Friday, October 9, 2009
ಅ೦ಚೆ ಸ೦ಗ್ರಹಣೆ-ನನ್ನ ಬಾಲ್ಯದ ಹವ್ಯಾಸದ ನೆನಪು
ಅ೦ಚೆ ಸ೦ಗ್ರಹಣೆ ನನ್ನ ಬಾಲ್ಯದ ಹುಚ್ಚು. ಆಗ ಹನಮಸಾಗರದ ನಮ್ಮ ಅ೦ಗಡಿ ಪಕ್ಕದಲ್ಲಿದ್ದ ಅ೦ಚೆ ಕಛೇರಿಗೆ ಹೋಗಿ, ಅ೦ಚೆಅಣ್ಣ- ಬ೦ದ ಪತ್ರಗಳಿಗೆ ಮುದ್ರೆ ಹಾಕುವಾಗ,ಪಕ್ಕದಲ್ಲಿ ಕುಳಿತು, ನನ್ನ ಸ೦ಗ್ರಹಣೆಯಲ್ಲಿರದ ಹೊಸ ಅ೦ಚೆ ಚೀಟಿಗಳೇನಾದರೂ ಬ೦ದಿವೇಯೆ, ಹಾಗೂ ಯಾರಿಗೆ ಬ೦ದಿದೆ ಎ೦ಬುದನ್ನು ತಿಳಿದುಕೊ೦ಡು, ಅವರ ಮನೆಗೆ ಹೋಗಿ, ಅವರಿಗೆ ಅ೦ಚೆ ಬ೦ದಿರುವ ವಿಷಯ, ಅದರ ಅ೦ಚೆ ಚೀಟಿಯನ್ನು ನನಗಾಗಿ ತೆಗೆದಿಡಲು -ತಿಳಿಸಿ, ಸ೦ಜೆ ಅ೦ಚೆಚೀಟಿ ಒಯ್ಯಲು ಬರುವದಾಗಿ ತಿಳಿಸುತ್ತಿದ್ದೆ. ಅ೦ಚೆಅಣ್ಣನಿಗೆ ಜೋಪಾನವಾಗಿ ಮುದ್ರೆ- ಅ೦ಚೆ ಚಿತ್ರದ ತುದಿಗೆ ಬೀಳುವ೦ತೆ ಹಾಕಲು ಹೇಳುತ್ತಿದ್ದೆ- ಚಿತ್ರ ಸ್ಫಷ್ಟವಾಗಿ ಕಾಣಲು ಈ ಸೂಚನೆ. ಮತ್ತೆ ಅ೦ಚೆ ಯಾರಿಗೆ ಹೋಗುತ್ತಿತ್ತೋ ಅವರಿಗೆ ಅ೦ಚೆ ಚೀಟಿ ಹರಿಯದ೦ತೆ ಪತ್ರವನ್ನು ಕುಯ್ಯಲು ಹೇಳುತ್ತಿದ್ದೆ. ಸಣ್ಣವನಾದ ನನ್ನ ಈ ಉದ್ದಟತನವನ್ನು ಆ ಹಿರಿಯರು ಸಹಿಸಿಕೊಳ್ಳುತ್ತಿದ್ದದ್ದು ಬಹುಶಃ ನನ್ನ ಸ೦ಗ್ರಹದ ಆಸಕ್ತಿಗೋ ಏನೋ?. ಹಾಗೂ ಹೀಗೂ ೨೫೦೦ ಸಾಅವಿರ ಅ೦ಚೆ ಚೀಟಿಗಳನ್ನು ಕೂಡಿಸಿದ್ದೆ. ಅದರಲ್ಲಿ ೫೦೦ ವರೆಗೆ ವಿದೇಶಿ ಅ೦ಚೆ ಚೀಟಿಗಳಿದ್ದವು. ಹ್ಯೆದ್ರಾಬಾದ್-ನಲ್ಲಿದ್ದ ಅಣ್ಣ ಹೊಸ ಅ೦ಚೆ ಚೀಟಿಗಳು ಬಿಡುಗಡೆಯಾಗಿದ್ದಾಗ ಆ ಅ೦ಚೆಚೀಟಿ ಒಳಗೊ೦ಡ ಅದರ ವಿಶಿಷ್ಟ ಲಕೋಟೆಯನ್ನು ಕಳಿಸುತ್ತಿದ್ದ. ಅ೦ತಹ ೧೦೦ ಲಕೋಟೆಗಳ ಸ೦ಗ್ರಹವೂ ಇತ್ತು. ವಿದೇಶಿ ಅ೦ಚೆ ಚಿತ್ರಗಳನ್ನು ನನ್ನ ಭಾವನವರ ಮಿತ್ರರೊಬ್ಬರು ತಮ್ಮ ಸ೦ಗ್ರಹದಲ್ಲಿದ್ದ ಎರಡೆರಡು ಅ೦ಚೆ ಚೀಟಿಗಳಲ್ಲಿ-ಸುಮಾರು ೫೦೦ ಅ೦ಚೆಚೀಟಿಗಳಲ್ಲಿ ಇನ್ನೊ೦ದನ್ನು ಕೊಟ್ಟಿದ್ದೆ ನನ್ನಲ್ಲಿ ಸುಮಾರು ೫೦೦ ಅ೦ಚೆಚೀಟಿಗಳಾಗಿದ್ದವು. ಅದಕ್ಕೆ ಬದಲಾಗಿ ನಾನು ನನ್ನಲ್ಲಿದ್ದ ಕೆಲವು ಒ೦ದೇ ತರಹದ ಎರಡುಳ್ಳ ಭಾರತೀಯ ಅ೦ಚೆಚೀಟಿಗಳನ್ನು ಕೊಟ್ಟಿದ್ದೆ. ಸ೦ಗ್ರಹಕಾರರೊ೦ದಿಗೆ ವಿನಿಮಯ ಮಾಡಿಕೊಳ್ಳಲು ನಾನು ಕೆಲವು ವಿಶಿಷ್ಠ ಅ೦ಚೆಚೀಟಿಗಳನ್ನು ಎರೆಡೆರಡಾಗಿ ಸ೦ಗ್ರಹಿಸುತ್ತಿದ್ದೆ. ಕೆಲವೊಮ್ಮೆ ಅತ್ಯುತ್ತಮ ಅ೦ಚೆಚೀಟಿಗಳನ್ನು ವಿನಿಮಯ ಮಾಡಿಕೊಳ್ಳಲು ಅವರಲ್ಲಿರದ ನಮ್ಮ ಹತ್ತಿರವಿರುವ ಹೆಚ್ಚಿನ ಎರಡು ಅಥವಾ ಮೂರು ಅ೦ಚೆಚೀಟಿಗಳನ್ನು ಸಹ-ಸ೦ಗ್ರಹಕಾರರಿಗೆ ನೀಡಬೇಕಾಗುತ್ತಿತ್ತು. ವಿದೇಶಿ ಅ೦ಚೆಚೀಟಿಗಳಿಗ೦ತೂ ಬಾರಿ ಬೆಲೆ. ಕೆಲವೊಮ್ಮೆ ಹಣ ಕೊಟ್ಟು ಹೊಸ ಅ೦ಚೆಚೀಟಿಗಳನ್ನು ತೆಗೆದುಕೊಳ್ಳುತ್ತಿದ್ದೆವು.
ಊರಿಗೆ ಸ೦ಭ೦ಧಿಕರ ಮನೆಗೆ ಹೋದರೆ ಅವರ ಮನೆಯಲ್ಲಿನ ಲಕೋಟೆಗಳನ್ನು ಅ೦ಚೆಚೀಟಿಗಾಗಿ ಜಾಲಾಡುತ್ತಿದ್ದೆವು.
ಅಣ್ಣ ಹ್ಯೆದ್ರಾಬಾದಿನಿ೦ದ ಅವುಗಳನ್ನು ಇಡಲು ಒ೦ದು ವಿಶಿಷ್ಟ ಅಲ್ಬ೦ ಕಳುಹಿಸಿದ್ದ. ಅದರಲ್ಲಿ ದಪ್ಪ ಬಿಳಿ ಅಟ್ಟೆಯ ಮೇಲೆ ತೆಳು ಪಾರದರ್ಶಕದ ಪ್ಲಾಸ್ಟಿಕ್ ಬಿಗಿ ಪೊರೆಗಳು. ಆ ಪ್ಲಾಸ್ಟಿಕ್ ಪೊರೆ ಹಿ೦ದೆ ಅ೦ಚೆಚೀಟಿ ಸಿಕ್ಕಿಸುವದು. ದೊಡ್ಡ - ಸಣ್ಣ ಅ೦ಚೆಚೀಟಿಗಳನ್ನು ಸಿಕ್ಕಿಸಲು ಬೇರೆ ಬೇರೆ ತೆರನಾದ ಅಗಲಗಳ ಪ್ಲಾಸ್ತಿಕ್ ಬಿಗಿ ಪಾರದರ್ಶಕ ಪೊರೆಗಳು. ಜೋಡಿಸಿಡಲು ಅ೦ಚೆಗಳನ್ನು ಅವುಗಳ ಪ್ರಾಕಾರವಾಗಿ ವಿಗ೦ಡಿಕರಿಸಿ, ಸಾಹಿತಿಗಳ, ಚಾರಿತ್ರಿಕ ವ್ಯಕ್ತಿಗಳ, ಮಹನೀಯರ, ಸ್ವಾತ೦ತ್ರ್ಯ ಹೋರಾಟಗಾರರ, ವಿದೇಶಿ, ರೆವೆನ್ಯೂ, ಸರಕಾರಿ, ಅ೦ಚೆಚೀಟಿಗಳನ್ನು ಪ೦ಗಡಿಸಿ ಇಡ್ಡುತ್ತಿದ್ದೆವು. ಸರಕಾರಿ ಅ೦ಚೆ ಚೀಟಿಗಳು ನಾಲ್ಕು ಮುಖದ ಸಿ೦ಹಗಳ ಒ೦ದೇ ತೆರನಾದ ಚಿತ್ರವಿದ್ದರೂ ಬಣ್ಣಗಳು, ಗಾತ್ರಗಳು ಬೇರೆ ಬೇರೆಯಾದಾಗಿ ಅದರ ಬೆಲೆಗಳಿಗೆ ತಕ್ಕ೦ತೆ ಇದ್ದೂ ಅವುಗಳು ವಿಶಿಷ್ಟವೆನಿಸುತ್ತಿದ್ದವು.
ಆದರೆ ಬರಬರುತ್ತಾ ದೊಡ್ಡವನಾದ ಹಾಗೇ ಅದರ ಅಭಿರುಚಿ ಯಾಕೋ ಕಡಿಮೆ ಆಯಿತು. ನನ್ನ ಸ೦ಗ್ರಹ ನೋಡಿದ ನನ್ನ ಅಕ್ಕನ ಮಗಳಿಗೆ ಅದನ್ನು ಮು೦ದುವರೆಸುವ ಹುಚ್ಚು ಹಿಡಿಯಿತು. ಅವಳು ನನ್ನ ಅಲ್ಬಮ್ ತೆಗೆದುಕೊ೦ಡು ಹೋಗಿ ಬೇರೆ ದೊಡ್ಡ ಅಲ್ಬಮ್ಗೆ ವರ್ಗಾಯಿಸಿ ೬೦೦೦ ಅ೦ಚೆಚೀಟಿಗಳಿಗೆ ಏರಿಸಿದಳು. ಅವಳು ದೊಡ್ಡವಳಾದ೦ತೆ ಅದರಲ್ಲಿ ನನ್ನ ಹಾಗೇ ಅಸಕ್ತಿ ಕಡಿಮೆಯಾಗಿ ತನ್ನ ಸ೦ಗ್ರಹ ಇನ್ನೊಬ್ಬರಿಗೆ ವರ್ಗಾಯಿಸಿದಳ೦ತೇ. ಹೀಗೆ ನನ್ನ ಸ೦ಗ್ರಹಣೆ ವರ್ಗಾವಣೇಗೊಳ್ಳುತ್ತಾ ಸಧ್ಯ ಯಾರ ಹತ್ತಿರವಿದೇಯೋ ತಿಳಿಯದು. ಇದೇ ಅನ್ನುವ ನ೦ಬಿಕೆ ಇದೆ. ಯಾಕೆ೦ದರೇ ಅ೦ಚೆಚೀಟಿ ಸ೦ಗ್ರಹಣೆ ಆಕರ್ಷಕ ಹುಚ್ಚು. ಸೇರಿಸಿದವರು ಕಾಯ್ದಿಡುತ್ತಾರೇ -ಹುಚ್ಚು ಇಳಿದರೂ. ಅದನ್ನು ನೋಡುವವರಲ್ಲಿ ಯಾರಿಗಾದರು ಹುಚ್ಚು ಶುರುವಾಗುತ್ತೆ-ಮುಖ್ಯವಾಗಿ ಮಕ್ಕಳಲ್ಲಿ. ಅವರು ಅದನ್ನು ಮು೦ದುವರೆಸುವದಾಗಿ ಕೇಳಿಕೊ೦ಡು ತೆಗೆದುಕೊಳ್ಳುತ್ತಾರೆ. ನಾವು ನಮ್ಮ ಬಾಲ್ಯದ ಪ್ರಯತ್ನ ನಿಲ್ಲದೇ ಮು೦ದೆ ಸಾಗಲಿ ಎ೦ಬ ಅಸ್ಥೆಯೊಡನೆ ಕೊಟ್ಟುಬಿಡುತ್ತೇವೆ.
ಹೀಗೆ ಸಾಗುತ್ತದೆ ಅ೦ಚೆ ಸ೦ಗ್ರಹಣೆಯ ಹುಚ್ಚಿನ ಕೊ೦ಡಿಗಳು.
ಹಾ ಕೆಲವರು ಮಾತ್ರ ಈ ಅಸ್ಥೆ ತಮ್ಮ ಜೀವನದ ಯಾವದೇ ಘಟ್ಟದಲ್ಲಿ ಕಳೆದುಕೊಳ್ಳದೇ ಮು೦ದುವರೆಸುತ್ತಾರೆ-ಅವರೇ ನಿಜವಾದ ಸ೦ಗ್ರಹಕಾರರು.
Note :Photographs available on internet are used to support the article. If any objection is there from owners of photographs please intimate same will be removed.
Subscribe to:
Post Comments (Atom)
9 comments:
ವಾಹ್,
ಫೋಟೋ ಅಂಚೆದು ಚೆನ್ನಾಗಿದೆ.
ನಾನು ಸಣ್ಣವನಿರುವಾಗ ಮಾಡ್ತಿದ್ದೆ. ಈಗ ಬಿಟ್ಟಿದ್ದೇನೆ.
ನಿಮ್ಮ ಸಂಗ್ರಹ ಹೀಗೆ ಮುಂದುವರಿಯಲಿ ಎಂಬ ಹಾರೈಕೆ ನನ್ನದು
ಸೀತಾರಾಮ್ ಸರ್,
ನಿಮ್ಮ ಅಂಚೆ ಸಂಗ್ರಹ ತುಂಬಾ ಚೆನ್ನಾಗಿದೆ. ಅದಕ್ಕೆ ತಕ್ಕಂತೆ ನಿಮ್ಮ ಲೇಖನವೂ ಸೂಕ್ತವಾಗಿದೆ...
ಇವತ್ತು ವಿಶ್ವ ಅಂಚೆದಿನ ಅದಕ್ಕಾಗಿ ನಿಮಗೆ ಅಭಿನಂದನೆಗಳು.
ಸೀತಾರಾಮ್ ಸರ್,
ಅಂಚೆ ಸಂಗ್ರಹ ಹಾಗೂ ಲೇಖನ ತುಂಬಾ ಚೆನ್ನಾಗಿದೆ .....
ವಿಶ್ವ ಅಂಚೆದಿನದ ಶುಭಾಶಯಗಳು....
baalyada savi Nenapugalu...Madhura mattu...anche cheeti sangraha nanu mis madkonde anisutte chennagide Baravanige sir...
ಬಾಲ್ಯದಲ್ಲಿ ನಾನೂ ಕೆಲ ಕಾಲ ಅಂಚೆಚೀಟಿ ಸಂಗ್ರಹ ಮಾಡುತ್ತಿದ್ದ ನೆನಪಾಯಿತು.ಪತ್ರ ವ್ಯವಹಾರವೆ ಕಡಿಮೆಯಾಗಿರುವುದರಿಂದಾಗಿ ಈಗಿನ ಮಕ್ಕಳಿಗೆ ಈ ಹವ್ಯಾಸವಿರುವುದು ಅಪರೂಪವೆಂದೆ ಹೇಳಬಹುದು.
ಸೀತಾರಾಮ್ ಸರ್,
ನಿಮ್ಮ ಅಂಚೆ ಸಂಗ್ರಹದ ಕಥೆ ತುಂಬಾ ಚೆನ್ನಾಗಿದೆ..ನಾನೂ ಚಿಕ್ಕವಳಿದ್ದಾಗ ಹೀಗೆ ಸಂಗ್ರಹಿಸಿದ್ದೆ, ನಂತರ ನನ್ನ ಅತ್ತೆ ಮಗಳಿಗೆ ಕೊಟ್ಟುಬಿಟ್ಟೆ! ಹೇಮಂತ್ ಈಗಲೂ ಕಲೆಕ್ಟ್ ಮಾಡ್ತಾರೆ, ನಿನ್ನೆಯಷ್ಟೆ ಒಂದು ಸ್ಪರ್ಧೆಗೆ ಕಳುಹಿಸಿದ್ರು:)
ಧನ್ಯವಾದಗಳು ಡಾ.ಗುರುಮೂರ್ತಿ ಹೆಗ್ಡೆಯವರೇ, ಶಿವುರವರೇ, ಸವಿಗನಸು-ರವರೇ, ಹೇಮ್೦ತರವರೇ, ಸುಮಾರವರೇ ಹಾಗೂ ರೂಪಶ್ರೀ-ಯವರೇ - ತಮ್ಮೆಲ್ಲರ ಅಭಿಮಾನದ ಪ್ರತಿಕ್ರಿಯೆಗೆ.
ರೂಪಶ್ರೀ-ಯವರೇ,
ಹೇಮ೦ತರ ಅ೦ಚೆ ಚೀಟಿ ಸ೦ಗ್ರಹದ ಫೋಟೊಗಳನ್ನು ಬಿಡುವಾದಾಗ ಸ್ಕ್ಯಾನ್ ಮಾಡಿ ತಮ್ಮ ಬ್ಲೊಗ್ ನಲ್ಲಿ ಹಾಕಿ.
ಧನ್ಯವಾದಗಳು.
ಸ್ಪರ್ಧೆಯಲ್ಲಿ ಅವರ ಸ೦ಗ್ರಹಕ್ಕೆ ಪ್ರಶಸ್ತಿ ಬರಲೆ೦ದು ಹಾರೈಸುವೆ.
Post a Comment