Thursday, May 13, 2010

ಶರಾಬು ಕುಡಿದ ವಿದ್ಯುತ್

ಕರ್ನಾಟಕದಲ್ಲಿ ಹತ್ತು ಹಲವು ನದಿಗಳು
ನೂರಿಪ್ಪತ್ತು ಜಲಪಾತಗಳು
ಆದರೂ ಬೆರಳೆಣಿಕೆಯ ಜಲವಿದ್ಯುತ್ ಯೋಜನೆಗಳು !!

ಸುಡುತಿರುವೆವು ದೂರದದೆಲ್ಲಿಂದಲೋ ಕಲ್ಲಿದ್ದಲು ತಂದು
ನಾಗರಿಕ ಪೂರೈಕೆಯ ವಿದ್ಯುತ್ ಉತ್ಪಾದನೆಗೆಂದು !!

ಆದರೂ ನಾಗರಿಕರ ಬೇಡಿಕೆಯನ್ನು
ಪೂರೈಸದ ವಿದ್ಯುತ್ ನಿಗಮ
ಶರಾಬ್ ಕುಡಿದ೦ತೆ ನಿರತ ಹತ್ತಿ ಆರುವ
ಕಣ್ಣು ಮುಚ್ಚಾಲೆಯ ವಿದ್ಯುತ್ ದೀಪ
ಕಳೆಯದು ನಮ್ಮನ್ನು ಆವರಿಸಿಹ ತಮ
ಜೊತೆಗೆ ರಶೀದಿಯಲ್ಲೂ ಆಗಿದೆ
ವಿದ್ಯುತ್ ಸರಬರಾಜು -ಶರಬರಾಜು ಎ೦ದು
ಅಳುತಿಹಳು ಕನ್ನಡಮ್ಮ ನಮ್ಮ
ಇಚ್ಚಾಶಕ್ತಿ ಮತ್ತು ಕನ್ನಡ ಭಾಷಾಜ್ಞಾನ ಕಂಡು !!!


ಇದು ನನ್ನ " ಒಂಚೂರು ಅದು ! ಇದು! " ಅಂಕಣದ ೫೦ನೇ ಬರಹ. ಸಂಧರ್ಭದಲ್ಲಿ ಓದಿ ಹರಸಿದ ಎಲ್ಲ ಸಹೃದಯ ಓದುಗರಿಗೂ ವಿನೀತನಾಗಿ ವಂದನೆಗಳನ್ನರ್ಪಿಸುತ್ತೇನೆ. ತಮ್ಮ ಪ್ರೀತಿ, ಅಭಿಮಾನ ಮತ್ತು ಹಾರೈಕೆ ಸದಾ ಇರಲಿ ಎ೦ದು ಕೋರಿಕೊಳ್ಳುವೆ.

25 comments:

ಡಾ.ಕೃಷ್ಣಮೂರ್ತಿ.ಡಿ.ಟಿ. said...

ಇನ್ನು ಮುಂದೆ ವಿದ್ಯುತ್ ಕಂಪನಿಗಳು ವಿದ್ಯುತ್ ಕೊಡುವುದಕ್ಕೆ
ಆಗದೆ ಇದ್ದಾಗ ಜನರಿಗೆ ಕತ್ತಲೆ ಬೆಳಕಿನ ವ್ಯತ್ಯಾಸ ಗೊತ್ತಾಗದಿರಲಿ ಅಂತ ಶರಾಬನ್ನೂ ಸರಬರಾಜು ಮಾದುತ್ತಾರೆನೋ!

ಮನದಾಳದಿಂದ said...

ಸರ್,
ಕನ್ನಡಿಗರ ನಿರ್ಲಕ್ಸ್ಯವೇ ವಿಧ್ಯುತ್ ನಿಗಮ ಶರಾಬು ಕುಡಿಯಲು ಕಾರಣವಿರಬಹುದೇ?
ನಾವು ಕೈ ಕೈ ಹಿಸುಕಿಕೊಲ್ಲಬೇಕೆ ಹೊರತು ನಿಗಮದ ಸುದಾರಣೆ ಅಷ್ಟರಲ್ಲೇ ಇದೆ.
ಬರಹಗಳಲ್ಲಿ ಅರ್ದ ಶತಕ ಹೊಡೆದ ನ ನಿಮ್ಮ ಬ್ಲಾಗಿಗೆ ಶುಭಾಶಯಗಳು.

ಸಿಮೆಂಟು ಮರಳಿನ ಮಧ್ಯೆ said...

ಸೀತಾರಾಮ್ ಸರ್...

ಇದು ಕನ್ನಡದ ಅಪಹಾಸ್ಯ... !
ಜವಾಬ್ದಾರಿ ಇರುವವರೇ.. ಈ ರೀತಿ ಕನ್ನಡ ಬಳಸಿದರೆ ಹೇಗೆ ?
ಛೇ...!

sunaath said...

ಸೀತಾರಾಮರೆ,
ಅರ್ಧಶತಕ ಬಾರಿಸುತ್ತಿರುವ ನಿಮಗೆ ಹಾರ್ದಿಕ ಅಬಿನಂದನೆಗಳು.
ಬೇಗನೇ ಶತಕ ಪೂರೈಸುವಿರೆಂದು ಹಾರೈಸುತ್ತೇನೆ.

Subrahmanya said...

ವಿದ್ಯುತ್ ನಿಗಮದ ಹೆಚ್ಚಿನ ಲೈನ್‍ಮ್ಯಾನ್ ಗಳು ಶರಾಬು ಕುಡಿದೇ ಕೆಲಸ ಮಾಡುವುದು , ಆದ್ದರಿಮ್ದ ಅದು ಶರಬರಾಜು ಕಂಪನಿಯೇ ಸರಿ !.

Half century ಗೆ ಶುಭಾಷಯಗಳು. ಬೇಗ century, double century ಗಳು ಆಗಲಿ.

ಜಲನಯನ said...

ಸೀತಾರಾಂ ಸರ್, ಶುಭಾಷಯಗಳು ನಿಮ್ಮ ಹಾಫ್ ಸೆಂಚುರಿಗೆ ..ಹಾಹಾಹಹ್ ಈ ಸಂದರ್ಭದಲ್ಲಿ ವಾವ್ ಎಂತಹ ಪೋಸ್ಟು..!! ಶರಾಬು ಖಂಡಿತಾ ಕುಡಿಸುತ್ತಾರೆ ಇವರು ...ಕನ್ನಡ ಗೊತ್ತಿರೋರಿಗೆ...

Ranjita said...

ಸೀತಾರಾಂ ಸರ್ ,
ನಿಮ್ಮ ೫೦ ನೆ ಬರಹಕ್ಕೆ ಶುಭಾಶಯಗಳು ,
ಶರಾಬಿ ವಿಧ್ಯುತ್ ಚೆನ್ನಾಗಿದೆ :)

PARAANJAPE K.N. said...

ಹೀಗೆ ಕನ್ನಡದ ಕೊಲೆ ಅನೇಕ ಕಡೆ ಆಗುತ್ತಿದೆ. ಬೆ೦ಗಳೂರಿನಲ್ಲ೦ತೂ ಅಧ್ವಾನವೆನಿಸುವಷ್ಟು ಅಪಸವ್ಯಗಳಿವೆ. ಐವತ್ತು ಬರಹ ಪೂರೈಸಿದ್ದೀರಿ, ಬೇಗ ಶತಕ ಪೂರೈಸಿ, ಶುಭಾಶಯ.

!! ಜ್ಞಾನಾರ್ಪಣಾಮಸ್ತು !! said...

ಸೀತಾರಾಮ.ಕೆ.,

ಇಂತಹ ಹಲವಾರು ಚಿತ್ರಗಳಿಗಾಗಿ :http://chitra-vichitra.blogspot.com/

Snow White said...

congrats sir :)

IshwarJakkali said...

ತುಂಬಾ ಚೆನ್ನಾಗಿ ಬರದಿದ್ದೀರಾ.
೫೦ ನೆ ಬರಹದ ಶುಭಾಶಗಳು, ಹಿಂಗೆ ಬರೀತಾ ಇರಿ...

ಗೌತಮ್ ಹೆಗಡೆ said...

ಇದೊಂಥರ ಸಿಕ್ಸ್ ಹೊಡೆದು ಫಿಫ್ಟಿ ಕಂಪ್ಲೀಟ್ ಮಾಡಿದ ಹಾಗಾಯ್ತು:) ಮಸ್ತ್ ಮಸ್ತ್ ಪೋಸ್ಟ್:)

ಸವಿಗನಸು said...

ಸೀತಾರಾಮ್ ಸರ್...
ಇದು ಕನ್ನಡದ ಕೊಲೆ...
ಇಲಾಖೆಗಳಲೆ ಹೀಗೆ ನಡೆದರೆ ಹೇಗೆ... ?
ಅವರು ಶರಾಬು ಕುಡಿಸುವವರೆ...

ಅರ್ಧ ಶತಕಕ್ಕೆ ಶುಭಾಷಯಗಳು.... ಬೇಗ ಶತಕಗಳು ಆಗಲಿ

Manasa said...

Keen observation Sir,

Congratulations for half century :)

Raghu said...

he he he..testu vetyasa agutte meaning nalli...
Raaghu

ಓ ಮನಸೇ, ನೀನೇಕೆ ಹೀಗೆ...? said...

ಸೀತಾರಾಮ್ ಸರ್.....50 ಬರಹಗಳನ್ನು ಯಶಸ್ವಿಯಾಗಿ ಓದುಗರಿಗೆ ಬೇಸರ ಮೂಡದ ರೀತಿಯಲ್ಲಿ ಮುಗಿಸಿದ ನಿಮಗೆ ಅಭಿನಂದನೆಗಳು. ಹೀಗೆ ಮುಂದುವರಿಯಲಿ ಎಂಬುದು ನಮ್ಮ ಪ್ರಾರ್ಥನೆ ಹಾಗೂ ಹಾರೈಕೆ.

Manjula said...

ಹಹಹ... ಟೈಟಲ್ ಸೂಪರ್.. :-) ಕನ್ನಡದ ಕೊಲೆಯ ನಿದರ್ಶನಗಳಿಗೆ ಬೆಂಗಳೂರಿನಲ್ಲಿ ಬರವೇ ಇಲ್ಲ.. ಇಂಥ ತಪ್ಪುಗಳನ್ನು ಸರಿ ಪಡಿಸೋದು ಹೇಗೆ ಅಂತ ಬರಿ ಯೋಚಿಸಿ ಸುಮ್ಮನಾಗ್ತೀವಿ ಅಲ್ವಾ? ಏನಾದ್ರೂ ಮಾಡಬಹುದಾ? ಹೇಗೆ?!

shivu.k said...

ಸರ್,

ನಮ್ಮ ಕನ್ನಡಿಗರ ಇಚ್ಚಾಶಕ್ತಿ ಕೊರತೆಯೇ ನಮಗೆಲ್ಲಾ ಹೀಗೆ ತೊಂದರೆಯಾಗಲು ಕಾರಣವಿರಬಹುದೇನೋ.

೫೦ನೇ ಪೋಸ್ಟಿಂಗ್ ಮಾಡಿದ್ದೀರಿ. ಹೀಗೆ ಮುಂದುವರಿದು ಸಾವಿರಾರು ಪೋಸ್ಟಿಂಗ್ ಹರಿದುಬರಲಿ.

nenapina sanchy inda said...

sharabaraju...hehehe
Congrats for 50th post
:-)
malathi S

ashokkodlady said...

tumbaa chennagide sir....congratulation nimma 50 ne barahakke....nice one sir....

Pradeep Rao said...

ಚೆನ್ನಾಗಿದೆ ಸಾರ್.. ದಿನಾ ಸಂಜೆ ವಿದ್ಯುತ್ ತೆಗೆದರೆ ಕದ್ದುಮುಚ್ಚಿ ಶರಾಬು ಕುಡಿಯೋರ‍ಗೆ ಸಹಾಯ ಆಗುತ್ತೆ ಅನ್ನೋದರ ಸಂಕೇತ ಇರಬಹುದು ಇದು!!

ಜಲನಯನ said...

ಸೀತಾರಂ ಸರ್, ಹೌದು ನೋಡಿ ..ಎಲ್ಲಾ ಮಾಡಿದರೂ ..ಕತ್ತಲೆಯಿರುವವ್ವರಿಗೆ ಕತ್ತಲೆಯೇ..ದಿನವೆಲ್ಲಾ ದೀಪ (ವಿದ್ಯುತ್) ಉರಿಸುವವರು ಉರಿಸುತ್ತಲೇ ಇದ್ದಾರೆ..ಅಂಧೇರ್ ನಗರಿ ಚೌಪಟ್ ರಾಜ.....

ವಿ.ಆರ್.ಭಟ್ said...

ಬಹಳ ಚೆನ್ನಾಗಿದೆ, ಎಲ್ಲೋ ಕಟೌಟ್ ಒಂದು ಬಿತ್ತರಿಸುತ್ತಿತ್ತು \
' ಕರ್ನಾಟಕ ಸರ್ಕಾರ
ಮದ್ಯಪಾನದಿಂದ ಸರ್ವನಾಶ '
ಇದೊಂದು ಸಂದೇಶ ಸರಕಾರದಿಂದ,ಸರಿ, ಆದರೆ ಬರೆಯುವಾಗ ವ್ಯಾಕರಣ ಶುದ್ಧತೆಯೂ ಅವಶ್ಯಕ ಅಲ್ಲವೇ ? ಇಲ್ಲದಿದ್ದರೆ ಅದರ ಅರ್ಥ ಅನರ್ಥವಾದೀತು ಅಲ್ಲವೇ ?

Anonymous said...

ಜಲವಿಧ್ಯುತ್ = ಜಲವಿದ್ಯುತ್

ಕಲ್ಲಿದ್ದಲ್ಲು = ಕಲ್ಲಿದ್ದಲು

ವಿದ್ಹ್ಯುತ್ = ವಿದ್ಯುತ್ (3 times)

dayaviTTu bere arthagaLiddare tiLisi...

ಸೀತಾರಾಮ. ಕೆ. / SITARAM.K said...

ಪ್ರಿಯ ಅನಾಮಧೇಯರೇ,
ಲೋಪಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು. ತಾವೂ ಅನುಮಾನಿಸಿದ೦ತೆ ಅವುಗಳಿಗೆ ಬೇರೆ ಬೇರೆ ಅರ್ಥವಿಲ್ಲ. "ವಿದ್ಯುತ್" ಸರಿಯಾದ ಸಾಮಾನ್ಯ ಬಳಕೆ ಶಬ್ದ. "ವಿಧ್ಯುತ್" ಅಥವಾ "ವಿಧ್ಹ್ಯುತ" ನನ್ನ ಬೆರಳಚ್ಚಿನಲ್ಲಿ ಆದ ತಪ್ಪುಗಳು ಆದರೇ ಅದು ಬೇರೆ ಅರ್ಥ ಪಡೆಯದೇ ಅದೇ ಅರ್ಥದಲ್ಲಿ ಓದಬೇಕಾಗಿರುವದರಿ೦ದ ನನ್ನ ಗಮನಕ್ಕೆ ಬ೦ದಿರಲಿಲ್ಲ. ಕಲ್ಲಿದ್ದಲು ಸಹಾ ಸರಿಯೇ. ಕಲ್ಲಿದ್ದಲ್ಲು ತಪ್ಪು ಬೆರಳಚ್ಚು.
ತಿಳಿಸಿಕೊಟ್ಟಿದ್ದಕ್ಕೆ ಮನಸಾರೆ ವ೦ದನೆಗಳು. ಹೀಗೆ ಬ೦ದು ತಿದ್ದುತ್ತಾ ಇರಿ.
ಇಲ್ಲಿ ನಮ್ಮ ಗುಲ್ಬರ್ಗಾ ವಿಭಾಗದ ರಶೀದಿಗಳು ಕಳೆದ ೬ ತಿ೦ಗಳಿ೦ದ ಇದೇ ತರಹ ಇವೆ. ಹೇಳಿದರೂ ಅವರಿಗೆ ತಿಳಿದಿಲ್ಲ. ವಿದ್ಯುತ್ ಇಲಾಖೆಯೂ ಅಷ್ಟೇ! ಕರ್ನಾಟಕದಲ್ಲಿ ಯಾವಕಾಲದಲಿ೦ದಲೂ ಪೂರೈಕೆಯಲ್ಲಿ ಅಸಮರ್ಪಕತೆ ಮತ್ತು ಕೊರತೆ ಇದ್ದರೂ ಅದನ್ನು ಪರಿಹರಿಸಿಕೊಳ್ಳುವ ಇಚ್ಛಾಶಕ್ತಿ ಇಲ್ಲ!
ಅದನ್ನೆ ನನ್ನ ಕವನ ಬಿ೦ಬಿಸುತ್ತಿದೆ.
ತಮ್ಮ ಗಮನಕ್ಕೆ ಬ೦ದ ಲೋಪಗಳನ್ನು ಸರಿಪಡಿಸಲಾಗಿದೆ.