Friday, June 24, 2011

ಒನ್ ಟೂ ಕಾ ಫೋರ್ !!!!!!!


ಫಣಿಭೂಷಣ ನನ್ನ ಸಹೋದ್ಯೋಗಿ ಮಿತ್ರ .....
ರಂಗಿನ ವ್ಯಕ್ತಿತ್ವ.... ಮಾತುಗಾರ... ವಾಗ್ಮಿ...ಎಂತಹವರನ್ನು ಮರಳು ಮಾಡುವ ಮೋಡಿ ಮಾತಿನ ಚತುರ..
ರಸ್ತೆಯಲ್ಲಿ ಎರಡು ವಾಹನಗಳ ಎಡವಟ್ಟು ಚಾಲಕರು, ಸಣ್ಣ ಅಪಘಾತ ಮಾಡಿ, ದೊಡ್ಡ ಜಗಳದೊಂದಿಗೆ, ಅರ್ಧಗಂಟೆಗೂ ಹೆಚ್ಚು ಕಿತ್ತಾಡುತ್ತಾ, ರಸ್ತೆಯ ಎರಡು ಕಡೆ ಅರ್ಧ ಕಿಮಿ ವರೆಗೆ ವಾಹನಗಳು ನಿಲ್ಲುವಂತೆ ತಡೆಗೆ ಕಾರಣರಾಗಿದ್ದರು..
ಆ ಇಬ್ಬರ ನಡುವೆ ಪ್ರವೇಶಿಸಿ..ಇಬ್ಬರಿಗಿಂತಾ ಜೋರಾಗಿ ಬಾಯಿ ಮಾಡಿ ಅರುಚುತ್ತಾ, ನಡು ನಡುವೆ ಪರಿಚಿತ ಎಸ್ಪಿ ಮತ್ತು ಡಿಸಿ ಗೆ ಅದ್ಯಾವದೋ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತೇನೆ ಎನ್ನುತ್ತಾ ಇಬ್ಬರನ್ನು ಹೆದರಿಸಿ ಐದೇ ನಿಮಿಷದಲ್ಲೇ ರಸ್ತೆ ತೆರವು ಮಾಡಿಸಿದ್ದ. ನಾನು "ನಿನಗೆ ಡಿಸಿ ಎಸ್ಪಿ ಗೊತ್ತಾ ಅಂದೇ'" ಅದೆಲ್ಲಾ ಏನಿಲ್ಲಾ ಸಾರ ನಿಮ್ಮ ಮೊಬಿಲೆಗೆ ಕಾಲ್ ಮಾಡಿ ನೀವು ತೆಗೆದು ಕೊಳ್ಳುವ ಮೊದಲೇ ನಾನು ರಿಂಗಾಗುತ್ತಿದ್ದ ತಮ್ಮ ಜಂಗಮವಾಣಿ ಯೊಡನೆ ಎಸ್ಪಿ ಡಿಸಿ ಸಂಬಾಷಣೆ ಮಾಡಿದ್ದೆ,, ಹೇಗೂ ಗಲಾಟೆಯಲ್ಲಿ ತಮಗೆ ಜಂಗಮವಾಣಿ ಕರೆ ಕೇಳದು ಮತ್ತು ತಾವು ಎತ್ತಲಾರಿರಿ ಎಂದು ಗೊತ್ತಿತ್ತು"
ಅಂಥಾ ಕಿಲಾಡಿ.. ನಮ್ಮ ಫಣಿ ...
ಮನುಷ್ಯರ ಮನದಲ್ಲಿನ ತಾಕಲಾಟವನ್ನ ಅವರ ಮುಖ ನೋಡಿ ಕರಾರುವಾಕ್ಕಾಗಿ ಲೆಕ್ಕಾಚಾರ ಮಾಡುವ ಚತುರ ಅವನು..
ಎಂತ ಕೆಲಸವಾದರೂ ಲೀಲಾಜಾಲವಾಗಿ ಮಾಡುವ ವ್ಯಕ್ತಿ...
ನನ್ನ ತಂಡದ ಕಷ್ಟದ ಕೆಲಸ (tough task) ಅವನಿಗೆ ಮೀಸಲು...
ಅಲ್ಲಿ ಇಲ್ಲಿ ಅವರಿಗೆ ಇವರಿಗೆ ಫಿಟ್ಟಿಂಗ್ ಇಟ್ಟು ಜಗಳ ಹಚ್ಚುತ್ತಿದ್ದರೂ ಯಾರೊಂದಿಗೆ ಮುಖ ಕೆಡಿಸಿಕೊಂಡವನಲ್ಲ ...ಇದಕ್ಕಾಗಿ ನಾರದ ಮುನಿ ಎಂಬ ಅನ್ವರ್ಥಕ ನಾಮವೂ ಇತ್ತು. ಜೊತೆಗೆ ಇವನು ಹಚ್ಚುವ ಜಗಳಗಳನ್ನು ಇವನೇ ಸುಖಾಂತ್ಯವಾಗಿ ಸಮಾಪ್ತಿ ಮಾಡುತ್ತಿದ್ದ.
ಅವನಿಗೆ ಗೊತ್ತಿರದ ವಿಧ್ಯೆಗಳೇ ಇಲ್ಲ..... ಎಲ್ಲದರ ಬಗ್ಗೆ ಗೊತ್ತು..ಎಲ್ಲದರ ಬಗ್ಗೆ ನಿರಗ್ರಳವಾಗಿ ಉಪದೇಶ ಮಾಡುತ್ತಿದ್ದ...ಎಲ್ಲ ವಿದ್ಯಗಳ ಪ್ರಾಒಗಿಕ ಪರೀಕ್ಷೆ ಮಾಡಿದ ಅನುಭವ.... ದುಡ್ಡು ಮಾಡುವ ಎಲ್ಲ ವಿಧಾನವನ್ನ ಪ್ರಯೋಗಿಸಿ ನೋಡುತ್ತಿದ್ದ....
ಈಸ್ಪೀಟು..ಜೂಜು...ಕುದುರೆ...ಲಾಟರಿ....ಹಂಪೆ ನಿಧಿ ಶೋಧಕ್ಕೆ ರಾತ್ರಿ ವಾಮಾಚಾರ...ಅಲ್ಚೆಂ (allachem)...ಎಲ್ಲ ಲೋಹಗಳನ್ನ ಬಂಗಾರವನ್ನಾಗಿಸುವ ಪ್ರಯತ್ನ...
ಸಾಧುಗಳನ್ನು ಹುಡುಕಿ ಅವರ ಬಗ್ಗೆ ಅವರ ಸಿದ್ದಿ ಬಗ್ಗೆ ತಿಳಿದುಕೊಳ್ಳುವ ಕಾತುರ...
ಹಾಗೆಂದು ಎಲ್ಲವನ್ನೂ ನಂಬುವ ಕುರಡನಲ್ಲ...
ಹಣ ಕಳೆದುಕೊಳ್ಳುವ ಮುಟ್ಟಾಳನಲ್ಲ...
ಹಾಗೆಂದು ಹಣ ಕಳೆದುಕೊಳ್ಳದವನೂ ಅಲ್ಲ...
ಇದೆ ಅವನ ವೈಶಿಷ್ಟ್ಯ ...
ಅಲ್ಪ ಸಂಬಳದ ಅವನು ಹಣ ಹೊಂದಿಸುತ್ತಿದ್ದ ಪರಿ ಅದ್ಭುತ...
"ಸರ ಒಂದು ಐದು ನೂರು ಹಣ ಬೇಕಾಗಿತ್ತು ಹತ್ತನೇ ತಾರೀಕಿಗೆ ಕೊಟ್ಟು ಬಿಡುವೆ" ಎನ್ನುತ್ತಾ ಇಲ್ಲವೆನ್ನಲಾಗದ ಒಂದು ಬುರುಡೆ ನೆವ ಹೇಳುತ್ತಿದ್ದ. ಹತ್ತನೇ ತಾರೀಕು ಸರಿಯಾಗಿ ಮೊದಲ ಭೇಟಿಯಲ್ಲಿಯೇ ನಾವು ಕೇಳುವ ಮೊದಲೇ ಧನ್ಯವಾದಗಳೋಡನೆ ಹಣ ತೆಗೆದು ಕೊಡುವ ಪ್ರಾಮಾಣಿಕ ವ್ಯಕ್ತಿತ್ವ ಅವನದು. ಸಂಬಳವಲ್ಲದ ದಿನ ಹಣ ಕೊಡುತ್ತಿರುವನಲ್ಲ ಎಂಬುದು ಆಶ್ಚರ್ಯ. ಆಮೇಲೆ ಮುರುಳಿಯೊಡನೆ ಮಾತನಾಡುವಾಗ ತಿಳಿಯಿತು ಅವನಲ್ಲಿ ೧೦೦೦ ರೂ ತೆಗೆದು ಕೊಂಡಿದ್ದನಂತೆ ೯ನೆ ತಾರೀಕಿನಂದು ಮುಂದಿನ ತಿಂಗಳು ಹದಿನೈದಕ್ಕೆ ಕೊಡುತ್ತೇನೆ ಎಂದು. ಮುಂದಿನ ತಿಂಗಳು ಹತ್ತಕ್ಕೆ ರಾಮಲಿಂಗ ನ ಹತ್ತಿರ ೨೦೦೦ ತೆಗೆದು ಕೊಂಡಿದ್ದಂತೆ ಅದರ ಮುಂದಿನ ತಿಂಗಳು ೨೫ಕ್ಕೆ ಕೊಡುತ್ತೇನೆ ಎಂದು...ಹಾಗೂ ಹದಿನೈದಕ್ಕೆ ಮುರುಳಿ ಹಣ ತೀರಿಸಿದ್ದ...

ಹೀಗೆ ತನ್ನ ಎಲ್ಲ ವಿಶ್ವಾಸಿ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಒಬ್ಬಬ್ಬರೊಡನೆ ಒಂದು ನಿರ್ಧಿಷ್ಟ ಸಮಯ ತೆಗೆದುಕೊಂಡು ಹಣ ಪಡೆಯುವದು.., ಆ ಸಮಯ ಬಂದಾಗ ಇನ್ನೊಬ್ಬರ ಹತ್ತಿರ ಹೆಚ್ಚಿನ ಸಾಲ ಪಡೆದು ಸ್ವಲ್ಪ ಖರ್ಚಿಗೆ ಇಟ್ಟುಕೊಂಡು ಉಳಿದದ್ದನ್ನು ಸಮಯಕ್ಕೆ ಸರಿಯಾಗಿ ಹಿಂದಿನ ಸಾಲ ತೀರಿಸುವ ಚಾಣಕ್ಯ..

ಹೀಗೆ ಬೆಳೆದ ಸಾಲದ ಹಣ ಅವನ ವರ್ಷದ ಬೋನಸ್ ವೇಳೆಗೆ ಬೋನಸ ಹಣಕ್ಕೆ ಸಮನಾಗಿ ಬರುವಂತೆ ಮಾಡಿ ಆಗ ಕೊನೆಯ ಸಾಲಿಗನಿಗೆ ಬೋನಸ್ ಪೂರಾ ಕೊಟ್ಟು, ಮತ್ತೆ ಸ್ವಲ್ಪ ಹಣ ಸಾಲ ಎತ್ತುತ್ತಾ ತನ್ನ ಒನ್ ಟು ಕಾ ಫೋರ್ ಕೆಲಸ ಮುಂದುವರೆಸುತ್ತಿದ್ದ.
ಈ ನಡುವೆ ಇಸ್ಪೀಟ್ ನಲ್ಲಿ ಹಣ ಬಂದರೆ ಹಳೆಯ ಸಾಲ ತೀರಿಸುತ್ತಿದ್ದ. ಮನೆಗೆ ವಡವೆ ಮತ್ತು ವಸ್ತ್ರಕ್ಕೆ ಖರ್ಚು ಮಾಡುತ್ತಿದ್ದ. ಅವನ ಸಾಲ ಜೂಜುಗಳಿಗೆ ಮೀಸಲಾಗಿತ್ತು. ಅವಾಗಾವಾಗ ಜೂಜಿನಿಂದ ಹಣವನ್ನೂ ಮಾಡುತ್ತಿದ್ದ.
ಅವನಿಗೆ ಹಣ ಕೊಡುವವರಿಗೆ ಅವನ ಪಿಳ್ಳೆ ನೆವಗಳು ಗೊತ್ತಿದ್ದವು ಮತ್ತು ತಮ್ಮ ಹಣ ಜೂಜು ಮೋಜಿಗೆ ಹೋಗುತ್ತದೆ ಎಂದು ಗೊತ್ತಿರುತ್ತಿತ್ತು. ಆದರು ಅವರು ಹಣ ಕೊಡಲು ನಿರಾಕರಿಸುತ್ತಿರಲಿಲ್ಲ. ಏಕೆಂದರೆ ಹೇಳಿದ ಸಮಯಕ್ಕೆ ತಪ್ಪದೆ ಎಲ್ಲಿದ್ದರೂ ಹಹೆಗಾದರು ಮಾಡಿ ಹಣ ತಂದು ಸಾಲ ತೀರಿಸುತ್ತಿದ್ದ. ಅದು ಗೊತ್ತಿದ್ದ ಎಲ್ಲರು ಅವನಿಗೆ ಹಣ ಕೊಡುತ್ತಿದ್ದರು -ಪಿಳ್ಳೆ ನೆವಗಳನ್ನು ನಮ್ಬಿದವರಂತೆ ನಟಿಸಿ ಜೊತೆಗೆ ಮೊಸಳೆ ಅನುಕಂಪ ತೋರಿಸಿ.
ಕೆಲವೊಮ್ಮೆ ಹೇಳಿದ ಸಮಯಕ್ಕೆ ಇನ್ನೊಂದು ಮೂಲದಿಂದ ಹಣ ತೀರಿಸಲು ಸಿಗದೇ ಇದ್ದಾರೆ ಹೆಚ್ಚಿನ ಬಡ್ಡಿಯ ಸಾಲ ಮಾಡಿ ಅಥವಾ ಅಡವಿಟ್ಟು ಹಣ ತೀರಿಸುತ್ತಿದ್ದ...

ಅವನಿಗೆ ಇದೆಲ್ಲಾ ಮಾಮೂಲು...
ಬದುಕನ್ನು ಅವನೆಂದು ಗಂಬೀರವಾಗಿ ಪರಿಗಣಿಸಲಿಲ್ಲ ... ಹಾಗೆ ಸಾವನ್ನು....
ಎಲ್ಲಾ ಜೂಜು -ಮೊಜುಗಳನ್ನು ಮಜವಾಗಿ ಅನುಭವಿಸಿದ...
ಕೊಟ್ಟ ಮಾತಿಗೆ ತಪ್ಪಲಿಲ್ಲ...
ದುಖ ನೋವನ್ನು ಎಂದು ತೋರಿಸಲಿಲ್ಲ....
ತನ್ನ ರಂಗಿನ ವ್ಯಕ್ತಿತ್ವದಿಂದ ಎಲ್ಲರನ್ನು ರಂಜಿಸಿದ...
ಸಾಧಿಸುವ ಕಿಚ್ಚು ತೋರಿಸಿದ...
ಸಾವು ಅವನ ಕೊನೆಯ ಒಂದೆರಡು ವರ್ಷಗಳಲ್ಲಿ ಅವನ ಆರೋಗ್ಯವನ್ನೂ ಕಿತ್ತು ತಿಂದರೂ, ಎಲುವಿನ ಗೂಡನ್ನಾಗಿಸಿದರೂ, ಅವನು ದ್ರುತಿಗೆಡಲಿಲ್ಲ, ನಗುತ್ತಲೇ ಎಲ್ಲವನ್ನೂ ಎದುರಿಸಿದ ತನ್ನ ರಂಕಲುಗಳನ್ನೆಲ್ಲಾ ಬಿಡದೆ ಮಜವಾಗಿ ಕಳೆದ..ಗುಣವಾಗದ ಖಾಯಿಲೆಗೆ ತನ್ನನ್ನು ತಾನೇ ನಗುತ್ತಾ ಬಲಿ ಕೊಟ್ಟ..
ನಾರದ ಮುನಿ ಎಲ್ಲರ ಮನದಲ್ಲಿ ಇನ್ನು ಹಸಿರಾಗೇ ಇದ್ದಾನೆ...
ಅವನ ಕಥೆಗಳು, ರಂಕಲುಗಳು, ತೆವಲುಗಳು...ಕೆಲಸದಲ್ಲಿನ ಅವನ ಚಾಣಕ್ಯ ತಂತ್ರಗಳು... ರಸವತ್ತಾದ ಕಥೆಗಳಾಗಿ ಮಿತ್ರರಿಂದ ಇನ್ನು ಹರಡುತ್ತಲೇ ಇವೆ.
ಡಬ್ಲಿಂಗ್ ದೊರೆ ಎಂಬ ಹೆಸರು ಇತ್ತು ಅವನಿಗೆ..
ಹಾಗೆಂದು ಯಾರಿಗೂ ಮೋಸ ಮಾಡಿದವನಲ್ಲ. ತೊಂದರೆ ಕೊಟ್ಟವನಲ್ಲ.. ಎಲ್ಲರನ್ನು ನಗಿಸುತ್ತಾ ಅವರ ಕೆಲಸದಲ್ಲಿ ಕೈಗೂಡಿಸಿ ನಡೆದವ.

14 comments:

ಮನಸು said...

ಚೆನ್ನಾಗಿದೆ ಸರ್ ಬರಹ ಒಬ್ಬೊರಲ್ಲೂ ಒಂದೊಂದು ಗುಣ ಇರುತ್ತೆ...

ಸುಬ್ರಮಣ್ಯ said...

ಅವನು ಕ್ಯಾನ್ಸರಲ್ಲಿ ಸತ್ನಾ?

ಗಿರೀಶ್.ಎಸ್ said...

Interesting character !!!

sunaath said...

ಫಣಿಭೂಷಣನ ವ್ಯಕ್ತಿತ್ವವನ್ನು ತುಂಬ ಸ್ವಾರಸ್ಯಮಯವಾಗಿ ಚಿತ್ರಿಸಿದ್ದೀರಿ. ಈ ‘Don't worry, be happy' ವ್ಯಕ್ತಿಯ ಕೊನೆಯನ್ನು ಓದುತ್ತಿದ್ದಂತೆ ಕಣ್ಣೀರು ಬಂದಿತು. ‘ಬದುಕನ್ನು ಅವನೆಂದೂ ಗಂಭೀರವಾಗಿ ಪರಿಗಣಿಸಲಿಲ್ಲ, ಹಾಗೆ ಸಾವನ್ನೂ.’ಎನ್ನುವ ವಾಕ್ಯ ಓದುತ್ತಿದ್ದಂತೆ ನನ್ನ ಹೃದಯವೇ ಒಂದು ಗಳಿಗೆ ನಿಂತಂತಾಗಿತ್ತು!

V.R.BHAT said...

ಸುನಾಥರು ಹೇಳಿದ್ದನ್ನೇ ಮರಳಿ ಹೇಳುತ್ತೇನೆ, ಸ್ವಲ್ಪ ಸಿಹಿ ಮತ್ತು ಸ್ವಲ್ಪ ನೋವಿನ ಅನುಭವ.

http://jyothibelgibarali.blogspot.com said...

nice one sir..

prabhamani nagaraja said...

ವೈವಿಧ್ಯಮಯ ವ್ಯಕ್ತಿತ್ವದ ಫಣಿಭೂಷಣ ಅವರ ಜೀವನ ಅಷ್ಟು ಬೇಗ ಅ೦ತ್ಯಗೊ೦ಡದ್ದು ಬೇಸರವೆನಿಸಿತು. ವ್ಯಕ್ತಿತ್ವ ಚಿತ್ರಣ ಚೆನ್ನಾಗಿದೆ.

KalavathiMadhusudan said...

hrudaya sparshi lekhana."uliyabeku baduku ellaredegalali naguvaagi"enbudakke madariyaagi,antyadalli vishaadavenisitu.

shivu.k said...

ಸರ್,
ಬಿಡುವು ಮಾಡಿಕೊಂಡು ಇವತ್ತು ಎಲ್ಲರ ಬ್ಲಾಗ್ ಓದುತ್ತಿದ್ದೇನೆ. ನಿಮ್ಮ ಬ್ಲಾಗ್ ಕೂಡ ಓದಿದೆ. ಬರಹ ಕುತೂಹಲ ಕೆರಳಿಸಿತು.

kavinagaraj said...

ಸ್ವಾರಸ್ಯಕರ ವ್ಯಕ್ತಿತ್ವದ ಫಣಿಭೂಷಣ! ನಿಜ, ಇಂಥವರೂ ಇರುತ್ತಾರೆ.

ಈಶ್ವರ said...

ಹ್ಮ್ ಹೀಗಾಗಬಾರದಿತ್ತು.. ವ್ಯಕ್ತಿಚಿತ್ರ ಚೆನ್ನಾಗಿ ಬಂದಿದೆ.

ಹಬ್ಬದ ಶುಭಾಶಯಗಳು.

Badarinath Palavalli said...

ಫಣಿಭೂಷಣ ಮನಸ್ಸಿನಲ್ಲಿ ನಿಲ್ಲುತ್ತಾನೆ. ಆಳವಾದ ಭಾವ ಹೊಮ್ಮುವ ಲೇಖನ. ಮನಸ್ಸು ಭಾರವಾಯಿತು.
ನನ್ನ ಬ್ಲಾಗಿಗೆ ಬನ್ನಿ ಕೆಲವು ಹೊಸ ಕವನಗಳು ನಿಮ್ಮ ಓದಿಗೆ ಮತ್ತು ಅಭಿಪ್ರಾಯದ ಕಾಮೆಂಟಿಗೆ ಕಾಯುತ್ತಿವೆ.

ಜಲನಯನ said...

ಸೀತಾರಾಂ..ಫಣಿರಾಮ ನಮ್ಮಲ್ಲಿ ಇಡಿಯಾಗಿ ಒಬ್ಬರಲ್ಲಿ ಕಂಡರೆ..ನಮ್ಮೆಲ್ಲರಲ್ಲಿ ಕಂಡೂ ಕಂಡೂ ಮಾಯವಾಗ್ತಾನೆ ಎನ್ನುವುದು ನನ್ನ ಅನಿಸಿಕೆ...ಬಹಳ ಚನ್ನಾಗಿ ವ್ಯಕ್ತಿತ್ವದ ಅನಾವರಣ ಮಾಡಿದ್ದೀರಿ,,,ಕಥೆ ಅಂತ್ಯವೂ ಬಹಳ ಸ್ವಾಭಾವಿಕ ಮತ್ತು ಸೂಕ್ತ...

ಜಲನಯನ said...

ಸೀತಾರಾಂ..ಫಣಿರಾಮ ನಮ್ಮಲ್ಲಿ ಇಡಿಯಾಗಿ ಒಬ್ಬರಲ್ಲಿ ಕಂಡರೆ..ನಮ್ಮೆಲ್ಲರಲ್ಲಿ ಕಂಡೂ ಕಂಡೂ ಮಾಯವಾಗ್ತಾನೆ ಎನ್ನುವುದು ನನ್ನ ಅನಿಸಿಕೆ...ಬಹಳ ಚನ್ನಾಗಿ ವ್ಯಕ್ತಿತ್ವದ ಅನಾವರಣ ಮಾಡಿದ್ದೀರಿ,,,ಕಥೆ ಅಂತ್ಯವೂ ಬಹಳ ಸ್ವಾಭಾವಿಕ ಮತ್ತು ಸೂಕ್ತ...