Monday, July 26, 2010

ಸಾಧನೆಯ ಹಾದಿಯಲ್ಲಿ..................



(PHOTO -P.T.USHA INDIA'S RUNNING CHAMPION Photo Source : Internet Search)

ಅದೊಂದು ರಾಷ್ಟ್ರೀಯ ಓಟದ ಸ್ಪರ್ಧೆ!!!

ಕಿಕ್ಕಿರಿದ ಕ್ರೀಡಾಂಗಣ!!

ದೇಶದ ವೇಗದ ವ್ಯಕ್ತಿಯ ಆಯ್ಕೆಯ ಹಂತದ ಸ್ಪರ್ಧೆ! ಜನ ತಮ್ಮ ತಮ್ಮ ಮೆಚ್ಚಿನ ಕ್ರೀಡಾಳುಗಳ ಹುರಿದುಂಬಿಸುತ್ತಾ, ಅವರು ಗೆಲ್ಲುವ ಕನಸಿನಲ್ಲಿ, ಸಹವೀಕ್ಷಕರೊಡನೆ ಪೈಪೋಟಿಯಲ್ಲಿ ಪಂದ್ಯಕಟ್ಟುತ್ತಾ, ಸಂಬ್ರಮಿಸುತ್ತಿದ್ದರು.

ಎಲ್ಲ ಸ್ಪರ್ಧಾಳುಗಳು ಓಟದ ತಮ್ಮ ಸುತ್ತಿನಲ್ಲಿ ಓಡಲು ತಯಾರಾಗಿ ನಿಂತಿದ್ದು, ಪಂದ್ಯ ನಿರ್ಣಾಯಕರ ಓಟದ ಆದೇಶಕ್ಕೆ ಕಾಯುತ್ತಿದ್ದರು.

ನಿರ್ಣಾಯಕರ ರೆಡಿ,ಸೆಟ್,ಗೋ-ದೊಂದಿಗೆ ಮೊಳಗಿದ ಬಂದೂಕಿನ ಶಬ್ದಕ್ಕೆ ಓಟಗಾರರು ನಾಗಾಲೋಟದಲ್ಲಿ ಸ್ಪರ್ಧೆ ಪ್ರಾರಂಭಿಸಿದರು.

ಎಲ್ಲರ ಕಣ್ಣುಗಳು ಸುತ್ತಿನ ಕೊನೆಗೆ ಮುಟ್ಟಬೇಕಾದ ಗೆರೆಯ ದಾರದ ಮೇಲೆ....

ಸ್ಪರ್ಧಾಳುಗಳು ಒಬ್ಬರೊಬ್ಬರಿಗೆ ಪೈಪೋಟಿಯಲ್ಲಿ, ಅಂತಿಮ ರೇಖೆಯ ಮುಟ್ಟಲು, ತವಕದಲಿ, ಮೈಯೆಲ್ಲಿನ ಕಸುವನ್ನು ಕ್ರೋಡಿಕರಿಸುತ್ತಾ ಕಾಲುಗಳನ್ನು ಸಾಧ್ಯವಾದಷ್ಟು ನೀಳವಾಗಿ ಚಾಚಿ ಪೂರ್ಣ ವೇಗದಲ್ಲಿ ಓಡುತ್ತಿದ್ದರು....

ಅಂತಿಮ ರೇಖೆಗೆ ಮೊದಲು ಮುಟ್ಟಿದವನು ನಂಬರ ೫ ರ ಸ್ಪರ್ಧಿ, ತದನಂತರ ೮ ಅಂಕೆಯ ಸ್ಪರ್ಧಿ ಅಮೇಲೆ ೧೨ ಅ೦ಕೆಯ ಸ್ಪರ್ಧಿ.
ಈ ಮೂರು ಸ್ಪರ್ಧಾಳುಗಳು -ಪ್ರಥಮ, ದ್ವೀತಿಯ ಮತ್ತು ತೃತೀಯ ವಿಜೇತರಾಗಿ ಆಯ್ಕೆಯಾಗಿದ್ದರು!!

ಪ್ರೇಕ್ಷಕರ ಕರಡತಾನ ನಭವನ್ನ ಸೀಳಿತ್ತು....

ಅಭಿನಂದನೆಗಳ ಸುರಿಮಳೆ ವಿಜೇತರಿಗೆ ಹರಿದಿತ್ತು...

ಎಲ್ಲರ ಕಣ್ಣು ಅವರ ಮೇಲೆ...

ವಿಜೇತರು ಸಂಬ್ರಮಿಸುತ್ತಿದ್ದರು...

ಮಾಧ್ಯಮದವರ ವೀಡಿಯೊ ಕ್ಯಾಮೆರಾಗಳು ವಿಜೇತರನ್ನೇ ಸೆರೆಹಿಡಿದಿದ್ದವು!!

ಜನ ಮತ್ತು ಮಾಧ್ಯಮದವರು ಸ್ವಲ್ಪ ಆಚೀಚೆ ಕಣ್ಣು ಹಾಯಿಸಿದಾಗ ಅಲ್ಲಿ ಇನ್ನೂ ಮೂವರು ಸ್ಪರ್ಧಿಗಳು ಸ್ವಲ್ಪ ದೂರದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಾ ಕಿರಿಚಾಡುತ್ತಾ ಸಂಬ್ರಮಿಸುತ್ತಿದ್ದರು...

ಗೆಲ್ಲದ ಅವರ ಸಂಬ್ರಮವೇಕೆ??? ಎಂದು ಎಲ್ಲರಿಗೂ ಆಶ್ಚರ್ಯ....

ಮಾಧ್ಯಮದವರಿಗೂ ಕುತೂಹಲ ಸೀದಾ ಹೋಗಿ ಅವರಿಗೆ ಕೇಳಿದರು "ಸ್ಪರ್ಧೆಯಲ್ಲಿ ಗೆಲ್ಲದ ನೀವೇಕೆ ಸಂಬ್ರಮಿಸುತ್ತಿರುವಿರಿ?" ಎಂದು.

ಮೊದಲನೇಯವ ಹೇಳಿದ - "ನನ್ನ ಜೀವನದಲ್ಲಿ ನಾನು ರಾಷ್ಟ್ರೀಯ ಓಟದ ಸ್ಫರ್ಧೆಯಲ್ಲಿ ಭಾಗವಹಿಸಬೇಕೆಂಬ ನನ್ನ ಗುರಿ ಇಂದು ನೆರವೇರಿದೆ. ಅದಕ್ಕಾಗಿ ಸಂಬ್ರಮಿಸುತ್ತಿದ್ದೆ"

ಎರಡನೆಯವ ಹೇಳಿದ - "ನಾನು ರಾಷ್ಟ್ರೀಯ ಓಟದಲ್ಲಿ ಓಟದ ಸುತ್ತನ್ನು ಯಾವಾಗಲು ಪುರ್ಣಗೊಳಿಸಲಾಗುತ್ತಿರಲಿಲ್ಲ ಇಂದು ಪುರ್ಣಗೊಳಿಸಿದೆ, ಅದಕ್ಕಾಗಿ ಸಂಬ್ರಮಿಸುತ್ತಿದ್ದೆನೆ"

ಮೂರನೇಯವ ಹೇಳಿದ -ನಾನು ಕಳೆದ ಸರ್ತಿ ಒಂದು ಸುತ್ತು ಹಾಕಲು ತೆಗೆದುಕೊಂಡ ಸಮಯಕ್ಕಿಂತಾ ಕಡಿಮೆ ಸಮಯದಲ್ಲಿ ಸುತ್ತು ಪೂರ್ಣ ಮಾಡಬೇಕೆಂದು ಸಂಕಲ್ಪಿಸಿದ್ದೆ ಅದನ್ನು ಇಂದು ಸಾಧಿಸಿದೆ ಅದಕ್ಕಾಗಿ ಸಂಬ್ರಮಿಸುತ್ತಿದ್ದೇನೆ"

ಈ ಮೂರೂ ಜನರ ಸಾಧನೆಯ ಹಾದಿಯ ಮೆಟ್ಟಿಲನ್ನು ಸುಲಭವಾಗಿ ನಮಗೆ ನೀಡಿದ್ದಾರೆ.

ಏನಾದರು ನಾವು ಸಾಧಿಸಿ ತೋರಬೇಕಿದ್ದಲ್ಲಿ ಮೂರೂ ಹಂತದ ಪರಿಶ್ರಮ ಅವಶ್ಯ!

ಮೊದಲಿಗೆ ನಮ್ಮನ್ನು ಸಾಧನೆಯ ಹಾದಿಯಲ್ಲಿ ತೊಡಗಿಸಿಕೊಳ್ಳಬೇಕು! (To get participation)

ಎರಡನೆಯದಾಗಿ ನಾವು ಸಾಧನೆಯ ಸಾಮಾನ್ಯ ಗುರಿ ತಲುಪಬೇಕು. (To meet the standards required)

ಮೂರನೆಯದಾಗಿ ನಿರ೦ತರ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧನೆಯಲ್ಲಿ ಸಾಧಿಸಬೇಕು!(Continual improvement by self competition -upgrading the achievement standards continually)

ಯಾವಾಗ ನಾವು, ನಮ್ಮೊಂದಿಗಿನ ಪೈಪೋಟಿಯಲ್ಲಿ, ನಮ್ಮ ಹಿಂದಿನ ದಾಖಲೆಗಳನ್ನ ಮುರಿಯುತ್ತಾ, ಪ್ರತಿ ಹಂತದಲ್ಲೂ ಮುಂದುವರೆದಾಗ, ಒಂದು ದಿನ ನಾವು ಪೈಪೋಟಿಯಲ್ಲಿ ಎಲ್ಲರನ್ನು ಮೀರಿ ಮುಂಚೂಣಿಯಲ್ಲಿರುತ್ತೇವೆ ಮತ್ತು ಆಗ ನಾವು ಇತರರೊಂದಿಗೆ ಸ್ಪರ್ಧೆಯಲ್ಲಿ ವಿಜೇತರಾಗುತ್ತೇವೆ.

ಸಾಧಕರು ಹೊಸದನ್ನು ಮಾಡುವದಿಲ್ಲ ಆದರೆ ಹೊಸವಿಧಾನದಲ್ಲಿ ಅಥವಾ ಹೊಸ ಅಳತೆಗೋಲಿನಲ್ಲಿ ಸಾಧನೆ ನಿರ್ಮಿಸುತ್ತಾರೆ.

ಆದರೆ ಸಾಧನೆಯ ಎಲ್ಲ ಹಂತದಲ್ಲೂ ಸಂಬ್ರಮಿಸಬೇಕು. ಸಾಧನೆಯ ಹೆಜ್ಜೆ ಹೆಜ್ಜೆಯು ವಿಶಿಷ್ಟವಾಗಿರಬೇಕು ಮತ್ತು ನಮ್ಮ ಹಳೆಯ ಅಳತೆಯನ್ನು ಮೀರಬೇಕು ಅಂದರೆ ನಿರಂತರ ಪ್ರಗತಿಯಿರಬೇಕು.
ಪ್ರತಿ ಹಂತದಲ್ಲು ನಮ್ಮ ಸಾಧನೆಯನ್ನು ಅನುಭವಿಸಿ ಸಂಬ್ರಮಿಸಬೇಕು ಮತ್ತು ಮುಂದಿನ ಪ್ರಯತ್ನದಲ್ಲಿ ಹೊಸದನ್ನು ಅಥವಾ ಹೊಸ ಮಟ್ಟದಲ್ಲಿ ಮಾಡಲು ಪಣ ತೊಡಬೇಕು!


"WINNERS DON'T DO DIFFERENT THINGS BUT DO THINGS DIFFERENTLY" -SHIVA KHER

(THE PERCEIVED KNOWLEDGE FROM LMI'S -EFFECTIVE PERSONAL PRODUCTIVITY COURSE)

32 comments:

ಸಾಗರಿ.. said...

ಸೀತಾರಾಮ್ ಸರ್ ಅವರೇ
ಚೆನ್ನಾಗಿ ಹೇಳಿದ್ದೀರಿ, ಮೊದಲನೇ ಹಂತದಲ್ಲೇ ಸೋತು ಹಿನ್ನೆಡೆಯುವ ಸ್ಪರ್ಧಿಗಳು ಮುಂಬರಲು ಸಾಧ್ಯವೇ ಇಲ್ಲ. ಅಚಲವಾದ ನಿರ್ಧಾರ ಮತ್ತು ಪೂರ್ಣಪ್ರಮಾಣದ ಡೆಡಿಕೇಶನ್ ಎಲ್ಲಾಕ್ಕೂ ಮುಖ್ಯ. ಒಳ್ಳೆಯ ಲೇಖನ

ಮನಮುಕ್ತಾ said...

ಸೀತಾರಾಮ್ ಅವರೆ,
ಸಾಧನೆ ಮಾಡಲು ಅವಶ್ಯವಾಗಿ ಬೇಕಾದ೦ತಹ ಅ೦ಶಗಳನ್ನೊಳಗೊ೦ಡ ಲೇಖನ...ತು೦ಬಾ ಚೆನ್ನಾಗಿದೆ. ಹಿಡಿಸಿತು.

ಕೇಶವ ಪ್ರಸಾದ್.ಬಿ.ಕಿದೂರು said...

nice article

shridhar said...

Seetaaram sir ,
Very true ..dedication is very much important to achieve anything in life ...

Nice write up ..

ಸುಮ said...

nice thoughts sir...

ಮನಸು said...

ಒಳ್ಳೆಯ ಲೇಖನ ಸರ್, ಸಾಧನೆಯ ಹಾದಿಯಲ್ಲಿ ಸಾದಿಸುವ ಛಲ, ಮಸ್ಥೈರ್ಯವಿರಬೇಕು...... ನಮಗೂ ಅನುವಹಿಸುತ್ತದೆ ಇಂತಹ ಲೇಖನ ತಿಳಿದುಕೊಳ್ಳಲು ಬೇಕೆ ಬೇಕು

ಜಲನಯನ said...

ಹಮ್ ಹೋಂಗೇ ಕಾಮ್ಯಾಬ್ ಏಕ್ ದಿನ್..ಮನ ಮೇ ಹೋ ವಿಶ್ವಾಸ್ ...ಇದು ಎಲ್ಲರಿಗೂ ಅನ್ವಯಿಸೋ ಸೂತ್ರ...ಹೌದು ಛಲ ಸಾಧಿಸೋದ್ರಲ್ಲಿರಬೇಕು ನೀವು ಹೇಳಿದ ಹಾಗೆ ಸೀತಾರಾಂ ಸರ್...ಆಗ ಎಲ್ಲ ಸಾಧ್ಯ...

sunaath said...

ಸೀತಾರಾಮರೆ,
ಬಾಳಿನ ಗುರಿ ಏನು ಎನ್ನುವದನ್ನು ನಿಮ್ಮ ಲೇಖನದಲ್ಲಿ ಚೆನ್ನಾಗಿ ವಿವರಿಸಿದ್ದೀರಿ.

ಮನಸಿನಮನೆಯವನು said...

ಸೀತಾರಾಮ.ಕೆ. ,

ಉತ್ತಮ ಸಾಲುಗಳು..

ನಾಗರಾಜ್ .ಕೆ (NRK) said...

ತುಂಬಾ ಒಳ್ಳೆ ಬರಹವನ್ನ ನೀಡಿದ್ದೀರಾ ಸರ್.
ಸ್ಪೂರ್ತಿದಾಯಕವಾಗಿದೆ, ಎರಡು ತಿಂಗಳ ಹಿಂದೆ ಯಶಸ್ಸು ಬೇಗ ಸಿಗ್ತಿಲ್ಲ ಅಂತ 22 ವರ್ಷದ ನನ್ನ ಕ್ಲಾಸ್ಮೇಟ್ ಸಾವಿಗೆ ಶರಣಾಗಿದ್ದು ನೆನಪಾಯ್ತು.
foolish decision :-(

ಚುಕ್ಕಿಚಿತ್ತಾರ said...

ಸೀತಾರಾಮ್ ಸರ್..
ನಿಜ ಮೊದಲು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಮ್ಮೊ೦ದಿಗೇ ಪೈಪೋಟಿ ನಡೆಸಿಕೊಳ್ಳಬೇಕು..
ಸಾಧಕರು ಹಾಗೇ ಮಾಡುತ್ತಾರೆ..!
ಒಳ್ಳೆಯ ಲೇಖನ

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ said...

ಜೀವನದಲ್ಲಿ ಇದನ್ನ ಪಾಲಿಸಬೇಕು ಉತ್ತಮ ಸಂದೇಶ ಹೇಳಿದ ರೀತಿ ತುಂಬಾ ಇಷ್ಟವಾಯ್ತು....

SATISH N GOWDA said...

ಸೀತಾರಾಂ ಸರ್ ನಾನು ನಿಮ್ಮ ಬ್ಲಾಗಿಗೆ ಇದೆ ಮೊದಲ ಬೇಟಿ ನೀಡಿದ್ದೇನೆ . ತುಂಬಾ ಚನ್ನಾಗಿ ಮೂಡಿಬಂದಿವೆ ನಿಮ್ಮ ಎಲ್ಲಾ article ಗಳು . ಎಲ್ಲವನ್ನು ಓದಲು ಸಮಯದ ಕೊರತೆ ಇದೆ . ಬಿಡುವು ಮಾಡಿಕೊಂಡು ಖಂಡಿತ ಓದಲು ಪ್ರಯತ್ನ ಪಡುತ್ತೇನೆ .ಬಿಡುವು ಮಾಡಿಕೊಂಡು ನೀವೂ ಒಮ್ಮೆ ನನ್ನವಳಲೋಕಕ್ಕೆ ಬನ್ನಿ ನಾನು ನಿಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ
ನನ್ನ ಬ್ಲಾಗ್
www.nannavalaloka.blogspot.com
ನನ್ನ ಜಮೇಲ್
satishgowdagowda@gmail.com

ದಿನಕರ ಮೊಗೇರ said...

satyavaada maatugalu.... gelluvudakkinta bhaagavahisuvudu tumbaa mukhya...... vivarisida bage tumbaa tumbaa sogasaagide sir...........

balasubramanya said...

ವಾವ್ ಸೀತಾರಾಮ್ ಸಾರ್ ಎಂತಹ ಲೇಖನ ಹಲವರಿಗೆ ಕಣ್ಣು ತೆರೆಸುವಂತಿದೆ.ನಿಮ್ಮ ಲೇಖನ ಓದಿದರೆ ಜೀವನದ ಅರ್ಥ ತಿಳಿಯುತ್ತದೆ.ನಿಮ್ಮ ವಿಚಾರಧಾರೆ ಹೀಗೆ ಹರಿದುಬರಲಿ.

Subrahmanya said...

ಸ್ಪೂರ್ತಿದಾಯಕವಾಗಿದೆ ಗುರೂಜಿ ನಿಮ್ಮ ಲೇಖನ. ತುಂಬ ಚೆನ್ನಾಗಿದೆ.

V.R.BHAT said...

ಗೆಲ್ಲುವ ಕನಸಿರುವ ಪ್ರತೀ ಮನುಷ್ಯನಿಗೆ ತಮ್ಮ ಸಂದೇಶ ಸಮಂಜಸವಾಗಿದೆ, ಲೇಖನ ಅರ್ಥಪೂರ್ಣ,ಬಹಳ ಹಿಡಿಸಿತು, ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

ತುಂಬಾ ಉತ್ತಮ ಪಾಠವನ್ನು ಹೇಳಿದ್ದೀರಿ ಸರ್. ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇನೆ ಇದನ್ನು. ಬಲು ಇಷ್ಟವಾಯಿತು..... ಧನ್ಯವಾದಗಳು ಸುಂದರ ಹಿತೋಪದೇಶಕ್ಕೆ... :)

UMESH VASHIST H K. said...

ಯುವಕರಿಗೊಂದು ನೀತಿ ಪಾಠ

ಮನದಾಳದಿಂದ............ said...

ಸೀತಾರಾಂ ಸರ್,
ಸಾಧನೆಯ ದಾರಿಯಲ್ಲಿ ಮೆಟ್ಟಿಲೇರಲು ಶ್ರಮ ಬೇಕು, ಗುರಿ ಮುಟ್ಟಲು ಹಠ ಬೇಕು ಅದೇ ರೀತಿ ಆತ್ಮವಿಶ್ವಾಸ ಕೂಡ ಮುಖ್ಯ.........
ಪ್ರೋತ್ಸಾಹದಾಯಕ ಬರಹ.

ಅನಂತ್ ರಾಜ್ said...

ಸೀತಾರಾ೦ ಸರ್, ಆತ್ಮ ವಿಶ್ವಾಸದ ಬಗ್ಗೆ ಒಳ್ಳೆಯ ಲೇಖನ ಮೂಡಿಸಿದ್ದೀರಿ..ಧನ್ಯವಾದಗಳು

ಅನ೦ತ್

Shweta said...

Seetaram sir,
tumba olleya lekhana.nijakku anukaraneeya.Saadhane ennuvadu 'relative' alva?

shivu.k said...

ಸೀತಾರಾಮ್ ಸರ್,

ಒಂದು ಸಾಧನೆಯ ಹಿಂದೆ ಎಷ್ಟೆಲ್ಲಾ ಅಂಶಗಳು ಇವೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ವಿವರಣೆ ಸಮೇತ ವಿವರಿಸಿದ್ದೀರಿ...ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.

RAGHAVENDRA R said...

Nijakku..... tumba olleya .. lekana..


elrigu.... avashya enisuvanthaddu.

Snow White said...

tumba olleya lekhana sir :)

prabhamani nagaraja said...

'ಪ್ರತಿ ಹಂತದಲ್ಲು ನಮ್ಮ ಸಾಧನೆಯನ್ನು ಅನುಭವಿಸಿ ಸಂಬ್ರಮಿಸಬೇಕು ಮತ್ತು ಮುಂದಿನ ಪ್ರಯತ್ನದಲ್ಲಿ ಹೊಸದನ್ನು ಅಥವಾ ಹೊಸ ಮಟ್ಟದಲ್ಲಿ ಮಾಡಲು ಪಣ ತೊಡಬೇಕು!'
ಎ೦ಥಾ ಅಮೂಲ್ಯವಾದ ಮಾತುಗಳು! ಬಹಳ ಉಪಯುಕ್ತವಾದ ಲೇಖನ. ಧನ್ಯವಾದಗಳು. ನೀವು ನನ್ನ ಬ್ಲಾಗ್ ಗೆ ಬ೦ದು ಬಹಳ ದಿನಗಳಾದವು. ಒಮ್ಮೆ ಭೇಟಿ ನೀಡಿ.

AntharangadaMaathugalu said...

ಸಾಧನೆಯ ಮೂರು ಹಂತಗಳನ್ನು ವಿವರಿಸುತ್ತಾ ಬರೆದ ನಿಮ್ಮ ಈ "ಸಾಧಕರು ಹೊಸದನ್ನು ಮಾಡುವದಿಲ್ಲ ಆದರೆ ಹೊಸವಿಧಾನದಲ್ಲಿ ಅಥವಾ ಹೊಸ ಅಳತೆಗೋಲಿನಲ್ಲಿ ಸಾಧನೆ ನಿರ್ಮಿಸುತ್ತಾರೆ" ಮಾತುಗಳು ಅತ್ಯಂತ ಪ್ರಭಾವ ಬೀರುವಂತಹುದು. ಸಾಧನೆಯ ಹಾದಿಯಲ್ಲಿರುವವರಿಗೆ ಒಳ್ಳೆಯ, ಉತ್ತೇಜನಾತ್ಮಕ ಲೇಖನ. ಚೆನ್ನಾಗಿದೆ.

ಶ್ಯಾಮಲ

ಸೀತಾರಾಮ. ಕೆ. / SITARAM.K said...

ಪ್ರತಿಕ್ರಿಯಿಸಿದ ಎಲ್ಲ ಸಹೃದಯ ಅಂಕಣಕಾರರಿಗೆ ಮನಪೂರ್ವಕ ವಂದನೆಗಳು.

ಸಾಗರಿಯವರೇ ಸೋಲಿನಲ್ಲೂ ಪಾಠಗಳಿವೆ, ಸಂಬ್ರಮಿಸುವ ಅ೦ಶಗಳಿವೆ -ಅದನ್ನು ಗುರುತಿಸಿ ಮುನ್ನಡಿದಿಯಿದಬೇಕು ಅಲ್ಲವೇ?
ಎನ್ನಾರ್ಕೆಯವರೇ ತಮ್ಮ ಮಿತ್ರನ ಬಗ್ಗೆ ಕೇಳಿ ಬೇಜಾರಾಯಿತು ಅವನಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕಾಗಿತ್ತಲ್ಲವೇ?

@-ಶ್ವೇತಾರವರೆ, ರವರೆ, ಸಾಧನೆ ಎನ್ನುವದು ತಾವು ಹೇಳಿದಂತೆ ಸಂಭಂದವಾಗಿಯೇ! ಆದರೆ ಯಾವದಕ್ಕೆ ಸಂಭಂಧಿಸಬೇಕು ಎಂಬ ಆಯ್ಕೆ ನಮಗಿದೆ. ನಮ್ಮೊಂದಿಗೆ ನಮ್ಮ ಹಿಂದಿನ ಸಾಧನೆಗಳಿಗೆ ರಿಲೇಟಿವ್ ಮಾಡಿಕೊಂಡು ಪ್ರಗತಿ ಹೊಂದಿದಾಗ ಒಂದು ದಿನ ನಾವು ಇನ್ನೊಬ್ಬರ ಸಾಧನೆ ಮೀರುತ್ತೇವೆ!

Unknown said...

ಸೀತಾರಾ೦ ಸರ್, ಆತ್ಮ ವಿಶ್ವಾಸದ ಬಗ್ಗೆ ಒಳ್ಳೆಯ ಲೇಖನ ಮೂಡಿಸಿದ್ದೀರಿ..


ಧನ್ಯವಾದಗಳು
ಇಂತಿ ನಿಮ್ಮ ಪ್ರೀತಿಯ ಗೆಳೆಯ
ನಂದಿ ಜೆ.ಹೂವಿನಹೊಳೆ
ಚಿತ್ತಾರದುರ್ಗ.ಕಾಂ,ಮತ್ತು ಐಟಿಕನ್ನಡಿಗಸ್.ಕಾಂ
ಸಂಚಾಲಕ,ಬೆಂಗಳೂರು,ಕರ್ನಾಟಕ,
ದೂ:9035177234,
E-MAIL: nimmanandi@gmail.com
BLOG: hoovinahole.blogspot.com,
www.spatikapuri.webs.com,
www.chitharadurga.com www.ITKannadigas.com

ಸೀತಾರಾಮ. ಕೆ. / SITARAM.K said...

ನನ್ನ ಬ್ಲಾಗ್-ಗೆ ಸ್ವಾಗತ್ ನಂದಿಯವರೇ.
ಪ್ರತಿಕ್ರಿಯೆಗೆ ಧನ್ಯವಾದಗಳು.

Ashok.V.Shetty, Kodlady said...

Sitaram Sir...

tadavaagi pratikiyista iddini...tumbaa uttama lekhana...Very useful.....

Harisha - ಹರೀಶ said...

ಜೀವನದ ಪಾಠಗಳು ಚೆನ್ನಾಗಿ ಬಿಂಬಿಸಲ್ಪಟ್ಟಿವೆ ..