Tuesday, October 11, 2011

ಶೂನ್ಯ ದಿಂದ........ ಪರಿಪೂರ್ಣದೆಡೆಗೆ...........

ಸಹ ಬ್ಲೋಗಿಗರಾದ -ಸುಗುಣಾರ " ಮೃದುಮನಸ್ಸು" ಬ್ಲಾಗ್' ನ "ಶೂನ್ಯ" ಕಥೆಯ ಮುಂದುವರೆದ ಭಾಗ..........
(ಮೊದಲ ಭಾಗದ ಕೊಂಡಿ : http://mrudhumanasu.blogspot.com/2011/10/blog-post_09.html)


ಉಸಿರು ಬಿಕ್ಕುತಿದೆ...

ದುಃಖ ಉಮ್ಮಳಿಸುತಿದೆ
ಅನಾಥ ಪ್ರಜ್ಞೆ ಯ
ಶೂನ್ಯ ಸಿಂಹಾಸನದಡಿ
ನನ್ನ ಬದುಕು ಜೋತಾಡುತಿದೆ.....

ಇಪ್ಪತ್ತು ವರ್ಷಗಳ ಗಂಡನ ಅಪರಿಮಿತ ಪ್ರೀತಿಯಲ್ಲಿ ನಾನು, ನನ್ನೆಲ್ಲಾ.. ಕೊರತೆಯನ್ನು ಮರೆತು ಆನಂದದಿಂದ ಮರೆತಿದ್ದೆ ...
ತವರ ನೆನಪು ಮಾಸಿತ್ತು ....
ಮಕ್ಕಿಳಿಲ್ಲದ ಕೊರಗೂ ಕಾಡಲಿಲ್ಲ.....
ಬದುಕು.. ಸಾಗಿದ ಬಗೆಯೇ ಅರಿವಾಗಲಿಲ್ಲ....
ಇಂದು ಆ ಅಪರಿಮಿತ ಪ್ರೀತಿ ನೀಡಿದ, ಸಹೃದಯ ಜೀವ.... ನನ್ನಿನಿಯ.... ನನ್ನನ್ನು ..ಬಾಳದಾರಿಯಲ್ಲಿ.. ನಡುವೇ.. ಬಿಟ್ಟಗಲಿದಾಗ .... ಮೇಲಿನ ಗೀತೆ ಮನದಲ್ಲಿ ಗವ್ವೆನ್ನುವಂತೆ ಬಾರಿ ಬಾರಿ ಸುಳಿಯುತ್ತಿದೆ ...

ಮಕ್ಕಳಿಲ್ಲದ ಕೊರಗು ಕಾಡುತ್ತಿದೆ...

ದತ್ತು ಮಗುವನ್ನೂ... ತಂದು ಸಾಕಲಿಲ್ಲವಲ್ಲಾ... ಆಸರೆಗೆ... ಎಂಬ ಭಾವ.. ಅಪರಾಧೀ ಪ್ರಜ್ಞೆಯಾಗಿ ಕಾಡುತಿದೆ ಎನಿಸುತ್ತಿದೆ ....

ವೃದ್ಧ ಅತ್ತೆಮಾವರು ನನಗೆ ಆರ್ಥಿಕ ಭಾರವಾಗಬಾರದೆಂದು ಈಗ ಮೈದುನನ ಮನೆಗೆ ನಡೆದಿಹರು......

ಮೈದುನ -ತಂಗಿ, ತಮ್ಮಲ್ಲಿಗೆ ನನ್ನನ್ನು ಕರೆದರೂ.. ಇವರೊಡನೆ ಇಪ್ಪತ್ತುವರ್ಷ ಬಾಳಿದ ನೆನಪುಗಳ ಹೊತ್ತ ಈ ಸ್ವಂತ ಮನೆಯ ತ್ಯಜಿಸಲು ಯಾಕೋ ಮನಸ್ಸಿಲ್ಲ.....
ಅಪ್ಪ-ಅಮ್ಮರೇ ಅಣ್ಣ ಅತ್ತಿಗೆಯರ ಆಡಳಿತದ ನಡುವೆ, ತವರಲ್ಲಿ ನೇಪಥ್ಯವಾಗಿರುವಾಗ ಅಲ್ಲದೇ ಇಷ್ಟು ದಿನ ಅದನ್ನು ಬಯಸದೆ ಇದ್ದುದು... ಇಂದು ಅದನ್ನು ಆಸರೆ ಎ೦ದು ಕಲ್ಪಿಸಲಾಗದು.....

ದೀಪ ನೋಡುತ್ತಾ ಕುಳಿತಿದ್ದ ಅನ್ನಪೂರ್ಣಾ ಒಮ್ಮೆ ಕಣ್ಣು ತಿರುಗಿಸಿ.... ಸುತ್ತೆಲ್ಲಾ ನೋಡಿದಾಗ,
ಕತ್ತಲು ಅಡರಿದ೦ತೆಸಿತು...ಸೂರ್ಯ ಸಂಪೂರ್ಣ ಮರೆಯಾಗಿ ಸಂಜೆ ದಾಟಿ ಕತ್ತಲು ಎಲ್ಲೆಡೆ ಹಾಸಿತ್ತು ..
ಒಮ್ಮೆ ಭಯವು ಎನಿಸಹತ್ತಿತು....

.............ಹೀಗೆ ಅನ್ನಪೂರ್ಣಾಳ ಮನ, ಭೂತ-ವರ್ತಮಾನ-ಭವಿಷ್ಯತ್ತುಗಳ ಯೋಚನೆಯಲ್ಲಿ, ಗತಿಸಿದ ಗಂಡ ಅನುರಾಗನ ನೆನಪಲ್ಲಿ- ಅಂಗಳದಲ್ಲಿ ಹಚ್ಚಿಟ್ಟ ಹಣತೆಯ ಜ್ಯೋತಿಯಲ್ಲಿ , ಎವೆಯಿಕ್ಕದೆ ನೆಟ್ಟ ನೋಟದಲ್ಲಿ.... ಗರ ಗರ ತಿರುಗುತ್ತಿತ್ತು....



-೧-
ಕತ್ತಲಿನ ಭಯದಲ್ಲಿಯೇ ಅನ್ನಪೂರ್ಣ ಬೆಳುಕು ಚೆಲ್ಲುತ್ತಿದ್ದ ದೀಪವನ್ನು ಮತ್ತೆ ತದೇಕ ಚಿತ್ತವಾಗಿ ನೋಡಲಾರ೦ಭಿಸಿದಳು....ದೀಪದಲ್ಲಿನ ಬೆಳಕು ಈಗ ಮೆಲ್ಲ ಮೆಲ್ಲ ಸುತ್ತಾ ಹರಡುತ್ತಾ ಕತ್ತಲನ್ನು ನು೦ಗುತ್ತಿದ್ದ೦ತೆನಿಸಿತು...
ಆಶೆ ಬೆಳಕಾಗಿ ಚೆಲ್ಲುತ್ತಿದೆ ಎನಿಸುತ್ತಲೇ...
ಮನ ಮತ್ತೆ ವಿಚಾರಕ್ಕೆ ತಿರುಗಹತ್ತಿತು...


ನೆನಪಿನ ಸರಣಿ ಮತ್ತೆ ಮುಂದು ವರೆಯಿತು.....


"ಅನ್ನು ನೀನೇಕೆ ಕೆಲಸಕ್ಕೆ ಸೇರಬಾರದು "
"ಏಕೆ ಅನು ನೀನು ದುಡಿಯುತ್ತಿರುವದು ನಮ್ಮಿಬ್ಬರಿಗೆ ಸಾಲದೇ?"
"ಹಾಗಲ್ಲ ಅನ್ನು ನಿನಗೂ ಹೊರ ಪ್ರಪಂಚದ ಸಂಪರ್ಕವಿರಬೇಕು ... ಸಾಮಾಜಿಕ ಸಂಪರ್ಕ ಒಳ್ಳೆಯದು ... ಜೊತೆಗೆ ಆರ್ಥಿಕ ಸ್ವಾಯುತ್ತತೆ ಹೆಣ್ಣಿಗೆ ಅವಶ್ಯ ಸಹಾ.....ಗಂಡನಿಗೆ ಪೂರ್ತಿ ಅಲವತ್ತಿಕೊಂಡ ಜೀವನ... ಮುಂದೆ... ನಾನೇನಾದರೂ ನಿನ್ನ ಒಂಟಿ ಬಿಟ್ಟು ಹೋಗಬೇಕಾದ..."
"ಛೀ ಬಿಡ್ತು ಎನ್ನಿ... ನಿಮಗೂ ಏನಾಗೊಲ್ಲ..... ನನಗೂ ಏನಾಗೊಲ್ಲ.....ನನಗೆ ಯಾವ ಸಾಮಾಜಿಕ ಸಂಪರ್ಕವು ಬೇಡ.. ಆರ್ಥಿಕ ಸ್ವಾಯುತ್ತತೆಯು ಬೇಡ.... ನೀವಿದ್ದರೆ ಅಷ್ಟೆ ಸಾಕು..." ಎಂದು ಅವನ ಬಾಯಲ್ಲಿ ಕೈ ಇಟ್ಟು ನುಡಿದ್ದದ್ದು ನೆನಪಿಗೆ ಸಳ್ಳೇ೦ದು ಬಂತು....
ಅಂದು ಅವನ ಮಾತು ಕೇಳಿ ಕೆಲಸಕ್ಕೆ ಸೇರಿದ್ದರೆ... ಕೆಲಸದ ನಡುವೆ... ಮಿತ್ರರ ಸಂಪರ್ಕದ ನಡುವೆ ....
ಇಂದಿನ ಅವನ ಅಗಲಿಕೆಯಲ್ಲಿನ ಈ ಒಂಟಿತನ ಇಷ್ಟೊಂದು ಕಾಡುತ್ತಿರಲಿಲ್ಲವೇನೋ ಎನಿಸಿತು......
ಇಗಲೂ ಕಾಲ ಮಿಂಚಿಲ್ಲ.... ಇನ್ನು ಮುಂದೆಯೂ... ಕೆಲಸಕ್ಕೆ ಸೇರಿ ಅವರ ಮನಸ್ಸಿನಂತೆ ನಡೆದು ಈ ಒಂಟಿತನದ ಹಾದಿಯನ್ನು ಮರೆಯಬಹುದು......ಎನ್ನಿಸಹತ್ತಿತು..
ಮೊನ್ನೆ ಇವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ಇವರ ಮೇಲಧಿಕಾರಿ ಕಿರಣ ದಂಪತಿಗಳು- ಅನುರಾಗನನ್ನು ಕೊಂಡಾಡುತ್ತಾ..." ಮೇಡಂ.. ನೀವು ಕೆಲಸಕ್ಕೆ ಸೇರಿ.. ನಿಮ್ಮ ದುಖ ಮರೆಯಲು ಇದು ಒಂದು ದಾರಿ... ಜೊತೆಗೆ ಸ್ವಲ್ಪ ಸಂಪಾದನೆಯು ಆಗುತ್ತೆ... ಯೋಚಿಸಿ ... ನಿಮಗೆ ನನ್ನ ಸಲಹೆ ಸೂಕ್ತ ಎನಿಸಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ " ಎಂದದ್ದು ನೆನಪಿಗೆ ಸುಳಿಯಿತು..
ಕಿರಣ ದಂಪತಿಗಳನ್ನೂ ಅನು ಸದಾ ಹೊಗಳುತ್ತಿದ್ದುದು.. ಮತ್ತು ಅವರ ಸಹಾಯದ ಗುಣವನ್ನೂ
ಕೊಂಡಾಡುತ್ತಿದ್ದು... ಆ ಕ್ಷಣ ನೆನಪಾಗಿತ್ತು...
ತಾನು ಕೆಲಸಕ್ಕೆ ಸೇರಬೇಕು ಎನ್ನುವ ತುಡಿತ ಬಲವಾಗತೊಡಗಿತು....
ತಾನು ಕೆಲಸಕ್ಕೆ ಸೇರಿದರೆ ಅತ್ತೆ -ಮಾವ ಸಹಿತ ಖಂಡಿತ ಬಂದು ಜೊತೆಯಲ್ಲಿರುತ್ತಾರೆ....

-೨-
ಅನಾಥ ಮಗುವನ್ನು ದತ್ತು ತೆಗೆದುಕೊಂಡಿದ್ದರೆ??....
ಎಂಬ ವಿಷಯ ತಲೆಗೆ ಬಂದದ್ದನ್ನು ಮತ್ತೆ ನೆನಸುತ್ತಲೇ ಅನ್ನಪೂರ್ಣಾಳ ಮನ ಮತ್ತೆ ಯೋಚಿಸತೊಡಗಿತು....
ಅನಾಥ ಮಗುವನ್ನು ಇಗಲೂ ತಂದು ಸಾಕಬಹುದು...
ಇವರು ಮಾಡಿದ ಆಸ್ತಿಯಲ್ಲಿ ಮಗುವೊಂದನ್ನು ಸಾಕಿ ಸಲುಹಬಹುದೆನಿಸಹತ್ತಿತು..
ಆ ಮಗುವ ಲಾಲನೆ-ಪಾಲನೆಯಲ್ಲಿ ...ಒಂಟಿತನದ ಮುಂದಿನ ಬದುಕು ಸ್ವಲ್ಪ ಹಗುರವಾಗಬಹುದು....
ನಲವತ್ತರ ನಾನು ಅರವತ್ತಾಗುವಲ್ಲಿ ಮಗು ಇಪ್ಪತ್ತರದ್ದಾಗಿ ನನ್ನ ಮುದಿಕಾಲಕ್ಕೆ ಆಸರವಾಗಲೂಬಹುದು....
ಅತ್ತೆಮಾವರ ಜೊತೆ ಮಗುವ ಲಾಲನೆ ಪಾಲನೆಗೇ ಜೊತೆಯೂ ಆಗಬಹುದ೦ತೆನಿಸಿ ಮನ ಮುದವಾದ೦ತೆನಿಸಿತು...
ದೀಪದ ಬೆಳಕಲ್ಲಿ ಈಗ ಕತ್ತಲೆ ಕಡಿಮೆಯಾಗುತ್ತಿದೆ ಎನಿಸಹತ್ತಿತ್ತು....

-೩-
ಮತ್ತೆ ಯೋಚನೆ ಭೂತಕ್ಕೆ ತಿರುಗಿತು.....
ಅಂದು ಮನೆಯಿಂದ ದೂರದಲ್ಲಿ ..ಇಬ್ಬರು ಸಂಜೆ ವಿಹಾರಕ್ಕೆ ಮನೆಯ ದೂರದಲ್ಲಿರುವ ಉದ್ಯಾನವನದಲ್ಲಿ ತಿರುಗುತ್ತಿದ್ದಾಗ ವೃಧ್ದರ ತಂಡವೊಂದು ಮೋಜಿನಿಂದ ಆಟವಾಡುತ್ತಿದ್ದರು...... ಮಧ್ಯವಯಸ್ಕ ದಂಪತಿಗಳು ಅವರೊಡನೆ ಮೋಜಿನಲ್ಲಿ ನಿರತರಾಗಿದ್ದು ಅವರನ್ನೆಲ್ಲಾ ಆಟಕ್ಕೆ ಹುರಿದು೦ಬಿಸುತ್ತಿದ್ದು ಕಂಡಿತು....
"ಅನು ಇವರೆಲ್ಲಾ ಯಾರು"
" ಅನ್ನು ಆ ದಂಪತಿಗಳು ಪಕ್ಕದ ಕಾರ್ಖಾನೆ ಮಾಲೀಕರು...ನಮ್ಮ ಹಾಗೆ ಮಕ್ಕಳಿಲ್ಲ... ಅವರು ಒಂದು ವ್ರುಧ್ಧಾಶ್ರಮ ನಡೆಸುತ್ತಿದ್ದಾರೆ.. ವಾರಾ೦ತ್ಯದಲ್ಲಿ ಅವರು ಎಲ್ಲರೊಡನೆ ಸೇರಿ ಸಮಯ ಕಳೆಯುತ್ತಾರೆ... ಕೆಲವೊಮ್ಮೆ .... ಹೀಗೇ ಹೊರ ಪ್ರವಾಸಕ್ಕೂ ಬರುತ್ತಾರೆ..."
"ಹೌದಾ!!...ನಿಜಕ್ಕೂ ಒಳ್ಳೆ ಕೆಲಸ"
" ಹೌದು ಅನ್ನು ನಾವು ಒಂದಿಷ್ಟು ಹಣ ಮಾಡಿದ ಮೇಲೆ ಹೀಗೆ ಒಂದು ವ್ರುಧ್ಧಾಶ್ರಮಕ್ಕೆ ಸೇರಿ ಬಿಡುವಾ....ಮುಪ್ಪಲ್ಲಿ ಎಲ್ಲರೊಡನೆ ಹೀಗೆ ಇರುವದು ಮಜವಲ್ಲವೇ...."
"ಹೌದು.. ನಿಜ ಅನು... ಇಗಲೇ ಸೇರಿ ಬಿಡುವಾ ಈಗ ಅವರ ಸೇವೆ ಮಾಡುತ್ತಾ ಇರುವಾ...ಮುಪ್ಪಲ್ಲಿ ನಮಗೆ ಯಾರೋ ಆಸರೆ ಆಗುತ್ತಾರೆ..ಅಲ್ಲವಾ..."
ಅಂದು ಹೇಳಿದ್ದು ಪೂರ್ತಿಗ೦ಭೀರವಾಗಿಲ್ಲದಿದ್ದರೂ ಮನದ ಮೂಲೆಯಲ್ಲೇನೋ ತುಡಿತವಿದ್ದಿರಬಹುದಿತ್ತು ಎಂದು ಇಂದು ಅನ್ನಿಸುತಿದೆ .....
ಗಂಡ ಸಂಪಾದಿಸಿದ ಹಣದಲ್ಲಿ ಅದನ್ನು ಇಂದು ಸಾಕಾರಮಾಡಿಕೊಳ್ಳಬಹುದೆನಿಸಹತ್ತಿತು....
ಜೊತೆಗೆ ತಾನು ಕೆಲಸ ಮಾಡುತ್ತಿದ್ದರೆ .......
ಆ ಹಣದಿಂದ ಇನ್ನೂ ಹೆಚ್ಚಿನ ಸಾರ್ಥಕತೆ ಇಂತಹುವುಗಳಲ್ಲಿ ತೊಡಗುವದರಿಂದ ಹೊಂದಬಹುದಲ್ಲವೇ.....
ಬೆಳಸಿದ ಮಕ್ಕಳು ಮುಪ್ಪಿನಲ್ಲಿ ನೋಡದಿದ್ದರೂ.. ಇ೦ತಹ ಕಾರ್ಯಗಳು ಮುಂದೊ೦ದು ದಿನ ಬದುಕಿಗೆ ಆಸರೆಯಾಗಬಹುದಲ್ಲವೇ...

ಈಗ ದೀಪದ ಬೆಳಕು ಮನೆಯಲ್ಲಿನ ಕತ್ತಲೆ ಓಡಿಸಿದ೦ತೆನಿಸಹತ್ತಿತ್ತು.....

-೪-
ಕತ್ತಲ ಬಗ್ಗೆ ಯೋಚಿಸುವಾಗ ಅನುಗೆ ಆ ಘಟನೆ ನೆನಪಾಗದೆ ಇರದು.....
ಅಂದು ಸಂಜೆ ಭಾರೀ ಗುಡುಗು... ಸಿಡಿಲು.....
ಅನು ಅಂದು ಆಫಿಸಿನಿಂದ ಇನ್ನು ಬಂದಿರಲಿಲ್ಲ.....
ಗಾಳಿ ಮಳೆ ಗುಡುಗು ಸಿಡಿಲು ಜೋರಾಗಿ..... ವಿಧ್ಯುತ್ ಪೂರೈಕೆ ನಿ೦ತಿತ್ತು... ಮನೆಯಲ್ಲಿ ಕತ್ತಲು ಗವ್ವೆನಿಸಹತ್ತಿತು... ಸ೦ಜೆ ರಾತ್ರಿಗೆ ಸರಿದು ...ಅನು ಇನ್ನು ಬರದೆ...ಅವನ ಫೋನ್ ಇರದೇ.... ಮನವನ್ನ ಭಯವಾವರಿಸಿತ್ತು....ಮೇಣಬತ್ತಿ ಹಚ್ಚಲು ತಡಕಾಡಿ ಸಿಗದೇ ದೇವರ ಮನೆಯ ದೀಪದಲ್ಲಿಯೇ ಕುಳಿತಿದ್ದಳು... ಹೆದರಿ ಮುದ್ದೆಯಾಗಿದ್ದಳು ಅನ್ನಪೂರ್ಣಾ..
ಬಾಗಿಲು ತಡಬಡ ಬಡೆದ ಶಬ್ದಕ್ಕೆ ಭಯದಿಂದಲೇ ದೇವರ ಮನೆಯಿಂದ ಹೊರಟುಬಂದು .. ಭಯದಿಂದಲೇ ಅನುವೇ ಬಂದದ್ದು ಎಂದು ಕೇಳಿ ಖಚಿತಪಡಿಸಿಕೊಂಡು ಬಾಗಿಲು ತೆರೆದಿದ್ದ ಅವಳು ಅನುವನ್ನ ನೋಡುತ್ತಲೇ ...ಅವನನ್ನು ಜೋರಾಗಿ ಆಪ್ಪಿ ಅಳುತ್ತಾ..
" ಅನು ಏಕೆ ತಡ? ಫೋನ್ ಏಕೆ ಮಾಡಲಿಲ್ಲ? ಮನೆಯೆಲ್ಲಾ ಕತ್ತಲು ...ಮಳೆ... ಗುಡುಗು... ಸಿಡಿಲು.. ಮಿಂಚು... ನನಗೆ ಎಷ್ಟು ಭಯ ಆಗಿತ್ತು ಗೊತ್ತಾ???"
ಅವಳನ್ನು ಒಂದು ಕೈಯಲ್ಲಿ ಬಳಸಿ ಜೋರಾಗಿ ಅಪ್ಪಿ, ಇನ್ನೊಂದು ಕೈಯಲ್ಲಿ ತಲೆ ನೇವರಿಸುತ್ತಾ.. "ಅನ್ನು ಹೀಗೆ ಭಯ ಪಟ್ಟರೆ ಹೇಗೆ ಆಫೀಸಿನಿಂದ ಹೊರಟ ನನಗೆ.. ಬಸ್ಸ ಸಿಗದೇ... ಆಟೋ ಸಿಗದೇ... ಮೊಬೈಲ್ ಸಂಪರ್ಕ ಬಂದ ಆಗಿ... ಯಾರದೋ ಕಾರಲ್ಲಿ ಸಹಾಯ ಪಡೆದು ಇಲ್ಲಿಗೆ ಬಂದೆ.. ಕ್ಷಮಿಸು... ಆದರೆ ನೀನು ಹೀಗೆ ಹೆದರಿದರೆ ಹೇಗೆ .... ನಾನೆ ಇಲ್ಲವಾದರೆ ಇನ್ನು ಹೇಗೆ ?...."
ಅವನ ಬಾಯಿಗೆ ಕೈ ಇಟ್ಟು " ಛೀ ಹಾಗೆ ಹೇಳಬೇಡಿ" ಎಂದಳು.
" ಅನ್ನು ಹೀಗೆ ಹೆದರಿದರೆ ಹೇಗೆ... ಬದುಕನ್ನು ಎದುರಿಸಬೇಕು... ಎಂಥ ಕತ್ತಲು ಬಂದರು ಮೆಟ್ಟಿ ನಿಲ್ಲುವ ಛಲವಿರಬೇಕು... ನಾನಿಲ್ಲ ಎಂದರು ನೀನು ಬಾಳಿ ತೋರಿಸಬೇಕು... ಹೀಗೆ ಎದೆಗು೦ದಬಾರದು..." ಎಂದೆಲ್ಲಾ ಸಂತೈಸಿದ್ದು ನೆನಪಿಗೆ ಬರಹತ್ತಿತ್ತು....


ಆ ಮಾತೆಲ್ಲಾ ನೆನಪಾದಂತೆ ಅನ್ನಪೂರ್ಣಾಳ ಮನ ಗಟ್ಟಿಯಾದ೦ತೆನಿಸಿತು... ದೀಪದ ಬೆಳಕು ಪ್ರಖರವಾಗಿ... ಮನೆಯ ಕತ್ತಲು... ಮನದ ಭಯವು...ಇಲ್ಲವಾದ೦ತೆನಿಸಿ ಮುಂದಿನ ದಾರಿ ಸ್ಪಷ್ಟವೆನಿಸತೊಡಗಿತು...


......ಮುಕ್ತಾಯ ಅಲ್ಲ ಪ್ರಾರ೦ಭ........

ಅನ್ನಪೂರ್ಣಳ ಮನ ಈಗ ದೀಪದ ಜ್ಯೋತಿಯಲ್ಲಿ ಬೆಳಕಾಗಿತ್ತು... ಮನೆ-ಮನದಲ್ಲಿ ಆವರಿಸಿದ್ದ ಕತ್ತಲೆ ಓಡಿ ಹೋದ೦ತೆನಿಸಿತು....
ಅವಳ ನಿರ್ಧಾರ ಗಟ್ಟಿಯಾಗಿತ್ತು. ಬೆಳಿಗ್ಗೆ ಎದ್ದವಳೇ ಕಿರಣ ದಂಪತಿಗಳನ್ನು ಕಂಡು ಕೆಲಸವೊಂದಕ್ಕೆ ಸೇರುವದು...ಅತ್ತೆ-ಮಾವರನ್ನು ಜೊತೆಗೆ ಕರೆದುಕೊಂಡು ತ೦ದಿಟ್ಟುಕೊಳ್ಳುವದು... ಆಮೇಲೆ ಅವರೊಡನೆ ಅನಾಥಾಶ್ರಮಕ್ಕೆ ಹೋಗಿ ಮಗುವೊಂದನ್ನು ದತ್ತು ಪಡೆದು ಬೆಳೆಸುವದು...
ಸಮಯ ಸಿಕ್ಕಾಗ ವ್ರುಧ್ಧಾಶ್ರಮದಲ್ಲಿ ತನು -ಮನ-ಧನಗಳ ಸೇವೆ ಸಲ್ಲಿಸಿ ಬದುಕ ಸಾರ್ಥಕಪಡಿಸಿಕೊಳ್ಳುವ ಕಾಯಕಕ್ಕೆ ತೊಡುಗುವದು...
ಈಗ ಮನ ಶೂನ್ಯದಿ೦ದ ಪರಿಪೂರ್ಣದೆಡೆಗೆ ಸಾಗುತ್ತಿದೆ ಎನಿಸಹತ್ತಿತ್ತು..


ದೂರದಲ್ಲೆಲೋ ಸುಶ್ರಾ ವ್ಯವಾಗಿ ....


"ಸೂರ್ಯನಿಲ್ಲದಿದ್ದರೇನು ??
ಹಣತೆ ಬೆಳಕ ನೀಡದೇ.......?

ಜಗವ ಬೆಳಗದಿದ್ದರೇನು?
ಮನೆಯ ಬೆಳಗಲಾಗದೇ...?

ಮನಕೆ ಮನವು ಇಲ್ಲದಿದ್ದರೇನು?
ಮನವೇ ಮನಕೆ ಆಗದೆ?"

ತೇಲಿ ಬರುತ್ತಿದ್ದ ಹಾಡು ಮನಕ್ಕೆ ತಂಗಾಳಿಯ ಹಿತವನ್ನು ನೀಡುತ್ತಿತ್ತು......




16 comments:

ಮನಸು said...

ಹುಫ್..... ಒಂದೇ ಉಸಿರಿಗೆ ಓದಿಬಿಟ್ಟೆ.... ತುಂಬಾನೇ ಚೆನ್ನಾಗಿದೆ ಸರ್... ಮನದಲ್ಲಿ ಮೂಡುವ ಹಲವಾರು ತೊಳಲಾಟಗಳು, ಏನು ಮಾಡುವುದು ಮುಂದೆ ಎಂಬ ಪ್ರಶ್ನೆಗಳಿಗೆ ಉತ್ತರ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ...ಜೀವನದಲ್ಲಿ ಯಾರಿಲ್ಲದಿದ್ದರೂ ನಮಗಾಗಿ ಜೀವಿಸಬೇಕು, ಜೀವನಕ್ಕೆ ಹಲವಾರು ದಾರಿಯಿದೆ ಅದನ್ನು ಹುಡುಕಿ ನೆಡೆಯಬೇಕು ಎಂಬಂತೆ ಚಿತ್ರಿಸಿದ್ದೀರಿ ತುಂಬಾ ಧನ್ಯವಾದಗಳು

ಭಾವನೆಗಳು ಬಾಡಿ ಹೋದ ಮೇಲೆ
ಬದುಕುವ ಆಸೆ ಚಿಗುರೊಡೆದಿದೆ
ತನಗಾಗೇ ನೂರ್ಕಾಲ ಬಾಳ ಬಯಸಿದೆ
ಈ ಒಂಟಿ ಜೀವ...

ಸುಮ said...

ಸುಗುಣ ಅವರ ಕಥೆಗೆ ಅರ್ಥಪೂರ್ಣ ಅಂತ್ಯ.ಚೆನ್ನಾಗಿದೆ ಸರ್.

Dr.D.T.Krishna Murthy. said...

ಸೀತಾರಾಂ ಸರ್;ಬದುಕು ಮುಖ್ಯ ಎನ್ನುವುದನ್ನು ಸೊಗಸಾಗಿ ಚಿತ್ರಿಸಿದ್ದೀರಿ. ಧೈರ್ಯದಿಂದ ಬಾಳುವುದರಲ್ಲಿ ಬದುಕಿನ ಸಾರ್ಥಕ್ಯವಿದೆ.

sunaath said...

ಸೀತಾರಾಮರೆ,
ಸುಗುಣಾರ ಕತೆಯನ್ನು ಅರ್ಥಪೂರ್ಣವಾಗಿ ಬೆಳೆಸಿದ್ದೀರಿ. ತುಂಬ ಇಷ್ಟವಾಯಿತು.

Subrahmanya said...

ಮುಂದುವರಿದ ಕತೆಯಾದರೂ ಇದೇ ಒಂದು ಪ್ರತ್ಯೇಕ ಭಾಗದಂತೆ ಇದ್ದು ಚೆನ್ನಾಗಿ ಮೂಡಿಬಂದಿದೆ. ಹೀಗೆ ಮುಂದುವರೆದು ಉತ್ತಮ ಅಂತ್ಯ ಕಾಣಲಿ ಎಂದು ಹಾರೈಸುತ್ತೇನೆ. ತುಂಬಾ ಚೆನ್ನಾಗಿದೆ.

minchulli said...

"ಭಾವನೆಗಿಂತ ಬದುಕು ದೊಡ್ಡದು
ಬದುಕಿಗಿಂತ ಸಾಧನೆ ದೊಡ್ಡದು"
ಎಂಬುದು ಚೆನ್ನಾಗಿ ವ್ಯಕ್ತವಾಗಿದೆ...
meaningful ending

minchulli said...

ದಯವಿಟ್ಟು ಕಾಗುಣಿತಗಳ ಕಡೆ ಗಮನ ಕೊಡಿ.. ಅದು ತಂತ್ರಾಂಶದ ಸಮಸ್ಯೆಯೂ ಇರಬಹುದು. ಆದರೆ ತಪ್ಪುಗಳು ಓದಿನ ಖುಷಿ ಮತ್ತು ಓಘಕ್ಕೆ ತುಂಬಾ ತೊಂದರೆ ಕೊಡುತ್ತೆ.

ಸೀತಾರಾಮ. ಕೆ. / SITARAM.K said...

-ಮನಸ್ಸು:ನಿಮ್ಮ ಕಥೆ ಓದಿ ಯಾಕೋ ಇದನ್ನು ಮುಂದುವರೆಸಬೇಕು...ಯಾರಿಂದಲೂ ಯಾರ ಬದುಕು ಶೂನ್ಯವಾಗಬಾರದು... ನಮ್ಮ ಬದುಕನ್ನು ನಾವೇ ಶೂನ್ಯ ಮತ್ತು ಅನಂತಕ್ಕೆ ಒಯ್ಯುವದು....ಬದುಕುವ ಇಚ್ಚಾಶಕ್ತಿ ಇದ್ದರೇ ಸಾಕು ಎಂದೆನಿಸಿದ್ದು ಈ ಕಥೆಯ ಹುಟ್ಟಿಗೆ ಕಾರಣ...ಈ ಕಥೆ ಚೆನ್ನಾಗಿದೆ ಎನಿಸಿದರೆ ಅದಕ್ಕೆ ನೀವೇ ಕಾರಣ...
-ಸುಮಾ ತಮ್ಮ ಮೆಚ್ಚುಗೆಗೆ ವಂದನೆಗಳು
- ಡಾಕ್ಟ್ರೆ ತಮ್ಮ ಮೆಚ್ಚುಗೆ ನನಗೆ ಟಾನಿಕ್
-ಸುನಾಥರೆ ತಾವು ಕಥೆ ಇಷ್ಟಪಟ್ಟಿದ್ದಕ್ಕೆ ವಂದನೆಗಳು.
-ಸುಬ್ರಮಣ್ಯರೇ ತಮ್ಮ ಹಾರೈಕೆಗೆ ವಂದನೆಗಳು.
- ಮಿ೦ಚುಳ್ಳಿಯವರೇ ತಮ್ಮ ಸಲಹೆ ಅಮೂಲ್ಯವಾದುದು. ನಾನು ಕಥೆ ನೇರ ಬೆರಳಚ್ಚಿಸಿ, ಮರು ಓದದೇ, ಹಾಗೆ ಅದನ್ನು ಪ್ರಕಟಿಸಿದ್ದು... ಇದರಿಂದ ಹಲವಾರು ಕಾಗುಣಿತ ತಪ್ಪುಗಳಿದ್ದವು... ಈಗ ಓದಿ ನನ್ನ ಗಮನಕ್ಕೆ ಬಂದ ತಪ್ಪುಗಳನ್ನ ಸರಿಪಡಿಸಿದ್ದೇನೆ.
ತಮ್ಮ ಸಲಹೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು...

Ittigecement said...

ಸೀತಾರಾಮ್ ಸರ್ ಜಿ...

ವಿಧವೆಯ ಮನದಾಳದ ನೋವನ್ನು ಚೆನ್ನಾಗಿ ವ್ಯಕ್ತ ಪಡಿಸಿದ್ದೀರಿ...

ಸುಗುಣಾರವರ ಬ್ಲಾಗಿಂದ ಇಲ್ಲಿ ಬಂದೆ...

ನಮ್ಮ ಸಮಾಜ ವಿಧವೆಯರನ್ನು ನೋಡುವ..
ನಡೆಸಿಕೊಳ್ಳುವ ರೀತಿ ಬದಲಾಗಿದ್ದರೂ..
ಅದು ಸಾಲದು..

ನೀವು ಧನಾತ್ಮಾಕ ಕೊನೆ ಕೊಟ್ಟಿದ್ದು ಖುಷಿಯಾಯಿತು...

Sahana Rao said...

ಸಕಾರಾತ್ಮಕ ಅಂತ್ಯ ಬಹಳ ಇಷ್ಟವಾಯಿತು ಸೀತಾರಾಂ ಅವರೇ. ಎಷ್ಟು ಕಷ್ಟ ಬಂದರೂ, ದುಖ ನಮ್ಮನ್ನು ತುಳಿದರು, ಮುಂದೆ ದಾರಿ ಕಾಣದಾದರೂ, ಜೀವನ ಇದೆ ಎಂಬ ನಂಬಿಕೆಯಲ್ಲಿ ಮುನ್ನುಗ್ಗಬೇಕು.
ತುಂಬ ಇಷ್ಟವಾಯಿತು.

Sahana Rao said...

ಕನ್ನಡದಲ್ಲಿ ಲೇಖನಗಳು ಒಂದೆಡೆ ಸಿಗೋ ಹಾಗೆ ಮಾಡುವ ಪ್ರಯತ್ನ ಕಹಳೆಯದು. ನಿಮಗೆ ಕನ್ನಡ, ಕನ್ನಡಿಗರು, ಕನ್ನಡ ನಾಡು, ಇದರ ಬಗ್ಗೆ ಬರೆಯಲು ಮನಸಿದ್ದಲ್ಲಿ ಖಂಡಿತ ಕಹಳೆ ಸೇರಿ. ನಿಮ್ಮ ಲೇಖನವನ್ನು ಕಹಳೆಗಾಗಿ ಬರೆಯಲು ಸಾಧ್ಯವಾ?
(ಈಮೈಲ್ ವಿಳಾಸ ಸಿಗದ ಕಾರಣ, ಈ ಹಾದಿ ಕಂಡುಕೊಂಡೆ. ಕ್ಷಮೆ ಇರಲಿ).
www.kahale.gen.in

ಜಲನಯನ said...

ಸೀತಾರಾಂ..ನಿರ್ಧಾರ ಅನಿವಾರ್ಯ..ಅನಿಶ್ಚತತೆ ಎಂದು ಕೈ ಕಟ್ಟಿ ಕೂರಲಾಗದು ಎನ್ನುವುದನ್ನು ಎಳೆ ಎಳೆಯಾಗಿ ವಿವರಿಸಿ ಒಂದು ನಿರ್ಧಾರದ ಹಿಂದೆ ಅಡಗಿರೋ ತೊಳಲಾಟವನ್ನೂ ದರ್ಶಿಸಿದ್ದೀರಿ...ಎಷ್ಟಂದರೂ ಜಿಯಾಲಜಿಸ್ಟ್ ಅಲ್ವಾ...ಹಹಹ್ಹ

prabhamani nagaraja said...

ಉತ್ತಮ ಕಥನ ಶೈಲಿ, ಸುಖಾ೦ತ್ಯ, ಸುಗುಣ ಅವರ ಕಥೆಯನ್ನು ಸಮರ್ಥವಾಗಿ ಮುಕ್ತಾಯ(ಅಥವಾ ಆರ೦ಭ!)ಗೊಳಿಸಿದ್ದೀರಿ. ಅಭಿನ೦ದನೆಗಳು ಸರ್.

shivu.k said...

ಸರ್,
ಸುಗುಣಕ್ಕರ ಕತೆಯನ್ನು ತುಂಬಾ ಚೆನ್ನಾಗಿ ಮುಂದಿವರಿಸಿದ್ದೀರಿ...ಅಂತ್ಯವೂ ಇಷ್ಟವಾಯ್ತು...

ಚುಕ್ಕಿಚಿತ್ತಾರ said...

ಸೊಗಸಾಗಿ ಚಿತ್ರಿಸಿದ್ದೀರಿ.ತುಂಬ ಇಷ್ಟವಾಯಿತು.

KalavathiMadhusudan said...

sitaaraam sir, kateyalla,
jiivana. manamuttuvante lekhanisiddiri.baadida ballige,bharavaseya belakugalu halavaaru..
abhinandanegalu.