Friday, August 20, 2010

ಸಮಾವೇಶಗಳು - ಸಾರ್ವಜನಿಕರು



ನಿನ್ನೆ ರಾತ್ರಿ ಗೋವೆಯಿಂದ ಹಿಂದುರಿಗಿ ಬರುತ್ತಾ ಇದ್ದೆ -ನೂರಾರು ಖಾಲಿ ಬಸ್ಸುಗಳು ಬಿಜಾಪುರ-ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ಇತರೇ ಭಾಗದಿಂದ ಹೊಸಪೇಟೆ ಗಡಿ ನುಗ್ಗುತ್ತಾ ಇದ್ದವು. ಯಾಕೆಂದು ಯೋಚಿಸುತ್ತಿದ್ದೆ. ಕೆಲವು ಬಸ್ಸುಗಳ ಮೇಲೆ ಅರೋಗ್ಯ ಶಿಬಿರದ ಫಲಕಗಳಿದ್ದವು. ಆರೋಗ್ಯ ಶಿಬಿರ ಇದೆಯೇನೋ ಅಂದುಕೊಂಡೆ. ಇಡೀ ಹೊಸಪೇಟೆ ಊರಲ್ಲಿ ಎಲ್ಲೆಂದರಲ್ಲಿ ಅಲ್ಲಿ ಬಸ್ಸುಗಳು ನಿಂತಿದ್ದವು. ಸುತ್ತಲ್ಲಿನ ಎಲ್ಲ ಊರು-ಕೇರಿಗಳಲ್ಲಿ ಹೀಗೆ ಬಸ್ಸುಗಳು ನಿಂತಿದ್ದವು.
ಬೆಳಿಗ್ಗೆಯಂತೂ ಸಂದಿ ಗೊಂದಿಗಳಲ್ಲಿ ಚಾಲಕರು ಕಷ್ಠ ಪಟ್ಟು ಬಸ್ಸುಗಳನ್ನು ತಂದಿದ್ದು, ದಲ್ಲಾಳಿಗಳು ಜನರನ್ನು ತುಂಬಿಸಿ ಕರೆದೊಯ್ಯಲು ಮನವೊಲಿಸಿ ಒಯ್ಯಲು ಚರ್ಚೆ/ಚೌಕಾಶಿ ನಡೆಸುತ್ತಿದ್ದರು.

ಬಸ್ಸಿಗೆ ರೂ.೨೫೦೦೦/-ದಂತೆ ದಲ್ಲಾಳಿಗಳು ತೆಗೆದುಕೊಂಡು ಬಂದು ಜನರಿಗೆ ಹಂಚಿ ಬಸ್ಸು ತುಂಬಿಸುತ್ತಿದ್ದರು. ಬಸ್ಸುಗಳು ಹಲವು ರಾಜಕೀಯ ಕಾರ್ಯಕರ್ತರ ಮೇಲುಸ್ತುವಾರಿಯಲ್ಲಿ ಜನರನ್ನು ಬಳ್ಳಾರಿಯಲ್ಲಿ ನಡೆವ ಸಮಾವೇಶಕ್ಕೆ ಕರೆದೊಯ್ಯಲು ಬಂದಿದ್ದು!
ಖಾಲಿ ಖಾಲಿ ಬಸ್ಸುಗಳು ತುಂಬಿದವು. ೩೦೦ ರೂ ನಿಂದ ೫೦೦ರೂಪಡೆದ ಜನ ಊಟ, ತಿಂಡಿ, ಎಲ್ಲ ಖರ್ಚನ್ನು ಭಾರಿಸಿದ ಪಕ್ಷದ ಸಾಧನೆಯ ಸಮಾವೇಶಕ್ಕೆ ಮತ್ತು ವರಮಹಾಲಕ್ಷ್ಮಿ ಪೂಜೆಗೆ ಬಂದ ಭಾವಿ ಭಾರತದ ಪ್ರಧಾನಿ ಕನಸು ಕಾಣುತ್ತಿರುವ, ಸುಷ್ಮಾ ಸ್ವರಾಜರವರ ಬಳ್ಳಾರಿ ಭೇಟಿಯ ಸಂಧರ್ಭದಲ್ಲಿ ಮಾಡಬೇಕಿದ್ದ ಪಕ್ಷದ ಸಾಧನ ಸಮಾವೇಶದ ಭಾಷಣ ಆಲಿಸಲು ಜಮಾಗೊಳ್ಳುತ್ತಿದ್ದರು.
ಮೊನ್ನೆ ನಡೆದ ಕಾಂಗ್ರೆಸಿಗರ ಸಮಾವೇಶದ ಆರುಪಟ್ಟು ಜನರನ್ನು ಸೇರಿಸುವ ಸಂಕಲ್ಪದಲ್ಲಿ ರೆಡ್ಡಿಯವರು ಗಣಿಧನವನ್ನ ಪಣಕ್ಕಿಟ್ಟಿದ್ದರು.

ಇನ್ನೊಂದು ಕಡೆ ಬಸ್ಸಿಲ್ಲದೆ ಊರಿಂದ ಊರಿಗೆ ಹೋಗಬೇಕಾದ ಪ್ರಯಾಣಿಕರ ಪಾಡು, ಅವರನ್ನು ಸಂತೈಸುವಲ್ಲಿ ವಿಫಲರಾದ ಬಸ್ಸ ನಿಯಂತ್ರಣಾಧಿಕಾರಿಗಳು, ಹತಾಶಜನ, ಮಧ್ಯ ಸಿಕ್ಕಿ ಹಾಕಿಕೊಂಡ ಜನ, ಸಂಚಾರ ನಿಯ೦ತ್ರಣದಲ್ಲಿ ಹುಚ್ಚರಾಗದೆ ಉಳಿದ ಸಂಚಾರಿ ಪೊಲೀಸರು, ಜನರನ್ನು ನಿಯಂತ್ರಿಸುವಲ್ಲಿ ಹೈರಣಾದ ಪೊಲೀಸರು, ಬರುತ್ತಿರುವ ಮಂತ್ರಿ-ತಂತ್ರಿಗಳನ್ನು ಬರಮಾಡಿ ಕೊಳ್ಳುವದರಲ್ಲಿ ಸುಸ್ತಾದ ಜಿಲ್ಲಾ ಅಧಿಕಾರ ವರ್ಗ, ಊಟ-ತಿಂಡಿಗೆ ಹೋಟೆಲ್ ಅವಲಂಬಿಸಿದ ಜನ ಆಹಾರಕ್ಕೆ ಪರದಾಡುತ್ತಿದ್ದದ್ದು, ಇಂದು ಕಣ್ಣಿಗೆ ರಾಚುತ್ತಿತ್ತು.
ಸಂಜೆ ಎಲ್ಲ ಬಸ್ಸುಗಳು ಜನರನ್ನು ಹಿಂದೆ ತಂದು ಬಿಡುತ್ತಿದ್ದವು. ಏಕಮುಖ-ದ್ವಿಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಸಂಚರಿಸುವ ಈ ಬಸ್ಸುಗಳನ್ನು ಹತಾಶೆಯಲ್ಲಿ ನೋಡುತ್ತಿದ್ದ ಸಂಚಾರಿ ಪೊಲೀಸರು.

ಈ ಎಲ್ಲ ಗೊಂದಲಗಳಲ್ಲಿ ಹೆಚ್ಚಿನ ಸಾಮಾನ್ಯ ಮತ್ತು ಕದುಬದವಜನ ಊಟ-ತಿಂಡಿ-ಇತರೇ ಜೊತೆಗೆ ೩೦೦-೫೦೦ ರುಪಾಯಿ ದುಡಿದದ್ದು ಒಂದು ವಿಶೇಷವೇ! ಅವರು ಹೊಟ್ಟೆಹೊರೆಯಲು ಇಡೀ ದಿನ ದುಡಿದರು ೧೦೦ರೂ ಸಿಗುವದು ಕಷ್ಟ. ಅನ್ಥದುರಲ್ಲಿ ಈ ದುಡಿಮೆ ಒಂದು ವಿಶೇಷವೇ!
ಒಮ್ಮೆ ಅನಿಸಿತು ಈ ಸಮಾವೇಶದಿಂದ ಕೆಲವು ಜನರಿಗೆ ತೊಂದರೆ ಆದರು ಕೆಲವು ಜನರಿಗೆ ಅಯಾಚಿತ ದುಡಿಮೆಯೂ ಆಯಿತಲ್ಲವೇ. ಆದರೆ ನೋವಿನ ಸಂಗತಿ ಎಂದರೆ ಈ ಮುಗ್ದಜನರ ಬದುಕಿನ ಅವಶ್ಯಕತೆಯನ್ನು ತಮ್ಮ ರಾಜಕೀಯ ಸಂಖ್ಯಾಬಲ ತೋರಿಸುವಲ್ಲಿ ಅವರನ್ನು ಉಪಯೋಗಿಸಿದ್ದು ಮತ್ತು ಜನರನ್ನು ಕುರಿಯಂತೆ ತಂದು ಪ್ರದರ್ಶಿಸಿದ್ದು.
ಅಂದು ಕಾಂಗ್ರೆಸ್ಸಿಗರು, ಇಂದು ಬಿಜೆಪಿಯವರು ಮತ್ತೆ ನಾಳೆ ದಳದವರು. ಹೀಗೆ ಒಬ್ಬರ ನಂತರ ಇನ್ನೊಬ್ಬರು. ಮೊನ್ನೆ ಸರಕಾರದ ಸಾಧನೆ ಏನು ಇಲ್ಲ ಎಂದು ಪ್ರತಿಭಟಿಸಿದ ವಿರೋಧ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ ಜನವೇ ಇಂದು ಸರಕಾರದ ಸಾಧನೆ ಘನ೦ದಾರಿಯದು ಎನ್ನುವರ ಜೊತೆ ಇದ್ದರು!
ಅವರಿಗೆ ಸಮಾವೇಶ ಯಾರು ಮಾಡಿದರೇನು ? ಯಾತಕ್ಕಾದರೂ ಮಾಡಿದರೇನು! ಸುಲಭದಲ್ಲಿ ತುತ್ತಿನ ಚೀಲ ತುಂಬಬೇಕಿತ್ತು! ಜೊತೆಗೆ ಮನೋರಂಜನೆಯು ಇತ್ತಲ್ಲವೇ!

ಜನ ಮರುಳೋ! ಜಾತ್ರೆ ಮರುಳೋ!

ಸಮಾವೇಶಗಳು ತಮಾಷೆಗಳಾಗುತ್ತಿವೆ, ಮಾನವೀಯ ಮೌಲ್ಯದ ಅಣುಕುಗಳಾಗುತಿವೆ.
ಯಾಕೋ ಮನ ಉದ್ವಿಗ್ನಗೊಂಡಿದೆ.
ನಾವೆತ್ತ ಸಾಗುತ್ತಿದ್ದೇವೆ.
ಜನಕ್ಕೂ ಬೇಕಾಗಿದ್ದೇ ರಾಜಕೀಯದವರು ಮಾಡುತ್ತಿರಬಹುದು. ನಮ್ಮ ಯೋಚನೆಗಳು ಅಲ್ಪಸಂಖ್ಯಾತವೆ!

13 comments:

Dr.D.T.Krishna Murthy. said...

ಸೀತಾರಾಂ ಸರ್ ನಾವು ಎಲ್ಲೋ ಹಳಿ ತಪ್ಪಿದ್ದೇವೆ ಎನಿಸುತ್ತಿದೆ.
Quality of the country depends on the quality of the people.
ನಾಳೆ ಬೆಂಗಳೂರಿನಲ್ಲಿ ಭೇಟಿಯಾಗೋಣ.ಧನ್ಯವಾದಗಳು.

balasubramanya said...

ನಿಮ್ಮ ಲೇಖನ ಓದಿ "every body wants to rule the world"{tears for fear group} ಹಾಡು ಜ್ಞಾಪಕಕ್ಕೆ ಬಂತು.

ಸೀತಾರಾಮ. ಕೆ. / SITARAM.K said...

ಎಚ್.ಎನ್.ಈಶ ಕುಮಾರ್
to me

show details 11:53 PM (9 hours ago)

ದುಡ್ಡು ಕೊಟ್ಟರೆ ಎಲ್ಲವು ಸಿಗುವ ದೇಶ ನಮ್ಮದು!!!

sunaath said...

ಸೀತಾರಾಮರೆ,
Our country is going to dogs.

ಮನಮುಕ್ತಾ said...

ಇ೦ತಹ ಪರಿಸ್ಥಿತಿ ನೋಡಿದರೆ ಬೇಸರವಾಗುತ್ತದೆ.ನಿಜ.. ಜನ ಮರುಳೋ ಜಾತ್ರೆ ಮರುಳೋ ....ತಿಳಿಯದಾಗಿದೆ.

ಕನಸು said...

ಸರ್
ವಾಸ್ತವಕ್ಕೆ ಕನ್ನಡಿ ಹಿಡಿದ ನಿಮ್ಮ ಲೇಖನ
ಅರ್ಥಪೂರ್ಣವಾಗಿದೆ

ನಾಗರಾಜ್ .ಕೆ (NRK) said...

ನಮ್ಮ ರಾಷ್ಟ್ರ ಎತ್ತ ಸಾಗುತ್ತಿದೆ ಎಂದು ಯೋಚಿಸಿದರೆ ಧಿಗಿಲಾಗುತ್ತದೆ.
ಹಳ್ಳಿಗಳಿಂದ ಕರೆದುಕೊಂಡು ಬಂದ ಎಷ್ಟೋ ಜನಕ್ಕೆ ಸಮಾವೇಶದ ಉದ್ದೇಶವೇ ತಿಳಿದಿರುವುದಿಲ್ಲ (ಅಸಲಿಗೆ ಅಲ್ಲೊಂದು ಉದ್ದೇಶ ಇದ್ದಾರೆ ತಾನೇ?)
ಅವರಿಗೆ ಪಟ್ಟಣಕ್ಕೆ ಹೋಗ್ತಿದಿವಿ ಫ್ರೀಯಾಗಿ ಊಟ , ಡ್ರಿಂಕ್ಸ್ ಸಿಗುತ್ತೆ, ಟೈಮ್ ಸಿಕ್ರೆ ಸಿನಿಮಾ ನೋಡಬಹುದು(ಹೇಗಿದ್ದರೂ ದುಡ್ಡು ಸಿಕ್ಕಿರುತ್ತಲ್ಲ) ಅನ್ನೋದಷ್ಟೇ ಗೊತ್ತಿರುತ್ತೆ.
ಇದು ನಮ್ಮ ಅಜ್ಞಾನವೋ, ಉಡಾಫೆಯೋ, ಏನು ಮಾಡಲಾಗದ ಅಸಾಹಯಕತೆಯೋ ಅಥವಾ ಎಲ್ಲವೂ ಹುದಾ?
ಮತ್ತು ನಮಗೆಲ್ಲ ಇಂತಹ ಸಮಾವೇಶಗಳ ಸಂದರ್ಭದಲ್ಲಿ ಬಸ್ಸಿನ ತೊಂದರೆಯಾಗಿರುವುದು ಸುಳ್ಳಲ್ಲ, ಬೆಂಗಳೂರು ಇದಕ್ಕೆ ಹೊರತಾಗಿಲ್ಲ.
ಜನ ಮರುಳೋ! ಜಾತ್ರೆ ಮರುಳೋ!

Ashok.V.Shetty, Kodlady said...

ಸೀತಾರಾಂ ಸರ್ ,
ಜನ ಮರುಳೋ ಜಾತ್ರೆ ಮರುಳೋ ....ನಿಮ್ಮ ಲೇಖನ ಅರ್ಥಪೂರ್ಣವಾಗಿದೆ.....

prabhamani nagaraja said...

ಜನ ಪ್ರದರ್ಶನಕ್ಕಷ್ಟೇ ಮೀಸಲಾದ೦ತಿರುವ ನಮ್ಮ ಪ್ರಜಾಪ್ರಭುತ್ವಕ್ಕೆ ಕನ್ನಡಿ ಹಿಡಿದ೦ತಿದೆ ನಿಮ್ಮ ಲೇಖನ.

AntharangadaMaathugalu said...

ವಾಸ್ತವಿಕ ಸಮಸ್ಯೆ ಅಲ್ವಾ ಇದು ಸೀತಾರಾಮ್ ಸಾರ್.... ಹೀಗೇ ಹಗಲೆಲ್ಲಾ ಏನಾದರೂ, ಯಾವುದಾದರೊಂದು ಪಕ್ಷದ ಸಮಾವೇಷ, ಚುನಾವಣೆ ಇದ್ದೇ ಇರುತ್ತದೆ. ಆಗೆಲ್ಲಾ ನಾಗರಿಕರು ಪರದಾಡುವ ಸನ್ನಿವೇಶ ಸರ್ವೇ ಸಾಮಾನ್ಯವಾಗಿದೆ. ನಿಮ್ಮ ಅಭಿಪ್ರಾಯವನ್ನು ನೀವು ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.......

ಶ್ಯಾಮಲ

ತೇಜಸ್ವಿನಿ ಹೆಗಡೆ said...

ಯಾರಿಂದಲೂ, ಯಾವತ್ತೂ ಈ ಒಂದು ಕೆಟ್ಟ ವ್ಯವಸ್ಥೆಯನ್ನು ಸರಿಮಾಡಲಾಗದಷ್ಟು ರಾಜಕೀಯ ಕೊಳಕಾಗಿದೆ. ಸಂಭವಾಮಿ ಯುಗೇ ಯುಗೇ ಹತ್ತಿರ ಬರುತ್ತಿದೆಯೇನೋ... ಇನ್ನು ಆ ಪರಮಾತ್ಮನೇ ಅವತರಿಸಬೇಕಾಗಿದೆ! :(

shivu.k said...

ಸೀತಾರಾಂ ಸರ್,

ನಮ್ಮನ್ನು ಇವರೆಲ್ಲಾ ದಡ್ಡರು ಅಂದುಕೊಂಡು ಹೀಗೆಲ್ಲಾ ಮಾಡುತ್ತಿದ್ದಾರೆ. ಇವರಿಗೆಲ್ಲಾ ಮುಂದೆ ಸರಿಯಾದ ಪಾಠ ಕಲಿಸಬೇಕು. ಜನಮರುಳೋ..ಜಾತ್ರೆ ಮರುಳೋ...ಸೂಕ್ತ ಲೇಖನ.

ಸಾಗರದಾಚೆಯ ಇಂಚರ said...

ಸರ್

ನಾವು ಹಣದಿಂದವೇ ಬದುಕು ಅಂದುಕೊಂಡಿದ್ದೇವೆ

ಸುಧಾರಣೆ ಎಂದಿಗೋ

ಸುಂದರ ಬರಹ

ಬಹ ಆಪ್ತವಾಗಿದೆ