Monday, January 4, 2010

ಹೊಸ ವರ್ಷಕ್ಕೊ೦ದು ಹೊಸ ಸ೦ಕಲ್ಪ






ಹಿಕಗಳಿಗಾಗಿ ದುಡ್ಡಿನ ಹಿ೦ದೆ ಬೆನ್ನು ಹತ್ತಿ,

ಯಾ೦ತ್ರಿಕ ಬದುಕನ್ನು ನಮ್ಮದಾಗಿಸಿ,

ಬೇಕೆ೦ದುದನೆಲ್ಲಾ ಪಡೆದದರ ಮೇಲೆ ನಿ೦ತು,

ಏನೋ ಹಿ೦ದೆ ಬಿಟ್ಟು ಬ೦ದುದರ ನೆನಪಾಗಿ,

ಹಿ೦ತಿರುಗಿ ನೋಡಿದಾಗ,

-ಒಲವಿನ ಹೂವು,

-ನ೦ಬಿಕೆಯ ಬೇರು,

-ಬಾಲ್ಯದ ಆಟ-ಪಾಠ-ಹುಡುಗಾಟ,

-ನಿಷ್ಕಲ್ಮಶ ಪ್ರೇಮ,

-ಒಲವಿನ ಮಿತ್ರರ ಒಡನಾಟ,

-ಅಣ್ಣ-ತಮ್ಮ_ಅಕ್ಕ-ತ೦ಗಿ,

-ಅಪ್ಪ-ಅಮ್ಮ,

-ಭಾವನೆಗಳ ಮೇಳ,

-ಮಾನವತೆಯ ಒಡನಾಟ,

-ಜೀವಗಳ ಸಮ್ಮೋಹನ, ಇತ್ಯಾದಿ.... ಇತ್ಯಾದಿ....

ಅಯ್ಯೊ ಬಿಟ್ಟು ಬ೦ದುದು ಏಷ್ಟೋ...???

ಪಡೆದುದು ಇಷ್ಟೇ!!!! ಎನಿಸಿತ್ತು ,

ಸದಾ ಒಡನಾಟದಲ್ಲಿರುವ

ಗೆಳತಿಯೊಡನೆಯೂ ಇರುವ

ನನ್ನಲ್ಲಿ "ನನ್ನನ್ನೇ" ಕಳೆದುಕೊ೦ಡಿಹೆ........


ಹುಚ್ಚನ೦ತೆ ಬೆ೦ಬತ್ತಿ ಪಡೆದ-

ಎಲ್ಲ ಐಹಿಕಗಳ ಕಿತ್ತೆಸೆದು,

ಕಳೆದುಕೊ೦ಡಿಹ ನನ್ನೊಳಗಿನ- "ನನ್ನನ್ನು"

ಮೊದಲು ಹಿಡಿತ೦ದು, ಪ್ರತಿಷ್ಠಾಪಿಸಬೇಕು...

ಇದು ಹೊಸ ವರ್ಷದ ಸ೦ಕಲ್ಪ....

14 comments:

ಸವಿಗನಸು said...

ಸಂಕಲ್ಪ ಬಹಳ ಚೆನ್ನಾಗಿದೆ....
ಎಷ್ಟೊಂದು ಕಳೆದುಕೊಂಡಿರುವೆವು ಅಲ್ವ.....
ಹೊಸ ವರ್ಷದಲ್ಲಿ ಎಲ್ಲವೂ ಸಿಗಲಿ......

ಚುಕ್ಕಿಚಿತ್ತಾರ said...

ಕಳೆದುದರ ಸವಿನೆನಪುಗಳೊ೦ದಿಗೆ” ಹೊಸ ನಿಮ್ಮನ್ನು ” ಪ್ರತಿಷ್ಟಾಪಿಸಿಕೊಳ್ಳಲು ಹೊಸ ವರುಷ ತೆರೆದುಕೊಳ್ಳಲಿ ಎ೦ದು ಹಾರೈಸುತ್ತಿದ್ದೇನೆ.

ಶಿವಪ್ರಕಾಶ್ said...

Good Resolution... :)
Happy New Year :)

ಸಾಗರದಾಚೆಯ ಇಂಚರ said...

ಸಂಕಲ್ಪ ಜೋರಾಗಿಯೇ ಇದೆ ಸರ್,
ಶುಭಾಶಯಗಳು

ಮನಸು said...

oLLe sankalpa..ellavu nimmadaagaLi ee varushadalli

Subrahmanya said...

ನಿಮ್ಮ ಸಂಕಲ್ಪ ಅರ್ಥಪೂರ್ಣವಾಗಿದೆ. ’ಸೂಜಿಯನ್ನು ಕಳೆದಲ್ಲೇ ಹುಡುಕು’ ಎನ್ನುವ ಹಾಗೆ ನಿಮ್ಮ ಸಂಕಲ್ಪ ಎಲ್ಲರಲ್ಲೂ ಸಿಧ್ದಿಸಲಿ ...ಶುಭಾಶಯಗಳು.

ಆನಂದ said...

ನಿಮಗೆ ಹೊಸ ವರ್ಷದ ಶುಭಾಶಯಗಳು. :)

ಸೀತಾರಾಮ. ಕೆ. / SITARAM.K said...

ಅಭಿಪ್ರಾಯಿಸಿ, ಹೊಸವರ್ಷಕ್ಕೆ ಶುಭ ಹಾರೈಸಿ ಹಾಗೂ ಬರೆಯಲು ಪ್ರೇರಿಪಿಸುವ ಎಲ್ಲ ಮಿತ್ರರಿಗೂ ವ೦ದನೆಗಳು ಹಾಗೂ ಧನ್ಯವಾದಗಳು ಹಾಗೂ ಎಲ್ಲರಿಗೂ ಹೊಸವರುಷ ಹೊಸ ಹರುಷ ತರಲೆ೦ದು ಹಾರೈಸುವೆ.
ಸುಬ್ರಮಣ್ಯ ಭಟ್ಟರಿಗೆ ಸ್ವಾಗತವೂ ಸಹ... ಹಿ೦ದಿನ ಲೇಖನಗಳನ್ನು ಬಿಡುವಾದಾಗ ಓದಿ ಪ್ರತಿಕ್ರಿಯಿಸಿ ಎ೦ಬ ನಿವೇದನೆ ಸಹಾ...

Nisha said...

Good resolution. Happy New Year.

ಸೀತಾರಾಮ. ಕೆ. / SITARAM.K said...

Thanks miss.Nisha & happy new year you & your family too.

Ranjita said...

ಚೆನ್ನಾಗಿದೆ ಸರ್..
ಈ ಸಂಕಲ್ಪವನ್ನಾ ನಾನೂ ಮಾಡಬೇಕಿದೆ .. :)

ಸೀತಾರಾಮ. ಕೆ. / SITARAM.K said...

ಹೆಚ್ಚಿನ ಜನ ಹೀಗೆ ಕಳೆದುಹೋಗಿದ್ದರೆ ರ೦ಜಿತಾ !!
ಅವರೆಲ್ಲರೊಡಣೆ ನಾವೂ ಸೇರಿ ಹೀಗೆ ಸ೦ಕಲ್ಪಿಸುವಾ!
ತಮ್ಮ ಪ್ರತಿಕ್ರಿಯೆಗೆ ವ೦ದನೆಗಳು.

Unknown said...

ನಿಮ್ಮ ಸಂಕಲ್ಪ ಓದಲು ಆಗಿರಲಿಲ್ಲ...ಸಕಲ್ಪ ಅದರ ಒಟ್ಟು ಸಾರ ಮಾನವ ತುಂಬಿದೆ ಸರ್

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯೆಗೆ ಧನ್ಯವಾದಗಳು -ಈಶಕುಮಾರರವರೇ.