Friday, January 14, 2011

ಮರೀಚಿಕೆಯ ಬೆನ್ನ ಹತ್ತಿ

ಅತ್ತ....ಇತ್ತ ... ಸುತ್ತ.... ಹರಿದು....
ಮನದ ಆಳದಲ್ಲಿ ಮತ್ತ ಬರಿಸಿ......
ಗಿರಿಗಿಟ್ಟಿಯಂತೆ ತಿರುತಿರುಗಿಸಿ.....
ಎತ್ತೋ ಒಯ್ದು ....
ಕಾಣದಂತೆ ....
ಎತ್ತೋ ಸರಿದು....
ಓಡಿ ಹೋದೆ!
ದಾರಿ ಕಾಣದೆ
ಹೆದರಿ ಬೆದರಿ
ಅತ್ತು ಕರೆದು
ಅತ್ತಿತ್ತ ನೋಡುತಿರಲು
ನೀನು ಕಾಣೆ.....

ಬೆನ್ನ ಹತ್ತಿ ದಾರಿ ಹುಡುಕಲೆಂದೇ .....
ಕವಲಿನಲ್ಲಿ ಬಂದು ನಿಂತು .....
ಎತ್ತ ಎತ್ತ ಎಂದು ಕನವರಿಸೆ.....
ಎತ್ತಲಿಂದೋ ಪಕಪಕನೆ
ನಕ್ಕ ಸದ್ದು....

ಹಿಂದೆ ಸರಿಯೇ...
ಮುಂದೆ ಅರಿಯೆ....
ನನ್ನ ಪ್ರಶ್ನೆ
ಇದು ನಿನಗೆ ತರವೇ????

22 comments:

Dr.D.T.Krishna Murthy. said...

ಸುಖವೆಂಬ ಮರೀಚಿಕೆಯ ಬೆನ್ನು ಹತ್ತಿದವರ ಕಥೆಯೂ ಇದೇ ಅಲ್ಲವೇ?

ಚುಕ್ಕಿಚಿತ್ತಾರ said...

chandavide.. mareechikeya bagegina kavite...
bahala dinagala nantara blaagige bandiddeeri

hosavarshada mattu sankramanada shubhaashayagalu.

Narayan Bhat said...

ಕವನ ಚೆನ್ನಾಗಿದೆ..ಮುಂದಿನದನ್ನು ಅರಿಯದಿದ್ದರೂ ಮುಂದೆ ದಾರಿಯಿದೆಯೇ ಎಂಬುದನ್ನು ಬೆನ್ನ ಹತ್ತಿ ಹುಡುಕಲೇಬೇಕಲ್ಲವೇ..

ತೇಜಸ್ವಿನಿ ಹೆಗಡೆ said...

ಭ್ರಮೆಯ ಜೊತೆಗೇ ಇರುವುದು ಈ ಮರೀಚಿಕೆ. ಇಲ್ಲಾ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು!

ಮನಮುಕ್ತಾ said...

Nice one..
Wish you and your family a Happy sankranti.

ದಿನಕರ ಮೊಗೇರ said...

GURI.... idara bennu hattidavara katheyu ide....

chennaagide sir..
nimagu, kuTumbakku habbada shubhaashaya...

balasubramanya said...

ಕವಿತೆ ಓದಿದರೆ ನಾವು ಕೂಡ ಅರಿಯದ ಯಾವುದೋ ಮರೀಚಿಕೆಯ ಬೆನ್ನು ಹತ್ತಿದ್ದೆವೇನೋ ಅನ್ನಿಸುತ್ತದೆ. "ಪ್ರೇಮದ ಕಾಣಿಕೆ" ಚಿತ್ರದ "ಭಾನಿಗೊಂದು ಎಲ್ಲೇ ಎಲ್ಲಿದೆ "ಹಾಡಿನಲ್ಲಿ "ಆಸೆ ಎಂಬ ಬಿಸಿಲು ಕುದುರೆ ಏಕೆ ಎರುವೆ, ಮರಳು ಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ" ಸಾಲುಗಳು ಜ್ಞಾಪಕಕ್ಕೆ ಬರುತ್ತವೆ.ಕವಿತೆ ಚೆನ್ನಾಗಿದೆ.

prabhamani nagaraja said...

ಬಿಸಿಲುಗುದುರೆಯ ಬೆನ್ನು ಹತ್ತಿದ ಅನುಭವ! ಕವನ ಚೆನ್ನಾಗಿದೆ.
ನಿಮಗೆ `ಮಕರ ಸಂಕ್ರಮಣದ ಶುಭಾಶಯಗಳು.' ನನ್ನ ಬ್ಲಾಗ್ ಗೊಮ್ಮೆ ಬನ್ನಿ

shivu.k said...

ಸರ್,

ತುಂಬಾ ದಿನದ ಮೇಲೆ ಒಂದು ಚೆಂದದ ಕವನ ಬರೆದಿದ್ದೀರಿ. ಮುಂದಿನ ದಾರಿ ಗೊತ್ತಿರದಿದ್ದರೂ ಕಾಣದ ಮರೀಚಿಕೆಯ ಬೆನ್ನು ಹತ್ತುವುದು ಮನಷ್ಯನ ಸಹಜಗುಣವಲ್ಲವೇ!

ಓ ಮನಸೇ, ನೀನೇಕೆ ಹೀಗೆ...? said...

ಚೆಂದದ ಕವನ ಸರ್. ನಿಜವೇ...ಸದಾ ಒಂದಾದರ ನಂತರ ಮತ್ತೊಂದು, ಒಟ್ಟಿನಲ್ಲಿ ಯಾವುದೋ ಒಂದನ್ನು ಪಡೆಯುವ ಪ್ರಯತ್ನದಲ್ಲೇ ತೊಡಗಿರುತ್ತೇವಲ್ಲ...ಜೀವನಪೂರ್ತಿ...!!

vedasudhe said...

ಶ್ರೀ ಸೀತಾರಾಮ್ ೩೦.೧.೨೦೧೧ ಕ್ಕೆ ಹಾಸನದಲ್ಲಿ ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಿಮ್ಮನ್ನು ನಿರೀಕ್ಷಿಸುತ್ತೇವೆ.

Subrahmanya said...

Super sir..:)

ವಾಣಿಶ್ರೀ ಭಟ್ said...

chennagide :)

KalavathiMadhusudan said...

marichike ya bennahatti,arthapoornavaada kavana.vandanegalu.nimagu nimma parivaarakku,"sankrantiya shubhaashayagalu".

ಮನಸಿನಮನೆಯವನು said...

..//

Badarinath Palavalli said...

mareechike endare asTE saar.
Your simple writing style is impressive sir.

face book : Palavalli.Badarinath

Ashok.V.Shetty, Kodlady said...

Late aagi comment maadta irodakke sorry...Tumbaa Chennagide...

KalavathiMadhusudan said...

chennaagide sir kavana.

Ittigecement said...

ಸೀತಾರಾಮ್ ಸರ್...

ಇದು ಪ್ರತಿಯೊಬ್ಬರ ಮನದಾಳದ ಮನಸ್ಥಿತಿ...

ಸೊಗಸಾಗಿದೆ ಭಾವಗಳು... ಅರ್ಥಗಳು..

V.R.BHAT said...

ದೆಹಲಿಯಲ್ಲಿರುವ ನಿಮಗೂ
ಕರ್ನಾಟಕದಲ್ಲಿರುವ ನಮಗೂ
ಇರುವ ಏಕೈಕ ಸಂತಸದ ಬೆಸುಗೆ
ಬ್ಲಾಗು,

ಕವನ ಚೆನ್ನಾಗಿದೆ!

ಜಲನಯನ said...

ಸೀತಾರಾಂ ಸರ್ ನಮ್ಮಲ್ಲಿ ಧೂಳ್ಬಿರುಗಾಳಿ ಬಂದು ಧೂಳಿನ ಮೋಡವೇ ಎದ್ದಾಗ ಆದ ಅನುಭವ ನಿಮ್ಮ ಸಾಲುಗಳಿಗೆ ಇಂಬು ಕೊಡುತ್ತವೆ...ಸುಂದರ ಕವನ...

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಮರೀಚಿಕೆಯ ಬೆನ್ನು ಹತ್ತಿ....,
ನಿಜ..
ಭ್ರಮೆಯ ಜೊತೆಗೇ ಇರುವುದು ಈ ಮರೀಚಿಕೆ.

ಕವನ ಚೆನ್ನಾಗಿದೆ..