Tuesday, August 10, 2010

ನೊರೆಹಾಲಿನ ಸಮುದ್ರೋಪಾದಿ ಜಲಪಾತ (ದೂದಸಾಗರ ಫಾಲ್ಸ್)

ಅದೊಂದು ರುದ್ರ ರಮಣೀಯ ಕಣ್ನೋಟ!
ಕರ್ನಾಟಕ -ಗೋವಾ ಸರಹದ್ದಿನಲ್ಲಿ ಗೋವಾ ರಾಜ್ಯದಲ್ಲಿ, ಸಹ್ಯಾದ್ರಿ ಬೆಟ್ಟದ ತಪ್ಪಲಿನಲ್ಲಿ ಮಾಂಡೋವಿ ನದಿಯು ಸುಮಾರು ೩೦೦ ಮೀಟರ ಎತ್ತರದಿಂದ ಸರಿಸುಮಾರು ೩೦-೩೫ ಮೀಟರ್ ಅಗಲದಲ್ಲಿ , ಗ್ರಾನೈಟ್- ನಿಸ್ಸ್ ಎಂಬ ಹೆಬ್ಬಂಡೆಯ ಮೇಲಿಂದ ಸರಸರನೆ, ನೊರೆನೊರೆಯಾಗಿ, ಧುಮ್ಮಿಕ್ಕುತ್ತಾ, ಅಗಲವನ್ನು ಕವಲುಗಳನ್ನಾಗಿ ಹೆಚ್ಚಿಸುತ್ತಾ, ಇಳಿದಿಳಿದಂತೆ, ಮತ್ತೆ ಒಗ್ಗೂಡುತ್ತಾ, ವಜ್ರಾಕೃತಿಯಲ್ಲಿ, ಹಾಲಿನ ನೊರೆಯಂತೆ, ಸಾಗರೋಪಾದಿಯಲ್ಲಿ, ಧುಮ್ಮಿಕ್ಕಿ ಹರಿವ, ನಯನ ಮನೋಹರ ನೋಟ ಎಂತಹ ಅರಸಿಕನ ಮೈಯನ್ನು ಜುಮ್ಮೆನ್ನಿಸದೆ ಬಿಡದು!

ಅದಕೆಂದೇ ಇದನ್ನು ದೂದಸಾಗರ ಜಲಪಾತ ಎಂದು ಇದನ್ನು ಕರೆಯುವದು.

ಇದಕ್ಕೊಂದು ಕಥೆಯು ಇದೆ. ನದಿ ತಟದ ಹತ್ತಿರದ ಅರಮನೆಯಲ್ಲಿದ್ದ ರಾಜಕುಮಾರಿಯೋರ್ವಳು ನಿತ್ಯ ಈ ನದಿಯಲ್ಲಿ ಸ್ನಾನ ಮಾಡುತ್ತಿದ್ದಳಂತೆ. ಒಂದು ದಿನ ಅವಳು ಸ್ನಾನ ಮಾಡುತ್ತಿದ್ದಾಗ ರಾಜಕುಮಾರನೋರ್ವನು ಅಲ್ಲಿಗೆ ಬಂದಾಗ ನಾಚಿದ ನಗ್ನ ರಾಜಕುಮಾರಿ ಅಲ್ಲಿಯೇ ಇದ್ದ ಪಾತ್ರೆಯಲ್ಲಿನ ಹಾಲನ್ನು ಮೈ ಮೇಲೆ ಸುರಿದುಕೊಂಡಳಂತೆ ನಗ್ನತೆ ಮುಚ್ಚಲು. ಹಾಲು ಮೈ ಮೇಲಿಂದ ಹರಿದು ಹೋಗುವಷ್ಟರಲ್ಲಿ ಸಖಿಯರು ಉಡುಗೆ ತೊಡಿಸಿದ್ದರು. ಆ ಹರಿದ ಹಾಲು ನದಿ ಸೇರಿ ನೀರು ಹಾಲಾಯಿತಂತೆ. ಇದೊಂದು ಸುಮ್ಮನೆ ಪೂರಕ ಕಥೆ.

ಆದರೆ ಆ ಜಲಪಾತ ನೋಡಿದಾಗ ನೀರು ಕಲ್ಲಿನ ಮೈಯಲ್ಲಿ ನೊರೆನೊರೆಯಾಗಿ ಸರಿವಾಗ, ಅಚ್ಚ ಬಿಳುಪಿನ ರಾಶಿ ಮುತ್ತಂತೆ ಹರವಿದಾಗ, ಈ ದಂತ ಕತೆ ನಿಜವಿರಬಹುದೇನೋ ಎಂದು ಯಾರಿಗೂ ಅನ್ನಿಸದೆ ಇರದು!

ಈ ಜಲಪಾತ ನೋಡಲು ಹುಬ್ಬಳ್ಳಿಯ ಅಥವಾ ಬೆಳಗಾವಿಯಿಂದ ಗೋವೆಗೆ ಹೋಗುವ ರೈಲಿನ ಮಾರ್ಗ -ತಲುಪಲು ಉತ್ತಮ ವ್ಯವಸ್ಥೆ. ಎಲ್ಲಾ ರೈಲುಗಳು ದೂದಸಾಗರ ನಿಲ್ದಾಣದಲ್ಲಿ ನಿಲ್ಲುತ್ತವೆ. ನಿಲ್ದಾಣದ ಪಕ್ಕವೇ ಜಲಪಾತ. ಬಸ್ಸಿನಲ್ಲಿ ಕೊಲೆಮ್-ಗೆ ಬಂದು ಅಲ್ಲಿಂದ ಜೀಪ ಅಥವಾ ಕಾರಿನಲ್ಲಿ ಇಲ್ಲಿಗೆ ಬರಬಹುದು. ಆದರೆ ರೈಲಿನ ಮಾರ್ಗ ಉತ್ತಮ.
ಟ್ಯಾಕ್ಷಿಯಲ್ಲಿ ಅಥವಾ ಸ್ವಂತ ಕಾರಿನಲ್ಲಿ ಬರುವ ಜನ ಕರ್ನಾಟಕದ ಅನಮೋಡ/ಕ್ಯಾಸಲ್ ರಾಕ್ ಅಥವಾ ಗೋವೆಯ ಮೊಲ್ಲೇಮ್ ನಿಂದ ಪಯಣಿಸಬಹುದು.

ಕ್ಯಾಸಲ್ ರಾಕ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ರೈಲಿನಲ್ಲಿ ದೂದಸಾಗರಕ್ಕೆ ಪಯಣಿಸಬಹುದು. ರೈಲಿನಲ್ಲಿನ ಪಯಣದಲ್ಲಿ, ನೀವು ಇದನ್ನು ಪಕ್ಕದಲ್ಲಿಯೇ ನೋಡಿ ಅನುಭವಿಸಬಹುದು. ಹಾಗೆ ನಾನು ಹೋಗುತ್ತಿರುವ ರೈಲಿನಿಂದ ತೆಗೆದ ಚಿತ್ರಗಳು ಇಲ್ಲಿವೆ.
ಇಲ್ಲಿನ ನೀರಿನಲ್ಲಿ ಸ್ನಾನ ಮಾಡಬಹುದು ಹಾಗೂ ಜಲಕ್ರೀಡೆಯಾಡಬಹುದು. ಅದಕ್ಕಾಗಿ ಜಲಪಾತದ ಸ್ತರದಲ್ಲಿ ೩-೪ ಸ್ಥಳಗಳಲ್ಲಿ ಮಡುವಿದೆ.
ಸಹ್ಯಾದ್ರಿಯ ಸುತ್ತಲಿನ ಹಸಿರು, ಇನ್ನು ಹತ್ತು ಇಪ್ಪತ್ತು ತೊರೆಗಳು, ಕಣಿವೆಗಳು, ಸುರಂಗಗಳು, ನಾನಾಜಾತಿಯ ಗಿಡ-ಮರ-ವೃಕ್ಷಗಳು ಮನಸ್ಸನ್ನ ಸೂರೆಗೊಳಿಸುತ್ತವೆ. ಸಾರಂಗ, ಜಿಂಕೆ, ಕಾಡುಕೋಣ, ಕಾಳಿಂಗ, ಮೊಲ, ನವಿಲು, ನರಿ, ಇಲ್ಲಿನ ಅರಣ್ಯದಲ್ಲಿ ಸಾಮಾನ್ಯವಾಗಿ ಕಾಣುವ ಪ್ರಾಣಿಗಳು.

ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಲ್ಪ ತಿರುಗಾಡಿದರೆ ಕಾಡುಪ್ರಾಣಿಗಳನ್ನು ನೋಡಬಹುದು. ಚಾರಣಿಗರು ಕ್ಯಾಸಲ ರಾಕ್-ನಿಂದ ರೈಲು ದಾರಿಯಲ್ಲಿ ನಡೆದು ಇಲ್ಲಿಗೆ ಬಂದರೆ (ಸುಮಾರು ೮-೧೦ಕಿಮಿ) ಪ್ರಕೃತಿಯ ರಮ್ಯತೆಯೊಂದಿಗೆ ಜಲಪಾತದ ಸೊಬಗನ್ನು ಸವಿಯಬಹುದು.
ನಾನು ವಿಧ್ಯಾರ್ಥಿಯಾಗಿದ್ದಾಗ ಭೂಗರ್ಭ ಅಧ್ಯಯನದ ನಿಮಿತ್ತ ಸುಮಾರು ಒಂದು ತಿಂಗಳ ಕಾಲ ಈ ಬೆಟ್ಟದಲ್ಲಿ ಸರ್ವೇಕ್ಷಣೆ ಮಾಡಿದ ಮಧುರ ನೆನಪು ನನ್ನಲ್ಲಿ ಸದಾ ಹಸಿರು.

ಜಲಪಾತದ ಮೇಲ್ತುದಿ


ಜಲಪಾತದ ಮೇಲ್ತುದಿಯಿಂದ ಮಧ್ಯದ ಹಂತ (ರೈಲ್ವೆ ಹಳಿಯವರೆಗಿನ ನೋಟ)

ಮತ್ತೊಂದು ಅದೇ ನೋಟ

ಇನ್ನೊಂದು ಅದೇ ನೋಟ

ರೈಲ್ವೆ ದಾರಿಯಲ್ಲಿ ದೂದಸಾಗರ್ ಜಲಪಾತದ ಪಕ್ಕದಿಂದ ಹರಿದು ಆಮೇಲೆ ತಿರುಗಿ ಎದುರಿನ ಬೆಟ್ಟದಲ್ಲಿ ರೈಲು ಬರುವಾಗ (ಗೋವೆ ಕಡೆ ಮುಖಮಾಡಿ ಪಯಣಿಸುವಾಗ) ಮತ್ತೆ ಜಲಪಾತದ ಪೂರ್ಣ ನೋಟ ದೂರದಿಂದ ಲಭ್ಯ . ನಡುವೆ ರೈಲ್ವೆ ಹಳಿಯ ಸೇತುವೆ ಕಾಣಬಹುದು. ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ಡದಾಗಿ ಮಾಡಿ ನೋಡಿದರೇ ರೈಲಿನ ಸೇತುವೆ ಸುಂದರವಾಗಿ ಕಾಣುತ್ತೆ.
ಅದೇ ಚಿತ್ರ ಮತ್ತೊಂದು ಕೋನದಲ್ಲಿ

38 comments:

ಮನದಾಳದಿಂದ............ said...

ಚಂದದ ಫೋಟೋಗಳು,
ನಾನೂ ಕೂಡಾ ಒಮ್ಮೆ ದೆಹಲಿಯಿಂದ ರೈಲು ಮಾರ್ಗದಲ್ಲಿ ಬರುವಾಗ ಈ ಜಲಪಾತವನ್ನು ನೋಡಿ ಮೂಕವಿಸ್ಮಿತನಾಗಿದ್ದೆ!
ಮಾಹಿತಿಗೆ ಧನ್ಯವಾದಗಳು. ನೀವು ಸಧ್ಯದಲ್ಲಿ ಅಲ್ಲಿಗೆ ಹೋಗಿದ್ರಾ?

nenapina sanchy inda said...

ಹೌದು ನಾವೂ ಹೋಗಿದ್ವಿ. ಚೆನ್ನಾಗಿದೆ ನಿಮ್ಮ pictures.
:-)
malathi S

ಮನಮುಕ್ತಾ said...

ತು೦ಬಾ ಸು೦ದರ ಫೋಟೋಗಳು..ಜೊತೆಗೆ ಚೆ೦ದದ ಮಾಹಿತಿ..ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಪ್ರವೀಣರವರೇ ೪ನೇ ಆಗಸ್ಟ್ ೨೦೧೦ರಂದು ನಾನು ಆ ದಾರಿಯಲ್ಲಿ ಪ್ರಯಾಣ ಮಾಡಿದಾಗ ತೆಗೆದ ಚಿತ್ರಗಳು.
ಪ್ರವೀಣರೇ, ಮಾಲತಿಯವರೇ, ಮನಮುಕ್ತಾರವರೇ -ಪ್ರತಿಕ್ರಿಯೆಗೆ ಧನ್ಯವಾದಗಳು.

Subrahmanya said...

ಸೂಪರ್ ಚಿತ್ರಗಳು ಗುರುಗಳೆ . ಗೋವಾದಿಂದ ಬರೋವಾಗ ನಾನೂ ಕಂಡಿದ್ದೆ. ಅದ್ಭುತ ಜಲಪಾತ. ೫ ನಿಮಿಷ ಅಲ್ಲಿ ನಿಲ್ಲಿಸಿದ್ದು ರೈಲನ್ನು..ಅಹಾ..ತುಂಬ ಚೆನ್ನಾಗಿತ್ತು. ಆದ್ರೆ ಫೋಟೋಸ್ ತೆಗೆಯೋಕೆ ಆಗಿರಲಿಲ್ಲ. ನೀವು ತುಂಬ ಸೊಗಸಾಗಿ ಸೆರೆಹಿಡಿದಿದ್ದೀರಿ. Thanks ಗುರೂಜಿ.

ಮನಸು said...

wow super sir.... oLLe place

ತೇಜಸ್ವಿನಿ ಹೆಗಡೆ said...

ಅದ್ಭುತ! ಸಾಧ್ಯವಾದರೊಮ್ಮೆ ಹೋಗಿ ನೋಡಲೇಬೇಕಾದ ಸ್ಥಳ. ಧನ್ಯವಾದಗಳು.

ಸವಿಗನಸು said...

ಚಿತ್ರಗಳು ಬೊಂಬಾಟ್....
ಒಳ್ಳೆ ವಿವರಣೆ

ಅನಂತ್ ರಾಜ್ said...

ಸು೦ದರ ಜಲಪಾತದ ಸು೦ದರ ನಿರೂಪಣೆ ಸೀತಾರ೦ ಅವರೆ. ಉತ್ತಮ ಮಾಹಿತಿಗೆ ಧನ್ಯವಾದಗಳು.

ಅನ೦ತ್

ಸುಮ said...

ಅಬ್ಬ!! ತುಂಬ ಸುಂದರವಾಗಿದೆ ಜಲಪಾತ.. ನೋಡಬೇಕು.

SATISH N GOWDA said...

ತುಂಬಾ ಚನ್ನಾಗಿದೆ ಸರ್ ನೀವೂ ಕಲೆ ಹಾಕಿದ ಈ ದೃಶ್ಯ .......
ಒಳ್ಳೆಯ ಸಗ್ರಹಣೆ .... ನನ್ನ ಹೆಸರು ಸತೀಶ್ ಏನ್ ಗೌಡ
ಬಿಡುವು ಮಾಡಿಕೊಂಡು ಒಮ್ಮೆ ಬನ್ನಿ ನನ್ನವಳಲೋಕಕ್ಕೆ
ನಿಮಗಾಗಿ ಕಾಯುವ ನನ್ನ ಈ ಪ್ರೇಮಲೋಕ
www.nannavalaloka.blogspot.com

V.R.BHAT said...

ಬಹಳ ಚೆನ್ನಾಗಿದೆ ಈ ಚಿಕ್ಕ ಪ್ರವಾಸ ಕಥನ, ಚಿತ್ರಗಳೂ ಅಂದವಾಗಿವೆ,ಧನ್ಯವಾದಗಳು

prabhamani nagaraja said...

ಬಹಳ ಚೆನ್ನಾಗಿದೆ 'ಕ್ಷೀರ ಸಾಗರ ಜಲಪಾತ'. ಫೋಟೋಗಳೂ ತು೦ಬಾ ಚೆನ್ನಾಗಿವೆ. ನೋಡಲೇ ಬೇಕು ಎನಿಸುವ೦ತಿದೆ ನಿಮ್ಮ ಸು೦ದರ ವಿವರಣೆ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.

balasubramanya said...

ಸೀತಾರಾಂ ಸರ್.ದೂದ್ ಸಾಗರ್ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಿ.ಚಿತ್ರಗಳು ಚೆನ್ನಾಗಿ ಮೂಡಿವೆ. ನಿಮಗೆ ಥ್ಯಾಂಕ್ಸ್ .

Anonymous said...

ಸಖತ್ತಾಗಿ ಕಾನ್ತಾ ಇದೆ ಸರ್, ನಂಗೂ ನೋಡುವ ಆಸೆ ಆಗ್ತಾ ಇದೆ!

Ittigecement said...

ಸೀತಾರಾಮ್ ಸರ್...

ಅದ್ಭುತ.. !!

ಫೋಟೊಗಳೂ ಸಹ ಸೊಗಸಾಗಿವೆ...

ನಿಮ್ಮ ಲೇಖನ ಓದಿದ ಮೇಲೆ ಒಮ್ಮೆ ನೋಡಿ ಬರುವ ಆಸೆ ಹುಟ್ಟಿದೆ..

ಬಹುಷಃ "ರುದ್ರ ರಮಣೀಯ" ಎನ್ನುವ ಶಬ್ಧ ಇಂಥಹ ದೃಶ್ಯಗಳಿಗೆ ಸರಿಹೊಂದುತ್ತದೆ ಅಲ್ಲವೆ?

ಅಭಿನಂದನೆಗಳು...

ದಿನಕರ ಮೊಗೇರ said...

sundara photogaLu sir.... vivaraNe kottiddu oLLeyadaayitu....
thank you....

ಸುಬ್ರಮಣ್ಯ said...

:-)

ವನಿತಾ / Vanitha said...

ಸೀತಾರಾಮ್ ಸರ್,
ಚೆಂದದ ಫೋಟೋಗಳು ಮತ್ತು ವಿವರಣೆ ..ಸಾಧ್ಯ ಆದ್ರೆ ದೂದ್ ಸಾಗರ್ ನೋಡ್ಬೇಕು:)

Dr.D.T.Krishna Murthy. said...

ಸೀತಾರಾಂ ಸರ್;1994ನಲ್ಲಿ ನಾನು ಅಂಬಿಕಾನಗರದಲ್ಲಿದ್ದಾಗ ದೂದ್ ಸಾಗರ್ ಗೆ ಹೋಗಿದ್ದೆ.ಆಗಿನ್ನೂ ಪ್ಯಾಸಿಂಜರ್ ಟ್ರೈನ್ ಗಳು ಅಷ್ಟಾಗಿ ಇರಲಿಲ್ಲ.ಗೂಡ್ಸ್ ಗಾಡಿಗಳು ಹೋಗುತ್ತಿದ್ದವು.ಕ್ಯಾಸಲ್ ರಾಕ್ ನಿಂದ ಗೂಡ್ಸ್ ಗಾಡಿಯ ಗಾರ್ಡ್ ನ ಬೋಗಿಯಲ್ಲಿ ಪ್ರಯಾಣಮಾಡಿದ್ವಿ.
ಒಳ್ಳೇ ಮಜಾ ಇತ್ತು.ದೂದ್ ಸಾಗರ್ ಅಂತೂ ಅವಿಸ್ಮರಣೀಯ ಅದ್ಭುತ.ಅಲ್ಲೇ ಕುಳಿತು ರಚಿಸಿದ ಕವನವೊಂದು ನನ್ನ ಡೈರಿಯಲ್ಲಿದೆ.ಲೇಖನ ಮತ್ತು ಚಿತ್ರಗಳು ಸೊಗಸಾಗಿವೆ.ಧನ್ಯವಾದಗಳು ಸರ್.ನಮಸ್ಕಾರ.

Shweta said...

sooper photos..

maahiti poorakavaagide.

-shweta

ಸೀತಾರಾಮ. ಕೆ. / SITARAM.K said...

ಡಾ! ಕೃಷ್ಣಮೂರ್ತಿಯವರೇ, ತಮ್ಮ ದೂದಸಾಗರ ಮೇಲಿನ ಕವನವನ್ನ ತಮ್ಮ ಬ್ಲಾಗ್-ನಲ್ಲಿ ಹಾಕಿ.
ಪ್ರತಿಕ್ರಿಯಿಸಿದ -ಸುಬ್ರಹ್ಮಣ್ಯರಿಗೆ, ಸುಗುಣಾರವರಿಗೆ, ತೇಜಸ್ವಿನಿಯವರಿಗೆ, ಮಹೇಶರಿಗೆ, ಅನಂತರಾಜರವರಿಗೆ, ಸುಮಾರವರಿಗೆ, ಸತೀಶಗೌಡರಿಗೆ, ವಿಆರ್ ಭಟ್ಟರಿಗೆ, ಪ್ರಭಾಮಣಿಯವರಿಗೆ,ನಮ್ಮೊಳಗಿನ ಬಾಲುರವರಿಗೆ, ಸುಮನಾರವರಿಗೆ, ಪ್ರಕಾಶರಿಗೆ, ದಿನಕರವರಿಗೆ, ಸುಬ್ರಮಣ್ಯ ಮಾಚಿಕೊಪ್ಪ-ರವರಿಗೆ, ವನಿತಾರಿಗೆ, ಡಾ! ಕೃಷ್ಣಮೂರ್ತಿಯವರಿಗೆ ಮತ್ತು ಶ್ವೇತಾರವರಿಗೆ ಮನಪೂರ್ವಕ ವಂದನೆಗಳು.

sunaath said...

ಸೀತಾರಾಮರೆ,
ದೂಧಸಾಗರ ಜಲಪಾತದ ಉತ್ತಮ ಚಿತ್ರಗಳನ್ನು ಕೊಟ್ಟಿದ್ದೀರಿ. ಜೊತೆಗೆ ಉಪಯುಕ್ತ ಮಾಹಿತಿ ನೀಡಿದ್ದೀರಿ. ದಂತಕಥೆಯೂ ಸಹ ರಂಜಕವಾಗಿದೆ.

Vinay Hegde said...

seetaaraam avare... lekhana haagu fotos...eradu tumba chennaagi moodi bandide... naanu kooda goa hoguvaaga noodidde.. :)

Manju M Doddamani said...

ಚಂದದ ಲೇಖನ ಸುಂದರ ಅನುಭವ ತುಂಬಾ ಚನ್ನಾಗಿವೆ ನೀವು ತೆಗೆದಿರುವ ಚಿತ್ರಗಳು :)

Guruprasad said...

ಉತ್ತಮ ಮಾಹಿತಿ,, ಮುಂದಿನ ಸಾರಿ ,,, ನಾನು ಹೋಗಿ ಬರುತ್ತೇನೆ.....

ಶಿವಪ್ರಕಾಶ್ said...

awesome place sir.. i m planning to visit :)|
Thank you :)

ದೀಪಸ್ಮಿತಾ said...

ನಿಜಕ್ಕೂ ಅದ್ಭುತ ಜಲಪಾತ. ಚಿತ್ರಗಳು ಸುಂದರವಾಗಿವೆ

Bhat Chandru said...

Photos tumba chennagi bandive

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಸುನಾಥರಿಗೆ,ವಿನಯ ಹೆಗ್ಡೆಯವರಿಗೆ, ದೊಡ್ಡಮನಿ ಮಂಜುರವರಿಗೆ,ಗುರುರವರಿಗೆ, ಶಿವಪ್ರಕಾಶರಿಗೆ, ದೀಪಸ್ಮಿತ್-ರಿಗೆ ಮತ್ತು ಚಂದ್ರು ಭಟ್ಟರಿಗೆ ಸಾದರದ ವಂದನೆಗಳು.

Shashi jois said...

ಉತ್ತಮ ಚಿತ್ರದೊಂದಿಗೆ ಉಪಯುಕ್ತಾ ಮಾಹಿತಿಗೆ ಥ್ಯಾಂಕ್ಸ್ ಸರ್....

shivu.k said...

seetharam sir,

super...nanage innu allige hoguva avakasha sikkilla. photos and nirupane super...

ಸಾಗರದಾಚೆಯ ಇಂಚರ said...

Super sir

tumbaa chendada photogalu
chendada vivarane

ಜಲನಯನ said...

ಸೀತಾರಾಂ ಸರ್, ಸುಂದರ ದೃಶ್ಯ ಅಷ್ಟೇ ಸುಂದರ ಚಿತ್ರ ಸರಣಿ ಮತ್ತು ಸುಂದರ ವರ್ಣನೆ..ಚನ್ನಾಗಿದೆ...ಲೇಖನ ಮಾಹಿತಿಯೂ ಇದೆ.

ಮನಸಿನಮನೆಯವನು said...

ಅಲ್ಲಿಗೆ ತಲುಪಲು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು..
ದಂತಕಥೆ ಸೊಗಸಾಗಿದೆ..

Manasa said...

Super snaps sir, very impressive... Naanu prati saari India hodaaga hogabeku ankotini aadare samayabhaavadindaa hogalu aagilla... nimma lekhana odi mattastu nodabekenisuttide :)

Ashok.V.Shetty, Kodlady said...

Sundara chitragala jotege paripurna vivaranne...nice one...

ಪುಟ್ಟ said...

ನಯನ ಮನೋಹರ ದೃಶ್ಯವನ್ನು
ಚಿತ್ರ, ಬರವಣಿಗೆ ಮೂಲಕ ಅಂದವಾಗಿ ಹೆಣೆದಿದ್ದಿರಿ ....
ಧನ್ಯವಾದಗಳು