Wednesday, August 25, 2010

ಬ್ಲಾಗಿಗರ ಮಿಲನಕ್ಕೆ ನಾಂದಿಯಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಈ ಸಮಯಾ ಆನಂದಮಯಾ...
ಬ್ಲೊಗರಗಳೆಲ್ಲರ ಮಿಲನದ ಸುಸಮಯಾ...



ಈ ಸಮಯಾ.. ಮೀನ ವಿಜ್ಞಾನಿ.. ಕುವೈಟ್ ನಲ್ಲಿನ ಕನ್ನಡಿಗ ಅಜಾದನ.. ಕವನ ಸಂಕಲನ....ಜಲನಯನ ....
ದುಂಡಿಮದ ದು೦ಡಿರಾಜರಿಂದ ಅನಾವರಣಗೊಂಡು ಲೋಕಾರ್ಪಣವಾದ ದಿನ....
ಬ್ಲಾಗಿಗ.. ಇದು ಕೇವಲ ಜಲನಯನದ ಅನಾವರಣವಲ್ಲ......
ಈ ಸಮಯ ಛಾಯಾಕನ್ನಡಿ ಬ್ಲಾಗಿಗ ಮಿತ್ರ, ದಿನಪತ್ರಿಕೆ ವಿತರಕ, ಹವ್ಯಾಸಿ ಚಾಯಚಿತ್ರಗಾರ ಕೆ.ಶಿವುನ ....
ಎರಡನೇ ಲಲಿತ ಪ್ರಭಂಧ ಸಂಕಲನ "ಗುಬ್ಬಿ ಎಂಜಲು" ಸುಧೀಂದ್ರ ಹಾಲ್ದೋಡ್ಡೇರಿಯವರಿಂದ....
ಲೋಕಾರ್ಪಣವಾದ ದಿನ....


ಮನದಾಳದ ಪ್ರವೀಣನ.... ಮೃದುಮನಸ್ಸಿನ ಸುಗುಣೆಯ..
ಸುಂದರ ನಿರೂಪಣೆಯ ಕಾರ್ಯಕ್ರಮ....


ಈ ಸಮಯಾ... ಬಾಲೆಯಾ ಪ್ರಾರ್ಥನೆಯಲ್ಲಿ ಪ್ರಾರಂಭವಾದ
ಮಧುರ ಬ್ಲಾಗಿಗರ ಮಿಲನದಾ..ದಿನಾ...

ಈ ಸಮಯಾ ದೀಪ ಬೆಳಗಿ ಕಾರ್ಯಕ್ರಮ ಪ್ರಾರಂಭವಾದ ದಿನಾ....


ಈ ಸಮಯಾ.... ಪ್ರೊಫೆಸ್ಸರ್ ಶೇಷಾಶಾಸ್ತ್ರೀ ಯವರ
ಆತ್ಮೀಯ ಉಪಸ್ಥಿತಿಯಲ್ಲಿ....ಬ್ಲಾಗಿಗರು ನಲಿದ ದಿನ....

ಈ ಸಮಯಾ...ಡುಂಡಿಮರ ಚಟಾಕಿ ಸಿಡಿದು
ನಗೆಹೊನಲು ಹರಿದ ದಿನ ......


ಈ ಸಮಯಾ ... ಸುಧೀಂದ್ರರ ಮನದ ಮಾತ ದಿನ .....



ಈ ಸಮಯಾ... ತೆರೆಮರೆ ಹಿಂದೆ ಗಣಕಯಂತ್ರದ ಸೂತ್ರಧಾರಿ
ಸವಿಗನಸಿನ ಮಹೇಶನ ಕೈಚಳಕದ ದಿನ.....

ಈ ಸಮಯಾ...ತೆರೆಮರೆಯಲ್ಲಿ ಪೆನ್ನು ಪೇಪರನ
ಅನಿಲ -ನಾಗರಾಜರ, ಹಳ್ಳಿಹುಡುಗ- ನವೀನನ, ಛಾಯಾಗ್ರಾಹಕ ಉದಯನ, ಮಲ್ಲಿಕಾರ್ಜುನನ
ಶ್ರಮದ ವೈಭವದ ದಿನ.....
ಹತ್ತು ಹಲವು ಛಾಯಾಚಿತ್ರಕಾರ ಮೋಹಕ ಚಿತ್ರಗಳು ಹುಟ್ಟಿದಾ ದಿನ ...
ರಸಮಯ ಕ್ಷಣ ಹಿಡಿದಾದ ದಿನಾ....



ಬರೀ ಇಷ್ಟೇ ಅಲ್ಲಾ ಮಿತ್ರಾ....ಈ ಸಮಯಾ... ಎಲ್ಲರನೂ ಸೇರಿಸಿದ
ದೊಡ್ದತಲೇ -ಗೊಮ್ಮಟೇಶ-ಧೈತ್ಯಕಾಯ-ದೊಡ್ಡ ಹೃದಯ-ಮಗುವ ಮನಸ
ನಿಷ್ಕಲ್ಮಶ ಪ್ರೇಮದ ಸ್ನೇಹಜೀವಿ-ಇಟ್ಟಿಗೆ ಸಿಮೆಂಟಿನ
-ಕಂತ್ರಾಟುದಾರ-ಚಿತ್ರಗ್ರಾಹಕ-ಕವಿಹೃದಯದ ಸಜ್ಜನನ-
ಎಲ್ಲರಳೋ೦ದಾಗುವ ಪ್ರಕಾಶಣ್ಣನ ತೆರೆಮರೆಯ ಪರಿಶ್ರಮ ಸಾರ್ಥವಾದ ದಿನಾ...

ಈ ಸಮಯಾ... 'ಕೊಳಲಿ'ನ ಸಜ್ಜನ ಸರ್ಜನ್ನ ಕೃಷ್ಣಮೂರ್ತಿಯವರ ಮತ್ತು ಶಿವಕುಮಾರರ ಗಾನಸುಧೆಯಲಿ
ಬ್ಲಾಗಿಗರು ಮಿಂದು ನಲಿದ ದಿನಾ....

ಜೊತೆಗೆ ಎಲ್ಲಾ ಬ್ಲಾಗಿಗರು -ಸಕಲಕಲಾಸಂಪನ್ನ ದಿನಕ್ಕೊಂದರ 'ನಮ್ಮೊಡೆನೆಯ ವಿಆರ್ ಬಿ'ಯವರು , ಸದಾ ಮೌನ ಹಸನ್ಮುಖಿ 'ಜೀವನ್ಮುಖಿ'ಯ ಪರಾಂಜಪೆಯವರು, ಗುರುಪ್ರಪಂಚದ ಗುರುರವರು, 'ನಮ್ಮೊಳಗೊಬ್ಬ ಬಾಲು'ರವರು , 'ನಾಭಿ'ಯ ನಾರಾಯಣ ಭಟ್ಟರು, 'ನೀವೇದನೆ'ಯ ಉಮಾಭಟ್ಟರು, 'ಸುಮ್ನೆ ಹೀಗಂದೆ'ಯ ಸುಮನಾ ವೆಂಕಟರು, 'ಓ ಮನಸೇ ನೀನೇಕೆ ಹೀಗೆ'ಯ ಚೇತನಾ ಭಟ್ಟ ದಂಪತಿಯರು, 'ಹನಿಹನಿ'ಯ ದೀಲೀಪ ಹೆಗಡೆಯವರು, 'ನಿಶಾಂತರಂಗ'ದ ನಿಶಾ ದಂಪತಿಯರು, ’ಅಂತರಂಗದ ಮಾತುಗಳ' ಶ್ಯಾಮಲಾರವರು, 'ಅನುರಾಗ'ದ ಮತ್ತು ಗಾದೆಗಳ ರಾಣಿ ಶಶಿ ಜೋಯಿಷರು, 'ಓ ಮನಸೇ ನೀನೇಕೆ ಹೀಗೆ'ಯ ಚೆತನಾರವರು, 'ಚಿತ್ತಾರ'ದ ಪ್ರಗತಿ ಹೆಗಡೆ ದಂಪತಿಗಳು, ’ದೇಸಾಯಿಯವರ ಅಂಬೋಣ'ದ ದೇಸಾಯಿಯವರು, 'ನೆನಪಿನ ಪುಟಗಳ' ಶಿವಪ್ರಕಾಶರು,”ಮೂಕಮನದ ಮಾತಿ’ನ ದಿನಕರ ಮೊಗೇರ ದಂಪತಿಗಳು, ಶಿವಶಂಕರ ವಿಷ್ಣು ಯೆಳವತ್ತಿಯವರು, 'ಶ್ರಾವಣದ ಮಳೆ ಸುರಿಸಿದೆಯಾದರು'ವಿನ ಗೌತಮ ಹೆಗಡೆ ಭಾವಿ ದಂಪತಿಗಳು, ಎಸ್.ಎಸ್.ಕೆ ಕಾವ್ಯನಾಮಧೇಯದ ಶೋಭಾರವರು, 'ಕ್ಷಣ ಚಿಂತನೆ'ಯ ಚಂದ್ರು ರವರು, ನಂಜುಂಡರು, ಮನಸಿನ ಮಾತುಗಳ ದಿವ್ಯಾ, 'ಅನುಭವ ಮಂಟಪ'ದ ಫಾಲಚಂದ್ರರು, 'ನಾನಿಸಾಹ'ದ ಲಕ್ಷ್ಮಣ ಬಿರಾದಾರರು, ಹಿರಿಯ ಬ್ಲಾಗಿಗ ಹೆಬ್ಬಾರರು, 'ನನ್ನದೊ೦ದ್ಮಾತಿ' ಸತ್ಯನಾರಾಯಣರು, 'ಹೇಳಬೇಕೆನಿಸುತಿದೆ'ಯ ಜಯಲಕ್ಷ್ಮಿಯವರು,'ಖುಷಿ- ನಮ್ಮ ಮನೆಯ ದೀಪ’ ದ ಅಶೋಕ ಕೊಡ್ಲಾಡಿಯವರು, ’ಮೌನದ ಪದಗಳ’ ರಾಘುರವರು, ಹಲವಾರು ಬ್ಲಾಗಿಗ ಬಂಧುಗಳು (ಹೆಸರು ನೆನಪಿಡದುದ್ದಕ್ಕೆ ಉಳಿದವರು ಕ್ಷಮಿಸಬೇಕು) ಸೇರಿ ನಕ್ಕು ನಲಿದ ಕ್ಷಣಗಳು ಮರೆಯಲಾರದ ಅನುಭವ.
ಈ ನಡುವೆ ನನಗೆ ನಾರಾಯಣ ಭಟ್ಟ ದಂಪತಿಗಳ ಮತ್ತು ವಿಆರ್.ಭಟ್ಟ ದಂಪತಿಗಳ ಆದರಾತಿತ್ಯದ ಸವಿಯುಣ್ಣುವ ಅವಕಾಶ ದೊರಕಿತು. ದಣಿವಿನ ಅಸ್ವಸ್ಥತೆಯಲ್ಲೂ ಉಮಾ ಭಟ್ಟರ ಆದರಾತಿತ್ಯ ಮರೆಯಲಾಗದ್ದು. ಮನೆಯ ತುಂಬಾ ನೆ೦ಟರಿದ್ದರೂ ನಮ್ಮನ್ನು ಸ್ವಾಗತಿಸಿ, ಆದರಿಸಿ, ಆತಿಥ್ಯ ನೀಡಿ, ಜೊತೆಗೆ ತಮ್ಮ ಸುಮಧುರ ಕಂಠಸಿರಿಯಿಂದ ಮನತಣಿಸಿದ ವಿ.ಆರ್.ಭಟ್ಟ ರ ಶ್ರೀಮತಿಯವರು ಬಹುಮುಖ ಪ್ರತಿಭೆಯವರು.
ಈ ದಂಪತಿ ಜೋಡಿಗಳಿಗೆ ನನ್ನ ಮನಪೂರ್ವಕ ನಮನಗಳು. ಉಮಾಭಟ್ಟ ರ ಕವನ ಸಂಕಲನವೊಂದು (ಸಧ್ಯ ಕೈಪಿಡಿಯಲ್ಲಿದ್ದು ಪ್ರಾದೇಶಿಕವಾಗಿ ಬಹುಮಾನ ಪಡೆದು ಮೆಚ್ಚುಗೆ ಗಳಿಸಿರುವ) ಪ್ರಕಟನೇಯ ಹಾದಿಯಲ್ಲಿದೆ.
ಒಟ್ಟಿನಲ್ಲಿ ಇದು ಮರೆಯದ ಮಧುರ ನೆನಪಿನ ಸಮಾನ ಮನಸ್ಕ ಬ್ಲಾಗಿಗರ ಮಿಲನ. ಇದಕ್ಕೆ ನಾಂದಿಯಾಗಿದ್ದು ಶಿವು-ರವರ ಮತ್ತು ಆಜಾದರ ಪುಸ್ತಕ ಪ್ರಕಟಣೆ. ಈ ಕಾರಣಕ್ಕಾಗಿ ಅವರಿಬ್ಬರನ್ನು ಅಭಿನಂದಿಸುತ್ತಾ, ತುಂತುರು ಪ್ರಕಾಶನವನ್ನ ನೆನೆದು, ಮತ್ತೆಲ್ಲಾ ಸಮಾರಂಭದ ಬೆನ್ನೆಲುಬಾದ ಪ್ರಕಾಶಣ್ಣ ಹಾಗೂ ಅವರ ಅಳಿಯಂದಿರ ತಂಡ (ಮದುವೆಗೆ ಹೆಣ್ಣು ಹುಡುಕುವ ಜವಾಬ್ದಾರಿ ಮಾವನಿಗೆ ಕೊಟ್ಟು) ಮತ್ತು ಮಹೇಶ ದಂಪತಿಗಳನ್ನು ವಂದಿಸುತ್ತಾ ಬರಹವನ್ನ ಮುಕ್ತಾಯಿಸುವೆ. ಎಲ್ಲಾ ಛಾಯಾಚಿತ್ರಕಾರರು ಅದ್ಭುತವಾಗಿ ಚಿತ್ರ ಸೆರೆ ಹಿಡಿದಿದ್ದಾರೆ.

ಹೆಚ್ಚಿನ ಚಿತ್ರಗಳು ನನ್ನ ಕ್ಯಾಮೆರಾದಲ್ಲಿ ಕಂಡಂತೆ ನೋಡಲು ಕ್ಲಿಕ್ಕಿಸಿ:
http://picasaweb.google.co.in/116434280314025211668/Blog?authkey=Gv1sRgCPfxoput2ubJ0wE#


40 comments:

Shashi jois said...

ಸರ್ ನಿಮ್ಮ ಅಭಿಮಾನದ ಲೇಖನ ಓದಿ ತುಂಬಾ ಸಂತೋಷವಾಯಿತು..ಅಷ್ಟು ದೊಡ್ಡ ಬಿರುದಿಗೆ ಅರ್ಹಳಲ್ಲ..ನಿಮ್ಮನ್ನು ಭೇಟಿ ಆಗಿದ್ದು ತುಂಬಾ ಸಂತೋಷವಾಯಿತು..

ದಿನಕರ ಮೊಗೇರ said...

tumbaa khushi kotta dina adu.... tumbaa varshada nantara sakkat majaa patte....nimma nnella meet maadodu... nimma jote samaya kaleyodu tumbaa khushi koDtu sir...

chennaagide nimma birudugalu mattu vivaraNe...

ಮನಮುಕ್ತಾ said...

ಕಾರ್ಯಕ್ರಮದ ಹಾಗು ಭಾಗವಹಿಸಿದವರ ಫೋಟೋಗಳೊ೦ದಿಗೆ ಸ೦ತೊಷದ ಕ್ಷಣಗಳನ್ನು ಹ೦ಚಿ ಕೊ೦ಡಿದ್ದಕ್ಕೆ ಧನ್ಯವಾದಗಳು.

ಅನಂತ್ ರಾಜ್ said...

ಸ೦ತಸದ ಕ್ಷಣಗಳನ್ನು ಹ೦ಚಿಕೊಳ್ಳುತ್ತಾ ಚಿತ್ರಗಳನ್ನೂ ತೋರಿಸಿದ್ದಕ್ಕೆ ವ೦ದನೆಗಳು ಸೀತಾರಾ೦ ಸರ್. ಗೈರುಹಾಜರಿಯಾದವರಿಗೆ ಉತ್ತಮ ಮಾಹಿತಿ ಒದಗಿಸಿದ್ದೀರಿ.

ಶುಭಾಶಯಗಳು
ಅನ೦ತ್

Naveen ಹಳ್ಳಿ ಹುಡುಗ said...

ಸೀತಾರಾಂ ಸರ್ ನೀವು ಬಳ್ಳಾರಿಯಿಂದ ಬಂದು ಇಲ್ಲಿ ದೂಳ್ ಎಬ್ಬಿಸಿದ್ದು ಎಲ್ಲರಿಗು ಖುಷಿಯಾಯಿತು.....

V.R.BHAT said...

Extremely happy, very good pictures, thanks a lot, lets meet again.Jai Ho!

Dr.D.T.Krishna Murthy. said...

ಸೀತಾರಾಮ್ ಸರ್;ಕಾರ್ಯಕ್ರಮ ಮುಗಿದ ಮೇಲೂ ನಿಮ್ಮ ಜೊತೆ ಕಳೆದ ಆತ್ಮೀಯ ಕ್ಷಣಗಳ ಗುಂಗಿನಿಂದ ಇನ್ನೂ ಹೊರಬಂದಿಲ್ಲ.ಬ್ಲಾಗಿನ ಸ್ನೇಹ ಸದಾ ಕಾಲ ಹೀಗೇ ಇರಲಿ.ಧನ್ಯವಾದಗಳು.

balasubramanya said...

ಸೀತಾರಾಂ ಸರ್ ನಿಮ್ಮನ್ನು ನೋಡಿ ಖುಷಿ ಆಯ್ತು .ನಿಮ್ಮ ನಗುಮುಖ ಕಣ್ಣಿಗೆ ಕಟ್ಟಿದಂತಿದೆ.ನೆನಪಿನಲ್ಲಿ ಉಳಿಯುವ ನಿಮ್ಮ ಸ್ವಭಾವ ನನಗೆ ಇಷ್ಟವಾಯಿತು. ನಿಮಗೆ ನನ್ನ ಶುಭ ಕಾಮನೆಗಳು.

AntharangadaMaathugalu said...

ಸೀತಾರಾಮ್ ಸಾರ್..
ನಿಮ್ಮನ್ನು ಭೇಟಿಯಾದದ್ದು ಸಂತಸವಾಯ್ತು. ನಿಮ್ಮ ಲೇಖನ "ಈ ಸಮಯ" ಯಾವಾಗಲೂ ಸ್ಮರಿಸುವಂತಿದೆ... ಆದರೆ ನಾವು ದಂಪತಿಗಳು ಬಂದಿರಲಿಲ್ಲ ಸಾರ್ !! :-)... ನಾನೊಬ್ಬಳೇ ಇದ್ದದ್ದು....

ಶ್ಯಾಮಲ

Narayan Bhat said...

ತಾನಾಗಿಯೇ ಒದಗಿಬಂದ ನಿಮ್ಮ ಸ್ನೇಹ ನಮಗೆ ತುಂಬು ಸಂತಸ ತಂದಿದೆ.

Raghu said...

tumba kushiayitu nimmanella meet madi..yentha dina..nenapina hosa gari sikkisikondanthe..
Nimmava,
Raaghu.

Unknown said...

ಕಾರ್ಯಕ್ರಮಕ್ಕೆ ಬಂದಂಗಾಯ್ತು

Shweta said...

odi,photo nodi tumba kushi aytu ,naanu miss madkonde:(

shridhar said...

chennagide lekhana .. che naanu bega horatu enella mis madkonde .. next time full day irbeku jotege ..

SATISH N GOWDA said...

swetha ravara matige nanu dvanigodisuttene " nanu miss madkonde" olleya karyakrama mattu poorna vivarane nididdakke danyavadagalu ...




SATISH N GOWDA

http://nannavalaloka.blogspot.com

Badarinath Palavalli said...

thanks for visiting my blog sir.

i was in a shoot at kolar, hence i missed this event. so bad for me.

Ashok.V.Shetty, Kodlady said...

ಸೀತಾರಾಂ ಸರ್,

ಕಾರ್ಯಕ್ರಮ ತುಂಬಾನೇ ಚೆನ್ನಾಗಿ ನಡೀತು...ಫೋಟೋಗಳು ತುಂಬಾ ಸುಂದರವಾಗಿವೆ....ನೀವು ನನ್ನನ್ನು ಮರೆತುಬಿಟ್ರಿ ..ನಿಮ್ಮನ್ನೆಲ್ಲ ಭೇಟಿ ಮಾಡಿ ಬಹಳ ಸಂತೋಷ ಆಯಿತು.

ಸುಮ said...

ಸರ್ ಎಲ್ಲರೂ ಕಾರ್ಯಕ್ರಮದ ಬಗ್ಗೆ ಬರೆದು ಹೊಟ್ಟೆ ಉರಿಸುತ್ತಿದ್ದೀರಿ...ಅದರೂ ಚೆನ್ನಗಿ ನಡೆದದ್ದು ಕೇಳಿ ಸಂತೋಷವಾಯಿತು.

shivu.k said...

ಸೀತಾರಾಂ ಸರ್,

ಮೊದಲು ಚಿತ್ರಗಳ ಜೊತೆ ಕವನ. ನಂತರ ಒಂದು ಗದ್ಯ. ಕಾರ್ಯಕ್ರಮಕ್ಕೆ ಬಂದ ಎಲ್ಲಾ ಬ್ಲಾಗಿಗರ ಹೆಸರು ಮತ್ತು ಅವರ ಬ್ಲಾಗುಗಳನ್ನು ಇಷ್ಟು ಚೆನ್ನಾಗಿ ನೆನಪಿಟ್ಟುಕೊಂಡಿರುವುದಕ್ಕೆ ನಿಮಗೆ ಹ್ಯಾಟ್ಸಪ್! ಮತ್ತೆ ನೀವು ನಾರಾಯಣ ಭಟ್ಟರ ಮನೆಗೆ ಹೋದ್ರಿ. ನಾವು ಒಟ್ಟಾಗಿ ಒಂದು ಸುಂದರ ಜಾಗದಲ್ಲಿ ಊಟ ಮಾಡಿದೆವು. ಊಟ ಮಾತ್ರ ಅದ್ಭುತವಾಗಿತ್ತು. ಜಾಗ ಮಾತ್ರ ಯಾರಿಗೂ ಹೇಳಬೇಡಿ ಎಂದು ಹೇಳಿದ್ದೇವೆ. ಈ ವಾರದ ಕೊನೆಯಲ್ಲಿ ಉಳಿದವರಿಗೂ ಹೋಗಬೇಕೆನಿಸಿದರೆ ಆ ಸ್ಥಳವನ್ನು ಹೇಳುತ್ತೇವೆ.
ನೀವು ಅಷ್ಟು ದೂರದಿಂದ ನಮ್ಮ ಕಾರ್ಯಕ್ರಮಕ್ಕೆ ಪ್ರೀತಿ ಮತ್ತು ಅಭಿಮಾನದಿಂದ ಬಂದಿದ್ದು ನನಗಂತೂ ತುಂಬ ಖುಷಿ.

ಸೀತಾರಾಮ. ಕೆ. / SITARAM.K said...

-ತಮ್ಮ ಬರಹಗಳು ಮತ್ತು ಗಾದೆಯ ಭ೦ಡಾರ ನನ್ನಿ೦ದ ಹಾಗೇ ಬರೆಸಿರಬಹುದು ಶಶಿ ಮೇಡ೦. ತಮ್ಮೆಲ್ಲರನ್ನು ಭೇಟಿಯಾಗಿದ್ದು ನನಗೂ ಆನ೦ದಮಯ.

-ಬಿರುದುಗಳೆಲ್ಲಾ ಅವರವರವೇ ದಿನಕರರೇ, ನಾನು ಹೆಕ್ಕಿ ಬರೆದಿದ್ದು. ತಮ್ಮ ಅಭಿಮಾನದ ನುಡಿಗೆ ನಮನಗಳು. ನಿಜಕ್ಕೂ ಎಲ್ಲರೂ ಸೇರಿದ್ದು ಸ೦ತಸದ ಸಮಯ. ನಲಿಯಲಿಕ್ಕೆ ಸಮಯ ಅಭಾವವಾಯಿತೇನೋ?

-ತಾವೂ ಇದ್ದಿದ್ದರೆ ಚೆನ್ನಾಗಿರುತ್ತಿತು ಮನಮುಕ್ತಾರವರೇ’ ಈ ನೆವದಿ೦ದಲಾದರೂ ತಮ್ಮನ್ನು ನೋಡಬಹುದಿತ್ತು. ತಮ್ಮ ಚಿತ್ರವು ಇಲ್ಲವಲ್ಲ. ಮು೦ದಿನ ಸರಿ ಬನ್ನಿ.ಅನಿಸಿಕೆಗೆ ನಮನಗಳು.

-ಅನ೦ತರಾಜರೇ ತಾವು ಇದ್ದಿದ್ದರೆ ಕಾವ್ಯ ಇನ್ನೂ ಕಳೆಗಟ್ಟಿರೋದು! ಅನಿಸಿಕೆಗೆ ಧನ್ಯವಾದಗಳು.

-ನವೀನ ಧೂಳು ಎಬ್ಬಿಸಿದ್ದು ನಿಮ್ಮ೦ಥಾ ಪಡ್ಡೆ ಹುಡುಗರು.ನಮ್ಮದೇನಿದರೂ DUST SUPPRESSION,
ಧನ್ಯವಾದಗಳು ಒಟ್ಟಿನಲ್ಲಿ ತಮಗೆ ನನ್ನಿ೦ದ ಖುಶಿಯಾಗಿದ್ದಕ್ಕೆ.

-ವಸ೦ತರೇ ಧನ್ಯವಾದಗಳು. ಮು೦ದಿನ ಸಲ ನೀವು ಬನ್ನಿ.

-ತಮ್ಮ ಜೊತೆ ನಲಿದದ್ದೇ ಜೈ ಹೋ ಭಟ್ಟರೇ!

-ಬಹುಶಃ ನಮ್ಮ ಈ ಗು೦ಗು ಮರೆಯದ ಸುಮಧುರ ನೆನಪಾಗಿ ಎದೆಯಲ್ಲಿ ಉಳಿದುಬಿಡುತ್ತೆ ಡಾಕ್ಟ್ರೇ! ತಮ್ಮ ಸಜ್ಜನಿಕೆಗೆ ಮನ ಸೋತಿತು.

-ಬಾಲುರವರೇ ತಮ್ಮ ಛಾಯಚಿತ್ರವಿದ್ದರೂ ಮುಖತಃ ಗುರುತು ಹಿಡಿಯಲಾಗಲಿಲ್ಲ. ಚಿತ್ರಕ್ಕೂ ನಿಮಗೂ ಸ್ವಲ್ಪ ಅ೦ತರವಿತ್ತು. ತಮ್ಮ ಛಾಯಚಿತ್ರ ಮತ್ತು ಲೇಖನ ತು೦ಬಾ ಸುಪರ್. ತಮ್ಮ ಪ್ರೀತಿಗೆ ಧನ್ಯವಾದಗಳು.

-ಶ್ಯಾಮಲಾ ಮೇಡ೦ ತಮ್ಮನ್ನು ಭೇತಿಯಗಿದ್ದು ನಿಜಕ್ಕೂ ಸ೦ತಸದ ಕ್ಷಣ. ಎಲ್ಲ ಬ್ಲಾಗಿಗರನ್ನು ನೀವು ಪ್ರೋತ್ಸಾಹದ ನುಡಿಯಿ೦ದ ಮೆಚ್ಚಿರುವಿರಿ. ಹಾ ತಪ್ಪನ್ನು ತಿದ್ದಿದ್ದೆನೆ.

-ನಾರಾಯಣ ಭಟ್ಟರೇ ತಮ್ಮ೦ತ ಹಿರಿಯರ ಭೇಟಿ ಮತ್ತು ಸಜ್ಜನಿಕೆಯ ಸವಿಯು೦ಡ ನಾವೇ ಭಾಗ್ಯವ೦ತರು.

-ನಮಗೂ ನಿಮ್ಮನ್ನೆಲ್ಲಾ ಭೇಟಿ ಮಾಡಿದ್ದು ಖುಶಿಯ ಕ್ಷಣ ರಘುರವರೇ. ಧನ್ಯವಾದಗಳು.

-ಶ್ರೀಸಮ ರವರೇ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಮತ್ತು ನನ್ನ ಬ್ಲೊಗಗೆ ಸ್ವಾಗತ. ಮಲೆನಾಡಿನ ವೈವಿಧ್ಯತೆಯನ್ನ ತೆರೆದಿಡುವ ತಮ್ಮ ಬ್ಲೊಗ ಓದಲು ಖುಷಿಯಾಗುತ್ತೆ. ಬಾಕೀ ಲೇಖನಗಳನ್ನು ಓದಿ.

-ಶ್ವೇತಾರವರೇ ಮು೦ದಿನ ಕೂಟದಲ್ಲಿ ಮರೆಯದೇ ಪಾಲ್ಗೊಳ್ಳಿ. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

-ಶ್ರೀಧರರೇ ತಾವು ಹೊರಡುವ ಗಡಿಬಿಡಿಯಲ್ಲಿದ್ದರಿ೦ದ ಹೆಚ್ಚು ಮಾತನಾಡಲಾಗಲಿಲ್ಲ. ಇನ್ನೊಮ್ಮೆ ಚೆನ್ನಾಗಿ ಹರಟುವಾ.. ಧನ್ಯವಾದಗಳು.

-ಸತೀಶ ರವರೇ ಮು೦ದಿನ ಸರ್ತಿ ಮಿಸ್ ಮಾಡಿಕೊಳ್ಳಬಾರದೆ೦ದು ತಾವು ನಿಶ್ಚಯಿಸಿದ ಹಾಗಿದೆ ಅಲ್ಲವಾ.. ಖುಷಿಪಟ್ಟಿದ್ದಕ್ಕೇ ಧನ್ಯವಾದಗಳು.

-ಬದರೀನಾಥರೇ ತಾವಿದ್ದಿದ್ದರೇ ಟಿವಿ-೯ ನಲ್ಲಿ ಬ೦ದಿರೋದು. ತಮ್ಮ ಅಭಿಮಾನಕ್ಕೆ ಧನ್ಯವಾದಗಳು. ಮು೦ದಿನ ಸರಿ ಇಲ್ಲೇ ಶೂಟ್ ಮಾಡಿ..

-ಮು೦ಬಯಿಯಿ೦ದ ಬ೦ದ ಅಶೋಕ ಕೊಡ್ಲಾಡಿಯವರೇ ಕ್ಷಮಿಸಬೇಕು ತಮ್ಮನ್ನು ಮರೆತಿದ್ದಕ್ಕೆ. ಅ೦ದು ಅಲ್ಲಿ ಏಕಾಏಕಿ ಹೊಡೆದ ಮಳೆ ಹನಿ-ಹನಿಯನ್ನು ಲೆಕ್ಕಕ್ಕಿಡುವದು ನನ್ನಿ೦ದಾಗದು ಆದರೆ ಮಳೆಯ ಮಧುರಾನುಭವದ ಹಿ೦ದೆ ಹನಿ-ಹನಿಯೂ ಸೇರಿದೆ. ತಮ್ಮ ಪ್ರೀತಿಗೆ ನಮನಗಳು.

ಸೀತಾರಾಮ. ಕೆ. / SITARAM.K said...

-ಸುಮಾರವರೇ ಎಲ್ಲ ಬ್ಲಾಗಿಗರು ಮನದಲ್ಲಿದ್ದರು. ತಾವು ಇದ್ದಿರಿ! ಅನಿಸಿಕೆಗೆ ಧನ್ಯವಾದಗಳು.

-ಶಿವೂರವರೇ ನಮ್ಮೆಲ್ಲರ ಭೇಟಿಗೆ ನಾ೦ದಿ ನಿಮ್ಮ ಮತ್ತು ಅಜಾದರ ಪುಸ್ತಕಗಳ ಬಿಡುಗಡೆ. ಜೊತೆಗೆ ಪ್ರಕಾಶಣ್ಣನ ಆತ್ಮೀಯ ಪ್ರೀತಿ ಮತ್ತು ಒತ್ತಾಸೆ ಜೊತೆಗೆ ಅವರ ಅಳಿಯ೦ದಿರ ಆಗ್ರಹ ಮತ್ತು ಸ೦ಘಟನ ಚಾತುರ್ಯ. ಒತ್ತಿನಲ್ಲಿ ನಿಮ್ಮೆಲ್ಲರಿಗೂ ಧನ್ಯವಾದಗಳು.

Ittigecement said...

ಸೀತಾರಾಮ್ ಸರ್..

ಆ ದಿನ ಅಲ್ಲಿ ಸೇರಿದ ಎಲ್ಲರ ಮನಸ್ಥಿತಿಯೇ ಹಾಗಿತ್ತು..
ಎಲ್ಲರಿಗೂ ಗೆಳೆಯರನ್ನೆಲ್ಲ ನೋಡುವ ಕಾತುರ..
ಸಂತೋಷ, ಸಂಭ್ರಮವಿತ್ತು..

ನಿಜಕ್ಕೂ ಅದೊಂದು ಮರೆಯಲಾಗದ ಘಟನೆ..

ಜೈ ಹೋ ಬ್ಲಾಗರ್ಸ್... !!

Subrahmanya said...

ಚಿತ್ರಗಳನ್ನು ನೋಡಿ ಸಂತೋಷವಾಯ್ತು. ಎಲ್ಲರ ಮಿಲನಕ್ಕೆ ನಾಂದಿಯಾದ ಈ ಕಾರ್ಯಕ್ರಮ ಬ್ಲಾಗಿಗರ ಸ್ನೇಹವನ್ನು ವೃಧ್ದಿಸಲಿ.

ಮನಸಿನಮನೆಯವನು said...

ಚಿತ್ರಗಳ ಸಮೇತ ಚೆನ್ನಾಗಿ ವಿವರಿಸಿದ್ದೀರಿ..

PARAANJAPE K.N. said...

ಸೀತಾರಾಂ ಜೀ
ನಿಮ್ಮ ಬ್ಲಾಗ್ ನಲ್ಲಿ ಮೊನ್ನೆಯ ಕಾರ್ಯಕ್ರಮದ ಸಚಿತ್ರ ವರ್ಣನೆ ಕೊಟ್ಟಿದೀರಿ, ತು೦ಬಾ ಚೆನಾಗಿದೆ.

Manju M Doddamani said...

ಸರ್ ನಾನು ಬಂದಿದ್ದೆ ಪ್ರೊಗ್ರಾಮ್ ಗೆ ತುಂಬಾ ಚನ್ನಾಗಿತ್ತು :)

ಶಿವರಾಮ ಭಟ್ said...

ಸೀತಾರಾಮ್ ಸರ್,
ಕನ್ನಡ ಜಾಲಲೋಕದ ವಿದ್ವಜ್ಜನರೆಲ್ಲ ಒಂದೆಡೆ ಸೇರಿ ಕೃತಿ ಲೋಕಾರ್ಪಣೆ ಮಾಡಿದ್ದನ್ನ ಯಥಾವತ್ತಾಗಿ ವರ್ಣಿಸಿದ್ದೀರಿ.
ನಿಮ್ಮೆಲ್ಲರ ಉತ್ಸಾಹ ಸ್ನೇಹ ಶ್ರಮ ಮತ್ತು ಕಳಕಳಿ ಮೆಚ್ಚುವಂಥದ್ದು. ಕನ್ನಡ ಸಾರಸ್ವತ ಲೋಕದ ಭವಿಷ್ಯದ ಕುವೆಂಪು, ಕಾರಂತರೊಬ್ಬರು ನಿಮ್ಮ ನಡುವೆ ಇರಬಹುದೇನೋ!.
ಸಂಗ್ರಹಾರ್ಹ ಭಾವಚಿತ್ರಗಳು.
ಶಿವರಾಂ

ಸಾಗರಿ.. said...

ಅಜಾದ ಅವರಿಗೂ ಶಿವು ಅವರಿಗು ಅಭಿನಂದಿಸುತ್ತ, ಅದನ್ನು ಸುಂದರವಾಗಿ ಸಚಿತ್ರದೊಂದಿಗೆ ವರ್ಣಿಸಿದ ತಮಗೂ ಧನ್ಯವಾದಗಳು..

*ಚುಕ್ಕಿ* said...

ನಿಮ್ಮ ಸಮ್ಬ್ರಮದ ಕ್ಷಣಗಳನ್ನು ನೆನೆಸಿಕೊಂಡು ಮನ ಸ್ನೇಹದ ಕಡಲಲ್ಲಿ ಮಿಂದೆದ್ದಿತು. ಬ್ಲಾಗ್ ಸ್ನೇಹ ಲೋಕವೇ ಅಂತದ್ದು. ಮುಂದೊಂದು ದಿನ ಎಲ್ಲಾ ಸೇರುವಾಗ ಈ ಗೆಳೆಯನ ನೆನಪಿಟ್ಟಿರಿ. ಬಹಳ ಖುಷಿ ಯಾಯಿತು ನಿಮ್ಮ ಸ್ನೇಹ ಕೂಟದ ಬೆಟ್ಟಿಯನ್ನು ನಮಗೆ ಉಣ ಬಡಿಸಿದುದು.

ಶುಭ ಹಾರೈಕೆಗಳು

ಶಿವಪ್ರಕಾಶ್ said...

Good Report sir :)

Badarinath Palavalli said...

thanks for visiting my blog sir

ಕ್ಷಣ... ಚಿಂತನೆ... said...

ಸರ್‍, ನಿಮ್ಮನ್ನೆಲ್ಲ ಆ ದಿನ ಭೇಟಿಯಾಗಿದ್ದು ಖುಷಿಯ ವಿಚಾರ.

ಧನ್ಯವಾದಗಳು.

ಸಾಗರದಾಚೆಯ ಇಂಚರ said...

sir late agi bandiddakke baybedi

tumbaa chennagi agittu anisutte

nice photos

ಸೀತಾರಾಮ. ಕೆ. / SITARAM.K said...

-@ ಪ್ರಕಾಶಣ್ಣ ತಮ್ಮ ಹುರುಪು ಅಂತಹುದು ಎಲ್ಲರನ್ನು ಸೆಳೆದು ಸೇರಿಸುವ ತಂತ್ರ! ನಿಜವಾಗಿಯೂ ಅದು ಸಂತಸದ ಸಮಯ....ತಡವಾಗಿಯಾದರೂ ಮರೆಯದ ಬ್ಲಾಗ್ ಭೇಟಿಗೆ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು.

-@ ಸುಬ್ರಮಣ್ಯರೆ ತಮ್ಮನ್ನು ನೋಡುವ ಅವಕಾಶ ಈ ಸರ್ತಿ ತಪ್ಪಿತ್ತು. ಮುಂದಿನ ಕೂಟದಲ್ಲಿ ಭೇಟಿಯಾಗುವಾ! ಪ್ರತಿಕ್ರಿಯೆಗೆ ಧನ್ಯವಾದಗಳು.

-@ ಕತ್ತಲೆ ಮನೆಯವರೇ ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮನ್ನು ಭೇಟಿ ಮಾಡುವ ಸುಯೋಗ ಮುಂದಿನ ಮಿಲನ ಕೂಟದಲ್ಲಾಗಲಿ.

-@ ಪರಾಂಜಪೆಯವರೆ ಬಹಳ ತಡಮಾಡಿ ಬಂದಿದ್ದಿರಾ! ಕಪ್ಪ ಕಟ್ಟಬೇಕು ಧನ್ಯವಾದಗಳು ಪ್ರತಿಕ್ರಿಯೆಗೆ.

-@ ದೊಡ್ಡಮನಿ ಮಂಜುನಾಥರವರೇ ತಾವು ಬಂದಿದ್ದು ನಮಗಾರಿಗೂ ಗೊತ್ತೇ ಆಗಲಿಲ್ಲ! ಪರಿಚಯ ಮಾಡಿಕೊಂಡು ಮಾತಾಡಬೇಕಿತ್ತು. ನನಗೆ ಗುರುತು ಸಿಕ್ಕಿದ್ದರೆ ಮಾತಡಿರೋನು. ಅಭಿಪ್ರಾಯಕ್ಕೆ ಧನ್ಯವಾದಗಳು.

-@ ಶಿವರಾಮ ಭಟ್ಟರೇ ದುರದ ದೇಶದಲ್ಲಿದ್ದು ತಮ್ಮ ಭಾಷಾಭಿಮಾನ ಮತ್ತು ಸಾಹಿತ್ಯ ಸೇವೆ ಹಾಗೂ ಓದು ಮೆಚ್ಚಬೇಕಾದದ್ದೇ. ತಮ್ಮ ಶುಭನುಡಿಗೆ ವಿನಮ್ರ ವಂದನೆಗಳು. ಸಮಾನಮನಸ್ಕರ ಭೇಟಿ ಆನಂದವನ್ನು ತಂದ ಕ್ಷಣ ಅದು. ತಾವು ಭಾರತಕ್ಕೆ ಬಂದಾಗ ಭೇಟಿಯಾಗೋಣ.

-@ ಸಾಗರಿಯವರೇ ತಮ್ಮ ಅನಿಸಿಕೆಗೆ ಧನ್ಯವಾದಗಳು.ತಮ್ಮ ಭೇಟಿಗೂ ಕಾಯುತ್ತಿದ್ದೇವೆ.

-@ ಚುಕ್ಕಿಯವರೇ ( ಶ್ರೀ ಲಿಂಗೇಶ ಹುಣಸುರು ಎಂದುಕೊಳ್ಳುತ್ತೇನೆ ) ನನ್ನ ಬ್ಲಾಗ್ ಗೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ತಮ್ಮ ಲೇಖನಗಳು ಚೆನ್ನಾಗಿವೆ.
ಬಿಡುವಾದಾಗ ಹಿಂದಿನ ಲೇಖನ ಓದಿ . ಮುಂದಿನ ಸಲ ತಮ್ಮನ್ನು ಜೊತೆ ಸೇರಿಸಲು ಮರೆಯುವದಿಲ್ಲ.

-@ ಓಹೋ ಶಿವಪ್ರಕಾಶರವರು ಕಡೆಗೂ ಬಂದು ಪ್ರತಿಕ್ರಿಯಿಸಿದ್ದಿರಲ್ಲಾ ಧನ್ಯವಾದಗಳು.

-@ ಬದರಿನಾಥರವರೆ ತಮ್ಮ ಲೇಖನಗಳು ನಮ್ಮನ್ನು ಹುಡುಕಿಸಿಕೊಂಡು ತಮ್ಮ ಬ್ಲಾಗ್-ಗೆ ಬರುವ ಹಾಗೆ ಇರುವದರಿಂದ ಅದರ ಭೇಟಿ ನಮ್ಮ ಸಂತೋಷ.
-ಕ್ಷಣ ಚಿಂತನೆಯ ಬಾಳುರವರೆ ತಮ್ಮನ್ನೆಲ್ಲಾ ಭೇಟಿಯಾಗಿದ್ದು ನನಗೆ ಮರೆಯದ ಸಿಹಿ ಕ್ಷಣ. ಧನ್ಯವಾದಗಳು.

ದೀಪಸ್ಮಿತಾ said...

ಊರಲ್ಲಿಲ್ಲದ ಕಾರಣದಿಂದ ನನಗೆ ಬ್ಲಾಗಿಗರ ಕೂಟಕ್ಕೆ ಬರಲಾಗಲಿಲ್ಲ. ಇಂಥಾ ಅವಕಾಶ ತಪ್ಪಿ ಹೋಗಿದ್ದಕ್ಕೆ ತುಂಬಾ ಬೇಸರವಾಗುತ್ತಿದೆ. ಮುಂದೆ ಇಂಥ ಕಾರ್ಯಕ್ರಮವಿದ್ದರೆ ಖಂಡಿತ ತಪ್ಪಿಸುವುದಿಲ್ಲ

Snow White said...

karyakramada bagge hanchikondidakke tumba dhanyavadagalu sir..:)naa nu miss madkonde :(

© ಹರೀಶ್ said...

ಕಾರ್ಯಕ್ರಮದ ಪೋಟೊಗಳು ಅದರ ವಿವರಣೆ ತುಂಬಾ ಚನ್ನಾಗಿದೆ. ಬ್ಲಾಗಿಗರ ಕೂಟದ ಸಂಖ್ಯೆ ನಿನ್ನಷ್ಟು ವೃಧ್ದಿಸಲಿ.

prabhamani nagaraja said...

ಸಚಿತ್ರ ಲೇಖನವನ್ನು ಬಹಳ ಚೆನ್ನಾಗಿ ಬರೆದಿದ್ದೀರಿ ಸೀತಾರಾಂರವರೇ. ಅಭಿನ0ದನೆಗಳು. ಮು೦ದಿನ ಸಾರಿ ಇ೦ಥಾ ಒ೦ದು ಅವಕಾಶ ಸಿಕ್ಕಿದರೆ ಖ೦ಡಿತ ತಪ್ಪಿಸಿಕೊಳ್ಳುವುದಿಲ್ಲ.ನನ್ನ ಬ್ಲಾಗ್ ಗೆ ನೀವು ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿರಿ.

Soumya. Bhagwat said...

really i missed it.. :( chennagi barediddeeri sir.. :)

vedasudhe said...

ಶ್ರೀ ಸೀತಾರಾಮ್,
ಹಲವು ದಿನಗಳ ನಂತರ ಹುಡುಕಿ ಬಂದಿದ್ದೇನೆ.ನಾನೂ ಅಂದು ಕಾರ್ಯಕ್ರಮದಲ್ಲಿದ್ದೆ-ಎಲೆಮರೆಕಾಯಿಯಂತೆ. ನಿಮ್ಮ ಭಾವತುಂಬಿದ ಬರಹ ಚೆನ್ನಾಗಿದೆ.ಇತ್ತೀಚೆಗೆ ನಿಮ್ಮ ಸ್ಪೂರ್ತಿಯ ಮಾತುಗಳು ವೇದಸುಧೆಯಲ್ಲಿ ಕಾಣ್ತಾ ಇಲ್ಲವಲ್ಲಾ! ಬನ್ನಿ, ನಿಮ್ಮ ಮಾತುಗಳು ನಮಗೆ ಪ್ರೇರಕ. ನಿಮ್ಮ ಬಿಚ್ಚುಮಾತಿನ ಸಲಹೆಗಳೂ ಬೇಕು. ಬರುವ ಫೆಬ್ರವರಿ ಮೊದಲವಾರದಲ್ಲಿ ವೇದಸುಧೆಯ ವಾರ್ಷಿಕೋತ್ಸವವನ್ನು ಹಾಸನದಲ್ಲಿ ಮಾಡುವ ಚಿಂತನೆ ನಡೆದಿದೆ. ನಿಮ್ಮಂತವರು ಬರಬೇಕು.