Tuesday, December 14, 2010

ನವನೀತ

(ಚಿತ್ರ ಅಂತರ್ಜಾಲ ಕೃಪೆ - ದೊಡ್ದಮಾಳುರಿನ ಅಂಬೆಗಾಲು ಕೃಷ್ಣ)


ಮೊನ್ನೆ ೧೨ನೆ ತಾರೀಕಿಗೆ ನನ್ನ ಮಗನ ನಾಮಕರಣ ಶಾಸ್ತ್ರ ಮುಗಿಸಿದೆವು.
ಅವನಿಗೆ ಇಟ್ಟ ಹೆಸರು "ನವನೀತ"
ಈ ಸಂಧರ್ಭದಲ್ಲಿ ಮಿತ್ರ ವಾಮನ ಬರೆದ "ನವನೀತ" ಭಾವಗೀತೆಯನ್ನು ಸಂಧರ್ಭಕ್ಕೆ ಒಪ್ಪುವಂತಿರುವದರಿಂದ ಅವರ ಒಪ್ಪಿಗೆಯೊಂದಿಗೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ.


"
ನವನೀತ"-ಭಾವಗೀತೆ
ಬರೆದವರು : ವಾಮನ ಕುಲಕರ್ಣಿ
(ಅವರ "ತೆರೆಗಳು" ಕವನ ಸಂಕಲನದಿಂದ ಆಯ್ದದ್ದು)

ಎದೆಯಲ್ಲಿ ಭಾವ ಕಡೆದಾಗ ಬಂತು
ನವನೀತ ನನ್ನ ಕವನ.
ಹೂತಿಟ್ಟ ಸುಮಕೆ ಹೂಗಂಧ ಸವರಿ
ದಾಳಿಂಬ ಬಿರಿದ ವದನ.

ಮುಗಿಲಲ್ಲಿ ಮೋಡ ಗುಡುಗುಡುವ ರಾಗ
ಶ್ರುತಿ ಆಲೆಯ ಧಾರೆ ಮಳೆಯು.
ತೊರೆಯಾಗಿ ಝರಿಯು ಗಿರಿಯಿಂದ ಧುಮುಕಿ
ಕಾಲುವೆಗಳಾಗಿ ಕೆರೆಯು.

ಈ ಜಗದ ದುಂಬಿ ಮಧುವನ್ನು ಈ೦ಟೀ
ಸಂಚಯಿಸಿ ಜೇನಗೊನೆಯು
ಮಧುಮಧುರ ಸಿಹಿಯ ಈ ಜಗಕೆ ಹಂಚಿ
ಹಂಚುವನು ದಾನಿ ಕವಿಯು.

ಹಾಲ್ಗಾಳ ಹೊತ್ತ ತೆನೆತೆನೆಗೂ ಅಲ್ಲಿ
ಮುಗಿಬಿದ್ದ ಹಕ್ಕಿ ಹಿಂಡು
ಹೊಂಬಣ್ಣ ಸಂಜೆ ಸೆರಗನ್ನು ಹಿಡಿದು
ಗುಟುಕಾಗಿ ತಂದ ಬಂಡು.

ಸಲಗಗಳ ದಂಡು ಭೋರಾಡಿ ಮದದಿ
ಕಿಚ್ಚತ್ತಿ ಕಾಡು ಉರಿದು.
ಖೆಡ್ಡಗಳ ಕಟ್ಟಿ ಸಲಗಗಳ ಒಟ್ಟಿ
ನಿಟ್ಟುಸಿರ ಬಿಟ್ಟ ಕವಿಯು.

ಭಾವಗಳ ಬೆನ್ನ ಹತ್ತುತ್ತ ನಡೆದು
ಏನೇನೋ ಕಂಡ ಮಗುವು.
ಎದ್ದೆದ್ದು ಬಿದ್ದು ಭಯದಲ್ಲಿ ಅತ್ತು
ಹಾಲ್ಗೆನ್ನೇ ತೊದಲು ನುಡಿಯು.

ಕುರುಡನಿಗೆ ನಯನ ಮುಕನಿಗೆ ಮಾತು
ನೀಡಿಲ್ಲ ನನ್ನ ಕವನ.
ಮೊಲೆಯುಣಿಸಿ ತಾಯಿ ನೋವುಗಳ ಒರೆಸಿ
ಸಾಂತ್ವನ ಕವಿಯ ನಯನ.

ಭುವಿಯಲ್ಲಿ ಬೀಜ ಛಲದಿಂದ ಸಹಜ
ಮುಟ್ಟುವದು ದೂರ ಗಗನ.
ಗಿಡದಲ್ಲಿ ಕುಸುಮ ಹೋಲಿಕೆಯು ಅಸಮ
ಸೌರಭವು ನನ್ನ ಕವನ.

ಆ ರವಿಯ ತಂದು ಕಣ್ಣಲ್ಲಿ ಇಟ್ಟು
ನೀ ದಿನವು ಹುಟ್ಟು ಇಲ್ಲಿ.
ಉರಿಯಾಗಿ ನನ್ನ ದಿನದಿನವು
ಸುಟ್ಟು ಬೆಳಕಾಗು ಜನರಿಗಿಲ್ಲಿ.


25 comments:

prabhamani nagaraja said...

ನಿಮ್ಮ ಮಗನಿಗೆ ಇಟ್ಟ ಹೆಸರು "ನವನೀತ" ಹಾಗೂ ವಾಮನ ಕುಲಕರ್ಣಿಯವರು ಬರೆದ "ನವನೀತ" ಭಾವಗೀತೆ ಎರಡೂ ಚೆನ್ನಾಗಿವೆ ಸರ್. "ನವನೀತ" ಎ೦ದರೆ `ಬೆಣ್ಣೆ' ಎ೦ಬ ಅರ್ಥವಿದ್ದು ಮೃದು, ಕೋಮಲ ಕುವರ ಈ ಹೆಸರಿಗೆ ಪ್ರೇರಣೆಯೇ? ಮನಸ್ಸು ಮತ್ತು ಹೃದಯ ಕರುಣೆಯಿಂದ ಕೂಡಿದ್ದು ಬೆಣ್ಣೆಯ೦ತೆ ಮೃದುವಾಗಿರಲಿ. ಅವನಿಗೆ ನನ್ನ ಶುಭ ಹಾರೈಕೆಗಳು

Doddamanimanju said...

ಮಗುವಿನ ಹೆಸರು ತುಂಬಾ ಚನ್ನಾಗಿದೆ ಸರ್ :)

ಚುಕ್ಕಿಚಿತ್ತಾರ said...

ಹೆಸರು ತು೦ಬಾ ಸು೦ದರವಾಗಿದೆ.ಬೆಣ್ಣೆಕೃಷ್ಣನಿಗೆ ಸಕಲವೂ ಸನ್ಮ೦ಗಳವಾಗಲಿ. ಭಾವಗೀತೆ ಸು೦ದರವಾಗಿದೆ.

PARAANJAPE K.N. said...
This comment has been removed by the author.
PARAANJAPE K.N. said...

ಕವಿತೆ ತು೦ಬಾ ಚೆನ್ನಾಗಿದೆ. ನಿಮ್ಮ ಮಗನಿಗೆ ಮತ್ತು ನಿಮ್ಮ ಕುಟು೦ಬಕ್ಕೆ ಶುಭ ಹಾರೈಸುವೆ

ವಿ.ಆರ್.ಭಟ್ said...

’ನವನೀತ್’ ಹೆಸರು ಚೆನ್ನಾಗಿದೆ,ನವ ಜಾಯಮಾನದ ಮುದ್ದುಮಗು ನವನವೋತ್ಸಾಹ ತರಲಿ, ಸೀತಾ-ರಾಮರ ಕೀರ್ತಿ ಹೆಚ್ಚಿಸಲಿ ಎಂದು ಹಾರೈಸುತ್ತೇನೆ.ಕವನ ಸುಂದರವಾಗಿದೆ ಎನ್ನಲೂ ಮರೆಯುವುದಿಲ್ಲ.

Pradeep Rao said...

’ನವನೀತ’ ಉತ್ತಮವಾದ ಹೆಸರಿಟ್ಟಿದ್ದೀರ ಸಾರ್.. ಶುಭವಾಗಲಿ.. ಕವನ ಚೆನ್ನಾಗಿದೆ.. ಕೊನೆಯ ಸಾಲುಗಳು ಹಿದಿಸಿದವು..
ತುಂಬಾ ದಿನಗಳ ನಂತರ ನಿಮ್ಮ Blog ನಲ್ಲಿ update ಇದೆ.. ಸಂತೋಷವಾಯ್ತು..

ಓ ಮನಸೇ, ನೀನೇಕೆ ಹೀಗೆ...? said...

ನವನೀತ ಹೆಸರು ತುಂಬಾ ಇಷ್ಟವಾಯ್ತು ಸರ್. ಪುಟ್ಟ ನವನೀತ ನ ಭವಿಷ್ಯ ಉಜ್ವಲವಾಗಿರಲಿ. ಕವನ ಕೂಡ ತುಂಬಾ ಚೆನ್ನಾಗಿದೆ.

ಪುಟ್ಟಿಯ ಅಮ್ಮ said...

ಸುಂದರ ಭಾವಗೀತೆಯೊಂದಿಗೆ ಮಗನ ಹೆಸರನ್ನು ಪರಿಚಯಿಸಿದ್ದೀರ. ’ನವನೀತ’ ಹೆಸರು ಸುಂದರವಾಗಿದೆ.

ಸುಬ್ರಮಣ್ಯ ಮಾಚಿಕೊಪ್ಪ said...

ಶುಭವಾಗಲಿ

ಅನಂತರಾಜ್ said...

ಮಗುವಿಗೆ ತು೦ಬ ಹೃದಯದ ಶುಭ ಹಾರೈಕೆಗಳು ಸರ್.


ಅನ೦ತ್

ಮನದಾಳದಿಂದ............ said...

ಸೀತಾರಾಂ ಸರ್,
’ನವನೀತ’ನ ನವನವೀನ ಬದುಕು ನಳನಳಿಸುತ್ತಿರಲಿ......

’ನವನೀತ’ನಂತೆ ’ನವನೀತ’ವೂ ಸುಂದರವಾಗಿದೆ.

ಚಂದದ ಕವನ

nimmolagobba said...

¸ಸರ್ ಮುದ್ದು ಕಂದನಿಗೆ ನವನೀತ ಹೆಸರು ಚೆನ್ನಾಗಿದೆ. ಕಂದನಿಗೆ ಶುಭ ಹಾರೈಕೆಗಳು. ನಿಮಗೆ ಹಾಗು ನಿಮ್ಮ ಶ್ರೀಮತಿಯವರಿಗೆ ಶುಭಾಶಯಗಳು.ಮುದ್ದು ಕಂದ ಅರಳಿಸಿರುವ ಸುಂದರ ಕವಿತೆ ನಿಮ್ಮ ಬಾಳಲ್ಲಿ ಸದಾ ಉಳಿಯಲಿ.

umesh desai said...

ಹೆಸರು ಅಪರೂಪದ್ದು ಛಂದ ಅದ

Nisha said...

ನವನೀತನಿಗೆ ತು೦ಬ ಹೃದಯದ ಶುಭ ಹಾರೈಕೆಗಳು

Shashi jois said...

ಮಗುವಿನ ಹೆಸರು ಚೆನ್ನಾಗಿದೆ ಸರ್..ಭಾವಗೀತೆ ಕೂಡ ಚೆನ್ನಾಗಿದೆ.

sunaath said...

ನವನೀತನಿಗೆ ಶುಭ ಹಾರೈಕೆಗಳು. ನವನೀತ ಕವನದ ಕವಿ ವಾಮನ ಕುಲಕರ್ಣಿಯವರಿಗೆ ವಂದನೆಗಳು. ನವನೀತ ವರ್ಧಿಸುತ್ತ ಹೋಗಲಿ ಎಂದು ಪ್ರಾರ್ಥಿಸುತ್ತೇನೆ.

Sum said...

Olleya hesaru.... Navaneeta tumba muddagiddane :)

ಮೌನ-ಮಾತು said...

Magu hesaru tumba chennagide. Abhinandanegalu

Badarinath Palavalli said...

My best wishes to my dear Navaneetha and thanks for Vamana Kulakarni, who given us such a fantastic poem. U are simply great sir.
Pl. Visit my blogs :
www.badari-notes.blogspot.com
www.badari-poems.blogspot.com

Deep said...

Hesaru Muddagide..

Nimage shubashayagalu sir

ದಿನಕರ ಮೊಗೇರ said...

maganige namma subhaashaya....

god bless him...

ಕಲರವ said...

ಸೀತಾರಾಂ ಸರ್ ರವರೆ ,"ನವನೀತ "ಹೆಸರು ಹಾಗು ಕುಲಕರ್ಣಿಯವರ ಕವನ ಎರಡೂ ಸುಂದರವಾಗಿದೆ.ನವನೀತನಿಗೆ ಶುಭ ಹಾರೈಕೆಗಳು

- ಕತ್ತಲೆ ಮನೆ... said...

ನಿಮ್ಮ maguvige shubha haaraikegalu..
'navaneeta, sundaravaagide..
೨೦೧೧ರಲ್ಲಿ ಸಿಹಿಕ್ಷಣಗಳು ಎದುರಾಗಲಿ...

ಮನಸು said...

sorry taDavagi comment haakuttaliddene.. congrats.. paapu hesaru tumba chennagide....