Thursday, October 21, 2010

ಮಗುವಿನ ಚುಟುಕುಗಳು

ಒಂಟಿಗಣ್ಣಲಿ, ತುಂಟುಭಾವದೀ, ತಂಟೆ ಹೊಂಚಲಿ, ಸಂಚ ಹೆಣೆಯುತಿರುವ ಪೋರ.

-೧-
ಮುಗ್ಧ ಮೊಗವು
ಸ್ನಿಗ್ಧ ನಗುವು
ನಿನ್ನಳುವಿನಲ್ಲೂ
ಅರಳುವದು ಮನವು


-೨-

ಹಸಿದ ಹೊಟ್ಟೆಗೆ,
ಒದ್ದೆ ಬಟ್ಟೆಗೆ,
ಕರೆಗಂಟೆ ನಿನ್ನಳುವು.
ಮಿಕ್ಕೆಲ್ಲಾ ಹೊತ್ತು
ನಿನ್ನಯಾ ಗತ್ತು
ಬೀರುತ್ತಾ ಚೆಲುವು
ಅರಳುವದು
ಸುತ್ತೆಲ್ಲಾ ಮನವು

(ಬ್ಲಾಗ ಮಿತ್ರರಲ್ಲಿ ಅರಿಕೆ : ವೃತ್ತಿ ಜೀವನದಲ್ಲಿ ಮಹತ್ತರ ಬದಲಾವಣೆಯ ಮತ್ತು ಸಂಸಾರಿಕ ಜೀವನದಲ್ಲಿನ ಹೊಸ ಸದಸ್ಯನ ಆಗಮನದಿಂದ ಸ್ವಲ್ಪ ದಿನ ಬ್ಲಾಗ್ ಪ್ರಪಂಚದಲ್ಲಿ ಬರಲಾಗದೆ ತಮ್ಮ ಕಳೆದ ಕೆಲವು ವಾರಗಳಿಂದ ಬರೆದ ಬರಹಗಳನ್ನೂ ಓದಲಾಗಲಿಲ್ಲ. ಆದರೆ ಎಲ್ಲವನ್ನೂ ಶೀಘ್ರದಲ್ಲಿ ಒಂದು ಬಿಡದಂತೆ ಓಡುವ ಸಂಕಲ್ಪದಲ್ಲಿದ್ದೇನೆ. ಅಲ್ಲಿಯವರೆಗೆ ಕ್ಷಮೆಯಿರಲಿ.)

41 comments:

PARAANJAPE K.N. said...

ವೃತ್ತಿಯಲ್ಲಿನ ಬದಲಾವಣೆ ಮತ್ತು ಕುಟು೦ಬಕ್ಕೆ ಹೊಸ ಸದಸ್ಯನ ಆಗಮನ ಎರಡೂ ಶುಭಪ್ರದವಾಗಲೆ೦ದು ಹಾರೈಕೆ.

ಚುಕ್ಕಿಚಿತ್ತಾರ said...

ಹೊಸ ಸದಸ್ಯ ಚ೦ದ ಇದ್ದಾನೆ..
ಹೊಸ ಸದಸ್ಯನ ಜೊತೆಗೆ ಹೊಸ ಹೊಸ ಭಾವಗಳು ನಿಮ್ಮಲ್ಲಿ....! ಶುಭವಾಗಲಿ ಎಲ್ಲರಿಗೂ..

ನಾಗರಾಜ್ .ಕೆ (NRK) said...

CONGRATULATIONS SIR . . .
LINES ARE GOOD

ದಿನಕರ ಮೊಗೇರ said...

sitaaram sir,
eradu jeevanakku subhaashaya..... elladdakku olleyadaagali...

ವನಿತಾ / Vanitha said...

cute putta:)

balasubramanya said...

ಜ್ಯೂನಿಯರ್ ಸೀತಾರಾಂ ,ಸೀನಿಯರ್ ಸೀತಾರಾಂ ಹಾಗು ಶ್ರೀಮತಿ ಸೀತಾರಾಂ ರವರಿಗೆ ಶುಭಾಶಗಳು.ಕಂದಮ್ಮ ನಿಮ್ಮ ಬಾಳಿನಲ್ಲಿ ಸಂತಸದ ಹೊನಲು ಹರಿಸಲಿ.ಮುಗ್ಧ ಮೊಗವು
ಸ್ನಿಗ್ಧ ನಗುವು
ನಿನ್ನಳುವಿನಲ್ಲೂ
ಅರಳುವದು ಮನವು
ಸಾಲು ಚೆನ್ನಾಗಿದೆ.

shivu.k said...

ಸೀತಾರಾಂ ಸರ್,

ಬದುಕು ಬದಲಾವಣೆಯಲ್ಲಿದೆ! ನಿಮ್ಮಂಥ ತುಂಟನಾಗುವ ಸೂಚನೆ ಕಾಣುತ್ತಿದೆ. ಅವನ ಬದುಕು ಬಂಗಾರವಾಗಲಿ..

sunaath said...

ಸೀತಾರಾಮರೆ,
ಗೃಹಸ್ಥ ಜೀವನದ ಹೊಸ ಸ್ಟೇಜ್ ನೋಡುತ್ತಿರುವಿರಿ. ಇದು ಸುಖದ ಮತ್ತೊಂದು ಬಗೆ. ಶುಭಾಶಯಗಳು.

Dr.D.T.Krishna Murthy. said...

ಸೀತಾರಾಂ ಸರ್;ಹೊಸ ವೃತ್ತಿ,ಹೊಸ ಸದಸ್ಯನ ಆಗಮನ ,ಹೊಸ ಬದುಕು ,ಎಲ್ಲದಕ್ಕೂ ಶುಭಾಶಯಗಳು.

Shashi jois said...

ಸೀತಾರಾಮ ಸರ್ ,
ನೂತನ ಸದಸ್ಯ ಮುದ್ದಾಗಿದ್ದಾನೆ..ಅಭಿನಂದನೆಗಳು

ಸುಮ said...

ಪುಟ್ಟಪಾಪು ಮತ್ತು ಅದರ ಬಗ್ಗೆ ಬರೆದ ಚುಟುಕಗಳು ಎಲ್ಲ ಚೆನ್ನಾಗಿವೆ. ಚಂದದ ಪಾಪುವಿನ ಹೆಸರೇನು?

ಶರಶ್ಚಂದ್ರ ಕಲ್ಮನೆ said...

ಸೀತಾರಾಂ ಸರ್,
ನಿಮ್ಮ ಜೀವನದ ಎಲ್ಲ ಬದಲಾವಣೆಗಳೂ ಸಂತಸದಾಯಕವಾಗಿರಲಿ... ಸಾಲುಗಳು ಚಂದವಾಗಿವೆ... ಶುಭಾಶಯಗಳು :)

ಜಲನಯನ said...

ನಲಮೆಯ ಸೀತಾರಾಮ್ ಸರ್ ನಿಮ್ಮ ಸಂಭ್ರಮದ ಪೂರ್ಣ ಅರಿವು ನಮಗಿದೆ ಅಂತೆಯೇ ನಿಮ್ಮೊಮ್ದಿಗೆ ಭಾಗಿ ನಾವು...ಶುಭ ಸಂತೋಷ ಸದಾ ತುಂಬಿರಲಿ ನಿಮ್ಮ ವೃತ್ತಿ ಮತ್ತು ಖಾಸಾ ಜೀವನದಲ್ಲಿ...

ಸೀತಾರಾಮ. ಕೆ. / SITARAM.K said...

@ ಸುಮಾರವರೇ ಹೆಸರು ಇನ್ನು ಯೋಚಿಸುತ್ತಿದ್ದೇವೆ. ೩ನೇ ತಿಂಗಳಲ್ಲಿ ಹೆಸರು ಇಡುವ ಇರಾದೆ ಇದೆ. ತಮ್ಮೆಲ್ಲರನ್ನು ಕರೆಯುತ್ತೇನೆ. ಅಲ್ಲಿವರೆಗೆ ನೀವೂ ಹೆಸರು ಸೂಚಿಸಿ.
ಜಾತಕದ ಅಕ್ಷರಗಳು - ಭು,ಧು, ಬು, ದು, ಸುತ್ತ.
ಭುವನ, ಭೂಷಣ, ಭುದ್ಧ, ದ್ರುವ, ಇತ್ಯಾದಿ ಓಡಾಡಿದರು ಕೃಷ್ಣನ ಹೆಸರಲ್ಲಿ ಈ ಅಕ್ಷರದಿಂದ ಸುರು ಆಗುವ ಹೆಸರು ಹುಡುಕುತ್ತಿದ್ದೇವೆ.

Mahesh said...

ಶುಭ ಹಾರೈಕೆಗಳು

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಎಲ್ಲ ಮಿತ್ರರಿಗೂ ನಮ್ರ ವಂದನೆಗಳು.

Manju M Doddamani said...

ಮಗು ತುಂಬಾ ಮುದ್ದಾಗಿದೆ ಸರ್
ಚುಟುಕು ತುಂಬಾ ಚನ್ನಾಗಿವೆ....!
ಶುಭವಾಗಲಿ

ಮನಮುಕ್ತಾ said...

ಮುದ್ದಾದ ಮಗು..ಚೆ೦ದದ ಚುಟುಕು.
ನಿಮಗೆಲ್ಲರಿಗೂ ಶುಭಹಾರೈಕೆಗಳು.

ಅನಂತ್ ರಾಜ್ said...

ಮುಗ್ಧ ಮೊಗವೂ ಹೌದು ಮುಗ್ಧ ಮನವೂ ಹೌದು. ಶುಭಾಶಯಗಳು ಸೀತಾರಾ೦ ಸರ್.

ಅನ೦ತ್

ಹಳ್ಳಿ ಹುಡುಗ ತರುಣ್ said...

chenagide mugda magu sir... al the best.. :)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಶುಭಾಶಯಗಳು ಸಾರ್.

Deep said...

Saalugalu Channagive...

Congrats Sir

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಶುಭಾಶಯಗಳು ..channagivae :)

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಮಗು ತುಂಬಾ ಮುದ್ದಾಗಿದೆ ಸರ್
ಚುಟುಕು ತುಂಬಾ ಚನ್ನಾಗಿವೆ...

ಮನಸಿನಮನೆಯವನು said...

ಚಂದದ ಸಾಲುಗಳು..
ಶುಭವಾಗಲಿ.. ನಿಮ್ಮ ಕಾರ್ಯ.
ನನ್ನ 'ಮನಸಿನಮನೆ'ಗೂ ಬನ್ನಿ..

Manasa said...

Cute baby... nice lines kaaka... welcome to our new family member :)

nenapina sanchy inda said...

woweeeeeee!!
gr8
congrats, congrats, congratsu..............................
I am feeling so happy. enjoy all your time with the baby
:-)
malathi S

ಕ್ಷಣ... ಚಿಂತನೆ... said...

ಸರ್‍, ವೃತ್ತಿಯಲ್ಲಿನ ಬದಲಾವಣೆ ಹಾಗೂ ಕುಟುಂಬಕ್ಕೆ ಹೊಸ ಸೇರ್ಪಡೆಯ ಜೊತೆಗೆ ನವನವೀನ ಭಾವನೆಗಳು. ಶುಭವಾಗಲಿ...

Bhavana Rao said...

so true... nice one...

KalavathiMadhusudan said...

ಸೀತಾರಾಂ ರವರೆ,ಹೊಸ ಸದಸ್ಯ ನಿಗೆ ,ಹೊಸ ಹುದ್ದೆಗೆ ಶುಭವಾಗಲಿ.ನಿಮ್ಮ ಹನಿಗವನಗಳು ಹನಿಯಂತೆ ಸವಿಯಾಗಿವೆ.ಧನ್ಯವಾದಗಳು.

V.R.BHAT said...

ವೃತ್ತಿ ಬದಲಾವಣೆ ಶುಭ ತರಲಿ, ಮಗು ತಜಸ್ವಿಯಾಗಿ ಕುಟುಂಬಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತಿದ್ದೇನೆ

Roopa said...

ಮುದ್ದಾದ ಮಗು, ಚೆಂದದ ಸಾಲುಗಳು.. ನಿಮಗೆಲ್ಲರಿಗೂ ಬೆಲಕಿನ ಹಬ್ಬ ದೀಪಾವಳಿಯ ಶುಭಾಶಯಗಳು!!

Pradeep Rao said...

ಮುದ್ದಾದ ಮಗು ಚಂದದ ಚುಟುಕು!

Ittigecement said...

ಸೀತಾರಾಮ್ ಸರ್...

ನಿಮ್ಮ ಸಂತಸ , ಸಂಭ್ರಮ ನೋಡಿ ನನ್ನ ಮಗ ಸಣ್ಣವನಿದ್ದಾಗ ನಾನು ಪಟ್ಟ ಸಂತೋಷ ನೆನಪಾಯಿತು...

ನಿಮ್ಮ ಹೊಸ ಕೈಂಕರ್ಯಕ್ಕೆ ಶುಭಕಾಮನೆಗಳು...

ಜೈ ಹೋ...

ತೇಜಸ್ವಿನಿ ಹೆಗಡೆ said...

So Cute... :)

Badarinath Palavalli said...

ಸರ್,

ಎರಡೂ ಚುಟುಕುಗಳು ಅದ್ಭುತವಾಗಿವೆ. ಏನು ಸಾರ್ ಆ ಬದಲಾವಣೆ? ಸ್ವಲ್ಪ ವಿವರಿಸಿರಿ....

ಅಂದ ಹಾಗೇ ’ನನ್ನ ಕೂಸೇ’ ಕವನ ಸ್ವಲ್ಪ ಬದಲಾವಣೆಯಾಗಿದೆ. ಓದಿ ಕಮೆಂಟ್ ಹಾಕಿ..
http://badari-poems.blogspot.com/2010/11/blog-post.html

email: cameraman@rediffmail.com

I am in Facebook search “Badarinath.Palavalli”

ಧರಿತ್ರಿ said...

ಸರ್..ಶುಭವಾಗಲೀ.................
ಪಾಪು ಸೋ ಸ್ವೀಟ್........

ಶಾಂತಲಾ ಭಂಡಿ (ಸನ್ನಿಧಿ) said...

ಸೀತಾರಾಮ ಅವರೇ...
ಅಭಿನಂದನೆಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ.
ಹೊಸ ಜೀವದ ಆಗಮನ ಬಾಳಿನಲ್ಲಿ ಇನ್ನಷ್ಟು ಖುಷಿ ತರಲಿ.

ಪ್ರೀತಿಯಿಂದ,
-ಶಾಂತಲಾ ಭಂಡಿ

Badarinath Palavalli said...

ನಮಸ್ಕಾರ,
ನನ್ನ ಪದ್ಯದ ಬ್ಲಾಗ್ ಜೊತೆಗೆ, ನನಗನಿಸಿದ್ದು ಬರೆವ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಓಮ್ಮೆ ಹೊಸ ಬ್ಲಾಗಿಗೆ ಬನ್ನಿ ಮತ್ತು ನಿಮಗೇನು ಅನಿಸಿತು ಹೇಳಿ..
ನಿಮ ಪ್ರೀತಿ ಹೀಗೆ ಇರಲಿ...

http://badari-notes.blogspot.com/

ದೀಪಸ್ಮಿತಾ said...

ಮಗುವಿನ ಆಗಮನ ಎಂಥ ಸಂಚಲನವುಂಟು ಮಾಡುತ್ತದೆ ಎಂದು ನನಗೂ ಅನುಭವವಾಗಿದೆ

prabhamani nagaraja said...

ಜೀವನದ ಎರಡು ಮಹತ್ತರ ಬಡ್ತಿಗಾಗಿ ಅಭಿನ೦ದನೆಗಳು. ಪಿತೃ ವಾತ್ಸಲ್ಯ ನಿಮ್ಮ ಹನಿಗಳಲ್ಲಿ honey ಯಾಗಿ ಹರಿದಿದೆ. ನಿಮ್ಮ ಸ೦ತಸ, ಸ೦ಭ್ರಮದಲ್ಲಿ ಪಾಲ್ಗೊಳ್ಳಲು ಸದಾ ಸಿದ್ಧರಾಗಿದ್ದೇವೆ.