Saturday, March 13, 2010

ಗಾಳಿ ಗ೦ಧ -WAVES OF LOVE

( ಚಿತ್ರ - ತು೦ಗಭಧ್ರಾ ಆಣೆಕಟ್ಟಿನ ಹಿನ್ನೀರಿನ ಚಿತ್ರಣ -ಮುನಿರಾಬಾದನ ಕಡೆಯ ದ೦ಡೆಯಿ೦ದ ಕ೦ಡ೦ತೆ)

ಮಾನವನ ಜೀವನದ ನಿರ೦ತರ ತುಡಿತ "ಪ್ರೀತಿ"ಯನ್ನು ಹೊಂದುವದಾಗಿದೆ. "ಪ್ರೀತಿ" -ಈ ಎರಡಕ್ಷರ ಮಾನವನ ನಿರ೦ತರ ದಾಹ ಮತ್ತು ಹಸಿವಾಗಿದೆ. ಬಾಚಿದಷ್ಟು ಬೇಕೆನಿಸುವ ಮತ್ತು ತಿಂದಷ್ಟು ಹಸಿವು ಹೆಚ್ಚಿಸುವದು ಬಹುಶಃ ಪ್ರೀತಿಯೊಂದೆ. ಸಹೃದಯದ ತುಡಿತವೊಂದಿರದೆ, ಆ ತುಡಿತದ ಬೆಳಕಿರದೆ, ಬಾಳು ನಡೆಸುವದು ಸಾಧ್ಯವೇ? ಹಾಗೆ ನಡೆಸಿದರೆ ಅದು ಬಾಳೇ? ಅದಿರದೆ "ಬಾಳು" ಬಾಳಲ್ಲ, ಬರಿದೆ "ಬಳಲು".

ಮನಸ್ಸಿಗೆ ಸಂತೋಷವಾದಾಗ, ಎಲ್ಲರಿಗೂ, ಕಡೆ ಪಕ್ಷ ಒಬ್ಬರಿಗಾದರೂ ಹೇಳಿಕೊಂಡು ಖುಷಿ ಪಡಬೇಕೆಂದು ಯಾರಿಗೆ ತಾನೇ ಅನಿಸುವದಿಲ್ಲ? ಕಷ್ಟಗಳಲ್ಲಿ ನಮ್ಮನ್ನು ನಾವೇ ಕಳೆದುಕೊಂಡಾಗ, ಯಾರಾದರೊಬ್ಬರ ಮುಂದೆ ಆ ನೋವುಗಳನ್ನು ಹೇಳಿಕೊಂಡು, ಕಣ್ಣೀರುಗರೆದು, ಹೃದಯ ಹಗುರ ಮಾಡಿಕೊಳ್ಳಬೇಕೆಂದು ಯಾರಿಗೆ ತಾನೇ ಅನಿಸುವದಿಲ್ಲ? ಇದು ಎಲ್ಲ ಮಾನವರ ಹೃದಯ ಮಿಡಿತ. ಹೀಗನಿಸದ ವ್ಯಕ್ತಿಯೇ ಬಹುಶಃ ಇಲ್ಲ. ಕಠೋರ-ಕ್ರೂರಿ ಪಾತಕಿಯಲ್ಲೂ ಈ ಭಾವನೆ ಇದೆ. ಅವನಲ್ಲಿ ಖಂಡಿತ ತನ್ನಲ್ಲಿನ ಪಾತಕಿಯ ಬಗ್ಗೆ, ಆ ಪಾತಕಿ -ಪಾತಕಿಯಾದ ಅನಿವಾರ್ಯತೆಯ ಬಗ್ಗೆ ಅಥವಾ ಕಾರಣಗಳ ಬಗ್ಗೆ ಯಾರಿಗಾದರೂ ಹೇಳಿಕೊಳ್ಳುವ ತುಡಿತವಿರುತ್ತೆ ಅಥವಾ ಹೇಳಿಕೊಂಡು ಹೃದಯ ಹಗುರ ಮಾಡಿಕೊಳ್ಳುವ ಇಚ್ಛೆ ಇರುತ್ತೆ. ಇದೆ ಸಹೃದಯ ಮಾನವನು ತನ್ನ ಜೀವನದಲ್ಲಿ ತಡಕಾಡಿ ಹುಡುಕುವ ಅಂಶ. ಇದನ್ನೇ ನಾವು "ಪ್ರೀತಿ" ಅನ್ನೋದು. ಈ ಪ್ರೀತಿಯನ್ನೇ ನಾವು ಉಸಿರಾಡಿಸೋದು. ಏಕೆಂದರೆ ಇದೆ ಪ್ರೀತಿ ನಮ್ಮನ್ನು ಬದುಕಿಸಿಟ್ಟಿರೋದು. ಆದ್ದರಿಂದಲೇ ಬದುಕಿಗೆ "ಗಾಳಿ" ಎಷ್ಟು ಅವಶ್ಯವೋ "ಪ್ರೀತಿ"ಯೂ ಅಷ್ಟೇ ಅವಶ್ಯ.


ತೇಯ್ದರೆ ಪರಿಮಳ ಇನ್ನು ಜೋರಾಗಿ ಹರಡುತ್ತದೆ, ಸುಟ್ಟರೆ ಇನ್ನು ದಟ್ಟವಾಗಿ ಪರಿಮಳ ಆವರಿಸುತ್ತದೆ, ಇನ್ನು ಏನುಮಾಡದೇ ಹಾಗೇ ಬಿಟ್ಟರೆ ಮ೦ದವಾಗಿ ಗಾಳಿಯಲ್ಲಿ ಪರಿಮಳ ಹರಡಿಸುತ್ತಿರುತ್ತದೆ, ಹೀಗೆ ಕಷ್ಟ ಕೊಟ್ಟಷ್ಟು ತ೦ಪು-ಮುದದ ಸುವಾಸನೆ ನೀಡುವದು -"ಗ೦ಧ". ಪ್ರೀತಿಯೂ ಹಾಗೆ ಅಲ್ಲವೇ ತೇಯ್ದಷ್ಟು, ಸುಟ್ಟಷ್ಟು -ಸುವಾಸನೆ ಬೀರಿ ಮನಗಳ ಮುದಗೊಳಿಸುವದು. ಹೀಗಾಗಿಯೇ "ಪ್ರೀತಿ"ಯನ್ನು -"ಗ೦ಧ"ಕ್ಕೆ ಹೋಲಿಸಬಹುದು. ಪ್ರೀತಿಯು ಬದುಕಿನ ನಿರ೦ತರ ಅವಶ್ಯ
ತೆಯಾಗಿರುವದರಿಂದ ಅದನ್ನು "ಗಾಳಿ ಗಂಧ" ಎನ್ನಬಹುದು. ಪ್ರೀತಿಯ "ಗಾಳಿ ಗಂಧ" ಹೆಸರು, ಅದರ ಅವಶ್ಯಕತೆಯನ್ನು ಗಾಳಿ ಸ೦ಕೇತದ ಮುಖಾ೦ತರವಾಗಿ ಹಾಗೂ ಅದರ ವಸ್ತುವನ್ನು ಅ೦ದರೆ ಪರಿಮಳ-ಸುವಾಸನೆಯ ನಿಟ್ಟಿನಲ್ಲಿ ಪ್ರೀತಿಯ ಚಿತ್ರಣವಾಗಿ‌ ಅಭಿವ್ಯಕ್ತಿಸುವ ಒ೦ದು ಸು೦ದರ ಉಪಮೇಯ.

ಹೇಗೆ 'ಗಾಳಿ"ಯನ್ನು ನೋಡಲಿಕ್ಕಾಗದೇ, ಮುಟ್ಟಲ್ಲಿಕ್ಕಾಗದೇ, ಮಾತಿನಿ೦ದ ಅದರ ರೂಪು ನೀಡಲಾಗದೇ, ಕೈಯಿ೦ದ ತೆಗೆದುಕೊಳ್ಳಲಾಗದೇ, ಅದರ ತ೦ಪು ಮತ್ತು ಜೀವಧಾರೆಯನ್ನು ನಾವು ಪಡೆಯುತ್ತೇವೆಯೋ ಹಾಗೇ "ಪ್ರೀತಿ". ಹೃದಯ-ಹೃದಯದ ನಡುವಿನ ಈ ಪ್ರೀತಿಯ ಮಿಡಿತ ಪ೦ಚೇ೦ದ್ರಿಯಗಳ ಅರಿವನ್ನೂ ಮೀರಿ ಪವನರೂಪಿ೦ದೇ ಭಾವಹೊರಹೊಮ್ಮಿಸುತ್ತದೆ. ಆದ್ದರಿ೦ದಲೇ "ಗಾಳಿ-ಗ೦ಧ" ಶಬ್ದ ಪ್ರೀತಿಯ ಪರಕಾಷ್ಠತೆಯ ನೈಜ್ಯರೂಪಿನ ಅರಿವು ಮೂಡಿಸುವ ಒ೦ದು ಸು೦ದರ ಶಬ್ದ. ಧಾರವಾಡದ ಕರ್ನಾಟಕ ಕಾಲೇಜಲ್ಲಿ ಓದುತ್ತಿದ್ದಾಗ ಪೂಜ್ಯಗುರುಗಳಾದ ಶ್ರೀ.ಪ೦ಚಾಕ್ಷರಿ ಹೀರೆಮಠರೂ ಹುಟ್ಟು ಹಾಕಿದ ಈ ಸು೦ದರ "ಗಾಳಿಗ೦ಧ" ಶಬ್ದ (ಮುನಿ೦.ರೂಪಚ೦ದ್ರರ ಉರ್ದು ಕವಿತೆಗಳನ್ನು ಅನುವಾದಿಸಿದ ಪುಸ್ತಕಕ್ಕೆ ಕೊಟ್ಟ ಹೆಸರಿನ ಶಬ್ದ) ನನ್ನ ಮನಸೂರೆಗೊಳಿಸಿದ್ದು ಬಹುಶಃ ಮೇಲ್ಕಾಣಿಸಿದ ನಾನು ಅರ್ಥೈಸಿದ ಸ೦ಕೇ
ಗಳಿ೦ದಲೇ ಇರಬಹುದು.

ಯಾವಾಗ ಪ್ರೀತಿ ತೀಕ್ಷ್ಣವಾಗಿ ಅಭಿವ್ಯಕ್ತಿಗೊ೦ಡಾಗ ಅದನ್ನು "ಮ೦ದಾನಿಲ ಗ೦ಧ" ( Breeze of Love ) ವೆನ್ನಬಹುದಲ್ಲವೇ!


17 comments:

sunaath said...

ಸೀತಾರಾಮರೆ,
ಆಪ್ತಪ್ರಬಂಧದ ಒಂದು ಉತ್ತಮ ಮಾದರಿಯನ್ನು ನೀವು ‘ಗಾಳಿ ಗಂಧ’ದಲ್ಲಿ ಕೊಟ್ಟಿದ್ದೀರಿ.ಮನಸ್ಸನ್ನು ಪ್ರೀತಿಯ ಉಲ್ಲಾಸದಿಂದ ತುಂಬುವ ಲೇಖನವಿದು.

ಸೀತಾರಾಮ. ಕೆ. / SITARAM.K said...

ಧನ್ಯವಾದಗಳು ಸುನಾಥರೇ. ಕಾಲೇಜಿನ ಸಮಯದಲ್ಲಿ ಪ೦ಚಾಕ್ಷರಿ ಹೀರೇಮಠರ "ಗಾಳಿ-ಗ೦ಧ" ಅನುವಾದಿತ ಕವನ ಸ೦ಕಲನದ ಹೆಸರು. ಆಗ ಆ ಶಬ್ದದಿ೦ದ ಪ್ರಭಾವಿತನಾಗಿ ಬರೆದ ಪ್ರಭ೦ಧ ಇದು. ಮೊನ್ನೆ ಹಳೆ ಕಡತಗಳನ್ನು ಹೆಕ್ಕಿದಾಗ ಸಿಕ್ಕಿತು ಅದನ್ನು ಇಲ್ಲಿರಿಸಿದ್ದೆನೆ. ಇನ್ನು ಹಲವಾರಿವೆ.
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಚುಕ್ಕಿಚಿತ್ತಾರ said...

ನಿಜ ಸರ್..
ಪ್ರೀತಿ ಆವರಿಸಿಕೊಳ್ಳುವುದನ್ನು ಅನುಭವಿಸಬಹುದೆ ಹೊರತೂ ನೋಡಲು ಆಗದು.. ಗಾಳಿಯ೦ತೆಯೆ...!!!

Subrahmanya said...

ಗುರುಗಳೇ,
ಇನ್ನೂ ಇರುವ ಹಲವಾರು ವಿಷಯಗಳನ್ನು ಹೆಕ್ಕಿ ಬರೆಯಿರಿ. ಇಂತಹ ಬರಹಗಳು ಮನಸ್ಸನ್ನು ಮುದಗೊಳಿಸುತ್ತದೆ.

ಮನಮುಕ್ತಾ said...

ತು೦ಬಾ ಚೆ೦ದದ ಲೇಖನ..ಪ್ರೀತಿಗೆ ಕೊಟ್ಟ ಉಪಮೆ ಕೂಡ ಸು೦ದರವಾಗಿದೆ.

V.R.BHAT said...

ಲೇಖನ ಸುಂದರವಾಗಿದೆ, ಇನ್ನೂ Analytical ಆಗಿದ್ದರೆ ಪ್ರಬಂಧ ಅನ್ನಿಸಬಹುದಿತ್ತೇನೋ ಅಂತ ನನ್ನ ಅನಿಸಿಕೆ. ಆದರೆ 'ಗಾಳಿ-ಗಂಧ' ಒಂದು ಅನುಭವಿಸಿ ತಿಳಿಯಬೇಕಾದ ಪ್ರದೇಶ ಸಮೀಕ್ಷೆಯಂತಿದೆ, ಇನ್ನೂ ಅನೇಕ ಇನ್ನೂ ವಿಸ್ತ್ರತ ಬರಹಗಳು ಬರಲಿ, ಧನ್ಯವಾದ

ಮನಸು said...

tumba aaptavaagi chitrisiddeeri...

ದೀಪಸ್ಮಿತಾ said...

ಪ್ರೀತಿಯನ್ನು ವರ್ಣಿಸಿದ ರೀತಿ ಚೆನ್ನಾಗಿತ್ತು. 'ಗಾಳಿ-ಗಂಧ' ಲೇಖನದಿಂದ ಪ್ರಭಾವಿತರಾಗಿ ಉತ್ತಮ ಲೇಖನ ಕೊಟ್ಟಿದ್ದೀರಿ

Guruprasad said...

ತುಂಬಾ ಆತ್ಮೀಯ ಹಾಗೆ ಅರ್ಥಪೂರ್ಣ ಬರಹ.... ಪ್ರೀತಿ ಎಂಬುದನ್ನ ಗಾಳಿ ಗಂಧ ಕ್ಕೆ ಹೋಲಿಸಿ... ತುಂಬಾ ಚೆನ್ನಾಗಿ ವಿವರಿಸಿ ಬರೆದಿದ್ದೀರ...ಮತ್ತಷ್ಟು ಇಂಥ ಲೇಖನಗಳು ನಿಮ್ಮ ಬ್ಲಾಗ್ ಮೂಲಕ ಬರಲಿ..
guru

ಜಲನಯನ said...

ಸೀತಾರಂ ಸರ್ ಏನಿದು ಭೂಗರ್ಭದ ಖನಿಜಗಳ ಖನನ ನಿಮ್ಮ ವ್ಯವಸಾಯ...ಆದ್ರೆ ಪ್ರೀತಿ ಪ್ರೇಮ ಗಳ ಈ ಪರಿ ಖನನ...ವಾವ್ ಎಲ್ಲಿತ್ತು ಹ್ಯಾಗಿಟ್ರೀ ಈ ಪರಿ ಗಮನ.....ಚನ್ನಾಗಿ ಮೂಡಿದೆ ವಿಶ್ಲೇಷಣೆ.....ಅಭಿನಂದನೆಗಳು.

ಮನದಾಳದಿಂದ............ said...

ಅದ್ಭುತ ಕಲ್ಪನೆ! ಪ್ರೀತಿಯನ್ನು ಗಾಳಿಗೆ ಹೋಲಿಸಿರುವುದು ಉತ್ತಮ ಪರಿಕಲ್ಪನೆ. ಪ್ರೀತಿಯನ್ನು ಗಾಳಿಯಂತೆ ಅನುಭವಿಸಬಹುದೇ ಹೊರತು ನೋಡಲು ಅಥವಾ ಮುಟ್ಟಲು ಆಗುವುದಿಲ್ಲ. ನಿಮ್ಮ ಬರವಣಿಗೆಗಳು ಹೀಗೆ ಬರುತ್ತಿರಲಿ.

Snow White said...

nimma maatugalu nijakku sathya sir..tumba olleya lekhana.. :) :)


Suma

Ranjita said...

ತುಂಬಾ ಚೆನ್ನಾಗಿದೆ ಸರ್ ... ಪ್ರೀತಿ ಅನ್ನೋದು ಏನೆಲ್ಲಾ ಅಲ್ವ !
ನಿಮ್ಮ ಹೋಲಿಕೆ ಮತ್ತೆ ಲೇಖನ ತುಂಬಾ ಚೆನ್ನಾಗಿದೆ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ತುಂಬಾ ಚೆನ್ನಾಗಿದೆ ಸರ್.i liked the title "ಗಾಳಿ ಗ೦ಧ -WAVES OF LOVE" ಅಭಿನಂದನೆಗಳು.

mcs.shetty said...

Hello Sir

GUdmorning....

Good one Sir.

RAGHAVENDRA R said...

ಪ್ರೀತಿ... ಪ್ರೀತಿ ಮಾತು..
ಇದ್ದಲ್ಲಿ, ಯಾವ ಕಿನ್ನರಲೋಕದ ಅವಶ್ಯಕತೆ ಇಲ್ಲ.
ಮನದನ್ನೆ.. ಜೊತೆಯಲ್ಲಿದ್ದರೆ ಸಾಕು
ಯಾವ ಚಂದ್ರಚಕೋರಿಯು ಬೇಕಿಲ್ಲ.

ಅದು ಪ್ರೀತಿಯ ಮಾಯೆ. ನೀವೆ ಹೇಳಿದಂತೆ ಪ್ರೀತಿ ಇಲ್ಲದ ಬದುಕು ಊಹಿಸಲು ಸಾಧ್ಯವೇ ಇಲ್ಲ. We LOVE all...

ಹೌದಲ್ಲವೇ ಸಾರ್...

ಸೀತಾರಾಮ. ಕೆ. / SITARAM.K said...

ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲ ಓದುಗಮಿತ್ರರಿಗೂ ಧನ್ಯವಾದಗಳು.