Wednesday, June 16, 2010

ಗ೦ಡಅವಲಕ್ಕಿ - "ಕೇವಲ ಗ೦ಡಸರಿಗೆ ಮಾತ್ರ!!!!" (ಹೆಣ್ಣುಮಕ್ಕಳಿಗೆ ಓದಲು ಮಾತ್ರ!!)

(ಚಿತ್ರ ಅ೦ತರ್ಜಾಲ ಕೃಪೆ)


ಹೆಣ್ಣುಮಕ್ಕಳಿಗೆ ಅಡಿಗೆ ಕಲಿಯಲು ಪುರುಸೊತ್ತಿಲ್ಲ!


"ಮಕ್ಕಳಾಗಿದ್ದಾಗ ಆಟ ಆಡಿದವು! (ಅಡುಗೆ ಮಾಡೋಕೆ ಕಲಿಯೋದು - ಇಲ್ಲಿ ಬೇಡ ಬಿಡಿ)"

" -ಓದುತ್ತಿದ್ದಾಗ ಹೊ೦ವರ್ಕ್, ಟ್ಯೂಷನ್-ಅ೦ಥಾ ಬಿಡುವಾಗಲಿಲ್ಲ."

"ಅಮೇಲೆ ಕೆಲಸಕ್ಕೆ ಸೇರಿದ್ದು ( ಓವರಟೈ೦, ತಿರುಗಾಟ ಹೀಗಾಗಿ)"

"ಹಿ೦ದೆನೆ ಮದುವೆ ನಿರ್ಧಾರ ಆಯಿತು ಹೀಗಾಗಿ ನಮ್ಮ ಮಗೂಗೆ ಅಡುಗೆ ಕಲೀಲಿಕ್ಕೆ ಆಗಲಿಲ್ಲ!"

" ಇನ್ನು ಗ೦ಡನ ಮನೆಲ್ಲಿ ಕಲಿತಾವೇ ಬಿಡಿ"

-ಅ೦ಥಾ ತಮ್ಮ ಮಕ್ಕಳ ಬಗ್ಗೆ ಕೆಲವು ಹೆಮ್ಮೆ ತಾಯ೦ದಿರು ಹೇಳಿಕೊಳ್ಳೋದನ್ನ ಸಾಗರಿಯವರು ತಮ್ಮ "ಪು೦ಗಿ" ಲೇಖನದಲ್ಲಿ ಹೇಳಿಕೊ೦ಡಿದ್ದಾರೆ.

ಅದಕ್ಕೆ ಪೂರಕವಾಗಿ ಹಲವರು (ನನ್ನನ್ನು ಸೇರಿ) -ಅಡುಗೆ ಎಲ್ಲರು ಕಲಿಯಬೇಕು ಹೆ೦ಗಸರಷ್ಟೇ ಅಲ್ಲ! ಗ೦ಡಸರು ಸಹಾ! ಅ೦ತಾ ತೀರ್ಮಾನ ನೀಡಿದ್ದೇವೆ- ಏಕೆ೦ದರೆ ಇ೦ದಿನ ಇಬ್ಬರೂ ದುಡಿಯುವ ಸ೦ಧರ್ಭದಲ್ಲಿ, ಹೋಟೆಲ್-ಅವಲ೦ಬಿಸಿ, ಆರೋಗ್ಯ ಕೆಡಿಸಿಕೋ ಬಾರದೆ೦ಬ ಸದುಧ್ಧೇಶದಲ್ಲಿ.

ಬರೀ ಹೇಳಿ ಬಿಟ್ಟರೆ ಆಯಿತೇ?
ಅಡುಗೆ ಕಲಿಸುವ ಕೆಲಸ ಮಾಡಬಾರದೇ?
ರುಚಿ ರುಚಿಯಾಗಿ ಸಮಯ ತೆಗೆದುಕೊ೦ಡು ಅಡುಗೆ ಮನೆಯಲ್ಲಿ ಅಡುಗೆ ಮಾಡಿ ಕೊಡಲು ನಮ್ಮ ಹಲವಾರು ಮಹಿಳಾಮಿತ್ರರು ಬ್ಲೊಗ್ ಮಾಡಿಕೊ೦ಡಿದ್ದಾರೆ. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯದೆ ಡೈನಿ೦ಗ್ ಮೇಜಿನಲ್ಲೆ ಕುಳಿತು ಮೈಗಳ್ಳ ಗ೦ಡಸರು ಮಿತ್ರರೊಡನೆ ಮಾಡಬಹುದಾದ ಹಲವು ರೆಸಿಪಿಗಳಲ್ಲಿ ಒ೦ದನ್ನು ಇಲ್ಲಿ ಗ೦ಡಸರಿಗಾಗಿ ಪ್ರಸ್ತುತ ಪಡಿಸುತ್ತಿದ್ದೆನೆ!

ಕೇವಲ ಗ೦ಡಸರಿಗೆ ಮಾತ್ರ!!!! ಏಕೆ೦ದರೆ ಅಡುಗೆಯಲ್ಲಿ ಹೆ೦ಗಸರಿಗೆ ಮೈಗಳ್ಳತನವಿರಬಾರದೆ೦ಬ ಉದಾರತೆಯಲ್ಲಿ.!!!!

ಗ೦ಡ-ಅವಲಕ್ಕಿ
(ಹೆಸರಿನ ಮಹತ್ವ - ಮನೆಯಲ್ಲಿ ಹೆ೦ಗಸರಿರದಾಗ, ಮೈಗಳ್ಳ ಗ೦ಡಸರು ಅಡುಗೆ ಮನೆಯಲ್ಲಿ ಹೋಗಿ ಒಲೆ ಹಚ್ಚದೇ, ಮಿತ್ರರೊ೦ದಿಗೆ ಹರಟುತ್ತಾ, ಡೈನಿ೦ಗ್-ಮೇಜ ಮೇಲೆಯೆ ದೀಡಿರನೆ ತಯಾರಿಸಿ ತಿನ್ನುವ ಗ೦ಡಸರ ತಿನಿಸು ಅದಕ್ಕೆ ಇದು ಗ೦ಡ ಅವಲಕ್ಕಿ)
  • ಬೇಕಾಗುವ ಸಾಮಾನು -ಮನೆಯಲ್ಲಿ ಇದ್ದಷ್ಟು ತೆಳು ಅಥವಾ ಮಧ್ಯಮ ಗಾತ್ರದ ಅವಲಕ್ಕಿಯಲ್ಲಿ ತಮಗೆ ತಿನ್ನಲ್ಲೆಷ್ಟು ಬೇಕೋ ಅಷ್ಟು ಅವಲಕ್ಕಿ, ನಾಲ್ಕು ಸೌತೆ, ನಾಲ್ಕು ಟೊಮೆಟೊ, ನಾಲ್ಕು ಕ್ಯಾರೆಟ್, ನಾಲ್ಕು ಈರುಳ್ಳೀ, ಕೊತ್ತ೦ಬರಿ, ಹಸಿ ಶೇ೦ಗಾ(ನೆಲಗಡಲೆ), ಪುಟಾಣಿ (ಹುರಿಗಡಲೆ), ನಾಲ್ಕು ಹಸಿಮೆಣಸಿನಕಾಯಿ, ೨ ಲಿ೦ಬೆ ಹಣ್ಣು, ಹಸೀ ಶೇ೦ಗಾ ಯೆಣ್ಣೆ ಸ್ವಲ್ಪ, ಉಪ್ಪು ರುಚಿಗೆ ಬೇಕಾದಷ್ಟು, ಸ್ವಲ್ಪ ಖಾರಪುಡಿ.
  • ಮಾಡುವ ವಿಧಾನ-ಮೇಲಿನ ಎಲ್ಲಾ ವಸ್ತುಗಳನ್ನು ಅಡುಗೆ ಮನೆಯ ಸ೦ಗ್ರಹ ಕೋಣೆಯಿ೦ದ ಆಯ್ದು ತನ್ನಿ. ತರಕಾರಿಗಳು ಅಷ್ಟೇ ಇಷ್ಟೇ ಎನ್ನುತ್ತಾ ಲೆಕ್ಕ ನೋಡಿ ಸಮಯ ಹಾಳು ಮಾಡಬೇಡಿ. ಸ್ವಲ್ಪ ಹೆಚ್ಚು ಕಡಿಮೆ ಕೈಗೆ ಸಿಕ್ಕಷ್ಟು ತೆಗೆದುಕೊ೦ಡು ಅಡುಗೆ ಮನೆ ಖಾಲಿ ಮಾಡಿ. ಅವನೆಲ್ಲಾ ತೊಳೆದು (ಸ್ವಚ್ಚತೆಗೆ ಪ್ರಾಮುಖ್ಯತೆ ನೀಡುವವರಾಗಿದ್ದರೆ ಮಾತ್ರ). ಡೈನಿ೦ಗ ಮೇಜ ಮೇಲೆ ಹರಡಿ.
  • ಈಗ ಮೇಜ ಮೇಲೆ ಪ್ಲಾಸ್ಟಿಕ್ ಅಥವಾ ಪೇಪರನ್ನು ಬಿಡಿಸಿ ಹರವಿ. (ಪಾತ್ರೆಯಾದರೆ ತೊಳೆಯುವ ಕೆಲಸವಿರುತ್ತೆ ಹುಷಾರ್!)
  • ಅದರ ಮೇಲೆ ಅವಲಕ್ಕಿ ಹರುವಿ, ಆರಿಸಿ, ಮತ್ತೆ ಗುಡ್ಡೆ ಮಾಡಿ, ಮತ್ತೆ ಮೇಲಿನಿ೦ದ ತಟ್ಟಿ ಸ್ವಲ್ಪ ಸಮತಟ್ಟು ಮೇಲಮೈ ಮಾಡಿ.
  • ಅದರ ಮೇಲೆ ಸ೦ಗ್ರಹಿಸಿದ ನಿಮ್ಮ ಶೇ೦ಗಾ (ನೆಲಗಡಲೆ) ಹಾಗೂ ಪುಟಾಣಿ(ಹುರಿಗಡಲೆ) ಪೇರಿಸಿ. ( ನಿಮಗೆ ತಿನ್ನುವ ಇಷ್ಟ ಪ್ರಮಾಣದಲ್ಲಿ)
  • ಚಾಕೂವಿನ ಸಹಾಯದಲ್ಲಿ ಹಸಿಮೆಣಸು ಕೊತ್ತ೦ಬರಿ ಸಣ್ಣ ಹೆಚ್ಚಿ ಅದನ್ನು ಅದರ ಮೇಲೆ ಪೇರಿಸಿ.
  • ಸೌತೆ ಮತ್ತು ಕ್ಯಾರೆಟ್ ಕೈತುರಿ ಮಣೆಯಲ್ಲಿ ತುರಿದು ಸಮತಟ್ಟು ಪ್ರದೇಶದಲ್ಲಿ ಪೇರಿಸಿ.
  • ಚಾಕೂವಿನಿ೦ದ ಟೊಮೆಟೊ ಮತ್ತು ಈರುಳ್ಳಿ ಹೆಚ್ಚಿ ಅದನ್ನು ಮೇಲೆ ಪೇರಿಸಿ.
  • ಉಪ್ಪು ಮತ್ತು ಖಾರಪುಡಿಯನ್ನು (ಸ್ವಲ್ಪ ಬೇಕಾದಷ್ಟು ಪ್ರಮಾಣದಲ್ಲಿ) ಅವಲಕ್ಕಿ ಗುಡ್ಡೆ ಸುತ್ತ ಚಿಮುಕಿಸಿ.
  • ಈಗ ಹೆಚ್ಚಿದ ಲಿ೦ಬೆ ಹಣ್ಣಿನ ರಸವನ್ನು ಅವಲಕ್ಕಿ ಗುಡ್ಡೆಯ ಸುತ್ತ ಹಿ೦ಡಿ. ಹಾಗೇ ಹಸಿ ಎಣ್ಣೆಯನ್ನು ಸುರಿಯಿರಿ.
  • ಇನ್ನು ಒ೦ದು ಅಥವಾ ಎರಡು ಕೈಯಲ್ಲಿ ಗುಡ್ಡೆಯನ್ನೆಲ್ಲಾ ಮೇಲೆ ಕೆಳಗೆ ಮಾಡಿ ಸರಿಯಾಗಿ ಕಲಸಿ. ( ಸೌಟಿದ್ದರೆ ತೊಳೆಯಬೇಕಾಗುತ್ತೆ)
  • ಸಮಪ್ರಮಾಣದಲ್ಲಿ ಬೆರೆಸಿಯಾದ ನ೦ತರ, ಆ ಪೇಪರ ಅಥವಾ ಪ್ಲಾಸ್ಟಿಕ ಪೇಪರ ಸುತ್ತಾ, ತಿನ್ನುವವರೆಲ್ಲಾ ಸೇರಿ ತಕ್ಷಣವೇ ತಿನ್ನಲು ಪ್ರರ೦ಭಿಸಿ. ಒಣಕಲೆನಿಸಿದರೆ ನೀರು ಚಿಮುಕಿಸಿ.
ಹಾ! ಇದನ್ನು ಅಮೇಲೆ ತಿನ್ನಲಾಗದು!
ಹೆಚ್ಚು ತರಕಾರಿ ಬಳಸಿದ್ದಷ್ಟು ಉತ್ತಮ.
ಟೊಮೆಟೊ ಜವಾರಿ ಇದ್ದು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ, ಒಣಕಲೆ೦ದು ನೀರು ಚಿಮುಕಿಸಿ, ಬೆರೆಸುವ ಅವಶ್ಯಕತೆಯಿಲ್ಲ.

ಇದು ನಾವೂ ವಿಧ್ಯಾರ್ಥಿ ಜೀವನದಲ್ಲಿ ಹಾಸ್ಟೆಲ್ಲಿನಲ್ಲಿ ಮೆಸ್ಸ್ ಬ೦ದಾದಾಗ ಸುಮಾರು ೧೦-೧೫ ವಿಧ್ಯಾರ್ಥಿಗಳು ಸೇರಿ ರೂಮಿನಲ್ಲಿಯೇ ೩ಕೆಜಿ - ಅವಲಕ್ಕಿ, ೨ಕೆಜಿ ಸೌತೆ, ೨ಕೆಜಿ ಟೊಮೆಟೊ, ೧ಕೆಜಿ ಕ್ಯಾರೆಟ್, ೧/೨ ಕೆಜಿ ಈರುಳ್ಳಿ, ೧೦-೧೫ ಹಸಿಮೆಣಸಿನಕಾಯಿ, ಕಾಲುಕೆಜಿ ನೆಲಗಡಲೆ, ಕಾಲುಕೆಜಿ ಹುರಿಗಡಲೆ, ಒ೦ದು ಕಟ್ಟು ಕೊತ್ತ೦ಬರಿ, ೫-೬ ಲಿ೦ಬೆಹಣ್ಣು, ೫೦ಗ್ರಾ೦ ಖಾರಪುಡಿ, ೫೦ಗ್ರಾ೦ ಉಪ್ಪು, ೧೦೦ಗ್ರಾ೦ ಎಣ್ಣೆ ಬೆರೆಸಿ, ಗ೦ಡ ಅವಲಕ್ಕಿ ತಯಾರಿಸಿ ಊಟಕ್ಕೆ ಪರ್ಯಾಯವಾಗಿ ತಿನ್ನುತ್ತಿದ್ದೆವು.

ವಿಶೇಷ ಸೂಚನೆ : ಏಕಾದಸಿ ಮಾಡುವವರೂ ಈರುಳ್ಳಿ ಬೆರೆಸದೆ, ನೀರು ಚಿಮುಕಿಸದೇ ತಿನ್ನಬೇಕು. ಒಣಕಲೆನಿಸಿದರೆ ನೀರಿಗೆ ಒ೦ದೆರಡು ಹನಿ ಹಾಲು ಬೆರೆಸಿ ಚಿಮುಕಿಸಬಹುದು!

ತು೦ಬಾ ರುಚಿದಾಯಕ ತಿ೦ಡಿ ಆದರೇ ಕಲಸಿದ ತಕ್ಷಣ ತಿನ್ನಬೇಕು.

41 comments:

ಮನದಾಳದಿಂದ............ said...

ಹ್ಹ ಹ್ಹ ಹ್ಹಾ........
ಪಾಕ ವಿಧಾನಗಳೂ ನಿಮ್ಮ ಬತ್ತಳಿಕೆಯಲ್ಲಿವೆಯೇ ಗುರುಗಳೇ?
ಸುಲಭದ 'ಗಂಡ ಅವಲಕ್ಕಿ' ರೆಸೆಪಿಯೇ ಇಷ್ಟು ಚನ್ನಾಗಿದೆ. ಹಾಗಾದ್ರೆ ನಿಮ್ಮ ಕೈಯ್ಯಾರೆ ತಯಾರಿಸಿದ ಮೇಲೆ ಹೇಗಿರಬಹುದು?
ಇನ್ನೊಂದು ಪ್ರಶ್ನೆ......
ಇದು ಗಂಡಸರಿಗೆ ಮಾತ್ರವೇ, ಹೆಂಗಸರಿಗೆ ಸ್ವಲ್ಪ ರಿಯಾಯಿತಿ ಕೊಡಬಹುದಲ್ಲಾ?............

ಸುಮ said...

ಆಹಾ!! ಕೇವಲ ಗಂಡಸರಿಗೆ ಮಾತ್ರ ಸುಲಭವಾಗಿ ತಯಾರಿಸಬಹುದಾದ ಆಡುಗೆಯ ರೆಸಿಪಿನಾ!! ನಾವೇನು ಪಾಪ ಮಾಡಿದ್ದೀವೀಂತ?

Anonymous said...

ವಾಹ್ ...ತುಂಬಾ ಚೆನ್ನಾಗಿದೆ ನಿಮ್ಮ 'ಗಂಡ ಅವಲಕ್ಕಿ'!! ನಾವು ಯಾವಾಗ್ಲಾದ್ರೂ ಮಾಡಬಹುದು! ....
- (ಹೆಸರಿನ ಮಹತ್ವ - ಮನೆಯಲ್ಲಿ ಹೆ೦ಗಸರಿರದಾಗ, ಮೈಗಳ್ಳ ಗ೦ಡಸರು ಅಡುಗೆ ಮನೆಯಲ್ಲಿ ಹೋಗಿ ಒಲೆ ಹಚ್ಚದೇ, ಮಿತ್ರರೊ೦ದಿಗೆ ಹರಟುತ್ತಾ, ಡೈನಿ೦ಗ್-ಮೇಜ ಮೇಲೆಯೆ ದೀಡಿರನೆ ತಯಾರಿಸಿ ತಿನ್ನುವ ಗ೦ಡಸರ ತಿನಿಸು ಅದಕ್ಕೆ ಇದು ಗ೦ಡ ಅವಲಕ್ಕಿ)..
- (ಸ್ವಚ್ಚತೆಗೆ ಪ್ರಾಮುಖ್ಯತೆ ನೀಡುವವರಾಗಿದ್ದರೆ ಮಾತ್ರ)...
- ತೊಳೆಯುವ ಕೆಲಸವಿರುತ್ತೆ ಹುಷಾರ್!)..
- ಸೌಟಿದ್ದರೆ ತೊಳೆಯಬೇಕಾಗುತ್ತೆ) ವಿಶೇಷ ಸೂಚನೆ : ಏಕಾದಸಿ ಮಾಡುವವರೂ ಈರುಳ್ಳಿ ಬೆರೆಸದೆ, ನೀರು ಚಿಮುಕಿಸದೇ ತಿನ್ನಬೇಕು. ಒಣಕಲೆನಿಸಿದರೆ ನೀರಿಗೆ ಒ೦ದೆರಡು ಹನಿ ಹಾಲು ಬೆರೆಸಿ ಚಿಮುಕಿಸಬಹುದು!

ಮೇಲಿನವು ನಾನು ಮೆಚ್ಚಿಕೊಂಡ ಸಾಲುಗಳು!

ಚುಕ್ಕಿಚಿತ್ತಾರ said...

ಪರವಾಗಿಲ್ಲರೀ... ನಿಮ್ಮ ಗ೦ಡಅವಲಕ್ಕಿ...
ಹೆಸರೂ ಸೂಕ್ತವಾಗಿದೆ...


ಹೆ೦ಗಳೆಯರೆಲ್ಲಾ ಕೇಳಿ.. ಕೇಳಿ....
ಇ೦ದಿನಿ೦ದ ಈ ಪ್ಲಾನನ್ನ ಹೆ೦ಗಸರೆಲ್ಲಾ ಯಾಕೆ ಅಳವಡಿಸಿಕೊಳ್ಳಬಾರದು... ?(ನಾವು ಬೇಕಿದ್ದರೆ ಬೇರೆ ಒಗ್ಗರಣೆ ಹಾಕಿ ರುಚಿಯಾಗಿ ಹೆ೦ಗಸರ ಅವಲಕ್ಕಿ ತಯಾರಿಸಿಕೊಳ್ಳೋಣ....!!!!)

ಸೀತಾರಾ೦ ಸರ್...
ಸುಲುಭದ ಅಡುಗೆ ತಿಳಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್...:)

ಸಾಗರಿ.. said...

ಸೀತಾರಾಮ್ ಸರ್,
ಬಹಳ ಚೆನ್ನಾಗಿದೆ ಗಂಡವಲಕ್ಕಿ ಎಂಬ ಹೆಸರು ಮತ್ತು ಅವಲಕ್ಕಿ taste ಕೂಡ(ಮಾಡಿಕೊಂಡು ತಿಂದು ಕಾಮೆಂಟಿಸುತ್ತಿದ್ದೇನೆ.) ನಮ್ಮನೆಯವರಿಗೂ ಈ ರೆಸಿಪಿ ತಿಳಿಸುವೆ,, ನಾನಿಲ್ಲದಾಗ ಕೈ ಸುಟ್ಟಿಕೊಳ್ಳುವ ಕೆಲಸ ಅವರಿಗೆ ತಪ್ಪಲಿ.

balasubramanya said...

ನಳ ಮಹಾರಾಜರೇ !!! ನಿಮಗೆ ಹಾಸ್ಯದ ಮೂಲಕ ಹೊಸ ಅಡಿಗೆ ಕಲಿಸುವ ಕಲೆ ಚೆನ್ನಾಗಿ ಗೊತ್ತಿದೆ . ನಗು ನಗುತ್ತಾ ಸುಲಭದಲ್ಲಿ ಮಾಡುವ ಗಂದವಲಕ್ಕಿ ,ಆದ್ರೆ ಹುಷಾರು ಯಾರಾದ್ರೂ ಮಹಿಳೆಯರು ಓದಿ ಪಾಪ ಪತಿ ರಾಯರಿಗೆ ಪ್ರತಿದಿನ ಇದೆ ಶಿಕ್ಷೆ ಯಾದೀತು !!ಲೇಖನದ ಪ್ರತಿ ಪದ ಇಷ್ಟವಾಯಿತು.

Dr.D.T.Krishna Murthy. said...

ಹೋ ಹೋ ಹೋ
ಬಹಳ ಚೆನ್ನಾಗಿದೆ
ಗಂಡವಲಕ್ಕಿ --!
ಎಷ್ಟು ಸುಲಭ,ಎಷ್ಟು ರುಚಿ!
ನಾವು ಗಂಡಸರೇ ಲಕ್ಕಿ!
ಇನ್ನೂ ಏನಾದರೂ ,'ಗಂಡು'ರೆಸಿಪಿಗಳಿದ್ದರೆ ತಿಳಿಸಿ ಸಾರ್.
ಸಮಯಕ್ಕೊದಗುವ ಸಂಜೀವಿನಿ ಆಗುತ್ತೆ.ಬರಹ ಸಕತ್ತಾಗಿ,ರುಚಿಕರವಾಗಿದೆ.ಧನ್ಯವಾದಗಳು.

ಬಾಲು said...

avalakki chennagirutto bidutto gottilla, but nimma sense of humor thumba ishta aayitu. chennaagi bardiddiri.

baraha kushi kottitu.

PARAANJAPE K.N. said...

ಗ೦ಡವಲಕ್ಕಿ ರೆಸಿಪಿ ಚೆನ್ನಾಗಿದೆ. ಮಾಡಿ - ತಿ೦ದು ನೋಡಬೇಕೆನಿಸಿದೆ.

Guruprasad said...

ಹಾ ಹಾ,, ತುಂಬಾ ಚೆನ್ನಾಗಿ ಇದೆ,,, ಗಂಡವಲಕ್ಕಿ ರೆಸಿಪಿ ...

ಗುರು

Guruprasad said...

ಹಾ ಹಾ,, ತುಂಬಾ ಚೆನ್ನಾಗಿ ಇದೆ,,, ಗಂಡವಲಕ್ಕಿ ರೆಸಿಪಿ ...

ಗುರು

Manasa said...

superb sir :)

ಶಿವಪ್ರಕಾಶ್ said...

avalakki pavalakki, tam tum, tasku pusku.. channagittu sir :)

Subrahmanya said...

ತುಂಬ ಥ್ಯಾಂಕ್ಸ್ ಗುರುಗಳೆ.

ಒಂದು ಬೇಸರವೆಂದರೆ, ಇಲ್ಲಿ ಕೆಲವು ಮಹಿಳಾಮಣಿಗಳಿಗೆ ಈ ಅಡುಗೆ ಗೊತ್ತಾಯಿತಲ್ಲ ಎನ್ನುವುದು..:)

ಇನ್ನಷ್ಟು ಇಂತಹ ಪಾಕವಿಧಾನಗಳಿದ್ದರೆ ದಯವಿಟ್ಟು ತಿಳಿಸಿಕೊಡಿ.
ಹೆಂಡತಿಗೆ ತವರಿಗೆ ಹೋದಾಗ ತುಂಬ ಉಪಯೋಗವಾಗುತ್ತದೆ !.

ಸೂಪರ್ .

Snow White said...

Wow sir superaagide nimma recipe :)
nimma tips kooda tumba chennagide..naavu try madteevi avagavaga ..okay na sir ? :)tumba thanks :)

mcs.shetty said...

vov.. sir

gud receipe.............

ತೇಜಸ್ವಿನಿ ಹೆಗಡೆ said...

ಅಲ್ಲಾರೀ... ಬಾಯಲ್ಲಿ ನೀರೂರುವುದು ಗಂಡಸರಿಗೆ ಮಾತ್ರವೇ?!... ಹೆಂಗಸರಿಗೂ ರುಚಿರುಚಿಯಾದ ಸುಲಭ ಉಪಾಯದ ಅಡುಗೆಯನ್ನು ಮಾಡಿ ತಿನ್ನುವ ಯೋಗವಿದೆ :) ಖಂಡಿತ ಮಾಡಿ ನೋಡಬೇಕಿಗೆ ನಾನೂ ಈ ನಿಮ್ಮ ಗಂಡವಲಕ್ಕಿಯ.... ಹೆಸರಿಗೆ ಸರಿಯಾಗುವಂತೇ ನಮ್ಮವರಿಂದಲೇ ಮಾಡಿಸಿದರೆ ಹೇಗೆಂದೂ ಯೋಚಿಸುತ್ತಿರುವೆ :D :D

[ಮನೆ ಶಿಫ್ಟಿಂಗ್‌ನಿಂದಾಗಿ ಹೆಚ್ಚಿನ ಬ್ಲಾಗ್‌ಗಳಿಗೆ ಭೇಟಿ ನೀಡಿರಲಿಲ್ಲ.. ಈಗ ಒಂದೊಂದಾಗಿ ಓದುತ್ತಿರುವೆ.]

sunaath said...

ಗಂಡಸರಿಗೂ ಪಾಕಕಲೆ ಗೊತ್ತಿರಬೇಕೆಂದು, ಸಾಗರಿಯವರಿಗೆ ಸ್ಪಂದನರೂಪದಲ್ಲಿ ಕೊಚ್ಚಿಕೊಂಡವರಲ್ಲಿ ನಾನೂ ಒಬ್ಬ. ಈಗ ಅದನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸಿ ಎಂದು ಹೇಳುತ್ತಿದ್ದೀರಲ್ಲ, ಗುರುವೇ! ಇದು ಸ್ವಲ್ಪ ಕಠಿಣ ಕಾರ್ಯವಾಯ್ತು ನೋಡಿ!

ವಿ.ರಾ.ಹೆ. said...

ಬಹಳಾ ಉಪಕಾರ ಆಯ್ತು... ಹೀಂಗೆ ಇನ್ನೊಂದಿಷ್ಟು ಬರ್ತಾ ಇರ್ಲಿ. :-)

ಸುಬ್ರಮಣ್ಯ said...

ಚನ್ನಾಗಿದೆ

Dileep Hegde said...

ಹಹಹ.. ಭರ್ಜರಿಯಾಗಿದೆ ಗಂಡ ಅವಲಕ್ಕಿ

ವನಿತಾ / Vanitha said...

ಹ್ಹಾ ಹ್ಹಾ..ಬಲು ಟೇಷ್ಟಿಯಾಗಿದೆ ನಿಮ್ಮ ಗಂಡವಲಕ್ಕಿ ರೆಸಿಪಿ ..:))

AntharangadaMaathugalu said...

ರೆಸಿಪಿ ಏನೋ ಸಕತ್ತಾಗಿದೆ. ಆದರೆ ಮಾಡುವ ವಿಧಾನ ವಿವರಿಸುವಲ್ಲಿ... ಅದೇಕೆ ಮತ್ತೆ ಮತ್ತೆ ಚಾಕುವಿನಿಂದ ಹೆಚ್ಚಿ ಎಂದು ಪ್ರಾಮುಖ್ಯತೆ ಕೊಟ್ಟಿದ್ದೀರಿ. ಮಾಡಲು ಪ್ರಯತ್ನಿಸುವ ಗಂಡಸರೆಲ್ಲಾದರೂ ಹೆಣ್ಣು ಮಕ್ಕಳು ಉಪಯೋಗಿಸುವ ಈಳಿಗೆ ಮಣೆ ಮುಟ್ಟಿಯಾರೆಂಬ ಭಯವೇ....? ಹ್ಹ ಹ್ಹ ಹ್ಹ... ಓದಿ ನಿಜಕ್ಕೂ ನಾನೂ ಮಾಡಿನೋಡೋಣ ಎಂದುಕೊಂಡೆ.

ಶ್ಯಾಮಲ

Anonymous said...

ವಾಹ್.... ತುಂಬ ಚೆನ್ನಾಗಿದೆ ನಿಮ್ಮ ಗಂಡವಲಕ್ಕಿ...
ಹಾಸ್ಯದ ಜೊತೆಗೆ, ತಯಾರಿಸುವ ವಿಧಾನನಕ್ಕೆ ಸೂಕ್ತವಾದ ಸೂಚನೆಗಳನ್ನು ನೀಡಿರುವುದಕ್ಕೆ ನಿಮಗೆ ತುಂಬ ಧನ್ಯವಾದಗಳು,
ನಿಮಗೆ ತಿಳಿದಿರುವ ಇನ್ನಷ್ಟು ಅಡುಗೆ ವಿಧಾನಗಳನ್ನು ತಿಳಿಸಿ.

© ಹರೀಶ್ said...

ಸೀತಾರಾಮ್ ಸರ್,
ನಿಮ್ಮ ಗಂಡವಲಕ್ಕಿ ಬಹಳ ಚೆನ್ನಾಗಿದೆ

ಮಂಗಳೂರಿನ ಕೆ.ಟಿ.(ಟೀ) ತರಹ ನಿಮ್ಮ ಗಂಡ ಅವಲಕ್ಕಿಯ ಮುಂದೊಂದು ದಿನ ದೊಡ್ಡ ಸುದ್ದಿಯಾಗಬಹುದು.

ಹೊನ್ನ ಹನಿ
http://honnahani.blogspot.com/

Shashi jois said...

ಚೆನ್ನಾಗಿದೆ ನಿಮ್ಮ ಪಾಕ ರಸಾಯನ .
ಗಂಡ ಅವಲಕ್ಕಿ ಆಗ್ತಾನೆ ಆಡುಗೆ ಮಾಡಲು ಬಂದ್ರೆ ಅಲ್ವ?

Sum said...

Wah wah!!!
Super agide nimma recipe :)

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಎಲ್ಲ ಸಹೃದಯ ಓದುಗರಿಗೆ ನನ್ನ ವ೦ದನೆಗಳು.

-ಮನದಾಳದ ಪ್ರವೀಣರೇ, ರೆಸಿಪಿ ಸುಲಭದ್ದು ಅದಕ್ಕೆ೦ದೆ ಗ೦ಡಸರಿಗೆ ಪೆಟೆ೦ಟ್ ಮಾಡಿರೋದು! ಹೆಣ್ಣುಮಕ್ಕಳಿಗೆ ಓದಿ ಹೊಟ್ಟೆ ಉರಿಸಿಕೊಳ್ಳಲು ಮಾತ್ರ. ಇನ್ನು ರಿಯಾಯತಿ ಕೊಟ್ಟರೇ ಅದೀತಾ ಮಾರಾಯರೇ.

-ಸುಮಾ ಮೇಡಮ್ ಹೆಣ್ಣುಮಕ್ಕಳು ಮಾಡಿಸಿ ತಿನ್ನಬಹುದು ಆದರೆ ಮಾಡೋ ಹಾಗಿಲ್ಲಾ!

-ಸುಮನ ಮೇಡಮ್ ರೆಸಿಪಿ ರುಚಿ ಹೇಗಿರಲಿ ಬಿಡಲಿ ಓದೋ ರುಚಿ ಸಿಗಲಿ ಅ೦ತಾ ನಾನೇ ಬರಹ್ಕ್ಕೆ ಸ್ವಲ್ಪ್ ವಗ್ಗರ್ಣೆ ಹಾಕಿದ್ದೆ ನಿಮಗಿಷ್ತ ಅಯ್ತಲ್ಲಾ ಅದೇ ಸ೦ತೋಶ.

-ಚುಕ್ಕಿಚಿತ್ತರದ ವಿಜಯಶ್ರೀ ಮೇಡಮ್ ಇ ಪ್ಲಾನನ್ನ ನಿಮ್ಮ ನಿಮ್ಮ ಮನೆಯವರ ಮುಖಾ೦ತರ ಮಾಡಿಸಿ ರುಚಿ ಸವಿಯಲ್ಲಿಕ್ಕೆ ಅಡ್ಡಿ ಇಲ್ಲ. ಒಲೆ ಹಚ್ಚದೇ ಅಡಿಗೆ ಮಾಡ್ತಾರೇ ಅನ್ನೋ ಅಪಕೀರ್ತಿ ಹೆ೦ಗಳೆಯರಿಗೆ ಬರಬಾರದು ನೋಡಿ ಅದಕ್ಕೆ ಗ೦ಡಸರಿಗೆ ಮಾತ್ರ ಎ೦ದಿದ್ದು.

-ಸಾಗರಿ ಮೇಡ೦ ನೀವೊ೦ದು ಹೆಜ್ಜೆ ಮು೦ದೆ ಇಟ್ಟು, ಪ್ರಯೋಗಿಸಿ, ರುಚಿ ನೋಡಿ ಬೆನ್ನು ತಟ್ಟಿದ್ದಿರಾ ಧನ್ಯವಾದಗಳು. ನಿಮ್ಮ ಪ್ರಶ೦ಷೆ ಸಿಕ್ಕ ಮೇಲೆ ಇನ್ನೇನು ನಮಗೆ!!

-ನಮ್ಮೊಳಗಿನ್ನೊಬ್ಬ ಬಾಲುರವರೇ ನಕ್ಕು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮನೆಯವರಿಗೆ ಇದನ್ನು ತೋರಿಸದೇ ನೀವು ಎಚ್ಚರವಿರಿ ಸಾಕು!! ಅಲ್ಲವಾ!!

-ಕೃಷ್ನ ಮೂರ್ತಿ ಡಾಕ್ತ್ರೇ ಸಮಯೊಕ್ಕೊದಗುವ ಸ೦ಜೀವಿನಿಗಳು ಇನ್ನೂ ಇವೆ ನಿಮ್ಮ ಈ ಪ್ರೋತ್ಸಾಹದಿ೦ದ ಮು೦ದೆ ಇನ್ನು ಬರುತ್ತವೇ೧ ಹುಷಾರಿರಿ!

-ಅವಲಕ್ಕಿನೂ ಚೆನ್ನಗಿರುತ್ತೆ ಬಾಲುರವರೇ ಪ್ರಯತ್ನ ಪಡಿ. ನೀವು ಓದಿ ನಕ್ಕಿದ್ದಕ್ಕೆ ಸ೦ತೋಷ. ಹೀಗೆ ಬರುತ್ತಿರಿ.

-ಧನ್ಯವಾದಗಳು ಪರಾಅ೦ಜಪೆ ಗುರುಗಳೇ

-ಧನ್ಯವಾದ ಗುರುಪ್ರಪ೦ಚದ ಗುರುಪ್ರಸಾದರೇ.

-ನೆನಪಿನ ಮಾತು ಮಧುರದ ಒಡತಿ ಮಾನಸರವರೇ ಮೆಚ್ಚಿದ್ದಕ್ಕೆ ಧನ್ಯವಾದಗಳು. ವಸತಿನಿಲದಲ್ಲಿದ್ದು ಓದುತ್ತಿರುವ ಮದುವೆಯಾಗದ ಹುಡುಗಿಯರಿಗೆ ಈ ತಿ೦ಡಿ ಮಾಡಲು ರಿಯಾಯಿತಿ ನೀಡುವಲ್ಲಿ ನಿಮ್ಮ ದೃಷ್ಟಾ೦ತದೊ೦ದಿಗೆ ಪ್ರಯತ್ನಿಸುತ್ತೆನೆ :-)

-ಶಿವಪ್ರಕಾಶರವರ್‍ಏ ಚೆನ್ನಗಿತ್ತು ಅ೦ತೀರಾ ತಸ್ಕು -ಪುಸ್ಕು ಟಮ್ ತುಮ್ ಅ೦ತೀರಾ.... ಲಿ೦ಬೆ ರಸ ಕಡಿಮೆ ಆಗಿರ್ಬೆಕು ನೋಡಿ ಗ್ಯಾಸ ಆದಾಗಿದೆ ಹೊಟ್ಟೆಲ್ಲಿ!!

-ಸುಬ್ರಮಣ್ಯ ಗುರುಗಳೆ ಬೇಸರಮದ್ಕೋಬೇಡಿ ಅದು ಗೊತ್ತಿದ್ದರೂ ಅವರಿಗೆ ಮಾಡೋಕಾಗಲ್ಲಾ ನೋಡಿ ! ಅದು ಮರ್ಯಾದೆ ಪ್ರಶ್ನೇ ಬೇರೆ! ಇನ್ನು ಇವೆ. ಆವಾಗಾವಾಗ ಹಾಕ್ತಿನಿ. ಒಮ್ಮೆ ಹೇಳಿದ್ರೆ ಎಲ್ಲಾ ಪ್ರಯೋಗಿಸಿ ಜನ ಹೊಟ್ಟೆ ಕೆಡಿಸ್ಕೊಬಾರ್ದು ನೋಡಿ... ಅವಾಗಾವಾಗ ಒವಾರಲಿ೦ಗ ಮಾಡೊಕ್ಕೆ ನನ್ನ ರೆಸಿಪಿ ಸಾಕು :-)

ಸಾಗರದಾಚೆಯ ಇಂಚರ said...

ಸರ್ ಚೆನ್ನಾಗಿದೆ
ಒಳ್ಳೆಯ ನಗೆ ಬರಹ

ಸೀತಾರಾಮ. ಕೆ. / SITARAM.K said...

-ಹಿಮಶ್ವೇತೆಯವರೇ ಮೆಚ್ಚಿಗೆಗೆ ಧನ್ಯವಾದಗಳು.(ಪ್ರಯತ್ನ ಮಾಡಿ ಆದರೇ ಗುಟ್ಟಾಗಿರಲಿ:-| )

- ಮೆಚ್ಚುಗೆಗೆ ಧನ್ಯವಾದಗಳು ಶೆಟ್ಟಿ ಮೇಡಮ್.

- ನಿಮ್ಮವರಿ೦ದಲೇ ಮಾಡಿಸಿ ನೋಡಿ ತೇಜಸ್ವಿನಿ ಮೇಡಮ್! ಚೆನ್ನಾಗಿರುತ್ತೆ!

-ಸುನಾಥ ಅಣ್ಣಾವ್ರೇ ನೀವು ಅಡುಗೆ ಮಾಡಬೇಕೆ೦ದು ಹೇಳಿ ಗ೦ಡಸರನ್ನ ತೊ೦ದರೆಲ್ಲಿ ಹಾಕಿದ್ರಿ! ನಾನು ಸುಲಭದ ಅಡುಗೆ ಹೇಳಿ ತೊ೦ದರೆ ಕಡಿಮೆ ಮಾಡ್ತಾ ಇದ್ದಿನಿ ಜೊತೆಗೆ ನಿಮ್ಮ ಮತು ಉಳಿಯುತ್ತೆ. ನಿಮ್ಮ ಮಾತಿಗೆ ಓಟು ಹಾಕಿದ ನನಗೂನೂ ಬೆಲೆ ಉಳಿಯುತ್ತೆ ಅಲ್ವರಾ....

-ವಿ.ರಾ.ಹೆ ಯವರೇ ಇನ್ನೂ ತಿ೦ಡಿಗಲೂ ಬರುತ್ತಾವೆ ಹುಷಾರಾಗಿರಿ !!ಹೊಟ್ಟೆ ಕೆಟ್ಟಿತು!!!

-ಸುಬ್ರಮಣ್ಯ ಮಾಚಿಕೊಪ್ಪ -ರವರೇ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಾ ಇರಿ.

- ದಿಲೀಪ ಹೆಗ್ಡೆಯವರೇ ತಿ೦ದ ಮೇಲೆ ಇನ್ನೂ ಭರ್ಜರಿಯಾಗಿರುತ್ತೆ -ಏನೂ ಎ೦ದು ಕೇಳಬೇದಿ ಮತ್ತೆ!!

-ವನಿತಾ ಮೇಡಮ್ ಬರಹ ಟೆಸ್ಟೀಯಾಗಿದೆಯೋ? ಅಥವಾ ತಿ೦ಡಿನೋ?

-ಶ್ಯಾಮಲಾ ಮೇದಮ್ ಚಾಕು ಚಾಕು ಅ೦ಥಾ ಪದೇ ಪದೇ ಹೇಳಿದ್ದು ಯಾಕ೦ದ್ರೆ ಹೆರೆಮಣೆ ಹೆ೦ಗಸರದ್ದು ಮತ್ತೆ ಅದನ್ನು ದಿನಿ೦ ಮೇಜಲ್ಲಿ ಉಪಯೋಗಿಸೋಕ್ಕೆ ಆಗೊಲ್ಲಾ ನೋಡಿ ಅದಕ್ಕೆ. ಅದಾದರೇ ನೆಲಕ್ಕೆ ಕುಡಬೇಕು ಅಡಿಗೆ ತಟ್ಟೆ ಮತ್ತೆ ಸರ್ಕಸ್ ಅಲ್ವಾ... ತಾವೂ ಗುರುತು ಮಾಡಿಬಿಟ್ರಿ ನಮ್ಮ ಮೈಗಳ್ಳತನದ ಪರಾಕಾಷ್ಠೆನ್ನ. ಧನ್ಯವಾದಗಳು.

-ಅನಾನ್ಮಧೇಯ ಮಿತ್ರರೇ ಧನ್ಯವಾದಗಳು ಮೆಚ್ಚಿದ್ದಕ್ಕೆ. ಹೆಸರು ಗೊತ್ತಾಗಿದ್ರೆ ಕುಷಿ ಇನ್ನು ಹೆಚು ಆಗಿರೋದು. ಇನ್ನೂ ಬರ್ಥಾವೆ ಬಿಡಿ.

-ಹೊನ್ನ ಹನಿಯ ಹರ್‍ಈಶರವರೇ ನಾನ್ನ ಅ೦ಕಣಕ್ಕೆ ಸ್ವಾಗತ. ಮೆಚ್ಚಿ ಬರೆದದ್ದಕ್ಕೆ ಧನ್ಯವಾದಗಳು. ಪುತ್ತುರು-ಮ೦ಗಳುರು ರ್‍ಓಡಿನಲ್ಲಿನ ಕೆಟಿ ತರಾ ಸುದ್ಧಿ ಆದರೇ ಪರ್ವಾಗಿಲ್ಲಾರಿ... ಮತ್ತೆನಾದ್ರೂ ಅಗ್ಗಿ ಸುಧ್ಧಿ ಆದರೇ ಅ೦ಥಾ ಹೆದರಿಕೆನೂ ಇದೆ....

-ಶಶಿ ಮೇಡಮ್ ಪ್ರತಿಕ್ರಿಯೆಗೆ ಧನ್ಯವಾದಗಳು. ಗ೦ಡ ಅದುಗೆಮನೆಲ್ಲಿ ಅವಲಕ್ಕಿ ಆಗಬಾರದೆ೦ದು ನನ್ನ ಈ ಪ್ರಯತ್ನ!! ಅಲ್ವರಾ....

- ಸುಮಾ ಮೇಡಮ್ ನಿಮ್ಮ ಅಡುಗೆ ಮನೆ ಬಿಟ್ಟು ನನ್ನ ಅಡುಗೆ ಪ್ರಯತ್ನ ನೋಡೋಕೆ ಬ೦ದು ಮೆಚ್ಚುಗೆ ನೀಡಿದ್ದಕ್ಕೆ ಸ೦ತೋಷ. ನಿಮ್ಮ ಅಡುಗೆ ಮನೆ ಶ್ರಮ ನೋಡಿ ನಿಮಗೆ ಅವಾಗಾವಾಗ ಸ್ವಲ್ಪ ಬಿಡುವು ಮಾಡಿಸೊಕ್ಕೆ ನನ್ನ ಈ ಪ್ರಯತ್ನ -ಗ೦ಡುಸರಿಗೆ ಸುಲಭದ ಅಡುಗೆ ಹೇಳಿ ಅಡುಗೆ ಮನೆಗೆ ಸೆಟ್ ಮಾಡೊಕ್ಕೆ!!

-ಏನು ಡಾ! ಗುರುಮುರ್ತಿಯವರೇ ಸಿರಿಯಸ್ಸಾಗಿ ಅಡುಗೆ ಬಗ್ಗೆ ಬರೆದ್ರೆ ನಗೆಲೇಖನ ಅನ್ನೋದಾ... ನ್ಹೋಗಲಿ ನಕ್ಕಿದ್ದಕ್ಕೆ ಧನ್ಯವಾದಗಳು. ಮಾಡಿ ತಿ೦ದು ನೋಡಿ ಅಮೇಲೆ ಮೆಚ್ಚುಗೆ ಹೇಳಿ ಎಷ್ಟಾದರೂ ನೀವು ಸೈ೦ಟಿಸ್ಟು ಬೇರೆ ಪ್ರಮಾಣಿಸಿ ನೋಡೇ ಹೇಳೋರು....

ಸವಿಗನಸು said...

ಗುರುಗಳೇ,
ತಡವಾಗಿ ಬಂದದ್ದಕ್ಕೆ ಎಲ್ಲಾ ಅವಲಕ್ಕಿ ಮುಗಿದೆ ಹೋಗೆ ಬಿಟ್ಟಿದೆ....
ಸಕ್ಕತಾಗಿದೆ.
ಮಹಿಳಾಮಣಿಗಳು ಸಹ ಟ್ರೈ ಮಾಡ್ತಾರೆ ಸಾರ್.......

V.R.BHAT said...

ನನಗೆ ಸರಿಸುಮಾರು ಹದಿನಾರು ವರುಷ ಗಂಡವಲಕ್ಕಿ ಮಾಡಿದ ಅನುಭವವಿದೆ, ಆದ್ಯತೆಯ ಮೇಲೆ ಎಲ್ಲಾದರೂ ಕೆಲಸ ಕೊಡಿಸಬಹುದೇ ? ಹಾಗಂತ ನಾನು ಒಂಟಿಯಲ್ಲ, ಜಂಟಿಯೇ, ಆದರೂ ಎಲ್ಲರೂ ಇರುವಾಗಲೇ ಒಗ್ಗರಿಸುವುದು ನನ್ನ ಗುಣ! ತುಂಬಾ ಚೆನ್ನಾಗಿದೆ, ಬಹಳ ಇಷ್ಟಪಟ್ಟಿದ್ದೇನೆ, ನಿಮ್ಮ ರಸಪಾಕಕ್ಕೆ ಅನಂತ ಕೋಟಿ ಪದ್ಮನಾಭ ಸಾರಿ ಅನಂತ ನಮಸ್ಕಾರಗಳು!ಧನ್ಯವಾದಗಳು

ದಿನಕರ ಮೊಗೇರ said...

soopar..... naanoo saha ee tarahada avalakkiya fan............ tumbaa tasty aagiratte idu.... namma kade, kobbariyannoo haakuttaare.....

shivu.k said...

ಸೀತಾರಾಂ ಸರ್,

ರೆಸಿಪಿ ಓದಿದೆ ತುಂಬಾ ಖುಷಿಯಾಯ್ತು. ನನ್ನಾಕೆ ಊರಿಗೆ ಹೋದಾಗ ಪ್ರಯತ್ನಿಸುತ್ತೇನೆ. ಇದೇ ರೀತಿ ನಾನೊಂದು ಕಲಿತಿದ್ದೇನೆ. ಅದನ್ನು ನಮ್ಮ ಬ್ಲಾಗ್ ಗೆಳೆಯರಿಗೆ ಆಡುಗೆ ವಿಚಾರದಲ್ಲಿ ಅನಾವೃಷ್ಟಿಯಾದಾಗ ಬ್ಲಾಗಿಗೆ ಏರಿಸುತ್ತೇನೆ.


ರೆಸಿಪಿಯ ಹೆಸರು ಭಲೇ ಇಷ್ಟವಾಯಿತು.
ಧನ್ಯವಾದಗಳು.

ಮನಸು said...

ಸೀತಾರಾಮ್ ಸರ್ ನಾನು ಲಕ್ಕಿ ಏಕೆ ಹೇಳಿ ಹಹಹ ನನ್ನ ಗಂಡ ಅವಲಕ್ಕಿ ಅದಕ್ಕೆ ಹಹಹ
ಸೂಪರ್ ಸರ್ ಈ ತರ ಬರಹ ಮತ್ತಷ್ಟು ಬರಲಿ, ನಾವೇನು ಕಲಿತುಕೊಳ್ಳೋಲ್ಲ, ಸುಮ್ಮನೆ ಓದುತ್ತೇವೆ.

PrashanthKannadaBlog said...

Nice one sir. I will try this :-) I have already tried preparing south Indian dishes in my own style :-)

ಸೀತಾರಾಮ. ಕೆ. / SITARAM.K said...

- ಸವಿಗನಸಿನ ಮಹೇಶರವರೇ ಚಿ೦ತೆ ಮಾಡಬೇಡಿ ಖಾಲಿ ಆದರೆ ಮತ್ತೆ ಮಾಡೋಣ ಇದು ಸುಲಭ ಅಲ್ವಾ ಮಾಡೊಕ್ಕೆ. ಹೆಣ್ಣ್ಮಕ್ಕಳು ಕಲ್ಕೊತಾರೆ ಅನ್ನೋ ಭಯ ಬೇಡಿ. ಗ೦ಡ-ಅವಲಕ್ಕಿ ಹೆಸರು ಇರೋದ್ರಿ೦ದ ಹೆ೦ಗಸರು ತಾತ್ಸಾರ ಮಾಡೋದು ಹೆಚ್ಚು! ಸು೦ದರ ಪ್ರತಿಕ್ರಿಯೆಗೆ ಧನ್ಯವಾದಗಳು.

-ವಿ.ಆರ.ಭಟ್ಟರೇ ತಮ್ಮ ತಮ್ಮ ಅನುಭವದ ಮು೦ದೆ ನಾನು ಕುಬ್ಜ. ಆದರೆ ಪುರಾತನ ಕಾಲದಲ್ಲಿ ಮಾಡಿದ್ದು ಅ೦ದರೆ ೧೯೮೪-೧೯೯೩ ವರೆಗೆ . ಆಮೇಲೆ ನಾನು ಮಾಡಿಲ್ಲ:-((. ಇದು ಕೆಲಸ ಇಲ್ಲದೋರು ಮಾಡೋ ಅಡುಗೆ ಆಗಿರೊ೦ದ್ರಿ೦ದ ಕೆಲಸಕ್ಕೆ ಇಟ್ಟುಕೊಳ್ಳುದು ಅಗೊಲ್ಲಾ ಅ೦ತಾ ಕೆಲಸವಿಲ್ಲದೆ ಅವಾಗಾವಾಗ ಮಾಡಿ ತಿನ್ನೋ ರುಚಿಹಿಡಿದ ಗ೦ಡುಗಳ ಪ್ರತಿಕ್ರಿಯೆ! ಮೆಚ್ಚಿ ಹರಸಿದ್ದಕ್ಕೆ ಧನ್ಯವಾದಗಳು ತಮಗೂ ಮತ್ತು ಶ್ರೀ ಅನ೦ತ ಪದ್ಮನಾಭರಿಗೂ!

-ದಿನಕರರವರೇ ತಿ೦ಡಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಕಾಯಿ ಅವಲಕ್ಕಿನೂ ನನ್ನ ಫ಼ೆವರಿಟ್ಟೇ! ನಾನು ಅವಲಕ್ಕಿ ಪ್ರಿಯ...

-ಚಾಯಚಿತ್ತರದ ಶಿವೂರವರೇ ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ಕಲಿತ ತಿ೦ಡಿ ಓದೋಕ್ಕೆ ಕಾಯ್ತಾ ಇದ್ದೆನೆ.

- ಮೃದುಮನಸ್ಸಿನ ಒಡತಿಯರೇ ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ಗ೦ಡ-ಅವಲಕ್ಕಿ ಯಲ್ಲಿನ ಗ೦ಡುಗಳು ಅನ್ನೋ ಶಬ್ದಕ್ಕೆ ನೀವು ಗ೦ಡ ಮಾಡಿಬಿಟ್ಟಿರಾ...ಪರ್ವಾಗಿಲ್ಲಾ ನೀವು ಲಕ್ಕಿನೇ ಮಹೇಶರು ಮಾಡಿ ತಿನಿಸಿದ್ರೇ...ತಮ್ಮ ಅಭಿಪ್ರಯ್ಯಕ್ಕೆ ಧನ್ಯವಾದಗಳು.

-ಪ್ರಶಾ೦ತರೆ ನನ್ನ ಬ್ಲೊಗ್-ಗೆ ಸ್ವಾಗತ ಮತ್ತು ಮೆಚ್ಚುಗೆಯ ಮಾತಿಗೆ ಧನ್ಯವಾದಗಳು.

nenapina sanchy inda said...

wow!!!! addilve!!!!
good for lazy woman like me !!
:-)
ಮಾಲತಿ ಎಸ್.

Uday Hegde said...

Super sir,

The way you presented it, is amazing....

Ashok.V.Shetty, Kodlady said...

ಸೀತಾರಾಮ್ ಸರ್,
ತಡವಾಗಿ ಪ್ರತಿಕ್ರಿಯಿಸುತಿದ್ದೇನೆ. ಕ್ಷಮೆ ಇರಲಿ....
ಗಂಡ ಅವಲಕ್ಕಿ ತುಂಬಾ ರುಚಿಕರವಾಗಿತ್ತು....ನಾನು ಟ್ರೈ ಮಾಡ್ತೀನಿ ಮನೇಲಿ.....ಧನ್ಯವಾದಗಳು...

ಮೌನ ವೀಣೆ said...

Super super