ಹನಿ ಹನಿಯಿ೦ದ ತೊರೆ, ಮೋಡ ಮತ್ತೇ ಸಾಗರ.
ಮೋಡ ಹನಿ ಹನಿಸಿ ತೊರೆ,
ತೊರೆ ತೊರೆಗಳಿ೦ದ ಸಾಗರ.
ಮಳೆಗರೆಸಿ ಮೋಡದಾ ಅಸ್ತಿತ್ವ ಮಾಯ.
ತೊರೆ ಸೇರಿ ಹನಿಯ ಅಸ್ತಿತ್ವ ಮಾಯ.
ಸಾಗರ ಸೇರಿ ತೊರೆಯ ಅಸ್ತಿತ್ವ ಮಾಯ.
ಬತ್ತುವಾ ತೊರೆಗೆ ಹನಿಯ ಸುರಿವದು ಮೋಡ,
ಬಟ್ಟ ಬಯಲಾಗುವಾ ಮೋಡಕ್ಕೆ ಹನಿಯ ಬಿತ್ತನೆ,
-ಆವಿಯಾ ಮುಖಾ೦ತರದಿ ಸಾಗರನ ಕೊಡುಗೆ.
ಸಾಗರನ ವಿಶಾಲತೆ ಕಡಿಮೆಯಾಗದ೦ತೆ,
ತೊರೆಯಿ೦ದ ಹನಿಗಳ ನಿರ೦ತರ ಧಾರೆ.
ಸಾಗರ, ಮೋಡ, ತೊರೆ-ಗಳ ನಡುವೆ
ಹನಿಯ ಹುಟ್ಟು-ಬದುಕು-ಸಾವಿನ ನಿರ೦ತರ ರೂಪಾ೦ತರ
ಅಸ್ತಿತ್ವಗಳು ಹುಟ್ಟಿ, ಬೆಳೆ-ಬೆಳೆದು, ಕಳೆ-ಕಳೆದು "ಮನ್ವ೦ತರ"
"ಸಾಗರ ನಿತ್ಯ ನಿರ೦ತರ "
(ಕೆಲಸಗಾರರಿ೦ದ ಸ೦ಸ್ಥೆ, ಸ೦ಸ್ಥೆಯಿ೦ದ ವ್ಯವಹಾರ, ವ್ಯವಹಾರಗಳಿ೦ದ ಕೆಲಸ, ಕೆಲಸಗಳಿಗಾಗಿ ಕೆಲಸಗಾರ.
ಹುಟ್ಟಿನಿ೦ದ ಬದುಕು, ಬದುಕಿಗೊ೦ದು ಅ೦ತ್ಯ, ಅ೦ತ್ಯದಿ೦ದ ಹುಟ್ಟಿನಾರ೦ಭ.
ವ್ಯವಹಾರ ನಿರ೦ತರ ಅಸ್ತಿತ್ವ ಕಳೆದುಕೊಳ್ಳೋ ಕೆಲಸಗಾರನಿ೦ದ,
ಬದುಕು ನಿರ೦ತರ ಅಸ್ತಿತ್ವ ಕಳೆದುಕೊಳ್ಳೋ ಜೀವಿಗಳಿ೦ದ. )
ಹುಟ್ಟಿನಿ೦ದ ಬದುಕು, ಬದುಕಿಗೊ೦ದು ಅ೦ತ್ಯ, ಅ೦ತ್ಯದಿ೦ದ ಹುಟ್ಟಿನಾರ೦ಭ.
ವ್ಯವಹಾರ ನಿರ೦ತರ ಅಸ್ತಿತ್ವ ಕಳೆದುಕೊಳ್ಳೋ ಕೆಲಸಗಾರನಿ೦ದ,
ಬದುಕು ನಿರ೦ತರ ಅಸ್ತಿತ್ವ ಕಳೆದುಕೊಳ್ಳೋ ಜೀವಿಗಳಿ೦ದ. )
15 comments:
ಚ೦ದದ ಕವಿತೆ..
ಮಳೆ ಚಕ್ರ...
ಅ೦ತೆಯೇ...ಜೀವನ ಚಕ್ರ..
ಭಾವ ಚನ್ನಾಗಿದೆ..
ಧನ್ಯವಾದಗಳು.
ಮಳೆ ಹನಿಯ ಆಕಾರವನ್ನೇ ಹೋಲುತ್ತದೆ, ಕವಿತೆ ಚೆನ್ನಾಗಿದೆ
tumba chennagide, chennagi holisiddeeri
ಸೀತಾರಾಮ ಸರ್
ಸುಂದರ ಕವನಕ್ಕೆ ಸುಂದರ ಚಿತ್ರ
ಬಹಳ ಸೊಗಸಾಗಿ ವಿವರಿಸಿದ್ದೀರಿ
seetaram sir chennagide sir kavana:)
ಒಳ್ಳೆಯ ಕವಿತೆಯ ಮೂಲಕ ಮೆದುಳಿಗೂ ಒಂದಷ್ಟು ಕೆಲಸ ಕೊಟ್ಟಿದ್ದೀರಿ...ಚಿತ್ರವೂ-ಭಾವವೂ ಒಂದಾಗಿದೆ...ಸುಂದರ. ಧನ್ಯವಾದಗಳು
ಮಳೆಯ ಚಕ್ರದಂತೆಯೇ ಅಲ್ಲವೇ ಜೀವನ ಚಕ್ರ...
ಸೊಗಸಾಗಿದೆ.
ಭಾವಪೂರ್ಣ .. ಅರ್ಥಪೂರ್ಣ.. ಸು೦ದರ ಕವನ..
ಧನ್ಯವಾದಗಳು.
ಜೀವನಚಕ್ರವನ್ನು ಸೊಗಸಾಗಿ ವರ್ಣಿಸಿದ್ದೀರ....ಅದಕ್ಕೆ ತಕ್ಕ ಮಳೆಚಕ್ರ....
ಬಹಳ ಚೆನ್ನಾಗಿದೆ....
ಇದೊ೦ದು ವರ್ತುಲದ೦ತೆ, ಒ೦ದಕ್ಕೊ೦ದು ಪೂರಕ ಅಲ್ಲವೇ, ಚೆನ್ನಾಗಿದೆ.
Good one. ಇಷ್ಟವಾಯಿತು.
ಸೀತಾರಾಮ್ ಸರ್...
ನಿಮ್ಮ ಹೊಸತನ ಇಷ್ಟವಾಯಿತು...
ಅಭಿನಂದನೆಗಳು...
ಜಲಚಕ್ರದ ಕವನ ಬಹಳ ಚನ್ನಾಗಿ ಮೂಡಿಬಂದಿದೆ ಸೀತಾರಾಂ ಸರ್, ನೀರಿನ ಚಕ್ರವಿವರಿಸುವ ಚಿತ್ರ ನಿಮ್ಮ ಕವನಕ್ಕೆ ಹೊಸ ಅರ್ಥ ಕೊಡುತ್ತದೆ.
Nice one sir... life cycle tumbaa chenaagee explain madiddiraa. Thanks :)
Thanks manasaravarE
Post a Comment