ಅತ್ತ....ಇತ್ತ ... ಸುತ್ತ.... ಹರಿದು....
ಮನದ ಆಳದಲ್ಲಿ ಮತ್ತ ಬರಿಸಿ......
ಗಿರಿಗಿಟ್ಟಿಯಂತೆ ತಿರುತಿರುಗಿಸಿ.....
ಎತ್ತೋ ಒಯ್ದು ....
ಕಾಣದಂತೆ ....
ಎತ್ತೋ ಸರಿದು....
ಓಡಿ ಹೋದೆ!
ದಾರಿ ಕಾಣದೆಹೆದರಿ ಬೆದರಿ
ಅತ್ತು ಕರೆದು
ಅತ್ತಿತ್ತ ನೋಡುತಿರಲು
ನೀನು ಕಾಣೆ.....
ಬೆನ್ನ ಹತ್ತಿ ದಾರಿ ಹುಡುಕಲೆಂದೇ .....
ಕವಲಿನಲ್ಲಿ ಬಂದು ನಿಂತು .....
ಎತ್ತ ಎತ್ತ ಎಂದು ಕನವರಿಸೆ.....
ಎತ್ತಲಿಂದೋ ಪಕಪಕನೆ
ನಕ್ಕ ಸದ್ದು....
ಹಿಂದೆ ಸರಿಯೇ...
ಮುಂದೆ ಅರಿಯೆ....
ನನ್ನ ಪ್ರಶ್ನೆ
ಇದು ನಿನಗೆ ತರವೇ????