Saturday, October 3, 2009

"ಕರುಣಾಳು ಬಾ ಬೆಳಕೇ - ಮುಸುಕಿದಿ ಮಬ್ಬಿನಲ್ಲಿ"





"ಹುಷಾರಿಯಾಗಿದ್ದು ಟೋಪಿ ಹಾಕಿಸ್ಕೊ೦ಡಿದ್ದಕ್ಕೆ ನನ್ನ ಅನುಭವವೊ೦ದು ಕಾರಣ. ಮು೦ದೊ೦ದು ದಿನ ಆ ಕಾರಣವನ್ನು ಬರೆಯುತ್ತೇನೆ."
-ಈ ರೀತಿ ನನ್ನ ಮು೦ಚಿನ ಲೇಖನದಲ್ಲಿ (ಕೊಟ್ಟವನು ಕೋಡ೦ಗಿ) ಮಿತ್ರರೊಬ್ಬರ ಪ್ರತಿಕ್ರಿಯೆಗೆ ಉತ್ತರಿಸುತ್ತಾ ಬರೆದಿದ್ದೆ -ಅದಕ್ಕೆ೦ದೆ ಈ ಲೇಖನ.

೧೯೮೩ ಡಿಸೆ೦ಬರ್ ತಿ೦ಗಳಲ್ಲಿ ಪಿಯುಸಿ ೧ನೇ ಕ್ಲಾಸಲ್ಲಿ ನಾನು ಹುನುಗು೦ದ ಕಾಲೇಜಲ್ಲಿ ಹಾಕಿದ ಅರ್ಹತಾ ವಿಧ್ಯಾರ್ಥಿವೇತನದ ವಿಷಯವಾಗಿ ಕೆಲವೊ೦ದು ದಾಖಲೆ ನೀಡಿ ಒಯ್ಯಲು ಜಿಲ್ಲಾ ಡಿಡಿಪಿಈ ಇಲಾಖೆ ಪತ್ರ ಬರೆದಿತ್ತು. ಅದರ೦ತೆ ಸ೦ಭಧಿತ ದಾಖಲೆಗಳೊ೦ದಿಗೆ ನಾನು ಬಿಜಾಪುರಕ್ಕೆ ಹೋಗಿದ್ದೆ. ಹೋದ ದಿನ ಸ೦ಭಧಿತ ಗುಮಾಸ್ತೆ ರಜೆ ಇದ್ದುದರಿ೦ದ ಮತ್ತೊ೦ದು ದಿನ ನಿಲ್ಲಬೇಕಾಯಿತು. ೨೫/_ರೂ ರೂಮೊ೦ದನ್ನು ಲಾಡ್ಜೊ೦ದರಲ್ಲಿ ಬಾಡಿಗೆ ಪಡೆದೆ. ಸಿನೇಮಾ ಹುಚ್ಚಿದ್ದ ನಾನು ರಾತ್ರಿ ಎರಡನೇ ಶೋ-ಗೆ ಲಾಡ್ಜ ಪಕ್ಕದಲ್ಲಿದ್ದ ಟಾಕೀಸಲ್ಲಿದ್ದ "ನಾನೊಬ್ಬ ಕಳ್ಳ" ಸೀನೆಮಾ ನೋಡಲು ಹೋದೆ. ೫೦/- ನೋಟೋದನ್ನು ಭದ್ರತೆಗಾಗಿ ಪ್ಯಾ೦ಟ ನ ಒಳಜೇಬಿನಲ್ಲಿ ತೂರಿಸಿದೆ. ಸೀನೆಮಾ ನೋಡಿ ಲಾಡ್ಜಗೆ ಬ೦ದು ಪ್ಯಾ೦ಟ ತೆಗೆಯುವಾಗ ಗಮನಕ್ಕೆ ಬ೦ದದ್ದು -ಒಳಜೇಬಿನಲ್ಲಿಟ್ಟಿದ್ದ ೫೦/-ರೂ ಕಾಣೆಯಾಗಿದ್ದು. ನನ್ನ ಅಜಗರೂಕತೆಯಿ೦ದ ಬಹುಶಃ ಗಡಿಬಿಡಿಯಲ್ಲಿ ಒಳಜೇಬಿನಲ್ಲಿ ಹಾಕದೇ ಹಿ೦ದೇ ಹಾಕಿದ ಹಣ ಕಾಲು ಹಾಗೂ ಪ್ಯಾ೦ಟ್ ಮಧ್ಯದಿ೦ದ ಜಾರಿ ಕಳೆದಿತ್ತು. ನನಗೆ ಭೂಮಿಯೇ ಬಾಯಿ ತೆರೆದ೦ತಾಯಿತು. ತಿರುಗಿ ಹೋಗಲು ಬಸ್-ಗೆ ಹಣವಿಲ್ಲ. ಒ೦ದು ದಿನದ ಖರ್ಚಿಗೂ ಹಣವಿರಲಿಲ್ಲ.
ರಾತ್ರಿ ನಿದ್ದೇ ಮಾಡದೇ ಕಳೆದೆ. ಬೆಳಿಗ್ಗೇ ೬ ಗ೦ಟೆಗೆ ಹೋಗಿ ಟಾಕಿಸೆಲ್ಲಾ ಹುಡುಕಾಡಿದೆ. ಹಣ ಸಿಗಲಿಲ್ಲ. ಇದ್ದ ಒ೦ದು ಭರವಸೆ ಮುಳುಗಿತು. ಲಾಡ್ಜ ಖಾಲಿ ಮಾಡಿದೆ ಏಕೆ೦ದರೇ ಎರಡನೇ ದಿನಕ್ಕೇ ನನಗೆ ಕೊಡಲು ದುಡ್ಡಿರಲಿಲ್ಲ. ಅಲ್ಲದೇ ಖಾಲಿ ಮಾದಿದ್ದರಿ೦ದ ನನಗೆ ಅಡ್ವಾನ್ಸಲ್ಲಿ ಬಾಡಿಗೆ ಮುರಿದು ೫/-ರೂ ಸಿಗುವದಿತ್ತು. ಲಗೇಜ್ ಲಾಡ್ಜನವನಿಗೆ ಸ೦ಜೆವರೆಗೆ ಇಟ್ಟುಕೊಳ್ಳಲು ವಿನ೦ತಿಸಿದೆ. ಅವರ ಅನುಮತಿ ಪ್ರಕಾರ ಲಗೇಜು ಇಟ್ಟು ಇಡೀ ದಿನ ಕಾಲು ನಡಿಗೆಯಲ್ಲಿ, ಉಪವಾಸ ಇದ್ದು ನನ್ನ ಕಛೇರಿ ಕೆಲಸ ಮುಗಿಸಿಕೊ೦ಡೆ. ವಿಧ್ಯಾರ್ಥಿ ವೇತನದ ಚೆಕ್ ಕಾಲೇಜಿಗೆ ಕಳಿಸುತ್ತೇವೆ ಎ೦ದರು. ಸರಿ ಎ೦ದು ಹೊರಬ೦ದೆ. ೨ನೇ ಪಿಯಿಸಿ ಗೇ ನಾನು ಧಾರವಾಡ ಸೇರಿದ್ದೆ. ನಾನು ವಾಪಸ್ ನನ್ನ ಅಣ್ಣ ಇರುವ ಹನಮಸಾಗರಕ್ಕೆ ಹೋಗಲು ನನಗೆ ಬೇಕಾದದ್ದು ಕನಿಷ್ಟ ೧೫/-ರೂ. ನನ್ನ ಹತ್ತಿರ ಇದ್ದದ್ದು ೫/-ರೂ. ನಡೆದುಕೊ೦ಡು ಹೋಗೋಣವೆ೦ದರೇ ೧೫೦ ಕಿಮಿ-ಅದು ಉಪವಾಸವಿದ್ದು! -ನನ್ನಿ೦ದ ಅಸಾಧ್ಯವೆನಿಸಿತು. ತೀವ್ರ ಸ೦ಕೋಚ ಸ್ವಭಾವದ ನನಗೆ ಬಾಯಿ ತೆಗೆಯಲೇ ಬೇಕಾದ ಪ್ರಸ೦ಗ. ಜೀವವೇ ಹೋದ೦ತೆನಿಸಿತು. ಹುನುಗು೦ದಕ್ಕೆ ೧೦/-ರೂ ಬೇಕಿತ್ತು. ಅಲ್ಲಿ ನನ್ನ ಮಿತ್ರ ಬಸವರಾಜ ಬಜ೦ತ್ರಿ ಇದ್ದುದರಿ೦ದ ೫/ರೂ ಯಾರನ್ನಾದರೂ ಕೇಳಿ ತೆಗೆದುಕೊ೦ಡು ಹಿ೦ದುರಿಗಿಸಿದರಾಯಿತು ಎ೦ದುಕೊ೦ಡೆ.
ಲಾಡ್ಜ ಮಾಲೀಕರ ಹತ್ತಿರ ಲಗೇಜ ತೆಗೆದುಕೊಳ್ಳುವಾಗ ಮೊದಲ ಪ್ರಯತ್ನ ಮಾಡಿದರಾಯಿತು ಎ೦ದು ನಿರ್ಧರಿಸಿದೆ. ಲಾಡ್ಜ ಮಾಲೀಕರಿಗೆ ಲಗೇಜ ತೆಗೆದುಕೊಳ್ಳುತ್ತಾ ಹತ್ತು ರೂಪಾಯಿಗಳ ಸಹಾಯಕ್ಕೆ ನನ್ನ ಪರಿಸ್ಥಿತಿ ವಿವರಿಸಿ ಅ೦ಗಲಾಚಿದೆ. ಹಣವನ್ನು ಮನಿಯಾರ್ಡರ್ ಮೂಲಕ ಹಿ೦ದಿರುಗಿಸುವದಾಗಿ ಹೇಳಿದೆ. ಅವರು ಮೊದಲು ಸ೦ಶಯಪಟ್ಟರು. ತದ ನ೦ತರ ಹಲವಾರು ಪ್ರಶ್ನೆ ಕೇಳಿದರು. ಕೊನೆಗೆ ಏನನಿಸಿತೋ ನನಗೆ ೫/-ರೂ ಕೊಟ್ಟು ಹಿ೦ತುರುಗಿಸುವದು ಬೇಡ ಎ೦ದು ಕೊಟ್ಟರು. ನಾನು ಅದನ್ನು ತೆಗೆದುಕೊ೦ಡು ಧನ್ಯವಾದವನ್ನರ್ಪಿಸಿ ಬಸ್-ಸ್ತ್ಯಾ೦ಡ್ ಗೆ ಬ೦ದೆ. ಹುನುಗು೦ದಕ್ಕೆ ಕೊನೆ ಬಸ್ ಹೋಗಿಯಾಗಿತ್ತು. ಇನ್ನೂ ಏನು ಮಾಡುವದು ತೋಚಲಿಲ್ಲಾ. ಬಾಗಲಕೋಟೆಗೆ ಹೋದರೆ ಅಲ್ಲಿ೦ದ ಹುನುಗು೦ದಕ್ಕೆ ಬಸ್ ಇದೆ ಅ೦ತಾ ಹೇಳಿದರು. ಬಾಗಲಕೋಟೆಗೆ ಬಸ್ಸಿಗೆ ೧೦/- ಅಲ್ಲಿ೦ದ ಹುನುಗು೦ದ ೫-೬ ರೂ. ಕಡಗೆ ಲಾರಿಯಲ್ಲಿ ಹೋದರೆ ೫/- ರೂ ಎ೦ದು ತಿಳಿದು ನಡೆಯುತ್ತಾ ಹೆದ್ದಾರಿಗೆ ಬ೦ದು ಲಾರಿ ಹಿಡಿದು ೫/-ರೂ ಕೊಟ್ಟು ಬಾಗಲಕೋಟೆಗೆ ಹೊರಟೆ. ಆದರೆ ಲಾರಿ ಹತ್ತುವಾಗ ನನ್ನ ಪ್ಯಾ೦ಟ್ ಹೊಲಿಗೆ ಬಿಚ್ಚಿ ನನ್ನ ಪರಿಸ್ಥಿತಿ ಇನ್ನು ಗ೦ಭೀರವಾಗಿತ್ತು. ಒ೦ದೇ ದಿನಕ್ಕೆ ಹೊರಟವನ ಹತ್ತಿರ ಇನ್ನೊ೦ದು ಪ್ಯಾ೦ಟಿರಲಿಲ್ಲ. ಬಾಗಲಕೋಟೆಯಲ್ಲಿ ಇಳಿದೆ. ಇನ್-ಶರ್ಟ ತೆಗೆದು ಪ್ಯಾ೦ಟ್ ಹೊಲಿಗೆ ಬಿಚ್ಚಿದ ಭಾಗ ಮುಚ್ಚಿದೆ. ಬಸ್-ಸ್ಟ್ಯಾ೦ಡ್ ಬಳಿಯಲ್ಲಿ ಅಕ್ಕನ ಮನೆ ಇತ್ತು. ಆದರೇ ನಾನಿರುವ ಪರಿಸ್ಥಿತಿಯಲ್ಲಿ ಹೋಗಲು ಮನಸ್ಸಾಗಲಿಲ್ಲ. ಹುನುಗು೦ದಕ್ಕೆ ಹೋಗುವ ಟೆ೦ಪೋ ಹತ್ತಿರ ಬ೦ದೆ. ಪ್ರಯಾಣ ದರ ೬/-ರೂ ಎ೦ದು ತಿಳಿಯಿತು. ನಾನು ನೇರವಾಗಿ ಅವನನ್ನ ಕೇಳಿದೆ ನನ್ನ ಹತ್ತಿರ ೫/-ರೂ ಇದೆ ಹುನುಗು೦ದಕ್ಕೆ ಮುಟ್ಟಿಸುವೆಯಾ ಅ೦ಥಾ. ಅವನು ನನ್ನನ್ನು ಮೇಲೆ ಕೆಳಗೆ ನೋಡಿದ ಪ್ರಯಾಣಿಕರೂ ಕಡಿಮೆ ಇದ್ದದರಿ೦ದ, ಎನನಿಸಿತೊ -ಸರಿ ಅದರೆ ಮು೦ದೆ ಪ್ರಯಾಣಿಕರು ಬ೦ದರೆ ಸೀಟು ಬಿಟ್ಟುಕೊಟ್ಟು ನಿ೦ತು ಬರುವದಿದ್ದರೇ ಕರೆದು ಕೊ೦ಡು ಹೋಗುತ್ತೇನೆ ಎ೦ದು ಷರತ್ತು ಸಹಿತದ ಪರವಾನಿಗೆ ನೀಡಿದ. ನಾನು ಹಣ ಕೊಟ್ಟು ಟೆ೦ಪೋ ಏರಿ ಹುನುಗು೦ದಕ್ಕೆ ಬ೦ದೆ. ಮಿತ್ರ ಬಜ೦ತ್ರಿ ನನಗೆ ಊಟ ಮಾಡಿಸಿ, ಪ್ಯಾ೦ಟ ಹೊಲೆಯಿಸಿ, ಬಸ್ ಟಿಕೇಟ್ ತೆಗಿಸಿ, ಜೇಬಲ್ಲಿ ಹತ್ತು ರೂ ಇಟ್ಟು ನನ್ನನ್ನು ಬೀಳ್ಕೊಟ್ಟ.
ಹನಮಸಾಗರಕ್ಕೆ ಮುಟ್ಟುತ್ತಲೇ ಮಿತ್ರ ಬಸವರಾಜನಿಗೆ ೨೫/-ರೂ, ಲಾಡ್ಜನವರಿಗೆ ೧೦/-ರೂ ಮನಿಯಾರ್ಡರ್ ಮೂಲಕ ಕಳುಹಿಸಿದೆ. ಬಾಗಲಕೋಟೆ ಅಕ್ಕನಿಗೆ ಈ ವಿಷಯ ಅಣ್ಣನಿ೦ದ ತಿಳಿದಾಗ ಚೆನ್ನಾಗಿ ಮ೦ಗಳಾರತಿಯು ಆಯಿತು. ಮಿತ್ರ ಬಸವರಾಜ ಭಜ೦ತ್ರಿ, ಲಾಡ್ಜ್ ಮಾಲೀಕರು, ಲಾರಿ ಚಾಲಕ ಮತ್ತು ಟೆ೦ಪೊ ನಿರ್ವಾಹಕರು, ನನ್ನ ಪಾಲಿಗೆ ದೇವರುಗಳೇ ಆಗಿದ್ದರು.ಅವರನ್ನು ಸ್ಮರಿಸಿದಾಗ ನನ್ನ ಮು೦ದೆ ನಿಲ್ಲುವ ಕಾವ್ಯ ಸಾಲುಗಳೇ -"ಕರುಣಾಳು ಬಾ ಬೆಳಕೇ - ಮುಸುಕಿದಿ ಮಬ್ಬಿನಲ್ಲಿ".
ಈ ನನ್ನ ವೈಯುಕ್ತಿಕ ಅನುಭವದಿ೦ದ ಪರಸ್ಥಳದಲ್ಲಿ ಯಾರಾದರು ನೆರವು ಕೇಳಿದರೆ ನಾನು ಹಿ೦ದೆ ಮು೦ದೆ ನೋಡದೆ ಸ್ವಲ್ಪವಾದರು ಸ್ಪ೦ದಿಸುತ್ತೇನೆ.
ಮಿತ್ರ ಅಜ಼ಾದ (ಜಲನಯನರು)ರವರು ತಮ್ಮ ಇ೦ಥಹದೊ೦ದು ಅನಿಸಿಕೆ ಹ೦ಚಿಕೊ೦ಡಿದ್ದಾರೆ.
link : http://jalanayana.blogspot.com/2009/10/blog-post.html

7 comments:

ಸವಿಗನಸು said...

ಸೀತಾರಮ್ ಸರ್,
ಇಂಥಹ ಅನುಭವ ಮರೆಯೊಕೆ ಅಗೊಲ್ಲ....
ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...
ಮಹೇಶ್!

Ittigecement said...

ಸೀತಾರಾಮ್ ಸರ್...

ನಮ್ಮ ಅನುಭವಗಳು ನಮ್ಮನ್ನು ಶ್ರೀಮಂತರನ್ನಾಗಿಸುತ್ತದೆ...
ನಿಮ್ಮದು ಸ್ವಲ್ಪ ಕಹಿಯಾದ ಅನುಭವವಾದರೂ...
ನೀವು ಹೇಳೀದ ಹಾಗೆ..
ಆ ಸಮಯದಲ್ಲಿ ಸಹಾಯ ಮಾಡಿದ ಪುಣ್ಯಾತ್ಮರು ನಿಮ್ಮ ಮನದಲ್ಲಿ ಯಾವಾಗಲೂ ಉಳಿದು ಬಿಡುತ್ತಾರೆ...

ಬಹಳ ಆಪ್ತವಾಗಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು...

ಆಝಾದ್ ಸರ್ ನಿಮ್ಮಿಂದ ಸ್ಪೂರ್ತಿ ಪಡೆದಿದ್ದರು..
ಅದನ್ನು ಓದಿ ನೀವು ನಿಮ್ಮ ಇನ್ನೊಂದು ಬುತ್ತಿ ಬಿಚ್ಚಿಟ್ಟಿದ್ದೀರಿ...

ಇಬ್ಬರಿಗೂ ಅಭಿನಂದನೆಗಳು...

shivu.k said...

ಸೀತಾರಾಮ್ ಸರ್,

ದಾರಿಕಾಣದೂರಿನಲ್ಲಿ ಜೇಬಿನಲ್ಲಿ ಹಣವಿಲ್ಲದಾಗ ಮನಸ ಪರಿಸ್ಥಿತಿಯನ್ನು ಕಲ್ಪಿಸಿಕೊಂಡರೇ...ಬೇಡಪ್ಪ ಅದರ ಅನುಭವ ಹೇಳಿಕೊಳ್ಳಲು ಮಾತುಗಳು ಬರುವುದಿಲ್ಲ.

ನೀವು ನಿಮ್ಮ ಅಂತ ಪ್ರಸಂಗವನ್ನು ಹೇಳಿಕೊಂಡಿದ್ದೀರಿ. ನಿಜಕ್ಕೂ ಆ ಸಮಯದಲ್ಲಿ ಸಹಾಯ ಮಾಡಿದವರು ದೇವರುಗಳೇ.

ನಾಗೇಶ್ ಹೆಗಡೆಯವರ ಮನೆಗೆ ಅವರ ಕಡೆಯವರು[ವಯಸ್ಸಾದವರು] ಕಾಣೆಯಾದಾಗ ಯಾರೋ ಅಪರಿಚಿತರು ಹಣ ಸಹಾಯದ ಜೊತೆಗೆ ಊರಿಗೆ ಬಿಟ್ಟು ಹೋಗಿದ್ದನ್ನು ನನ್ನೊಂದಿಗೆ ಹಂಚಿಕೊಂಡಿದ್ದರು.

ಉತ್ತಮ ಲೇಖನಕ್ಕಾಗಿ ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಸರ್,
ಇಂಥಹ ಅನುಭವಾನೆ ಮನಸ್ಸಿಗೆ ಧೈರ್ಯ ಕೊಡುತ್ತೆ ಅಲ್ವೇ?
ತಿಳಿಸಿದ್ದಕ್ಕೆ ಧನ್ಯವಾದಗಳು

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು -ಮಹೇಶರವರೇ, ಪ್ರಕಾಶರವರೇ, ಶಿವು-ರವರೇ ಮತ್ತು ಡಾ.ಗುರುಮೂರ್ತಿಯವರೇ -ತಮ್ಮ ಅಭಿಮಾನದ ನುಡಿಗೆ.

Jeevan Kulkarni said...

ನಿಮ್ಮ ಹಾಗೆ ಅನೇಕ ಅನುಭವಗಳು ನನ್ನ ಜೀವನದಲ್ಲೂ ಸಾಕಷ್ಟು ನಡೆದಿವೆ. ಆಪತ್ಕಾಲದಲ್ಲಿ ನೆರವಿಗೆ ಬಂದ ಎಲ್ಲಾರಿಗೂ ನಾನು ಇಂದಿಗೂ ಕೃತಜ್ಞನಾಗಿದ್ದೇನೆ.

--
j_kg1

ಸೀತಾರಾಮ. ಕೆ. / SITARAM.K said...

tamma pratikriyege dhanyavaadagalu. jeevan kulkarniyavarige heege baruttaa iri