(ಅಂತರ್ಜಾಲ ಕೃಪೆಯ ಚಿತ್ರ - Thanks to : aylwin0201.blogspot.com)
ನಿನ್ನೆ
ಸರಿ ಮಾಡಲರಿಯೇ ಸರಿದಿದೆ...
ಬರೀ ಮೂಟೆ... ಭಾರ ಬೆನ್ನಲ್ಲಿ..
ಸಾರ ಹೀರಿ... ಕಸುವಾಗಿಸಿ.. ಕಸವೆಸೆದು...
ನಡೆಯಬೇಕಾಗಿದೆ.!!ಸರ ಸರ....
ನಾಳೆ
ಆಗಸದ ಬಯಕೆಗಳು...
ನಿನ್ನೆಯ ಭಯಗಳು....
ಬಯಕೆ ಭಯೆಗಳ ನಡುವೆ ಬೇಡ ಭವಣೆ!!
ಇಂದು
ಕಾಡದಿರಲಿ ನಿನ್ನೆಯ ಎಡವರಿಕೆ..
ಕದಲಿಸದಿರಲಿ ನಾಳೆಯ ಕನವರಿಕೆ...
ಇಂದಿನ ನಡೆಗೆ!!!
ಜಯದ ಕಡೆಗೆ..
ಅಂತರದ ಅಂತ್ಯಕ್ಕೆ!!!
ಜಯ
ನಿನ್ನ..
ನಿನ್ನೆ ಕನಸ...
ಕನಸ ನಾಳೆ...
ಅರಳಿಸಿದೇ
ಇಂದಿನ ದೃಡ ಹೆಜ್ಜೆ!!!!
ಸೋಲು
ಭಾರ ಮೂಟೆ ಬೆನ್ನ ಮೇಲೆ...
ಭ್ರಾಂತು ಬಯಕೆ ಕಣ್ಣ ಮುಂದೆ...
ತಡಬಡಿಸಿದೆ ಹೆಜ್ಜೆ !!!