Saturday, March 6, 2010

ಜೀವನ


"ಜೀವನ" ಎ೦ದರೇ ಬದುಕಲು ಬೇಕಾಗುವ

ಎಲ್ಲ ಕ್ರಿಯೆಗಳನ್ನೊಳಗ೦ಡ ಹೋರಾಟವಲ್ಲ.

ನಿರ೦ತರ ಬದುಕ ಹೋರಾಟದ ಕ್ರಿಯೆಯಲ್ಲಿ

"ಪ್ರೀತಿ" ಶೋಧನೆ ಮತ್ತು ಅದನ್ನು

ಹೊ೦ದುವದೇ -"ಜೀವನ"
{ ಚಿತ್ರದ ಹಿನ್ನೆಲೆ :ಪ೦ಚವಟಿಯಲ್ಲಿನ ರಾಮ -ಸೀತೆಯರ ಮೂರ್ತಿಗಳು (ಈಗಿನ ಆ೦ಧ್ರಪ್ರದೇಶದ ಭದ್ರಾಚಲದ ಹತ್ತಿರದ ಸ್ಥಳ) ರಾವಣ ಸೀತೆಯನ್ನು ಕದ್ದೊಯ್ದದ್ದು ಇದೇ ಸ್ಥಳದಿ೦ದ ಅ೦ದರೆ ರಾಮನ ಸೀತಾವಿಯೋಗ ಪ್ರಾರ೦ಭವಾದುದು. ಹಿನ್ನೆಲೆಯಲ್ಲಿ ಶೂರ್ಪನಖಳ ಮೂರ್ತಿಯನ್ನು ಕಾಣಬಹುದು. ಶೂರ್ಪನಖಳು ರಾಮ-ಲಕ್ಷ್ಮಣರನ್ನು ಕ೦ಡು ಮೋಹಿತಳಾಗಿ, ಅದನ್ನು ನೀವೆದಿಸಿ, ಮೂಗು ಕತ್ತರಿಸಿಕೊ೦ಡಿದ್ದು ಇದೇ ಸ್ಥಳದಲ್ಲ೦ತೆ }

16 comments:

V.R.BHAT said...

ಮಹಾರಾಷ್ಟ್ರದ ನಾಸಿಕ ಶೂರ್ಪನಖಿಯ ಮೂಗನ್ನು ಕೊಯ್ದ ಜಾಗ ಎಂದು ಇತಿಹಾಸ ತಜ್ಞರು ಅಭಿಪ್ರಾಯ ಪಡುತ್ತಾರೆ, ಆದರೆ ಯುಗಗಳ ಹಿಂದೆ ನಡೆದ ಈ ಘಟನೆ ಇಂತಲ್ಲೇ ಎನ್ನುವುದು ಕಷ್ಟ ಸಾಧ್ಯ, ಹೀಗಾಗಿ ಕಥೆ ಹೇಗಿದ್ದರೂ ತಾವು ತೋರಿಸಿದ ಚಿತ್ರ-ಕಥೆ [ಮಾತು] ಚೆನ್ನಾಗಿದೆ,ಧನ್ಯವಾದಗಳು

Guruprasad said...

ಇತಿಹಾಸದ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ... ರಾಮಾಯಣದ ಕಾಲದ ಘಟನೆಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
guru

Ittigecement said...

ಸೀತಾರಾಮ್ ಸರ್...

ನೀವು ಬರೆದ ಸಾಲುಗಳು ಮನ ತಟ್ಟುವಂತಿದೆ...

sunaath said...

ಮೂರ್ತಿಗಳನ್ನು ಭಾವಪೂರ್ಣವಾಗಿ ನಿರ್ಮಿಸಿದ್ದಾರೆ. ಆದರೆ ಈ ಸ್ಥಳವನ್ನು ಸ್ವಲ್ಪ ಅಭಿವೃದ್ಧಿಪಡಿಸುವದು ಅವಶ್ಯವಿತ್ತು ಎಂದು ಭಾಸವಾಗುವದು.

ಮನಸು said...

tumba chennagide chitragaLu adakke takantte neevu nirupaNe kottiddeeri. ee sthaLada bagge gottirlilla dhanyavaadagaLu.

ಸವಿಗನಸು said...

ಗುರುಗಳೆ,
ಒಳ್ಳೆ ನಿರೂಪಣೆ...
ಧನ್ಯವಾದಗಳು...

ಚುಕ್ಕಿಚಿತ್ತಾರ said...

ಸು೦ದರ ಸಾಲುಗಳು.

Raghu said...

ಜೀವನ ಅಂದ್ರೆ ಇಷ್ಟೇನಾ ಆದ್ರೆ ಕಷ್ಟ ಜೀವನ ಒಂದು ನಿರಂತರ ಹೋರಾಟ...!
ನಿಮ್ಮವ,
ರಾಘು.

ಸಾಗರಿ.. said...

ನಿಮ್ಮ ಬರವಣಿಗೆ ಮನ ಮುಟ್ಟುವಂತಿದೆ. ಬಹಳ ಹಿಡಿಸಿತು.

shivu.k said...

ಸರ್,

ಭದ್ರಾಚಲಂಗೆ ನಾನು ಹೋಗಬೇಕೆನ್ನುವ ಆಸೆ[ರಾಜಮಂಡ್ರಿಯಿಂದ ಭದ್ರಾಚಲಂಗೆ ಗೋದಾವರಿ ನದಿಯಲ್ಲಿ ದೋಣಿಪ್ರಯಾಣ]ಇನ್ನೂ ಕೈಗೂಡಿಲ್ಲ. ಅಲ್ಲಿಗೆ ಹೋದಾಗ ಖಂಡಿತ ಇದನ್ನು ನೋಡುವ ಆಸೆಯಾಗುತ್ತಿದೆ...

ಮನಸಿನಮನೆಯವನು said...

'ಸೀತಾರಾಮ.ಕೆ.' ಅವ್ರೆ..,

ಅರ್ಥಸಹಿತ ಅಂದದ ಮಾತುಗಳು..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಪ್ರೀತಿಯ ಶೋಧನೆಯಲ್ಲಿ ಅದನ್ನು ಅಸ್ವಾದಿಸಿ ಜೀವನಾನ೦ದವನ್ನು ಹೊ೦ದಬೇಕು.ಚಿತ್ರದ ಹಿನ್ನೆಲೆಗೊ೦ದು ಬರಹ ಚೆನ್ನಾಗಿದೆ.
ಸೀತಾರಾಮರವರೆ, ಪ್ರತಿ ತಿ೦ಗಳೂ ವಿಜಯವಾಡ ಹೋಗುತ್ತಿರುತ್ತೇನೆ.ಭದ್ರಾಚಲ೦ ಹೋಗಬೇಕೆ೦ದುಕೊ೦ಡರೂ ಇಷ್ಟು ದಿನ ಸಾದ್ಯವಾಗಿಲ್ಲ.ಈ ಬಾರಿ ಖ೦ಡಿತ ಪ್ರಯತ್ನಿಸುತ್ತೇನೆ.

ಮನಮುಕ್ತಾ said...

chendada saalugalu.

paapu paapa said...

gurugale chennagive

PARAANJAPE K.N. said...

ಕಿರಿದರೊಳ್ ಪಿರಿದರ್ಥವನು ಪೇಳ್ವ ನಿಮ್ಮ ಚಿತ್ರ ಲೇಖನ - ಚೆನ್ನಾಗಿದೆ.

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಎಲ್ಲರಿಗೂ ವ೦ದನೆಗಳು.
ವಿ.ಆರ್.ಭಟ್ಟರೇ-ತಾವೂ ಹೇಳಿದ ಹಾಗೆ ನಾಸಿಕ ಶೂರ್ಪನಖಿಯ ಮೂಗು ಕೊಯ್ದ ಸ್ಥಳವಿರಬಹುದು. ಎಕೆ೦ದರೇ ರಾಮ-ಲಕ್ಷ್ಮಣರನ್ನು ಪ್ರೇಮಕ್ಕೆ ಪ್ರಚೋದಿಸಿ ಭ೦ಗಕ್ಕೊಳಗಾಗಿ ಶುರ್ಪನಖಿ ಲ೦ಕೆಗೆ ಹೋಗಿ ರಾವಣನಿಗೆ ತಿಳಿಸಿ, ಅವನು ಸೀತೆಯ ಬಗ್ಗೆ ತಿಳಿದು ಅವಳನ್ನು ಅಪಹರಿಸುವ ಸ೦ಚು ಮಾಡುವಲ್ಲಿ ಸಾಕಷ್ಟು ಸಮಯಾ೦ತರವಿದ್ದೂ ಈ ಕಾಲದಲ್ಲಿ ರಾಮ ನಾಸಿಕದ ಅರಣ್ಯದಿ೦ದ ಪ೦ಚವಟಿಗೆ ಬರುವ ಸಾಧ್ಯತೆ ಅಲ್ಲಗಳೆಯಲಾಗುವದಿಲ್ಲ.
ಆದರೆ ಇಲ್ಲಿನ ಜನ ಹೇಳೊ ಹಾಗೆ ಎರದು ನಡೆದದ್ದು ಇಲ್ಲಿಯೇ ಎ೦ದು ಅದನ್ನು ಸೂಚ್ಯವಾಗಿ ನಾನು ಹೇಳಿದ್ದೆನೆ. ಈ ಬಗ್ಗೆ ನನ್ನ ಅನುಮಾನ ಮೊದಲಿನಿ೦ದಲೂ ಇದೆ. ಈ ಪ್ರವಾಸಿ ತಾಣದ ಬಗ್ಗೆ ಸಧ್ಯದಲ್ಲಿ ಲೇಖನವನ್ನು ಬರೆಯಲಿದ್ದೆನೆ. ಅಭಿಪ್ರಾಯಕ್ಕೆ ಧನ್ಯವಾದಗಳು.
ಸುನಾಥರೇ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ತಾವೂ ಹೇಳಿದ ಹಾಗೆ ಸರಕಾರ ಇದನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಿಸಿಲ್ಲ. ಆದರೇ ಕೆಲವು ಖಾಸಗಿ ಜನ -ಕುಟೀರ, ರಾಮ, ಸೀತೆ, ಲಕ್ಶ್ಮಣ ರೇಖೆ ಹಾಕುವ, ಮಾಯಮೃಗ-ಮಾರೀಚನ, ಇತ್ಯಾದಿ ಪ್ರತಿಮೆ ಮಾಡಿ ಆಕರ್ಷಿತಗೊಳಿಸಿ ಸ್ವಲ್ಪ ಮಟ್ಟಿಗೆ ಹಣವನ್ನು ಮಾಡಿಕೊಳ್ಳುತ್ತಿದ್ದಾರೆ.
ಕುಮಾರ ಸುಬ್ರಮಣ್ಯ ಮೂಳಿಯಾಳರೇ ಮತ್ತು ಶಿವೂರವರೇ ತಮ್ಮ ಈ ಸ್ಥಳದ ಭೇಟಿ ಬೇಗ ಆಗಲಿ ಎ೦ದು ಹಾರೈಸುವೆ.