Thursday, January 21, 2010

ನನ್ನ ಆಶಯಗಳು





-೧-

ಗಾಳಿಗ೦ಧದ ತರದಿ ನೀ ಎನ್ನನಪ್ಪು ಗೆಳತಿ,
ಆ ಬಿಸಿಗೆ ಮರೆತೆಲ್ಲಾ ಎನ್ನೆದೆಯಾ ನೋವು ನೀರಾಗಿ-
ಕರಗಿ ಪ್ರೇಮಾಮೃತವಾಗಲಿ- ಜೀವಕ್ಕೆ ತ೦ಪಾಗಿ,
ಬದುಕಿನಾ ಅಶೆಯಾಗಿ, ಬುತ್ತಿಯಾಗಿ.

-೨-

ಒ೦ದು ಹಿಡಿ ಪ್ರೇಮವು ಈ ಜಗದ ಹಸಿವು
ದೊರೆತವರಿಗೆ ಹಸಿವು ಹೆಚ್ಚಾಗಲಿ.
ನೀಡುವವರ ಕೈ ಅಕ್ಷಯವಾಗಲಿ.
ಇದು ನನ್ನ ಬಯಕೆ.

-೩-
ನಿನ್ನ ಚೆಹರೆಯಾ ನೆನಪು-ಮೆಲುಕು,
ಮರೆಯಿಸಿ ಇಹ, ಮೆರೆಯಿಸಿ ಸಗ್ಗ,
ನನ್ನೆಲ್ಲಾ ಕನಸುಗಳಿಗೆ ರ೦ಗಿನಾ ಹಬ್ಬ.

ಮೇಘ ಸ೦ದೇಶ

ವಿರಹದುರಿಯಲ್ಲಿ ಬೆ೦ದು ಆವಿಯಾಗಿಹ ನನ್ನೆದೆಯಾ
ಭಾವಗಳು ದಟ್ಟೈಸಿ, ಮೋಡವಾಗಿ ನಿನ್ನೆದೆಯೆಡೆಗೆ
ಧಾವಿಸುತಿವೆ -ಅಲ್ಲಿರುವ ತ೦ಪನಡರಿಸಿಕೊ೦ಡು,
ಪುನರ್ಜನ್ಮ ಹೊ೦ದಿ ಮಳೆಯಾಗಿ ಹನಿಸಲು.
ಹಿಡಿದುಕೋ ಗೆಳತಿ... ಮಳೆಗರೆಯಿಸಿಕೋ......

20 comments:

ಸೀತಾರಾಮ. ಕೆ. / SITARAM.K said...

Blogger ಎಚ್.ಎನ್. ಈಶಕುಮಾರ್ said...

nimma bharahagala male gareyuttirinamagaagi...sir danyavaadagalu...

shivu.k said...

ಸೀತಾರಾಂ ಸರ್,

ನಿಮ್ಮ ಕವನಗಳು ಚೆನ್ನಾಗಿರುತ್ತವೆ. ಪದಪ್ರಯೋಗವನ್ನು ಚೆನ್ನಾಗಿ ಮಾಡುತ್ತೀರಿ...ಮುಂದುವರಿಸಿ ಸರ್.

PARAANJAPE K.N. said...

ಚಿತ್ರ-ಕವನ ಎರಡೂ ಸೂಪರ್, ಮು೦ದುವರಿಸಿ

Subrahmanya said...

ಚೆನ್ನಾಗಿದೆ ಗುರುಗಳೆ...ಕಡಿಮೆ ಸಾಲುಗಳಲ್ಲಿ ಭಾವ ತುಂಬಿದ್ದೀರಿ...ಇನ್ನಷ್ಟು ಬರೆಯಿರಿ.

ಮನಸು said...

wow tumba chenndada saalugalu... ellavu istavaadavu

Ittigecement said...

ಸೀತಾರಾಮ್ ಸರ್...

ನಿಮಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯ ಕೋರುತ್ತೇನೆ...

ನಿಮ್ಮ ಆಶಯವನ್ನು ಸುಂದರವಾಗಿ ಬಿಡಿಸಿಟ್ಟಿದ್ದೀರಿ...
ಶಬ್ದಹಗಳು..
ಅವುಗಳ ಭಾವಗಳು ತುಂಬಾ ಚೆನ್ನಾಗಿವೆ...

ಅಭಿನಂದನೆಗಳು...

ಚುಕ್ಕಿಚಿತ್ತಾರ said...

ಉತ್ತಮ ಆಶಯಗಳನ್ನು ಹೊ೦ದಿದ೦ತಹಾ..

ಚ೦ದದ ಕವಿತೆ..

ಆನಂದ said...

ಸರ್, ಸೂಪರ್ರಾಗಿದೆ! :)

ಶಿವಪ್ರಕಾಶ್ said...

Nimma aashayagalu channagive sir.
kavana channagi moodi banidde.

ಹರೀಶ ಮಾಂಬಾಡಿ said...

ಸಖತ್ತಾಗಿದೆ

ಸವಿಗನಸು said...

ಎಲ್ಲ ಸಾಲುಗಳು ಚೆನ್ನಾಗಿವೆ.... ಪದಪ್ರಯೋಗ ಚೆನ್ನಾಗಿದೆ....
ಮುಂದುವರಿಸಿ ....

Anonymous said...

ಚೆನ್ನಾಗಿದೆ ಕವನ ಸರ್, ಅದರಲ್ಲೂ ನಿಮ್ಮ ಮೇಘಸಂದೇಶ ಸಖತ್ತಾಗಿದೆ!!

ತೇಜಸ್ವಿನಿ ಹೆಗಡೆ said...

ಮೇಘ ಸಂದೇಶ ತುಂಬಾ ಇಷ್ಟವಾಯಿತು. ಉಳಿದ ಕವನಗಳೂ ಬಹು ಚೆನ್ನಾಗಿ ಮೂಡಿವೆ. ಚಿತ್ರವಂತೂ ಅದ್ಭುತ!

ಸಾಗರದಾಚೆಯ ಇಂಚರ said...

ಸರ್

ತುಂಬಾ ಚೆನ್ನಾಗಿದೆ ಕವನಗಳು
ಸಾಲುಗಳ ಮೇಲೆ ನಿಮ್ಮ ಹಿಡಿತ ಅಧ್ಭುತ

ಗೌತಮ್ ಹೆಗಡೆ said...

sir nice:) kalpane chennagide..

Nisha said...

ಪ್ರೇಮ ನೀಡುವವರ ಕೈ ಅಕ್ಷಯವಾಗಲಿ. Ee bayake chennagide. Chendada kavana.

ಜಲನಯನ said...

ಸೀತಾರಾಂ ಸರ್, ಭೂಗರ್ಭದ ಸಾರ ಅರಿವುದು ನಿಮ್ಮ ವೃತ್ತಿಯಾದರೆ..ಪದಗಳ ಆಳದಿಂದ ಹೊಸ ಅರ್ಥಕ್ಕೆ ಕವನರೂಪ ಕೊಡುವುದು ಪ್ರವೃತ್ತಿ ಎನ್ನಿಸುತ್ತಿದೆ...ತುಂಬಾ ಚನ್ನಾಗಿ ಬರೀತೀರ ...ಹೆಚ್ಚು ಹೆಚ್ಚು ಬರೆಯಿರಿ ಇನ್ನೂ....ಈ ನಿಮ್ಮ ಕೆಳಗಿನ ಸಾಲುಗಳು....ಸೂಪರ್...
ಒ೦ದು ಹಿಡಿ ಪ್ರೇಮವು ಈ ಜಗದ ಹಸಿವು
ದೊರೆತವರಿಗೆ ಹಸಿವು ಹೆಚ್ಚಾಗಲಿ.
ನೀಡುವವರ ಕೈ ಅಕ್ಷಯವಾಗಲಿ.
ಇದು ನನ್ನ ಬಯಕೆ.

ಮನಸಿನಮನೆಯವನು said...

ನಮಸ್ತೆ,

ಪ್ರೇಮೋತ್ಸವದ ದನಿಬರಹಗಳಂತೆ ನಿಮ್ಮ ಸಾಲುಗಳು....

ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/

V.R.BHAT said...

ಚೆನ್ನಾಗಿದೆ,keep writing

RAGHAVENDRA R said...

'ಪ್ರೀತಿ'ಯ ಮಾತು...
'ಪ್ರೀತಿಸುವವರ' ಮಾತು...
'ಪ್ರೀತಿ'ಯ .. ಸುಖವ ಕೊಡಬಲ್ಲವೆಂದು..
ಸೂಕ್ಷ್ಮತೆಯಿಂದ ತಿಳಿಸಿದ್ದೀರಿ.. ಸಾರ್.
http://nannedepreethi.blogspot.com