Monday, April 5, 2010

ಬೀಳ್ಕೊಡುಗೆಯ ಕವನ

(ಫೋಟೋ ಕೃಪೆ : ಗೂಗಲ್ ಅಂತರ್ಜಾಲ ಹುಡುಕಾಟ )

ಮಿತ್ರ ವಾಮನ ಮತ್ತು ನಾನು ವಿಧ್ಯಾರ್ಥಿನಿಲಯದಲ್ಲಿ ಓದನ್ನು ಮುಗಿಸಿ, ಅಗಲುತ್ತಿರುವ ಕ್ಷಣದ ಅವನು ಬರೆದ "ಬೀಳ್ಕೊಡುಗೆ" ಕವನ.ವಾಮನ ಕುಲ್ಕರ್ಣಿಯವರ "ತೆರೆಗಳು" ಕವನ ಸ೦ಕಲನದ ಕವನ.



16 comments:

ಮನಮುಕ್ತಾ said...

ಸು೦ದರವಾದ ಕವನ..ನಿಮ್ಮಿಬ್ಬರ ಗೆಳೆತನ ಎ೦ದೆ೦ದಿಗೂ ಹಸಿರಾಗಿರಲಿ.

V.R.BHAT said...

ಭಾವನೆಗಳು ಅಪ್ಯಾಯಮಾನ, ಗೆಳೆತನಕ್ಕೆ ಇರುವ ಶಕ್ತಿ ಅಸದಳ, ಅಲ್ಲಿ ಕೊಡುವ-ಕೊಳ್ಳುವ ಪ್ರೀತಿಗೆ, ರೀತಿಗೆ, ಸಹಾಯ-ಸಹಕಾರಕ್ಕೆ,ಪರಸ್ಪರರ ಕಷ್ಟ-ಸುಖದ ಹಂಚಿಕೊಳ್ಳುವಿಕೆಗೆ, ದುಃಖ-ದುಮ್ಮಾನಗಳ ಕಾಲದಲ್ಲಿ ತಬ್ಬಿ ಸಂತೈಸುವ ಹೆಗಲುಗೊಡುವಿಕೆಗೆ ಇರುವ ಅನ್ಯೋನ್ಯತೆ ಬಹುಶಃ ಆ ಸಂಘಶಕ್ತಿ ಬೇರೆಲ್ಲೂ ಇಲ್ಲ, ಹೀಗಾಗಿ ಆತ್ಮೀಯ ಗೆಳೆಯರ ಪ್ರೀತಿಯ ಅಗಲುವಿಕೆಯನ್ನು ಅಂದು ಮನದಾಳದಿಂದ ಹೊರಹಾಕಿ ಬರೆದಿದ್ದ ಆ ಕವನವನ್ನು ಮತ್ತೆಲ್ಲೋ ನಂತರ ಗೆಳೆತನವನ್ನು ಪುನಃ ಬೆಸೆದುಕೊಂಡು ಭೇಟಿಯಾಗಿ ಗೆಳೆಯ ಹೊರತಂದ ಸಂಕಲನಕ್ಕೆ ನಾಂದಿ ಬರೆದಿರಿ, ನಿಮ್ಮ ಈ ಸ್ನೇಹ ನಿರಂತರಾವಾಗಿರಲಿ, ಅವ್ಯಾಜ ಪ್ರೀತಿ ನೂರ್ಮಡಿಸಲಿ ಎಂದು ಹಾರೈಸುತ್ತೇನೆ, ಕವನ ಚೆನ್ನಾಗಿದೆ, ಚಿತ್ರ ಕವನಕ್ಕೆ ಪೂರಕವಾಗಿ ವಿಭಾಗಿಸಲ್ಪಡುವ ರಸ್ತೆಯನ್ನು ತೋರಿಸುತ್ತಿದೆ,ಸಹಜವಾಗಿ ಚೆನ್ನಾಗಿದೆ,
ಇನ್ನೊಂದು, ತಮ್ಮ ಬ್ಲಾಗ್ ಮೂರು ವರ್ಷ ಪೂರೈಸಿ 4 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದ ನೆನಪು, ನಿಮ್ಮ ಬ್ಲಾಗ್ ಗೇ ನೂರು ತುಂಬಲಿ, ಬ್ಲಾಗ್ ತುಂಬ ಹಲವು ಹತ್ತು ಸದುಪಯೋಗೀ ಕವನ-ಸಾಹಿತ್ಯದ ಸಿಹಿತಿನಿಸುಗಳು ಸದಾ ಸಿಗಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ,ಧನ್ಯವಾದಗಳು

Dr.D.T.Krishna Murthy. said...

ಮುಗಿದು ಹೋಗುತ ಚಣವು ಮುಗಿದು ಹೋಯಿತು ದಿನವು ,ಬರೆದಂತೆ ಪುಟಗಳು ಮುಗಿಯುತಿಹವೋ ಎಂಬ ಸಾಲುಗಳು ನಮ್ಮನ್ನು ಪಾರಮಾರ್ಥಿಕ ಚಿಂತನೆಗೆ ತೊಡಗಿಸುತ್ತವೆ .ಕವನ ಇಷ್ಟವಾಯ್ತು .

shivu.k said...

ಸರ್,

ಒಂದು ಸೊಗಸಾದ ಕವನವನ್ನು ಬ್ಲಾಗಿನಲ್ಲಿ ಹಾಕಿದ್ದೀರಿ..

ನಿಮ್ಮ ಗೆಳೆತನ ಸದಾ ಹೀಗೆ ಚೆನ್ನಾಗಿರಲಿ..

Ramesh said...

ಸೀತರಾಮ್ ಅವರೆ,
ನಿಮ್ಮ ಬ್ಲೊಗ್ ನಲ್ಲಿ ಇದು ನನ್ನ ಮೊದಲ ಕಾಮೆಂಟು :) ನಿಮ್ಮ ಸ್ನೇಹಿತರು ಬರೆದಿರುವ ಕವನ ಚೆನ್ನಾಗಿದೆ. ನಿಮ್ಮಿಬ್ಬರ ಸ್ಬೇಹ ಸದಾ ಹೀಗೆಯೇ ಇರಲಿ.
ಸಮಯ ಸಿಕ್ಕಾಗ ನನ್ನ ಬ್ಲೊಗ್ ಗೆ ಭೇಟಿ ನೀಡಿ, ನಿಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿ.

ಸವಿಗನಸು said...

ಸೊಗಸಾದ ಕವನ...
ನಿಮ್ಮ ಗೆಳೆತನದ ಭಾಂದವ್ಯ ಚಿರವಾಗಿರಲಿ.....

PARAANJAPE K.N. said...

ಸೊಗಸಾದ ಕವನ. ಮಿತ್ರತ್ವದ ಅವಿನಾಭಾವ ಸ೦ಬ೦ಧ ಗಳನ್ನು ಬಿಚ್ಚಿಡುವ ಸರಳ ಸು೦ದರ ಕವಿತೆ, ಚೆನ್ನಾಗಿದೆ.

ಮನಸಿನಮನೆಯವನು said...

ಸೀತಾರಾಮ.ಕೆ.,
ಪ್ರತಿ ಸಾಲು ಭಾವುಕತೆಯಿಂದ ಕೂಡಿವೆ..

ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com/

Subrahmanya said...

ಗೆಳೆತನದ ಸೊಗಸಾದ ಅಭಿವ್ಯಕ್ತತೆ ಕವನದಲ್ಲಿ ಮಿಂಚುತ್ತಿದೆ !. ಸ್ನೇಹಿತರ ಕವನಗಳನ್ನು ಇಲ್ಲಿ ಕೊಡುತ್ತಿರುವುದಕ್ಕೆ ಧನ್ಯವಾದ ಗುರುಗಳೆ

sunaath said...

ಸೀತಾರಾಮರೆ,
ವಾಮನ ಕುಲಕರ್ಣಿಯವರ ಕವನ ಸೊಗಸು. ಅದನ್ನು ಪ್ರಕಾಶಿಸುತ್ತಿರುವ ನಿಮ್ಮ ಗೆಳೆತನವೂ ಅಷ್ಟೇ ಸೊಗಸು.

ಮನದಾಳದಿಂದ............ said...

ಗುರುಗಳೇ, ಸೇಹದಲ್ಲಿ ಅಗಲಿಕೆ ಯಾಕಾದರೂ ಬರುತ್ತೋ? ಎಷ್ಟೇ ಬೇಡ ಬೇಡವೆಂದರೂ ಅಗಲಿಕೆಯ ಸಮಯದಲ್ಲಿ ಕಣ್ಣೀರು ತೊಟ್ಟಿಕ್ಕುತ್ತದೆ.
ಸ್ನೇಹಿತರ ಕವನವನ್ನು ಬ್ಲಾಗಿನಲ್ಲಿ ಹಾಕುವ ಮೂಲಕ ನಿಮ್ಮ ಗೆಳೆತನವನ್ನು ನೆನೆಸಿಕೊಂಡಿದ್ದೀರಾ.
ನಿಮ್ಮ ಸ್ನೇಹ ಚಿರಾಯುವಾಗಲಿ.

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಮನಮುಕ್ತಾರಿಗೂ, ವಿ.ಆರ್.ಭಟ್ಟರಿಗೂ, ಡಾ.ಕೃಷ್ಣಮೂರ್ತಿಯವರಿಗೂ,ಶಿವೂರವರಿಗೂ, ರಮೇಶರಿಗೂ, ಸವಿಗನಸಿನ ಮಹೇಶರಿಗೂ, ಪರಾ೦ಜಪೆಯವರಿಗೂ, ಗುರುದೆಸೆಯವರಿಗೂ, ಸುಬ್ರಮಣ್ಯನವರಿಗೂ, ಸುನಾಥರಿಗೂ ಮತ್ತು ಮನದಾಳದ ಪ್ರವೀಣರಿಗೂ ವ೦ದನೆಗಳು. ಹೀಗೆ ಬರುತ್ತಿರಿ.
ಹೊಸದಾಗಿ ನನ್ನ ಬ್ಲೊಗ್-ಗೆ ಬ೦ದಿರುವ ಡಾ.ಕೃಷ್ಣಮೂರ್ತಿಯವರಿಗೂ ಮತ್ತು ರಮೇಶರಿಗೂ ಸ್ವಾಗತ.
ಯಾವದೋ ಅತಾಚುರ್ಯದಿ೦ದ ಮೊದಲು ಪ್ರತಿಕ್ರಿಯಿಸಿದ ಮನಮುಕ್ತಾರವರ ಮತ್ತು ವಿ.ಆರ್.ಭಟ್ಟರ ಪ್ರತಿಕ್ರಿಯೆಗಳು ಕಾಣದ೦ತಾಗಿವೆ ಅದಕ್ಕಾಗಿ ಅವರಲ್ಲಿ ಕ್ಷಮೆ ಕೋರುವೆ.

ಸಾಗರದಾಚೆಯ ಇಂಚರ said...

ಸರ್
ಗೆಳೆತನದ ಕವನ ಸುಂದರವಾಗಿದೆ
ಗೆಳೆಯರ ಬದುಕಿನ ಅವಿಚ್ಛಿನ್ನ ಆಸ್ತಿ
ಯಾವತ್ತೂ ಅದನ್ನು ಕಳೆದುಕೊಳ್ಳದಿರಿ
ನಿಮ್ಮ ಗೆಳೆತನ ಎಂದಿಗೂ ಶಾಶ್ವತವಾಗಿರಲಿ

ಸಾಗರಿ.. said...

ಬಹಳ ಸುಂದರವಾದ ಕವನ. ತಮ್ಮ ಸ್ನೇಹಿತನ ಕವನ ಓದಲು ಅವಕಾಶ ಕೊಟ್ಟಿರಿ ಧನ್ಯವಾದಗಳು. ನಿಮ್ಮ ಸ್ನೇಹ ಎಂದೂ ಬಾಡದಿರಲಿ

ಜಲನಯನ said...

ಗೆಳೆಯನ ಬಗ್ಗೆ ನಿಮ್ಮ ಅಭಿಮಾನ ಆಪ್ಯಾಯತೆ ಮತ್ತು ಗೆಳೆತನಕ್ಕೆ ನಿಮ್ಮ ಭಾವನೆ..ಎಲ್ಲಾ ಪ್ರಶಂಸನೀಯ ಸೀತಾರಾಂ ಸರ್...ಚನ್ನಾಗಿದೆ ಕವನ

K.S.DODAMANI SD said...

ನಿಜವಾಗಿ ಮನ ಕಲುಕುವ ಕವನ
ಧನ್ಯವಾದಗಳು ಸರ್