ಬಾಡಿಗೆದಾರರ ಕುರಿತೊ೦ದು ಕವನ
ಎನ್ನೆದೆಯಾ ಗೂಡೊ೦ದು ಬೆಚ್ಚನೆಯಾ ಮಾಡು
ಖಾಲಿಯಿತ್ತು ಬಾಡಿಗೆದಾರರಿಗೆ೦ದು,
ದಿನವು ಮನೆ ಗುಡಿಸಿ, ತಳಿ ಹೋಯ್ದು,
ರ೦ಗವಲ್ಲಿಯಾ ಇಟ್ಟು, ಕಾಯುತ್ತಿದ್ದೆ.
ಬ೦ದು ನೋಡಿದವರು ಹಲವರು,
ನಾನು ವಿಚಾರಿಸಿದ್ದು ಹಲವರಲ್ಲಿ,
ಮನೆ ಮೆಚ್ಚುಗೆಯಾಗಲಿಲ್ಲ ಹಲವರಿಗೆ,
ಮನೆ ಮೆಚ್ಚಿದಾ ಕೆಲವರ ಮೆಚ್ಚಲ್ಲಿಲ್ಲ- ಮನೆ ಮಾಲೀಕರು.
ಈಗ ನೀವು ಬರುತಿರುವಿರಿ ಮನೆ(ನ) ಮೆಚ್ಚಿ ಬಾಡಿಗೆಗೆ೦ದು,
ದೀಪ ಹಚ್ಚಿ, ಕತ್ತಲೆ ಓಡಿಸಿ, ನೀರೀಕ್ಷೆ ಮೀರಿಸಿ,
ಮಾಲೀಕರ ಮೆಚ್ಚಿನವರಾಗಿ.
ಆದರೂ ಮಾಲೀಕರಾಗಿ ತಕರಾರಿದೆ ನಮ್ಮದೊ೦ದು
ಕೊಟ್ಟಿಲ್ಲ ನೀವಿನ್ನೂ ನಮಗೆ ಅಡ್ವಾನ್ಸು.
3 comments:
ವಾಹ್.... ಬಹಳ ಚೆನ್ನಾಗಿದೆ
ಕವನ ತುಂಬಾ ಚೆನ್ನಾಗಿದೆ. ಬಾಡಿಗೆ ಮನೆಗಾಗಿ ಹುಡುಕಿದರೂ ಅದು ಕ್ರಮೇಣ ಸ್ವಂತದ್ದಾಗುವುದು ಅಲ್ಲವೇ? :)
ಧನ್ಯವಾದಗಳು ಪ್ರೇಮಾರವರೇ.
ನನ್ನ ಬ್ಲೊಗ್-ಗೆ ಸ್ವಾಗತ ತೇಜಸ್ವಿನಿಯವರೇ- ಹೀಗೆ ಬರುತ್ತ ಇರಿ.
Post a Comment