Monday, September 3, 2012

ಆಡಿಸಿ ನೋಡು...ಬೀಳಿಸಿ ನೋಡು.....ಉರುಳಿ ಹೋಗದು .......


(ಸಿಂಗಾಪುರನ ಯುನಿವೆರ್ಸಲ್ ಸ್ಟುಡಿಯೋದ ಮೋಜಿನ ಸುತ್ತು ತಿರುಗೋ ಚಕ್ರ-BATTLESTAR GALLACTICA)
ಬದುಕ ಬಂಡಿ ಸುತ್ತಿಸಿತ್ತೋ...
ಮೇಲೆ ಕೆಳಗೆ ಆಡಿಸಿತ್ತೋ....
ತಿರುಗು ಮುರುಗೋ ಹೊರಳಿಸಿತ್ತೋ...

ಮೇಲೆ ಹೋಗಿ ನಕ್ಕಿದಿತ್ತೋ...
ಕಳಗೆ ಬಂದು ಅತ್ತಿದಿತ್ತೋ...

ನೇರ ಏರಿ ಕೇಕೆ ಹಾಕಿದಿತ್ತೋ...
ತಲೆಕೆಳಗಾಗಿ ಬೆಚ್ಚಿ ಕಿರುಚಿದಿತ್ತೋ....
 ಮತ್ತೆ ನೇರನಾಗಿ ಮುಕ್ತನೆನಿಸಿದಿತ್ತೋ...
ನೆನಸುವಾಗಲೇ ಮತ್ತೆ ಹೊರಳಿಸಿತ್ತೋ....

ತಂದೆತಾಯ ನೆನಸಿತ್ತೋ...
ಅಮ್ಮ ಎಂದು ಕೂಗಿದಿತ್ತೋ...

ಬದುಕ ಪಯಣ ಸೂತ್ರದಲ್ಲಿ ಎಲ್ಲವನ್ನು
ಕಾಣದಂತೆ ಬಂಧಿಸಿತ್ತೋ...

ಬೀಳದಂತೆ ಎಲ್ಲೋ ನಮ್ಮೆನೆಲ್ಲಾ
ಗಟ್ಟಿಯಾಗಿ ಹಿಡಿದಿತ್ತೋ...

ಅದರ ಜಾಡಿನಲ್ಲಿ
ಸುತ್ತಿ ಸುತ್ತಿ ತಿರುಗಿಸಿತ್ತೋ....

ಸೂತ್ರದಲ್ಲಿ  ತಿರೋಗೋ ಪಟದಂತೆ
ತಿರುಗುತ್ತಲ್ಲಿತ್ತೋ...

ಮುಗಿದ ಪಯಣ ಬೆರಗು ಭಯ
ವಿಸ್ಮಯದಲ್ಲಿತ್ತೋ....

ಕಾಣದಂತೆ ಧನ್ಯತೆಯ ಭಾವ ಹೊಮ್ಮಿತ್ತೋ....

9 comments:

ಮನಸು said...

ಒಟ್ಟಲ್ಲಿ ಸಿಂಗಾಪುರ ವಿಸ್ಮಯವನ್ನು ಚೆನ್ನಾಗಿ ಅನುಭವಿಸಿ, ಮೇಲೆ ಕೆಳಗೆ ಸುತ್ತಾಡಿ ತಲೆಸುತ್ತಿ ವಾಕರಿಕೆ ಬರದಂತೆ ಕ್ಷೇಮವಾಗಿ ಬಂದಿದ್ದೀರಿ ಹಹ ಚೆನ್ನಾಗಿದೆ ಸರ್ ಕವನ

ದಿನಕರ ಮೊಗೇರ said...

nimma jote naavu tirugida haagittu....

Dr.D.T.Krishna Murthy. said...

ಸೀತಾರಾಂ ಸರ್;ಚೆಂದದ ಕವನ.ಬದುಕೆಂದರೆ ಅಷ್ಟೇ ಅಲ್ಲವೇ?

Badarinath Palavalli said...

ಸಿಂಗಪುರದ ಈ ಮೋಜಿನ ಆಟವು ನಿಮ್ಮ ಲೇಖನಿಯಲ್ಲಿ ಅಮೋಘವಾಗಿ ಕವಿತೆಯಾಗಿ ಮೂಡಿ ಬಂದಿದೆ.

Ashok.V.Shetty, Kodlady said...

ನಿಮ್ಮ ಅನುಭವದ ಚಕ್ರದೊಳಗೆ ನಮ್ಮನ್ನು ಆಟ ಆಡಿಸಿಬಿಟ್ರಿ...ಚೆನ್ನಾಗಿದೆ ಸರ್...

Dileep Hegde said...

ನಮ್ಮನ್ನೂ ಚಕ್ರದೊಳಗೊಮ್ಮೆ ತಿರುಗಿಸಿದಿರಿ..

sunaath said...

ಸಿಂಗಾಪುರದ ಚಕ್ರದ ಬಗೆಗೆ ಸಿಂಗಾರವಾದ ಕವನ. ಬದುಕಿನ ಚಕ್ರವನ್ನೂ ನೆನಪಿಸುತ್ತದೆ.

balasubramanya said...

ನಿಮ್ಮ ಕವನ ಓದುತ್ತಿದ್ದರೆ ನಾವೇ ತಿರುಗುವ ಚಕ್ರದಲ್ಲಿ ಕುಳಿತಂತೆ ಭಾಸವಾಗುತ್ತೆ. ಚಂದದ ಕವಿತೆ ಒಳಗೆ ಜೀವನ ಯಾನದ ಹೂರಣ. ಇಷ್ಟಾ ಆಯ್ತು ಸೀತಾರಾಮ್ ಸರ್.

prabhamani nagaraja said...

ತಿರುಗಿ ತಿರುಗಿ ನಾವ೦ತೂ ಸುಸ್ತೋಸುಸ್ತು! ಚ೦ದದ ಕವನಕ್ಕಾಗಿ ಧನ್ಯವಾದಗಳು ಸರ್.