Friday, July 9, 2010

ತರಾವರಿ



ಇಲ್ಲಿ ಕಂಪು
ಸುಮಧರ ಸೊಂಪು
ಗೆಳತಿಗೆನ್ನೆಗಂಪು

ತರವಾರಿ ತರಾತುರಿ
ಎಲ್ಲಿಯದೋ ಈ ಸವಾರಿ
ಹಾದಿಬೀದಿ ಸರಾಸರ ಹರಿ
ಎನೀದೆಯೋ ಮನದ ಪರಿ

ಬಾಳೆ ಸಿಪ್ಪೆ
ಹಾಳು ಕೊಂಪೆ
ಸಿಕ್ಕಿನಲ್ಲಿ ಸಿ೦ಪೆ
ತೆಗೆದೆಸೆ- ತಂಪೆ!

31 comments:

ತೇಜಸ್ವಿನಿ ಹೆಗಡೆ said...

ಚೆನ್ನಾಗಿದೆ ಸರ್.... ಕೊನೆಯ ಕೆಲವು ಸಾಲುಗಳನ್ನೋದುವಾಗ ಸ್ವಲ್ಪ ಗೊಂದಲವಾಯ್ತು.

shridhar said...

ಚೆನ್ನಾಗಿದೆ ಸರ್. ಪ್ರಾಸಮಯ ಕವನ

sunaath said...

ಸೀತಾರಾಮರೆ,
ಬಾಳಿನ ತರಾವರಿ ಕವನದಲ್ಲಿ ಚೆನ್ನಾಗಿ ಮೂಡಿದೆ. ಇದೊಂದು
ಸಂಕೀರ್ಣ,ಪುಟ್ಟ ಕವನ!

ಸಾಗರಿ.. said...

ಕವನ ಚೆನ್ನಾಗಿದೆ, ಪುಟ್ಟದಾಗಿ ಪಟ್ಟಕ್ಕೆ ಇದೆ.

ಸವಿಗನಸು said...

ತರವಾರಿ ಸೊಗಸಾಗಿದೆ ಗುರುಗಳೆ....

ಚುಕ್ಕಿಚಿತ್ತಾರ said...

ಚನ್ನಾಗಿದೆ...

ಸೀತಾರಾಮ. ಕೆ. / SITARAM.K said...

ತೇಜಸ್ವಿನಿಯವರೇ, -ಕೊನೆಯದು ಸ್ವಲ್ಪ ಸಂಕೀರ್ಣವಾಯಿತೆಂದು ನನಗೂ ಅನಿಸಿತು ಸುನಾಥರ ಹಾಗೇ!!
ನನ್ನ ವಿಚಾರದಲ್ಲಿ -
ಬಾಳೆ ಹಣ್ಣು ಬಾಳು (ಸಿಪ್ಪೆ -ತಿರುಳಿನ ಹಾಗೆ ಕಷ್ಟ ಸುಖ)
ಸುಖ ಒಳಗಿನ ಹಣ್ಣು
ಕಷ್ಟ ಹೊರಗಿನ ಸಿಪ್ಪೆ!
ಸಿಪ್ಪೆ ಹಿಡಿದುಕೊಂಡಿದ್ದರೆ ಅದೊಂದು ಕೊಂಪೆ. ಚಿಪ್ಪಿನಲ್ಲಿ ಸಿಕ್ಕಿಕೊಂಡ ಸಿ೦ಪಿಯ ಹಾಗೇ
ತೆಗೆದೆಸೆ ಸಿಪ್ಪೆ , ಸಿಕ್ಕನ್ನು ಬಿಡಿಸಿಕೊ
ಬಾಳು ಆಗ ತಂಪೆ!

ಪ್ರೇಮ, ಪಯಣ ಮತ್ತು ಬಾಳಿನ ಹೂರಣ ವೆ೦ಬ ಮೂರು ವಿಭಿನ್ನ ಚುಟುಕನ್ನು ಸೇರಿಸಿ ಮಾಡಿದ ತರಾವರಿ ಇದು!!

ಪ್ರತಿಕ್ರಿಯಿಸಿದ ತೇಜಸ್ವಿನಿಯವರಿಗೂ,ಶ್ರೀಧರರಿಗೂ,ಸುನಾಥರಿಗೂ, ಸಾಗರಿಯವರಿಗೂ, ಸವಿಗನಸಿನ ಮಹೇಶರಿಗೂ, ಚುಕ್ಕಿಚಿತ್ತಾರದ ವಿಜಯಶ್ರೀಯವರಿಗೂ ವಂದನೆಗಳು.

ಅನಂತ್ ರಾಜ್ said...

ಸೀತಾರಾ೦ ಅವರೆ.. ಪ್ರೇಮ,ಪಯಣ ಅರ್ಥ ಆಯ್ತು..ಕಡೇದು ಕ್ಯಾಚ್ ಆಗಿರಲಿಲ್ಲ..ನಿಮ್ಮ ವಿವರಣೆ ಅರ್ಥೈಸಿತು. ಕವನ ಚೆ೦ದ.

ಅನ೦ತ್

ಸಾಗರದಾಚೆಯ ಇಂಚರ said...

ಸೀತಾರಾಂ ಸರ್
ತುಂಬಾ ಚೆನ್ನಾಗಿದೆ
ಪ್ರಾಸಗಳು ಮನ ತಣಿಸುತ್ತವೆ

shivu.k said...

seetharam sir,

taravari kavana prasabaddavagi chennagide.

ದಿನಕರ ಮೊಗೇರ said...

ಸೀತಾರಾಂ ಸರ್,
ತೇಜಸ್ವಿನಿ ಮೇಡಂ ಗೆ ಬರೆದ ಪ್ರತಿಕ್ರೀಯೆ ನೋಡಿ, ಕೊನೆಯ ಸಾಲುಗಳಿಗೆ ಅರ್ಥ ತಿಳಿಯಿತು..... ಚೆನ್ನಾಗಿದೆ ಸರ್.....

Raghu said...

ಚಿಕ್ಕ ಕವನ ಚೊಕ್ಕ ಕವನ..
ನಿಮ್ಮವ,
ರಾಘು.

ಮನಸು said...

ಕವನ ಚೆನ್ನಾಗಿದೆ .........ಮೂರು ತರಾವರಿ ಹೂರಣವನ್ನು ತಿಳಿಸಿದ್ದೀರಿ..... ತುಂಬಾ ಚೆನ್ನಾಗಿದೆ ಇದು ಹೊಸ ಪ್ರಯತ್ನವೆಂದುಕೊಳ್ಳುತ್ತೇನೆ....

Dr.D.T.Krishna Murthy. said...

ಸೀತಾರಾಮ್ ಸರ್;ಕವನ ಚೆನ್ನಾಗಿದೆ.ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮಿಂದ ಕವನಗಳು ಬರಲಿ ಎನ್ನುವ ಹಾರೈಕೆ.

Subrahmanya said...

ನನಗೆ ಅಷ್ಟೇನೂ ಅರ್ಥವಾಗಿರಲಿಲ್ಲ. ( ಕವನ ಬರೆಯುವುದರಲ್ಲಿ, ಅರ್ಥ ಮಾಡಿಕೊಳ್ಳುವುದರಲ್ಲಿ ನಾನು ಬಹಳ ಹಿಂದೆ) . ನಿಮ್ಮ ವಿವರಣೆ ಓದಿದ ನಂತರ ಅರ್ಥವಾಯ್ತು. ಚೆನ್ನಾಗಿದೆ ಗುರುವೆ.

ಜಲನಯನ said...

ಸೀತಾರಾಂ ಸರ್... abstract ಕವನ...ಚನ್ನಾಗಿದೆ...

Guruprasad said...

ಸೀತಾರಾಮ್ ಸರ್,,, ತುಂಬಾ ಚೆನ್ನಾಗಿ ಮೂಡಿ ಬಂದಿದೆ,, ಪ್ರಾಸ ಬದ್ದ ಕವನ.....ಗುಡ್

ದೀಪಸ್ಮಿತಾ said...

ಸೀತಾರಾಮ್ ಸರ್, ನನಗೂ ಮೊದಲು ಅರ್ಥವಾಗಲಿಲ್ಲ. ನಿಮ್ಮ ವಿವರಣೆ ಓದಿದ ಮೇಲೆ ಅರ್ಥವಾಯಿತು

V.R.BHAT said...

ಚಿಂತಿಸಿದರೆ ಬಾಳೇ ಸಂಕೀರ್ಣವಲ್ಲವೇ ? ಕವನದಲ್ಲೂ ಇದೊಂದು ಬಗೆಯಷ್ಟೇ ! ಕವನ ಅರ್ಥಗರ್ಭಿತವಾಗಿದೆ,ಆದರೆ ಅರ್ಥಮಾಡಿಕೊಳ್ಳುವವರನ್ನು ಸ್ವಲ್ಪಕಾಲ ಚಿಂತಿಸುವಂತೆ ಕೆಲಸಕ್ಕೆ ಹಚ್ಚುತ್ತದೆ, ಧನ್ಯವಾದಗಳು

Vinay Hegde said...

Waaahh...waaaahhh...waaahhhh.... chenaagide kavana :)

Snow White said...

tumba chennagive sir saalugalu :)

ಮನಸಿನಮನೆಯವನು said...

ಸೀತಾರಾಮ.ಕೆ. ,
ಚೆನ್ನಾಗಿದ್ದರೂ ಸ್ವಲ್ಪ ಗೊಂದಲಮಯ...

AntharangadaMaathugalu said...

ತೇಜಸ್ವಿನಿಯವರಿಗೆ ಕೊಟ್ಟ ವಿವರಣೆ ಎಲ್ಲಾ ಗೊಂದಲಗಳನ್ನೂ ತಿಳಿಯಾಗಿಸಿತು.. ಅರ್ಥ ತಿಳಿದಮೇಲೆ ತುಂಬಾ ಇಷ್ಟವಾಯಿತು....
ಶ್ಯಾಮಲ

mcs.shetty said...

ಚೆನ್ನಾಗಿದೆ ಸರ್ ...ಪುಟ್ಟ ಕವನ

© ಹರೀಶ್ said...

ಪ್ರೇಮ ಪಯಣದ ಹೂರಣದ
ಚುಟುಕು ಸಾಲುಗಳು ಚನ್ನಾಗಿವೆ.

M@he$h said...

*********************************
http://bhuminavilu.blogspot.com/
*********************************

Sum said...

bahaLa sogasaagide!

ಮನಸಿನ ಮಾತುಗಳು said...

nice sir... jotege hakikonda photonu.. :)

Ittigecement said...

ಸೀತಾರಾಮ್ ಸರ್...

ಕಡಿಮೆ ಪದಗಳಲ್ಲಿ
ಎಷ್ಟೊಂದು ಅರ್ಥಗಳಿವೆ... !!

ಅಭಿನಂದನೆಗಳು ಪುಟ್ಟ ಕವಿತೆಗೆ...

ಮನಮುಕ್ತಾ said...

ಸು೦ದರ ಚಿತ್ರ...ಚೆ೦ದದ ಕವನ.

Ashok.V.Shetty, Kodlady said...

Sitaram Sir,

chikkadaagi chokkadaada kavana.