Friday, March 12, 2010

ಹುಚ್ಚರಾರು ?

"ಅಪ್ಪಾ"

"ಏನ ಮರೀ"

"ಬಟ್ಟೆ ಹಾಕಿಕೊಳ್ಳದವ್ರೆಲ್ಲಾ ಹುಚ್ಚ್ರ?"

"ಹೌದು ಮರೀ"

"ಅವ್ರೆಕ್ಯೇ ಹುಚ್ಚರು?"

"ಯಾಕೆ೦ದ್ರೆ ಎಲ್ಲರೂ ಬಟ್ಟೆ ಹಾಕ್ಕೊಂಡಿರುವಾಗ ಅವರು ಹಾಕ್ಕೊಂಡಿರೋಲಲ್ವಾ ಅದಕ್ಕೇ "

"ಮನುಷ್ಯಾನು
ಎಂಬತ್ತು ಕೋಟಿ ಜೀವರಾಶಿಲ್ಲಿ ಒಬ್ಬನಲ್ವಾ"

"ಹೌದು ಮರೀ"

ಹಾಗಾದ್ರೆ
ಎಂಬತ್ತು ಕೋಟಿ ಜೀವರಾಶಿಲ್ಲಿ ಯಾವ ಜೀವಿನು ಬಟ್ಟೆ ಹಾಕಿ ಕೊಳ್ಳೋಲ್ಲ, ಮತ್ತೆ ಮನುಷ್ಯ ಜೀವಿ ಒ೦ದೇ ಹಾಕ್ಕೊಳ್ಳೋದು, ಅ೦ದ್ರೆ-ಬಟ್ಟೆ ಹಾಕಿ ಕೊಳ್ಳೋರು -ಹುಚ್ಚರು ಹಾಗೂ ಹಾಕಿಕೊಳ್ಳದವರು ಜಾಣರಲ್ವಾ??!!"

"ಗೊತ್ತಿಲ್ಲಾ ಮರೀ "

17 comments:

sunaath said...

ಹಾಹ್ಹಾ! ಯಥಾರ್ಥವಾಗಿ ಹೇಳಿದಿರಿ!

ಮನಸಿನಮನೆಯವನು said...

'ಸೀತಾರಾಮ.ಕೆ.' ಅವ್ರೆ..,

ಚೆನ್ನಾಗಿದೆ..
ನೀವು ಜಲನಯನ'ರ 'ಗೊತ್ತಿಲ್ಲಾ ಮಗು' ಅನುಸರಿಸುತ್ತಿರುವ ಹಾಗಿದೆ,..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Subrahmanya said...

ಗುರುಗಳೇ,
ಹ್ಹ..ಹ್ಹ... ತರ್ಕಬದ್ದವಾಗಿದೆ ಬಿಡಿ..:)

ಸಾಗರದಾಚೆಯ ಇಂಚರ said...

ಹಹಹ
ಸಕಾತ್ತಾಗಿದೆ
ಅಪ್ಪ ಮಗನ ಸಂಭಾಷಣೆ ಸುಮಾರು ಬ್ಲಾಗ್ ನಲ್ಲಿ ಚೆನ್ನಾಗಿ ಬರ್ತಾ ಇದೆ

PARAANJAPE K.N. said...

ಚೆನ್ನಾಗಿದೆ ನಿಮ್ಮ ತರ್ಕ

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಸತ್ಯವೇನೋ? ಯೋಚನೆ ಶುರುವಾಗಿಬಿಟ್ಟಿದೆ.
ಸೀತಾರಾಮ್ ಅವರೇ superb

Subrahmanya said...

ಗುರುಗಳೇ,

ನಿಮ್ಮ ಹ-ಬೇ ಪ್ರವಾಸ ಬೇಗ ಕೈಗೂಡಲಿ. ಮುನ್ನ ನನಗೊಮ್ಡು ಮಿಂಚೆ ಕಳುಹಿಸಿ..ಭೇಟಿಯಾಗೋಣ :)
subrahmanyahs@gmail.com

RAGHAVENDRA R said...

ಮಕ್ಕಳ ಮಾತಿಗೆ...(ಪ್ರಶ್ನೆಗೆ)
ಉತ್ತರವನ್ನೇ ನೀಡೋಕ್ಕಾಗಲ್ಲ....ಅಲ್ವಾ..! ಸಾರ್

V.R.BHAT said...

ಜಗತ್ತಿನ ಜೀವರಾಶಿಗಳು ಮುಕ್ಕೋಟಿಯಲ್ಲ,ಬದಲಿಗೆ ನಮ್ಮಲಿ ವಾಡಿಕೆಯಲ್ಲಿ ಹೇಳುತ್ತಾರೆ -'ಇರುವೆ ಎಂಬತ್ತು ಕೋಟಿ' ಅಂದ್ರೆ ಅಮೀಬಾದಿಂದ ಹಿಡಿದು, ಅಣುವಿನಿಂದ ಹಿಡಿದು ಎಲ್ಲಾ ಜೀವ ಇರುವ ಅಣುಕಣಗಳನ್ನೂ ಲೆಕ್ಕಹಾಕಿದರೆ ಎಂಬ್ಬತ್ತು ಕೋಟಿ ಆಗುತ್ತದೆ ಅಂತ ಒಂದು ಅಭಿಪ್ರಾಯ, ಆದ್ರೆ ದೇವತೆಗಳು ಮುಕ್ಕೋಟಿ ಎಂದಿದ್ದಾರೆ ಹಿರಿಯರು, ಇದು ಹೇಗೆ ಇದ್ರೂ ಮಗುವಿನ ಮೂಲಕ ನೀವು ಹೇಳಹೊರಟ ತತ್ವ ಬಹಳ ಸಮಂಜಸ-ಅರ್ಥಪೂರ್ಣ. ಒಂದರ್ಥದಲ್ಲಿ ಬಟ್ಟೆಯೇ ಇಲ್ಲದಿದ್ದರೆ ತುಂಡು ಬಟ್ಟೆ ಉಟ್ಟು ಕಥೆ ಸೃಷ್ಟಿಸಿ ಪಡ್ಡೆ ಹುಡುಗರ ಮನದಲ್ಲಿ ಕನಸಿನ ಅಲೆ ಹುಯಿಲೆಬ್ಬಿಸುವ ಮತ್ತು ಅದನ್ನೇ ಆದರ್ಶವೆಂದು ಬಿಂಬಿಸುವ ನಟೀ ಮಣಿಯರಿಗೆಲ್ಲ ಮಾರ್ಕೆಟ್ ಇರುತ್ತಿರಲಿಲ್ಲ, ಅಲ್ಲದೇ ಅವುಗಳ ವಾರ್ತಾಲಾಪ, ವ್ಯರ್ಥಾಲಾಪ ಯಾವುದಕ್ಕೂ ಆಸ್ಪದವಿರುತ್ತಿರಲಿಲ್ಲ ಅನಿಸುತ್ತಿದೆ, ಧನ್ಯವಾದಗಳು

ಮನದಾಳದಿಂದ............ said...

ಒಳ್ಳೆಯ ತರ್ಕ ಅಪ್ಪ ಮಗನದ್ದು. ಇನ್ನು ಮಕ್ಕಳ ಪ್ರಶ್ನೆಗಳೆಂದರೆ ಹಾಗೆ ಅಲ್ವಾ? ಒಳ್ಳೆ ವಿಚಾರ. ಒಮ್ಮೆ ಯೋಚಿಸಬೇಕಾದದ್ದೇ!

ಸವಿಗನಸು said...

ಅಪ್ಪ ಮಗನ ಸಂಭಾಷಣೆಯ ತರ್ಕ ಸಕತ್ತಾಗಿದೆ...

ದಿನಕರ ಮೊಗೇರ said...

gottillaa maguvina mundina bhaaga chennaagide.............

ಮನಸು said...

hahaha chennagide

Guruprasad said...

ಚೆನ್ನಾಗಿ ಇದೆ,, ಅಪ್ಪ ಮಗನ ಸಂಬಾಷಣೆ,, ಜಲನಯನ ಅವರಿಂದ ಪ್ರಭಾವಿತ ರಾಗಿರುವ ಹಾಗೆ ಇದೆ... ಮುಂದುವರಿಯಲಿ...

shivu.k said...

ಸೀತಾರಾಂ ಸರ್,

ನೀವು ಆಜಾದ್ ರಂತೆ ಬರೆಯಲು ಪ್ರಾರಂಭಿಸಿಬಿಟ್ರಾ? ಇದೊಂಥರ ಚೆನ್ನಾಗಿರುತ್ತೆ...ಬರೆಯಿರಿ..

ಸೀತಾರಾಮ. ಕೆ. / SITARAM.K said...

ಅಭಿಪ್ರಾಯಿಸಿದ ಎಲ್ಲ ಸಹಬ್ಲೊಗಿಗರಿಗೂ ಧನ್ಯವಾದಗಳು. ವಿ.ಆರ್.ಭಟ್ಟರೇ ತಾವೂ ಹೇಳಿದ್ದು ಸರಿ-ದೇವತೆಗಳು ಮುಕ್ಕೋಟಿ ಮತ್ತು ಜೀವರಾಸಿ -೮೦ ಕೋಟಿ. ಗಡಿಬಿಡಿಯಲ್ಲಾದ ತಪ್ಪನ್ನು ನೆನಪಿಸಿದ್ದಿರಾ. ಸರಿ ಪಡಿಸಿದ್ದೇನೆ. ಹೀಗೆ ತಿದ್ದುತ್ತಾ ಇರಿ. ಧನ್ಯವಾದಗಳು.
-ಜಲನಯನರ ಈ ಅಪೂರ್ವ ಶೈಲಿ ನನಗೆ ಇಷ್ಟವಾಗಿ ಅನುಕರಿಸುತ್ತಿದ್ದೆನೆ.
ಸುಬ್ರಮಣ್ಯ ಭಟ್ಟರೇ ಹ-ಬೇ ಪ್ರವಾಸಕ್ಕೆ ತಯಾರಿ ಬಹಳ ದಿನದಿ೦ದಾದರೂ ಬರಲಾಗಲಿಲ್ಲ. ಬಹುಶಃ ಇನ್ನು ವರ್ಷವಾಗುವದೇನೋ? ಬರುವಾಗ ತಮಗೇ ತಪ್ಪದೇ ತಿಳಿಸುವೆ.
ಮತ್ತೊಂಂಎ ಎಲ್ಲ ಒದುಗರಿಗು ಧನ್ಯವಾದಗಳು.

ಜಲನಯನ said...

ಸೀತಾರಾಂ ಸರ್ ನಿಮ್ಮ ಮಗೂನೂ ನಿಮಗೆ ಕಾಟ ಕೊಡೋಕೆ ಶುರುಮಾಡ್ತಾ,,,??? ಹಹಹ ಚನ್ನಾಗಿದೆ...ತರ್ಕ...ಹುಚ್ಚು ಮನುಷ್ಯನಿಗೇ ಅಲ್ಲ ಪ್ರಾಣಿಗಳಲ್ಲೂ ಇರುತ್ತೆ...ಆಗುತ್ತೆ... ಆದ್ರೆ ಮಗೂಗೆ ಅರ್ಥವಾಗದ್ದು..ಬುದ್ಧಿವಂತ ಮಾನವನ ಹುಚ್ಚುತನ ಮತ್ತು ಹುಚ್ಚುಮಾನವನ ಬುದ್ಧಿವಂತಿಕೆ...