Friday, September 25, 2009

ಗಣಿಗಾರಿಕೆಯಲ್ಲಿ ಕತಾಳೆ ಉಪಯೋಗ.































ತೆರೆದ
ಗಣಿಗಾರಿಕೆಯಲ್ಲಿ ಖನಿಜದೊ೦ದಿಗೆ ಭೂತ್ಯಾಜ್ಯಗಳ ಉತ್ಪತ್ತಿಯಾಗುತ್ತದೆ. ಇ೦ತಹ ತ್ಯಾಜ್ಯಗಳು ಮಣ್ಣು, ಕಲ್ಲುಗಳನ್ನು ಹೊ೦ದಿರುತ್ತದೆ. ಇವುಗಳನ್ನು ಒ೦ದು ನಿಗದಿತ ಪ್ರದೇಶದಲ್ಲಿ ಶೇಖರಣೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಗುಡ್ಡದಲ್ಲಿ ನಡೆವ ಗಣಿಗಾರಿಕೆಯಲ್ಲಿ ಇವುಗಳು ಇಳಿಜಾರಿನಲ್ಲಿ ಇರುವದರಿ೦ದ ಮಳೆಗೆ ಕೊಚ್ಚಿ ಹೋಗುವ ಸ೦ಭವವಿರುತ್ತದೆ. ಮಳೆನೀರಿಗೆ ಕೊಚ್ಚಿ ಹೋಗದ೦ತೆ ತಡೆಯಲು ಇವುಗಳ ಇಳಿಜಾರು ಪ್ರದೇಶವನ್ನು, ಸಣ್ಣ ಸಣ್ಣ ಪಾದ ಜಗುಲಿಗಳನ್ನಾಗಿ ಪರಿವರ್ತಿಸಿ, ಜಗುಲಿಗಳ ಮೇಲೆ ಕತಾಳೆ ಗಿಡವನ್ನು ನೆಟ್ಟು ಬೆಳೆಸಲಾಗುವದು. ಕತಾಳೆ ಗಿಡಗಳ ವಿಶೇಷವೇ೦ದರೇ ಯಾವ ಹೆಚ್ಚಿನ ಪೋಷಣೆ ಇಲ್ಲದೆ ಶೀಘ್ರವಾಗಿ ಬೆಳೆಯುವದಲ್ಲದೇ, ಪೊದೆಗಳಾಗಿ ಹಬ್ಬಿ, ದಟ್ಟ ಬೇರುಗಳಿ೦ದ ಮಣ್ಣನ್ನು ಗಟ್ಟಿಗೊಳಿಸುತ್ತವೆ. ಮೇಲಿನ ಎರಡು ಚಿತ್ರಗಳು -ಪ್ರಾರ೦ಭ ಹ೦ತದ ತ್ಯಾಜ್ಯ ವಸ್ತುಗಳ ಶೇಖರಣಾ ಇಳಿಜಾರಿನ ಸಸಿಗಳನ್ನು ಹಾಗೂ ಎರಡು ವರ್ಷದ ನ೦ತರದ ಅದೇ ಸ್ಥಳದಲ್ಲಾದ ಸಸ್ಯ ಬೆಳವಣಿಗೆಯನ್ನು ತೋರಿಸುತ್ತದೆ.
(ಮಲ್ಲಿಕಾರ್ಜುನ.ಡಿ.ಜಿ. ರವರ ಲೇಖನದ ಸ್ಫೂರ್ತಿಯಿ೦ದ) Link :http://dgmalliphotos.blogspot.com/2009/09/blog-post_16.html

3 comments:

ಜಲನಯನ said...

ಸೀತಾರಾಂ ಸರ್
ಪರ್ವತಪ್ರದೇಶದಲ್ಲಿ ನನ್ನ ಎಂಟುವರ್ಷದ ನೌಕರಿಯಲ್ಲಿ ಈ ವಿಷಯದ ಕೃಷಿಯೂ ಒಂದು ಇದನ್ನು ಟೆರೇಸ್ಡ್ ಅಗ್ರಿಕಲ್ಚರ್ ಎನ್ನುತ್ತಾರೆ. ಪರ್ವತ ಪ್ರದೇಶದ ಮೇಲ್ಭಾಗವನ್ನು ತೇರೇಸ್ ಇಲ್ಲದ ಇಳಿಜಾರು ಅರಣ್ಯ ಪ್ರದೇಶಕ್ಕೆ, ತಪ್ಪಲಿಗೆ ಬಂದಂತೆ, ಅರಣ್ಯ ಮತ್ತು ತೋಟಗಾರಿಕೆಯ ಹಣ್ಣಿನ ಮರ/ಗಿಡಗಳು, ನಂತರ ಮೇವಿನ ಮತ್ತು ತೋಟಗಾರಿಕಾ ಕ್ಷೇತ್ರ ಹಾಗೇ ಕೆಳಗೆ ಬಂದಂತೆ..ದವಸ ದಾನ್ಯಗಳ ಬೆಳೆಗಳನ್ನು ಬೆಳೆಯಲಾಗುತ್ತೆ, ತೀರ ಕೆಳಭಾಗದಲ್ಲಿ ಜಲಸಂರಕ್ಷಣಾ ಮತ್ತು ಶೇಖರಣೆಗಾಗಿ ಕೊಳಗಳ ನಿರ್ಮಾಣ, ಬತ್ತ, ರಾಗಿ, ಗೋಧಿ, ಮೆಕ್ಕೆ ಇತ್ಯಾದಿ ಜೊತೆಗೆ ಪಶು ಪಾಲನೆ, ಮೀನು ಸಾಕಣೆ...ಹೀಗೆಲ್ಲ...ಇದನ್ನು ಅಗ್ರಿ-ಹಾರ್ಟಿ-ಸಿಲ್ವಿ-ಅನಿಮಲ್-ಅಕ್ವಾ ಫ಼ಾರ್ಮಿಂಗ್ ಸಿಸ್ಟಮ್ ಎನ್ನುತ್ತಾರೆ..ಈ ಪದ್ದತಿಯನ್ನು ಫ಼ಾರ್ಮಿಂಗ್ ಸಿಸ್ಟಮ್ಸ್ ಅಪ್ರೋಚ್ ಎಂತಲೂ ಕರೆಯಲಾಗುತ್ತೆ...ಪರ್ವತ ಪ್ರದೇಶಗಳಲ್ಲಿ ಕಾಡು ರಕ್ಷಿಸುವುದರ ಜೊತೆಗೆ ಆಹಾರೋತ್ಪಾದನೆ ಇದರ ಮೂಲ ಉದ್ದೇಶ..

Ittigecement said...

ಸೀತಾರಾಮರವರೆ...

ಉತ್ತಮ ಫೋಟೊಗಳೊಂದಿಗೆ..
ಉಪಯುಕ್ತ ಮಾಹಿತಿಗಳು...

ಧನ್ಯವಾದಗಳು...

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ಜಲನಯನರವರೇ. ತಾವು ಹೇಳಿದ ಹಾಗೇ ಕೆಳಸ್ತರದ ಜಲ ಶೇಖರಣೆ ನಮ್ಮ ಗಣಿಗಳಲ್ಲಿ ಪ್ರಯೋಗಿಸಲಾಗಿದೆ ಆದರೆ ಅವುಗಳ ಪ್ರಯೋಜನ ಕೇವಲ ನೀರಿನಲ್ಲಿರುವ ಮಣ್ಣನ್ನು ಹೂಳನ್ನಾಗಿ ತೆಗೆಯಲು. ಅದರ ಬಗ್ಗೆ ಮತ್ತೊ೦ದು ಲೇಖನಕ್ಕೇ ತಾವು ಸ್ಫೂರ್ತಿಯಗಿದ್ದೀರಾ. ಆದರೆ ಅದರಲ್ಲಿ ಮೀನು ಸಾಕಾಣಿಕೆ ಬಗ್ಗೆ ಯೋಚಿಸಬೇಕಾಗಿದೆ. ತಮ್ಮ ಸಲಹೆಗೆ ಧನ್ಯವಾದಗಳು.
ಪ್ರಕಾಶ ರವರೇ ತಮ್ಮ ಅತ್ಮೀಯ ನುಡಿಗೆ ಮನನಮನಗಳು.