ಅಲ್ಲಿ..... ಇಲ್ಲಿ..... ಅದು.... ಇದು...
ಮನದ ಕೊಸರು...ಹಾರಿ.... ಹೀರಿ...
ಮುದದ ಕೀರೀಟ... ಮೆರೆದ ಮನ....
ಮುರಿದ ಕಿರೀಟ .... ಮುದುರಿ ಮನ....
ಕೆದರಿ ಕೋಪ..... ಅರಿಯಲ್ಲಿ ತಾಪ...
ಅರಿಯ ಅರುಹು....ಸಮರ್ಥನೆಗೆ ಕೂಗು....
ಕೂಗಿನಲ್ಲಿ ಮರೆತ ಜ್ಞಾನ ....
ಅಂತರ್ಯದಲ್ಲಿ ಕದನ ಸದನ.....
ಹಿಂದೆ ಹೊಗಳು ಭಟ್ಟರು.....
ಮುಂದೆ ತೆಗಳೋ ಭಟರು......
ಹುಮ್ಮಸ್ಸಿನ ಹಾರಾಟ....
ಮಾತಿನಲ್ಲೇ ಸೆಣಸಾಟ...
ಕಳೆದ ಶಬ್ದ..... ಬಿಟ್ಟ ಬಾಣ...
ಅರಿಯ ಶವ... ನನ್ನ ಭಾವ....
ಕೊಲೆಗಾರನ ಹಣೆಪಟ್ಟ....
ಮರೆತ ಜ್ಞಾನ.....
ಮೆರೆದ ಅಜ್ಞಾನ...
ಕದನದಲ್ಲಿ ಸತ್ತ ನನ್ನ ಆಂತರ್ಯದ ಜನ...
ಹಿಂದೆ ತಿರುಗೆ ಎಲ್ಲ ಶೂನ್ಯ....
ಹೊಗಳಿಕೆಯ ಹೆಗಲಲ್ಲಿ ಶವದ ಮೆರವಣಿಗೆ...
ತೆಗಳಿಕೆಗೆ ಕೋಪದಲ್ಲಿನ ಧಾವಂತ....
ಭಾಷೆ-ಮಾನವತೆಯಲ್ಲಿ ಮನವೇ ಅಸ್ತ೦ಗತ ....
ಪರ-ವಿರೋಧದ ಹೋರಾಟದಲ್ಲಿ...
ಕಳೆದು ಹೋದ ನಮ್ಮ ಭಾಷೆ -ಭವಣೆ....
ಕೊನೆಯಲ್ಲಿ ಅವನಿಗೂ... ನನಗೂ...
ಇಲ್ಲದ ಭೇದ...
ಹಾಗಾದ ಮೇಲೆ ಅರ್ಥ ಕಳೆದುಕೊಂಡ ಕದನ...
ಮುರಿದು ಹೋದ ಮನಗಳ ಮಸಣ...
ಅಂತರ್ಯದಲ್ಲಿ ಸಾದಿಸೆ ಭುದ್ಧ....
ಜನನ-ಮರಣಕ್ಕೆ ದಿವ್ಯ ಮೌನ....
ಶುನಕದ ಬೊಗಳಿಕೆ...
ದಿವ್ಯ ನಿರ್ಲಕ್ಷದಲ್ಲಿ ಕುಂಜರದ ನಡೆ...
ನಡೆ.. ದ್ಯಾನದೆಡೆಗೆ..
ನಿರ್ಲೀಪ್ತತೆಯಲ್ಲಿ...
ಚಿರನೂತನ ನಿರಂತರ ಚೇತನದ ಕಡೆಗೆ...
ಮನದ ಕೊಸರು...ಹಾರಿ.... ಹೀರಿ...
ಮುದದ ಕೀರೀಟ... ಮೆರೆದ ಮನ....
ಮುರಿದ ಕಿರೀಟ .... ಮುದುರಿ ಮನ....
ಕೆದರಿ ಕೋಪ..... ಅರಿಯಲ್ಲಿ ತಾಪ...
ಅರಿಯ ಅರುಹು....ಸಮರ್ಥನೆಗೆ ಕೂಗು....
ಕೂಗಿನಲ್ಲಿ ಮರೆತ ಜ್ಞಾನ ....
ಅಂತರ್ಯದಲ್ಲಿ ಕದನ ಸದನ.....
ಹಿಂದೆ ಹೊಗಳು ಭಟ್ಟರು.....
ಮುಂದೆ ತೆಗಳೋ ಭಟರು......
ಹುಮ್ಮಸ್ಸಿನ ಹಾರಾಟ....
ಮಾತಿನಲ್ಲೇ ಸೆಣಸಾಟ...
ಕಳೆದ ಶಬ್ದ..... ಬಿಟ್ಟ ಬಾಣ...
ಅರಿಯ ಶವ... ನನ್ನ ಭಾವ....
ಕೊಲೆಗಾರನ ಹಣೆಪಟ್ಟ....
ಮರೆತ ಜ್ಞಾನ.....
ಮೆರೆದ ಅಜ್ಞಾನ...
ಕದನದಲ್ಲಿ ಸತ್ತ ನನ್ನ ಆಂತರ್ಯದ ಜನ...
ಹಿಂದೆ ತಿರುಗೆ ಎಲ್ಲ ಶೂನ್ಯ....
ಹೊಗಳಿಕೆಯ ಹೆಗಲಲ್ಲಿ ಶವದ ಮೆರವಣಿಗೆ...
ತೆಗಳಿಕೆಗೆ ಕೋಪದಲ್ಲಿನ ಧಾವಂತ....
ಭಾಷೆ-ಮಾನವತೆಯಲ್ಲಿ ಮನವೇ ಅಸ್ತ೦ಗತ ....
ಪರ-ವಿರೋಧದ ಹೋರಾಟದಲ್ಲಿ...
ಕಳೆದು ಹೋದ ನಮ್ಮ ಭಾಷೆ -ಭವಣೆ....
ಕೊನೆಯಲ್ಲಿ ಅವನಿಗೂ... ನನಗೂ...
ಇಲ್ಲದ ಭೇದ...
ಹಾಗಾದ ಮೇಲೆ ಅರ್ಥ ಕಳೆದುಕೊಂಡ ಕದನ...
ಮುರಿದು ಹೋದ ಮನಗಳ ಮಸಣ...
ಅಂತರ್ಯದಲ್ಲಿ ಸಾದಿಸೆ ಭುದ್ಧ....
ಜನನ-ಮರಣಕ್ಕೆ ದಿವ್ಯ ಮೌನ....
ಶುನಕದ ಬೊಗಳಿಕೆ...
ದಿವ್ಯ ನಿರ್ಲಕ್ಷದಲ್ಲಿ ಕುಂಜರದ ನಡೆ...
ನಡೆ.. ದ್ಯಾನದೆಡೆಗೆ..
ನಿರ್ಲೀಪ್ತತೆಯಲ್ಲಿ...
ಚಿರನೂತನ ನಿರಂತರ ಚೇತನದ ಕಡೆಗೆ...
15 comments:
!! ಅರ್ಥಪೂರ್ಣವಾಗಿದೆ. ಎಲ್ಲಿಗೋ ಬಾಣ ಬಿಟ್ಟಂತೆಯೂ ಇದೆ.
ತತ್ವ ಪದ ಸೊಗಸಾಗಿತ್ತು ಸಾರ್.
ನಮ್ಮೊಳಗೆ ನಾವು ಶುದ್ಧವಾಗದೆ ಹೊರಗೆಲ್ಲ ಅಸಹನೆ ಅಂದುಕೊಂಡರೆ ಸಲ್ಲ. ನಿಮ್ಮ ತತ್ವ ನಮ್ಮ ಮನೋಶುದ್ಧಕ.
ಒಂದು ಒಳ್ಳೆಯ ಅರ್ಥಪೂರ್ಣ ಕವಿತೆ ,
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಸುಂದರ ಕವನ!ಅಭಿನಂದನೆಗಳು.
ಸೀತಾರಾಂ ಸರ್,
ಅರ್ಥಪೂರ್ಣ ಕವನ, ನಮ್ಮೊಳಗಿನ ಅಂಧಕಾರವನ್ನು ಒರೆಗೆ ಹಚ್ಚಿ ನೋಡಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ನಿಮ್ಮ ಕವನ ಸೃಷ್ಟಿ ಮಾಡುವುದರಲ್ಲಿ ಸಂಶಯವಿಲ್ಲ.
ಇಷ್ಟವಾಯ್ತು.
ಅರ್ಥಪೂರ್ಣ ಕವಿತೆ
ತುಂಬಾ ಸಮಯವಾಯಿತು ನೀವು ಬರೆಯದೆ ಸರ್.:) ಚೆನ್ನಾಗಿದೆ..
ನಿಮ್ಮ ಬಿಡುವಿನಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.
http://ishwaratatva.blogspot.in/2012/02/blog-post.html
ಸೀತಾರಾಮರೆ,
ಚಿಂತನೆಗೆ ಹಚ್ಚುವಂತಹ ಸುಂದರವಾದ ಕವನ. ಅಭಿನಂದನೆಗಳು.
ಸೀತಾರಾಮ್ ಸರ್.....
ತುಂಬಾ ದಿನಗಳ ನಂತರ ನಿಮ್ಮ ಬ್ಲಾಗ್ ನಲ್ಲಿ ಬರಹವೊಂದು ಮೂಡಿ ಬಂದಿದೆ, ಸಂತೋಷದ ವಿಷಯ........ಕವನ ತುಂಬಾ ಅರ್ಥಪೂರ್ಣವಾಗಿದೆ ಸರ್....
ಸರ್,
ಗಾಢಾರ್ಥವನ್ನು ಸೂಕ್ಷ್ಮವಾಗಿ ತಿಳಿಸುವ ಪದಗಳು...ತುಂಬಾ ಚೆನ್ನಾಗಿದೆ..
arthapoornavaada kavana.abhinandanegalu.
ಅರೆರೆ ಏನ್ಸಾ ಇದು ಈ ಪಾಟಿ ಬಿಟ್ರಿ... ವರುಣಾಸ್ರ್ತ ಬಿಟ್ಟಹಾಗೆ... ಪದಗಳು ಬಾಣದ ಮಳೆಯಂತೆ... ಚನ್ನಾಗಿದೆ ನೂತನ ಶೈಲಿಯ ಕವನ.
thumbaa arthapoornavaagi moodida kavithe.thumbaa chennaagide sir.
ಕವನ ಅರಿವಿನ ಹಾದಿಯತ್ತ ಸೆಳೆಯುವ೦ತಿದೆ. ಬಹಳ ದಿನಗಳಾಯಿತು ಸರ್ ನನ್ನ ಬ್ಲಾಗ್ ಗೆ ಬ೦ದು, ಒಮ್ಮೆ ಭೇಟಿ ಕೊಡಿ.
ಕವಿತೆ ಚನ್ನಾಗಿದೆ
Post a Comment