Wednesday, April 28, 2010

"ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೩ )" ವಜ್ರಗಳ ಜಾಲಾಟ

ಭೂ ಗರ್ಭದಾ ಆಳದಾ ಅಡಿಯಲ್ಲಿ
ವಿಶಿಷ್ಟ ಶಿಲಾಪಾಕ ಕುದಿಯುತ್ತ,
ಮೇಲ್ಬರಲು ತೆವಳುತ್ತಾ ,
ಮೇಲ್ಪದರದ ಗಟ್ಟಿಶಿಲೆಯ ಸೀಳುತ್ತಾ,
ಅದರಲ್ಲೇ ದಾರಿಮಾಡಿ ಸಾಗುತ್ತಾ,
ಹೋರಾಟದಲ್ಲಿ ತನ್ನ ಬಿಸಿ ಕಳೆದುಕೊಳ್ಳುತ್ತಾ,
ಭೂಮೇಲ್ಪದರದಾ ಶಿಲೆಯ ಗರ್ಭದಲ್ಲಿ ತಣ್ಣಗಾಗುತ್ತಾ ,
ಸೃಷ್ಟಿಸಿತ್ತು ಕಿ೦ಬರ್ಲೈಟ ಎ೦ಬ ಅಗ್ನಿಜನ್ಯ ಶಿಲೆಯ!!

ಶಿಲೆಯ ಗರ್ಭದಲ್ಲೇ ಅಡಗಿಹವು ವಜ್ರಗಳು!!
ಸಾಮಾನ್ಯ ಕಣ್ಣಿಗೆ ಕಾಣದಂತೆ !!!

ಸಾವಿರಾರು ವರ್ಷಗಳ ಕಾಲದಲಿ,
ಶಿಲೆಯ ಮೇಲೆ ಹರಿದ ನೀರು ಕಲ್ಲನ್ನು ಕರಗಿಸಿ,
ಅದರಲ್ಲಿರುವ ಕಾಣದ೦ತಿರುವ ವಜ್ರವಾ ಬೇರ್ಪಡಿಸಿ ,
ಸಾಣೆ ಹಿಡಿಸಿ ಹೊಳೆವ ವಜ್ರವನ್ನಾಗಿಸಿ,
ನದಿಯ ಪಾತ್ರದಿ ಹರಿದ ನಿ೦ತಾ ಹೂಳಲ್ಲಿ ಹುದುಗಿಸಿ,
ಹುಡುಕುವಾ ತೆವಲಿಗೆ ಮನುಜನಾ ಹತ್ತಿಸಿದೆ !!!!
ಅಪರೂಪದಾ ಶಿಲೆಯು ಸಾಣೆಯಾದ ಮೇಲೆ -
ಅತ್ಯ೦ತ ಹೊಳಪು ,
ಕಾಠಿನ್ಯದ ಪರಾಕಾಷ್ಟೆ,
ಉನ್ನತ ಪಾರದರ್ಶಕತೆ,
ಬೆಳಕಿನೊಡನೆ ಸೇರಿ ವರ್ಣಗಳ ವಿಭಜನೆ,
ಮತ್ತು ನೋಡುಗರಿಗೆ ಕಣ್ಣಿಗೆ ಹಬ್ಬ !
ಇದಕೆ೦ದೆ ಇದು ಎಲ್ಲರ ಅ೦ದಕ್ಕೆ ಮೋಹಕದ ಮಾಯೆ,
ಅದಕೆಂದೇ ಮುಗಿಬಿದ್ದಿಹರು ಮನುಜರು ತೆವಲಿಗೆ !!!
















ಇದು
ನದಿಯ ಪಾತ್ರ ,
ಇಕ್ಕೆಲದಲ್ಲಿ ಸಹಸ್ರಮಾನ ಶತಮಾನದ ಹೂಳು ಸ೦ಗ್ರಹ ,
ಯಾರಿಗೋ ಸಿಕ್ಕಿಹುದು ಆಕಸ್ಮಿಕಕ್ಕೆ ಇಲ್ಲಿ ವಜ್ರವೊ೦ದು!!





















ಇದ್ದಿರಬಹುದು ಇನ್ನು ಹತ್ತು ಹಲವಾರು !!! ಯಾರಿಗ್ಗೊತ್ತು?
ಅದಕೆ೦ದೆ ಹಿ೦ದೆ ಬಿದ್ದಿಹೆವು
ಸಲಿಕೆ- ಪುಟ್ಟಿಯ ಹೊತ್ತು !!
ಅಗೆದು ಬಗೆದು ಜಾಲಾಡಲು!!!

ವಜ್ರ ಹುಡುಕಿ ಹೊಟ್ಟೆ ಹೊರೆಯಲು!!!




















ನದಿಯ ಇಕ್ಕೆಲದ ಪಾತ್ರದಾ ಮರಗಳ ಮಾರಣ,
ತೆಗೆದು ಸಾಣಿಸಬೇಕಲ್ಲ ಅದರಡಿಯಲ್ಲಿರುವ
ಸಹಸ್ರಮಾನದಾ ಹೂಳಿನಾ ಮಣ್ಣ
.





















ನೀರ ಹರಿಸಿ, ಹಾಯಿಸಿ, ಗಟ್ಟಿಯಾದ ಹೂಳುಮಣ್ಣ ಸಡಿಲಿಸಿ,
ತೆಗೆದು ಗಾಲಿಸಬೇಕಲ್ಲ ವಜ್ರಕ್ಕಾಗಿ!!




















ಸಡಿಲಿಸಿದ ಮಣ್ಣ, ಆದೆ ನದಿಯ ನೀರಲ್ಲಿ, ಗಾಲಿಸಿ, ಸೋಸುತಿಹೆವು
ಹುಡುಕಬೇಕಲ್ಲ ವಜ್ರ !!!!
ಸಣ್ಣ ಚೆಪ್ಪರವೊ೦ದು, ಬಿಸಿಲ ರಕ್ಷಣೆಗೆ ಎ೦ದು ಕಟ್ಟಿಹೆವು ನಾವು-
ತೆ೦ಗಿನಾ ನಾರು ಮತ್ತು ಬಿದಿರಿನಲ್ಲಿ.





















ಗಾಲಿಸುವ ಜನರು
ಬೇರ್ಪಡುತಲಿಹುದು ಜಿನುಗಾದ ಮಣ್ಣು
ಜರಡಿಯಾ ಅಡಿಯಿ೦ದ ನೀರಲ್ಲಿ ಇಳಿದು !
ಶೇಖರಣೆಯಾಗುತಿಹುದು ಹರಳು ಜರಡಿ ಮೇಲೆ !!




















ಇವರಾರಪ್ಪ ನಮ್ಮ ಬದುಕನ್ನು ಚಿತ್ರಿಸುವ ಪರದೇಶಿಗಳು ????




















ಹರಳುಗಳನ್ನು ಒ೦ದೊ೦ದಾಗಿ ಎತ್ತಿ ಪರೀಕ್ಷಿಸಬೇಕಾಗಿದೆ
ವಜ್ರ ಅಹುದೋ ಅಲ್ಲವೋ ಎಂದು!!





















ಹೆಕ್ಕಿದಾ ಹರಳುಗಳಾ ಹತ್ತಿರದ ನೋಟ
ವಜ್ರಕ್ಕಾಗಿ ನಡೀಬೇಕು ಇನ್ನು ಹುಡುಕಾಟ !!





















(ನನ್ನ ಕೈಯಲ್ಲಿ ಕ್ಷಣಿಕ ಸಮಯದಿ ಪವಡಿಸಿದ ಯಾರದೋ
ಶ್ರಮದ ಮತ್ತು ಯಾರ ಮೈ ಅಲ೦ಕಾರವಾಗುವಾ ವಜ್ರ)

ಸಿಕ್ಕಿಹುದು ಒ೦ದು ಪುಟ್ಟ ವಜ್ರದಾ ಹರಳು
೨೦೦ ರಿಂದಾ ೨೫೦ ಜನರ ಒ೦ದು ದಿನದಾ ಶ್ರಮ
ಒಮ್ಮೊಮ್ಮೆ ಇದೂ ಇಲ್ಲ ಅವರ ಪಾಲಿಗೆ!
ಮತ್ತೊಮ್ಮೊಮ್ಮೆ ಹತ್ತು ಹಲವಾರು!!
ಬ೦ದು ಹೊತ್ತೊಯ್ಯುವನು ವಣಿಕ ಬೆಲೆ ಕಟ್ಟಿ ಕೊಟ್ಟು,
ಮಾರಿ ಹೊರೆಯುವರು ಹೊಟ್ಟೆ,
ಅವರು
ಶ್ರಮಕೆ
ತಮ್ಮ ಮೈ ಕೊಟ್ಟು !!

14 comments:

Ittigecement said...

ಸೀತಾರಾಮ್ ಸರ್...

ಇದೀಗ ನಾನು ಡಾ. ಗುರುಮೂರ್ತಿಯವರ ಚಿತ್ರ ಲೇಖನ ಮತ್ತೊಮ್ಮೆ ನೋಡಿ ಬಂದೆ..
ಇಲ್ಲಿ ನಿಮ್ಮ ಚ್ತ್ರ ಲೇಖನ ನೋಡಿದೆ...

ಉಳ್ಳವರ..
ಶ್ರೀಮಂತರ ಶೋಕಿಗೆ ಎಷ್ಟೊಂದು ಜನರ ಬದುಕು ಬೀದಿದೆ ಬಿದ್ದಿದೆ..!

ಅವರ ಕಣ್ಣುಗಳಲ್ಲಿ ಬದುಕಿನ ಅನಿಶ್ಚಿತತೆ..
ಆರ್ತನಾದ ಮಾತ್ರ ಕಾಣುತ್ತಿದೆ..

ನಮ್ಮ ಬಳ್ಳಾರಿಯೂ ಇದೇ ರೀತಿಯಾಗಿರ ಬಹುದಲ್ಲವೆ ?

ಮೊನ್ನೆ "ಪ್ರಥ್ವಿ" ಸಿನೇಮಾ ನೋಡಿ..
ಇದು ನಮ್ಮ ಬಳ್ಳಾರಿನಾ ? ಅನಿಸಿತು....!

ಯಾವಾಗ ಇದೆಲ್ಲ ಕೊನೆಯಾಗ ಬಹುದು ?

ಮನ ತಟ್ಟುವ ಚಿತ್ರ ಲೇಖನಕ್ಕಾಗಿ ಅಭಿನಂದನೆಗಳು...

Subrahmanya said...

ಸುಖದ ಹಿಂದಿನ ವಾಸ್ತವದ ಬದುಕನ್ನು ಚಿತ್ರಗಳ, ಬರಹಗಳ ಮೂಲಕ ಕೊಟ್ಟು ಆ ಪ್ರದೇಶದ ಗಣಿಯ ಪರಿಚಯವನ್ನೂ ಮಾಡಿಸಿದಿರಿ. ಅನೇಕ ವಂದನೆಗಳು ನಿಮಗೆ.

ದೀಪಸ್ಮಿತಾ said...

ವಜ್ರದ ಗಣಿಕಾರಿಯನ್ನು ಒಳ್ಳೆ ಕವನದ ಮೂಲಕ ವಿವರಿಸಿದ್ದೀರಿ. ಶೋಕಿಗೆ, ಪ್ರತಿಷ್ಠೆಗೆ ಉಪಯೋಗಿಸುವ ಚಿನ್ನ, ವಜ್ರ, ಹರಳುಗಳ ಹಿಂದೆ ಎಷ್ಟೊಂದು ಜನರ ಬೆವರು, ಶ್ರಮ ಇದೆ. ಚಿತ್ರ ಕವನ ಚೆನ್ನಾಗಿದೆ

ತೇಜಸ್ವಿನಿ ಹೆಗಡೆ said...

ಕೆಸರಿನಲ್ಲೇ ಕಮಲ ಹುಟ್ಟಿದಂತೇ ಆ ರಾಡಿ ಮಣ್ಣೊಳಗೆ ಅತ್ಯಮೂಲ್ಯ ವಜ್ರ!!! ನೀವು ಈ ಪೋಟೋಗಳನ್ನು ಜೊತೆಗೆ ಸುಂದರ ನಿರೂಪಣೆಯ ಲೇಖನವನು ಯಾವುದಾದರೂ ಮಾಗಜೀನ್‌ಗೆ ಕಳಿಸಿ. ತುಂಬಾ ಜನರಿಗೆ ತಲುಪುವುದು.

Shashi jois said...

ಸೀತಾರಾಂ ಸರ್,
ನಿಮ್ಮ ಬ್ಲಾಗ್ ಗೆ ಪ್ರಥಮ ಭೇಟಿ..ವಜ್ರಗಳ ಜಾಲಟವನ್ನು (ಚಿತ್ರ ಸಮೇತ ) ಕವನಗಳ ಮೂಲಕ ಚೆನ್ನಾಗಿ ಮನ ಮುಟ್ಟುವ ಹಾಗೆ ಚಿತ್ರಿಸಿ,ಬರೆದಿದ್ದೀರಿ...ನಾವು ಧರಿಸುವ ಪುಟ್ಟ ಹರಳಿನ ಹಿಂದೆ ಎಷ್ಟು ಜನರ ಪರಿಶ್ರಮವಿದೆಯಲ್ಲ !!!ಸೊಗಸಾದ ಲೇಖನ ..

Snow White said...

kavana tumba chennagide sir..chitragalu jothegoodi vajrada poorti chitrana needitu.. dhanyavadagalu :)

ಗೌತಮ್ ಹೆಗಡೆ said...

ನಿಮ್ಮ ಕೈಯಲ್ಲಿ ಇದೆಯಲ್ಲ, ಆ ಪುಟ್ಟ ಹರಳಿಗೆ ಬೆಲೆ ಎಷ್ಟಾಗಬಹುದು ಸರ್ ?

ದಿನಕರ ಮೊಗೇರ said...

ಸೀತಾರಾಂ ಸರ್,
ತುಂಬಾ ಸುಂದರ ನಿರೂಪಣೆ... ಚಿತ್ರ ಕವನದ ಹಾಗಿದೆ....... ಸುಖದ ಮೊದಲಿನ ರೂಪ ಇದು.....

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಎಲ್ಲ ಸಹೃದಯ ಬ್ಲೊಗಿಗರಿಗೂ ವ೦ದನೆಗಳು.

@---ಗೌತಮ್ ಅದರ ಬೆಲೆ ೧೦-೧೨ ಸಾವಿರವಿರಬಹುದು.

Ishwar Jakkali said...

Super sir ....nimma padagaLu estu artha poornavagivevo ...aste arthagarbhita avagive nivu haakida chitragaLu....

ಮನಸಿನಮನೆಯವನು said...

~;~!

ಸೀತಾರಾಮ. ಕೆ. / SITARAM.K said...

ಈಶ್ವರ ಜಕ್ಕಲಿಯವರಿಗೆ ನನ್ನ ಬ್ಲೊಗ್-ಗೆ ಸ್ವಾಗತ. ಹೀಗೆ ಬರುತ್ತಿರಿ ಹಳೆಯ ಬರಹಗಳನ್ನೂ ಓದಿ ಪ್ರತಿಕ್ರಿಯಿಸಿ. ತಮಗೆ ಧನ್ಯವಾದಗಳು.

ಜ್ಞಾನಾರ್ಪಣ ಮಸ್ತು ರವರೇ ತಮ್ಮ ಪ್ರತಿಕ್ರಿಯೆ ಏನು ಅ೦ತಾ ಅರ್ಥವಾಗಿಲ್ಲ!! ತಮ್ಮ ಸಮಯ ನೀಡಿ ಓದಿದ್ದಕ್ಕೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

Deekey Kulkarni
to me

show details 12:32 PM (3 hours ago)

Dear Sir,

Had gone through your blog...amazng informations....really impressed....keep writing

Regards,
DK

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಉತ್ತಮ ಮಾಹಿತಿಯನ್ನು,
ಆಲಂಕಾರಿಕವಾಗಿ ಸುಂದರವಾಗಿ ಬರೆದಿದ್ದೀರಾ ವಂದನೆಗಳು.
ಮಾಹಿತಿಯ ಕಣಜಕ್ಕೆ ಭಾಷೆಯ (ಸಾಹಿತ್ಯದ)
ಮೆರುಗಿನ ಅಲಂಕಾರ...ಚೆನ್ನಾಗಿದೆ.
ಈ ಶೈಲಿ ಮುಂದುವರೆಸಿ..ಓದಲು ಆಸಕ್ತಿದಾಯಕವಾಗಿರುತ್ತದೆ.