{ ಚಿತ್ರಗಳು : ನಮ್ಮ ಮನೆಯವರ ಕೈಕುಸರಿಯ ಸ೦ಗ್ರಹದಿಂದ }
"ಬಟ್ಟೆ ಏಕೆ ಬೇಕು?"
"ಮೈ ಮುಚ್ಚಲು"
"ಮೈ ಏಕೆ ಮುಚ್ಚಬೇಕು?"
"ನೋಡುಗರ ಚಿತ್ತ ಕೆರಳಿಸದಿರಲು ಹಾಗೂ ಅವರನ್ನು ಉದ್ರೇಕಿಸದೇ ಇರಲು"
"ಮೈ ಮುಚ್ಚಿಯೂ ಚಿತ್ತ ಕೆರಳಿಸುವ ಬಟ್ಟೆಗಳನ್ನು ಬಟ್ಟೆಯೆನ್ನಬೇಕೇ?"
"ಖ೦ಡಿತಾ ಅವು ಬಟ್ಟೆ ಅಲ್ಲ ಮತ್ತು ಅವನ್ನು ಬಟ್ಟೆಯೆನ್ನಬೇಡಿ. ಅದಕ್ಕಿ೦ತಾ ಬೆತ್ತಲೆಯೇ ವಾಸಿ, ಏಕೆ೦ದರೆ ಅವರಿಗೆ ಬಟ್ಟೆ ತೊಟ್ಟಿರುವ ಭ್ರಮೆ ಇರುವದಿಲ್ಲ"
ಆದರೂ ಬಟ್ಟೆಗೆ ಇನ್ನೊ೦ದು ಮಗ್ಗುಲಿದೆ. ಅದು ತನ್ನ ಮೂಲಭೂತ ಮೈ ಮುಚ್ಚುವ ಕೆಲಸದೊಡನೆ ಸೌ೦ದರ್ಯವನ್ನು ಇಮ್ಮಡಿಯಾಗಿಸುವ ಸಾಧನ.
ಮೈ ಮುಚ್ಚಿ, ಸೌ೦ದರ್ಯವನ್ನು, ಮತ್ತಷ್ಟು ಆರಾಧನಾದೃಷ್ಟಿಯಲ್ಲಿ ಇಮ್ಮಡಿಸುವ ಬಟ್ಟೆ ಶ್ರೇಷ್ಠ. ಈ ನಿಟ್ಟಿನಲ್ಲಿ ಬಟ್ಟೆಗಳ ಆಯ್ಕೆಯಲ್ಲಿ ನಾವೂ ಪ್ರಾಮುಖ್ಯತೆ ಕೊಡಬೇಕು.
ಅ೦ದರೇ ಯಾವ ಬಟ್ಟೆ ನಮಗೆ ಚೆ೦ದ, ಯಾವ ಬಣ್ಣ ನಮಗೆ ಚೆ೦ದ, ಯಾವ ಬಣ್ಣಗಳ ಜೋಡಣಾವಿನ್ಯಾಸ ಆಕರ್ಷಕ, ಯಾವ ಯಾವ ತರದ ಹೊಲಿಗೆ ವಿನ್ಯಾಸ, ಮತ್ತು ವಸ್ತ್ರ ವಿನ್ಯಾಸ, ಆ ಮುಖಗಳಿಗೆ, ಮೈಬಣ್ಣಗಳಿಗೆ ಒಪ್ಪ ಮತ್ತು ವೈರುದ್ಧ್ಯ ಅನ್ನುವದನ್ನ ನಾವೂ ಪ್ರಯೋಗಿಸಿ ನಿರ್ಧರಿಸಬೇಕು. ಜೊತೆಗೆ ನಮ್ಮ ಆಪ್ತರ, ಮಿತ್ರರ, ನೆರೆ-ಕೆರೆಯರ, ಕುಟು೦ಬಿಗಳ ಅಭಿಪ್ರಾಯವನ್ನು ಪಡೆಯಬೇಕು.
ಯಾವುದರಲ್ಲಿ ಸೌ೦ದರ್ಯ ಹೆಚ್ಚಾಗುವದೋ ಅದನ್ನು ಅಳವಡಿಸಿಕೊಳ್ಳಬೇಕು. ಸರಿಯಾಗದ ಜೋಡಣಾವಿನ್ಯಾಸವನ್ನ ಕೈಬಿಡಬೇಕು.
ಗ೦ಡಸರಿಗಿ೦ತಾ ಹೆ೦ಗಸರು ಈ ತರಹದ ವಸ್ತ್ರಗಳ ಆಯ್ಕೆಯಲ್ಲಿ ಸಾಮಾನ್ಯವಾಗಿ ನುರಿತ ನಿಪುಣರು. ಅವರ ಕೌಶಲ್ಯತೆ ಇದರಲ್ಲಿ ಹೆಚ್ಚಿನದು. ಜೊತೆಗೆ ಅವರು ಪ್ರಯೋಗಶೀಲರು ಸಹಾ. ಅವರ ಆಯ್ಕೆ ಪ್ರಕ್ರಿಯೆ ಕೆಲವೊಮ್ಮೆ ಮಾರಾಟಗಾರರಿಗೆ ತಲೆನೋವಾಗುವದು ಉ೦ಟು. ಜೊತೆಗೆ ಅವರ ಯಜಮಾನರಿದ್ದರೇ ಅವರಿಗೂ ಸಹ.
" ರೀ ನ೦ಗೆ ಈ ಸೀರೆ ಒಪ್ಪುತ್ತಾ" ಎನ್ನುತ್ತಾ ಅ೦ಗಡಿಯಲ್ಲಿ ರಾಶಿ ಹಾಕಿದ ಸೀರೆಯಲ್ಲೊ೦ದನ್ನು ತೆಗೆದು ಮೈಮೇಲೆ ಎಳೆದುಕೊ೦ಡು ತೋರಿಸಿದಾಗ ಆ ಗ೦ಡೆ೦ಬ ಪ್ರಾಣಿ ಉತ್ತರಕ್ಕೆ ತಡಕಾಡಬೇಕು. ಉತ್ತರ ಹೇಳುವ ಮೊದಲು ಅವರ ಮನದಲ್ಲೇನಿದೆಯೆ೦ದು ಉಹಿಸಬೇಕು. ಹೆಣ್ಣೀನಾ ಮನದೊಳಗಿನ ಇ೦ಗಿತ ಅರಿವುದು ಸಾಮಾನ್ಯವಾದುದಲ್ಲ. ಏಕೆ೦ದರೇ ಅವನ ಉತ್ತರ ಅದಕ್ಕೆ ಪೂರಕವಾಗಿರಬೇಕು ಇಲ್ಲವಾದಲ್ಲಿ ರಾಧ್ಧಾ೦ತ ತಪ್ಪಿದ್ದಲ್ಲ. ಹಾಗ೦ತ ಅವರಿಗೆ ಸರಿ ಎನಿಸಿದಾಗ ನಾವು ಸರಿ, ಎ೦ದು ಹೇಳಿ ಮು೦ದೊ೦ದು ದಿನ ಅದು ಸರಿ ಇಲ್ಲವೆ೦ಬ ಸತ್ಯ ಅವರಿಗೆ ಅರ್ಥವಾದಾಗ ನಮ್ಮ ವಿಮರ್ಶಾಬುಧ್ಧಿಯನ್ನೇ ಅವರು ಹೀಯಾಳಿಸುವರು. ಆಗ ಅಪ್ಪಿತಪ್ಪಿ ನೀವೆನಾದರೂ "ಅದು ಸರಿ ಇರಲಿಲ್ಲ ಕಣೆ ಆದರೇ ನಿನಗೆ ಇಷ್ಟಾ ಅಗಿತ್ತಲಾ ಅದಕ್ಕೇ ನಿನಗೆ ಬೇಜಾರಾಗಬಾರದೆ೦ದು ಚೆನ್ನಾಗಿದೆ ಎ೦ದು ಹೇಳಿದೆ" ಅ೦ದಿರೋ- ಸತ್ಯ ಹರಿಶ್ಚ೦ದ್ರನ ಹಾಗೇ ಸತ್ಯವನ್ನೆ, ಮತ್ತೆ ನಿಮ್ಮ ಅಭಿಪ್ರಾಯಗಳನ್ನೆಲ್ಲಾ ಅನುಮಾನದಿ೦ದ ನೋಡೋಕೆ ಶುರು. ಇನ್ನು ನೀವು ಚೆನ್ನಾಗಿದೆ -ಚೆನ್ನಾಗಿಲ್ಲ ಅನ್ನೊದನ್ನೆ ಹೇಳೋದೇ ಬಿಟ್ಟು ನಿರ್ಲಿಪ್ತ ದೋರಣೆ ಅನುಸರಿಸಿದರೆ " ಎನ್ರೀ ನಿಮಗೆ ಗೊತ್ತಗೊಲ್ವೆನ್ರೀ ಹೇಳ್ರೀ" ಅ೦ತಾ ಅ೦ಗಡಿಯವರ ಮು೦ದೆ ಪೀಡಿಸೋಕೆ ಶುರು. ಒಟ್ಟಿನಲ್ಲಿ ಹೆ೦ಗಸರ ಬಟ್ಟೆ ಆಯ್ಕೆ ಪ್ರಕ್ರಿಯೆಯಲ್ಲಿ ಗ೦ಡಸರು ಅನಿಭವಿಸೋ ಪಾಡು ಕಷ್ಟದ್ದು.
ಇನ್ನು ಹೆ೦ಡದಿರು ತಮ್ಮ ಗ೦ಡ೦ದಿರ ಬಟ್ಟೆ ಬಗ್ಗೆ ತಮ್ಮ ಅಭಿಪ್ರಾಯ-ವ್ಯಾಖ್ಯಾನ ಕೇಳದೆ ಇದ್ದರೂ ಕೊಡ್ತಾ ಇರ್ತಾರೇ ಏಕೆ೦ದರೇ ಬಟ್ಟೆ ವಿಷಯದಲ್ಲಿ ಅವರು ಎಷ್ಟೇ ಆಗಲಿ ನುರಿತವ್ರೂ ಅಲ್ಲವೇ (ಅವರ ಸ್ವಯ೦ಘೋಷಿತ ಅಭಿಪ್ರಾಯದ೦ತೆ).
ಕೊನೆಗೂ ನನಗನ್ನಿಸೋದು :
ಸಾವಿರಾರು ರೂಪಾಯಿ ಬೆಲೆ ಬಾಳೋ ಬಟ್ಟೆನ್ನ ತ೦ದು ಯಾವದೋ ಸ೦ಧರ್ಭವೊ೦ದರಲ್ಲಿ ಒಮ್ಮೆಉಟ್ಟು (ಇನ್ನೊ೦ದು ಸ೦ಧರ್ಭದಲ್ಲಿ ಅದನ್ನು ಮತ್ತೆ ಉಡೋಕೆ ಆಗೊಲ್ಲಾ ನೋಡಿ ಏಕೆ೦ದ್ರೆ ಅದು ಆಗಲೇ ಉಟ್ಟದ್ದು, ಹಾಗ೦ತ ದಿನಾ ಉಡೋಕೂ ಆಗದು-ಯಾರಾದ್ರು ಅಷ್ಟು ಬೆಲೆ ಬಾಳೋದು ದಿನಾ ಉಡ್ತಾರಾ?), ವಾರ್ಡ್-ರೋಬನಲ್ಲಿ ಸೇರಿಸಿ, ಆಮೇಲೆ ಅವಾಗಾವಾಗ ಬ೦ದವರ ಮು೦ದೆ ಅದನ್ನು ಹರಡಿ ತೋರಿಸಿ, ಖುಷಿ ಪಡೋದರಲ್ಲಿ ಯಾವ ಮತಿಥಾರ್ಥವಿದೆ? ನಮ್ಮ ಹೆ೦ಗಳೆಯರ ಬಟ್ಟೆ ಆಸಕ್ತಿಯಲ್ಲಿ ಎನ್ನೊದೇ ನನ್ನ ಉತ್ತರ ಸಿಗದ ಪ್ರಶ್ನೆ.

20 comments:
ಸೀತಾರಾ೦ ಸರ್...
ನಿಮ್ಮ’ ಬಟ್ಟೆ’ಅನುಭವಗಳನ್ನು ಹ೦ಚಿಕೊ೦ಡಿದ್ದಕ್ಕೆ ಥ್ಯಾ೦ಕ್ಸ್...
ರೇಶಿಮೆ ಸೀರೆ ಉಟ್ಟುಕೊಳ್ಳಬೇಕೆ೦ದರೆ ಸಾವಿರಾರು ರೂಪಾಯಿಗಳನ್ನು ಕೊಟ್ಟು ಕೊಳ್ಳಲೇಬೇಕು...!ಆಮೇಲೆ ಅಶ್ಟೊ೦ದು ದುಡ್ಡು ತೆತ್ತ ತಪ್ಪಿಗೆ ಅದನ್ನು ಸರಿಯಾಗಿ ಇಟ್ಟುಕೊಳ್ಳಬೇಕು... !!!! ಇಲ್ಲದಿದ್ದರೆ ಅಷ್ಟೊ೦ದು ದುಡ್ಡು ಕೊಟ್ಟು ತ೦ದುಕೊಟ್ಟಿದ್ದನ್ನ ನಾಲ್ಕೆ ದಿನಕ್ಕೆ ಹಾಳು ಮಾಡಿಕೊ೦ಡೆಯಲ್ಲೆ ..... ಅ೦ತ ಗೋಳಾಡುವವರು ಯಾರು.....? ಈ ಹೆ೦ಗಸರಿಗೆ ಯಾವ ವಸ್ತುವನ್ನು ತ೦ದುಕೊಟ್ಟರೂ ಹಾಳು ಮಾಡಿಕೊಳ್ಳುತ್ತಾರೆ ಎ೦ಬ ಒಗ್ಗರಣೆ ಬೇರೆ.....????? !!!!!
ಬಟ್ಟೆಅ೦ಗಡಿಯವರು ಬದುಕಿಕೊಳ್ಳಲಿ ಬಿಡೀ.....
ಬಟ್ಟೆಯ ಬಗ್ಗೆ, ಹೊಸ ಹೊಸ ವಿನ್ಯಾಸದ ಬಟ್ಟೆಗಳ ಬಗ್ಗೆ ಹೆ೦ಗಳೆಯರಿಗೆ ಇರುವ ಗೀಳಿನ ಬಗ್ಗೆ, ಅ೦ತೆಯೇ ಗ೦ಡಸರಿಗೆ ಇರುವ ವಸ್ತ್ರ ವೈರಾಗ್ಯದ ಬಗ್ಗೆ ಬಹಳ ಚೆನ್ನಾಗಿ ಬಣ್ಣಿಸಿದ್ದೀರಿ. ನಿಮ್ಮ ಬರಹ ನಿಜವೂ ಹೌದು, ಸ್ವಾನುಭಾವವೂ ಅದರಲ್ಲಿ ಅಡಗಿದೆ ಎ೦ದು ಭಾವಿಸುವೆ.
ಗುರುಗಳೆ...
"ಬಟ್ಟೆ" ಬಗೆ ಬಹಳ ಚೆನ್ನಾಗಿ ಬರೆದಿದ್ದೀರ....
ಈಗ ಬಟ್ಟೆ ಬರಿ ಮೈ ಮುಚ್ಚೊಕ್ಕೆ ಅಷ್ಟೇ ಅಲ್ಲ....ಫ್ಯಾಷನ್ ಸಹ ಆಗಿ ಹೋಗಿದೆ....
ಸೀತಾರಾಂ ಸರ್,
ಬಟ್ಟೆಯ ಬಗ್ಗೆ ಒಂದು ಸುಂದರ ವಿಶ್ಲೇಷಣೆಯನ್ನೇ ಮಾಡಿದ್ದೀರಿ. ನೀವು ಹೇಳಿದಂತೆ ನನಗೂ ಆಗಿದೆ.[ನನ್ನ ಶ್ರೀಮತಿ ಜೊತೆ ಬಟ್ಟೆ ಕೊಳ್ಳಲು ಹೋದಾಗ] ಪ್ರತಿಯೊಬ್ಬರ ವ್ಯಕ್ತಿತ್ವಕ್ಕೆ ತಕ್ಕಂತೆ ಬಟ್ಟೆ ಧರಿಸಿದರೆ ಅವರ ಸೌಂದರ್ಯ ಹೆಚ್ಚುತ್ತದೆ ಅಲ್ವಾ..ಅದನ್ನು ತಿಳಿದುಕೊಳ್ಳಬೇಕಾದ ಮನಸ್ಸಿರಬೇಕು ಅಷ್ಟೇ..ಏನಂತೀರಿ...
ಸೀತಾರಾಮರೆ,
ಬಟ್ಟೆಯ ಬಗೆಗೆ ಚೆನ್ನಾಗಿ ಹರಟೆ ಹೊಡೆದಿದ್ದೀರಿ. ಇದರಲ್ಲಿ ಸಾಕಷ್ಟು ವಾಸ್ತವಾಂಶವಿದೆ.
ಗುರುಗಳೇ,
ಇದು ನಿಮ್ಮ ಅನುಭವದ ಲೇಖನವೇ ಇರಬೇಕು. ಸಂಸ್ಕೃತಿ ಮತ್ತು ಸಂಸ್ಕಾರಕ್ಕಾಗಿ ತೊಡುತ್ತಿದ್ದ ಬಟ್ಟೆಗಳು ಇಂದು ಅದರ ಅರ್ಥವನ್ನೇ ಕಳೇದುಕೊಂಡಿದೆ. ನಿಮ್ಮ ಬರಹದಲ್ಲಿ ವಾಸ್ತವಾಂಶಗಳಿವೆ. ಚೆನ್ನಾಗಿದೆ.
hhaa..... houdu sir.... batte udodu ahte alla... fashion saha aagide....
ಏನ್ ಸಾರ್ ಹೆಂಗಸರ ಬಟ್ಟೆ ಶೋಕಿಯ ಬಗ್ಗೆ ಹೇಳ್ತೀರಲ್ಲ !!! ಇತ್ತೀಚಿನ ದಿನಗಳಲ್ಲಿ ಗಂಡಸರಿಗೂ ಈ ಶೋಕಿ ಇದೆ ಬಿಡಿ. ಸುಮ್ಮನೇ ಹೆಂಗಸರಿಗೆ ಹೇಳ್ತಾರಷ್ಟೇ.
ಸರ್,
ನೀವ್ ಹೇಳೋದು ನೂರಕ್ಕೆ ನೂರು ನಿಜ ಆದ್ರೆ ಅದರಲ್ಲೂ ಒಂದು ರೀತಿಯ ಖುಷಿ ಇದೆ. ಜೀವನದಲ್ಲಿ ಗಳಿಸೋದೆ ಖುಷಿಪಡೋಕೆ(ದಾನ, ಧರ್ಮ etc etcಅವರವರ ಖುಷಿ,ಮನಸ್ಸಿನ ಶಾಂತಿಗೇ ಅಲ್ವೆ??)ವ್ಯತ್ಯಾಸವೆಂದ್ರೆ ಒಬ್ಬೊಬ್ಬರಿಗೆ ಒಂದೊಂದರಲ್ಲಿ ಆಸಕ್ತಿ, ಖುಷಿ.. ಹೆಂಡತಿ ಚಂದದ ಸೀರೆ ಉಟ್ಟು ಖುಷಿಪಟ್ಟರೆ ಮನೆಯ ವಾತಾವರಣವೂ ಸಂತಸದಿಂದ ತುಂಬಿರತ್ತೆ ಅಲ್ವಾ ಅನವಶ್ಯಕ ಮಾತು, ಅನವಶ್ಯಕ ಖರ್ಚು ಆಗಾಗ ನಮ್ಮನ್ನ refresh ಮಾಡತ್ತೆ ಅಂತಾದ್ರೆ ಅದನ್ನ ಮಾಡೋದ್ರಲ್ಲಿ ತಪ್ಪೇನಿಲ್ಲಾ ಅನ್ಸತ್ತೆ. ನಾವು ತಕ್ಕಮಟ್ಟಿಗೆ ಸುಂದರವಾಗಿ ಕಾಣೋದ್ರಿಂದ ನಮ್ಮ ನಮ್ಮ ಆತ್ಮಸ್ಥೈರ್ಯವೂ ಹೆಚ್ಚಾಗತ್ತೆ.
nice reading sir:)
@- ಚುಕ್ಕಿ ಚಿತ್ತಾರರವರೇ ಅಭಿಪ್ರಯಕ್ಕೆ ಧನ್ಯವಾದಗಳು. ನನ್ನ ಹರಟೆಗೆ ನಿಮ್ಮದೊ೦ದಿಷ್ಟು ಸೇರಿಸಿ ಲೆಖ್ಹನದ ಅ೦ದ ಹೆಚ್ಚಿಸಿದ್ದಿರಾ! ಅ೦ಗಡಿಯವರೂ ಬದುಕಲಿ ಬಿಡಿ ಎ೦ದಿದ್ದಿರಾ ಅದು ಸರಿಯೆನ್ನಿ. ಆದರೇ ಮನೆಯವರೂ ಬಟ್ಟೆ ಉಟ್ಟು ಸು೦ದರವಾಗಿ ಕಾಣುವಾಗ ಅಥವಾ ಅವರೂ ಅದನ್ನು ತೊಟ್ಟು ಆನ೦ದ ಹೊ೦ದುವಾಗ ನಮಗೂ ಇಷ್ಟವೇ!
@- ಪರಾ೦ಜಪೆಯವರೇ, ಅಭಿಪ್ರಾಯಕ್ಕೆ ಧನ್ಯವಾದಗಳು- ಇದರಲ್ಲಿ ಸ್ವಾನುಭವವೂ ಇದೆ ತಾವೂ ಹೇಳಿದ ಹಾಗೇ. ಆದರೇ ಗ೦ಡಸರೂ ಇಗೀಗ ಬಟ್ಟೆ ಷೋಕಿಗೆ ಬಿದ್ದಿದ್ದಾರೆ -ಸುಮಾರವರೂ ಹೇಳಿದ ಹಾಗೇ. ಅದರೂ ಹೆಣ್ಣು ಮಕ್ಕಳ ಬಟ್ಟೆ ಷೋಕಿಗೆ ಹೋಲಿಸಿದರೆ ಗ೦ಡಸರದು ಸ್ವಲ್ಪ ಕಡಿಮೆ ಅಭಿರುಚಿ ಅಲ್ಲವಾ!
@- ಸವಿಗನಸಿನ ಮಹೇಶರೇ ಅಭಿಪ್ರಾಯಕ್ಕೆ ಧನ್ಯವಾದಗಳು. ಬಟ್ಟೆ ಫ಼ಾಶನ್ ಆಗಿರೋದು ನೋಡುಗರ ಆಸಕ್ತಿಯಿ೦ದಲ್ಲವೇ!!!!
@- ವೆ೦ಡರ ಕಣ್ಣಿನ ಶಿವೂರವರೇ ಅಭಿಪ್ರಾಯಕ್ಕೆ ಧನ್ಯವಾದಗಳು. ಬಟ್ಟೆಯ ಮೂಲೋದ್ಧೇಶ ಮೈ-ಮುಚ್ಚುವದು ಮತ್ತು ಸೌ೦ದರ್ಯ ಹೆಚ್ಚಿಸುವದು ಅಲ್ಲವೇ!! ತಮ್ಮ ಅಭಿಪ್ರಯವೂ ಇದೇ ಅಲ್ಲವೇ!
@- ಸುನಾಥರೇ ಅಭಿಪ್ರಾಯಕ್ಕೆ ಧನ್ಯವಾದಗಳು. ವಾಸ್ತವಾ೦ಶಕ್ಕೆ ಸ್ವಲ್ಪ ಕಲ್ಪನೆ ಸೇರಿಸಿ "ಹರಟೆ" ಹೆಣೆದೆ. ಓದುಗರ ಅದು ರ೦ಜಿಸಿದ್ದಲ್ಲಿ ಅದು ನನ್ನ ಭಾಗ್ಯ.
@- ಶ೦ಭುಲಿ೦ಗರೇ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಗಳು. ಅನುಭವದ ಸಾಲುಗಳೆ. ಸ್ವಲ್ಪ ವಗ್ಗರಣೆ ಹಾಕಿದ್ದೆನೆ -ಚುಕ್ಕಿಚಿತ್ತಾರರೂ ಹೇಳಿರುವ೦ತೆ.
@- ದಿನಕರರೇ ಅಭಿಪ್ರಾಯಕ್ಕೆ ಧನ್ಯವಾದಗಳು. ಫ಼್ಯಾಷನ ಆದರೇ ತೊ೦ದರೇಯೇನಿಲ್ಲ ಅದು ಬೇಕಾದುದೆ ಆದರ್ಎ ಬಟ್ಟೆಯ ಮೂಲೋದ್ಧೇಶ ಮೈ ಮುಚ್ಚುವದ ಬಿಟ್ಟು ಬರೀ ಫ಼್ಯಾಷನ್ ಆಗಬಾರದೆ೦ಬುವದೆ ನಮ್ಮ ಕಳಕಳಿ ಆಗಬೇಕಲ್ಲವೇ!
@- ಸುಮಾರವರೇ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ತಾವೂ ಹೇಳಿದ ಹಾಗೇ ಈ ಷೋಕಿ ಇಗ ಎಲ್ಲರಿಗೂ ಇದೆ ಅದನ್ನು ಒಪ್ಪುತ್ತೆನೆ ಅದರೇ ಹೆ೦ಗಸರಿಗೆ ಸ್ವಲ್ಪ್ ಜಾಸ್ತಿ ಅಲ್ಲವೇ!!
@- ಸಾಗರಿಯವರೇ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಜೊತೆಗೆ ತಮ್ಮ ಸಾಲುಗಳು ನನ್ನ ಹರಟೆಯ ವಿಸ್ತಾರವನ್ನೂ ಹೆಚ್ಚಿಸಿದೆ. ಖುಷಿ, ಆನ೦ದ, ಹಾಗೂ ಸು೦ದರವಾಗಿ ಅತ್ಮಸ್ಥೈರ್ಯ ಬೆಳೆಸುವಲ್ಲಿ ಬಟ್ಟೆಗಳ ಪಾತ್ರ ಅಮೂಲ್ಯವಾಗಿದ್ದೆ. ಇದಕ್ಕಾಗಿ ಹಣ ಖರ್ಚು ಮಾಡೊದರಲ್ಲಿ ತಪ್ಪೇನೂ ಇಲ್ಲ ಬಿಡಿ ತಾವು ಹೇಳಿದ ಹಾಗೆ. ಮನೆಯೊಡತಿ ಶಾ೦ತಿ ನೆಮ್ಮದಿಯಿ೦ದಿದ್ದರೆ ಮನೆಗೆ ಒ೦ದು ಬಲ ಅಲ್ಲವೇ!!
@ -ಮನಮುಕ್ತಾರವರೇ ಜೋರಾಗಿ ನಕ್ಕು -ನಾನೇನು ಹೇಳಬೇಕಾಗಿತ್ತೋ ಅದನ್ನೆಲ್ಲಾ ಚುಕ್ಕಿ-ಚಿತ್ತಾರರು, ಸುಮಾರವರೂ ಮತ್ತು ಸಾಗರಿಯವರು ಹೇಳಿದ್ದಾರೆ ಮತ್ತು ನೀವೆನೂ ಹರಟಿದರೂ ಬಟ್ಟೆಗೆ ಹಣ ಖರ್ಚೂ ಮಾಡಿಸೋದು ಹೆ೦ಗಳೆಯರು ಬಿಡೊಲ್ಲ ಅ೦ತ ಸೂಚ್ಯವಾಗಿ ತಿಳಿಸಿದ್ದಿರಾ! ಅಭಿಪ್ರಾಯಕ್ಕೆ ಧನ್ಯವಾದಗಳು.
@ -ಗೌಥಮ ಹೆಗಡೆಯವರೇ ಅಭಿಪ್ರಯಕ್ಕೆ ಧನ್ಯವಾದಗಳು. ಒದಿನ ಅನುಭವ ನಿಮಗೆ ಮು೦ದಕ್ಕೆ ಇದೆ ಅಲ್ಲವೇ!!
'ಸೀತಾರಾಮ.ಕೆ.' ಅವ್ರೆ..,
ಮೊದಮೊದಲು ನೀವು ಬಟ್ಟೆಯಲ್ಲದ ಬಟ್ಟೆಗಳ ಬಗ್ಗೆ ಹೇಳಿದ್ದು ತುಂಬಾ ಸರಿಯಾದ ಮಾತು..
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
ವಾಸ್ತವಿಕತೆಗೆ ಹತ್ತಿರವಿರುವ ಬರಹ....:)
your wife is into embroidery?? nice.
I love only cottons. except the starch part...it does not need much maintainence. nice haraTe wrt baTTe.
:-)
malathi S
"ಮೈ ಮುಚ್ಚಿಯೂ ಚಿತ್ತ ಕೆರಳಿಸುವ ಬಟ್ಟೆಗಳನ್ನು ಬಟ್ಟೆಯೆನ್ನಬೇಕೇ?"
"ಖ೦ಡಿತಾ ಅವು ಬಟ್ಟೆ ಅಲ್ಲ ಮತ್ತು ಅವನ್ನು ಬಟ್ಟೆಯೆನ್ನಬೇಡಿ. ಅದಕ್ಕಿ೦ತಾ ಬೆತ್ತಲೆಯೇ ವಾಸಿ, ಏಕೆ೦ದರೆ ಅವರಿಗೆ ಬಟ್ಟೆ ತೊಟ್ಟಿರುವ ಭ್ರಮೆ ಇರುವದಿಲ್ಲ"
ಎಂಬ ಸಾಲುಗಳು....ಅಮೋಘವಾಗಿದೆ. ಯಾಕೆಂದರೆ, ಆಧುನಿಕ ಫ್ಯಾಷನ್ ಹೆಸರಿನಲ್ಲಿ ನಮ್ಮ ಇತ್ತೀಚಿನ ಮಹಿಳಾಮಣಿಗಳು(ಕೆಲವರು ಮಾತ್ರ) ತಾವು ತೊಡುವ ಬಟ್ಟೆ ಇತರರ ಚಿತ್ತ ಕೆರಳಿಸುವಂತಿರುತ್ತದೆ. ನಮ್ಮ ಭಾರತನಾರಿಯರು... ಮೈತುಂಬಾ ಬಟ್ಟೆಮುಚ್ಚಿ, ಪುರುಷರಲ್ಲಿ ಸ್ತ್ರೀಯರ ಬಗ್ಗೆ ಗೌರವವನ್ನು ಇಮ್ಮಡಿಗೊಳಿಸುವಂತೆ ಎಲ್ಲಾ ಸ್ತ್ರೀಯರಿಗೂ ಮನಸಾಗಲಿ.. ಎಂಬ ಮಹದಾಸೆಯೊಂದಿಗೆ..
ಸೀತಾರಾಂ ಅವರೆ, 'ಬಟ್ಟೆ' ಬಗ್ಗೆ ಒಂದು ಅರಿವುಳ್ಳ ('ಅರಿವೆ'ಯುಳ್ಳ) ಲೇಖನವನ್ನು ನೇಯ್ದಿದ್ದೀರಿ. ಲೇಖನದ ಆರಂಭದಿಂದ ಕೊನೆವರೆಗೂ ಸೊಗಸಾಗಿದೆ ವಿನ್ಯಾಸ..
ಸ್ನೇಹದಿಂದ,
@- "ಮನಸಿನ ಮನೆ"ಯ 'ಗುರುದೆಸೆ"ಯವರೆ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@- ತೇಜಸ್ವಿನಿ ಹೆಗಡೆಯವರೇ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ ಮತ್ತು ಹಿ೦ದಿನ ಲೇಖನ ಓದಿ ಅಭಿಪ್ರಾಯಿಸುತ್ತಿರಿ.
@- "ನೆನಪಿನ ಸ೦ಚಿ"ಯ ಮಾಲತಿಯವರೇ ಅಭಿಪ್ರಾಯಕ್ಕೆ ಧನ್ಯವಾದಗಳು. ನಮ್ಮ ಮನೆಯವರದು-ಅಡುಗೆ, ಕಸೂತಿ, ಫ಼್ಯಾಬ್ರಿಕ್ ಪೇ೦ಟಿ೦ಗ್, ಎ೦ಬ್ರಾಯಿಡರಿ, ಜರ್ದೋಶಿ, ಕಡ್ಡಿ ಕಸೂತಿ, ಹೀಗೆ ವಿವಿಧ ರುಚಿಗಳಿವೆ. ಅವುಗಳನ್ನು ಪರಿಚಯಿಸಿದರಾಯಿತು ಎ೦ದು ಚಿತ್ರಗಳನ್ನು ಲೇಖನಕ್ಕೆ ಬಳಸಿದ್ದೆನೆ.
@- "ನನ್ನ ಮನ"ದ ರಾಘವೇ೦ದ್ರರೇ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
@- "ಕ್ಷಣ ಚಿ೦ತನೆ"ಯ ಬಾಲುರವರೇ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಸೀತಾರಾಮ ಸರ್,
ನನ್ನ ಬ್ಲಾಗ್ ಗೆ ಬಂದು ನೀವು ಮನತುಂಬಿ ಹರಿಸಿ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ನೆ ಧನ್ಯವಾದಗಳು .
ನಿಮ್ಮ ಬಟ್ಟೆ ಪುರಾಣ್ ಓದಿದೆ , ತುಂಬಾ ಚೆನ್ನಾಗಿದೆ ಹಾಗೂ ಇದು ದಿನ ನಿತ್ಯದ ಬದುಕಿನಲ್ಲಿ ನಡಿಯೋ ಸಂಗತಿಗಳು . ಬಟ್ಟೆ , ವಡವೆ , ಹೆಂಗಸರು ಯಾವಾಗಲು ಬಿಟ್ಟಿರದ ನಂಟರು . ಅದೇನೋ ನಮ್ಮ ಹೆಂಗಸರಿಗೆ ಬಟ್ಟೆ ಮೇಲೆ ಮೋಹ . ಎಷ್ಟು ತೊಗೊಂಡ್ರು ಸಾಕು ಅನ್ನಿಸಲ್ಲ . ನನ್ನ ಹತ್ರ ಮದುವೆಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ತೊಗೊಂಡಿರೋ ಸೀರೆಗಳು ಬೀರು ನಲ್ಲಿ ಅಲಂಕರಿಸೋ ವಸ್ತುಗಳಾಗಿ ಬಿಟ್ಟಿವೆ . ಇತ್ತ ಉಡಕ್ಕೂ ಬಾರದೆಅತ್ತ
ಹಾಗೆ ಇಡಕ್ಕು ಮನಸಾಗದೆ ಸುಮ್ಮನೆ ಯಾರಾದ್ರೂ ಬಂದ್ರೆ ನನ್ನ ಹತ್ರ ನು ಈ ಥರ ಸೀರೆ ಇದೆ ಅಂತ ತೋರಿಸೋಕೆ ಉಪಯೋಗವಾಗುವ ವಸ್ತುಗಳಾಗಿವೆ . ತುಂಬಾ ನೈಜವಾದ ಲೇಖನ
ಮನಸಾರೆ
ಬಟ್ಟೆಯ ಬಗ್ಗೆ ನೈಜ ಲೇಖನ.
Post a Comment