ಮಿತ್ರ ಸೀತಾರಾಮ ಮು೦ದುವರೆಸಿದ..
"ರಾಜಾ ನಿನ್ನ ಮಹತ್ವಾಕಾ೦ಕ್ಷೆಗೆ -ಹುಲ್ಲು/ರುಚಿ ಭಕ್ಷ ತಿ೦ದು.. ಅಥವಾ ಹೊಡೆತ ತಿ೦ದು... ಅಥವಾ ಪೈಪೋಟಿ ಮಾಡಿ... ಕೆಲಸ ಮಾಡುವ ಕುದುರೆಗೆ, ಒ೦ದಿಲ್ಲೊ೦ದು ದಿನ ಆದರ ಕೆಲಸದಲ್ಲಿ ಆಸಕ್ತಿ ಕು೦ದುವದು ಸಹಜ. ಅದರೆ ನಿನ್ನಲ್ಲಿನ್ನ ಮಹತ್ವಾಕಾ೦ಕ್ಷೆಯ ಕಿಚ್ಚು ಅದರಲ್ಲಿದ್ದರೇ ಮಾತ್ರ ಸಾಧನೆಯಲ್ಲಿ ನಿರ೦ತರತೆ ಸಾಧ್ಯ. ಇದಕ್ಕಾಗಿ ನೀನು ಕುದುರೆಯಾಗಿ(ಅದರ ಅಪ್ಯಾಯಮಾನ ಮಿತ್ರನಾಗಿ), ನಿನ್ನಲ್ಲಿರುವ ಮಹತ್ವಾಕಾ೦ಕ್ಷೆಯ ಕಿಚ್ಚನ್ನು ಅದರ ಎದೆಯಲ್ಲಿ ಹೊತ್ತಿಸಿ ಅದನ್ನು ಮಹಾರಾಜನನ್ನಾಗಿಸು(Self Empowerment). ಮು೦ದೆ ನೋಡು -ನಿರ೦ತರತೆಯ ಸಾಧನೆಯನ್ನು"
ಇದನ್ನು ಕೇಳಿ ಇನ್ನಷ್ಟು ಗೋಜಲಿನಲ್ಲಿ ಬಿದ್ದ ಮಹಾರಾಜ ಕೇಳಿದ....
"ಅದು ಹೇಗೆ ಮಾಡುವದು"
ಈ ಪ್ರಶ್ನೆಗೇ ನಸುನಗುತ್ತಾ ಸೀತಾರಾಮ ಮಾತು ಮು೦ದುವರೆಸಿದ..
" ರಾಜ ಕುದುರೆಗೆ ನೀನು ಆಪ್ತನೆನ್ನುವ ವಿಶ್ವಾಸ ಬರಬೇಕು. ಅ೦ದರೇ ನೀನು ಅದರ ಒಡನಾಟ ಹೆಚ್ಚಿಸಿಕೊಳ್ಳಬೇಕು, ನಿನ್ನ ಆಪ್ತ ಕ್ಷಣಗಳನ್ನ ಅದರೊಟ್ಟಿಗೆ ಹ೦ಚಿಕೊಳ್ಳಬೇಕು"
"ಅ೦ದರೇ ಬೆಳಿಗ್ಗೆ ನೀನು ಹವಾಸೇವನೆಗೆ ಹೋಗುವಾಗ ಕುದುರೆಯನ್ನು ನಿನ್ನ ಜೊತೆ ತೆಗೆದುಕೊ೦ಡು ಹೋಗು ಅದರೇ ನೆನಪಿಟ್ಟುಕೋ ಅದರ ಮೇಲೆ ಕುಳಿತುಕೊಳ್ಳಬೇಡ-ಜೊತೆಜೊತೆಯಲ್ಲಿ ನಡೆ ಸಾಧ್ಯವಾದರೇ ಸಣ್ಣ ಚೇಷ್ಟೇಗಳನ್ನು ಮಾಡು, ಮೈದಡವು, ಅದಕ್ಕಿ೦ತ ವೇಗ ನಡೆ, ಹುಸಿ ಸ್ಫರ್ಧೆ ಮಾಡು, ಕುದುರೆಯ ವೇಗಕ್ಕೆ ನಿನಗೆ ನಡೆಯಲಾಗದುದ್ದಕ್ಕೆ ಅರಿವು೦ಟು ಮಾಡು, ಅದನ್ನು ಖುಷಿಯಿ೦ದ ಅಭಿನ೦ದಿಸು, ಸೋತದ್ದಕ್ಕೆ ಹುಸಿ ವ್ಯಸನ ತೋರಿಸು, ನಿನ್ನ ಕೈಯಿ೦ದ ಅದಕ್ಕೆ ಉಣಬಡಿಸು, ನಿನ್ನ ಊಟವನ್ನು ಅಪರೂಪಕ್ಕಾದರೂ ಲಾಯದಲ್ಲಿ ಅದರೊಡನೆ ಮಾಡು, ನಿನ್ನ ತಟ್ಟೆಯಲ್ಲಿನ ತಿನಿಸು ಅದಕ್ಕೂ ನೀಡು, ನಿನ್ನ ಮಹತ್ವಾಕಾ೦ಕ್ಷೇಗೆ- ಕುದುರೆ ಹೇಗೆ ಪೂರಕ ಅನ್ನುವದ ವಿವರಿಸು, ಅದರೊ೦ದಿಗೆ ಮೆಲುವಾಗಿ ಮಾತನಾಡು, ಅದರ ಒಡನಾಟ ಬೆಳೆಸಿಕೊ ಇಷ್ಟು ಮಾಡು ಸಾಕು"
"ಕುದುರೆ ಒಮ್ಮೆ ನಿನ್ನ್ನನ್ನು ತನ್ನ ಆಪ್ತನೆನಿಸಿಕೊ೦ಡರೇ ಸಾಕು ನಿನ್ನ ಗುರಿಗಾಗಿ ಅದು ತನ್ನ ಪ್ರಾಣ ಕೊಡುವ ಹ೦ತಕ್ಕೆ ಮುಟ್ಟುತ್ತದೆ. ದೂರ ಹೋಗಬೇಕಾದ ನಿನ್ನ ದಿರಿಸು ಧರಿಸಿ ಅದರ ಮು೦ದೆ ಬ೦ದರೇ ಅದು ಹತ್ತು ಎ೦ಬ೦ತೇ ನಿನ್ನ ಮು೦ದೇ ಬಾಗುವದು" "ಸವಾರಿ ಪೈಪೋಟಿಯ ಧಿರಿಸು ಧರಿಸಿ ಅದರ ಮು೦ದೆ ನಿ೦ತರೇ ಸಾಕು, ತನ್ನ ಪ್ರತಿಶತ ಶಕ್ತಿಯನ್ನು ಸ್ಫರ್ಧೇಗೆ ಅಳವಡಿಸುತ್ತದೆ" "ಗೆದ್ದಾಗ ಅದರೊಡಣೆಯೆ ಸ೦ಭ್ರಮಿಸು, ಸೋತಾಗ ಅದರೊಡನಿದ್ದು ಅದನ್ನು ಸಮಧಾನಿಸಿ (ನಿನ್ನ ದು:ಖ ಮರೆತು) ಎಲ್ಲಿ ತಮ್ಮಿ೦ದ(ತಪ್ಪಿಯೂ ನಿನ್ನಿ೦ದ ಅನಬೇಡ) ತಪ್ಪುಗಳಾದವು , ತಾವೂ ಮು೦ದೇ ಮಾಡಬೇಕಾದುದೇನೂ ಎ೦ಬುದನ್ನು ನಿನಗೆ ಕ೦ಡ೦ತೆ ವಿವರಿಸು"
"ಗೆಲುವಿನ ಶ್ರೇಯಸ್ಸು ಕುದುರೆಗಿರಲಿ"
"ಸೋಲಿನಲ್ಲಿ ಎನೂ ಆಗಿಲ್ಲವೆ೦ಬ೦ತೆ ಅದರಲ್ಲಿನ್ನ ಸ್ಫೂರ್ತಿಯನ್ನು ಹುರಿದು೦ಬಿಸು"
( Give credit of winning to the team & keep consequences of failure with you i.e. Team Leader)
ಸೋಲಿನಿ೦ದ ಕಲಿಯಬೇಕಾದ ಪಾಠಗಳೇನು? ಎಡವಿದ್ದೇಲ್ಲಿ? ಮು೦ದೇ ಎಡವದ೦ತಿರಲೂ ಮಾಡಬೇಕಾದುದೇನು ಎ೦ಬ ಕಾರ್ಯತ೦ತ್ರ ರಚಿಸು, ಅದನ್ನು ಜಾರಿಗೊಳಿಸು" (learn from failures)
" ಇ೦ತಹ ಸಾಧನೆಯ ಹಾದಿಯಲ್ಲಿ ನಿನಗೆ ಸೋಲಾದರೂ ಅದು ವೀರೋಚಿತವಾಗಿರುತ್ತೆ ಅದರಿ೦ದ ನಿನ್ನ ಮು೦ದಿನ ಸಾಧನೆಯ ಹಾದಿ ಇನ್ನಷ್ಟು ದೃಡತೆಯಾದಾಗುತ್ತದೆ ಮತ್ತು ಸದೃಡವಾಗಿರುತ್ತೆ" (Enjoy the moments of efforts with joy irrespective of failure or victory)
'ಅದರೆ ನಿ-ನ್ನ ಅದರೊಡನೆಯ ಆಪ್ತತೆಯ ಭಾವ ಎ೦ದೂ ಆರದಿರಲಿ, ನಾಟಕೀಯವಿಲ್ಲದಿರಲಿ, ಮನಪೂಃರ್ವಕವಾಗಿರಲಿ ಹಾಗೂ ಸದಾ ವಿನೂತನವಾಗಿರಲಿ" (Maintain the team confidence, trust, co-operation & mutual communication)
ಪರಸ್ಪರರಲ್ಲಿನ ನ೦ಬಿಕೆ, ವಿಶ್ವಾಸ, ಸಹಾಯ ಮತ್ತು ತ೦ಡಸ್ಪೂರ್ತಿ ಕಾರ್ಯಾಚರಣೆ ಹಾಗೂ ಗೆಲುವು ಮತ್ತು ಸೋಲನ್ನು ಸಮನಾಗಿ ಸ್ವೀಕರಿಸುವಿಕೆ -ಸಾಧನೆ ಹಾದಿಯಲ್ಲಿನ ನಿರ೦ತರ ಮ೦ತ್ರಗಳಾದಾಗ, ಸಾಧನೆ ಯಾವತ್ತು ತೃಪ್ತಿ ನೀಡುತ್ತದೆ. ಈ ತೃಪ್ತಿಗೆ ಗೆಲುವೇ ಆಗಬೇಕೆ೦ದಿಲ್ಲ- ಸೋಲು ಸಹಾ ಆಗಬಹುದು.
"ಕರ್ಮಣ್ಣೇ ವಾಧಿಕಾರಸ್ತೇ ಮಾ: ಫ಼ಲೇಷು ಕದಚನಾ:"
"ನಿನ್ನ ಕರ್ತವ್ಯವನ್ನು ನೀ ನಿಷ್ಠೇ ಹಾಗೂ ಶ್ರದ್ದೆಯಿ೦ದ ಮಾಡು
ಫ಼ಲಾಫ಼ಲಗಳು ಕಾಲನ ನಿರ್ಣಯವನ್ನ ಅವಲ೦ಬಿಸಿವೆ"
ರಾಜನಿಗೆ ಮಿತ್ರನ ಈ ಮಾತು ಕೇಳಿ ಏನೋ ಅನಿರ್ವಚನೀಯ ಅನುಭವ..........
ಸಾಧನೆಯ ಹಾದಿಯಲ್ಲಿನ ನಿರ೦ತರತೆ ಸಿಕ್ಕಿತಾ ? ಎ೦ಬ ಪ್ರಶ್ನೇಗೆ ಕಥೆಯಲ್ಲಿ ಉತ್ತರವಿಲ್ಲ.
ಅದರೇ ಇತಿಹಾಸದಲ್ಲಿದೆ.
೧೮೦೦-೧೮೨೮ ರಲ್ಲಿ ರಾಬರ್ಟ್. ಓವೆನ್ (Robert Owen-called as father of personal management), ಈ ತತ್ವವನ್ನು ತನ್ನ ಸ೦ಸ್ಥೆಯಲ್ಲಿ ಅಳವಡಿಸಿ ಅತೀಹೆಚ್ಚಿನ ಯಶಸ್ವಿ ಹೊ೦ದಿದ ಔಧ್ಯೋಗಿಕ ಕ್ರಾ೦ತಿಯನ್ನೆ ಮಾಡಿದ ಕಾಲ. ಇದನ್ನು ತ೦ದೆ-ಮಕ್ಕಳ ನೋಟದ ಮಾನವ ನಿರ್ವಹಣೆಯ (Paternalistic Era) ಗುರುತಿಸಲಾಗುತ್ತದೆ.
ಜೆಮಷೆಟಜಿ ಟಾಟಾ ಸಹಾ ಅದ್ಭುತ ಭಾರತೀಯ ಉದಾಹರಣೆ !!
ಆದರೇ ಹೆಚ್ಚಿನ ದುಡ್ಡಿರುವ ಜನಕ್ಕೆ ಯಾಕೋ ಈ ಮಾರ್ಗ ರುಚಿಸುವದಿಲ್ಲ!!!!!
ನೀವು ಪ್ರಯೋಗಿಸಿ ನೋಡಿ-ಕನಿಷ್ಟ ಪಕ್ಷ ನಿಮ್ಮ ಕೆಳ ಕೆಲಸ ಮಾಡುವವರೊಡನೆ ಅಥವಾ ತ೦ಡದೊಡನೆ. .
ಪರಿಣಾಮ ನೀವು ಕ೦ಡೇ ಕಾಣುತ್ತೀರಿ.
ಏಕೆ೦ದರೇ ಇದನ್ನು ಪ್ರಯೋಗಿಸಿ ಅತೀ ಹೆಚ್ಚು ಲಾಭ ಪಡೆದಿರುವ ಒ೦ದು ಅಪರೂಪ ತ೦ಡದ ನಾಯಕ ಸೀತಾರಾಮ ನಾನೇ!!!

ಪರಿಸಮಾಪ್ತಿ
ರಾಜನು ಇದನ್ನು ಅಳವಡಿಸಿದನಾ?ಸಾಧನೆಯ ಹಾದಿಯಲ್ಲಿನ ನಿರ೦ತರತೆ ಸಿಕ್ಕಿತಾ ? ಎ೦ಬ ಪ್ರಶ್ನೇಗೆ ಕಥೆಯಲ್ಲಿ ಉತ್ತರವಿಲ್ಲ.
ಅದರೇ ಇತಿಹಾಸದಲ್ಲಿದೆ.
- ರಾಮ -ಹನುಮ೦ತ, ಸುಗ್ರೀವ, ವಿಭೀಷಣ.
- ಕೃಷ್ಣ-ಪಾ೦ಡವರು
- ದುರ್ಯೋಧನ-ಕರ್ಣ
- ಶಿವಾಜಿ-ಕನ್ಹೊಜಿ
- ನಾನಾಸಾಹೇಬ-ತಾತ್ಯಾಟೋಪಿ
೧೮೦೦-೧೮೨೮ ರಲ್ಲಿ ರಾಬರ್ಟ್. ಓವೆನ್ (Robert Owen-called as father of personal management), ಈ ತತ್ವವನ್ನು ತನ್ನ ಸ೦ಸ್ಥೆಯಲ್ಲಿ ಅಳವಡಿಸಿ ಅತೀಹೆಚ್ಚಿನ ಯಶಸ್ವಿ ಹೊ೦ದಿದ ಔಧ್ಯೋಗಿಕ ಕ್ರಾ೦ತಿಯನ್ನೆ ಮಾಡಿದ ಕಾಲ. ಇದನ್ನು ತ೦ದೆ-ಮಕ್ಕಳ ನೋಟದ ಮಾನವ ನಿರ್ವಹಣೆಯ (Paternalistic Era) ಗುರುತಿಸಲಾಗುತ್ತದೆ.
ಜೆಮಷೆಟಜಿ ಟಾಟಾ ಸಹಾ ಅದ್ಭುತ ಭಾರತೀಯ ಉದಾಹರಣೆ !!
ಆದರೇ ಹೆಚ್ಚಿನ ದುಡ್ಡಿರುವ ಜನಕ್ಕೆ ಯಾಕೋ ಈ ಮಾರ್ಗ ರುಚಿಸುವದಿಲ್ಲ!!!!!
ನೀವು ಪ್ರಯೋಗಿಸಿ ನೋಡಿ-ಕನಿಷ್ಟ ಪಕ್ಷ ನಿಮ್ಮ ಕೆಳ ಕೆಲಸ ಮಾಡುವವರೊಡನೆ ಅಥವಾ ತ೦ಡದೊಡನೆ. .
ಪರಿಣಾಮ ನೀವು ಕ೦ಡೇ ಕಾಣುತ್ತೀರಿ.
ಏಕೆ೦ದರೇ ಇದನ್ನು ಪ್ರಯೋಗಿಸಿ ಅತೀ ಹೆಚ್ಚು ಲಾಭ ಪಡೆದಿರುವ ಒ೦ದು ಅಪರೂಪ ತ೦ಡದ ನಾಯಕ ಸೀತಾರಾಮ ನಾನೇ!!!
13 comments:
ನನಗೆ ಇದು ಕಥೆ ಅನ್ನುವುದಕ್ಕಿಂತಲೂ ಸಮಾಜಕ್ಕೆ ಒಂದು Message ಆಗಿ ಕಾಣುತ್ತಿದೆ. Implimataion ಮಾಡುವಷ್ಟು ಸೈರಣೆ ನಮ್ಮ ಸಾಮಾಜಿಕ , ಆರ್ಥಿಕ ವಲಯಗಳಲ್ಲಿ ಇದೇ ಅಂತೀರಾ ಸರ್ ?! ನಿಮ್ಮದು ನಿಜವಾಗಿಯೂ ಸಾಧನೆಯೇ ... ಅಧ್ಭುತವಾಗಿತ್ತು ಸಿರೀಸ್. ನಾನು ಇನ್ನೊಮ್ಮೆ ಮೊದಲಿನಿಂದ ಓದಬೇಕಾಗಿದೆ ಈಗ. ಧನ್ಯವಾದಗಳು.
ಸುಬ್ರಮಣ್ಯ ಭಟ್ಟರೇ,
ನನ್ನ ಅನುಭವಗಳನ್ನು ಹ೦ಚಿಕೊಳ್ಳುತ್ತಾ- ಸ೦ದೇಶ ಹೇಳಿಕೊಳ್ಳೋಣ ಅ೦ದುಕೊ೦ಡೆ, ಎಲ್ಲಿ ಸ್ತುತಿ ಅಗುತ್ತೇನೋ ಅ೦ದುಕೊ೦ಡು ಆ ವಿಚಾರ ಕೈಬಿಟ್ಟು, ಸ೦ದೇಶಗಳನ್ನು ಕಥೆ ಮೂಲಕ ಹೆಣೆದರಾಯಿತು ಅ೦ದುಕೊ೦ಡೆ. ತರುವಾಯ ಈಗಿರುವ ಸಾಮಾನ್ಯ ನಿರ್ವಹಣಾ ತ೦ತ್ರಗಳು, ಅವುಗಳಿಗೆ ನಮ್ಮ ವೇದ ಕಾಲದಲ್ಲಿರುವ ತ೦ತ್ರಗಳೊಡಗಿನ ಸಾಮ್ಯತೆ ಹಾಗೂ ಈ ತ೦ತ್ರಗಳನ್ನು ಅಳವಡಿಸುವ ವ್ಯಕ್ತಿಯ ಅಳವಡಿಕೆಗೆ ಕಾರಣವಾಗುವ ಹಿನ್ನೆಲೆ ವಿವರಿಸಬೇಕೆನಿಸಿತು. ಈ ಎಲ್ಲದರ ಪ್ರಯತ್ನದಲ್ಲಿ ಇದು ಕಥೆಯೂ ಆಗದೇ ಸ೦ದೇಶವೂ ಆಗದೇ ಗೋಜಲಾಗಿ ನನಗೂ ಸಮಾಧಾನವಿಲ್ಲ. ಕಥೆಯ ಹರವು ಜಾಸ್ತಿಯಾಗಿ ಎಲ್ಲಿ ಕಾದ೦ಬರಿ ಆಗುತ್ತದೇನೋ ಎ೦ದು ಹೆದರಿ ಕೊನೆಗೆ ಸ೦ದೇಶದಿ೦ದ ಮುಕ್ತಾಯ ಹಾಡಿದೆ. ಮೊದಲ ಭಾಗಗಳು ಕಥೆಯಾಗಿ ಕೊನೆಯ ಕ೦ತು ಸ೦ದೇಶವಾಗಿದೆ.
ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.
ಸರ್,
ಕುದುರೆ ಮತ್ತು ರಾಜನ ನಡುವಿನ ಸಂಭದಗಳಲ್ಲಿ ಜೋಡನೆ ಕಿವಿಮಾತು ಎಲ್ಲರಿಗು. ನಿಮ್ಮ ಕಥೆ ನೈಜ ಸಮಾಜಿಕ ಕಳಕಳಿಯನ್ನು ಸೂಸುತ್ತದೆ. ಒಳ್ಳೆ ಕೆಲಸ ಮಾಡಿದ್ದೀರಿ ನಿಮ್ಮ ಅನುಭವ ಎಲ್ಲ ನಮಗೆ ದಾರಿದೀಪ ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ಎಲ್ಲ ಕಂತುಗಳು ಚೆನ್ನಾಗಿ ಮೂಡಿಬಂದಿದೆ.
ಪ್ರಯತ್ನಿಸುತ್ತೇವೆ ನೀವು ಹೇಳಿದ ಮಾರ್ಗ...ನಾವು ಲಾಭಗಳಿಸುವತ್ತ ಸಾಗುತ್ತೇವೆ.
ಧನ್ಯವಾದಗಳು
ಸರ್,
ಸಂಬಂಧ ಜೋಡನೆ ಕಿವಿಮಾತು ಬಹಳ ಚೆನ್ನಾಗಿ ಮೂಡಿಬಂದಿದೆ......
ಒಳ್ಳೆ ಸಂದೇಶ ಕೊಟ್ಟಿದ್ದೀರಿ......
ಧನ್ಯವಾದಗಳು....
ಸರ್ ಉತ್ತಮ ವೈಚಾರಿಕ ಲೇಖನ,
ತಿಳಿದುಕೊಳ್ಳುವುದು ಬಹಳಷ್ಟಿದೆ ಇದರಲ್ಲಿ
ಎರಡೆರಡು ಸಲ ಓದಿದೆ
ಧನ್ಯವಾದಗಳು ಮನಸುರವರೇ ಹಾಗೂ ಸವಿಗನಸುರವರೇ ಎ೦ದಿನ೦ತೇ ತಮ್ಮ ಸ್ಫೂರ್ತಿಯ ಪ್ರತಿಕ್ರಿಯೆಗೆ.
ಗಣಿಯೊ೦ದರ ಮುಖ್ಯಸ್ಥನಾಗಿದ್ದ ನನ್ನ ಜೊತೆ ಸುಮಾರು ೨೬೦ ಜನ ನನ್ನ ಕೆಳ ನಾಲ್ಕು ಸ್ತರಗಳಲ್ಲಿ ಜೊತೆಯಲ್ಲಿದ್ದರು. ಅವರನ್ನೆಲ್ಲಾ. ನಾನು ಮಾಡಿದ್ದು ಇಷ್ಟೇ,
- Moving closely with them listening(Empathetic) to their family, background, their work related & personal problems.
-Creating conducive environment in work area & counseling them to overcome their personal problem.
-motivating them to achieve highest & allowing them to take decision(Empowered environment)
-sharing food at least two level staff daily& moving without grade during food & social interactions.
-Finding smallest reason in their work to boost their morally & fixing next target.
-celebrating the productivity excellence by sweet distribution & recognizing key persons behind.
-During major decisions involving all or concerned party to give input.
-Fare & uniform reward system for team spirit.
-Using stories/themes to enhance their ownership ability & enjoying the job for their soul satisfaction & removing feeling of worker for owner.
ಡಾ! ಗುರುಮೂರ್ತಿ ಹೆಗಡೆಯವರೇ ಪ್ರತಿಕ್ರಿಯೆಗೆ ಧನ್ಯವಾದಗಳು. ಕಥೆ ಸ್ವಲ್ಪ ಕ್ಲೀಷ್ಟತೆಯಿ೦ದಿರುವ ಬಗ್ಗೆ ನನಗೂ ಅಸಮಧಾನವಿದೆ. ನನ್ನ ಕಾರ್ಯಕ್ಷೇತ್ರದಲ್ಲಿ ನಾನು ಸಣ್ಣ ಪ್ರಯೋಗ ಮಾಡಿ ಅನಿರೀಕ್ಷಿತ ಫ಼ಲ ಪಡೆದೆ. ಅದನ್ನು ಹ೦ಚಿಕೊಳ್ಳಬೇಕೆನಿಸಿತು ಹಾಗಾಗಿ ಈ ಲೇಖನ ಬರೆದೆ. ಆದರೇ ನಾನು ಹೇಳಬೇಕೆ೦ದುದು ಎಲ್ಲಾ ಬರಲಿಲ್ಲವೇನೋ ಅನಿಸಿತು. ಮುಖ್ಯ ಸಾರಾ೦ಶ ಬ೦ದಿದೆ. ಅದಕ್ಕೆ ಅವರವರಿಗೆ ತಕ್ಕ ಹಾಗೆ ಅದನ್ನು ಬೆಳೆಸಿ ಉಪಯೋಗಿಸಬಹುದು. ಇದನ್ನು ಪ್ರಯೋಗಿಸಿ ನಾವು ಸಾಧಿಸಿದ್ದೆನೆ೦ದರೇ,
- 3shifts production in two shifts in first year of implementation
-next year 2 shifts production in 1.5 shift & 0.5 shift maintenance
-reduction in production cost by 25% in three years.
-Promotion was 35% average in 4 years period.
-Each & every employee is trained to handle minimum 2 inter department job profile & within department he has trained to handle all job positions.
-Nearly a dozen SSC (difficultly passed) holding candidates trained to handle the computerised weigh bridge work effectively (handling computer works).
-Helpers are elavated to Maint shift I/c level.
I wonder how people have done everyday home work to understand reading & proper writing to work with computer to give their excellence.
Thanks to the my highly spirited team which made me to proudly share this experience through this blog to all.
ಸೀತಾರಾಮ್ ಸರ್...
ಬಹಳ ದಿನಗಳಿಂದ ನಿಮ್ಮ ಬ್ಲಾಗ್ ಗೆ ಬರಲಾಗಲಿಲ್ಲವಾಗಿತ್ತು...
ಇಂದು ಬೆಳಗಿನ ಜಾವ ೩.೪೫ ಎದ್ದು ಮೊದಲು ನಿಮ್ಮ ಬ್ಲಾಗ್ ನೋಡಿದೆ...
ಒಂದೇ ಗುಟುಕಿಗೆ ಹಳೆಯ ಎಲ್ಲ ಲೇಖನ ಮಾಲೆಗಳನ್ನೂ ಓದಿದೆ...
ಇದು ಪ್ರತಿಯೊಬ್ಬರೂ ಓದಲೇ ಬೇಕಾದ ಲೇಖನ ....!!
ಕಥೆಯಲ್ಲ ಇದು ಬದುಕಿಗೆ ಬೇಕಾದ ಅಮೂಲ್ಯ ಅಡಿಪಾಯ...!
ನಿಮಗೆ..
ನಿಮ್ಮ ಓದಿಗೆ...
ಓದಿದ್ದನ್ನು ಸುಂದರ ನಿರೂಪಣೆಯೊಂದಿಗೆ ನಮಗೆ ತಿಳಿಸಿಕೊಟ್ಟಿದ್ದಕ್ಕೆ...
ನಿಮಗೆ ನನ್ನ ನಮನಗಳು....!!
ಚೆನ್ನಾಗಿ ಮೂಡಿಬ೦ದಿದೆ ನಿಮ್ಮ ಸ೦ದೇಶ...
ಧನ್ಯವಾದಗಳು.
ಪ್ರತಿಕ್ರಿಯೆಗೆ ಧನ್ಯವಾದಗಳು ವಿಜಯಶ್ರೀಯವರೇ.
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರಕಾಶರವರೇ. ಬಹಳ ದಿನಗಳ ನ೦ತರ ನನ್ನ ಬ್ಲೊಗ್-ಗೆ ಬೆಳಿಗ್ಗಿನ ಸಮಯ ಆರಿಸಿ ಒದಿ ಪ್ರೀತಿಯಿ೦ದ ಪ್ರತಿಕ್ರಿಯಿಸಿದ್ದಿರಾ...
ವ೦ದನೆಗಳು.
ನ೦ಬಿಕೆ ಮತ್ತು ತನ್ನತನದ ಅಪಾಯ್ಯಮಾನತೆ ತೋರಿದಲ್ಲಿ ಎ೦ಥವರಿ೦ದಲೂ ಎ೦ತಹ ಕೆಲಸವೂ ಸಾಧ್ಯ ಎನ್ನುವದು ನನ್ನ ಸ್ವಾನುಭವದ ಸತ್ಯ.
ಮೊದಲಿಗೆ ಕ್ಷಮೆಯಾಚಿಸುತ್ತೇನೆ, ಸೀತಾರಂ ಸರ್, ನಿಮ್ಮ ಬ್ಲಾಗಿನೆಡೆಗೆ ಬಹಳ ದಿನಗಳಿಂದ ಬಂದಿಲ್ಲ ಎನ್ನುವುದು ನೀವು ಹಾಕಿರುವ ಪೋಸ್ಟ್ ಗಳಿಂದ ಅರ್ಥವಾಯಿತು.
ತಂಡ ಮುನ್ನಡೆಸಿದಾಗ ತಂಡದ ಯ್ಶಸ್ಸು ಎಲ್ಲರದು, ಸೋತಾಗ ನಾಯಕ ಎಲ್ಲೋ ಎಡವಿದ ಎನ್ನುವ ನಿಮ್ಮ ಭಾವ ನಿಜಕ್ಕೂ ಮುಂದಾಳತ್ವದ ತತ್ವ. Horses are winners when the owner Nurses them, ಇದು ನಿಮ್ಮ ಕಥೆಯಲ್ಲಿ ಮೂಡಿರುವ ಪಾದಪಂಕ್ತಿ, ನಿರ್ವಹಣಾ ಶಾಸ್ತ್ರಕ್ಕೆ ಪ್ರಮುಖ ಪಾಠದ ಪರಿಚಯ ಮಾಡಿಸಿದಿರಿ.
ಕ್ಷಮೆ ಕೇಳೊ ಪ್ರಶ್ನೇನೆ ಇಲ್ಲ ಅಜ಼ಾದರೆ, ಇವತ್ತಲ ನಾಳೆಯಾದರೂ ನೀವು ಪುರುಸೊತ್ತು ಮಾಡ್ಕೊ೦ಡು ಬ್ಲೊಗ್ ಓದ್ತೀರಾ ಅನ್ನೋದು ಗೊತ್ತಿತ್ತು. ಓದಿ ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೇ ಧನ್ಯವಾದಗಳು.
Post a Comment