ಕಪ್ಪೆಯೊ೦ದು ಮೊನ್ನೆ ಹಾವೇರಿಗೆ ಹೋದಾಗ ನನ್ನ ಕೊಟಡಿಯ ಮ೦ಚದಲ್ಲಿ, ಗೋಡೆಯಲ್ಲಿ -ಹಾರಾಡುತ್ತಾ ಇದ್ದುದು ನನಗೆ ವಿಸ್ಮಯದ ವಿಷಯ. ಹಾರುವ ಕಪ್ಪೆಗಳ ಬಗ್ಗೆ ಕೇಳಿದ್ದೆ. ಆದರೆ ನೋಡಿರಲಿಲ್ಲ. ಅ೦ದು ನೋಡಿದೆ. ಪೂರ್ಣಚ೦ದ್ರ ತೇಜಸ್ವಿಯವರ "ಕರ್ವಾಲೋ" ಕಾದ೦ಬರಿಯನ್ನು ಪದವಿಪೂರ್ವ ಶಿಕ್ಷಣದಲ್ಲಿ ಅದ್ಯಯನ ಮಾಡುವಾಗ ನಮ್ಮ ಪ್ರಾಧ್ಯಾಪಕರು ಅದರಲ್ಲಿ ಬರುವ ಹಾರುವ ಓತಿಯ ಬಗ್ಗೆ ಹೇಳುತ್ತಾ ಹಾರುವ ಕಪ್ಪೆಗಳ ಬಗ್ಗೆಯೂ ಹೇಳಿದ್ದರು.ಅವು ಸಹಜವಾಗಿ ಕಾಣಲು ಸಿಗುತ್ತೆ ಅ೦ದಿದ್ದರು. ಆ ಸಹಜವಾಗಿ ಕಾಣ ಸಿಗುವ ಹಾರುವ ಕಪ್ಪೆಗಳನ್ನು ನೋಡಿದ್ದು ನಾನು ಇದೇ ಮೊದಲು. ಅಪರೂಪದ ಜೀವಿಯ ಛಾಯಾಚಿತ್ರ ತೆಗೆಯುವದರಲ್ಲಿ ಅದು ಕಣ್ಮರೆಯಾಗಿತ್ತು. ಅದರ ಬಗ್ಗೆ ಜಲನಯನರು ಅಥವಾ ಸುಮಾ -ಸುಧಾಕಿರಣರೇ ಬರೆಯಬೇಕು. ಅವಸರದಲ್ಲಿ ಅನನುಭವಿ ತೆಗೆದ ಛಾಯಚಿತ್ರಗಳು ಇಲ್ಲಿವೆ.
Wednesday, November 18, 2009
Subscribe to:
Post Comments (Atom)
9 comments:
ಬಹಳ ಚೆನ್ನಾಗಿದೆ ಚಿತ್ರಗಳು....
ಎಷ್ಟು ದೂರದ ವರೆಗೆ ಹಾರುತ್ತ ಇತ್ತು ಸರ್... ?
ಸಾಮಾನ್ಯವಾಗಿ ಗಿಡಮರಗಳ ಬಳಿಯಿರುವಂತದ್ದು ಅಪರೂಪಕ್ಕೆ ನಿಮ್ಮ ರೂಮಿಗೆ ಬಂದಿದೆ. ನಂತರ ಏನು ಮಾಡಿದ್ರಿ?
ಪ್ರತಿಕ್ರಿಯೆಗೆ ಧನ್ಯವಾದಗಳು- ಮಹೇಶರವರೇ, ಶಿವಪ್ರಕಾಶರವರೇ ಹಾಗು ಮಲ್ಲಿಕಾರ್ಜುನರವರೇ.
ಶಿವಪ್ರಕಾಶರವರೇ-ಅದು ೧೦-೧೫ ಅಡಿ ನಾನು ಕ೦ಡ ಹಾಗೆ ನೆಗೆದದ್ದು. ಕಪ್ಪೆಗಳೆಲ್ಲಾ ನೆಗೆಯೋದು ಸಾಮಾನ್ಯ-ಅದರೇ ಅದು ಉದ್ದ ಜಿಗಿತ (ಲಾ೦ಗ್ ಜ೦ಪ್) ಅದರೆ ಈ ಕಪ್ಪೇ ವಿಶೇಷ ಅ೦ದ್ರೆ ಇದು ಎತ್ತರ ಜಿಗಿತ(ಹೈ ಜ೦ಪ್). ಹಾಗೂ ಗೋಡೆಗೆ ನೆಗೆದು ಹಲ್ಲಿ ಹಾಗೇ ಓಡಾಡೋದು. ಹಾಗಾಗಿ ಇದು ನನಗೆ ವಿಸ್ಮಯ ಎನಿಸಿದ್ದು.
ಮಲ್ಲಿಕಾರ್ಜುನರವರೇ-ಆ ಕಪ್ಪೆ ಗೋಡೆ ಮೇಲಿದ್ದ ತೆರೆದ ವೆ೦ಟಿಲೆಟರ್ ಮುಖಾ೦ತರ ಹೊರಹೋಯಿತು. ಅಮೇಲೆ ಅದು ಕಾಣಲಿಲ್ಲ.
ಸೀತಾರಾಂ ಸರ್ ನಿಮ್ಮ ವಿಶ್ವಾಸಕ್ಕಾಗಿ ಧನ್ಯವಾದಗಳು. ಇದು ಪ್ರಾಯಶಃ "Rhacophoridae" ಜಾತಿಗೆ ಸೇರಿದ ಮರಗಪ್ಪೆ ಇರಬಹುದು. ಮರಗಿಡಗಳಲ್ಲೇ ವಾಸಿಸುವ ಇವುಗಳ ಗಾತ್ರ ಚಿಕ್ಕದು. ಕಾಲು ಬೆರಳಿನ ತುದಿ ಗುಂಡಗಿದ್ದು ವರ್ಟಿಕಲ್ ಸರ್ಫೇಸ್ ಮೇಲೆ ನಿಲ್ಲಲು ಸಹಾಯಕವಾಗಿದೆ.
ಕೆಲವು ಮರಗಪ್ಪೆಗಳಿಗೆ ಬಣ್ಣ ಬದಲಾಯಿಸುವ ಸಾಮರ್ಥ್ಯ ಕೂಡ ಇದೆಯಂತೆ.
ಸಂತಾನೋತ್ಪತ್ತಿ ಕಾಲದಲ್ಲಿ ಕೆಲವು ಮರಗಪ್ಪೆಗಳು ಕೆಳಗಿಳಿಯುತ್ತವೆ.
ಈ ಜಾತಿಗೆ ಸೇರಿದ ಕೆಲ ಕಪ್ಪೆಗಳು ನೀರಿನ ಬಳಿಯುರುವ ಗಿಡ ಮರಗಳ ಎಲೆಯ ಹಿಂಭಾಗದಲ್ಲಿ ಮೊಟ್ಟೆಯಿಡುತ್ತವೆ . ಮೋಟ್ಟೆಯೊಡೆದು ಹೊರಬರುವ ಮರಿಗಳು ನೀರಿಗೆ ಬಿದ್ದು ಅಲ್ಲಿ ಬೆಳೆಯುತ್ತವೆ.
ಸೀತಾರಂ ಸರ್, ಅದ್ಭುತವಾದ ವೀಕ್ಷಣೆ ಮತ್ತು ಅಷ್ಟೇ ಚುರುಕಾದ ಕಾರ್ಯಾಚರಣೆ ಅದರ ಚಿತ್ರ ಸೆರೆಹಿದಿಯುವಲ್ಲಿ, ಸುಮ ಹೇಳೊದು ನಿಜ ರಾಕೊಫೊರಿಡೆ ಕುಟುಂಬದ ಹಲವಾರು ಉಭಯಜೀವಿಗಳು (amphibians) ಈ ರೀತಿಯ ಹೊಂದಾಣಿಕೆಗೆ ಒಗ್ಗಿಕೊಂದಿರುತ್ತವೆ. ರಾಕೋಫೋರಸ್ ನೈಗ್ರೊಪಾಲ್ಮೇಟಸ್ ಎನ್ನುವ ಪ್ರಭೇದದಲ್ಲಿ ನೀವು ಹೇಳಿದಂತೆ ಹಲ್ಲಿಯಹಾಗೆ ಕಾಲುಗಳಲ್ಲಿ ಪರದೆಯಿರುತ್ತದೆ, ಇವು ಭೂಮಿಯತ್ತ ಬಾಗಿರುವ ಮೇಲ್ಮೈ ಮೇಲೆ ಕೂರಬಲ್ಲವು ಮತ್ತು ಜಿಗಿಯಬಲ್ಲವು. ಸುಮಾರ ವಿವರಗಳು ನಿಮ್ಮ ಲೇಖನಕ್ಕೆ ಪೂರಕ ಹಾಗೂ ಮಾಹಿತಿಯುಕ್ತ...ನಿಮ್ಮ ಆಸಕ್ತಿಗೆ ..ಸಲಾಂ
ಧನ್ಯವಾದಗಳು ಸುಮಾರವರೇ ಹಾಗೂ ಅಜ಼ಾದರವರೇ. ತಮ್ಮ ಉಪಯುಕ್ತ ಮಾಹಿತಿ ಈ ಲೇಖನಕ್ಕೆ ಪೂರಕವಾಗಿದೆ. ತಾವುಗಳು ಹೇಳುವ೦ತೆ ಈ ಕಪ್ಪೆಯ ಬೆರ್ಅಳುಗಳ ತುದಿ ದು೦ಡಗಿದ್ದು ನೇರ ಗೋಡೆಯಲ್ಲಿ ನಿಲ್ಲಲು ಸಹಾಯಕವಾಗಿತ್ತು.
ತಾವು ಉಪಯುಕ್ತ ಮಾಹಿತಿ ಕೊಡುತ್ತಿರಿ ಎ೦ಬ ಭರವಸೆ ನಿಜವಾಯಿತು-ವ೦ದನೆಗಳು.
ಸೀತಾರಾಮ ಸರ್
ಹಾರುವ ಕಪ್ಪೆಯನ್ನು ಚಿತ್ರದಲ್ಲಿ ಸೆರೆ ಹಿಡಿದ ನಿಮ್ಮ ಕ್ಷಿಪ್ರ ಕಾರ್ಯಾಚರಣೆ ಇಷ್ಟವಾಯ್ತು... ಚಿತ್ರಗಳು ಚೆನ್ನಾಗಿವೆ.. ಸುಮಾ ಮೇಡಂ ಮತ್ತು ಆಜಾದ್ ಸರ್ ನೀಡಿದ ಈ ಜೀವ ಪ್ರಬೇದದ ಬಗೆಗಿನ ಹೆಚ್ಚಿನ ಮಾಹಿತಿಗೆ ಅವರಿಬ್ಬರಿಗೂ ಧನ್ಯವಾದಗಳು... ಅಭಿನಂದನೆಗಳು..
ದಿಲೀಪ ಹೆಗ್ಡೇಯವರೇ,
ನನ್ನ ಬ್ಲೊಗ್-ಗೆ ಸ್ವಾಗತ. ಹಾಗೂ ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಬಿಡುವಾದಾಗ ನನ್ನ ಮು೦ಚಿನ ಚುಟುಕುಗಳನ್ನು ಓದಿ ಅಭಿಪ್ರಾಯ ನೀಡಿ.
Post a Comment