Wednesday, June 9, 2010

ಕನಸ ಕನ್ಯೆ




ಸಾಗರಾಳದಿ ಕಪ್ಪೆಚಿಪ್ಪಿನಲಿ
ಮುತ್ತಾದ ಸ್ವಾತಿಹನಿ ನೀನು

ಅದರಿ೦ದ ಮೋಹಿತನಾದ ಈಜು
ಬಾರದ ಸೋಜಿಗವು ನಾನು

ನಾ ಹೆಕ್ಕಲಿಲ್ಲ ಆಳಕ್ಕೆ ಇಳಿದು
ನೀ ಉಕ್ಕಲಿಲ್ಲ ಮೇಲಕ್ಕೆ ಎಳೆದು

ಮುತ್ತು ಹೆಕ್ಕದ, ಈಜು ಬಾರದವರ
ಕಣ್ಣೀರಲಿ ಸಮುದ್ರ ಉಪ್ಪೇ?

ಕಡಲಲ್ಲಿ ಮುತ್ತು ಕಳೆದು
ದಡಕ್ಕೆಸೆದ "ನೀ" ಚಿಪ್ಪೇ?

6 comments:

Prema said...

ಚಿಪ್ಪು ಮತ್ತು ಮುತ್ತುಗಳ ನಡುವಿನ ವಾಸ್ತವ್ಯ ವಾಹ್....
ಚಿಪ್ಪಿದ್ದರಲ್ಲವೇ ಮುತ್ತಿನ ಅಸ್ಥಿತ್ವ....

Shashi jois said...

nice...

prabhamani nagaraja said...

'ಕಣ್ಣೀರಲಿ ಸಮುದ್ರ ಉಪ್ಪೇ?'

ಎ೦ಥಾ ಅರ್ಥವತ್ತಾದ ಸಾಲು! ಕವನ ಚೆನ್ನಾಗಿದೆ.

V.R.BHAT said...

Realistic, enjoyed it much, dhanyavadagalu

© ಹರೀಶ್ said...

ಸೀತಾರಾಮ್ ಸರ್ ನಿಮ್ಮ ಕವನ ಚನ್ನಾಗಿದೆ
ಅದರಲ್ಲೂ
ಮುತ್ತು ಹೆಕ್ಕದ, ಈಜು ಬಾರದವರ
ಕಣ್ಣೀರಲಿ ಸಮುದ್ರ ಉಪ್ಪೇ?
ಎಂಬ ಪದಗಳ ಬಳಕೆ ತುಂಬಾ ಚನ್ನಾಗಿದೆ.

ಹೊನ್ನ ಹನಿ

Ittigecement said...

ಸೀತಾರಾಮ್ ಸರ್...

ನಿರಾಸೆಯ..
ಭಾವ
ಸಾಗರದ ನೀರು ಉಪ್ಪಾದುದು ಹೀಗಾ ?

ವಾಹ್.. !!

ಬಹ್ಳ ಇಷ್ಟವಾಯಿತು

ನಿಮ್ಮ ಕವಿ ಕಲ್ಪನೆಗೆ ನನ್ನ ನಮನಗಳು !!