Thursday, September 30, 2010

ಮಗುವಿನ ಅಳಲು


ಗತಿಸಿದ ನೆಚ್ಚಿನ ಅಜ್ಜ ಪಿಜ್ಜರ
ಹೆಸರ ಹಿಡಿದು
ನನ್ನ ಕೂಗಿ
ಲಲ್ಲೆಗರೆವ ಜನರೇ.....

ಮುದ್ದು, ಮೊದ್ದು,
ಪುಟ್ಟ, ಕಿಟ್ಟ,
ಕಳ್ಳ, ಮಳ್ಳ,
ತುಂಟ, ಎಂಬ ವಿಶೇಷಣದೀ
ಮುದ್ದುಗರೆವ ಜನರೇ.....

ಬಂಗಾರು, ಚಿನ್ನ,
ರನ್ನ, ರತುನ,
ಮುತ್ತು, ಹವಳ
ಎಂಬ ಅಮೂಲ್ಯಗಳ
ಹೆಸರಲ್ಲಿ ಮುದ್ದಿಸುವ ಜನರೇ....

ಎಲ್ಲ- ಏನೋ,
ಹೇಳಿ ಕರೆದರೇ
ಕತ್ತು ಎತ್ತಿ ನೋಡೋ
ಹವ್ಯಾಸಕ್ಕೆ
ನಾನು ಒಗ್ಗೋ ಮುನ್ನ
ನನಗೆ ನನ್ನದಾದ
ಒಂದು ಹೆಸರು ಇಟ್ಟು ಬಿಡಿ!

29 comments:

Ittigecement said...

ಸೀತಾರಾಮ್ ಸರ್...

ಅಭಿನಂದನೆಗಳು...!!

Waaah.. !!

ನಿಮ್ಮ ಸಂತಸ.. ಸಂಭ್ರಮ...!
ಒಬ್ಬ ಅಪ್ಪ ಹುಟ್ಟಿದ ಸಂತೋಷ ನಿಮ್ಮ ಈ ಕವನದಲ್ಲಿ ಕಾಣುತ್ತಿರುವೆ...!!

ಹೆಸರಲ್ಲೇನಿದೆ..?

ನಿಮ್ಮ ಸಂತಸಕ್ಕೆ...
ನಿಮ್ಮ ಕನಸಿಗೆ
ನಿಮ್ಮ ಮುದ್ದಿಗೆ...
ನಿಮ್ಮ ಮಮತೆಗೆ..ನೀವೇ ಹೆಸರಿಡಿ...

ಒಂದು ಸಂಭ್ರಮವನ್ನು ಸುಂದರ ಕವನದಲ್ಲಿ ಚಂದವಾಗಿ ಬಣ್ಣಿಸಿದ್ದೀರಿ...

ಜೈ ಹೋ......

Subrahmanya said...

ಪುತ್ರ ಜನನಕಾಲೇ ಪುತ್ರನಾಮ ಸ್ಮರಣೇ ..ಜೈ..ಜೈ..ಸೀತಾರಾಮ್ :-).

ಹೃತ್ಪೂರ್ವಕ ಶುಭ ಹಾರೈಕೆಗಳು.

ದಿನಕರ ಮೊಗೇರ said...

ಸೀತಾರಾಮ್ ಸರ್,
ನಿಮ್ಮ ಕುಟುಂಬದ ಸಂತೋಷದಲ್ಲಿ ನಾವೂ ಭಾಗಿಗಳು..... ನಿಮ್ಮ ಮಗನ ಹೆಸರನ್ನು ನಿಮ್ಮ ಕುಟುಂಬದಲ್ಲಿ ಯೋಚಿಸಿ ಇಡಿ...... ಸಂತೋಷದಿಂದ ಇರಿ ಸರ್...

Dr.D.T.Krishna Murthy. said...

ಹೌದು ಸರ್ ,ಮಗನಿಗೊಂದು ಹೆಸರಿಟ್ಟುಬಿಡಿ ಬೇಗ.

sunaath said...

ಸೀತಾರಾಮರೆ,
ಶುಭಾಶಯಗಳು. ಪುತ್ರಜನನ ಸಂಭ್ರಮವನ್ನು ಕವನರೂಪದಲ್ಲಿ ಆಚರಿಸುತ್ತಿರುವದು ಸೊಗಸಾಗಿದೆ.

ಸುಮ said...

cuuuuute baby ...congrats sitaram sir

ಅನಂತ್ ರಾಜ್ said...

ಅಭಿನ೦ದನೆಗಳು ಭಡ್ತಿ ಪಡೆದುದಕ್ಕೆ.. ಸೀತಾರಾ೦ ಸರ್.
ಮಗು ಮುದ್ದಾಗಿದೆ. ಶುಭಾಶಯಗಳು.

ಅನ೦ತ್

ತೇಜಸ್ವಿನಿ ಹೆಗಡೆ said...

ಮಗು ಮುದ್ದಾಗಿದೆ. ಸುಂದರ ಹೆಸರನ್ನೂ ಬೇಗ ಇಟ್ಟುಬಿಡಿ..ನಮಗೂ ತಿಳಿಸಿಬಿಡಿ.... :)

ಗೌತಮ್ ಹೆಗಡೆ said...

ಸರ್ ಕಂಗ್ರಾಟ್ಸ್ :)

shivu.k said...

sir,

muddAda maguvide muddada hesariduva munna avana muddada bavishyakke takkantha hesaridi...

congragulation!

umesh desai said...

ಸೀತಾರಾಮ್ ಕಂಗ್ರಾಟ್ಸ
ಹೆಸರು ಇಟ್ಟ ಮೇಲೆ ತಿಳಸ್ರಿ

ಮನಮುಕ್ತಾ said...

ಸೀತಾರಾಮ್ ಅವರೆ,
ಅಭಿನ೦ದನೆಗಳು!
ಮುದ್ದಾಗಿದೆ.. ಸು೦ದರ ಮಗು..
ಮಿನುಗುತ್ತಿರಲಿ ಸದಾ ಮೊಗದಲಿ ಚೆ೦ದದ ನಗು..
ಶುಭಹಾರೈಕೆಗಳು.

Manju M Doddamani said...

ಅಂಕಲ್ ಪಾರ್ಟಿ ಯಾವಾಗ ಕೊಡ್ತೀರ ಹಾ ಹಾ ಹಾ ಹಾ
ಅಭಿನಂದನೆಗಳು ಶುಭವಾಗಲಿ
ಕವನ ಚನ್ನಾಗಿದೆ ನಿಮ್ ಮಗುಗೆ ಲೇಟೆಸ್ಟ್ ಆಗಿ ಹೆಸರು ಇಡಿ.

SATISH N GOWDA said...

ಮಗು ಮುದ್ದಾಗಿದೆ. ಸುಂದರ ಹೆಸರನ್ನೂ ಬೇಗ ಇಟ್ಟುಬಿಡಿ

Gubbachchi Sathish said...

ಹೆಸರೇಬೇಡ!

ಜಲನಯನ said...

ಅಭಿನಂದನೆ ಬಹು ಶುಭಾಷಯಗಳು
ಪುಟ್ಟನ ಪುಟ್ಟ-ಪುಟ್ಟ ಕೈಗಳು ಅಪ್ಪಾ ಎತ್ತಿಕೋ ಎನ್ನುವ ಮುನ್ನ ಕೊಟ್ಟುಬಿಡಿ ಹೆಸರೊಂದನು

ಸವಿಗನಸು said...

ಸೀತಾರಾಮ್ ಸರ್...
ಶುಭಾಷಯಗಳು...
ಸಂಭ್ರಮವನ್ನು ಕವನದಲ್ಲಿ ಸೊಗಸಾಗಿ ಬಣ್ಣಿಸಿದ್ದೀರಿ...

ಮನಸು said...

ಶುಭಾಷಯಗಳು ಸರ್, ಹಾಗೆ ಮಗುವಿನ ಹೆಸರನ್ನು ಬೇಗ ತಿಳಿಸಿ...

ಮನಸಿನಮನೆಯವನು said...

ಚಿಂಟು..
ಮುದ್ದಾದ ಕವನ..

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಶುಭಾಷಯಗಳು ಸರ್...nimma kavanadalli ondu hosatanavidae

V.R.BHAT said...

ತಮ್ಮ ಮಗುವಿನ ಭವಿಷ್ಯ ಉಜ್ವಲವಾಗಲಿ, ಹೃತ್ಪೂರ್ವಕ ಶುಭಾಶಯಗಳು, ನಿಮ್ಮ ಕುಟುಂಬ ಸುಖ, ಸಮೃದ್ಧಿಯಿಂದ ನೂರ್ಕಾಲ ಬಾಳಳೀ ಎಂದು ಹಾರೈಸುತ್ತೇನೆ.

Pradeep Rao said...

ಸಾರ್ ನಿಮ್ಮ ಮುದ್ದು ಕಂದನ ಫೋಟೊ ಕಂಡು ಸಂತೊಷವಾಯಿತು.. ಮೊದಲನೆಯದಾಗಿ ನಿಮಗೆ ಅನಂತ ಹಾರ್ದಿಕ ಶುಭಾಶಯಗಳು. ಕಂದ ನುಡಿದಂತೆ ಇರುವ ಕವನ ಮನ ಗೆಲ್ಲುವಂತಿದೆ.. ಅದಕ್ಕು ಧನ್ಯವಾದಗಳು! ಈ ನಡುವೆ ನನ್ನ blog ಕಡೆ ನೀವು ಬರುವುದು ಮರೆತಂತಿದೆ.. ನಿಮ್ಮ ಅಮೂಲ್ಯ comments ನೋಡಿ ಬಹಳ ದಿನಗಳಾಯ್ತು.. :)

ಮನಸಿನ ಮಾತುಗಳು said...

Congratutalions sir....:-)sweets barli aadashtu beega.. :-)

vedasudhe said...

ಸೊಗಸಾಗಿದೆ.

Ashok.V.Shetty, Kodlady said...

Sitaaram Sir,

Congratss.....Paapu muddagide...sundara hesaridi....Kavana chennagide.......

ಚುಕ್ಕಿಚಿತ್ತಾರ said...

ಅಭಿನ೦ದನೆಗಳು ಸೀತಾರಾ೦ ಸರ್
ಲೇಟಾಗಿ ಹೇಳುತ್ತಿದ್ದೇನೆ.. ಮುದ್ದು ಮಗುವಿಗೆ ಶುಭ ಹಾರೈಕೆಗಳು...

Roopa said...

ಅಭಿನ೦ದನೆಗಳು ಸೀತಾರಾ೦ ಸರ್! ಮುದ್ದು ಮಗುವಿಗೆ ಶುಭ ಹಾರೈಕೆಗಳು...

KalavathiMadhusudan said...

ಮುದ್ದಾದ ಮಗುವಿಗೆ, ಮುದ್ದಾದ ಕವನ ಪ್ರೇರಕನಿಗೆ ಹಾಗು ನಿಮಗೂ ಅಭಿನಂದನೆಗಳು

prabhamani nagaraja said...

ಓಹೋ! ಮುದ್ದಾದ ಕಂದನಿಗೆ ಒಪ್ಪುವ ಕವನ. ನಿಮ್ಮ ಸ೦ಭ್ರಮದಲ್ಲಿ ನಾವೂ ಭಾಗಿ. ಮತ್ತೊಮ್ಮೆ ಕಿಶೋರಾವಸ್ಥೆಗೆ ನಮ್ಮನ್ನು ಸೆಳೆದೊಯ್ಯುತಿದೆ ನಿಮ್ಮ ಪಿತೃ ಸಹಜ ಪ್ರೀತಿ. ಅಭಿನ೦ದನೆಗಳು.