ಸಕ್ಕರೆ ಎ೦ದರೇನು ಮಾವಾ,
ಎ೦ದು ಅಕ್ಕರೆಯಲಿ ಕೇಳಿದಳು,
ಅಕ್ಕನ ಚಿಕ್ಕ ಮಗಳು.
ಹೇಳಿದೆ ಪುಟ್ಟಿ,
ಆ ವಸ್ತು ಬಲು ತುಟ್ಟಿ,
ಅಪರೂಪಕ್ಕೊಮ್ಮೆ
ನೀ ನಕ್ಕರೇ ನಿನ್ನ ಹಾಲುಗೆನ್ನೆಯಲಿ ಗುಳಿ,
ಅದನು ಕ೦ಡು ನನಗಾಗುವಾ-" ಸಿಹಿ",
ಉಳ್ಳವರೆಲ್ಲಾ ಕೊ೦ಡು -ಮಿಕ್ಕರೇ
ನನಗೂ ಒ೦ದು ತೊಲ ಸಿಕ್ಕರೆ!
ತ೦ದು ತೋರಿಸುತ್ತೆನೆ -ತಾಳೆ ತಾಯಿ,
ಎ೦ದು ಅಕ್ಕರೆಯಲಿ ಕೇಳಿದಳು,
ಅಕ್ಕನ ಚಿಕ್ಕ ಮಗಳು.
ಹೇಳಿದೆ ಪುಟ್ಟಿ,
ಆ ವಸ್ತು ಬಲು ತುಟ್ಟಿ,
ಅಪರೂಪಕ್ಕೊಮ್ಮೆ
ನೀ ನಕ್ಕರೇ ನಿನ್ನ ಹಾಲುಗೆನ್ನೆಯಲಿ ಗುಳಿ,
ಅದನು ಕ೦ಡು ನನಗಾಗುವಾ-" ಸಿಹಿ",
ಉಳ್ಳವರೆಲ್ಲಾ ಕೊ೦ಡು -ಮಿಕ್ಕರೇ
ನನಗೂ ಒ೦ದು ತೊಲ ಸಿಕ್ಕರೆ!
ತ೦ದು ತೋರಿಸುತ್ತೆನೆ -ತಾಳೆ ತಾಯಿ,
ಮಾಡಿ ತಿನ್ನೋಣ ಕೊಬ್ಬರಿ ಮಿಠಾಯಿ!
{ಚಿಕ್ಕವನಿದ್ದಾಗ, ಸುಮಾರು ೧೯೭೭-೭೮ ರ ಸುತ್ತ ಮುತ್ತ, ಒಮ್ಮೇಲೆ ಸಕ್ಕರೆ ಬೆಲೆ ಗಗನಕ್ಕೆ ಹೋದಾಗ, ದೀಪಾವಳಿ ವಿಶೇಷಾ೦ಕವೊ೦ದರಲ್ಲಿ (ಬಹುಶಃ ಸುಧಾ ಇರಬಹುದು), ದಿನಕರ ದೇಸಾಯಿಯವರು (?) ಬರೆದ ಹನಿಗವನವೊ೦ದು, ಈಗ ಮತ್ತೆ ಸಕ್ಕರೆ ಬೆಲೆ ಗಗನಕ್ಕೆ ಹೋಗಿರುವ ಪ್ರಸ್ತುತ ಸ೦ಧರ್ಭದಲ್ಲಿ ನೆನಪಾಯಿತು.
ಸಕ್ಕರೆ ಸಿಹಿಯಾಗಿರುತ್ತದೆ ಎ೦ದು ಹೇಳಲು ಬಳಸಿದ ವಿಧ, ದುಡ್ಡಿದ್ದವರಿಗೆ ಸಿಕ್ಕು ಉಳಿದರೇ ದುಡ್ಡಿಲ್ಲದವರಿ ಸಿಗುತ್ತೆ ಎ೦ಬ ವಿಡ೦ಬಣೆ ತು೦ಬಾ ಅರ್ಥಪೂರ್ಣ.
ನನ್ನ ಸ್ಮೃತಿಪಟಲದಲ್ಲಿ ಉಳಿದ ಈ ಓದಿದ ಚುಟುಕು- ಮೂಲ ಬರಹದಿ೦ದ ವಿರೂಪವಾಗಿದ್ದರೇ ದಯವಿಟ್ಟು ಗಮನಕ್ಕೆ ತನ್ನಿ. ಹಾಗೂ ತಮಗೆ ಪತ್ರಿಕೆ ಮತ್ತು ಲೇಖಕರ ಬಗ್ಗೆ ಖಚಿತ ಮಾಹಿತಿ ಇದ್ದರೆ ನೀಡಿ. }
15 comments:
ಸುಂದರವಾದ ಚುಟುಕು. ಬಹುಶಃ ಈಗ ಇದೇ ತರಹ ಅಕ್ಕಿ , ಬೇಳೆ , ತರಕಾರಿ , ಹಣ್ಣು ಎಲ್ಲದರ ಬಗ್ಗೆಯೂ ಬರೆಯಬಹುದೇನೊ!
ಒಂದು ತೊಲ ಸಕ್ಕರೆ! ಅಬ್ಬಾ :)
ಪರಿಸ್ಥಿತಿ ಹೀಗೇ ಮುಂದುವರೆದರೆ ನಿಜವಾಗಬಹುದೇನೋ..
ಗುರುಗಳೇ...
ನಿಜ..ಸಕ್ಕರೆ -ಮಿಕ್ಕರಷ್ಟೇ ಅಕ್ಕರೆ... ತಿನ್ನೋದು ಬಿಟ್ಟರೆ ಬೆಲೆ ಕಮ್ಮಿಯಾಗಬಹುದೇನೋ...ಚೆನ್ನಾಗಿದೆ ಚುಟುಕು.
ಸಕ್ಕರೆ ಕೊಳ್ಳಬಹುದು ಸಿಕ್ಕರೆ...
ಚೆನ್ನಾಗಿದೆ ಚುಟುಕು..
Nice one sir
ಸೀತಾರಾಂ ಸರ್ ,
ಚೆನ್ನಾಗಿದೆ..... ಈಗೀಗ ಇದು ಎಲ್ಲ ದಿನಬಳಕೆ ವಸ್ತುಗಳಿಗೂ ಅನ್ವಯಿಸುತ್ತದೆ ಸರ್.....
samayakke takkanaada chutuku, chennagide sir
chennagidhe chutuku...
ಚುಟುಕಗಳ ಜನಕ ಎನ್ನಬಹುದಾದ ದಿದೇರ ಚುಟುಕ ಪೋಸ್ಟ್ ಮಾಡಿ ಹೇಗೆ ಬೆಲೆ ಏರಿಕೆ ಅಂದು, ಇಂದು ಮುಂದೂ ಪ್ರಸ್ತುತವಾಗುತ್ತೆ..ಎನ್ನುವುದನ್ನ ಸೂಚ್ಯವಾಗಿ ತಿಳಿಸಿದ್ದೀರಿ....ಸೀತಾರಾಂ ಸರ್
'ಸೀತಾರಾಮ.ಕೆ' ಅವರೇ..,
ಸಕ್ಕರೆಯಂತೆಯೇ ಇದೆ..
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/
ಸರಳ ಸುಂದರ ಚುಟುಕು. ಆಗಿನ ಕಾಲದಲ್ಲೂ ಸಕ್ಕರೆಯೆನ್ನುವುದು ಬಡವರಿಗೆ ತುಟ್ಟಿ ಎನ್ನುವುದನ್ನು ಚೆನ್ನಾಗಿ ವಿವರಿಸಿದ್ದಾರೆ..
ಸುಂದರ ಚುಟುಕ. ಅಕ್ಕಿ, ಬೇಳೆ, ಸಕ್ಕರೆಯನ್ನು ಇನ್ನು ಮುಂದೆ ತೊಲ, ಗ್ರ್ಯಾಮ್ ಗಳಲ್ಲಿ ಕೊಳ್ಳಬೇಕೇನೋ
ಚುಟುಕ ಓದಿದ ಮನಕ್ಕೆ ಸಕ್ಕರೆ ತಿ೦ದಷ್ಟೆ ಸಿಹಿಯೆನಿಸಿತು.
ಓದಿದ ಚುಟುಕ ನೆನಪಿಟ್ಟು ನಮಗೂ ಓದುವ೦ತೆ ಮಾಡಿದ್ದಕ್ಕೆ
ಧನ್ಯವಾದಗಳು.
ಸಕ್ಕರೆಯಷ್ಟೇ ಸಿಹಿಯಾದ ಕವನ... ಇನ್ನೇನು ಹೇಳಲೀ?
ಮನಸ್ವಿರವರಿಗೆ ಹಾಗು ವಿ.ಆರ್.ಭಟ್ಟರಿಗೆ ನನ್ನ ಬ್ಲೊಗ್-ಗೆ ಸುಸ್ವಾಗತ. ಹೀಗೆ ಬರುತ್ತಾ ಇರಿ.
ಓದಿ ಪ್ರತಿಕ್ರಿಯಿಸಿದ ಎಲ್ಲ ಬ್ಲೊಗ್-ಮಿತ್ರರಿಗೂ ಹ್ರೂದಯಪೂರ್ವಕ ವ೦ದನೆಗಳು. ಈ ಅಭಿಮಾನ ಸದಾ ಇರಲಿ.
Post a Comment