(ಅಂತರ್ಜಾಲ ಕೃಪೆಯ ಚಿತ್ರ - Thanks to : aylwin0201.blogspot.com)
ನಿನ್ನೆ
ಸರಿ ಮಾಡಲರಿಯೇ ಸರಿದಿದೆ...
ಬರೀ ಮೂಟೆ... ಭಾರ ಬೆನ್ನಲ್ಲಿ..
ಸಾರ ಹೀರಿ... ಕಸುವಾಗಿಸಿ.. ಕಸವೆಸೆದು...
ನಡೆಯಬೇಕಾಗಿದೆ.!!ಸರ ಸರ....
ನಾಳೆ
ಆಗಸದ ಬಯಕೆಗಳು...
ನಿನ್ನೆಯ ಭಯಗಳು....
ಬಯಕೆ ಭಯೆಗಳ ನಡುವೆ ಬೇಡ ಭವಣೆ!!
ಇಂದು
ಕಾಡದಿರಲಿ ನಿನ್ನೆಯ ಎಡವರಿಕೆ..
ಕದಲಿಸದಿರಲಿ ನಾಳೆಯ ಕನವರಿಕೆ...
ಇಂದಿನ ನಡೆಗೆ!!!
ಜಯದ ಕಡೆಗೆ..
ಅಂತರದ ಅಂತ್ಯಕ್ಕೆ!!!
ಜಯ
ನಿನ್ನ..
ನಿನ್ನೆ ಕನಸ...
ಕನಸ ನಾಳೆ...
ಅರಳಿಸಿದೇ
ಇಂದಿನ ದೃಡ ಹೆಜ್ಜೆ!!!!
ಸೋಲು
ಭಾರ ಮೂಟೆ ಬೆನ್ನ ಮೇಲೆ...
ಭ್ರಾಂತು ಬಯಕೆ ಕಣ್ಣ ಮುಂದೆ...
ತಡಬಡಿಸಿದೆ ಹೆಜ್ಜೆ !!!
12 comments:
ಮೂಟೆ ಹಗುರಾಗಲಿ
ಬಾಳು ಹಸನಾಗಲಿ!
ಅರ್ಥಪೂರ್ಣ ಸು೦ದರ ಹನಿಗಳು ಸರ್, ಅಭಿನ೦ದನೆಗಳು:)
ನಿನ್ನ..
ನಿನ್ನೆ ಕನಸ...
ಕನಸ ನಾಳೆ...
ನಾಳೆ ಅರಳಿಸಿದೇ
ಅರಳಿಸಿದೇ ಇಂದಿನ
ಇಂದಿನ ಧೃಡ ಹೆಜ್ಜೆ!
ಧೃಡ ಹೆಜ್ಜೆ!!
ಧೃಡ ಹೆಜ್ಜೆ!!!!
ನಾನು ಹೀಗೆ ಗುನುಗಿದೆ
ಹೇಗೆ ??
-ಮೇಡಂ ಪ್ರಭಾಮಣಿ ಯವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
-ಹೆಬ್ಬಾರ್ ಸರ್ ತಮ್ಮ ಗುನುಗು ನನ್ನ ಚುಟುಕಿಗೆ ಪೂರಕವಾಗಿದೆ. ತಮ್ಮ ಹಾರೈಕೆ ಹೇಗೆ ಇರಲಿ ಸದಾ...
ಸೀತಾರಾಮರೆ,
ಮನೋಬಲವನ್ನು ಹೆಚ್ಚಿಸುವ ಸಂಕಲ್ಪ-ಹನಿಗಳು. ನಿಮ್ಮಿಂದ ಇಂತಹ ಅರ್ಥಪೂರ್ಣ ಕವನಗಳು ಬರುತ್ತಲೇ ಇರಲಿ.
ತಮ್ಮ ಅಕ್ಕರೆಯ ಪ್ರೋತ್ಸಾಹ ಹೀಗೆ ಇರಲಿ ಸುನಾಥ ಸರ್..
ಇಲ್ಲಿಯ ಚುಟುಕುಗಳು ಅರ್ಥ ವ್ಯಾಪ್ತಿಯಲ್ಲಿ ಮಹಾ ಕಾವ್ಯಗಳೇ ಆಗಿವೆ.
ನಮ್ಮಂತಹ ನಿರಾಶಾವಾದಿಗಳ ಮನಸ್ಸಿನ ಗೋಡೆಯ ಮೇಲೆ ಬರಹವಾಗ ಬಲ್ಲ ಕೃತಿಗಳಿವು.
ಇನ್ನಾದರೂ ನಿಮ್ಮ ಬ್ಲಾಗು ಮೊರೆಯಲಿ...
ಸುಂದರ ಹನಿಗಳು ಸೀತಾರಾಮಣ್ಣ :) ಚೆನ್ನಾಗಿದೆ.
ಏನ್ ಸರ್ ಎಂಥಾ ಮಾತು ಹೇಳೀರಿ..ಪಸಂದಾಗಿವೆ
ವಾವ್ ಸುಂದರ ಚುಟುಕಗಳು ಸೀತಣ್ಣ... ಮಗನ ಧೃಢ ಹೆಜ್ಜೆಯೂ ಸೇರಿದೆ..ಸಂಕಲ್ಪ ಮನೋಬಲ ಮತ್ತು ಸ್ಥೈರ್ಯಕ್ಕೂ ಬಲಕೊಡುವ ಸಾಲುಗಳು.
ಚಿಕ್ಕವಾದರೂ ಸಾಕಷ್ಟು ಅರ್ಥವನ್ನು ಹೊಮ್ಮಿಸುವ ಚುಟುಕುಗಳು. ಇನ್ನಷ್ಟು ಬರಲಿ.
-ಬದರೀನಾಥರೆ ತಾವು ನಿರಾಶಾವಾದಿಗಳಲ್ಲ ಯಾರು ಹೇಳಿದ್ದು? ತಮ್ಮ ಬ್ಲಾಗ್ ನೋಡಿದವರೆಲ್ಲರಿಗೂ ತಾವೆಷ್ಟು ಅಶಾವಾದಿಗಳೆಂದು ಗೊತ್ತು. ತಮ್ಮ ಮೆಚ್ಚುಗೆನುದಿಗೆ ವೀನಿತ ವಂದನೆಗಳು.
-ಈಶ್ವರ್ ಭಟ್ಟರೇ ತಮ್ಮ ಪ್ರತಿಕ್ರಿಯೆಗೆ ವಂದನೆ.
- ದೇಸಾಯಿಯವರ ತಮ್ಮ ಹಾರೈಕೆ ಹೀಗೆ ಇರಲಿ.
-ಅಜಾದಣ್ಣ ತಮ್ಮಂತ ಮಿತ್ರರ ಹಾರೈಕೆ ಯು ಮನೋಬಲ ಹೆಚ್ಚಿಸುತ್ತೆ. ವಂದನೆಗಳು.
- ಸುಬ್ರಮಣ್ಯರೆ ತಮ್ಮ ಮೆಚ್ಚುಗೆಗೆ ವಂದನೆಗಳು.
ಸೀತಣ್ಣ..ಚುಟುಕಿನ ಗುಟುಕು ಚಿಕ್ಕದಾದರೂ ಸ್ವಾದ ಮನದಲ್ಲೇ ಗುಂಯ್ಗುಡ್ತಿದೆ...
Post a Comment