Saturday, April 10, 2010

ಕಗ್ಗತ್ತಲೆಯ ಖಂಡದಲ್ಲಿ ........ (ಭಾಗ ೧ ) ಚೆದುರಿದ ಬದುಕು



















ಚೆದುರಿದ ಬದುಕು ಸುತ್ತಮುತ್ತೆಲ್ಲ ಚೆಲ್ಲಿ
ಎಳೆಯರ
ಕಂಗಳಲ್ಲಿ ಕನಸುಗಳಿಗೆ ಮುಗಿವೆಲ್ಲಿ ?




















ಬಹು-ಪತ್ನಿ , ಬಹು ಸಂತಾನ -ಜೀವನದ ಕೊಸರಿಲ್ಲಿ
ಯಾರೆನ್ನುವರು ನಮಗಿಹುದು ಬಡತನವಿಲ್ಲಿ ?





















ಬತ್ತುತ್ತಾ
ಇವೆ ಜೀವದಾಸರೆ
ಹೊತ್ತು
ತರುತಿಹಳು ಎಳೆ ಬಾಲೆ ಜೀವಧಾರೆ


























ಸಾರ್ವಜನಿಕ ಸ೦ಪರ್ಕದಾ ಸುಖವಿಲ್ಲ !
ಬಡತನದಲ್ಲೂ ಗುಂಪಿನಲ್ಲಿ ಬಾಡಿಗೆಯಾ ಕಾರು
ಕುರಿಹಿಂಡಿನಾ
ತರದಿ ತುಂಬಿ
ಎಳೆಯುತಿಹಲಿದು
ಬಾಳ ತೇರು!






















ಪರದೇಶದಲ್ಲಿ ಪರದೇಶಿಗಳು ಇವರಿಲ್ಲಿ.
ಆದರು
ಸುಖಿಗಳು - ಇರಲು
ತಲೆಯ
ಮೇಲೆ ಸೂರಾಗಿ ಭಾನು,
ಅವರನೆತ್ತಿ ಹೊತ್ತ ವಸುಂಧರೆಯ ಮಡಿಲು.






















ಇಡೀ ದನವ ನೇತಾಡಿಸಿ, ಕಡಿಸಿ, ಒಡಲ ತುಂಬಿಸುವ ಸಂತೆ
ಮಿಕ್ಕಿದ
ತುಂಡುಗಳ, ಹಿಟ್ಟಚ್ಚಿ, ಎಣ್ಣೆಯಲಿ ಕರಿದು ಮಾರುವ ವರತೆ!






















ಮೂರುಕಲ್ಲಿನ ಮಧ್ಯ, ಪುಡಿ ಕಟ್ಟಿಗೆಯ ಬೆಂಕಿ,
ಹೊತ್ತಿ ಉರಿಸುತಲಿಹದು, ಪಾತ್ರೆಯಲ್ಲಿನ ನೀರು
ಪುಟ್ಟ
ಕಂದನ ಕಣ್ಣು ನೆಟ್ಟ ನೋಟದಲ್ಲಿ
ನೀರಿಕ್ಷಿಸುತಿಹುದು
"ಗಂಜಿಯಾಗುವದು ಎಂದು?"





















ಮಾ೦ಸಕ್ಕಿ೦ತಲೂ ತುಟ್ಟಿ ತರಕಾರಿ ಇಲ್ಲಿ
ಕೊಳ್ಳುಗರು
ಇಹರೆಲ್ಲಿ?



















ನಾಲ್ಕು ಹೆಂಡರ ಮುದ್ದಿನ ಮಾವ ನೀಲಿ ನಿಲುವಂಗಿ ತಾತ!!
ಪ್ರೀತಿ
ಎಲ್ಲರೆಡೆ ಸಮಾನುಪಾತ !!!
ಗ್ರಾಮಕ್ಕೆ
ಮುಖ್ಯಸ್ಥ !!!!





















ಬಡತನಕೆ ದಿಕ್ಕೆಟ್ಟು ಕಾಡಿನಲ್ಲಿ
ಕಟ್ಟಿಕೊಂಡಿಹನು ಗುಡಿಸಲೊಂದನ್ನು.
ಕರೆಯುವರು ನಾಡಿನ ಜನ ಇವಗೆ ರಾಬಿನ್ನುಹುಡ್ದು
.
ಅವನ ಅನುಪಸ್ಥಿತಿಯಲ್ಲಿ ನಾನು ಕೊಡುತಿಹೆನು ಪೋಸು !!!!









































ಗುಂಪು ಕಾರಿಗೂ ನಮಗಿಹದು ಕಷ್ಟ !
ಕತ್ತೆಬಂಡಿಯು ಪುರೈಸುತಲಿಹದು ನಮ್ಮ ಸಾಗಾಟ !!





















ಮಕ್ಕಳಾಟದ ಮೋಜು, ಆಟ , ತುಂಟಾಟ
ಬಾಲ್ಯ ನಗುತಲಿಹದು!!






















ಬೆಲ್ಲ -ಅವಲಕ್ಕಿ ಗಂಜಿ ಮೆಲ್ಲುತಿಹನು ಪೋರ
ತುಂಬಿಸುತಿಹನು ಹಸಿದ ಉದರ !!!




















ಸಿಹಿಗಂಜಿಯ ಸಹಬಾಳ್ವೆಯ ಊಟ
ಕಣ್ಣಿಗೆ
ಮುಂಜಾನೆಯ ರಮ್ಯನೋಟ

22 comments:

ಚುಕ್ಕಿಚಿತ್ತಾರ said...

mana karagisuva chitrana ...

sunaath said...

ಚಿತ್ರಗಳೇ ಎಲ್ಲ ಮಾಹಿತಿ ನೀಡುತ್ತಿವೆ. ಜೊತೆಗೆ ಉಪಯುಕ್ತವಾದ comments ಬೇರೆ ಹಾಕಿದ್ದೀರಿ. ಅಭಿನಂದನೆಗಳು.

Subrahmanya said...

ಒಂದು ಸಾಮಾಜಿಕೆ ವ್ಯವಸ್ಥೆಯ ಮತ್ತು ನಾಗರೀಕತೆಯ ಪರಿಚಯವನ್ನು ಚಿತ್ರಗಳು ಮತ್ತು ಒಕ್ಕಣೆಗಳ ಮೂಲಕ ಚೆನ್ನಾಗಿ ತೆರೆದಿದ್ದೀರಿ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಮುಂದೆ ಬರಲಿ...

V.R.BHAT said...

ವಿವರಣೆ ತುಂಬಾ ಹಿಡಿಸಿತು,ಚಿತ್ರಗಳೂ ಪೂರಕವಾಗಿವೆ,ಧನ್ಯವಾದಗಳು

Dr.D.T.Krishna Murthy. said...

ಸೀತಾರಾಂ ಸರ್ ;ಕಣ್ಣು ತೆರೆಸುವ ಚಿತ್ರಗಳು ,ಮನ ಮಿಡಿಯುವಂತಹ ವಿವರಣೆ !!!ಹೆಚ್ಚಿಗೆ ಹೇಳಲು ಇನ್ನೇನಿದೆ ?

PARAANJAPE K.N. said...

ಚಿತ್ರಗಳು ಮಾತನಾಡುತ್ತವೆ. ಚೆನ್ನಾಗಿವೆ.

ದಿನಕರ ಮೊಗೇರ said...

ಸೀತಾರಾಂ ಸರ್,
ಮನ ಕಲಕುವ ಚಿತ್ರಕ್ಕೆ ಮುದ ನೀಡುವ ವಿವರಣೆ........... ಯಾವಾಗ ಹೋಗಿದ್ರಿ ಸರ್.........

ಮನಮುಕ್ತಾ said...

ಚಿತ್ರಕ್ಕೆ ತಕ್ಕ ವಿವರಣೆ..ಬದುಕಿನ ಬವಣೆಯ ಅನೇಕ ಮುಖಗಳು..ಮನಸ್ಸು ಭಾರವಾಯ್ತು.

ಸಾಗರದಾಚೆಯ ಇಂಚರ said...

ಸರ್
ಮನ ಕಲಕುವ ಚಿತ್ರಗಳು, ಜೊತೆಗೆ ಅದಕ್ಕೆ ವಿವರಣೆ
ನಿಜಕ್ಕೂ ನಾವೇ ಸುಖಿಗಳು ಆದರೂ ಒಂದಿಲ್ಲೊಂದು ರೀತಿಯಲ್ಲಿ ಸುಮ್ಮನೆ ಕೊರಗುತ್ತೇವೆ

shivu.k said...

ಸೀತಾರಾಂ ಸರ್,

ಮನಮಿಡಿಯುವ ಚಿತ್ರಗಳ ಮೂಲಕ ಅಫ್ರಿಕಾ ದೇಶದ ನಿತ್ಯ ಸತ್ಯದ ಚಿತ್ರಗಳನ್ನು ಕೊಟ್ಟಿದ್ದೀರಿ...ಚಿತ್ರಗಳೇ ಮಾತಾಡುತ್ತವೆ. ಆದ್ರೆ ಯಾವ ದೇಶದ ಯಾವ ಊರಿನ ಚಿತ್ರಗಳೆನ್ನುವುದನ್ನು ಮಾಹಿತಿ ಕೊಟ್ಟರೆ ಮತ್ತಷ್ಟು ಸ್ಪಷ್ಟ ಕಲ್ಪನೆ ಸಿಗಬಹುದು ಸರ್.

ಸಾಗರಿ.. said...

ಕತ್ತಲೆಯ ಖಂಡದ ಮೆಲೊಂದು ಬೆಳಕು ಚೆಲ್ಲುವಿಕೆ... ಚೆನ್ನಾಗಿದೆ. ಛಾಯಾಚಿತ್ರಗಳಿಗೆ ಹೊಂದುವ ಸಾಲುಗಳು. ಬಹಳ ಚೆನ್ನಾಗಿದೆ.

Manasa said...

Sir,

tumbaa tumbaa tiLidukoLuva vishaya suchisidiree... nave bhagyavantaru annabeko... adanna nodi iddidaralle trupti padabeku anno pata kuda...

keep up writing such articles :)

Manasa said...

Sir,

tumbaa tumbaa tiLidukoLuva vishaya suchisidiree... nave bhagyavantaru annabeko... adanna nodi iddidaralle trupti padabeku anno pata kuda...

keep up writing such articles :)

Ittigecement said...

ಸೀತಾರಾಮ್ ಸರ್...

ಫೋಟೊಗಳು ಮನಕಲಕಿ ಬಿಟ್ಟವು...
ಅದಕ್ಕೊಪ್ಪುವ ಸರಳ ಸಾಲುಗಳು...

ನಿಮ್ಮದು ಹೊಸ ಥರಹದ ಪ್ರವಾಸ ಕಥನ ...

ಬರವಣಿಗೆ ಕಡಿಮೆ...
ನಿಮ್ಮ ಫೋಟೊಗಳೇ ಮಾತಾಡುತ್ತವೆ...
ಹೃದಯ ತಟ್ಟುತ್ತವೆ...

ಇನ್ನಷ್ಟು ಕಂತುಗಳಿಗೆ ಕಾಯುವೆ...

ನಮಗೆ ಸುಲಭವಾಗಿ..
ನೀವೆ ತೆಗೆದ ಫೋಟೊಗಳಿಂದ ಆಫ್ರಿಕಾ ಪರಿಚಯಿಸಿ ಕೊಡುತ್ತಿದ್ದೀರಿ...

ಧನ್ಯವಾದಗಳು...

ಮನಸಿನಮನೆಯವನು said...

ರೀ ಸೀತಾರಾಮ.ಕೆ.

ಇವು ಮಾತಾಡುವ ಚಿತ್ರಗಳು..

ಆದರೆ ಈ ಬರಹದಲ್ಲಿ ಒಂದಕ್ಕೊಂದಕ್ಕೆ ಅಂತರ ಜಾಸ್ತಿ ಜಾಸ್ತಿ ಇರಲು ಕಾರಣ..?/

nenapina sanchy inda said...

Poverty seems to be rampant there, alwaa?? touching pictures
malathi S

ಅಲೆಮಾರಿ said...

photos kadme aaytu sir:(

ಜಲನಯನ said...

ಸೀತಾರಾಂ ಸರ್, ಆಫ್ರಿಕಾದ ಕೆಲವು ಭೂಭಾಗಗಳಲ್ಲಿ ದಾರಿದ್ರ್ಯದ ತಾಂಡವ ಎನ್ನುವುದು ಬರೀ ಬರವಣಿಗೆಯಲ್ಲಿತ್ತು ಅದನ್ನು ಚಿತ್ರ ಸಮೇತ ಮನ ಕಲಕುವ ..ಹಾಗೇ ನಮ್ಮವರ ವೃಥಾಕೊರಗುವ ಎರಡನ್ನೂ ಸಮರ್ಥ ರೀತಿಯಲ್ಲಿ ಬಿಂಬಿಸಿದ್ದೀರಿ.. ಚನ್ನಾಗಿದೆ ಸಚಿತ್ರ ವಿವರಣೆ..

ಮನಸು said...

manasigeno besara chitra ellavannu heLuttade.......

ಓ ಮನಸೇ, ನೀನೇಕೆ ಹೀಗೆ...? said...

ಸೀತಾರಾಂ ಸರ್....ಮನಕಲಕುವ ಚಿತ್ರಗಳು...ಅದರಲ್ಲೂ ಆ ಕನಸು ಕಂಗಳ ಕಂದಮ್ಮಗಳು ಅದಕ್ಕೆ ನೀವಿತ್ತ ಸಾಲುಗಳನ್ನು ನೋಡಿ ಮನಸ್ಸು ಭಾರವಾಯ್ತು.

Snow White said...

manasige naatuva chitragalu mattu saalugalu sir

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಎಲ್ಲ ಸಹೃದಯಿಗಳಿಗೆ ವ೦ದನೆಗಳು.