿ ಬಿಡಲಿ ಪ್ರೀತಿ

ಇರಲಿಬಿಡು ಕತ್ತಲೇ, ಏಕೆ ಅದರ ಹೆದರಿಕೆ?
ಒಲುಮೆ ದೀಪ ಎದೆಯೊಳಿಟ್ಟು ಹುಟ್ಟುಹಾಕು ನೌಕೆ

ಶ್ರೀ.ಚೆನ್ನವೀರ ಕಣಿವಿಯವರಿ೦ದ ಧಾರವಾಡ ಆಕಾಶವಾಣಿ "ಭಾವಸ೦ಗಮ'ಕ್ಕೆ ಆಯ್ಕೆಗೊ೦ಡ ವಾಮನ ಕುಲಕರ್ಣಿಯವರ , ಶ್ರೀ.ಅಚ್ಯುತರಾವ್-ರ ಸ೦ಗೀತ ನಿರ್ದೇಶನದಲ್ಲಿ ಶ್ರೀ.ಶ್ರೀಪಾದ ಹೆಗಡೆಯವರ ಮಧುರ ಕ೦ಠದಲ್ಲಿ ೨೦೦೮ ರಲ್ಲಿ ಬಾನುಲಿ ಪ್ರಸಾರಗೊ೦ಡ ಗೀತೆ.

20 comments:

ಸವಿಗನಸು said...

ಸೊಗಸಾದ ಕವನ....
ಚೆನ್ನಾಗಿದೆ.

ಜಲನಯನ said...

ರಾಜಾ ರವಿವರ್ಮನ ಬಹು ಪ್ರಸಿದ್ಧ ಚಿತ್ರಕ್ಕೆ ಚನ್ನವೀರಕಣವಿಯವರ ಭಾವಮಿಡಿವ ಪದಪ್ರಯೋಗ ಸ್ಂಗೀತಕ್ಕೆ ಇಳಿದರೆ...ವಾಹ್..ಎಂಥ ಕಲ್ಪನೆಯ ಸಾಕಾರ ಆ ಹಾಡು...??!!!!
ಥ್ಯಾನ್ಕ್ಸ್ ಸೀತಾರಾಮ್ ಸರ್...

Subrahmanya said...

ತುಂಬ ಥ್ಯಾಂಕ್ಸ್ ಗುರೂಜಿ. ಮನಮುದಗೊಳಿಸುವ ಕವನ.

Dr.D.T.Krishna Murthy. said...

ಸೊಗಸಾದ ಕವನ !ಒಳ್ಳೆಯ ಭಾವ!ಬಹಳ ದಿನಗಳ ನಂತರ ಒಂದು ಒಳ್ಳೆಯ ಕವನ ಓದಿದ ಅನುಭವ.ಚಿತ್ರ ಬಹಳ ಪ್ರಸಿದ್ಧ
ವಾದ 'Lady with a lamp'ಚಿತ್ರ.ಮೂಲ ಚಿತ್ರ ಮೈಸೂರಿನ ಜಗನ್ಮೋಹನ ಆರ್ಟ್ ಗ್ಯಾಲರಿಯಲ್ಲಿದೆ.
ಒಳ್ಳೆಯ ಕವನ ಹಾಗೂ ಒಳ್ಳೆಯ ಚಿತ್ರ ಹಾಕಿದ್ದಕ್ಕೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯೆಗೆ ಧನ್ಯವಾದಗಳು -ಸವಿಗನಸಿನ ಮಹೇಶರೇ, ಜಲನಯನದ ಅಜ಼ಾದರೇ, ಶ೦ಭುಲಿ೦ಗ ಪುರಾಣ ಪ್ರವಚಕ ಸುಬ್ರಮಣ್ಯರೇ ಮತ್ತು ಕೊಳಲಿನ ಡಾ.ಕೃಷ್ಣಮೂರ್ತಿಯವರೇ.
-@ ಜಲನಯನರೇ ಕವನ ಬರೆದದ್ದು ನನ್ನ ಮಿತ್ರ ವಾಮನ ಕುಲ್ಕರ್ಣಿಯವರು, ಶ್ರೀಯುತ ಕಣವಿಯವರು ಆ ಹಾಡನ್ನು ಬಾನುಲಿ ಪ್ರಸಾರಕ್ಕೆ ಆಯ್ಕೆ ಮಾಡಿದವರು.

Ranjita said...

chandada kavana bhavartha tumba chennagide :)

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ಹನಿ-ಕವನದ ಒಡತಿ ರ೦ಜಿತಾರವರೇ.

Manasa said...

Nice one sir :)

ಓ ಮನಸೇ, ನೀನೇಕೆ ಹೀಗೆ...? said...

ಅಬ್ಬಾ ! ಅದ್ಭುತ ಕವನ ಸರ್. ಈ ಕವನವನ್ನು ನಮ್ಮೊಡನೆ ಹಂಚೀಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.


"ಹೊರಗೆ ಕ೦ಡ ಬೆಳಕಿನಲ್ಲಿ, ಬೆಳೆದ ನಮ್ಮಸ೦ಗ
ಚೂರಾದರೂ ಅರಿಯೋಣ ಇ೦ದು ಅ೦ತರ೦ಗ"

ಈ ಸಾಲುಗಳಂತೂ ಅದ್ಭುತ..

ಮನಸು said...

ಧನ್ಯವಾದಗಳು ಸರ್, ಒಳ್ಳೆಯ ಕವನ ರೂಪವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ.....ಅದ್ಭುತ ಸಾಲುಗಳು

Vinayak Kuruveri said...

ಇಷ್ಟು ಸರಳವಾಗಿಯೂ, ಒಪ್ಪವಾಗಿಯೂ ಕವನ ಬರೆಯಲು ಆಗುತ್ತಾ ಅಂತ ಚಕಿತನಾದೆ. ಬಹಳ ಬಹಳ ಸೊಗಸಾದ ಸಾಲುಗಳು.ವಾಮನ ಕುಲಕರ್ಣಿಯವರಿಗೆ ಕೃತಜ್ಞತೆಗಳು.

ಹಾಗೆಯೇ, ಇದನ್ನು ಒದಗಿಸಿಕೊಟ್ಟ ನಿಮಗೂ ಸಹ. :-)

ಚುಕ್ಕಿಚಿತ್ತಾರ said...

ಸು೦ದರ ಕವಿತೆಯನ್ನು ಪರಿಚಯಿಸಿದ್ದಕ್ಕೆ ವ೦ದನೆಗಳು.

ಇನ್ನೊ೦ದು ವಿಷಯವೆ೦ದರೆ ನನಗೆ ತಿಳಿದಿರುವ೦ತೆ ಈ ’lady with a lam’ ಅನ್ನುವ ಚಿತ್ರ ರಾಜಾ ರವಿವರ್ಮ ರಚಿಸಿದ ಚಿತ್ರವಲ್ಲ.ಎಸ್. ಎಲ್. ಹಲ್ದ೦ಕರ್ [sawlaram lakshman haldankar ]ಅನ್ನುವವರ ರಚನೆ.ಮೈಸೂರಿನ ಜಗನ್ಮೋಹನ ಪ್ಯಾಲೇಸ್ ನ ಅರ್ಟ್ ಗ್ಯಾಲರಿಯಲ್ಲಿ ಹಾಗೆಯೆ ತಿಳಿಸಿದ್ದಾರೆ. ನೆಟ್ ನಲ್ಲಿ ರವಿವರ್ಮಾ ರವರ ಚಿತ್ರ ಎ೦ದೆ ಬಿ೦ಬಿತವಾಗಿದೆ. ಆದರೆ ರವಿವರ್ಮಾ ಆಯಿಲ್ ಪೈನ್ಟಿ೦ಗ್ ವಿಭಾಗದಲ್ಲಿ ಇಲ್ಲ. ಮೂಲ ಕಲಾವಿದರ ಬಗ್ಗೆ indianart info.w0rdpress.com ನಲ್ಲಿ ವಿವರ ತಿಳಿಯಬಹುದು.
ಹೆಚ್ಚಿಗೆ ನಿಮಗೆ ಗೊತ್ತಾದಲ್ಲಿ ತಿಳಿಸಿ.

ನಮಸ್ಕಾರಗಳು.

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ತಮಗೆಲ್ಲಾ ವ೦ದನೆಗಳು -ನೆನಪುಗಳ ಮಾತು ಮಧುರದ ಮಾನಸರವರೇ, ಓ ಮನಸೇ ನೀನೆಕೆ ಹೀಗಿನ ಚೇತನಾ ಭಟ್ಟ್-ರವರೇ, ಮೃದುಮನಸಿನ ಸುಗುಣಾರವರೇ, ನವಿಲಿನ ಗರಿಯ ವಿನಾಯಕ ಕುರುವೇರಿಯವರೇ ಮತ್ತು ಚುಕ್ಕಿ ಚಿತ್ತಾರದ ವಿಜಯಶ್ರೀಯವರ್‍ಏ.
-@ಚಿತ್ರದ ಬಗ್ಗೆ ಸೂಕ್ತ ಮಾಹಿತಿ ನೀಡಿ ನಮ್ಮ ತಪ್ಪು ಪರಿಕಲ್ಪನೆ ಪರಿಹರಿಸಿದ್ದಕ್ಕೆ ಧನ್ಯವಾದಗಳು ಚುಕ್ಕಿಚಿತ್ತಾರರವರೇ.
-@ವಿನಾಯಕ ಕುರುವೇರಿಯವರಿಗೆ ಬ್ಲೊಗ್-ಗೆ ಸ್ವಾಗತ. ಹೀಗೆ ಬರುತ್ತಿರಿ ಮತ್ತು ಹಳೇಯ ಲೇಖನಗಳನ್ನೂ ಓದಿ ಪ್ರತಿಕ್ರಿಯಿಸಿ.

ಸೀತಾರಾಮ. ಕೆ. / SITARAM.K said...

Glow of Hope
From Wikipedia, the free encyclopedia

Glow of Hope, alternately titled "Woman With the Lamp", is a painting by S.L. Haldankar. The work was painted 1945–46 and is currently stored in the Sri Jayachamarajendra Art Gallery at the Jaganmohan Palace in Mysore, India.[1] The painting is currently on display on the second floor of the museum, in an enclave with a curtained window. The enclave is normally darkened, which highlights the subtlety of the glowing candle in the piece. When the light is turned on, the painting reveals remarkably subtle shades of pink and lavender in the woman's sari. Opening the enclave's curtain leads to yet another distinct view of the painting, the natural light exposing even more subtle gradations and details in this magnificent work.

The painting shows an Indian woman holding a lighted lamp in one hand, the other hand covering the light of the lamp from the front. The woman is in a simple and traditional Indian saree. The effect of the painting is heightened by the shadow of the woman in the back.

The painting is housed in a special room at the Sri Jayachamarajendra Art Gallery. It is displayed in an enclave with a curtained window. The enclave is normally darkened, which highlights the subtlety of the lowing candle in the painting. One can see in the dark the hand which is covering the candle — which is the only thing that is giving out light — is glowing very bright red, seems that it is authentic ;her hand really seems to be glowing due to the candle' light. The women who is holding the covered candle is Gita Haldankar (now Gita Krishnakant Uplekar), the third daughter of the artist. She currently lives in Kolhapur. She in 2009 is 90 years of age. She had four daughters and one son (Meena Shertukade, Lali Akojwar, Jyoti Shah, (Sandhya) Sonali Punatar, and Rajprakash Uplekar). The young woman had to stay in the perpetual position for three hours continuously. Furthermore, he made this portrait with watercolours. He used this as his medium because he wanted to show the world that he can make a painting without a single mistake, unlike the oil paint which can be corrected using white paint. The painting is mimetic in approach, with no deliberate distortions.

shivu.k said...

ಸೀತಾರಾಂ ಸರ್,
ಆ ಚಿತ್ರವನ್ನು ನಾನು ನೋಡಿದ್ದೇನೆ. ಅದೊಂದು ಅದ್ಬುತವೇ ಸರಿ,
ಭಾವಫೂರ್ಣವಾದ ಕವನಕ್ಕಾಗಿ ಥ್ಯಾಂಕ್ಸ್.

ಮನದಾಳದಿಂದ............ said...

ಸೀತಾರಾಂ ಸರ್,
ಪ್ರಸಿದ್ಧ ಚಿತ್ರ ಹಾಗೂ ಸುಂದರ ಕವನದ ಜೋಡಿ supper......!

ಸುಮ said...

ಕವನ ತುಂಬ ಚೆನ್ನಾಗಿದೆ .

sunaath said...

ವಾಮನ ಕುಲಕರ್ಣಿಯವರ ಈ ಕವನವು ಒಂದು ಪರಿಪೂರ್ಣ ಭಾವಗೀತೆ. ಜೊತೆಗೇ ನೀವು ನೀಡಿದ ‘ದೀಪಧಾರಿಣಿ’ ಸಮರ್ಪಕವಾಗಿದೆ. ಧನ್ಯವಾದಗಳು.

Pradeep Rao said...

This Painting is wonderful & is one of the most interesting things in Mysore Palace.

Ashok.V.Shetty, Kodlady said...

Sitaraam sir....

ondu sundara kavanavnnu parichayisiddakke dhanyavaadagalu....